ವಿಷಯದ ವಿವರಗಳಿಗೆ ದಾಟಿರಿ

ಜುಲೈ 3, 2020

ರಾಮಾಯಣ,ಮಹಾಭಾರತ,ಪುರಾಣಗಳ 64 ಸಂಪುಟಗಳು ಕನ್ನಡದಲ್ಲಿ ಅತ್ಯಂತ ಕಡಿಮೆ ಬೆಲೆಗೆ

‍ನಿಲುಮೆ ಮೂಲಕ

– ವಿಶ್ವನಾಥ ಸುಂಕಸಾಲ

ಮೂಲ ಶ್ಲೋಕಗಳೊಂದಿಗೆ ಕನ್ನಡದಲ್ಲಿ ರಾಮಾಯಣ, ಮಹಾಭಾರತದ ಗ್ರಂಥಗಳು ಸಿಗುತ್ತವೆಯೇ ಎಂಬ ಪ್ರಶ್ನೆ ಹಲವರದು. ಕನ್ನಡದಲ್ಲಿ ಸಮಗ್ರವಾಗಿ ಇಂಥ ಗ್ರಂಥಗಳು ದೊರೆಯುವುದು ವಿರಳವೇ. ಒಂದೆರಡು ಪ್ರಕಾಶನಗಳು ಮಾತ್ರ ಇಂದಿಗೂ ರಾಮಾಯಣ, ಮಹಾಭಾರತ, ಪುರಾಣಗಳನ್ನು ಜನರಿಗೆ ದೊರಕುವಂತೆ ಮಾಡುತ್ತಿವೆ. ಅವುಗಳಲ್ಲಿ ಭಾರತ ದರ್ಶನ ಪ್ರಕಾಶನವೂ ಒಂದು.

ಅತ್ಯಂತ ಕಡಿಮೆ ಬೆಲೆಗೆ ಕನ್ನಡದ ಜನತೆಗೆ ಭಾರತೀಯ ಸಂಸ್ಕೃತಿಯ ಮೂಲವಾದ ಈ ಗ್ರಂಥಗಳನ್ನು ತಲುಪಿಸಲೆಂದೇ ಹುಟ್ಟಿದ ಸಂಸ್ಥೆ ‘ಭಾರತ ದರ್ಶನ ಪ್ರಕಾಶನ’.

ಮುದ್ರಣದ ವ್ಯಯಕ್ಕಿಂತ ಕಡಿಮೆ ಬೆಲೆಗೆ ಪುಸ್ತಕವನ್ನು ಒದಗಿಸುತ್ತಿರುವ ಭಾರತ ದರ್ಶನ ಪ್ರಕಾಶನಕ್ಕೆ ಓದುಗರು, ದಾನಿಗಳೇ ಬೆನ್ನೆಲುಬು. ರಾಮಾಯಣ, ಮಹಾಭಾರತಗಳ ಕಥೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಅನೇಕ ಪುಸ್ತಕಗಳು ಸಿಗಬಹುದು. ಆದರೆ ಮೂಲ ವಾಲ್ಮೀಕಿ ಹಾಗೂ ವ್ಯಾಸರಿಂದ ಲಿಖಿತವಾದ ಪ್ರತಿ ಶ್ಲೋಕವನ್ನೂ ಸಂಪುಟದ ಒಂದು ಕಡೆ ಕೊಟ್ಟು, ಮತ್ತೊಂದು ಭಾಗದಲ್ಲಿ ಸಂಪೂರ್ಣ ಅರ್ಥವನ್ನು ವಿಸ್ತೃತವಾಗಿಯೂ, ನಿರ್ದುಷ್ಟವಾಗಿಯೂ, ಸರಳ ಕನ್ನಡದಲ್ಲಿ ವಿವರಿಸಿರುವ ಗ್ರಂಥಮಾಲೆ ತೀರಾ ವಿರಳ.

ಭಾರತ ದರ್ಶನ ಪ್ರಕಾಶನದ ಒಂದೊಂದು ಸಂಪುಟವೂ 620-650 ಪೇಜುಗಳಿಂದ ಕೂಡಿವೆ. ಪ್ರತಿ ಸಂಪುಟದ ಮುದ್ರಣಕ್ಕೂ ಸರಾಸರಿ 120-150 ರೂಪಾಯಿಗಿಂತ ಹೆಚ್ಚು ವ್ಯಯವಾಗುತ್ತದಂತೆ. ಆದರೆ, ರಾಮಾಯಣ, ಮಹಾಭಾರತಗಳ ಪ್ರಚಾರಕ್ಕಾಗಿಯೇ ಹುಟ್ಟಿಕೊಂಡ ಈ ಸಂಸ್ಥೆಯು ದಾನಿಗಳ ಸಹಕಾರದಿಂದ ಮುದ್ರಣ ವ್ಯಯಕ್ಕಿಂತಲೂ ಕಡಿಮೆ ದರಕ್ಕೆ ಅಂದರೆ ಸರಾಸರಿ ಬರೀ ನೂರು ರೂಪಾಯಿಗೆ ಕೊಡುತ್ತಿದೆ.

ಕಳೆದ 64 ವರ್ಷಗಳಿಂದ ಸಂಸ್ಥೆಯು ಇದೇ ಸೇವಾ ಮನೋಭಾವದಿಂದ, ಭಗವದ್ಭಕ್ತಿಯ ಪ್ರಸಾರ ಕಾರ್ಯದಲ್ಲಿ ನಿರತವಾಗಿದೆ. ಈ ಪ್ರಕಾಶನದಿಂದ ಪ್ರಕಟವಾದ ಸಂಪುಟಗಳ ವಿವರ ಹೀಗಿದೆ:

* ರಾಮಾಯಣದ 11 ಸಂಪುಟಗಳು – 1,100 ರೂ

* ಮಹಾಭಾರತ – 32 ಸಂಪುಟಗಳು – 3,200 ರೂ

* ಭಾಗವತ – 9 ಸಂಪುಟಗಳು = 900 ರೂ

* ಹರಿವಂಶ – 6 ಸಂಪುಟ = 600 ರೂ

* ಮಾರ್ಕಂಡೇಯ ಪುರಾಣ – 4 ಸಂಪುಟ= 400 ರೂ.

* ಶ್ರೀವಿಷ್ಣುಪುರಾಣ – 2 ಸಂಪುಟ- 200 ರೂ.

ಒಟ್ಟೂ 64 ಸಂಪುಟಗಳ ಬೆಲೆ 6,000 ರೂಪಾಯಿಗಳು.

ಇವುಗಳ ಜೊತೆ ಈ ಸಂಪುಟಗಳ ಈ ಬುಕ್ ಗೆ 3000,

ಇದೇ ಸಂಸ್ಥೆ ಅನೇಕ ದಶಕಗಳಿಂದ ಹೊರತರುತ್ತಿರುವ ಭಾರತ ದರ್ಶನವೆಂಬ ಮಾಸಪತ್ರಿಕೆಗೆ 15ವರ್ಷಗಳ ಪೋಷಕ ಸದಸ್ಯತ್ವಕ್ಕೆ 2,000.

ಇವಷ್ಟನ್ನೂ ಒಮ್ಮೆಲೇ ಕೊಂಡರೆ ಬರೀ 10,000 ಕ್ಕೆ ಇವೆಲ್ಲವೂ ಮನೆಬಾಗಿಲಿಗೆ ಬರುವುದು.ಅಂಚೆವೆಚ್ಚವೂ ಉಚಿತ.

ಮುಂದೊಂದು ಕಾಲದಲ್ಲಿ ಇಷ್ಟು ವಿಶದವೂ, ವಿಶುದ್ಧವೂ, ಸರಳವೂ ಆದ ರಾಮಾಯಣ, ಮಹಾಭಾರತಗಳನ್ನು ಪ್ರಕಾಶಿಸುವಷ್ಟು ತಾಳ್ಮೆ ಮುಂದಿನ ತಲೆಮಾರಿಗಿರುತ್ತೋ ಇಲ್ಲವೋ ಗೊತ್ತಿಲ್ಲ. ಮುದ್ರಣ, ಸಂಸ್ಕರಣ, ಪ್ರಸರಣದ ವ್ಯಯಗಳೆಲ್ಲ ತೀರಾ ಏರುತ್ತಿರುವ ಈ ಸ್ಥಿತಿಯಲ್ಲೂ ಅತ್ಯಂತ ಕಡಿಮೆ ಬೆಲೆಗೆ ರಾಮಾಯಣ, ಮಹಾಭಾರತ, ಪುರಾಣಗಳನ್ನೆಲ್ಲ ಮನೆಮನೆಗೆ ತಲುಪಿಸುತ್ತಿರುವ ಭಾರತ ದರ್ಶನ ಹಾಗೂ ಅದರಂಥ ಇನ್ನಿತರ ಸಂಸ್ಥೆಗಳಿಗೆ ನಮ್ಮ ಪೀಳಿಗೆ ಹಾಗೂ ನಮ್ಮ ಮುಂದಿನ ಪೀಳಿಗೆ ಋಣಿಯಾಗಿರಬೇಕು.

ಇಂಥ ಸಂಸ್ಥೆಗಳನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ನಾವು ಗ್ರಾಹಕರಾಗಬೇಕು. (ಸಾಧ್ಯವಾದರೆ ದಾನಿಗಳಾಗಿ ಪುಣ್ಯ ಕಟ್ಟಿಕೊಳ್ಳಲೂಬಹುದು).

ಭಾರತ ದರ್ಶನ ಪ್ರಕಾಶನವನ್ನು ಪುತ್ರರಾದ ಯೋಗ ನರಸಿಂಹರು ನೋಡಿಕೊಳ್ಳುತ್ತಿದ್ದಾರೆ. ವಿದೇಶದಲ್ಲಿ ಕೆಲಸದಲ್ಲಿದ್ದ ಇವರೀಗ ತಂದೆಯವರು ಆರಂಭಿಸಿದ ಈ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇನ್ನೊಂದು ವರ್ಷದೊಳಗೆ ಎಲ್ಲ ಸಂಪುಟಗಳನ್ನೂ ಉತ್ಕೃಷ್ಟ ಕಾಗದದಲ್ಲಿ ಮರುಮುದ್ರಣ ಮಾಡುವ ಕಾರ್ಯವನ್ನು ಆರಂಭಿಸುವ ಉದ್ದೇಶವಿಟ್ಟುಕೊಂಡಿದ್ದಾರೆ. ಆಗ ಅನಿರ್ವಾಹವಾಗಿ ದರವನ್ನು ಏರಿಸಲೇಬೇಕಾಗುತ್ತದೆ.

ಈಗಿರುವ ಪ್ರತಿಗಳಿಗೆ ಮಾತ್ರ ಈ ಮೇಲಿನ ರಿಯಾಯಿತಿ ದರ ಅನ್ವಯಿಸುತ್ತದೆ.

ಸಂಸ್ಕೃತಿಪ್ರಿಯರು, ಜಿಜ್ಞಾಸುಗಳು, ಧಾರ್ಮಿಕರು, ತಮ್ಮ ಗ್ರಂಥಾಲಯದಲ್ಲಿ ಈ ಪ್ರತಿಗಳನ್ನಿಟ್ಟುಕೊಳ್ಳಬೇಕು. ನಮ್ಮ ಮುಂದಿನ ತಲೆಮಾರಿಗೆ ಇಂಥ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸಬೇಕು.ಇದನ್ನು ನಮ್ಮ ಮನೆಯಲ್ಲೂ ಇಟ್ಟುಕೊಳ್ಳಬೇಕು. ಜೊತೆಗೆ, ಶಾಲಾ-ಕಾಲೇಜುಗಳಿಗೆ, ಸಂಸ್ಥೆಗಳಿಗೆ, ಬಂಧುಗಳಿಗೆ ಕೊಡುಗೆಯ ರೂಪದಲ್ಲಿಯೂ ಕೊಡಬಹುದು.

ರಾಮಾಯಣ, ಮಹಾಭಾರತಗಳ ಉಪಕಥೆಗಳನ್ನು ಈ ಪುಸ್ತಕಗಳ ಸಹಾಯದಿಂದ ಮಕ್ಕಳಿಗೆ ಹೇಳಬಹುದು. ಈ ಮೂಲಕ ಸಂಸ್ಕೃತಿಯನ್ನು ಬೆಳೆಸುವ ನಮ್ಮ ಕರ್ತವ್ಯ ನಿರ್ವಹಣೆಯ ಜೊತೆಗೆ, ಭಾರತ ದರ್ಶನ ಪ್ರಕಾಶನದ ಪುಣ್ಯ ಕಾರ್ಯದಲ್ಲೂ ಶ್ರೇಯೋಭಾಜರಾಗಬಹುದು.

(ಹೆಚ್ಚಿನ ಮಾಹಿತಿಗೆ ಕರಪತ್ರವನ್ನು ನೋಡಿ)

ಸಂಪರ್ಕ ಸಂಖ್ಯೆ : 87623 97505 (9am -6pm)

ಪ್ರಕಾಶಕರ ವಾಟ್ಸಾಪ್ +91 78920 82483

 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments