ಹಲಾಲ್ ಉದ್ಯಮದ ಒಳಸುಳಿಗಳು
– ರಾಕೇಶ್ ಶೆಟ್ಟಿ
ಹಲಾಲ್ ಅಂದರೆ ಕೋಳಿ ಮತ್ತಿತ್ತರ ಪ್ರಾಣಿಗಳನ್ನು ಕತ್ತರಿಸುವ ಒಂದು ವಿಧಾನ ಅಷ್ಟೇ ಅಲ್ವಾ? ಅದಕ್ಕೇಕೆ ನಿಮ್ಮ ತಕರಾರು…? ಇದು ಹಲವರ ಪ್ರಶ್ನೆ
ನಾವ್ ವೆಜಿಟೆರಿಯನ್ಸ್ ನಮಗೆ ಈ ಹಲಾಲ್ ನಿಂದೇನೂ ಚಿಂತೆ ಇಲ್ಲಪ್ಪ. ಇದು ಒಂದಿಷ್ಟು ಜನರ ವಾದ…
ಹಲಾಲ್ ಅಂದರೆ ಕೇವಲ ಕೋಳಿಯನ್ನು ಕುಯ್ಯುವ ಒಂದು ವಿಧಾನ ಆಗಿದ್ದಿದ್ದರೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಹೀಗೊಂದು ಹತ್ತು ವರ್ಷಗಳ ಹಿಂದೆ ಹಾಗೆಯೇ ಇದ್ದಾಗ ಯಾರೂ ತಲೆಕೆಡಿಸಿಕೊಳ್ಳುತ್ತಲೂ ಇರಲಿಲ್ಲ. ಈಗಲೂ ಅವರ ಅಂಗಡಿಯಲ್ಲಿ ಹೋಗಿ ತೆಗೆದುಕೊಂಡು ಬರುವವರಿಗೇನು ಕಡಿಮೆಯೇ? ಸಮಸ್ಯೆ ಮತ್ತು ವಿರೋಧ ಇರೋದು ಅವರ “Religion ಆಚರಣೆ” ಬಗ್ಗೆ ಅಲ್ಲ. ಆಚರಣೆ ನೆಪದಲ್ಲಿ “ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ, ತಮ್ಮವರಿಗೆ ಮಾತ್ರ ಉದ್ಯೋಗ ದಕ್ಕಿಸಿ ಇತರರ (ಮುಖ್ಯವಾಗಿ ಹಿಂದುಳಿದ,ದಲಿತ ವರ್ಗ) ಉದ್ಯೋಗವನ್ನು ಕಸಿದುಕೊಳ್ಳುವ Long Term ನೀತಿಯ” ಬಗ್ಗೆ.
ಮೊದಲೆಲ್ಲಾ ಅವರ ಅಂಗಡಿಗಳಲ್ಲಿ ಮಾತ್ರ ಆ ಆಚರಣೆ ಆಗ್ತಾ ಇತ್ತು. ನಂತರ ಮಾಂಸದ ಹೋಟೆಲುಗಳ ಬೋರ್ಡುಗಳಲ್ಲಿ ‘ಹಲಾಲ್ ಚಿಕನ್/ಮಟನ್’ ದೊರೆಯುತ್ತದೆ ಎನ್ನುವಲ್ಲಿಗೆ ಬಂತು. ಆ ನಂತರ ದೊಡ್ಡ ಮಟ್ಟದಲ್ಲಿ ಹಲಾಲ್ ಸರ್ಟಿಫಿಕೇಟು (ವರ್ಷ ವರ್ಷಕ್ಕೆ Renew ಮಾಡುವ ಕರಾರಿನೊಂದಿಗೆ) ಉದ್ಯಮ ಆರಂಭವಾಗಿ ಇವತ್ತಿಗೆ ಆ ಸರ್ಟಿಫಿಕೇಟಿನ ಕಬಂಧ ಬಾಹು ಗೋಧಿ, ಮೈದಾ, ಬಿಸ್ಕೆಟ್ಸ್, ಚಾಕೊಲೇಟ್ಸ್, ಸೌಂದರ್ಯವರ್ಧಕ ವಸ್ತುಗಳು, ಹಾಸ್ಪಿಟಲ್,ಟೂರಿಸಂ,ಲಾಜಿಸ್ಟಿಕ್ಸ್, ಏರ್ಲೈನ್ಸ್ ಕ್ಯಾಟರಿಂಗ್, ಕ್ಯಾಟರಿಂಗ್,ಫಾರ್ಮಾಸೆಟಿಕಲ್ಸ್ ಹೀಗೆ ಪಟ್ಟಿ ಬೆಳೆದು ನಿಂತಿದೆ. ಕಂಪೆನಿಗಳು ಪ್ರತಿವರ್ಷ ಹಲಾಲ್ ಸರ್ಟಿಫಿಕೇಟನ್ನು ಪಡೆಯಲು ಇಂತಿಷ್ಟು ಹಣ ಕಟ್ಟಬೇಕಾಗುತ್ತದೆ,ಅದರ ಮೇಲೆ ಯಾವೆಲ್ಲ ವಸ್ತುಗಳಿಗೆ ಹಲಾಲ್ ಸೀಲ್ ಬೇಕೋ ಅದಕ್ಕೆ ಪ್ರತ್ಯೇಕ ಅಂತೆಲ್ಲ ಇದೆ. ಇದು ಒತ್ತಟ್ಟಿಗಿರಲಿ. ಈ ಸರ್ಟಿಫಿಕೇಟ್ ಯಾಕೆ ಅಪಾಯಕಾರಿ ಎನ್ನುವ ಉದಾಹರಣೆ ನೋಡೋಣ
ಸಮಸ್ಯೆ ಕೋಳಿ ಕುಯ್ಯುವ ರೀತಿಯದ್ದಲ್ಲ. ಆದರೆ ಆ ಕೋಳಿಯನ್ನು ಕುಯ್ಯುವವನು ಮುಸ್ಲಿಮನೇ ಆಗಿರಬೇಕು ಎನ್ನುವಾಗ ಒಬ್ಬ ಹಿಂದುಳಿದ/ದಲಿತ ವರ್ಗದವನ ಕೆಲಸ ಹೋದಂತೆ ಎನ್ನುವುದನ್ನು ಗಮನಿಸಿದಾಗ. ಈಗ ಯಾವುದೋ ಒಂದು ದೊಡ್ಡ ಆಸ್ಪತ್ರೆಯ ಕ್ಯಾಂಟೀನಿನಲ್ಲಿ ಚಿಕನ್ ಊಟ ಸಿಗುತ್ತದೆ ಅಂತಿಟ್ಟುಕೊಳ್ಳಿ. ಆ ಆಸ್ಪತ್ರೆಗೆ ಹಲಾಲ್ ಸರ್ಟಿಫಿಕೇಟ್ ಕೊಡುವಾಗ, ಈ ಕೋಳಿಯನ್ನು ಎಲ್ಲಿಂದ ತಂದಿರಿ ಎಂದು ನೋಡುತ್ತಾರೆ. ಅವರಿಗೆ ಕೋಳಿ ಸಪ್ಲೈ ಮಾಡುವ ಡೀಲರ್ ಕೂಡ ಮುಸ್ಲಿಮನೇ ಆಗಿರಬೇಕಾಗುತ್ತದೆ. ಯಾಕೆಂದರೆ ಆತ ಮಾತ್ರ ಹಲಾಲ್ ನಿಯಮವನ್ನು ಪಾಲಿಸಿರಲು ಸಾಧ್ಯ. ಅಲ್ಲಿಗೆ ಸಪ್ಪ್ಲೈಯರ್ ಮತ್ತು ಕೋಳಿ ಅಂಗಡಿ ಎರಡರ ಜಾಗದಲ್ಲೂ ಅವರೇ ಬಂದು ಕುಳಿತರಲ್ಲ. ಇನ್ನು ಆ ಆಸ್ಪತ್ರೆಯಲ್ಲಿ ಅವರ ಪ್ರಾರ್ಥನೆಗೆ ತಕ್ಕಂತ ವಾರ್ಡ್ ಗಳಿರುತ್ತವೆ ಅಂತಿಟ್ಟುಕೊಳ್ಳಿ ಅದರ ದೇಖಾದೇಖಿಯನ್ನು ಅವರೇ ನೋಡಿಕೊಳ್ಳಬೇಕು ಅಂತೊಂದು ನಿಯಮ ಹಾಕುತ್ತಾರೆ.ಮುಂದಿನ ದಿನಗಳಲ್ಲಿ ಇವರ ಬೇಡಿಕೆಗಳು ಕೋಳಿ ಸಾಕಾಣಿಕೆಯ ಜಾಗವೂ ಹರಾಮ್ ವಸ್ತುಗಳಿಂದ ಮುಕ್ತವಾಗಿರಬೇಕು ಎನ್ನಲಾಗುತ್ತದೆ, ಅಂದರೆ ಕೋಳಿ ಫಾರಂ ಸುತ್ತಲೂ ಹಂದಿ,ನಾಯಿಗಳು ಸುಳಿದಾಡದಂತಹ ವಾತಾವರಣ ಇರಬೇಕಾಗುತ್ತದೆ. ಹೀಗಾಗಿ ಕೇವಲ ಕೋಳಿ ಕುಯ್ಯುವ,ಅದನ್ನು ಸಪ್ಪ್ಲೈ ಮಾಡುವವ ಶರಿಯಾ ಪಾಲಿಸುವ ಮುಸ್ಲಿಂ ಆಗಿದ್ದರೆ ಸಾಲದು, ಕೋಳಿ ಸಾಕುವವನು ನಮ್ಮವನೇ ಆಗಿರಬೇಕು ಎನ್ನುತ್ತದೆ. ಪಾಕಿಸ್ತಾನ-ಬಾಂಗ್ಲಾದಂತಹ ದೇಶಗಳಲ್ಲಿ ಈ ರೀತಿಯ ಆರ್ಥಿಕ ದಿಗ್ಬಂಧನದ ಮೂಲಕವೂ ಮತಾಂತರಗಳನ್ನು ಸಾಧಿಸಲಾಗುತ್ತದೆ. ಇದರ ಪ್ರತಿ ಹಂತದಲ್ಲೂ ಮುಸ್ಲಿಮರಿಗೆ ಉದ್ಯೋಗ ದೊರಕಿಸಿಕೊಡುವುದು ಮಾತ್ರವಲ್ಲದೇ ಹಿಂದುಳಿದ-ದಲಿತ ವರ್ಗದಿಂದ ಅವರ ಪಾರಂಪರಿಕ ವ್ಯವಹಾರಗಳನ್ನು ಕಸಿದುಕೊಳ್ಳುವ ಗುಪ್ತ ಉದ್ದೇಶವನ್ನೂ ಇದು ಹೊಂದಿದೆ. ನಮ್ಮಲ್ಲಿ ಸಾಂಪ್ರದಾಯಿಕವಾಗಿ ಕೋಳಿ,ಕುರಿ ಸಾಕುವವರು, ಸಣ್ಣ ಪುಟ್ಟ ಅಂಗಡಿ ಇಟ್ಟುಕೊಳ್ಳುವವರು, ಮಾರಾಟ ಮಾಡುವವರು ಯಾರು ಎಂದು ಯೋಚಿಸಿ ನೋಡಿ. ಹಲಾಲ್ ಉದ್ಯಮದ ನಿಜವಾದ ಸಂತ್ರಸ್ತರು ಭಾರತದ ಬಹುಸಂಖ್ಯಾತರಾದ ಹಿಂದುಳಿದ,ದಲಿತ ವರ್ಗದವರೇ.
ಚಿಕನ್,ಮಟನ್ನುಗಳ ಆಚೆಗೆ ಬರುವ ಬೇರೆ ಇಂಡಸ್ಟ್ರಿಗಳ ಉತ್ಪಾದನೆ,ಕಚ್ಚಾವಸ್ತುಗಳ ಸಂಗ್ರಹಣೆಯ ಹಂತಗಳ ಕೆಲಸಗಾರ, ಅದರ ಉಸ್ತುವಾರಿ ವಹಿಸುವವ ಶರಿಯಾ ಪಾಲಿಸುವ ಮುಸ್ಲಿಮನೇ ಇರಬೇಕು ಎನ್ನುತ್ತಾರೆ. ಅಲ್ಲಿ ಉಳಿದವರ ಕೆಲಸಗಳು ಏನಾಗುತ್ತವೆ ಯೋಚಿಸಿ ನೋಡಿ. ನಾವ್ಯಾಕೆ ಹಲಾಲ್ ಅನ್ನು ವಿರೋಧಿಸಬೇಕು ಎಂದರೆ ಈ ಕಾರಣಕ್ಕೆ.
ಇನ್ನು ಹಲಾಲ್ ಉದ್ಯಮದಿಂದ ಬಂದ ಹಣದ ಒಂದು ಪಾಲು ಇಸ್ಲಾಂನ ಧಾರ್ಮಿಕ ಕಾರ್ಯಗಳಲ್ಲಿ ಬಳಕೆಯಾಗಬೇಕು ಎನ್ನುವುದು ಅವರ ನಿಯಮ. ಅಂದರೆ ಆ ಹಣ ಯಾವುದೋ ಮದರಾಸಕ್ಕೆ ಹೋಯಿತು ಅಂತಿಟ್ಟುಕೊಳ್ಳಿ. ಯಾರ ಹಣ ಅದು? ನೀವು ಖರೀದಿಸಿ ನೀಡಿದ ಹಣವದು. ಆ ಹಣದಲ್ಲಿ ನಡೆಯುವ ಮದರಾಸವೊಂದು ಅಲ್ಲಿರುವ ಪುಟ್ಟ ಮಕ್ಕಳ ತಲೆಯಲ್ಲಿ ಕಾಫೀರರ ವಿರುದ್ಧ ದ್ವೇಷವನ್ನು ಕಟ್ಟಿಕೊಡುತ್ತದೆ. ನಮ್ಮ ಕಾಲಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುವುದು ಎಂದರೆ ಹೀಗೆ ತಾನೇ?
ಈ ವಿಷಯ ಇನ್ನಷ್ಟು ಆಳವಾಗಿದೆ. ಇದರ ಎಕನಾಮಿಕ್ಸ್ ಬಗ್ಗೆ ಮತ್ತು ಇನ್ನಷ್ಟು ಟೆಕ್ನಿಕಾಲಿಟಿಗಳ ಬಗ್ಗೆ ನಾನಿಲ್ಲಿ ಬರೆಯಲು ಹೋಗಿಲ್ಲ. ವಿಷಯ ಆದಷ್ಟು ಸರಳವಾಗಿ ಇರಲಿ ಎನ್ನುವ ಉದ್ದೇಶದಿಂದ ಇಷ್ಟಕ್ಕೆ ಸೀಮಿತವಾಗಿದ್ದೇನೆ.ಹೆಚ್ಚಿನ ಓದಿಗಾಗಿ ಕೆಳಗೆ ಒಂದೆರಡು ಲಿಂಕ್ ಗಳನ್ನು ಕೊಟ್ಟಿದ್ದೇನೆ.
ಕೆಲವರಿಗೆ ಇವೆಲ್ಲ ಎತ್ತಿಕಟ್ಟುವ ಬರಹ ಅಂತಲೋ, Conspiracy Theory ಅನ್ನುವಂತೆಯೂ ಭಾಸವಾಗಬಹುದು. ನಿಮಗೆ ಗೊತ್ತಿರಲಿ. ತೀರಾ 1940ರ ದಶಕದವರೆಗೂ ಪಾಕಿಸ್ತಾನಿ-ಬಾಂಗ್ಲಾ (ಆಗಿನ ಪೂರ್ವ ಪಾಕಿಸ್ತಾನ) ಹಿಂದುಗಳಿಗೆ ಮುಂದೊಂದು ದಿನ ನಿಮ್ಮ ಬದುಕು ನರಕವಾಗಲಿದೆ ಎಂದು ಎಚ್ಚರಿಸಿದರೆ, ಹಾಗೆ ಎಚ್ಚರಿಸಿದವರನ್ನೇ ಮೂರ್ಖರು ಎನ್ನುತ್ತಿದ್ದರು. ಆದರೆ,ಇವತ್ತಿಗೆ ಅಳಿದುಳಿದ ಅವರ ರಕ್ಷಣೆಗಾಗಿ ಭಾರತ ಸರ್ಕಾರ CAA-2019 ಜಾರಿಗೆ ತರಬೇಕಾಯಿತು.
ಇವೆಲ್ಲಾ ರಾಜಕೀಯದ ಆಟಗಳು, ನನಗೂ ಇದಕ್ಕೂ ಸಂಬಂಧವಿಲ್ಲ. ನಾನೊಬ್ಬ ಕಾಮನ್ ಮ್ಯಾನ್ ಅಂತೆಲ್ಲ ಡವ್ ಮಾಡಿಕೊಂಡು ನಾನು ಹೀಗೆಯೇ ಬದುಕುತ್ತೇನೆ,ಸತ್ಯವನ್ನು ನೋಡಲು ಬಯಸುವುದಿಲ್ಲ ಎಂದರೆ ಅದು ನಿಮ್ಮ ಹಣೆಬರಹ ಅಂತಷ್ಟೇ ಅಂದುಕೊಳ್ಳುವವರಿಗೆ ಒಂದು ಮಾತು ; “ಈ ನೆಲದ ಸಂಸ್ಕೃತಿ ನಿಮಗೆ ನೀಡಿದ ಸ್ವಾತಂತ್ರ್ಯದ ಸ್ವಚಂದದ ಬದುಕನ್ನು ನಿಮ್ಮ ಮಕ್ಕಳು,ಮೊಮ್ಮಕ್ಕಳಿಂದ ಕಿತ್ತುಕೊಳ್ಳುವ ಪಾಪದ ಭಾಗೀದಾರರು ನೀವೇ ಆಗುತ್ತೀರಿ. (ಉದಾಹರಣೆಗೆ ಪಾಕಿ,ಬಾಂಗ್ಲಾ ಹಿಂದೂಗಳನ್ನೇ ನೋಡಿ) ಆಯ್ಕೆ ನಿಮಗೆ ಬಿಟ್ಟದ್ದು.
ನನ್ನ ನಿರ್ಧಾರ ಅಚಲ… #BoyCottHalalProducts
ಇನ್ನಷ್ಟು ಮಾಹಿತಿಗಾಗಿ :
What is Halal and why is #BoycottHalal trending on Social Media ?
ಉತ್ತಮ ಬರಹ.ಮತ್ತು ನಮಗೆ ಹಲಾಲ್ ಬಗ್ಗೆ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು.
Uttama mahiti kottidderi dhanyavadagalu