ಜಲ್ಲಿಕಟ್ಟು ಹೆಸರಿನಲ್ಲಿ ಹೊಸದೊಂದು ಸಂಸ್ಕೃತಿ ಸಾಧ್ಯವಿಲ್ಲ ಅಂತೀರಾ?
– ನರೇಂದ್ರ ಎಸ್ ಗಂಗೊಳ್ಳಿ
ನಾಡು ನುಡಿ ಸಂಸ್ಕೃತಿ ಸಂಪ್ರದಾಯದ ಅಭಿಮಾನದ ವಿಚಾರಕ್ಕೆ ಬಂದಾಗ ತಮಿಳುನಾಡಿನ ಜನರು ಯಾವತ್ತಿಗೂ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಇದು ಹೊಗಳಿಕೆ ಅಂತೇನೂ ಅಲ್ಲ. ನಮ್ಮ ಜನರ ಅಭಿಮಾನದ ನೆಲೆಯಲ್ಲಿ ನೋಡಿದಾಗ ಹಾಗನ್ನಿಸುವುದು ಸಹಜ. ಮೊನ್ನೆ ಮೊನ್ನೆ ಪ್ರಸ್ತುತ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ನಡೆದ ಹೋರಾಟದ ಪರಿ ಇದೆಯಲ್ಲಾ ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಪ್ರೇರಣೆಯನ್ನು ನೀಡುವಂತಾದ್ದು. ಅವರಿಗೊಂದು ಮೆಚ್ಚುಗೆಯಿರಲಿ. ಆದರೆ ಈ ಜಲ್ಲಿಕಟ್ಟು ವಿಚಾರವನ್ನು ತೀರಾ ಭ್ರಮೆಗಳಿಗೆ ಕಟ್ಟುಬೀಳದೆ ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುತ್ತೀರಾ? ಮತ್ತಷ್ಟು ಓದು
ಪಕ್ಷ ರಾಜಕಾರಣದ ಮರ್ಮಗಳು
ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ
ರಾಜಕಾರಣವೆಂಬುದು ಇಂದಿಗೆ ಪಕ್ಷಕ್ಕೆ ಮಾತ್ರ ಸೀಮಿತವಾಗಿ, ಪ್ರದೇಶಗಳು ಎರಡನೇ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕರ್ನಾಟಕ ಸರ್ಕಾರವೆಂಬುದು ಕಾಂಗ್ರೆಸ್ ಸರ್ಕಾರ ಎಂಬ ಮಿತಿಯ ಒಳಗೆ ಕಾರ್ಯನಿರ್ವಹಿಸಲು ಇಚ್ಚಿಸುತ್ತದೆಯೇ ಹೊರತು ರಾಜ್ಯ ಸರ್ಕಾರವಾಗಿ ಅಲ್ಲ. ಇದು ಕಾಂಗ್ರೆಸ್ ಪಕ್ಷದ ಮಿತಿ ಎಂದು ಭಾವಿಸದೆ ಆಡಳಿತಕ್ಕೆ ಬರುವ ಬಹುತೇಕ ಪಕ್ಷಗಳ ಹಣೆಬರಹವಾಗಿದೆ. ಆದ್ದರಿಂದ ಸರ್ವತೋಮುಖ ಅಭಿವೃದ್ಧಿಯ ಬದಲು ಭಾಗಶಃ ಅಭಿವೃದ್ಧಿಯ ಕಾರ್ಯಚಟುವಟಿಕೆಗಳನ್ನು ಸರ್ಕಾರಗಳು ಕೈಗೆತ್ತಿಕೊಳ್ಳುತ್ತವೆ. ಹಾಗಾಗಿ ತುಷ್ಟೀಕರಣದ ರಾಜಕಾರಣ ಹೆಚ್ಚಾಗಿ ಇಂದು ಕಾಣಬಹುದಾಗಿದೆ. ಮತ್ತಷ್ಟು ಓದು
ಪ್ರತಿಭಟನೆಯನ್ನೂ ಅಪರಾಧವನ್ನೂ ಏಕೆ ಸಮೀಕರಿಸುತ್ತೀರಿ ಮಾಧ್ಯಮಗಳೇ?
– ವಿನಾಯಕ ಹಂಪಿಹೊಳಿ

ದೆಹಲಿಗೂ ಹರಿಯಲಿ ಕಾವೇರಿ; ಇಲ್ಲದೇ ಹೋದರೆ ಸೋಲುವಿರಿ
-ರಾಕೇಶ್ ಎನ್ ಎಸ್
ಗಂಗಾ, ಯಮುನಾ ನದಿಗಳ ಹೆಸರು ಕೇಳಿದರೆ ನಿಮಗೆ ಯಾವುದಾದರೂ ರಾಜ್ಯದ ನೆನಪು ಆಗುತ್ತದೆಯೇ ಎಂದು ಹಿರಿಯ ಪತ್ರಕರ್ತರೊಬ್ಬರು ಕೇಳಿದರು. ನಾನು ಅವಾಕ್ಕಾದೆ. ಗಂಗಾ ನದಿಯೂ ಉತ್ತರಾ ಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಗಳಲ್ಲಿ ಜೀವ ನದಿಯಾಗಿ ಹರಿಯುತ್ತದೆ. ಉತ್ತರಾ ಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿಗಳಿಗೆ ಯಮುನೆಯ ಜೀವದಾಯಿ. ಮಾತು ಮುಂದುವರಿಸಿದ ಅವರು ನನಗೆ ಕಾವೇರಿ ಅಂದರೆ ತಮಿಳುನಾಡಿನ ನೆನಪಾಗುತ್ತದೆ ಎಂದರು. ಹೌದು, ಕಾವೇರಿ ನದಿ ಸಂಪೂರ್ಣವಾಗಿ ತಮಿಳುನಾಡಿಗೆ ಸೇರಿದಾಗಿದ್ದು, ಕರ್ನಾಟಕ ಸುಮ್ಮನೆ ಕಿರಿಕ್ ಮಾಡುತ್ತಿದೆ ಎಂಬ ಭಾವನೆ ಕರ್ನಾಟಕದ ಹೊರಗೆ ಮಡುಗಟ್ಟಿದೆ ಎಂಬುದನ್ನು ಅವರು ನನಗೆ ಸೂಚ್ಯವಾಗಿ ಮನದಟ್ಟು ಮಾಡಿಕೊಟ್ಟಿದ್ದರು.

ಕೈಲಾಗದ ರಾಜಕಾರಣಿಗಳ ಕೊಲವೆರಿ, ಕನ್ನಡಿಗರ ಜೀವನಾಡಿ ಕಾವೇರಿ
– ರಾಕೇಶ್ ಶೆಟ್ಟಿ
ಅವತ್ತು ಬೆಳ್ಳಂಬೆಳಗ್ಗೆ ತಮ್ಮ ಹಿಂಬಾಲಕರ ಹಿಂಡು,ಕ್ಯಾಮೆರಾ ದಂಡಿನೊಂದಿಗೆ ಮೀಡಿಯಾ ಡಾರ್ಲಿಂಗ್ ಕಾನೂನು ಸಚಿವ ಸುರೇಶ್ ಕುಮಾರ್, ಗೃಹ ಸಚಿವ ಅಶೋಕ್ ಬೆಂಗಳೂರಿನಿಂದ ಗುಳೆ ಹೊರಟಿದ್ದ ಅಸ್ಸಾಂ ಜನರನ್ನು ಸಂತೈಸಲು ರೈಲ್ವೇ ನಿಲ್ದಾಣಕ್ಕೆ ಹೋಗಿ ನಿಂತಿದ್ದರು.ಆದರೆ ಈಗ ನೋಡಿ ಕಳೆದ ಇಪ್ಪತ್ತು ದಿನದಿಂದ ಕಾವೇರಿಕೊಳ್ಳದ ರೈತರು ಕಣ್ಣೀರಿಡುತಿದ್ದಾರೆ.ಬಂದ್,ಹರತಾಳಗಳಿಂದ ರಾಜ್ಯದ ಕಾನೂನು ಹದಗೆಡುತ್ತಿದೆ ಆದರೆ ಮಾನ್ಯ ಕಾನೂನು ಸಚಿವರು ನಾಪತ್ತೆಯಾಗಿದ್ದಾರೆ…! ಈ ನಡುವೆ ಗೃಹ ಸಚಿವರು ಅಸ್ಸಾಂಗೆ ಹೋಗಿದ್ದಾರಾ? ತಮಿಳುನಾಡಿಗೆ ಹೋಗಿ ಜಯಲಲಿತಾಗೂ ವಸ್ತುಸ್ಥಿತಿ ತಿಳಿಸಬಹುದಿತ್ತಲ್ಲಾ,ಯಾಕೆ ಹೋಗಲಿಲ್ಲ?
ಸುದ್ದಿ ಮಾಡಲು ಇದೇನು “ಭಾರತ”ದ ವಿಷಯವೋ ಅಥವಾ ಅವರ ಸಂಘ ಪರಿವಾರದ “ದೇಶ ಭಕ್ತಿ”ಯ ವಿಷಯವೋ ಅಲ್ಲವಲ್ಲ.ಇದು ಬರಿ ಕಾವೇರಿಯ ವಿಷ್ಯ,ಇದು ಕರ್ನಾಟಕದ ಜನತೆಯ ಪ್ರಾದೇಶಿಕತೆಯ ಸಂಕುಚಿತತೆಯ ಹೋರಾಟ ಅನ್ನಿಸರಬೇಕು.ಒಂದೆಡೆ ಇಂತ ದೇಶಭಕ್ತ ಕಾನೂನು ಸಚಿವ.ಮತ್ತೊಂದೆಡೆ ಸುಪ್ರೀಂ ಕೋರ್ಟ್ ಮುಂದೆ ನಿಂತು ೧೦ ಟಿಎಂಸಿ ನೀರು ನಾವೇ ಕೊಡ್ತೀವಿ ಅಂತ ಮುಂಚಿತವಾಗಿ ಬರೆದು ಕೊಟ್ಟ ಜಲಸಂಪನ್ಮೂಲ ಸಚಿವ ಮತ್ತು ಇಂತ ಎಡವಟ್ಟು ಸಚಿವರಿಗೊಬ್ಬ ಕಳಸವಿಟ್ಟ ಮುಖ್ಯಮಂತ್ರಿ.
ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಪ್ರಧಾನಿ ತೀರ್ಪನ್ನು ವಿರೋಧಿಸಿ, ಕುರ್ಚಿ ಬೇಕಾದರೂ ಬಿಡುತ್ತೇನೆ, ಕಾವೇರಿ ಬಿಡಲಾರೆ ಅಂದ ಶೆಟ್ಟರ್ ಮುಖಾಂತರ ಒಬ್ಬ ಹೀರೊನನ್ನು ಹುಡುಕಲು ರಾಜ್ಯದ ರೈತರು ಕನಸು ಕಾಣುತಿದ್ದರು.ಆದರೆ ಅವರಿಗೆ ಕಾವೇರಿಗಿಂತ ಕುರ್ಚಿಯೇ ಹೆಚ್ಚಾಯಿತು ನೋಡಿ.ರಾತ್ರೋ ರಾತ್ರಿ ನೀರು ಹರಿಸಲು ಶುರು ಮಾಡಿದ್ದಾರೆ.ಹೀರೊ ಆಗೋದು ಬಿಡಿ ಕಡೆ ಪಕ್ಷ ಜೀರೊ ಆದರು ಅಂತೇಳಿದರೆ, ಅದು ನಾವು ಆ “ಜೀರೊ” ಅನ್ನೋ ಪದಕ್ಕೆ ಅವಮಾನ ಮಾಡಿದಂತೆ. ಇಡೀ ರಾಜ್ಯ ಬಂದ್ ಮಾಡಿ ಹೊತ್ತಿ ಉರಿಯುತಿದ್ದರೆ ಮಾನ್ಯ ಮುಖ್ಯಮಂತ್ರಿಗಳು ಪೋಲಿಸ್ ಸರ್ಪಗಾವಲಿನೊಂದಿಗೆ ಭದ್ರವಾಗಿ ಮನೆಯಲ್ಲಿ ಕುಳಿತಿದ್ದಾರೆ, ರೋಮ್ ಹತ್ತಿ ಉರಿಯುತಿದ್ದಾಗ ಪಿಟೀಲು ಕುಯ್ಯುತಿದ್ದ ನೀರೋನಂತೆ…!
ಬೆಂಗಳೂರು ಕನ್ನಡಿಗರಿಗೊಂದು ಬಹಿರಂಗ ಪತ್ರ
-ಭರತ್ ಬಿಕೆ
ಬೆಂಗಳೂರಲ್ಲೀ ಇದೀರಾ ? ಬೆಂಗಳೂರಿಗೆ ಬಂದ್ರಾ ?? ಸಂತೋಷ 🙂 ಬೆಂಗಳೂರಲ್ಲೇ ಹುಟ್ಟೀ, ಬೆಂಗಳೂರಲ್ಲೇ ಬೆಳೆದ್ರಾ ?? ತುಂಬಾ ಸಂತೋಷ 🙂
ಬೆಂಗಳೂರಲ್ಲೇ ಬದುಕಬೇಕು ಅಂತಾ ಇದೀರಾ ?? ಇನ್ನೂ ಸಂತೋಷ:)
ಆದರೇ ಇಲ್ಲಿನ ಭಾಷೆ, ನೆಲ, ಜಲ, ವ್ಯವಸ್ಥೆ, ಅವಸ್ಥೆ,ಸಮಸ್ಯೆಗಳ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ದೀರಾ? ಅದಕ್ಕಾಗಿ, ಅದಕ್ಕೆ ಸಂಬಂಧಿಸಿದ ವಿಚಾರಗಳಲ್ಲೀ ಭಾಗವಹಿಸಿದ್ದೀರಾ ??
ಸಾರ್ವಜನಿಕವಾಗಿ ?? ವಯಕ್ತಿಕವಾಗಿ ??
ಅಷ್ಟೆಲ್ಲಾ ಯಾಕೇ ಬಿಡಿ.. ಫೇಸ್ ಬುಕ್ ಪ್ರೋಫೈಲಲ್ಲೀ ಪೋಸ್ಟ್ ಮಾಡಿದಿರಾ ? ಸಂಬಂಧಿಸಿದ ಪೋಸ್ಟ್ ಗಳಿಗೇ ಲೈಕ್ ಮಾಡಿಡ್ಡೀರಾ ?? ಕಮೇಂಟ್ ಕೊಟ್ಟಿದ್ದೀರಾ ??