ವಿಷಯದ ವಿವರಗಳಿಗೆ ದಾಟಿರಿ

Posts from the ‘ವಚನ ಸಾರ’ Category

27
ಏಪ್ರಿಲ್

ಮಹಾತ್ಮ ಬಸವಣ್ಣನವರು

 – ಡಾ.ಸಂಗಮೇಶ ಸವದತ್ತಿಮಠ    

(ಕಳೆದ ವರ್ಷ (2019) ನಾನು ಕೆನಡಾ ದೇಶದ ಟೊರೊಂಟೊ ನಗರದಲ್ಲಿ ವೀರಶೈವ ಸಮಾಜ ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಡಿದ ಭಾಷಣದ update ಮಾಡಿದ ಲೇಖನ ಪ್ರಸ್ತುತ ಬಸವಜಯಂತಿ ಸಂದರ್ಭದಲ್ಲಿ ಆಸಕ್ತ ಓದುಗರಿಗಾಗಿ ಇಲ್ಲಿದೆ)  

ಆತ್ಮೀಯ ನಾರ್ತ್ ಅಮೇರಿಕಾ ಟೋರೊಂಟೊ ಚಾಪ್ಟರ್‍ನ ವೀರಶೈವ ಸಮಾಜ ಬಾಂಧವರೆ,

ತಮಗೆಲ್ಲ ಬಸವಜಯಂತಿಯ ಹಾರ್ದಿಕ ಶುಭಾಶಯಗಳು.

ಕನ್ನಡನಾಡಿನ ಸೌಭಾಗ್ಯ ಎಂಬಂತೆ ಬಸವಣ್ಣನವರು ನಮ್ಮ ನಾಡಿನಲ್ಲಿ ಜನ್ಮತಳೆದರು. ಬಸವಣ್ಣನವರ ವ್ಯಕ್ತಿತ್ವ ಅಗಾಧವಾದದು, ಅದ್ಭುತವಾದದ್ದು, ಪರಿಪೂರ್ಣವಾದದ್ದು, ಬಹುಮುಖಿಯಾದದ್ದು. ಅವರನ್ನು ಒಬ್ಬೊಬ್ಬರೂ ಒಂದೊಂದು ದೃಷ್ಟಿಯಿಂದ ನೋಡಿದಾಗ ಅವರವರ ಭಾವದಂತೆ ಅವರು ಗೋಚರಿಸುತ್ತಾರೆ. ಅದೇ ಅವರÀ ವ್ಯಕ್ತಿತ್ವದ ವೈಶಿಷ್ಟ್ಯ.

1.ಒಬ್ಬನೆಂದ – ಬಸವಣ್ಣ ಒಬ್ಬ ರಾಜಕಾರಣಿ. ಹೌದು ಬಿಜ್ಜಳನ ಆಸ್ಥಾನದಲ್ಲಿದ್ದುದರಿಂದ ಅವರು political thinker .

  1. ಒಬ್ಬನೆಂದ – ರಾಜಕಾರಣಿಗಿಂತ ಅವರು ಒಬ್ಬ ಶ್ರೇಷ್ಠ ಅಧಿಕಾರಿ, ಆಡಳಿತಗಾರ. ಹೌದು ಅವರು Prime minister
  2. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ಅಧಿಕಾರಿ ಎನ್ನುವುದಕ್ಕಿಂತ ಅವರೊಬ್ಬ ದಾರ್ಶನಿಕರು. ಹೌದು ಅವರು philosopher. ತತ್ತ್ವಜ್ಞಾನಿ.
  3. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ ಎನ್ನುವುದಕ್ಕಿಂತ ಅವರೊಬ್ಬ ಅಧ್ಯಾತ್ಮಜೀವಿ. ಹೌದು ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು ಅಧ್ಯಾತ್ಮದ ಬೆಳಸು ತೆಗೆದವರು ಬಸವಣ್ಣನವರು.
  4. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ ಎನ್ನುವುದಕ್ಕಿಂತ ಅವರೊಬ್ಬ ಸಮಾಜ ಸುಧಾರಕ. ಹೌದು Social reformer. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಬೇಕಾದುದೆಲ್ಲವನ್ನೂ ಅವರು ಮಾಡಿತೋರಿಸಿದ ಧೀಮಂತ ಸಮಾಜೋದ್ಧಾರಕರು.
  5. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ, ಸಮಾಜ ಸುಧಾರಕ ಎನ್ನುವುದಕ್ಕಿಂತ ಅವರೊಬ್ಬ ಕ್ರಾಂತಿಪುರುಷ. ಹೌದು ತನ್ನ ಕಾಲದಲ್ಲಿ ಇದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಿ ಜನರ ಬದುಕಿನಲ್ಲಿ ಬದಲಾವಣೆಗಳನ್ನು ತಂದವರು.

ಹೀಗೆಯೇ ಜಂಗಮಪ್ರೇಮಿ, ಭಕ್ತಾನುಕಂಪಿ, ಬಾಗಿದ ತಲೆಯ ಮುಗಿದ ಕೈಯ ವಿನಯಶೀಲ, ಸಿಟ್ಟು, ಸೆಡವು, ದ್ವೇಷ, ಅಸೂಯೆ, ಈರ್ಷೆ ಇಲ್ಲದ ಎಲ್ಲರನ್ನೂ ಸಮಾನ ಗೌರವದಿದ ಕಾಣುವವ ಇತ್ಯಾದಿ ಇತ್ಯಾದಿ ಹೇಳುತ್ತಲೇ ಹೋಗಬಹುದು. ಒಂದೊಂದೇ ಮಗ್ಗಲುಗಳನ್ನು ಬಿಡಿಸುತ್ತ ಹೋದಂತೆ ಬಸವಣ್ಣನವರ ಒಟ್ಟು ವ್ಯಕ್ತಿತ್ವದ ಪದರು ಪದರುಗಳು ಬಿಚ್ಚಿಕೊಳ್ಳುತ್ತಲೇ ಹೋಗುತ್ತವೆ. ಎಂತಹ ಅದ್ಭುತ ! ಜಗದ ಅಚ್ಚರಿ ಅಲ್ಲವೆ?

ಮತ್ತಷ್ಟು ಓದು »

7
ಏಪ್ರಿಲ್

ಬುದ್ಧಿಜೀವಿಗಳ ಐಡಿಯಾಲಜಿ ಹಾಗೂ ಭಾರತೀಯ ಸಾಧಕರ ಸಹಜತರ್ಕ

– ವಿನಾಯಕ ಹಂಪಿಹೊಳಿ

“ಕಡಲೆಯು ಬಡವರ ಗೋಡಂಬಿ” ಎಂಬ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಇದರ ಅರ್ಥವೇನು ಎಂಬುದು ಏನೂ ಕಲಿಯದ ಮನುಷ್ಯನಿಗೂ ಬೇಗನೇ ಅರ್ಥವಾಗುತ್ತದೆ. ಈ ಮಾತನ್ನು ನಮ್ಮ ಅಜ್ಜನಿಗೋ, ಅಜ್ಜಿಗೋ ಹೇಳಿ, ಇದರ ಅರ್ಥವೇನು ಎಂದು ಕೇಳಿದರೆ ಅವರು ಏನು ಹೇಳಬಹುದು? “ಗೋಡಂಬಿಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆಯೋ, ಆ ಪ್ರಯೋಜನವನ್ನು ಕಡಲೆಯಿಂದಲೂ ಪಡೆಯಬಹುದು; ಅದೂ ಕೂಡ ಕಡಿಮೆ ಖರ್ಚಿನಲ್ಲಿ.” ಎಂಬ ವಿವರಣೆ ಅವರಿಂದ ಬರಬಹುದು.

ಈಗ ನಾವು ನಮ್ಮ ಹಿರಿಯರ ಬಳಿ, “ಈ ಮಾತಿನಲ್ಲಿ ಬಹಳ ಗಹನ ಅರ್ಥವಿದೆ, ಇದು ಗೋಡಂಬಿಯ ಶ್ರೇಷ್ಠತೆಯನ್ನು ಧಿಕ್ಕರಿಸಿ, ಆಹಾರಗಳೆಲ್ಲವೂ ಸಮಾನ ಎಂಬುದನ್ನು ಸಾರುವ ಅರ್ಥವು ಇದರಲ್ಲಿ ಅಡಗಿದೆ” ಎಂದರೆ ಅವರಿಗೇನು ಅರ್ಥವಾಗಲು ಸಾಧ್ಯ? “ಏನೋಪ್ಪಾ! ಅಷ್ಟೆಲ್ಲ ಗೊತ್ತಿಲ್ಲ” ಎಂದು ನುಣುಚಿಕೊಳ್ಳುತ್ತಾರೆ. ಆಗ ನಮಗೆ “ನಮ್ಮ ಪೂರ್ವಜರಲ್ಲಿ ತಾರ್ಕಿಕ ಸಾಮರ್ಥ್ಯವೇ ಇರಲಿಲ್ಲ. ತರ್ಕಮಾಡಿ ವಿಚಾರಿಸುವ ಬುದ್ಧಿಯೇ ಇಲ್ಲದೇ ಮೌಢ್ಯದಲ್ಲಿ ಇದ್ದರು. ತರ್ಕಬದ್ಧವಾಗಿ ಯೋಚಿಸುವದನ್ನು ನಾವು ರೂಢಿಸಿಕೊಂಡು ಮೌಢ್ಯದಿಂದ ಹೊರಬರಬೇಕು.” ಎಂದೆಲ್ಲ ಭಾವಿಸುತ್ತೇವೆ. ಮತ್ತಷ್ಟು ಓದು »

2
ಜೂನ್

ವಚನ ಸಾರ: 2 (ದಕ್ಕಿದಷ್ಟು)

– ಡಾ. ಸಂತೋಷ್ ಕುಮಾರ್ ಪಿ.ಕೆ

ಉಳ್ಳವರು ಶಿವಾಲಯವ ಮಾಡುವರುವಚನ ಸಾರ - ನಿಲುಮೆ

ನಾನೇನು ಮಾಡಲಿ ಬಡವನಯ್ಯ?

ಎನ್ನ ಕಾಲೇ ಕಂಬ ದೇಹವೆ ದೇಗುಲ

ಶಿರವೇ ಹೊನ್ನ ಕಳಸವಯ್ಯ!

ಕೂಡಲಸಂಗಮ ದೇವ ಕೇಳಯ್ಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ! (ಬಸವಣ್ಣ)

ಬಸವಣ್ಣನವರ ಈ ವಚನವು ತುಂಬಾ ಸುಪ್ರಸಿದ್ಧವಾದುದು, ಪ್ರಾಥಮಿಕ ಶಾಲಾ ತರಗತಿಯಿಂದ ಓದುತ್ತಾ ಬಂದಿರುವುದು ಎಲ್ಲರಿಗೂ ನೆನೆಪಿರಬಹುದು. ಇದಕ್ಕೆ ಸಂಬಂಧಿಸಿದಂತೆ ಎರಡು ರೀತಿಯ ವಿವರಣೆಯನ್ನು ಸಾಮಾನ್ಯವಾಗಿ ನೀಡುತ್ತಾ ಬರಲಾಗುತ್ತಿದೆ. ಮೊದಲನೆಯದಾಗಿ, ಬಸವಣ್ಣ ತೀರಾ ಬಡವರಾಗಿದ್ದರಿಂದ ದೇವಾಲಯವನ್ನು ನಿರ್ಮಿಸುವ ಶಕ್ತಿ ಅವರಿಗಿರಲಿಲ್ಲ, ಆದ್ದರಿಂದ ತಮ್ಮ ಅಸಹಾಯಕತೆಯನ್ನು ವಚನದ ಮೂಲಕ ಹೊರಹಾಕಿದ್ದಾರೆ. ಎರಡನೆಯದಾಗಿ, ಬಸವಣ್ಣ ಮತ್ತು ಇಡೀ ವಚನಕಾರರ ಸಮುದಾಯವು ಮೇಲ್ಜಾತಿಗಳನ್ನು ಹಲವಾರು ಆಯಾಮಗಳಲ್ಲಿ ವಿರೋಧಿಸುತ್ತಿದ್ದರು, ಹಾಗಾಗಿ ಅವರಿಗೆ ಸಂಬಂಧಪಟ್ಟ ದೇವಾಲಯ, ಗ್ರಂಥಗಳು ಹಾಗೂ ಅವರ ಸಂಸ್ಕೃತಿಗಳನ್ನು ವಿರೋಧಿಸಿ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದರು ಎಂಬುದು ಮತ್ತೊಂದು ವಿವರಣೆಯಾಗಿದೆ.

ಮೊದಲನೆಯ ವಿವರಣೆ ಆರ್ಥಿಕ ಚೌಕಟ್ಟಿನಿಂದ ಕೂಡಿದ್ದರೆ, ಎರಡನೆ ವಿವರಣೆ ಒಂದು ರೀತಿಯ ಪೂರ್ವಾಗ್ರಹದಿಂದ ಕೂಡಿದೆ ಎಂದು ಹೇಳಬಹುದು. ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಈ ಎರಡೂ ವಿವರಣೆಗಳು ಅಪ್ಯಾಯಮಾನವಾಗುತ್ತವೆಯೇ ಎಂಬುದನ್ನು ಒಮ್ಮೆ ನೋಡಬೇಕಾಗುತ್ತದೆ. ಬಸವಣ್ಣನವರು ಬಡವರೇ ಆಗಿದ್ದರು ಎಂಬುದನ್ನು ಒಂದು ಕ್ಷಣಕ್ಕೆ ಒಪ್ಪಿಕೊಂಡರೂ ಸಹ, ಅವರೇಕೆ ದೇವಾಲಯವನ್ನು ಕಟ್ಟಲಾಗಲಿಲ್ಲ ಎಂಬ ಅಂಬೋಣವನ್ನು ಹೊರಹಾಕಬೇಕು? ಸೇವಿಸಲು ಆಹಾರ, ಇರಲು ವಸತಿ ಇಲ್ಲ ಎಂದು ಒಂದು ಪಕ್ಷ ಹೇಳಿದ್ದರೆ, ಬಡತನದ ಬೇಯ್ಗೆಯಿಂದ ಹಾಗೆ ಹೇಳುತ್ತಿದ್ದಾರೆ ಎಂದು ಅಂದಾಜಿಸಬಹುದಿತ್ತು. ಆದರೆ ಅಂತಹ ವಿಷಯಗಳನ್ನು ಹೇಳದೆ ದೇವಾಲಯವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿರುವುದು ಮತ್ತೆ ಅದಕ್ಕೆ ಪರ್ಯಾಯವಾಗಿ ತನ್ನ ದೇಹವೇ ಅಂತಹ ರಚನೆಯನ್ನು ಹೊಂದಿದೆ ಎನ್ನುವುದರಲ್ಲಿ ಬಡತನದ ಪ್ರಸ್ತಾಪ ಇಲ್ಲದಿರುವುದು ಗೋಚರಿಸುತ್ತದೆ. ಹಾಗಾದರೆ ಎರಡನೇ ವಿವರಣೆಯಾದರೂ ಇದಕ್ಕೆ ಆಪ್ತವಾಗುತ್ತದೆಯೆ? ಮತ್ತಷ್ಟು ಓದು »

26
ಮೇ

ವಚನ ಸಾರ (ದಕ್ಕಿದಷ್ಟು) : 1

– ಡಾ.ಸಂತೋಷ್ ಕುಮಾರ್ ಪಿ.ಕೆ

ವಚನ ಸಾರ - ನಿಲುಮೆವ್ಯಾಧನೊಂದು ಮೊಲವ ತಂದರೆ,
ಸಲುವ ಹಾಗಕ್ಕೆ ಬಿಲಿವರಯ್ಯ!
ನೆಲನಾಳ್ವನನ ಹೆಣನೆಂದರೆ, ಒಂದಡಿಕೆಗೆ ಕೊಂಬುವರಿಲ್ಲ ನೋಡಯ್ಯ!
ಮೊಲನಿಂದ ಕರಕಷ್ಟ ನರನ ಬಾಳುವೆ. ಸಲೆ ನಂಬೋ ನಮ್ಮ ಕೂಡಲ ಸಂಗಮದೇವನ

ಈ ವಚನವು ಅತ್ಯಂತ ಚಿಕ್ಕದಾಗಿದ್ದರೂ ಸಹ ಆಳವಾದ ಅರ್ಥವನ್ನು ಒಳಗೊಂಡಿದೆ. ಕಟ್ಟುಬಿಚ್ಚಿದ ನಾಯಿಯು ಎಗ್ಗಿಲ್ಲದೆ ಓಡುವಾಗ ಮಧ್ಯದಲ್ಲಿ ಏನೋ ಆಯಿತೆಂಬಂತೆ ನಿಲ್ಲುವ ರೀತಿಯಲ್ಲಿ ಒಮ್ಮೆ ತನ್ನ ಕುರಿತು ನಿಂತು ಆಲೋಚಿಸುವಂತೆ ಈ ವಚನವು ಮಾಡುತ್ತದೆ.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ಜೊತೆಗೆ ಮಾನವನ ಬದುಕೂ ಸಹ ಮಿಳಿತಗೊಂಡಿದೆ. ತಂತ್ರಜ್ಞಾನಕ್ಕೆ ವೇಗಕ್ಕೆ ಮನುಷ್ಯನು ಹೊಂದಿಕೊಳ್ಳುವ ಭರದಲ್ಲಿ ತನ್ನನ್ನು ಮತ್ತು ತನ್ನೊಂದಿಗಿರುವ ಸಮಾಜವನ್ನು ಅರಿತುಕೊಳ್ಳುವ ಸಂಮಯ ಇಂದು ಮಾಯವಾಗುತ್ತಿದೆ. ವಿಶ್ವ ಮಟ್ಟದಲ್ಲಿ ಮನುಷ್ಯ ಏನೇನನ್ನೋ ಕಂಡುಹಿಡಿದು, ತಾನೇ ಶ್ರೇಷ್ಠ ಎಂಬ ಹಮ್ಮು ಬಿಮ್ಮುಗಳೊಂದಿಗೆ ಮೆರೆಯುತ್ತಿದ್ದಾನೆ. ಆದರೆ ಅಂತಹ ಪರಿಸ್ಥಿತಿ ತಾತ್ಕಾಲಿಕ ಮಾತ್ರ ಎಂಬುದು ಮಾತ್ರ ಅವನ/ಳ ಸ್ಮತಿಪಟಲದಿಂದ ಹೊರಹೋಗಿರುತ್ತದೆ. ವೇಗವಾಗಿ ಚಲಿಸುತ್ತಿರುವ ಮನುಷ್ಯರೇ ಒಂದು ತಾಸು ನಿಂತು ನಿಮ್ಮ ಬಗ್ಗೆ ಆಲೋಚಿಸಿ ಎಂದು ಹೇಳುವ ಕಾರ್ಯವನ್ನು ಮೇಲಿನ ವಚನವು ಒಂದು ಉಪಮಾನವನ್ನು ಬಳಸಿಕೊಂಡು ಮಾಡುತ್ತದೆ. ಮತ್ತಷ್ಟು ಓದು »