ವಿಷಯದ ವಿವರಗಳಿಗೆ ದಾಟಿರಿ

Posts from the ‘ಅಣ್ಣಾ ಹಜಾರೆ’ Category

8
ಜೂನ್

ಸಾಮಾಜಿಕ ಪ್ರಜ್ಞೆ ಮತ್ತು ನಾವು

-ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ

logo_world_conferenceಒಮ್ಮೆ ಹೀಗಾಯ್ತು, ಮನೆಗೆ ಬರುತ್ತಿರುವಾಗ ದಾರಿಯಲ್ಲಿ ನನ್ನ ಸ್ನೇಹಿತ ಜಗಳವಾಡಿದ. ಅವನ ಜಗಳಕ್ಕೂ ಕಾರಣವಿತ್ತು. ಮನೆಕಟ್ಟಿಸುತ್ತಿದ್ದ ಯಜಮಾನರೊಬ್ಬರು ರಸ್ತೆ ಬದಿಯ ಚರಂಡಿಗೆ ಮರಳು, ಜಲ್ಲಿಕಲ್ಲುಗಳನ್ನು ತುಂಬಿಬಿಟ್ಟಿದ್ದರು. ಕೊಳಚೆ ನೀರು ಹರಿದು ಹೋಗದೆ ಚರಂಡಿ ತುಂಬಿ ನಿಂತಿತ್ತು. ಅಂಥದ್ದೊಂದು ಘಟನೆ ಅವನ ಆಕ್ರೋಶಕ್ಕೆ ಕಾರಣವಾಗಿತ್ತು. ಚರಂಡಿಯಲ್ಲಿ ತುಂಬಿರುವ ಮರಳು ಮತ್ತು ಜಲ್ಲಿಕಲ್ಲುಗಳನ್ನು ಕೂಡಲೇ ತೆಗೆದುಹಾಕುವಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಹೇಳಿದ. ಅಲ್ಲೇ ಸಮೀಪದಲ್ಲಿ ನಿಂತಿದ್ದ ಯಜಮಾನರು ಮನೆ ಕೆಲಸ ಪೂರ್ಣಗೊಳ್ಳುವವರೆಗೆ ಅದು ಸಾಧ್ಯವಿಲ್ಲವೆಂದು ಬಿರುಸಾಗಿಯೇ ನುಡಿದರು. ಮಾತಿಗೆ ಮಾತು ಬೆಳೆಯಿತು. ಗಲಾಟೆ ಕೇಳಿ ಸುತ್ತಮುತ್ತಲಿನ ಮನೆಯವರು ಹೊರಗೆ ಬಂದರು. ಆಶ್ಚರ್ಯವೆಂದರೆ ಯಾರೊಬ್ಬರೂ ನನ್ನ ಗೆಳೆಯನ ಬೆಂಬಲಕ್ಕೆ ನಿಲ್ಲಲಿಲ್ಲ. ಅವನನ್ನೆ ವಿಚಿತ್ರ ಎನ್ನುವಂತೆ ನೋಡಿದರು. ಆದ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಅಲ್ಲಿದ್ದ ಯಾರೊಬ್ಬರಲ್ಲೂ ಇರಲಿಲ್ಲ. ಅಷ್ಟಕ್ಕೂ ಅದು ತಪ್ಪೆಂದು ಜಗಳಕ್ಕೆ ನಿಂತವನು ಅಸಲಿಗೆ ಆ ಕಾಲೋನಿಯವನೂ ಆಗಿರಲಿಲ್ಲ. ಆ ನಿಂತ ನೀರಿನ ಪಕ್ಕದ ಮನೆಯೂ ಅವನದಾಗಿರಲಿಲ್ಲ. ಆದರೂ ಆ ಸಂದರ್ಭ ಅವನಲ್ಲಿನ ಸಾಮಾಜಿಕ ಪ್ರಜ್ಞೆ ಜಾಗೃತಗೊಂಡಿತ್ತು. ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ. ಯಾರು ಸಮಸ್ಯೆಯ ಸಮೀಪದಲ್ಲಿದ್ದರೋ ಅವರಲ್ಲಿ ಮಾತ್ರ ಸಾಮಾಜಿಕ ಸಮಸ್ಯೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ಆದರೆ ಅದೇ ಜನ ಅಣ್ಣಾ ಹಜಾರೆ ಹೆಸರಿನ ಟೊಪ್ಪಿಗೆ ಧರಿಸಿ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದು ವ್ಯವಸ್ಥೆಯೊಂದರ ವ್ಯಂಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಮತ್ತಷ್ಟು ಓದು »

11
ಡಿಸೆ

ಎಎಪಿ ಗೆಲುವಿನ ಗುಂಗಿನಲ್ಲಿ ‘ಪೊರಕೆ’ ಹಿಡಿಯಲು ಹೊರಟವರು

ರಾಕೇಶ್ ಶೆಟ್ಟಿ

AAPಮಿನಿ ಲೋಕಸಭಾ ಚುನಾವಣೆ ಎಂದೇ ಪರಿಗಣಿತವಾಗಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಸಮೀಕ್ಷೆಯಂತೆಯೇ ೪ ರಾಜ್ಯಗಳಲ್ಲಿ ಬಿಜೆಪಿ ಮತ್ತು ೧ ರಾಜ್ಯದಲ್ಲಿ ಕಾಂಗ್ರೆಸ್ಸ್ ತನ್ನ ಮುದ್ರೆಯೊತ್ತಿದೆ.ಆದರೆ,ಆಮ್ ಆದ್ಮಿ ಪಕ್ಷಕ್ಕೆ ೨೮ ಸ್ಥಾನಗಳನ್ನು ನೀಡುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದ್ದು ದೆಹಲಿಯ ಮತದಾರರು.

ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಎಎಪಿ ಪಕ್ಷ ೧೦-೧೫ ಸೀಟು ಪಡೆಯಬಹುದು ಮತ್ತು ಆ ಮೂಲಕ ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸಬಹುದು ಅನ್ನುವ ಅಭಿಪ್ರಾಯಗಳೇ ಬಂದಿತ್ತು.ಆದರೆ ಮತದಾರಪ್ರಭು ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷದೆಡೆಗೆ ಹೆಚ್ಚು ಉದಾರಿಯಾಗಿದ್ದಾನೆ.’ರಾಜಕಾರಣಿಗಳೆಲ್ಲ ಭ್ರಷ್ಟರು’ ಅನ್ನುತಿದ್ದ ಕೇಜ್ರಿವಾಲ್ ತಾವೇ ಒಂದು ರಾಜಕೀಯ ಪಕ್ಷ ಸ್ಥಾಪಿಸುತ್ತೇವೆ ಅಂತ ಹೊರಟು ನಿಂತು ಪ್ರಸಕ್ತ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿ ಅದನ್ನು ಕಟ್ಟಿಕೊಳ್ಳುತ್ತ ಹೊರಟಾಗ ಯಾವ ರಾಜಕಾರಣಿಗಳು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸ್ ನಡುವೆ ನೇರಾನೇರ ಹಣಾಹಣಿ ನಡೆಯಲಿದೆ ಅನ್ನುವಷ್ಟು ನಿರ್ಲಕ್ಷ್ಯದಲ್ಲಿದ್ದ ಶೀಲಾ ದಿಕ್ಷೀತ್ ಕೂಡ,ಕೇಜ್ರಿವಾಲ್ ಮುಂದೆ ಸೋತು ಸುಣ್ಣವಾಗಿದ್ದಾರೆ.

ಮತ್ತಷ್ಟು ಓದು »

14
ಆಗಸ್ಟ್

ಸಾಮಾನ್ಯರ ಭ್ರಷ್ಟತೆ ನಿರ್ಲ್ಯಕ್ಷಿಸಿ ಜನರ ಬಳಿಗೆ ಹೊರಟವರ ಕಥೆ…

-ಅಶೋಕ್ ಕೆ ಆರ್

ನನ್ನ ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’ ‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!

ಟೀಂ ವರ್ಕಿನ ತಂಡವೇ ಸರಿಯಿರಲಿಲ್ಲ! –

ರಿಲೇ ಓಟದಲ್ಲಿ ಓಡುವ ನಾಲ್ವರ ಪಾತ್ರವೂ ಹಿರಿದು. ಒಬ್ಬನ ಓಟ ಕೊಂಚ ನಿಧಾನವಿರಬಹುದು, ಮತ್ತೊಬ್ಬ ಉಳಿದೆಲ್ಲರಿಗಿಂತ ವೇಗಿಯಿರಬಹುದು; ಕೊನೆಗೆ ಎಲ್ಲರೂ ಓಡಿದರೆ ಮಾತ್ರ ತಂಡ ಗೆಲುವು ಸಾಧಿಸಲು ಸಾಧ್ಯ. ಈ ಮೂಲಭೂತ ಅಂಶವೇ ಅಣ್ಣಾ ಹಜಾರೆ ಆರಂಭಿಸಿದ ಚಳುವಳಿಯಲ್ಲಿ ಇಲ್ಲವಾಗಿತ್ತು. ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲಾ, ಕಿರಣ್ ಬೇಡಿಯವರ ಉದ್ದೇಶ ಸರಿಯಾಗಿತ್ತೇನೋ ಆದರೆ ನಡೆದ ಹಾದಿಯಲ್ಲಿ ಜೊತೆ ಮಾಡಿಕೊಂಡ ತಂಡ? ಎಡವಿ ಬಿದ್ದವರನ್ನು ಮೇಲೆತ್ತುವ ಗೋಜಿಗೆ ಹೋಗದೆ ನಗುತ್ತಾ ಮುಂದೆ ಸಾಗುವವರ ತಂಡ ಕಟ್ಟಿಕೊಂಡು ಚಳುವಳಿಯನ್ನು ಬೆಳೆಸಿ ಗೆಲ್ಲಲಾದೀತೇ? ಮೇಧಾವಿಗಳೆನ್ನಿಸಿಕೊಂಡವರು, ಹಲವು ಹೋರಾಟಗಳಲ್ಲಿ ಪಾಲ್ಗೊಂಡ ಜನರೇ ಇದ್ದ ಅಣ್ಣಾ ತಂಡದಲ್ಲಿ ಭ್ರಷ್ಟಾಚಾರವನ್ನು ಅರ್ಥೈಸುವ ದೃಷ್ಟಿಕೋನವೇ ಸರಿಯಿರಲಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರವರ್ಗವಷ್ಟೇ ಭ್ರಷ್ಟರ ಕೂಟ ಎಂಬ ತೀರ್ಮಾನಕ್ಕೆ ಬಂದ ಚಳುವಳಿಯಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಸಾಮಾನ್ಯ ಜನರೂ ಭ್ರಷ್ಟಾಚಾರದ ಬಹುಮುಖ್ಯ ಭಾಗ. ಅವರು ಬದಲಾಗದೆ – ಅವರನ್ನು ಬದಲಿಸಲಾಗದೆ – ಚಳುವಳಿ ಗೆಲ್ಲಲಾಗದು ಎಂದಿವರಿಗೆ ತಿಳಿಯಲಿಲ್ಲ.

ಮತ್ತಷ್ಟು ಓದು »