ವಿಷಯದ ವಿವರಗಳಿಗೆ ದಾಟಿರಿ

ಜುಲೈ 8, 2022

1

ಭಾರತ ಮತ್ತೊಂದು ಪಾಕಿಸ್ತಾನವಾಗಬಾರದು ಎಂದರೆ…

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಜೂನ್ 28ರ ಮಧ್ಯಾಹ್ನ ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಹತ್ಯೆಯ ಘಟನೆಯಿಂದ ಸಾಮಾನ್ಯ ಹಿಂದೂ ತಲ್ಲಣಗೊಂಡಿದ್ದಾನೆ, ಆಕ್ರೋಷಿತನಾಗಿದ್ದಾನೆ. ‘ನಂಬಿಸಿ ಕತ್ತು ಕೊಯ್ಯುವುದು’ ಎಂದರೇನು ಎನ್ನುವುದನ್ನು ಇಸ್ಲಾಮಿಕ್ ಉಗ್ರರು ಕಮಲೇಶ್ ತಿವಾರಿಯ ನಂತರ, ಉದಯಪುರದ ಬಡ ಟೈಲರ್ ಕನ್ನಯ್ಯ ಲಾಲ್ ಅವರ ಹತ್ಯೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಕಮಲೇಶ್ ತಿವಾರಿಯವರ ಹಂತಕರಾದ ಫರಿದುದ್ಡೀನ್ ಶೇಖ್, ಅಶ್ಫಾಖ್ ಶೇಖ್ ಅವರು ತಮ್ಮನ್ನು ಹಿಂದೂಗಳೆಂದು ಫೇಸ್ಬುಕ್ಕಿನಲ್ಲಿ ಪರಿಚಯ ಮಾಡಿ, ಸ್ನೇಹ ಸಂಪಾದಿಸಿ, ಕೇಸರಿ ಕುರ್ತಾ ಧರಿಸಿ, ಸ್ವೀಟ್ ಬಾಕ್ಸಿನೊಳಗೆ ರಿವಾಲ್ವರ್ ಹಾಗೂ ಚಾಕು ಹಿಡಿದು ಬಂದಿದ್ದರು. ಕಮಲೇಶ್ ತಿವಾರಿಯವರ ಸಹಾಯಕನನ್ನು ಸಿಗರೇಟ್ ತರುವಂತೆ ಕಳುಹಿಸಿ, ಏಕಾಂಗಿಯಾಗಿದ್ದ ಕಮಲೇಶ್ ತಿವಾರಿಯರ ಮೇಲೆ ಎರಗಿ ಕತ್ತು ಸೀಳಿ, ಗುಂಡು ಹಾರಿಸಿ ಕೊಲ್ಲಲಾಗಿತ್ತು. ಮರಣೋತ್ತರ ವರದಿಯ ಪ್ರಕಾರ 15 ಬಾರಿ ಚುಚ್ಚಿ ಕೊಲ್ಲಲಾಗಿತ್ತು. 1926ರಲ್ಲಿ ಅಬ್ದುಲ್ ರಶೀದ್ ಕೂಡ ಹೀಗೆಯೇ ಸಂಭಾವಿತನಂತೆ ಬಂದು, ಸಹಾಯಕನನ್ನು ನೀರು ತರಲು ಕಳುಹಿಸಿ ಸ್ವಾಮಿ ಶ್ರದ್ದಾನಂದರನ್ನು ಗುಂಡಿಕ್ಕಿ ಕೊಂದಿದ್ದ.

ಕನ್ನಯ್ಯ ಲಾಲ್ ಅವರ ಹತ್ಯೆ ನಡೆದಿದ್ದೂ ಹೀಗೆಯೇ. ಬಟ್ಟೆ ಹೊಲಿಸುವವರ ಸೋಗಿನಲ್ಲಿ ಬಂದ ಮೊಹಮ್ಮದ್ ಗೌಸ್ , ಮೊಹಮ್ಮದ್ ರಿಯಾಜ್ , ಅಳತೆ ತೆಗೆದುಕೊಳ್ಳುವಾಗ ಕನ್ನಯ್ಯಲಾಲ್ ಅವರ ಕತ್ತು ಕೊಯ್ದರು. 21 ಬಾರಿ ಚುಚ್ಚಿ ಕೊಲ್ಲಲಾಗಿದೆ ಎಂದಿದೆ ಮರಣೋತ್ತರ ವರದಿ. ಬಹುಶಃ ಹಂತಕರು ವಿಡಿಯೋವನ್ನು ವೈರಲ್ ಮಾಡದೇ ಇದ್ದಿದ್ದರೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಇದಕ್ಕೊಂದು ಬೇರೆ ಕತೆ ಕಟ್ಟಿ ಮುಗಿಸುತ್ತಿತ್ತು. ನಂತರ ತಿಳಿದು ಬಂದ ವಿಷಯದ ಪ್ರಕಾರ, ಕನ್ನಯ್ಯ ಲಾಲ್ ಅವರು ಕೇವಲ ನೂಪುರ್ ಶರ್ಮ ಅವರನ್ನು ಬೆಂಬಲಿಸಿದ ಕಾರಣಕ್ಕೆ ಬಂಧನವಾಗಿ, ಬಿಡುಗಡೆಯಾಗಿ ಬಂದ ನಂತರ, ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಪೋಲಿಸ್ ರಕ್ಷಣೆ ಕೋರಿದ್ದರು. ಒಬ್ಬ ಬಡವನ ಮನವಿಯನ್ನು ಪೋಲಿಸರು ಹೇಗೆ ತಾತ್ಸಾರದಿಂದ ಸ್ವೀಕರಿಸುತ್ತಾರೋ, ಹಾಗೆಯೇ ಸ್ವೀಕರಿಸಿ ಕಸದ ಬುಟ್ಟಿಯ ಜಾಗ ತೋರಿಸಿದರು. ಅಂದ ಹಾಗೆ, ಕನ್ನಯ್ಯ ಲಾಲ್ ಅವರ ಕುರಿತ ಮಾಹಿತಿಯನ್ನು ಹಂಚಿಕೊಂಡವನು ಯಾರೋ ಅನಾಮಿಕನಲ್ಲ. ಕನ್ನಯ್ಯ ಅವರ ಪಕ್ಕದ ಮನೆಯ ನಜೀಂ. ನಜೀಮನಿಗೆ ನೆರೆ ಮನೆಯವನ ಸ್ನೇಹಕ್ಕಿಂತ ಆತನ ಇಸ್ಲಾಂ ಮುಖ್ಯವಾಗಿತ್ತು. ನಂಬಿ ಕೆಟ್ಟವನು ಕನ್ನಯ್ಯ. ಕಾಶ್ಮೀರದ ಪಂಡಿತರ ಹತ್ಯೆಯಲ್ಲೂ ನೆರೆಮನೆಯವರೇ ಹೇಗೆ ಸಹಾಯ ಮಾಡಿದ್ದರು ಎನ್ನುವುದನ್ನು, ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಇಡೀ ಭಾರತವೇ ನೋಡಿದೆ. ಜೊತೆಗಿದ್ದವರಿಗೆ ಮೂಹೂರ್ತ ಇಡುವ ಧೂರ್ತ ಮನಸ್ಥಿತಿಯನ್ನು ಇವರು ಕಲಿಯುವುದು ಎಲ್ಲಿಂದ?

ಹತ್ಯೆಯ ನಂತರ ಯಥಾ ಪ್ರಕಾರ, ಭಯೋತ್ಪಾದನೆಗೆ ಧರ್ಮವಿಲ್ಲ, ಇಸ್ಲಾಂನಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ, ಇವರು ಮುಸ್ಲಿಮರೇ ಅಲ್ಲ ಎನ್ನುವಂತ ತೌಡು ಕುಟ್ಟುವ ವಾದಗಳನ್ನು ಮಾಡರೇಟ್ ಮುಸ್ಲಿಮರು, ಬುದ್ಧಿಜೀವಿಗಳ ಮುಖವಾಡದ ಬೌದ್ಧಿಕ ಭಯೋತ್ಪಾದಕರು ಮುಂದಿಟ್ಟು ಇಸ್ಲಾಮಿಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ತಿಪ್ಪೆ ಸಾರಿಸುವ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ನಿಜಕ್ಕೂ, ಇಸ್ಲಾಮಿಗೂ ಇದಕ್ಕೂ ಸಂಬಂಧವೇ ಇಲ್ಲವಾದರೆ, ನೂಪುರ್ ಶರ್ಮ ಅವರಿಗೆ ಕಮಲೇಶ್ ತಿವಾರಿಗೆ ಆದ ಗತಿಯೇ ಆಗಬೇಕು ಎಂದು ಬಹಿರಂಗವಾಗಿ ಹೇಳಿದವರು ಯಾರು? ಅವರು ಇಸ್ಲಾಮಿನ ಅನುಯಾಯಿಗಳಲ್ಲವೇ? ನೂಪುರ್ ಹೇಳಿಕೆಯನ್ನು ವಿರೋಧಿಸಿ ಉತ್ತರ ಪ್ರದೇಶ,ಬಿಹಾರ ಮತ್ತಿತ್ತರ ಕಡೆಯಲ್ಲಿ ಹಿಂಸಾಚಾರದಲ್ಲಿ ತೊಡಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ, ದೇವಸ್ಥಾನಗಳ ಮೇಲೆ ಕಲ್ಲು ತೂರಾಟ, ಬೆಂಕಿಯಿಟ್ಟವರು ಯಾರು?

ಶುಕ್ರವಾರದ ಮಧ್ಯಾಹ್ನದವರೆಗೂ 21ನೇ ಶತಮಾನದ ನಾಗರೀಕನಂತೆಯೇ ವರ್ತಿಸುವವನು, ಮಸೀದಿಯೊಳಗೆ ಹೋಗಿ ನಮಾಜು ಮುಗಿಸಿ ಹೊರಬರುವಾಗ ಶಿಲಾಯುಗದ ಅನಾಗರೀಕನಂತೆ (ಶಿಲಾಯುಗದ ಜನರ ಕ್ಷಮೆ ಕೋರುತ್ತಾ) ಕಲ್ಲು ತೂರಾಟ,ದೊಂಬಿ, ಹಿಂಸಾಚಾರಕ್ಕೆ ಇಳಿಯುವುದು ಯಾಕೆ? ಅದ್ಯಾವ ನಾಗವಲ್ಲಿ ಅವರನ್ನು ಹೊಕ್ಕುತ್ತದೆ? ಹೊಕ್ಕಿಸುವುವರು ಯಾರು? ಮಸೀದಿಯೊಳಗೆ ಏನನ್ನು ಹೇಳಿ ಹೊರ ಕಳಿಸಲಾಗುತ್ತದೆ? ಶುಕ್ರವಾರದ ಮಧ್ಯಾಹ್ನ ಬಂದರೆ, ಭಾರತದ ನಾಗರೀಕರು ಭಯಪಡುವ ಪರಿಸ್ಥಿತಿ ಸೃಷ್ಟಿ ಮಾಡಿರುವವರು ಯಾರು? ಸಂವಿಧಾನ, ಪೋಲಿಸ್-ನ್ಯಾಯಾಲಯ ಇರುವಂತ ಭಾರತದಲ್ಲಿ, “ಗುಸ್ತಾಕಿ ನಬೀಕೀ ಏಕೀ ಸಜಾ, ಸರ್ ತನ್ ಸೇ ಜುದಾ” ಎನ್ನುವ ಘೋಷಣೆಯನ್ನು ಕೂಗುತ್ತ ಹೊರ ಬರುವ ಪುಂಡು ಹುಡುಗರಿಗೆ, ಈ ಘೋಷಣೆ ಕೂಗಲು ಸಮ್ಮತಿ ನೀಡಿರುವ ಆ ಸಮುದಾಯದ ಹಿರಿಯರಿಗೆ, ಈ ನೆಲದ ಸಂವಿಧಾನದ ಮೇಲೆ ಎಷ್ಟು ಗೌರವವಿದೆ?

ನಿಮ್ಮ ರಿಲಿಜನ್ನನ್ನು ಟೀಕಿಸಿದವರಿಗೆ ಮರಣದಂಡನೆ ಎನ್ನುವುದು 1400 ವರ್ಷಗಳ ಹಿಂದೆ ಅರಬ್ಬಿ ನೆಲದಲ್ಲಿ ಮಾಡಿದ ಕಾನೂನಾಗಿರಬಹುದು. ಆದರೆ, ಇದು ಭಾರತ. ಈ ನೆಲದ ಕಾನೂನು ಬೇರೆಯೇ ಇದೆ ಎನ್ನುವುದು ಇವರಿಗೇಕೆ ಅರ್ಥವಾಗುತ್ತಿಲ್ಲ? ಏಕೆ ಅರ್ಥವಾಗುತ್ತಿಲ್ಲ ಎನ್ನುವುದಕ್ಕೆ ಉತ್ತರವನ್ನು, ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ನೀಡಿದ್ದಾರೆ. ನಾವುಗಳು ಜ್ವರ ಬಂದಾಗ ಮಾತ್ರ ಚಿಂತೆಗೀಡಾಗುತ್ತೇವೆ, ಆದರೆ ರೋಗದ ಅಸಲಿ ಮೂಲವನ್ನು ಗುರುತಿಸುವಲ್ಲಿ ವಿಫಲರಾಗುತ್ತಿದ್ದೇವೆ ಎನ್ನುತ್ತಾ, “ನಿನ್ನ ರಿಲಿಜನ್ನನ್ನು ಅವಮಾನಿಸಿದವರ ತಲೆ ಕತ್ತರಿಸಬೇಕು. ಇದು ಅಲ್ಲಾಹನೇ ಮಾಡಿರುವ ಕಾನೂನು” ಎಂದು ಪುಟ್ಟ ಮಕ್ಕಳ ತಲೆಗೆ ಮದರಾಸದಲ್ಲಿ ತುಂಬಲಾಗುತ್ತಿದೆ ಎಂದಿದ್ದಾರೆ. ಬೆಳೆಯುವ ಮಕ್ಕಳ ತಲೆಯಲ್ಲಿ ದ್ವೇಷವನ್ನು ತುಂಬುತ್ತಿರುವ ಮದ್ರಾಸಗಳ ಮೇಲೆ ನಿಗಾ, ನಿಯಂತ್ರಣ ಇಡಬೇಕು ಎಂದಿದ್ದಾರೆ.

ಆರೀಫ್ ಮೊಹಮ್ಮದ್ ಖಾನ್ ಅವರ ಮಾತನ್ನು ಪುಷ್ಟೀಕರಿಸುವಂತಹ ಹೇಳಿಕೆಯೊಂದನ್ನು, ಸಂದರ್ಶನವೊಂದರಲ್ಲಿ ಪಾಕಿಸ್ತಾನದ ಇಸ್ಲಾಮಿಕ್ ಸ್ಕಾಲರ್ ಜಾವೆದ್ ಅಹ್ಮದ್ ಗಮಿದಿ ಹೇಳುತ್ತಾರೆ. ಇಸ್ಲಾಮಿನ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ಮೂಲಭೂತವಾದಕ್ಕೆ ಕಾರಣವೇನು ಎನ್ನುವ ಸಂದರ್ಶನಕಾರರ ಪ್ರಶ್ನೆಗೆ ಉತ್ತರಿಸುವ ಗಮಿದಿಯವರು, ಇಸ್ಲಾಂನ ಯಾವುದೇ ಶಾಖೆಯ ಚಿಂತನೆಯಿರುವ ಮದರಾಸವೇ ಆದರೂ, ಬಹಿರಂಗವಾಗಿ ಅಥವಾ ಗೌಪ್ಯವಾಗಿ ಮಕ್ಕಳಿಗೆ 4 ವಿಷಯಗಳನ್ನು ಕಲಿಸುತ್ತಾರೆ.

1) ‘ಶಿರ್ಕ್’ (ಮೂರ್ತಿಪೂಜಕರು, ಬಹುದೇವತರಾಧಕರು), ‘ಕುಫ್ರ್’ (ಅಲ್ಲಾಹನನ್ನು ಒಪ್ಪದವರು), ‘ಇರ್ತಿದಾಹ್ದ್’ (ಇಸ್ಲಾಮ್ ಅನ್ನು ತೊರೆದವರು) ಇವರೆಲ್ಲರಿಗೂ ಮೃತ್ಯು ದಂಡನೆ ನೀಡುವ ಹಕ್ಕನ್ನು ಅಲ್ಲಾಹನೇ ನಮಗೆ ನೀಡಿದ್ದಾನೆ.

2) ಜಗತ್ತನ್ನು ಆಳುವ ಅಧಿಕಾರವಿರುವುದು ಮುಸ್ಲಿಮರಿಗೆ ಮಾತ್ರ. ಮುಸ್ಲಿಮೇತರರ ಆಡಳಿತವಿರುವ ಜಾಗಕ್ಕೆ ಮನ್ನಣೆಯಿಲ್ಲ, ನಾವು ಶಕ್ತಿವಂತರಾದಾಗ, ಅದನ್ನು ಉರುಳಿಸಿ ಅಧಿಕಾರ ಪಡೆಯಬೇಕು.

3) ಇಸ್ಲಾಮಿಕ್ ಜಗತ್ತು ಒಬ್ಬ ಖಲೀಫನ ಹಿಡಿತದಲ್ಲಿರಬೇಕು.

4) ನ್ಯಾಷನಲ್ ಸ್ಟೇಟ್ ಗಳ ಕಲ್ಪನೆಯು ಇಸ್ಲಾಮಿಗೆ ವಿರುದ್ದವಾಗಿದೆ.

ಹಾಲು ಕುಡಿದು ಬೆಳೆದ ಮಕ್ಕಳೇ ಹಾದಿ ತಪ್ಪುವ ಕಾಲದಲ್ಲಿ, ಹೀಗೆ ಇಸ್ಲಾಮೇತರರ ಬಗ್ಗೆ ಹಾಲಾಹಲವನ್ನು ಕುಡಿದು ಬೆಳೆಯುವ ಮಕ್ಕಳು, ದೊಡ್ಡವರಾದ ನಂತರ ಕಮಲೇಶ್ ತಿವಾರಿ, ಕನ್ನಯ್ಯಲಾಲನಂತವರ ಕತ್ತು ಕೊಯ್ಯದೇ ಬಿಡುತ್ತಾರೆಯೇ? ಭಾರತದಲ್ಲಿ ಕತ್ತು ಕೊಯ್ಯುವ ಅನಾಗರಿಕತೆಯ ಇತಿಹಾಸ ಆರಂಭವಾಗಿದ್ದು 1929ರಲ್ಲಿ ಲಾಹೋರಿನಲ್ಲಿ ಮಹಾಶೆ ರಾಜಪಾಲ್ ಅವರನ್ನು ಅಲಿಮುದ್ದಿನ್ ಎಂಬ ವ್ಯಕ್ತಿ ಕೊಂದಾಗ. ಅಂದಿನ ಬ್ರಿಟಿಷ್ ಸರ್ಕಾರ ಅಲಿಮುದ್ದೀನಿಗೆ ಮರಣದಂಡನೆ ವಿಧಿಸಿತ್ತು. ಅಲಿಮುದ್ದಿನ್ ಪರವಾಗಿ ಮೊಹಮ್ಮದ್ ಅಲಿ ಜಿನ್ನಾ ವಾದಿಸಿದ್ದರು, ಮುಂದೆ ಅವನಿಗೆ ಘಾಜಿ ಪದವಿಯನ್ನು, ಮುಸ್ಲಿಂ ಮುಖಂಡರು ನೀಡಿದರು. ಆ ಮೂಲಕ ಅನಾಗರೀಕ ಕೆಲಸಕ್ಕೆ ಮನ್ನಣೆಯಿದೆ ಎನ್ನುವ ಸೂಚನೆಯನ್ನು ನೀಡಲಾಯಿತು. ಈ ದುರ್ಘಟನೆಯ ನಂತರವೇ ಬ್ರಿಟಿಷ್ ಸರ್ಕಾರ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಂತ ಪ್ರಕರಣಿಗಳಿಗೆಂದೇ IPC 295A ಅನ್ನು ತಂದಿದ್ದು. ಇದರ ಪ್ರಕಾರ ಆರೋಪ ಸಾಬೀತಾದರೇ, ಗರಿಷ್ಟ ಮೂರು ವರ್ಷದ ಜೈಲು ಅಥವಾ ದಂಡ ಅಥವಾ ಎರಡೂ ಅಂತಾಗುತ್ತದೆ. ಆದರೆ, ಈಗ ಇಲ್ಲಿನ ಮುಸ್ಲಿಮರ ಆಗ್ರಹ ಮರಣದಂಡನೆಯದ್ದು. ಅವರಿಗೆ ಮರಣದಂಡನೆಯ ಶಿಕ್ಷೆ ನೋಡುವ ಇಚ್ಚೆಯಿದ್ದರೆ ಒಂದು ಮಾರ್ಗವಿದೆ. ಪಾಕಿಸ್ತಾನಕ್ಕೆ ಹೋಗುವುದು! ಹೌದು. ಪಾಕಿಸ್ತಾನದ PPC 295A ಯಲ್ಲಿ ಮರಣದಂಡನೆಗೆ ಅವಕಾಶವಿದೆ. ಹಾಗೆಂದು, ಪಾಕಿಸ್ತಾನಕ್ಕೆ ಹೋಗಿ ಎಂದು ಸುಮ್ಮನೆ ಹೇಳುತ್ತಿಲ್ಲ. ಭಾರತದಲ್ಲೇ ಇರುವುದಾದರೇ, ಭಾರತದ ಸಂವಿಧಾನಕ್ಕೆ ಬದ್ಧವಾಗಿ, ಇಲ್ಲಿನ ಕಾಯ್ದೆ ಕಾನೂನುಗಳನ್ನು ಒಪ್ಪಿಕೊಂಡೇ ಬದುಕಬೇಕು ತಾನೇ? ಪಾಕಿಸ್ತಾನದ ಕಾನೂನನ್ನು ಭಾರತದಲ್ಲಿ ಕೇಳುವವರು, ಮುಸ್ಲಿಂ ಲೀಗಿಗೆ ಮತ ನೀಡಿ, ದೇಶ ವಿಭಜನೆಗೆ ಕಾರಣವಾಗಿ ಇಲ್ಲೇ ಉಳಿದುಕೊಂಡು, ಈಗ ಭಾರತವನ್ನು ಪಾಕಿಸ್ತಾನದಂತೆ ನರಕ ಮಾಡಲು ಹೊರಟಿರುವುದೇಕೆ? ಇವರನ್ನು ಸುಮ್ಮನೇ ಪಾಕಿಸ್ತಾನಕ್ಕೆ ಹೋಗಲಿ ಎನ್ನುತ್ತಿಲ್ಲ. ದಾಖಲೆ ಕೆಳಗಿದೆ ನೋಡಿ

1946ರ ಬ್ರಿಟಿಷ್ ಆಕ್ರಮಿತ ಭಾರತದಲ್ಲಿ ನಡೆದ ಚುನಾವಣೆ, ಕೇವಲ ಚುನಾವಣೆಯಾಗಿರಲಿಲ್ಲ. ಧರ್ಮದ ಆಧಾರದ ಮೇಲೆ ಭಾರತವನ್ನು ವಿಭಜಿಸಿ ಪಾಕಿಸ್ತಾನ ಸೃಷ್ಟಿಗಾಗಿ ಪಟ್ಟು ಹಿಡಿದಿದ್ದ ಮುಸ್ಲಿಂ ಲೀಗಿನ ಪಾಲಿಗೆ, ಮುಸ್ಲಿಮರ ಬೆಂಬಲದ ಮೂಲಕ, ತಾನು ಮುಸ್ಲಿಮರ ಅಸಲಿ ಪ್ರತಿನಿಧಿ ಎನ್ನುವುದನ್ನು ಸಾಬೀತು ಮಾಡಬೇಕಿತ್ತು. ಇತ್ತ ಗಾಂಧೀಯವರ ಕಾಂಗ್ರೆಸ್ಸು ತಾನು ಭಾರತದ ಹಿಂದೂ-ಮುಸ್ಲಿಮರ ಪ್ರತಿನಿಧಿ ಎಂದು ಕೊಚ್ಚಿಕೊಳ್ಳುತ್ತಿತ್ತು. ಆ ಚುನಾವಣೆಯ ಫಲಿತಾಂಶದಲ್ಲಿ, ಮುಸ್ಲಿಂ ಲೀಗ್ ವಿರುದ್ಧವಾಗಿ ದೊಡ್ಡ ಮಟ್ಟದಲ್ಲಿ ನಿಂತ ಮುಸ್ಲಿಮರು NWFPನವರು ಮಾತ್ರ. ದುರಾದೃಷ್ಟವಶಾತ್ ಅವರನ್ನೇ ಪಾಕಿಸ್ತಾನಕ್ಕೆ ಸೇರಿಸಲಾಯಿತು. ಮುಸ್ಲಿಂ ಲೀಗಿಗೆ 100% ಮತ ನೀಡಿದ ಮದ್ರಾಸ್, ಬಾಂಬೆ, ಒರಿಸ್ಸಾ ಪ್ರಾಂತ್ಯದ ಮುಸ್ಲಿಂ ಲೀಗ್ ಪ್ರೇಮಿಗಳು ಈಗಲೂ ಇಲ್ಲೇ ಇದ್ದಾರೆ. ಅವರ ನಂತರ ಹೆಚ್ಚು ಮತ ನೀಡಿ ಪಾಕಿಸ್ತಾನ ಸೃಷ್ಟಿಸಿದವರು ಇಲ್ಲೇ ಉಳಿದಿದ್ದಾರೆ. ಇವತ್ತಿಗೆ ಬಿಜೆಪಿಯನ್ನು ಹೇಗೆ ಮುಸ್ಲಿಮರ ವಿರೋಧಿ ಎಂದು ಕಾಂಗ್ರೆಸ್ ಮತ್ತಿತ್ತರರು ಬಿಂಬಿಸುತ್ತಾರಲ್ಲ, ಅದೇ ರೀತಿ ಅಂದು ಮುಸ್ಲಿಂ ಲೀಗ್, ಕಾಂಗ್ರೆಸ್ಸನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿತ್ತು. ಇವತ್ತಿಗೆ ಅದೇ ಮುಸ್ಲಿಂ ಲೀಗಿನ ಮತದಾರರು ಕಾಂಗ್ರೆಸ್ಸಿನ ಮತ್ತಿತ್ತರ ಕ್ಯಾಂಪಿನಲ್ಲಿ ನಿಂತಿದ್ದಾರೆ. ಇವತ್ತಿಗೆ ಕಾಂಗ್ರೆಸ್ಸಿನ ಜಾಗದಲ್ಲಿ ಬಿಜೆಪಿ ನಿಂತಿದೆ. ಮುಂದೊಂದು ದಿನ ಇವರೆಲ್ಲ ಎಸ್ಡಿಪಿಐ ಮತದಾರರಾಗಿ, ಕಾಂಗ್ರೆಸ್ಸಿಗೆ ಕೈ ಕೊಟ್ಟು 1946ರ ಚುನಾವಣಾ ಫಲಿತಾಂಶ ಮರುಸೃಷ್ಟಿಯಾದರೆ ಆಶ್ಚರ್ಯವೇನಿಲ್ಲ. ಇತಿಹಾಸ ಮರುಕಳಿಸುತ್ತದಷ್ಟೇ. ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರು ಸುಮ್ಮನೇ ಪಾಪ್ಯುಲೇಶನ್ ಎಕ್ಸ್ಚೇಂಜ್ ಆಗಬೇಕೆಂದು ಹೇಳಿದ್ದಲ್ಲ, ಅವರಿಗೆ ವರ್ತಮಾನದ ವಾಸ್ತವ ಮತ್ತು ಭವಿಷ್ಯದ ಮುನ್ಸೂಚನೆಯಿತ್ತು. ಇಲ್ಲಿ ಯಾರ ದೇಶ ಭಕ್ತಿಯನ್ನು ಪ್ರಶ್ನಿಸಲು ನಾನು ಹೊರಟಿಲ್ಲ, ಅಸಲಿಗೆ ಮುಸ್ಲಿಂ ಲೀಗ್ ಪಾಕಿಸ್ತಾನವನ್ನು ಬಯಸಿದ್ದು ಯಾವ ಕಾರಣ ಮುಂದಿಟ್ಟು ಹೇಳಿ? ಹಿಂದೂ ಬಹುಸಂಖ್ಯಾತರ ನಡುವೆ ಮುಸ್ಲಿಂರಿಗೆ ಭವಿಷ್ಯವಿಲ್ಲ, ಮುಸ್ಲಿಮರ ಮೇಲೆ ದೌರ್ಜನ್ಯವಾಗುತ್ತಿದೆ ಎನ್ನುವ ಕಾರಣಕ್ಕಾಗಿ ತಾನೇ? ಭವಿಷ್ಯ ಇಲ್ಲ ಎನ್ನುವ ಜಿನ್ನಾ ಮಾತಿಗೆ ಮತ ನೀಡಿ, ಇಲ್ಲೇ ಉಳಿದಿದ್ದರ ಅರ್ಥವೇನು? ಇಲ್ಲೇ ಉಳಿದ ಮೇಲೆ, ಇಲ್ಲಿನ ಕಾನೂನನ್ನು ಗೌರವಿಸಬೇಕು ತಾನೇ? ಪಾಕಿಸ್ತಾನದ ಕಾನೂನನ್ನೇಕೆ ಇಲ್ಲಿ ಬಯಸಬೇಕು? ಹಾಗೆ, ಪಾಕಿಸ್ತಾನದ ಕಾನೂನನ್ನು ಇಲ್ಲಿ ಬಯಸುವವರನ್ನು ಪಾಕಿಸ್ತಾನಕ್ಕೆ ತೊಲಗಿ ಎನ್ನಲು ಯಾವ ಹಿಂಜರಿಕೆಯೂ ನನಗಿಲ್ಲ. ರುಂಡ-ಮುಂಡ ಬೇರ್ಪಡಿಸುವಂತ ಭಯೋತ್ಪಾದಕ ಘೋಷಣೆಗೆ ಭಾರತದ ನೆಲದಲ್ಲಿ ಅವಕಾಶವೇ ಇರಬಾರದು. ಇಂತಹ ಮನಸ್ಥಿತಿ ಆರೋಗ್ಯಕರ ಸಮಾಜದ ಪಾಲಿಗೆ ಕ್ಯಾನ್ಸರ್ ಇದ್ದಂತೆ. ಹಾಗಿದ್ದರೇ ಈ ಕ್ಯಾನ್ಸರಿನಿಂದ ಸಮಾಜವನ್ನು ರಕ್ಷಿಸುವುದು ಹೇಗೆ? ಇದು ಯಾರ ಜವಬ್ದಾರಿ?

ಸರಾಸರಿ, ಹಿಂದುವೊಬ್ಬ ಇದು, ಸರ್ಕಾರದ ಜವಬ್ದಾರಿ ಎಂದೇ ಹೇಳುತ್ತಾನೆ. ಅದರಾಚೆಗೆ ಇದು ಆರೆಸ್ಸೆಸ್ಸಿನಂತಹ ಸಂಘಟನೆಗಳ ಜವಬ್ದಾರಿಯೆಂದು, ತನಗೆ ತನ್ನ ಕುಟುಂಬದ ಜವಬ್ದಾರಿಯಿದೆಯೆಂದೂ ತನ್ನ ಹೊಣೆಗೇಡಿತನವನ್ನೇ ಪ್ರದರ್ಶಿಸುತ್ತಾನೆ. No Doubt, ಅತಿ ನಿರ್ಣಾಯಕ, ಪ್ರಮುಖ ಪಾತ್ರವಹಿಸಬೇಕಾದದ್ದು ಸರ್ಕಾರವೇ. ಮೊದಲೆನೆಯದಾಗಿ, ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಶಿಲಾಯುಗದ ಮನಸ್ಥಿತಿಯ ಭಾವನೆಯನ್ನು ಬೆಳೆಸುವ ಮದ್ರಾಸಗಳನ್ನು ನಿಷೇಧಿಸಬೇಕು. ಇಲ್ಲವಾದರೇ, ಅಲ್ಲೇನು ಕಲಿಸಲಾಗುತ್ತದೆ ಎನ್ನುವುದನ್ನು ಸರ್ಕಾರ ಅನುಮತಿಸಬೇಕು. ಅಲ್ಲಿನ ಬೋಧನೆಗಳ ವಿಡಿಯೋ ಚಿತ್ರೀಕರಣ ಮಾಡಿಸಬೇಕು. 21ನೇ ಶತಮಾನದ ಆಧುನಿಕ ಸಮಾನ ಶಿಕ್ಷಣಕ್ಕಾಗಿ ಸರ್ಕಾರಿ,ಖಾಸಗಿ ಶಾಲೆಗಳಿವೆ.

ಎರಡನೆಯದಾಗಿ, ಶುಕ್ರವಾರ ಮಧ್ಯಾಹ್ನದವರೆಗೂ 21ನೇ ಶತಮಾನದ ನಾಗರೀಕರಾಗಿರುವವರು, ಮಧ್ಯಾಹ್ನದ ನಂತರ ಶಿಲಾಯುಗದವರಾಗಿ ಬದಲಾಗುತ್ತಾರಲ್ಲ, ಅದು ನಿಲ್ಲಬೇಕಾದರೇ, ಯಾವ ಮಸೀದಿಯಿಂದ ಹೊರಬಂದು ಈ ಕೆಲಸ ಮಾಡುತ್ತಾರೋ, ಅಲ್ಲಿನ ಮುಖ್ಯಸ್ಥ, ಆಡಳಿತ ಮಂಡಳಿಯವರನ್ನೇ ಕಾನೂನು ಸುವ್ಯವಸ್ಥೆಯ ಬಾಧ್ಯತೆಗೆ ಒಳಪಡಿಸಬೇಕು. ಆಗಲೇ ಇದು ನಿಯಂತ್ರಣಕ್ಕೆ ಬರುವುದು.

ಮೂರನೇಯದಾಗಿ, ಭಾರತೀಯ ಮುಸ್ಲಿಂ ಸಮಾಜವನ್ನು ಮೂಲಭೂತವಾದಿಗಳ ಕೈಗೆ ಒಪ್ಪಿಸಲೆಂದೇ ತಂದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅನ್ನು ಕಿತ್ತೊಗೆಯಬೇಕು. ಸಮಾನ ನಾಗರೀಕ ಸಂಹಿತೆಯನ್ನು ಜಾರಿಗೆ ತರಬೇಕು. ಕೇಂದ್ರದ ಬಿಜೆಪಿ ಸರ್ಕಾರ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ಇಂತಹ ಕ್ರಮಗಳಿಗೆ ಮುಂದಾದರೂ, ಸೆಕ್ಯುಲರಿಸಂ ಮುಖವಾಡ ತೊಟ್ಟು ಇಸ್ಲಾಮಿಕ್ ಮೂಲಭೂತವಾದಿಗಳ ಬೆಂಬಲಕ್ಕೆ ನಿಲ್ಲುವ ಕಾಂಗ್ರೆಸ್ಸ್ ಮತ್ತಿತರ ರಾಜಕೀಯ ಪಕ್ಷಗಳೂ, ಕೊಡಲಿಯ ಕಾವು ಕುಲಕ್ಕೆ ಮೂಲ ಎನ್ನುವ ಮನಸ್ಥಿತಿಯ ಹಿಂದೂಗಳೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಇಂತಹ ಮೂರ್ಖ ಹಿಂದೂಗಳು ಅರ್ಥ ಮಾಡಿಕೊಳ್ಳಬೇಕಿರುವುದೇನೆಂದರೆ, ನೀವು ರಾಜಕೀಯವಾಗಿ ಯಾರನ್ನೇ ಬೆಂಬಲಿಸಿ, ಆದರೆ ಈ ಕ್ರಮಗಳು ನಿಮ್ಮ ಮಕ್ಕಳು, ಮೊಮ್ಮಕ್ಕಳ ಸುರಕ್ಷತೆಗಾಗಿ ಅವಶ್ಯಕವಾಗಿದೆ ಎನ್ನುವುದನ್ನು ಮರೆಯಬೇಡಿ. ಕನ್ನಯ್ಯನ ಕತ್ತು ಕೊಯ್ಯುವಾಗ ನೀನು ಯಾವ ಪಕ್ಷದವನು ಎಂದೇನು ಅವರು ಕೇಳಲಿಲ್ಲ, ನೆನಪಿಡಿ. ಇವತ್ತಿನ ಮುದಿ ಬುದ್ಧಿಜೀವಿಗಳೇನೋ ಮೂಲಭೂತವಾದಿ ಮುಲ್ಲಾಗಳ ಪರ ನಿಂತು ಇನ್ನು ಕೆಲವೇ ವರ್ಷಗಳಲ್ಲಿ ಲೋಕಯಾತ್ರೆ ಮುಗಿಸಬಹುದು. ಮುಂದೆ, ಈ ಮುಲ್ಲಾಗಳು ಸೃಷ್ಟಿಸಿ ಬೀದಿಗೆ ಬಿಡುವ ಜಿಹಾದಿಗಳ ಎದುರಿಗೆ ನಿಲ್ಲಬೇಕಿರುವುದು ಮುದಿ ಬುದ್ಧಿಜೀವಿಯ ಮಕ್ಕಳೋ, ಮೊಮ್ಮಕ್ಕಳೇ ಆಗಿರುತ್ತಾರೆ. ಈ ಮಾತು ಸ್ವಲ್ಪ ಅತಿಯಾಯಿತು ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ಇದು ವಾಸ್ತವ. ತೀರಾ 1940ರ ದಶಕದವರೆಗೂ ಲಾಹೋರಿನಲ್ಲಿ ನಿಂತು, ಇನ್ನು ಕೆಲವೇ ವರ್ಷಗಳಲ್ಲಿ ಹಿಂದೂಗಳ ಭವಿಷ್ಯಕ್ಕೆ ಈ ಊರಿನಲ್ಲಿ ಸಂಚಕಾರ ಬರಲಿದೆ ಎಂದರೆ, ಇವತ್ತಿನ ಭಾರತದಲ್ಲಿರುವ ಮೂರ್ಖ ಸೆಕ್ಯುಲರ್ ಹಿಂಡುಗಳಂತ ಜನರು ಲಾಹೋರಿನಲ್ಲಿ ಬಿದ್ದೂ ಬಿದ್ದೂ ನಗುತ್ತಿದ್ದರು. ಇವತ್ತಿಗೆ ನಗಲು ಅಲ್ಲಿ ಹಿಂದೂಗಳೇ ಉಳಿದಿಲ್ಲ. ಮದರಸ ನಿಷೇಧ, ಸಮಾನ ನಾಗರೀಕ ಸಂಹಿತೆಯನ್ನು ವಿರೋಧಿಸುವ ಹಿಂದೂಗಳು ಅಸಲಿಗೆ ವಿರೋಧಿಸುತ್ತಿರುವುದು ಅವರದೇ ಮಕ್ಕಳ, ಮೊಮ್ಮಕ್ಕಳ ನೆಮ್ಮದಿಯ ನಾಳೆಗಳನ್ನು.

ಇದು ಸರ್ಕಾರದ ಕೆಲಸವಾದರೇ, ಸಾಮಾನ್ಯ ಹಿಂದೂಗಳಾದ ನಾವು-ನೀವುಗಳು ಏನು ಮಾಡಬೇಕಿದೆ? ಗಲಭೆ, ದೊಂಬಿ ಮಾಡುವವರ ಹೆಡೆಮುರಿ ಕಟ್ಟುವುದು ಪೋಲಿಸರ ಕರ್ತವ್ಯವೇ ಹೌದು. ಪರಿಸ್ಥಿತಿ ಕೈ ಮೀರಿದಾಗ ಸೈನ್ಯವೂ ಬರುತ್ತದೆ. ಅದೆಲ್ಲಾ ಸರಿ. ನಾವು ಹಿಂದೂಗಳು ಅನಾಗರೀಕರಂತೆ ಕಲ್ಲು ತೂರಾಟ ಮಾಡಿ, ಮತ್ತೊಬ್ಬರ ಆಸ್ತಿ-ಪಾಸ್ತಿಗೆ ಬೆಂಕಿಯಿಡಬೇಕಿಲ್ಲ. ಯಾವ ರೀತಿಯಲ್ಲಿ ಅವರು ಗುಂಪಿನ ಶಕ್ತಿ ತೋರಿಸಿ ಭಯ ಪಡಿಸುತ್ತಾರಲ್ಲ, ಅಂತಹ ಗುಂಪು ಎದುರಾಳಿಯ ಕಡೆಯು ಇದೆ ಅಂತಾದಾಗ ಮಾತ್ರ ಇದು ನಿಲ್ಲುವುದು. ಈ ವಿಷಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. “ಕಾಂಗ್ರೆಸ್ ಎರಡು ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿದೆ. ಮೊದಲನೆಯದು ಒಲೈಕೆ ಮತ್ತು ಒಪ್ಪಂದದ ನಡುವೆ ವ್ಯತ್ಯಾಸವಿದೆ. ಓಲೈಕೆಯೆಂದರೆ ದೊಂಬಿ,ಕೊಲೆ, ಲೂಟಿ ಮಾಡುತ್ತಿರುವವರ ತಪ್ಪನ್ನು ಸಹಿಸಿಕೊಂಡು ಅಮಾಯಕರಿಗೆ ಆಗುವ ನಷ್ಟವನ್ನು ನೋಡಿಕೊಂಡು ಸುಮ್ಮನಿರುವುದು. ಒಪ್ಪಂದವೆಂದರೆ ಎರಡೂ ಕಡೆಯವರಿಗೆ ಲಕ್ಷ್ಮಣ ರೇಖೆಯನ್ನು ಹಾಕುವುದು. ಒಪ್ಪಂದಕ್ಕೆ ಮಿತಿಯಿದೆ. ಓಲೈಕೆಗಿಲ್ಲ” – ಕಾಂಗ್ರೆಸ್ಸನ್ನು ಉದ್ದೇಶಿಸಿ ಬಾಬಾ ಸಾಹೇಬರು ಅಂದು ಹೇಳಿದ್ದ ಮಾತಿದು. ಇವತ್ತಿಗೆ ಕಾಂಗ್ರೆಸ್ಸಿನ ಜಾಗದಲ್ಲಿ ಜೊತೆಗೆ ಇನ್ನೊಂದಷ್ಟು ಸೆಕ್ಯುಲರ್ ಪಕ್ಷಗಳು ಇವೆ. ಪುಡಿ ಓಟಿನ ಆಸೆಗೆ ಬಿದ್ದಿರುವ ಸರ್ವಜನಾಂಗದ ಶಾಂತಿಯ ತೋಟದ ರಾಜಕಾರಣಿಗಳು ಓಲೈಕೆಯನ್ನು ಬಿಡುವುದಿಲ್ಲ. ಹೀಗಿರುವಾಗ, ಹಿಂದೂಗಳು ತಮ್ಮ ಮಕ್ಕಳ,ಮೊಮ್ಮಕ್ಕಳ ನೆಮ್ಮದಿಯ ಬದುಕಿಗೆ ಏನು ಮಾಡಬೇಕು ಎನ್ನುವುದನ್ನು ಯೋಚಿಸಬೇಕು. ಅವರ ಮಕ್ಕಳು, ಹಾಲು ಹಲ್ಲು ಬೀಳುವ ಮೊದಲೇ, ‘ಸರ್ ತನ್ ಸೇ ಜುದಾ’ ( ದೇಹದಿಂದ ತಲೆ ಎಗರಿಸುವ) ಘೋಷಣೆ ಕೂಗುತ್ತ, ನೂಪುರ್ ಶರ್ಮ ಅವರ ಭಾವಚಿತ್ರಕ್ಕೆ ಮೂತ್ರ ಮಾಡುತ್ತಿರುವ ವಿಡಿಯೋವನ್ನು ನೀವು ನೋಡಿರಬಹುದು. ನಮ್ಮ-ನಿಮ್ಮ ಮಕ್ಕಳೋ ಭಾವಗೀತೆ, ಭರತನಾಟ್ಯ, ಸಂಗೀತ, ಸಾಹಿತ್ಯ ಅಂತ ಬೆಳೆಯುತ್ತಿದ್ದಾರೆ. ಬೆಳೆಯಲಿ. ಆದರೆ, ಅದರ ಜೊತೆಗೆ ನಮ್ಮ ಮಕ್ಕಳು ಆತ್ಮರಕ್ಷಣೆಯ ಕಲೆಯನ್ನೂ ಕಲಿಯುಬೇಕಿದೆ.

ಇಸ್ಲಾಂ ಕಾಲಿಟ್ಟ ದೇಶಗಳಲೆಲ್ಲಾ ಅಲ್ಲಿನ ಮೂಲ ಸಂಸ್ಕೃತಿಗಳು ತರಗೆಲೆಯಂತೆ ಉದುರಿ ಹೋಗಿವೆ. ಕೇವಲ ಭಾರತ ಮಾತ್ರವೇ 14-15 ಶತಮಾನಗಳ ರಕ್ತಪಾತ, ಕ್ರೌರ್ಯಕ್ಕೆ ತನ್ನ ನಿರಂತರ ಕ್ಷಾತ್ರದಿಂದ ಉತ್ತರ ನೀಡುತ್ತ ಬಂದಿದೆ. ಬ್ರಿಟಿಷರು ಭಾರತವನ್ನು ಆಕ್ರಮಿಸಿದ ನಂತರ ಭಾರತೀಯ ಸಮಾಜದ ಸಾಂಸ್ಕೃತಿಕ, ಸಾಮೂಹಿಕ ಚಿಂತನೆಯ ಬೇರುಗಳನ್ನು ಶಿಥಿಲಗೊಳಿಸಿದ್ದಾರೆ. ಆ ಕಾರಣದಿಂದಾಗಿಯೇ, ಇಂದು ಹಿಂದುವೊಬ್ಬ ತನ್ನ ರಕ್ಷಣೆಗಾಗಿ ಸರ್ಕಾರದ ಕಡೆ ನೋಡುವ ಪರಿಸ್ಥಿತಿಗೆ ಬಂದಿದ್ದಾನೆ. ಭಾರತದ ಪರಿಸ್ಥಿತಿ ಮತ್ತೊಮ್ಮೆ 1930-40ರ ದಶಕದ ಇತಿಹಾಸದ ಮರುಸೃಷ್ಟಿಯಂತೆಯೇ ಭಾಸವಾಗುತ್ತಿದೆ. ಮುಸ್ಲಿಂ ಲೀಗ್ ಕಾಲದ ಮೂಲಭೂತವಾದ ಮತ್ತೆ ವಿಜೃಂಭಿಸಲು ಆರಂಭವಾಗಿದೆ.

ಪ್ರಮುಖವಾಗಿ, ಮೊದಲೆಲ್ಲ ಊರಿಗೊಂದು ಗರಡಿ ಮನೆ ಅಂತಾದರೂ ಇರುತ್ತಿತ್ತು. ಇವತ್ತಿಗೆ, ಅಂತಹ ಗರಡಿ ಮನೆಗಳ ಅವಶ್ಯಕತೆ ಮತ್ತೆ ಬಂದಿದೆ. ಗ್ರಾಮಗಳಲ್ಲಿ, ಏರಿಯಾಗಳಲ್ಲಿ ಇವು ಮತ್ತೆ ಸ್ಥಾಪನೆಯಾಗಬೇಕಿದೆ. ಇದಕ್ಕಾಗಿ ಮತ್ತೆ ಸರ್ಕಾರದ ಕಡೆ ನೋಡುವಂತಾಗಬಾರದು. ಹಿಂದೂಗಳೇ ಹಣ ಒಟ್ಟು ಮಾಡಿ ಇಂತಹದ್ದನ್ನು ಮಾಡಬೇಕು. ಅವರ ಶಕ್ತಿ ಹುಟ್ಟುವುದು ಶುಕ್ರವಾರದಂದು ಸೇರುವ ಗುಂಪಿನಲ್ಲೇ. ಆ ಗುಂಪಿನಿಂದಲೇ ಅವರು ಶಿಲಾಯುಗಕ್ಕೆ ತೆರಳುವುದು, ಭಯ ಹುಟ್ಟಿಸುವ ಪ್ರಯತ್ನ ಮಾಡುವುದು. ಗರಡಿ ಮನೆಯಲ್ಲೂ ಪ್ರತಿ ಸಂಜೆಯ ತಾಲೀಮು, ಕನಿಷ್ಟ ವಾರಕ್ಕೊಮ್ಮೆ ಎಲ್ಲರೂ ಸೇರಿ, (ಕಡ್ಡಾಯವಾಗಿ ರಾಜಕೀಯವನ್ನು ಚಪ್ಪಲಿಯಂತೆ ಹೊರಗೆ ಬಿಟ್ಟು) ಕೇವಲ ಸಮಾಜದ, ಸಂಸ್ಕೃತಿಯ ಬೇರುಗಳನ್ನು ಗಟ್ಟಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ. ಇದು ಯಾರ ವಿರುದ್ಧವೂ ಅಲ್ಲ. ಹಿಂದೂ ಸ್ವಾವಲಂಬನೆಗಾಗಿ ಮಾತ್ರವೇ. ಹಾಗೆ ಹಿಂದೂಗಳು ಗಟ್ಟಿಯಾಗಿ ಎದೆಯುಬ್ಬಿಸಿ ನಿಂತಾಗ ಮಾತ್ರವೇ ಮತ್ತೊಂದು ಡಿಜೆ ಹಳ್ಳಿ- ಕೆಜಿ ಹಳ್ಳಿ, ಹಳೇ ಹುಬ್ಬಳ್ಳಿಯಂತಹ ಅನಾಗರೀಕರ ದೊಂಬಿಗಳನ್ನು ತಪ್ಪಿಸಲು ಸಾಧ್ಯ. ನಮಗ್ಯಾಕೆ ಊರ ಉಸಾಬರಿ ಎಂದುಕೊಂಡರೂ, ಭಾರತದ ಭವಿಷ್ಯ ಮುಂದೊಂದು ದಿನ ಬೀದಿ ಕಾಳಗದಲ್ಲೇ ನಿಶ್ಚಯವಾಗುತ್ತದೆಯೇನೋ ಅನ್ನಿಸುತ್ತಿದೆ. ಅದನ್ನು ತಪ್ಪಿಸಲಿಕ್ಕಾದರೂ, ಹಿಂದೂಗಳು ಹನುಮನ, ಕಾಲಭೈರವನ, ವೀರಭದ್ರನ, ಕಾಳಿಯ ಪೂಜೆಗೆ, ತಾಲೀಮಿಗೆ ಮುಂದಾಗಬೇಕಿದೆ. ಜಗತ್ತು ಗೌರವಿಸುವುದು ಶಕ್ತಿವಂತರನ್ನು ಮಾತ್ರ. ನೆನಪಿಡಿ.

ಶಕ್ತಿಯ ಮಹತ್ವಕ್ಕೆ ಇತಿಹಾಸ ಉದಾಹರಣೆಯೊಂದನ್ನು ನೀಡಿ, ಈ ಲೇಖನವನ್ನು ಮುಗಿಸುತ್ತೇನೆ. ಕಲ್ಕತ್ತಾದಲ್ಲಿ ಮುಸ್ಲಿಂ ಲೀಗ್ ನಡೆಸಿದ ಡೈರೆಕ್ಟ್ ಆಕ್ಷನ್ ಡೇ ಹೆಸರಿನ ಹಿಂಸಾಚಾರ ನಿಮಗೆ ನೆನಪಿರಬೇಕಲ್ಲ. ಕಲ್ಕತ್ತಾದ ಹಿಂದೂಗಳನ್ನು ಓಡಿಸಿ ಅಥವಾ ನಾಮವಾಶೇಷ ಮಾಡಿಯಾದರೂ, ಕಲ್ಕತ್ತಾವನ್ನು ಮುಸ್ಲಿಂ ಬಾಹುಳ್ಯವನ್ನಾಗಿಸಿ ಪಾಕಿಸ್ತಾನಕ್ಕೆ ಸೇರಿಸಬೇಕು ಎನ್ನುವ ಸ್ಕೆಚ್ ಹಾಕಿಕೊಂಡು ಆರಂಭಿಸಿದ ಗಲಭೆಯದು. ಅಂದು ಬಂಗಾಳದ ಪೋಲಿಸರು ಬದಿಗೆ ಸರಿದು ನಿಂತಿದ್ದರು. ಮುಸ್ಲಿಂ ಲೀಗಿನ ಗೂಂಡಾಗಳು ಹಿಂದೂಗಳನ್ನು ಹಾದಿ ಬೀದಿಯಲ್ಲಿ ಕೊಂದಿದ್ದರು. ಆದರೆ ಹಿಂದೂಗಳು, ಮಾಂಸದ ವ್ಯಾಪಾರಿಯಾಗಿದ್ದ ಗೋಪಾಲ್ ‘ಪಾಥ’ ಮುಖರ್ಜಿ ಅವರ ನೇತೃತ್ವದಲ್ಲಿ ಬೀದಿಗಿಳಿದು ಹಿಂದೂಗಳ ರಕ್ಷಣೆಗೆ ನಿಂತು ಮುಸ್ಲಿಂ ಲೀಗಿನವರಿಗೆ ಅವರದೇ ಹಾದಿಯಲ್ಲಿ ಉತ್ತರಿಸಿದಾಗ, ಜಿನ್ನಾನ ಪಡೆ ಕಾಲಿಗೆ ಬುದ್ಧಿ ಹೇಳಿತ್ತು. ಗಲಭೆಕೋರರಿಗೆ ಬೆಂಗಾವಲಾಗಿ ನಿಂತಿದ್ದ ಮುಸ್ಲಿಂ ಲೀಗಿನ ಮುಖ್ಯಮಂತ್ರಿ ಸುಹ್ರಾವರ್ದಿಯೇ, ಗೋಪಾಲ್ ಪಾಥ ತಂಡದ ಪ್ರತೀಕಾರಕ್ಕೆ ಬೆದರಿ, ಗಾಂಧೀಜಿಯನ್ನು ಕರೆತಂದು ಗೋಪಾಲ್ ಮುಖರ್ಜಿಯವರ ತಂಡವನ್ನು ನಿಯಂತ್ರಿಸಿ ಎಂದಿದ್ದ. ಅಲ್ಲಿಯವರೆಗೂ, ಮುಸ್ಲಿಂ ಲೀಗ್ ಗೂಂಡಾಗಳಿಗೆ ಹೆದರಿ ಮನೆಯೊಳಗೆ ಅಡಗಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಡಗುದಾಣದಿಂದ ಹೊರಬಂದು, ಶಸ್ತ್ರಗಳನ್ನು ಪೋಲಿಸರಿಗೊಪ್ಪಿಸಿ ಎಂದು ಗೋಪಾಲ ಪಾಥ ಅವರಿಗೆ ಬುದ್ಧಿ ಹೇಳಲಾರಂಭಿಸಿದರು. ಮುಸ್ಲಿಮರ ಹಿಂಸಾಚಾರಕ್ಕೆ ಚಕಾರ ಎತ್ತದೆ ಹಿಂದೂಗಳಿಗೇ ಮಾತ್ರ ಬೋಧನೆ ಮಾಡುವ ತಮ್ಮ ಎಂದಿನ ಶೈಲಿಯಲ್ಲೇ ಗಾಂಧೀಜಿ ಕೂಡ ಗೋಪಾಲ ಮುಖರ್ಜಿಯವರನ್ನು ಆಗ್ರಹಿಸಿದರು. ಗೋಪಾಲ ಮುಖರ್ಜಿ ಬಿಲುಕುಲ್ ಆಗಲ್ಲ ಎಂದರು. ಬಂಗಾಳದ ಹಿಂದೂಗಳಿಗೂ ಗಾಂಧೀಜಿಯ ನಡೆಕಂಡು ರೋಸಿ ಹೋಗಿತ್ತು. ಪೋಲಿಸ್-ಸೈನ್ಯದ ರಕ್ಷಣೆಯಿದ್ದ ಗಾಂಧೀಜಿಯವರ ಕ್ಯಾಂಪಿನ ಮೇಲೆ ದಾಳಿ ಮಾಡಲು ನಿಂತರು. ಕಡೆಗೆ ಅವರನ್ನು ನಿಯಂತ್ರಿಸಲು ಗೋಪಾಲ್ ಮುಖರ್ಜಿಯವರಿಗೇ ಕರೆ ಹೋಯಿತು. ಯಾವ ಶಸ್ತ್ರಸ್ತ್ರಾಗಳನ್ನು ಪೋಲಿಸರಿಗೊಪ್ಪಿಸಿ ಎಂದು ಒತ್ತಾಯಿಸಲಾಗಿತ್ತೋ, ಅದೇ ಶಸ್ತ್ರ ಹಿಡಿದ ಗೋಪಾಲ ಪಾಥಾ ಮುಖರ್ಜಿಯವರ ಹುಡುಗರು ಗಾಂಧಿಯವರಿಗೆ ರಕ್ಷಣೆ ಒದಗಿಸಿದ್ದರು. ಮುಂದೆ ಗೋಪಾಲ ಪಾಥ ಮುಖರ್ಜಿಯವರು ಯಾವುದೇ ರಾಜಕೀಯ ಪಕ್ಷಕ್ಕೂ ಸೇರದೇ ರಾಜಕೀಯದಿಂದ ದೂರ ಉಳಿದರು. ಇವತ್ತಿಗೆ ಕಲ್ಕತ್ತದಲ್ಲಿ ಹಿಂದೂಗಳು ಬದುಕಿದ್ದು, ಅದಿನ್ನೂ ಭಾರತದ ಭಾಗವಾಗಿ ಉಳಿದಿದ್ದು ಗೋಪಾಲ ಪಾಥ ಮುಖರ್ಜಿಯವರ ತಂಡದಿಂದ ಮಾತ್ರ. ಹಿಂದೂ ತಿರುಗಿ ನಿಂತರೆ ಏನಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಅಂದು ಗೋಪಾಲ್ ಮುಖರ್ಜಿಯವರು ಹಿಂದೂಗಳ ಆತ್ಮರಕ್ಷಣೆಗಾಗಿ ಶಸ್ತ್ರ ಕೈಗೆತ್ತಿಕೊಂಡಿದ್ದರು. ನಾವು ಶಸ್ತ್ರ ಹಿಡಿಯಬೇಕಿಲ್ಲ. ಆತ್ಮ ರಕ್ಷಣೆಯ ಕಲೆಯನ್ನು ಕಲಿತು, ಒಂದು ಗುಂಪಾಗಿ ಅಥವಾ ಹಲವು ಸಣ್ಣ ಸಣ್ಣ ಗುಂಪಾಗಿಯಾದರೂ ಒಗ್ಗಟ್ಟಿನಲ್ಲಿ ನಿಂತು, ಮೂಲಭೂತವಾದಿಗಳಾಗಿ ಸವಾಲೆಸೆದು ನಿಲ್ಲುವುದನ್ನು ಕಲಿಯಬೇಕಿದೆ. ಇಲ್ಲವಾದರೆ, ನಿಮ್ಮ-ನಮ್ಮ ಮಕ್ಕಳ ಭವಿಷ್ಯ ಪಾಕಿಸ್ತಾನ-ಆಪ್ಘಾನಿಸ್ತಾನದ ಮಕ್ಕಳಂತೆಯೇ ಆಗುತ್ತದೆ. ನಿಮ್ಮ ತಲೆಗೆ ನಿಮ್ಮ ಕೈ, ಯೋಚಿಸಿ ನೋಡಿ.

ಚಿತ್ರ ಕೃಪೆ : https://cisindus.org/

1 ಟಿಪ್ಪಣಿ Post a comment
  1. ವಲವಿ
    ಜುಲೈ 14 2022

    ಬಹಳ ಸಮಯೋಚಿತ ಕಣ್ದೆರೆಸುವ ಬರಹ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments