ವಿಷಯದ ವಿವರಗಳಿಗೆ ದಾಟಿರಿ

Posts from the ‘ನಿಲುಮೆ ಪ್ರಕಾಶನ’ Category

21
ಜುಲೈ

ನಮ್ಮೂರ ಹಬ್ಬ:- ಕಂಬಳ

ಶ್ರೀಮತಿ. ಶೈನಾ ಶ್ರೀನಿವಾಸ ಶೆಟ್ಟಿ.
ಕುಂದಾಪುರ

ದೂರ ತೀರದ ಕಡಲ ಕಿನಾರೆಯಲ್ಲಿ ಭೋರ್ಗರೆವ ಅಲೆಗಳ ಅಬ್ಬರದಲ್ಲಿ, ತಣ್ಣನೆ ಬೀಸುವ ತಂಗಾಳಿಯಲಿ, ಸುಡುಬಿಸಿಲ ನಡುನಡುವೆ ತಂಪೆರೆವ ಸೋನೆ ಮಳೆ, ಉದ್ದನೆಯ ರಸ್ತೆಯ ಇಕ್ಕೆಲೆಗಳಲಿ ಕಂಗೊಳಿಸುವ ಹಸಿರ ಸಿರಿ, ಹಸಿರು ಸೀರೆ ಉಟ್ಟ ನಾರಿಯಂತೆ ತಳುಕು ಬಳುಕಿನ ವ್ಯಯ್ಯಾರದಲಿ ತನು ಮನಕ್ಕೆ ತಂಪೆರೆವ ನನ್ನೂರು… ಆಹಾ ಹೌದು! ಅದುವೇ ನನ್ನೂರು ಕರಾವಳಿ ಕುಂದಾಪುರ.

ಕಂಬಳವೆಂಬ ನನ್ನೂರ ಹಬ್ಬ :
ನನ್ನೂರು ಹಬ್ಬಗಳ ನಾಡು, ಸಂಪ್ರದಾಯದ ಬೀಡು. ತನ್ನದೇ ಸೊಗಡು ತನ್ನದೇ ಆಚರಣೆಯ ಚೌಕ್ಕಟ್ಟಿನಲ್ಲಿ ನೂರಾರು ಹಬ್ಬ, ಸಾವಿರಾರು ವೈವಿಧ್ಯತೆ, ಲಕ್ಷಾಂತರ ಮನದಲ್ಲಿ ನೆಲೆ ನಿಲ್ಲುವ, ಕೋಟ್ಯಾಂತರ ವರ್ಷದ ಇತಿಹಾಸದ ಈ ಕರಾವಳಿಯನ್ನು “ಪರಶುರಾಮ ಸೃಷ್ಠಿ”ಯೆಂದು ಉಲ್ಲೇಖಿಸಲಾಗಿದೆ. ಮತ್ತಷ್ಟು ಓದು »

20
ಜುಲೈ

ನಮ್ಮೂರ ಹಬ್ಬ:- ನಮ್ಮೂರ ತೇರು

– ಸುರೇಖಾ ಭೀಮಗುಳಿ

ಪ್ರತಿ ವರ್ಷ ಮೇ ತಿಂಗಳಲ್ಲಿ ಬೊಮ್ಮಲಾಪುರದಲ್ಲಿ ತ್ರಿಪುರಾಂತಕಿ ಅಮ್ಮನವರ ರಥೋತ್ಸವ! ಅದೊಂದು ಮಧುರ ನೆನಪು… ನೆನಪು ಮಾತ್ರದಿಂದಲೇ ಮನಸ್ಸು ತೇರುಪೇಟೆಯಲ್ಲಿ ಕಳೆದು ಹೋಗುತ್ತದೆ… ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಬೊಮ್ಲಾಪುರದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿದ್ದ ಕಮ್ಮಕ್ಕಿ ನನ್ನ ತವರೂರು. ಸುತ್ತಮುತ್ತಲ ಊರಿಗೆಲ್ಲ ಬೊಮ್ಲಾಪುರ ತ್ರಿಪುರಾಂತಕಿ ಅಮ್ಮನವರ ರಥೋತ್ಸವ ಎಂದರೆ ಸಾಮೂಹಿಕ ಹಬ್ಬ. ಊರಿಂದ ಹೊರಬಂದು ಬೆಂಗಳೂರಲ್ಲಿ ನೆಲೆಗೊಂಡ ನಾವು ಮಕ್ಕಳ ಹುಟ್ಟುಹಬ್ಬ ದಿನ ಪೂಜೆಗೆ ಕಿರುಕಾಣಿಕೆ ಸಲ್ಲಿಸಿದ್ದೇವೆ. ನಾವು ಮರೆತರೂ ಆ ದೇವಸ್ಥಾನದಿಂದ ಪ್ರಸಾದ ಬರುತ್ತದೆ. ವರ್ಷದ ರಥೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬರುತ್ತದೆ… ಮತ್ತಷ್ಟು ಓದು »

19
ಜುಲೈ

ನಮ್ಮೂರ ಹಬ್ಬ – ಕೆಡ್ಡಸ (ಭೂಮಿ ಋತುಮತಿಯಾಗುವುದು)

– ಭರತೇಶ ಅಲಸಂಡೆಮಜಲು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ

ತುಳುನಾಡು ಅಂದ ಕೂಡಲೇ ಅಲ್ಲಿನ ಆಚರಣೆ, ಕ್ರಮ, ನಿಲುವುಗಳಲ್ಲಿ ಒಂದಷ್ಟು ಬಿನ್ನ ವಿಶೇಷತೆಯಿಂದಲೇ ಕೂಡಿರುತ್ತದೆ. ಇಲ್ಲಿ ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ವಾಡಿಕೆ. ಹೌದು, ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ ಹಿಂದಿನಿಂದಲೂ ಅಕ್ಕನೇ ಮನೆಯೊಡತಿ, ಆಳಿಯಕಟ್ಟು ಪದ್ಧತಿಯೇ ಇದಕ್ಕೆ ಮೊಹರು… ಹೌದು ಅದುದರಿಂದಲೇ ಇಲ್ಲಿ ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ ಮಾನುಷಿಕವಾಗಿ ಸಾಮಾನ್ಯ ಸ್ತ್ರಿಯಲ್ಲಾಗುವ ಪ್ರಕೃತಿ ಸಹಜ ಬದಲಾವಣೆಯನ್ನು ಭೂತಾಯಿಯಲ್ಲಿ ಸಂಭೂತ ಮಿಲಿತವಾಗಿಸಿ ಅವಳನ್ನು ದೇವಿಯೆಂದು ಅರಾಧಿಸುವುದು, ಅವಳ ಮೊದಲ ಋತುಸ್ರಾವವನ್ನು ಸಂಭ್ರಮಿಸುವುದು, ಹೇಗೆ ಮನೆ ಹುಡುಗಿ ದೊಡ್ಡವಳಾದಳೆಂದು ಮನೆಯವರೆಲ್ಲಾ ಸಂಭ್ರಮಿಸುತ್ತಾರೋ, ಮದಿಮಾಲ್ ಮದಿಮೆ ಮಾಡಿ ಊರವರನ್ನೆಲ್ಲಾ ಕರೆದು ಪುಟ್ಟ ಮಗಳಿಗೆ ಸೀರೆ ಉಡಿಸಿ ಮದುವೆ ಮಾಡುತ್ತರೋ… ಮತ್ತಷ್ಟು ಓದು »

17
ಜುಲೈ

ನಮ್ಮೂರ ಹಬ್ಬ- ನುಡಿ ಮತ್ತು ಭೇಟಿ

– ಪ್ರಮೋದ್ ಜತ್ಕರ

ಸಾಂದರ್ಭಿಕ ಚಿತ್ರ

ನನ್ನದು ಗುಮ್ಮಟ ನಗರಿ ವಿಜಯಪುರ. ತನ್ನದೇ ಆದ ಕಲಾ ಸ್ವಂತಿಕೆ ಹೊಂದಿರುವಂತಹದ್ದು. ಇಲ್ಲಿ ತಾಲುಕಿಗೊಂದು ಭಾಷೆ, ವಲಯಕ್ಕೊಂದು ಆಚರಣೆ, ಊರಿಗೊಂದು ದೈವ.. ಹೀಗೆ ವೈಶಿಷ್ಟ್ಯವಾದದ್ದು. ಇದು ಕೇವಲ ನಮ್ಮ ಜಿಲ್ಲೆಯ ವೈಶಿಷ್ಟ್ಯವಲ್ಲ ಇಡೀ ಭಾರತದ ವೈಶಿಷ್ಟ್ಯ, ಅದಕ್ಕೆಂದೇ ನಾವು ವಿವಿಧತೆಯನ್ನು ಪ್ರದರ್ಶಿಸುವವರು… (ಏಕತೆ ಎಂದು ಹೇಳಲಾರೆ!).

ನನ್ನೂರು ವಿಜಯಪುರದ ಇಂಡಿ ತಾಲ್ಲೂಕಿನ ಚಡಚಣ ವಲಯದಲ್ಲಿ ಬರುತ್ತದೆ. ನನ್ನೂರು ಒಂದು ಚಿಕ್ಕ ಹಳ್ಳಿ, ನಿವರಗಿ ಅಂತ ಅದರ ಹೆಸರು, ಭೀಮೆಯ ತಂಪಿನಲ್ಲಿ ಬೆಳೆದ ಊರು. ಅವಳೇ ನಮಗೆ ದೈವಗಳ ದೈವ.. ಭೀಮೆ ದಾಟಿದರೆ ಮಹಾರಾಷ್ಟ್ರ. ನಮ್ಮ ಸಂಪ್ರದಾಯಗಳು ಸಾಮಾನ್ಯವಾಗಿ ಮಹಾರಾಷ್ಟ್ರದ ಸಂಪ್ರದಾಯಗಳಿಗೆ ಹೋಲುತ್ತವೆ.

ನಮ್ಮಲ್ಲಿನ ಪ್ರಮುಖ ಸಂಪ್ರದಾಯಗಳಲ್ಲಿ “ನುಡಿ” ಮತ್ತು “ಭೇಟಿ” ಎಂಬ ಎರಡು ಸಂಪ್ರದಾಯಗಳು ಬಹು ಮುಖ್ಯವಾದವು. ಮತ್ತಷ್ಟು ಓದು »

13
ಜುಲೈ

ನಮ್ಮೂರ ಹಬ್ಬ – ಋಷ್ಯಶೃಂಗೇಶ್ವರನ ರಥೋತ್ಸವ

– ಅಪರ್ಣ ಜಿ. ಸಿರಿಮನೆ

ಹಬ್ಬಗಳು ಸಾಮಾಜಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ಪಾರಂಪರಿಕವಾಗಿ ನಡೆದುಕೊಂಡು ಬರುವ ಊರ ಹಬ್ಬಗಳು ಸಾಮಾಜಿಕ ಒಗ್ಗಟ್ಟನ್ನು ಪ್ರತಿನಿಧಿಸುವುದರಲ್ಲಿ ಎರಡು ಮಾತಿಲ್ಲ. ಮಲೆನಾಡಿನ ದಟ್ಟ ಹಸಿರಿನ ನಡುವೆ ರಮಣೀಯತೆಯನ್ನೇ ಹಾಸಿ ಹೊದ್ದಿರುವ ಒಂದು ಪುಟ್ಟ ಗ್ರಾಮ ‘ಕಿಗ್ಗಾ’ ನಮ್ಮೂರು. ಪ್ರಾಕೃತಿಕ ಸೌಂದರ್ಯದಿಂದಲೇ ಜನರನ್ನು ತನ್ನೆಡೆಗೆ ಸೆಳೆಯುವ ನಮ್ಮೂರು ಮಳೆದೇವರೆಂದೇ ಹೆಸರಾಗಿರುವ ಋಷ್ಯಶೃಂಗೇಶ್ವರ ನೆಲೆಸಿರುವ ಪುಣ್ಯಕ್ಷೇತ್ರ. ಪ್ರತಿವರ್ಷವೂ ನಡೆಯುವ ಋಷ್ಯಶೃಂಗೇಶ್ವರನ ರಥೋತ್ಸವ ನಮ್ಮೂರಿನ ಪ್ರಮುಖ ಹಬ್ಬ. ಮತ್ತಷ್ಟು ಓದು »

12
ಜುಲೈ

ನಮ್ಮೂರ ಹಬ್ಬ – ಹೊಸ ಹುರುಪಿನ ಹೊಸ್ತು

– ಸ್ವಾತಿ ಶೆಟ್ಟಿ

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ
ಎದ್ದೊಂದುಗಳಿಗೆ ನೆನೆದೇನು…

ಮೋಡ ಮಳೆಗೆ ಮೂಲ, ಮಕ್ಕಳಿಗೆ ತಾಯಿ ಮೂಲ, ಬೆಳಕಿಗೆ ಸೂರ್ಯ ಮೂಲ, ಭೂಮಿತಾಯಿ ಬೆಳೆಗೆ ಮೂಲ. ಹೌದು, ನಮ್ಮದು ಕೃಷಿ ಪ್ರದಾನವಾದ ವ್ಯವಸ್ಥೆ ರೈತರಿಗೆ ಅನ್ನ ನೀಡುವ ಭೂಮಿ ತಾಯಿ ಹಾಗೂ ಕೃಷಿಯೊಂದಿಗೆ ಅವಿನಾಭಾವ ಸಂಭಂದವಿದೆ. ಭೂಮಿಯನ್ನು ಹಾಗೂ ಕೃಷಿಯನ್ನು ಈ ಹಿನ್ನೆಲೆಯಲ್ಲಿ ಪೂಜ್ಯ ಭಾವನೆಯಿಂದ ಆರಾಧಿಸಿಕೊಂಡು ಬಂದಿದ್ದೇವೆ. ನಮ್ಮ ಕರಾವಳಿಯ ಹೆಚ್ಚಿನ ಎಲ್ಲಾ ಆಚರಣೆಗಳು ಕೃಷಿ ಸಂಬಂಧಿತವಾದ ಆಚರಣೆಗಳಾಗಿ ರೂಢಿಯಲ್ಲಿದೆ. ಮತ್ತಷ್ಟು ಓದು »

11
ಜುಲೈ

ನಮ್ಮೂರ ಹಬ್ಬ ( ಮೈಸೂರು )

– ವಿಜಯ ನಂಜುಂಡಯ್ಯ

ಭಾರತೀಯರಿಗೆ ಹಬ್ಬ, ಹರಿದಿನಗಳು ಹೊಸದೇನೂ ಅಲ್ಲ. ಹಬ್ಬಗಳು ಹೆಸರೇ ಸೂಚಿಸುವಂತೆ, ಸಂತೋಷ, ಸಡಗರದ ಸಂಕೇತ ವಾಗಿದೆ. ಈ ಹಬ್ಬ, ಸಂತೋಷವನ್ನುಂಟು ಮಾಡುತ್ತದೆ ಎಂದರೆ ನೀವೇ ನೋಡಿ.

ಕೆಲವು ವಸ್ತುಗಳೂ, ವಿಷಯಗಳೂ ಮನಸ್ಸಿಗೆ ಹತ್ತಿರವಾಗಿ ಖುಷಿ ತಂದರೆ,,ಸೌಂದರ್ಯ, ಶೃಂಗಾರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.ಹಾಗೇ ಇಂಪಾದ, ತಂಪಾದ ಪ್ರೀತಿಯ ಮಾತುಗಳು, ಮಧುರವಾದ ಸ್ವರ, ಸಂಗೀತಗಳು ಕಿವಿಗೆ ಹಬ್ಬವನ್ನುಂಟು ಮಾಡುವುದರಲ್ಲಿ ಆಶ್ಚರ್ಯವಿಲ್ಲ. ರುಚಿ, ರುಚಿಯಾದ ತಿಂಡಿ ತೀರ್ಥಗಳು ಬಾಯಿಗೆ ಹಬ್ಬವನ್ನುಂಟು  ಮಾಡುತ್ತದೆ.. ಮತ್ತಷ್ಟು ಓದು »

10
ಜುಲೈ

ನಮ್ಮೂರ ಹಬ್ಬ.. ( ಶ್ರೀ ರಂಗನಾಥ ಸ್ವಾಮಿಯ ರಥೋತ್ಸವ )

ಯೋಗಾನಂದಾರಾಧ್ಯ
ನೇರಲವಾಡಿ, ಮಾಗಡಿ ತಾಲ್ಲೂಕು
ರಾಮನಗರ ಜಿಲ್ಲೆ

ಹಬ್ಬಗಳೆಂದರೆ ಸಾಮಾನ್ಯವಾಗಿ ಸಡಗರ ಸಂಭ್ರಮದಿಂದ ಕೂಡಿದ್ದು, ಬಂಧು ಬಾಂಧವರು, ಗೆಳೆಯರು, ಆಯಾ ಸಮುದಾಯದವರು ಒಟ್ಟಿಗೇ ಸೇರಿ ಆಚರಿಸುವ ಮನಶ್ಶಾಂತಿಯ ಮಹತ್ಕಾರ್ಯ..

ಇಂದು ಪ್ರಪಂಚದ ನಾನಾ ಭಾಗಗಳಲ್ಲಿ ಅವರದೇ ಆದ ಸಂಸ್ಕೃತಿಯ ವೈಶಿಷ್ಟ್ಯಗಳಿಂದ ಕೂಡಿದ ಹಲವಾರು ಹಬ್ಬಗಳನ್ನು ಆಚರಿಸುವುದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಾವು ಕಂಡಿದ್ದೇವೆ.. ಕೆಲವು ಹಬ್ಬಗಳನ್ನು ಜಾಗತಿಕ ಮಟ್ಟದಲ್ಲಿ ಆಚರಿಸಿದರೆ, ಮತ್ತೆ ಕೆಲವು ರಾಷ್ಟ್ರೀಯ ಮಟ್ಟದಲ್ಲಿ, ಇನ್ನೂ ಕೆಲವು ರಾಜ್ಯಮಟ್ಟದಲ್ಲಿ ಹಾಗೆಯೇ ಸಂಪ್ರದಾಯ, ಸಂಸ್ಕೃತಿಗಳ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವುದು ಸರ್ವೇ ಸಾಮಾನ್ಯ… ಮತ್ತಷ್ಟು ಓದು »

20
ಫೆಬ್ರ

ಪ್ರಬಂಧ ಸ್ಪರ್ಧೆ – ೧ : ನಮ್ಮೂರ ಹಬ್ಬ


ಭಾರತದ ಪ್ರತಿಯೊಂದು ಹಳ್ಳಿಯೂ ತನ್ನದೇ ಆದ ವಿಶಿಷ್ಟ ಹಬ್ಬಗಳನ್ನು ರೂಢಿಸಿ ಆಚರಿಸಿಕೊಂಡು ಬಂದಿದೆ. ಈ ಹಬ್ಬಗಳಲ್ಲಿ ಊರಿನ ಎಲ್ಲ ಜನರೂ ಭಾಗವಹಿಸುತ್ತಾರೆ. ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದಿರುವ ಈ ಹಬ್ಬಗಳು ಆಯಾ ಊರಿನ ಅವಿಭಾಜ್ಯ ಅಂಗಗಳಾಗಿರುತ್ತವೆ. ಒಂದೊಂದು ಹಳ್ಳಿಯ ಹಬ್ಬವೂ ತನ್ನದೇ ವಿಶಿಷ್ಟವಾದ ಆಚರಣೆಗಳಿಂದ ಕೂಡಿರುತ್ತವೆ. ಆದರೆ ಇಂತಹ ಅನೇಕ ಹಬ್ಬಗಳು ಹಾಗೂ ಅವುಗಳಲ್ಲಿ ಆಚರಿಸಲ್ಪಡುವ ನೂರಾರು ಸೂಕ್ಷ್ಮ ಆಚರಣೆಗಳ ವಿವರಗಳು ಇಂದಿಗೂ ಕೂಡ ಕನ್ನಡಿಗರಿಗೆ ಗೊತ್ತಿಲ್ಲ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇವಲ ಕೆಲವೇ ಕೆಲವು ಜಾತ್ರೆಗಳ ಹಾಗೂ ಹಬ್ಬಗಳ ಸುದ್ದಿಗಳು ಬರುತ್ತವೆ. ಇನ್ನು ನಮ್ಮ ಹಬ್ಬಗಳ ಕುರಿತ ಸಮಾಜ ಶಾಸ್ತ್ರೀಯ ವಿವರಣೆಗಳಂತೂ ಬುದ್ಧಿಜೀವಿಗಳಿಗೇ ಪ್ರೀತಿ. ಮತ್ತಷ್ಟು ಓದು »

15
ಜನ

7ನೇ ವರ್ಷದ ಹೊಸ್ತಿಲಲ್ಲಿ ನಿಲುಮೆ…

nilume-7-yearsನಿಲುಮೆ ವೆಬ್ ತಾಣ ಶುರುವಾಗಿ 6ವರ್ಷಗಳನ್ನು ಪೂರೈಸಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಕ್ರಮಣದ ದಿನವಿದು. 5ನೇ ವರ್ಷದ ಸಂಭ್ರಮದಲ್ಲಿ,ನಿಲುಮೆ ಪ್ರಕಾಶನ ಶುರುವಾಗುವ ಹಂತದಲ್ಲಿದ್ದಾಗ,ನಿಲುಮೆಯ ಮೇಲೆ ಕರ್ನಾಟಕದ ಬೌದ್ಧಿಕ ಫ್ಯಾಸಿಸಂನ ದಾಳಿಯಾಗಿತ್ತು.ಹಾಗೇ ದಾಳಿ ಮಾಡಿದವರ ಪೈಕಿ ಹೇಗಿದೆ 5ನೇ ವರ್ಷದ ಗಿಫ್ಟು ಎಂದು ಕುಹುಕವಾಡಿದ್ದರು.ಅದಾದ ನಂತರದ ವಿಷಯಗಳೆಲ್ಲ ನಿಮಗೇ ತಿಳಿದಿವೆ.ಕನ್ನಡ ಪ್ರಭ ಪತ್ರಿಕೆಯೂ ಆ ಎಪಿಸೋಡಿನ ಬಗ್ಗೆ ವಿಸ್ತೃತ ವರದಿ ಮಾಡಿತು.ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಮುಖಾಮುಖಿ ಚರ್ಚೆಯೂ ನಡೆಯಿತು.

ಆ ಚರ್ಚೆಯ ಅಂತ್ಯದಲ್ಲಿ, ”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ” ಎಂದು ಹೇಳಿ,ನಿಲುಮೆಯು ಸಾಗಿ ಬಂದ ಮತ್ತು ಸಾಗಲಿರುವ ಮಾರ್ಗದ ಬಗ್ಗೆ ಸ್ಪಷ್ಟ ಸಂದೇಶವನ್ನು ಕೊಟ್ಟೆವು. ನಾವು ಹೇಳಿದ ಮಾರ್ಗದಲ್ಲಿಯೇ ಸಾಗುತಿದ್ದೇವೆ.ಎನ್ನುವುದಕ್ಕೆ ಸಾಕ್ಷಿಯಾಗಿ,5ನೇ ವರ್ಷಾಚರಣೆಯ ಸಂದರ್ಭದಲ್ಲಿ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳನ್ನು ನಿಮ್ಮ ಕೈಯಲ್ಲಿಟ್ಟಿದ್ದೇವೆ.ಕನಿಷ್ಟ ಐದು ಪುಸ್ತಕಗಳನ್ನಾದರೂ ನಾವು ಪ್ರಕಟಿಸುವ ಇರಾದೆಯಿತ್ತು. ಆದರೆ,ನಮ್ಮ ಇತರೆ ಕೆಲಸ-ಕಾರ್ಯಗಳು ಮತ್ತು ಪುಸ್ತಕ ಮುದ್ರಣಕ್ಕೆ ಬೇಕಾಗುವ ಸಂಪನ್ಮೂಲಗಳ ಕೊರತೆ ಇತ್ಯಾದಿ ಕಾರಣಗಳಿಂದ ಮೂರು ಪುಸ್ತಕಗಳಷ್ಟೇ ಸಾಧ್ಯವಾಗಿದ್ದು. 2016ರಲ್ಲಿ ನಿಲುಮೆ ಪ್ರಕಾಶನ ಸ್ತಬ್ಧವಾಗಿತ್ತು ಎಂಬುದನ್ನು ನಿಮ್ಮ ಮುಂದೆ ಮಂಡಿಯೂರಿ ಒಪ್ಪಿಕೊಳ್ಳುತ್ತೇವೆ.

ಈ ವರ್ಷ ನಿಲುಮೆಯ ಹೆಜ್ಜೆ ಗುರುತುಗಳು….

1.ಹೈದರಾಬಾದಿನ ಯುನಿವರ್ಸಿಟಿಯಲ್ಲಿ ರೋಹಿತ್ ವೇಮುಲಾ ಎಂಬ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣವನ್ನಿಡಿದುಕೊಂಡು ದೇಶಾದಾದ್ಯಂತ ಗಂಜಿಗಿರಾಕಿಗಳು ಬೊಬ್ಬೆಯಿಟ್ಟಾಗ,ನಿಲುಮೆ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶವನ್ನು ಓದೌಗರ ಮುಂದೆ ಇಡುವ ಕೆಲಸವನ್ನು ಮಾಡಿದೆ.
2.ಉಗ್ರ ಅಫ್ಜಲ್ ಗುರುವನ್ನು ಬೆಂಬಲಿಸಿ,ಕಾಶ್ಮೀರದ ಆಜಾದಿ ಘೋಷಣೆಗಳನ್ನು ಕೂಗಿದ್ದ ಜೆ.ಎನ್.ಯು ವಿವಿಯ ಕನ್ನಯ್ಯ ಕುಮಾರನ ಪಟಾಲಂನ ವಿರುದ್ಧ ನಡೆದ ಆನ್ಲೈನ್ ಹೋರಾಟದಲ್ಲು ನಿಲುಮೆ ಬಳಗ ಸಕ್ರೀಯವಾಗಿತ್ತು.
3.೨೦೧೬ರ ಫೆಬ್ರವರಿ ತಿಂಗಳಿನಲ್ಲಿ ದೆಹಲಿಯ JNUವಿನಲ್ಲಿ ದೇಶವಿರೋಧಿ ಘೋಷಣೆಗಳು ಕೇಳಿ ಬಂದಾಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.ಅದಾದ ಕೆಲವೇ ದಿನಗಳಲ್ಲಿ ಬಂಗಾಳದಲ್ಲೂ ಇದೇ ಬಗೆಯ ಘೋಷಣೆಗಳ ಸುದ್ದಿಯಾಗಿತ್ತು. ಜುಲೈ ೯ನೇ ತಾರೀಖು ಜಮ್ಮುಕಾಶ್ಮೀರ ರಾಜ್ಯದಲ್ಲಿ ಉಗ್ರ ಬರ್ಹನ್ ವಾನಿಯ ಹತ್ಯೆಯಾದ ನಂತರ,ಆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಗಲಭೆ ಶುರುವಾಗಿ ಒಂದು ವಾರ ಕಳೆಯುವಷ್ಟರಲ್ಲೇ, ಕೆಲವು ಅರ್ಬನ್ ನಕ್ಸಲರು ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ (ಜುಲೈ15,16) We Stand with Kashmir ಎನ್ನುವ ಹೆಸರಿನೊಂದಿಗೆ ಟೌನ್ ಹಾಲ್ ಮುಂದೆ ನಿಂತು “ಕಾಶ್ಮೀರದ ಆಜಾದಿ” ಕೇಳಲು ತಯಾರಾಗಿದ್ದ ಹೊರಟಿದ್ದರು. ಇವರ ಆಸೆಗೆ ನಾವೊಂದಿಷ್ಟು ಜನರು ಸೇರಿ ತಣ್ಣಿರೇರಚಿದ್ದೆವು.

ಮತ್ತಷ್ಟು ಓದು »