ವಿಷಯದ ವಿವರಗಳಿಗೆ ದಾಟಿರಿ

Posts from the ‘ಕವನಗಳು’ Category

4
ಜನ

“ಹುಟ್ಟು”…

– ‘ಶ್ರೀ’ ತಲಗೇರಿ

ನರಗಳಲ್ಲಿ ತುಂಬಿ ಹರಿವ
ರಕ್ತಕ್ಕೆ ಅದೆಂಥ ವಾಸನೆಯೋ..
ಮತ್ತೆ ಮತ್ತೆ ಕೆಂಪಾಗುತ್
ಕಪ್ಪಾಗಿ ಹೆಪ್ಪಾಗುತ್ತದೆ
ಆಸೆಗಳ ತೆಕ್ಕೆಯಲ್ಲಿ.. ಮತ್ತಷ್ಟು ಓದು »

7
ಡಿಸೆ

“ಅನ್ವೇಷಣೆ..!”

– ಭಾಸ್ಕರ ಭೀಮರಾವ್ ಖಾಂಡ್ಕೆ
ಸಾಗರ

3d14802ಬಹುಶಃ ಜೀವನವೇ ಹೀಗೆ, ಯಾವುದೋ ಸಮಸ್ಯೆ ಯಾವುದಕ್ಕೋ ಪರಿಹಾರ, ಯಾವುದೋ ಪ್ರಶ್ನೆ ಯಾವುದಕ್ಕೋ ಉತ್ತರವಾಗಿ ಬಿಡುತ್ತದೆ

ಇಂದು ಏಕಾಂತದ ಮಿತ್ರನೊಂದಿಗೆ ಸಂಭಾಷಣೆ ನಡೆಸುವ ಅವಕಾಶ ಸಿಕ್ಕಿಬಿಟ್ಟಿತು. ಮಾತಿಗೆ ಮಾತು ಬೆಳೆಯುತ್ತಾ ನನ್ನೊಳಗೆ ಶೂನ್ಯ ತುಂಬಿದ ಭಾವನೆ…ಛಲಬಿಡದ ತಿವಿಕ್ರಮನಂತೆ ಶೂನ್ಯದೊಂದಿಗೆ ಸೆಣಸಾಡುತ್ತಾ ನನ್ನೊಳಗೆ ಅಡಗಿರಬಹುದಾದ ಸತ್ಯದ ಅನ್ವೇಷಣೆಯ ಪ್ರಯತ್ನದ ಫಲವೇ ಈ ಸಾಹಿತ್ಯ , ಬಹುಶಃ ಇದು ಸಾಹಿತ್ಯವಲ್ಲಾ ನಮ್ಮೆಲ್ಲರೊಳಗೆ ಹುದುಗಿರುವ ಆದ್ಯಾತ್ಮದ ಒಂದು ಸಣ್ಣ ಹನಿ… ಮತ್ತಷ್ಟು ಓದು »

7
ಡಿಸೆ

ಗುಂಗು..!

– ಡಾ.ಸುದರ್ಶನ ಗುರುರಾಜರಾವ್

Rodin's The Thinker at Sunset 9752ಗುಂಗಿನ ಹಂಗದು ನಿನಗಿರೆ ಗೆಳೆಯ
ಬೇಸರವಿಲ್ಲದೆ ಕಳೆವುದು ಸಮಯ
ಜೀವನಕೊಂದು ಸಿಗುವುದು ಧ್ಯೇಯ
ಬದುಕಿದ ಬಾಳಿಗೆ ದೊರೆವುದು ನ್ಯಾಯ

ಪಿತೃ ವಾಕ್ಯವೆ ರಾಮನ ಗುಂಗು
ಭ್ರಾತೃ ಪ್ರೇಮವೆ ಭರತನ ಗುಂಗು
ಸೀತಾಪತಿ ಜಪ ಮಾರುತಿ ಗುಂಗು ಮತ್ತಷ್ಟು ಓದು »

29
ನವೆಂ

ಸಾಲದ ಮನೆಯೊಡೆಯ ಅಪ್ಪ..!

– ಸೋಮು ಕುದರಿಹಾಳ

indian-farmer-copyಬಡತನ ಉಂಡುಳಿದ ಬದುಕು
ವಂಶವಾಹಿನಿಯ ಕೊಂಡಿ
ಸಾಲದೆಂಬುದಕ್ಕೆ ಸಾಲದ ನಂಟು
ಗುಡಿಸಲಿನಲ್ಲಿ ಆರದ ಬೆಂಕಿ

ಬರೆದ ಗೆರೆಗಳೆಲ್ಲಾ ಸಾಲದ ಲೆಕ್ಕಕ್ಕೆ
ಸಮನಾಗಿ ಬಡ್ಡಿಗೆ ಹೆಚ್ಚುತ್ತಿದ್ದದ್ದು
ಬಿದಿರ ತಡಿಕೆಗೆ ಮೆತ್ತಿದ ಮಣ್ಣನ್ನು
ಬಲಪಡಿಸುತ್ತಿತ್ತು
ಕಣ್ಣೀರ ಕರಗಿಸಿಕೊಳತ್ತಿತ್ತು

ವಸೂಲಿಯ ಶೂಲಕೊಮ್ಮೆ ಅಪ್ಪ
ಕೆಮ್ಮುತ್ತಿದ್ದ ಉಸಿರಿನೊಡನೆ ಸ್ಪರ್ಧೆ
ಮತ್ತೆ ಬದುಕುತ್ತಿದ್ದ ಭೂಮಿ ತಾಯಿಗೆ
ತಲೆಯಿಟ್ಟು ಬೆವರಿನ ದಕ್ಷಿಣೆ ಕೊಟ್ಟು ಮತ್ತಷ್ಟು ಓದು »

26
ನವೆಂ

“ಮನುಷ್ಯರು”…

– ‘ಶ್ರೀ’ ತಲಗೇರಿ

man-in-darkಕಂಕುಳ ಬಿಸಿಯಲ್ಲಿ
ಸಿಕ್ಕಿಸಿಕೊಂಡ ಹೂವಿಗಿಂತ
ಆಚೆಮನೆಯ ಬೇಲಿ ಸಂಧಿಯಲಿ
ಬೀಡುಬಿಟ್ಟ ಮೊಗ್ಗು
ತಡವುತ್ತದೆ ರೋಮಗಳ ಹೆಚ್ಚೆಚ್ಚು..
ಆಗಲೂ ಮನುಷ್ಯರು ನಾವು… ಮತ್ತಷ್ಟು ಓದು »

7
ಆಕ್ಟೋ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫

ಶ್ರೀಧರಭಾಮಿನಿಧಾರೆ ೬-೧೦

ಶ್ರೀಧರಭಾಮಿನಿಧಾರೆ ೧೧-೧೫

ಶ್ರೀಧರಭಾಮಿನಿಧಾರೆ ೧೬-೨೦

ಶ್ರೀಧರಭಾಮಿನಿಧಾರೆ ೨೧-೨೫

shreedhar_swami21)
ಒಂದು ವರ್ಷದ ಮೇಲೆ ವರ್ಷವು
ಸಂಧಿತಾಗಲೆ ನೋಡುನೋಡುತ
ಬಂದೆ ಬಿಟ್ಟಿತು ತಾಯಿಯಗಲುವ ಕಾಲ ಸಿರಿಧರಗೇ||
ಬಂಧು ಇರುವುದು ತಾಯಿ ಮಾತ್ರವೆ
ಚೆಂದದಿಂ ಸೇವೆಯನು ಮಾಡುತ
ದುಂದುಭಿ ಎಂಬ ನಾಮದಲ್ಲಿಯ ವರುಷ ಬಂದಿಹುದೂ||

ತಾತ್ಪರ್ಯ : ವರುಷಗಳು ಉರುಳುತ್ತಿರಲು, ಅನಾರೋಗ್ಯದಿಂದ ತಾಯಿಯ ಅನಾಸಕ್ತಿಯೂ ಹೆಚ್ಚುತ್ತಲೇ ಹೋಯಿತು. ಜೀವನದಲ್ಲಿ ಯಾವ ಸ್ವಾರಸ್ಯವೂ ಇಲ್ಲದೇ ಅನಾಸಕ್ತರಾದ ತಾಯಿಯನ್ನು, ಶ್ರೀಧರರು ಅಪಾರ ಮಾತೃಭಕ್ತಿಯಿಂದ ಸೇವೆಗೈಯ ತೊಡಗಿದರು. ಹೀಗಿರುವಾಗ ಸನ್ 1921 ನೇ ವರ್ಷದಲ್ಲಿ ದುಂದುಭಿ ನಾಮ ಸಂವತ್ಸರವು ಬಂದಿತು. ದುಂದುಭಿ ಸಂವತ್ಸರದ ಮಾರ್ಗಶಿರ ಮಾಸದ ತಿಂಗಳಲ್ಲಿ ಮಂಗಳವಾರ ಬಂದಿತು. ಮತ್ತಷ್ಟು ಓದು »

1
ಆಕ್ಟೋ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦
ಶ್ರೀಧರಭಾಮಿನಿಧಾರೆ ೧೧-೧೫

ಶ್ರೀಧರಭಾಮಿನಿಧಾರೆ ೧೬-೨೦

shreedhar_swami16)
ಶಾಂತಿ ಸಾಗರನಾದ ಸಿರಿಧರ
ಕಾಂತಿಯದು ವೃದ್ಧಿಸುವ ತೆರದಿ
ಸಂತಸಾಧುಗಳಿಂದ ಕಲಿಯುವ ಹಲವು ವಿಷಯಗಳಾ||
ಶಾಂತಮೂರುತಿ ರಾಮದೇವನ
ಚಿಂತೆ ಇಲ್ಲದ ಮನದಿ ನೆನೆಯುತ
ಸಂತಸದಲೀ ಕಾಲ ಕಳೆಯುತಲಿರುವ ಪುರದಲ್ಲೀ||

ತಾತ್ಪರ್ಯ : ಸದಾ ಶಾಂತಿಭಾವವನ್ನೇ ಹೊಂದಿದ ಶ್ರೀಧರರು, ತಮ್ಮ ತೇಜಸ್ಸು ವೃದ್ಧಿಯಾಗುವಂತೆ, ಸಾಧು ಸಂತರ, ಸಜ್ಜನರ ಜೊತೆಗೆ ಮಾತಾಡುತ್ತಾ ಹಲವಾರು ಆಧ್ಯಾತ್ಮಿಕ ವಿಷಯಗಳನ್ನು ತಿಳಿದುಕೊಳ್ಳುತ್ತಾ ಇದ್ದರು. ಸದಾ ನಿಶ್ಚಿಂತ ಮನೋಭಾವನೆಯಲ್ಲಿ ರಾಮನಾಮವ ಜಪಿಸುತ್ತಾ ಸಂತಸದಲ್ಲಿ ಕಾಲಕಳೆಯುತ್ತಿರುವ ಇವರನ್ನು ನೋಡುವುದೇ ಸುತ್ತಲಿನ ಜನರಿಗೆ ಒಂದು ಸೊಗಸಾಗಿತ್ತು. ಮತ್ತಷ್ಟು ಓದು »

22
ಸೆಪ್ಟೆಂ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦

ಶ್ರೀಧರಭಾಮಿನಿಧಾರೆ ೧೧-೧೫

shreedhar_swami11)
ತಾಯ ದುಃಖವ ಮರೆಸಲಿಕೆ ತಾ
ಜೀಯ ಸಿರಿಧರ ಮರುಳು ಮಾಡುವ
ರಾಯರಳಿದಾ ದುಃಖಮರೆಸಲು ಆಡಿ ನಲಿಸುವನೂ||
ಆಯುಕಳೆಯೇ ಸಕಲರಿಂಗು ವಿ-
ಧಾಯ ಮರಣವು ಖಚಿತವಯ್ಯಾ
ಒಯ್ಯುವನು ಆ ನಿಯಮಪಾಲಕ ಯಮನು ಎಲ್ಲರನೂ||

ತಾತ್ಪರ್ಯ : ಶ್ರೀಧರರು ತಾಯಿಗೆ ಪತಿವಿಯೋಗದ ಸ್ಮರಣೆಯಿಂದ ಅಥವಾ ಇನ್ಯಾವುದೇ ಕಾರಣದಿಂದ ವಿಷಾದ ಭಾವ ಮೂಡಿದಾಗಲೆಲ್ಲ ತನ್ನ ನಾನಾ ವಿಧದ ಬಾಲಲೀಲೆಗಳಿಂದ ಸಮಾಧಾನಗೊಳಿಸುತ್ತಿದ್ದರು. ನಿಯಮಪಾಲಕ ಯಮಧರ್ಮರಾಜನ ಎದುರು ಮಾನವಮಾತ್ರರು ಏನು ತಾನೇ ಮಾಡಲು ಸಾಧ್ಯ. ಆಯಸ್ಸು ಕಳೆದಿರುವ ಎಲ್ಲ ಜೀವಜಂತುಗಳನ್ನೂ ಅವನು ಕರೆದೊಯ್ಯುತ್ತಾನೆ. ಮತ್ತಷ್ಟು ಓದು »

15
ಸೆಪ್ಟೆಂ

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦

shreedhar_swami6)
ವೆಂಕಟಾಚಲ ಗಿರಿಯ ಅಧಿಪತಿ
ವೆಂಕಟೇಶನು ಕುಲದ ದೈವನು
ಸುಂಕಸಂಗ್ರಹ ಮಾಡುವಂತಹ ವಂಶ ಇವರದ್ದೂ||
ಸಂಕ ಇಹಕೂ ಪರಕು ಬೆಸೆಯುವ
ಸಂಕಟವ ಬಹುದೂರ ಸರಿಸುವ
ಪಂಕಜಾತ್ಮನು ಕರುಣೆ ತೋರಿಹ ವಂಶ ಇವರದ್ದೂ||

ತಾತ್ಪರ್ಯ : ಸಪ್ತಗಿರಿವಾಸ ಶ್ರೀನಿವಾಸನು ಇವರ ಕುಲದೇವರಾಗಿದ್ದಾನೆ. ಈ ‘ಪತಕಿ’ ಎಂಬ ಶಬ್ಧವು ‘ಫಸಕೀ’ ಎಂಬ ಶಬ್ದದ ಅಪಭ್ರಂಶವಾಗಿದ್ದು, ಸುಂಕವಸೂಲಿ ಮಾಡುವ ಅಧಿಕಾರಿಗೆ ಈ ಹೆಸರು ಹೇಳುವ ವಾಡಿಕೆ ಇತ್ತು. ಈ ವಂಶದಲ್ಲಿ ಹಿಂದೆ ಯಾರೋ ಸುಂಕವಸೂಲಿ ಮಾಡುವ ಅಧಿಕಾರದಲ್ಲಿ ಇದ್ದುದರಿಂದ ಈ ಮನೆತನಕ್ಕೆ ಪತಕಿ ಎಂಬ ಹೆಸರು ಬಂತು. ಬಹಳ ಧರ್ಮಿಷ್ಟರಾದ ಇವರ ವಂಶದ ಮೇಲೆ, ಸಂಕಟನಾಶಕ, ಇಹ-ಪರಗಳ ಸೇತುವೆಯಾದ ವೆಂಕಟೇಶ್ವರನ ಪೂರ್ಣಾನುಗ್ರಹ ಇತ್ತು. ಮತ್ತಷ್ಟು ಓದು »

25
ಆಗಸ್ಟ್

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

– ಗುರುಪ್ರಸಾದ್ ಕೆ ಕೆ.
ಶ್ರೀಧರಭಾಮಿನಿಧಾರೆ ೧-೫

1)
ಮನೆಯ ದೇವರು ಹರಿಯ ನೆನೆಯುತ
ಮನದ ದೇವರು ಗುರುವರರ ನಾ
ಅನುಮತಿಯ ಬೇಡುತ ಪ್ರಾರಂಭಿಸುವೆ ಕಾವ್ಯವನೂ||
ತನುವು ಕೇವಲ ನಿಮ್ಮ ಆಣತಿ
ಯನೂ ನಡೆಸುವ ಪಾದಸೇವಕ
ಅನುದಿನವು ಭಜಿಸುವೆ ನಿಮ್ಮನು ಹರಸಿ ಭಕ್ತನನೂ||

ತಾತ್ಪರ್ಯ : ನನ್ನ ಮನೆದೇವರಾದ ವೆಂಕಟರಮಣನನ್ನು ಮನದಲ್ಲಿ ಧ್ಯಾನಿಸಿ, ಮನದ ದೇವರಾದ ಗುರು ಶ್ರೀಧರ ಸ್ವಾಮಿಗಳಲ್ಲಿ ಅನುಮತಿಯನ್ನು ಬೇಡುತ್ತಾ, ಬರೆಯಲು ಹೊರಟಿರುವ ಕಾವ್ಯರತ್ನಕ್ಕೆ ಯಶ ಸಿಗಲೆಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಈ ದೇಹವು ನಿಮ್ಮ ಆಜ್ಞೆಯನ್ನು ಪರಿಪಾಲಿಸುವ ಪಾದ ಸೇವಕ ಮಾತ್ರವೇ ಆಗಿದೆ. ಪ್ರತಿದಿನ, ಪ್ರತಿಕ್ಷಣವೂ ನಿಮ್ಮ ಗುಣಗಾನ ಮಾಡುತ್ತಾ ಇರುವಂತಾಗಲೆಂದು ನೀವು ನನಗೆ ಆಶೀರ್ವದಿಸಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಮತ್ತಷ್ಟು ಓದು »