ವಿಷಯದ ವಿವರಗಳಿಗೆ ದಾಟಿರಿ

Posts from the ‘ಕರ್ನಾಟಕ’ Category

1
ಏಪ್ರಿಲ್

ಕುಮಾರರಾಮ

– ವರುಣ್ ಕುಮಾರ್
(ವಾರಕ್ಕೊಂದು ವೀರರು)

Kumararamaಭಾರತದ ಹಿಂದೂ ಸಾಮ್ರಾಟ ಎಂದ ಕೂಡಲೇ ನಮ್ಮ ಸ್ಮೃತಿಪಟಲದಲ್ಲಿ ಶಿವಾಜಿ ಮಹಾರಾಜರ ಹೆಸರು ಬರುತ್ತದೆ. ಶಿವಾಜಿ ಮಹಾರಾಜರ ಆಡಳಿತ ವೈಖರಿ, ಮೊಘಲರ ದಾಳಿಯನ್ನು ಹಿಮ್ಮೆಟ್ಟಿಸಿದ ರೀತಿ, ಅವರ ರಾಜಕೀಯ ತಂತ್ರಗಾರಿಕೆಗಳು, ಎಂಥವರಿಗೂ ರೋಮಾಂಚನವನ್ನು ಉಂಟು ಮಾಡುತ್ತದೆ. ತನ್ನ ಅಲ್ಪಾವಧಿಯಲ್ಲಿ ಮೊಘಲರ ಸಾಮ್ರಾಜ್ಯವನ್ನು ಕೇವಲ ಉತ್ತರ ಭಾರತಕ್ಕೆ ಸೀಮಿತಗೊಳಿಸುವಲ್ಲಿ ಶಿವಾಜಿಯ ಪಾತ್ರ ಅಪಾರವಾದುದು. ಆದರೆ ಶಿವಾಜಿಯ ಪೂರ್ವ ಕಾಲದಲ್ಲಿ ದಕ್ಷಿಣ ಪ್ರಾಂತ್ಯಕ್ಕೆ ಮೊಘಲರ ದಾಳಿಯನ್ನು ಹಿಮ್ಮಟ್ಟಿಸುವಲ್ಲಿ ಯುವ ಅರಸ ಕುಮಾರರಾಮನ ಪಾತ್ರ ಮಹತ್ವದ್ದು. ಹಿಂದೂ ಸಾಮ್ರಾಜ್ಯಕ್ಕೆ ಭದ್ರವಾದ ಬುನಾದಿಯನ್ನು ಕೊಟ್ಟು ಮುಂದಿನ ೨೦೦ ವರ್ಷಗಳ ಕಾಲ ಅವರ ವಂಶಜರು ದಕ್ಷಿಣ ಪ್ರಾಂತ್ಯದಲ್ಲಿ ಹಿಂದೂ ಸಾಮ್ರಾಜ್ಯವನ್ನು ಪುನರುತ್ಥಾನಗೊಳಿಸಿದರು‌. ಮತ್ತಷ್ಟು ಓದು »

20
ಮಾರ್ಚ್

ನೋಡಿ ಸ್ವಾಮಿ .. ನಾವಿರೋದು ಹೀಗೆ.. !!

-‌ ಸುಜಿತ್‌ ಕುಮಾರ್

downloadಮೊನ್ನೆ ಆ ದೃಶ್ಯಗಳನ್ನು ನೋಡಿ ಯಾಕೋ ನಮ್ಮ ಶಂಕರ್ ನಾಗ್ ನೆನಪಾದ್ರು. ಅದು ಶಂಕರ್ ನಾಗ್ ಅನ್ನೋದಕ್ಕಿಂತ ಶಂಕರ್ ನಾಗ್ ಅಭಿನಯದ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಚಿತ್ರದ ಟೈಟಲ್ ಹಾಡು ನೆನಪಾಯಿತು ಎನ್ನಬಹುದು. ನಗರದ ಗಲ್ಲಿಮೂಲೆಗಲ್ಲಿ ತನ್ನ MAT ಬೈಕಿನ ಮೇಲೆ ಕೂತು ಹಾಡುತ್ತಾ ಸಾಗುವ ಚಿತ್ರದ ದೃಶ್ಯದ ತುಣುಕು, ದಿನ ಬೆಳಗಾದರೆ ಬೆಳ್ಳನೆಯ ಬಟ್ಟೆಗಳನ್ನು ತೊಟ್ಟು ‘ನಾನೇ ಸಾಚಾ ಆತ ಮಾತ್ರ ನೀಚ’ ಎಂಬಂತೆ ಎಲ್ಲೆಂದರಲ್ಲಿ ಬೈಯುವ ಭಾಷಣಗಳನ್ನು ಮಾಡುತ್ತಾ ಓಟಿಗಾಗಿ ಊರೂರು ಸುತ್ತುತ್ತಾ ಕೊನೆಗೆ ಅಪ್ಪಿ ತಪ್ಪಿ ಆತನೇ ಎದುರಿಗೆ ಪ್ರತ್ಯಕ್ಷವಾದರೆ ‘ಹಿಂದಿ ಚೀನೀ ಬಾಯಿ ಬಾಯಿ’ ಎಂಬುವಂತೆ ತಬ್ಬಿಕೊಂಡು ಮುತ್ತಿಡುವುದೊಂದೇ ಬಾಕಿ ಏನೋ ಎಂಬ ಧಾಟಿಯಲ್ಲಿ ನಟಿಸುತ್ತಾ ನಿಲ್ಲುವ ರಾಜಕಾರಣಿಗಳನ್ನು ನೆನೆಪಿಸುತ್ತಿತ್ತು. ಅವರುಗಳ ಹಿಂದೆಯೇ ನಮ್ಮ ಶಂಕರ್ ಗುರು ‘ನೋಡಿ ಸ್ವಾಮಿ ಇವ್ರ್ ಇರೋದೇ ಹೀಗೆ’ ಎಂದು ಹಾಡಿದಂತೆ ಭಾಸವವಾಗುತ್ತಲಿತ್ತು. ನಿಂತ ನೆರಳಿಗೆ ಆಗದ ಮಾಜಿ ಸಿಎಮ್ ಗಳಿಬ್ಬರು ವೇದಿಕೆಯೊಂದರ ಮೇಲೆ ಕೈ ಕೈ ಕುಲುಕುತ್ತಾ ‘ಪಾಲಿಟಿಕ್ಸ್ ಅಪಾರ್ಟ್, ನಾವಿಬ್ಬರು ಅತ್ಯುತ್ತಮ ಸ್ನೇಹಿತರು’ ಎಂದಾಗ ನೆರೆದಿದ್ದ ನೂರಾರು ಅಭಿಮಾನಿಗಳು ತಲೆಯನ್ನು ಕೆರೆದುಕೊಳ್ಳುತ್ತಾ ಒಬ್ಬರನ್ನೊಬ್ಬರು ಮಿಕ ಮಿಕ ನೋಡತೊಡಗಿದಂತೂ ಸುಳ್ಳಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳಾಗಿ ಅಂತವರ ಬಾಯಿಂದ ಇಂಥ ಹಿರಿಯ ಮಾತುಗಳು ಬರುವುದು ತಪ್ಪೇನಿಲ್ಲ. We Should Appreciate that. ಆದರೆ ಇಂದು ಹೀಗಂದು ನಾಳೆ ಮತ್ತದೇ ಮೈ ಮೈ.. ತು ತು .. ಎಂದು ಬೆಂಕಿಕಾರುವ ಮಾತುಗಳಾದರು ಏತಕ್ಕೆ ಸ್ವಾಮಿ? ಮಿಗಿಲಾಗಿ ಇಂತಹ ಪೊಳ್ಳು ಮಾತುಗಳ ಸರದಾರರಾಗಿ ಅವರುಗಳಿಗೇ ಇರದ ವೈರತ್ವವನ್ನು ಒಬ್ಬ ಕಾಮನ್ ಸಿಟಿಸನ್ ಆಗಿ ನಾವ್ಯಕ್ಕೆ ಕಟ್ಟಿಕೊಳ್ಳಬೇಕು ಹೇಳಿ? ಮತ್ತಷ್ಟು ಓದು »

24
ಸೆಪ್ಟೆಂ

ಪುಸ್ತಕ ಪರಿಚಯ – “ಪ್ರಜ್ಞೆ ಮತ್ತು ಪರಿಸರ”

– ಚಂದ್ರಹಾಸ 

PrajneMattuParisara“ಪ್ರಜ್ಞೆ ಮತ್ತು ಪರಿಸರ” – ಯು. ಆರ್. ಅನಂತಮೂರ್ತಿಯವರ ವಿಮರ್ಶಾ ಲೇಖನಗಳ ಸಂಕಲನ. ಪ್ರಸ್ತುತ ಪುಸ್ತಕ ಯಾವುದೋ ಕೆಲವು ಕೃತಿಗಳ ವಿಮರ್ಶೆಗಳಲ್ಲ, ಬದಲಾಗಿ ಕೃತಿಗಳನ್ನು ಸೃಷ್ಟಿಸಿದ ಕೃತಿಕಾರರ ದೃಷ್ಟಿಕೋನಗಳದ್ದು. ಸುತ್ತಲಿನ ಸಮಾಜ, ವಾಸ್ತವ ಅನುಭವಗಳು ಮತ್ತು ಲೋಕವ್ಯಾಪರ, ಹೇಗೆ ಸಾಹಿತಿಗಳ ಮನೋಭೂಮಿಕೆಯಲ್ಲಿ ವಿಶ್ಲೇಷಣೆಗೊಂಡು, ಶೋಧನೆಗೆ ಪ್ರೇರೇಪಿಸಿ ಕೃತಿಗಳಲ್ಲಿ ಮೂರ್ತಗೊಂಡಿರಬಹುದೆಂಬುದನ್ನು ತಮ್ಮ ಲೇಖನಗಳಾ ಮೂಲಕ ವಿವೇಶಿಸಿದ್ದಾರೆ. ಮುನ್ನುಡಿಯಲ್ಲಿ ಅವರೇ ಈ ಲೇಖನಗಳಾ ಹಿಂದಿನ ಪ್ರೇರಣೆಯನ್ನು ಹೀಗೆ ಹೇಳಿಕೊಂಡಿದ್ದಾರೆ – “ಸಾಹಿತ್ಯದಿಂದ ರಾಜಕೀಯದವರೆಗೆ ಸ್ನೇಹಿತರೊಡನೆ ನಡೆಸಿದ ಚರ್ಚೆಗಳಿಂದ,ಮಾರ್ಕ್ಸ್ ವಾದದ,ಲೋಹಿಯಾವಾದಗಳ ಬಗ್ಗೆ ಇದ್ದ ಅನುಮಾನ ಅಭಿಮಾನಗಳಿಂದ ಪ್ರಭಾವಗೊಂಡ ಅಲೋಚನ ಲಹರಿಗಳೇ, ಈ ಸಂಕಲನದಲ್ಲಿ ಲೇಖನಗಳಾಗಿ ಮೂಡಿವೆ.” ಮತ್ತಷ್ಟು ಓದು »

3
ಜುಲೈ

ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಏನು ಸಂಬಂಧ ಎಂದು ಕೇಳುತ್ತಿರಾ?? ಖಂಡಿತಾ ಸಂಬಂಧ ಇದೆ..!!

– ಅಜಿತ್ ಶೆಟ್ಟಿ ಹೆರಾಂಜೆ

ಹೌದು ಉಡುಪಿಯ ಮಟ್ಟಿಗೆ ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಖಂಡಿತಾ ಸಂಬಂಧ ಇದೆ. ದುರಂತ ಅಂದ್ರೆ ಈ ಸಂಬಂಧದ ಬಗ್ಗೆ ನಮಗೆ ಯಾರೂ ಎಂದೂ ಹೆಳಿದವರೇ ಇಲ್ಲ. ಶಾಲಾ ಕಾಲೇಜುಗಳಲ್ಲಿ ನಮ್ಮ ಯಾವುದೇ ಶಿಕ್ಷಕರು ಈ ಸಂಬಂಧದ ಬಗ್ಗೆ ಪಾಠ ಮಾಡಲಿಲ್ಲ. ನಮಗೆ ಗಾಂಧಿ ಗೊತ್ತಿತ್ತು, ನಮಗೆ ಬುದ್ದ ಗೊತ್ತಿತ್ತು, ನಮಗೆ ಅಕ್ಬರ್ ಗೊತ್ತಿತ್ತು, ನಮಗೆ ಮುಸೊಲಿನಿ, ಹಿಟ್ಲರ್ ಚಗುವೇರ ಗೊತ್ತಿತ್ತು. ಆದ್ರೆ ನಮ್ಮೂರಿನ ಮಹಾತ್ಮರ ಬಗ್ಗೆ ಗೊತ್ತೇ ಇಲ್ಲ. ಅವರು ನಮ್ಮ ಸಮಾಜವನ್ನು ಕಟ್ಟಲು ತಮ್ಮ ಇಡಿ ಜೀವಮಾನದ ಗಳಿಕೆಯನ್ನೆಲ್ಲವೂ ಸಮಾಜದ ಉದ್ದಾರಕ್ಕಾಗಿ ನೀರಿನಂತೆ ಹರಿಸಿ, ತಮ್ಮ ಇಡಿ ಜೀವನವನ್ನು ಸಮಾಜಕ್ಕಾಗಿ ತೇದಿ ಸವೆದು ಸದ್ದಿಲ್ಲದೆ ಮರೆಯಾದವರು. ಅವರಿಗೆ ಯಾವುದೇ ಪ್ರಚಾರದ ಹಂಗಿರಲಿಲ್ಲ, ಅವರಿಗೆ ತಮ್ಮ ಸಮಾಜದ ಬಗೆಗಿನ ತಾವು ನಿಭಾಯಿಸಬೇಕಿದ್ದ ಕರ್ತವ್ಯಗಳ ಅರಿವಿತ್ತು, ಸಮಸ್ಯೆಗಳು ಬಂದಾಗ ಅದನ್ನ ಸರ್ಕಾರ ಅಥವಾ ಇನ್ಯಾರೋ ಪರಿಹರಿಸಲಿ ಎಂದು ಯಾವತ್ತೂ ಕಾದವರಲ್ಲ. ಅವರು ಸ್ವತಃ ತಾವೇ ಅಂತಹಾ ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತು ಪರಿಹರಿಸಿದವರು. ಆಗ ಅವರ ಕಣ್ಣಲ್ಲಿ ಜಾತಿ, ಮತ ,ಪಂತ, ಪಂಗಡ, ಇವ ನಮ್ಮವ ಇವ ಬೇರೆಯವನು ಎಂಬುವ ಯಾವುದೆ ಬೇಧ ಭಾವ ಇರಲಿಲ್ಲ. ಅವ್ರಲ್ಲಿ ಇದ್ದದ್ದು ಸಮಾಜದಲ್ಲಿ ತಾನು ಮಾಡಬೇಕಾಗಿದ್ದ ಕೆಲಸಗಳ ಬಗ್ಗೆ ಇದ್ದ ತುಡಿತ ಮಾತ್ರ. ಅಂತಹ ಅದೆಷ್ಟೋ ಗಣ್ಯರು ಕಾಲದ ಪುಟಗಳಲ್ಲಿ ಮರೆಯಾಗಿ ಹೋದರು. ಅವರನ್ನ ಅವರ ಸಾಧನೆಗಳನ್ನ ಮುಂದಿನ ತಲೆಮಾರಿಗೆ ಪರಿಚಯಿಸುವ ಹೊಣೆ ಹೊತ್ತ ಸರ್ಕಾರಗಳು ಇಂತವರ ಪರಿಚಯನ್ನು ಯಾವತ್ತೂ ಮುಂದಿನ ಪೀಳಿಗೆಗೆ ಮಾಡಲೇ ಇಲ್ಲ. ಅದಿರಲಿ ಸಮಾಜವೂ ಅಂತವರನ್ನ ಮರೆತಿತು. ಇಂತಹಾ ಅನೇಕ ಮರೆತುಹೋದ ಮಹಾನುಭಾವರಲ್ಲಿ ಉಡುಪಿಯ ಖಾನ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬ್ ಬಹದ್ದೂರ್ ಕೂಡ ಒಬ್ಬರು. ಚಿಕ್ಕದಾಗಿ‌ ಹೇಳೋದಾದರೆ ಹಾಜಿ ಅಬ್ದುಲ್ಲಾ ಸಾಹೇಬರು . ಹಾಜಿ ಅಬ್ದುಲ್ಲಾ ಸಾಹೆಬರು !! ? ಯಾರೀತ?? ಮತ್ತಷ್ಟು ಓದು »

18
ಏಪ್ರಿಲ್

‘ಕೈ’ ಪಕ್ಷಕ್ಕೆ ಈ ಸಲ ಜನತೆ ‘ಕೈ’ ಕೊಡಬೇಕಿದೆ !

– ಅಭಿಷೇಕ್ ಬಿ ಎಸ್
‘ಕರ್ನಾಟಕ ನಂಬರ್ 1 ರಾಜ್ಯ’ – ಮೇಲಿಂದಲೋ ಕೆಳಗಿಂದಲೋ ?

ಕರ್ನಾಟಕ ಮತ್ತೊಮ್ಮೆ ಚುನಾವಣೆಯ ಕಡೆ ಮುಖ ಮಾಡಿ ನಿಂತಿದೆ. ಒಂದು ಸರ್ಕಾರದ ಅಧಿಕಾರಾವಧಿ ಮುಗಿತಾ ಬರ್ತಾ ಇದೆ. ಹೊಸ ಸರ್ಕಾರವನ್ನ ನಿರ್ಧಾರ ಮಾಡುವ ಅಧಿಕಾರ ನೇರವಾಗಿ ಜನರ ಬಳಿಗೆ shift ಆಗತ್ತೆ. ಕಳೆದ ಮೂರು ಚುನಾವಣೆಗಳಲ್ಲಿ ಕರ್ನಾಟಕ ಮೂರೂ ಪಕ್ಷಗಳ ಅಧಿಕಾರವನ್ನ ನೋಡಾಗಿದೆ. ಹಾಗಿದ್ರೆ, ಈ ಸಲವೂ ಅದೇ ಮೂರು ಪಕ್ಷಗಳು, ಮತ್ತು ಅದೇ ಮೂರು ಪಕ್ಷಗಳ ನಾಯಕರು ಇದ್ದಾರಲ್ಲ, ಯಾರಿಗೆ ವೋಟ್ ಮಾಡಬೇಕು ಅನ್ನೋದನ್ನ ಕರ್ನಾಟಕದ ಸಾಮಾನ್ಯ ಮತದಾರ ಲೆಕ್ಕ ಹಾಕ್ತಾ ಇರ್ತಾನೆ.

ಯಶಸ್ವಿ ಐದು ವರ್ಷಗಳನ್ನ ಮುಗಿಸಿದ ಶ್ರೀಯುತ ಸಿದ್ದರಾಮಯ್ಯನವರ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕನಾಗಿ ಕೆಲಸ ಮಾಡಿದ್ಯಾ ? ನಾಡಿನ ಜನತೆ ಬಯಸಿದ್ದ ಆಡಳಿತದ ಗುರಿಯನ್ನ ತಲುಪಲಿಕ್ಕೆ ಸಾಧ್ಯ ಆಗಿದ್ಯಾ ? ಇದು ವಿಮರ್ಶೆಯ ಸಮಯ. ಮತ್ತಷ್ಟು ಓದು »

5
ಫೆಬ್ರ

ಕನ್ನಡ ಪರ ಹೋರಾಟವೆಂದರೆ ಕಾಂಗ್ರೆಸ್ ಪರ ಹೋರಾಟವೇ?

– ರಾಕೇಶ್ ಶೆಟ್ಟಿ

ಚಿತ್ರಕೃಪೆ  :- https://kannada.oneindia.com (ಕಲೆ : ಬಿ.ಜಿ. ಗುಜ್ಜಾರಪ್ಪ)

ಭಾವನಾತ್ಮಕವಾಗಿ ಜನರನ್ನು ಎತ್ತಿಕಟ್ಟುವುದು ರಾಜಕೀಯ ಪಕ್ಷಗಳಿಗೆ ಯಾವತ್ತಿಗೂ ಲಾಭದ ಬಾಬತ್ತು. ಈಗ ಮಹದಾಯಿ ವಿಷಯದಲ್ಲೂ ಆಗುತ್ತಿರುವುದೂ ಅದೇ. ಪ್ರಧಾನಿ ಮೋದಿಯವರ ಬಳಿ, ಗೋವಾ-ಮಹಾರಾಷ್ಟ್ರದ ಜೊತೆಗೆ ಸಂಧಾನದ ಮಧ್ಯಸ್ಥಿಕೆ ವಹಿಸುವಂತೆ ರಾಜ್ಯದ ಸರ್ವಪಕ್ಷ ನಿಯೋಗ ಹೋಗಿ ಕೇಳಿಕೊಂಡಾಗ, ಈ ವಿವಾದದ ಇತಿಹಾಸದ ಅರಿವಿದ್ದ ಅವರು, ಮಧ್ಯಸ್ಥಿಕೆ ನಿರಾಕರಿಸಿ ಮೊದಲು ಆಯಾ ರಾಜ್ಯಗಳಲ್ಲಿರುವ ಪಕ್ಷಗಳನ್ನು ಒಪ್ಪಿಸಿ ಎಂದಿದ್ದರು. ನಂತರ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ, ಗೋವಾದ ಬಿಜೆಪಿ ಸರ್ಕಾರವನ್ನು ಕರ್ನಾಟಕದ ಬಿಜೆಪಿಯವರು ಹಾಗೂ ಗೋವಾದ ವಿರೋಧ ಪಕ್ಷ ಕಾಂಗ್ರೆಸ್ಸನ್ನು ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ಸಿನವರು ಒಪ್ಪಿಸುವ ನಿರ್ಧಾರವಾಗಿತ್ತು. ಮತ್ತಷ್ಟು ಓದು »

17
ನವೆಂ

ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೩)

– ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.

ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)

ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಬ್ಬರು, ಅಪ್ಪಳಸ್ವಾಮಿ ಮತ್ತು ಆರೋಕ್ಯಸ್ವಾಮಿ ಎಂಬ ಅಧಿಕಾರಿಗಳ ಹುನ್ನಾರದಲ್ಲಿ ಸಹ್ಯಾದ್ರಿಯ ಮಲೆ, ಇಳಿಜಾರು ಮತ್ತು ತಪ್ಪಲಿನ ಅರಣ್ಯವೆಲ್ಲ ಕೇರಳೀಯರ ವಶವಾದ ಪ್ರಸ್ತಾಪದೊಂದಿಗೆ ನಿರೂಪಣೆ ಮುಖ್ಯ ಮಜಲನ್ನು ತಲುಪುತ್ತದೆ. ಇದಕ್ಕೆ ಎರಡು ಮುಖ. ಒಂದು, ಅರಣ್ಯ ನಾಶ ಇನ್ನೊಂದು, ಸ್ಥಳೀಯರಿಗಾಗುವ ವಂಚನೆ. ಈ ಹಿಂದೆ ಹೇಳಿದ ಸೌಂದರ್ಯ, ಪರಿಪೂರ್ಣತೆ, ಪಂಥಾಹ್ವಾನ ಈ ಯಾವ ಸೆಲೆ, ಸೆಳೆತವೂ ಇಲ್ಲದ, ಲಾಭಕೋರತನವೊಂದೇ ಮಾರ್ಗದರ್ಶಿಯಾಗಿರುವ ರೂಕ್ಷ ಪ್ರಪಂಚದ ಒಂದು ಬೀಭತ್ಸ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಕಾರಂತರು ಬಳಸುವ ಅವರ ಇಷ್ಟದ ಪದ `ಚೆಲುವು’ ಒಮ್ಮೆಯೂ ಈ ಕಾದಂಬರಿಯಲ್ಲಿ ಬಂದಿಲ್ಲ. ಪರಿಸರ ನಾಶದ ಜತೆಗೆ ಹೊರಗಿನ ಜನರ ಅವ್ಯಾಹತ ನುಸುಳುವಿಕೆಯಿಂದ ಜನಸಂಖ್ಯಾನುಪಾತ demography, ಏರುಪೇರಾಗಿ ಸಾಂಸ್ಕೃತಿಕ ಅವನತಿಯನ್ನೂ ಕಾಣುತ್ತೇವೆ. ನಿಸರ್ಗವೆಂದರೆ ವಿಶ್ವಾತ್ಮಕ ವ್ಯಕ್ತಿತ್ವವೆಂಬ ಭಾವ ಅಳಿದು ಅದು ಕೇವಲ ಒಂದು ಕಚ್ಚಾವಸ್ತುಗಳ ಮಂಡಿ ಎಂದಾಯಿತು. ಮತ್ತಷ್ಟು ಓದು »

14
ನವೆಂ

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

– ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

1914 ರಲ್ಲಿ ಮೈಸೂರಿನ ಮಹರಾಜರಾದ ನಾಲ್ಮಡಿ ಕೃಷ್ಣರಾಜ ಒಡೆಯರ ಸೈನ್ಯದಲ್ಲಿ ಒಂದು ವಿಶೇಷ ಅಶ್ವಾರೂಢರ ದಳವಿತ್ತು. 29 ಸೈನ್ಯಾಧಿಕಾರಿಗಳ, 444 ಅಶ್ವಯೋಧರೊಂದಿಗೆ 526 ಶ್ರೇಷ್ಠ ಅರಬ್ಬೀ ಕುದುರೆಗಳ ಈ ಪಡೆಗೆ ವಿಶೇಷ ಗೌರವವಿತ್ತು. ಆಗಾಗಲೇ ಫಿರಂಗಿಗಳ, ಮಷೀನುಗನ್ನುಗಳ ಆಗಮನವಾಗಿ, ಕುದುರೆಗಳ ನಾಗಾಲೋಟದ, ಖರಪುಟದ ಶಬ್ದದ ಕಾಲ ಮುಗಿದೇ ಬಿಡ್ತೇನೋ ಎನ್ನುವ ಸಮಯವದು. ಹೈದ್ರಾಬಾದಿನ ನಿಜಾಮರ ಮತ್ತು ರಾಜಾಸ್ಥಾನದ ರಾಜರ ಸೈನ್ಯಗಳನ್ನು ಹೊರತು ಪಡಿಸಿದರೆ ಬೇರೆಲ್ಲೆಡೂ ಆಶ್ವಾರೂಢದ ದಳವೇ ಇರಲಿಲ್ಲ. ಮತ್ತಷ್ಟು ಓದು »

9
ನವೆಂ

ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)

ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.

ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)

ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರ ಮನುಷ್ಯನಿಗೆ ಪಂಥಾಹ್ವಾನವನ್ನು ನೀಡುವಂತದ್ದು. ಪರಿಸರಕ್ಕೆ ಶರಣಾಗಿಯೇ ಪರಿಸರದ ಹಲವು ಘಟಕಗಳನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯ. ಪ್ರಜ್ಞಾಪೂರ್ವಕವಾಗಿ, ಮುಕ್ತ ಮನಸ್ಸಿನಿಂದ ಇದು ಸಾಧ್ಯವಾದರೆ ಬದುಕಿನ ಹಲವು ವಿಸಂಗತಿ-ವಿಕೃತಿಗಳನ್ನು ಸಂಯಮದಿಂದ ಸಹಿಸುವ ಶಕ್ತಿಯನ್ನು, ನಿರ್ವಿಕಾರಚಿತ್ತದಿಂದ ಬದುಕುವ ಸ್ಥೈರ್ಯವನ್ನು ಪಡೆಯುವುದನ್ನು ಕಾಣುತ್ತೇವೆ. ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರವನ್ನು ಗ್ರಹಿಸುವುದಕ್ಕಿಂತ ವ್ಯತಿರಿಕ್ತವಾಗಿ ಕಾಣುವುದು ಶನೀಶ್ವರನ ನೆರಳಿನಲ್ಲಿ ಕಾದಂಬರಿಯಲ್ಲಿ. ಇಲ್ಲಿನ ಕೆಲವು ಪಾತ್ರಗಳು, ಮುಖ್ಯವಾಗಿ ಕೃಷ್ಣ ಜೋಯಿಸರು, ಪ್ರಕೃತಿ ತಮ್ಮ ಬಯಕೆಯ ನೇರಕ್ಕೆ ಇರಬೇಕೆಂದು ಬಯಸುವವರು. ಭೂಸವೆತ, ಕಳೆ ಮುಂತಾದವುಗಳ ಬಗ್ಗೆ ಅವರ ಜತೆ ಮಾತನಾಡಿದ ನಿರೂಪಕ “ನಮ್ಮ ಯೋಚನೆಯಂತೆ ಲೋಕ ನಡೆಯಬೇಕಾದರೆ ಲೋಕವೆಲ್ಲ ನಮ್ಮ ಅಂಕೆಯಲ್ಲಿ ಇರಬೇಕು ಎಂದ ಹಾಗಾಯ್ತಲ್ಲವೇ?” ಎಂದು ಕೇಳುತ್ತಾನೆ. ಮತ್ತಷ್ಟು ಓದು »

27
ಆಕ್ಟೋ

ಕ್ರೂರಿಯೇ ನಮ್ಮ ನಾಡಿನ ಆದರ್ಶ ವ್ಯಕ್ತಿಯಾಗಬೇಕೆ ?

– ಡ್ಯಾನಿ ಪಿರೇರಾ

ಭಾರತದ ಇತಿಹಾಸದುದ್ದಕ್ಕೂ ವಿವಾದಾತ್ಮಕ ವ್ಯಕ್ತಿಗಳನ್ನು ಈ ರಾಷ್ಟ್ರದ ಜನಮಾನಸದಲ್ಲಿ ಸರ್ವಮಾನ್ಯ ಮಾಡಬೇಕೆಂಬ ಪ್ರಯತ್ನ ನಿರಂತರವಾಗಿ ನಡೆದಿದೆ. ಬದಲಾದ ವ್ಯವಸ್ಥೆಯಲ್ಲಿ ಆಳುವವರ ಮರ್ಜಿಗೆ ಸಿಲುಕಿದ ಇತಿಹಾಸಕಾರರು ಮಿಥ್ಯೆಯನ್ನು ಸತ್ಯವೆಂದು ತುರುಕುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಿದ್ಧಾಂತಗಳ ಮೂಸೆಯಲ್ಲಿ ದೇಶಭಕ್ತರು ಖಳನಾಯಕರಾದರೆ, ಖಳನಾಯಕರು ಬೆಳಗಾಗುವದರೊಳಗೆ ದೇಶಭಕ್ತರಾಗಿ ರೂಪಾಂತರಗೊಂಡಿದ್ದಾರೆ! ಈ ಹಿನ್ನೆಲೆಯಲ್ಲಿ ಎಂದಿನಂತೆ ಟಿಪ್ಪು ಜಯಂತಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಾಗಾಗಿ ಕೆಲವರಿಗೆ ಟಿಪ್ಪು ಜಾತ್ಯತೀತ ಮತ್ತೆ ಕೆಲವರಿಗೆ ಮತಾಂಧನಾಗಿ ಗೋಚರಿಸುತ್ತಿದ್ದಾನೆ. ಈ ದೇಶದ ವಿಚಿತ್ರವೇನೆಂದರೆ ಈ ದೇಶದಲ್ಲಿ ಮುಸಲ್ಮಾನರಲ್ಲೇ ಈ ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟ ಮಹನೀಯರಿದ್ದಾರೆ. ಅವರ್ಯಾರನ್ನೂ ಈ ಸಮಾಜ ಧರ್ಮದ ಹೆಸರಲ್ಲಿ ಗುರುತಿಸುವುದಿಲ್ಲ. ಅವರು ಇಸ್ಲಾಂ ಚಿಂತನೆಗಳೊಂದಿಗೆ ಬೆಳೆದರೂ ಬೆಳೆ ಬೆಳೆದಂತೆ ಅವರ ವಾಸ್ತವ ಬದುಕಿನ ತಮ್ಮ ಪ್ರಪಂಚವನ್ನು ವಿಶಾಲಗೊಳಿಸಿದ್ದರಿಂದ ಮುಸ್ಲೀಮೇತರರಲ್ಲೂ ಅವರು ಆದರಣೀಯರಾಗಿದ್ದಾರೆ. ದುರ್ದೈವವೆಂದರೆ ಅವರು ಹುಟ್ಟಿದ ಸಮಾಜದಲ್ಲೇ ಕಡೆಗಣಿಸಲ್ಪಟ್ಟಿರುವುದರಿಂದ ಈ ದೇಶದ ಸೆಕ್ಯುಲರ್ ಪಟ್ಟಿಯಲ್ಲಿ ಅವರಿಗೆ ಮಹತ್ವದ ಸ್ಥಾನವಿಲ್ಲ. ಮತ್ತಷ್ಟು ಓದು »