ವಿಷಯದ ವಿವರಗಳಿಗೆ ದಾಟಿರಿ

Posts from the ‘ಕ್ರೀಡೆ’ Category

22
ಆಕ್ಟೋ

ಮಯಾಂಕ್ ಅಗರ್ವಾಲ್ – ಚುಕ್ಕೆಗಳ ನಡುವೆಯ ಚಂದ್ರಮ

– ಪ್ರಶಾಂತ ಮಾಸ್ತಿಹೊಳಿ

ವಿಶಾಖಪಟ್ಟಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯದ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ , ಭಾರತ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿತು. ಎಲ್ಲ  ಕ್ರಿಕೆಟ್ ಪ್ರೇಮಿಗಳ ಗಮನ ಆ ಪಂದ್ಯದಲ್ಲಿ ರೋಹಿತ ಶರ್ಮ ಮೇಲೆ ನೆಟ್ಟಿತ್ತು . ಮೊದಲ ಬಾರಿಗೆ ರೋಹಿತ ಆರಂಭಿಕ್ ಆಟಗಾರರಾಗಿ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತಿದ್ದರು. ರೋಹಿತ  ಎರಡೂ ಇನ್ನಿಂಗ್ಸನಲ್ಲಿ ಶತಕ  ದಾಖಲಿಸುವ ಮೂಲಕ  ತಮ್ಮಲ್ಲಿಟ್ಟಿದ್ದ ನೀರಿಕ್ಷೆಯನ್ನು ಹುಸಿಗೊಳಿಸಲಿಲ್ಲ. ಇವೆಲ್ಲ ಘಟನೆಗಳ ನಡುವೆಯೇ ಮತ್ತೊಬ್ಬ ಆರಂಭಿಕ  ಆಟಗಾರರಾದ  ಮಯಾಂಕ್  ಅಗರ್ವಾಲ್ ಕೂಡ ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದ್ದರು। ಆದರೆ ರೋಹಿತ್ ಮೇಲಿನ ಎಲ್ಲರ ಗಮನದಿಂದಾಗಿ  , ಅಗರ್ವಾಲ್ ಅವರ ಮೇಲೆ ಒತ್ತಡ ಸ್ವಲ್ಪ ಕಡಿಮೆಯೇ ಆಗಿತ್ತು. ಮಾಯಾಂಕ್ ಶಾಂತವಾಗಿಯೇ ತಮ್ಮ ಜೀವನದ ಮೊದಲ ಶತಕ  ದಾಖಲಿಸಿದರು. ಶತಕವನ್ನು ದ್ವೀಶತಕವಾಗಿ  ಪರಿವರ್ತನೆ ಮಾಡಿ ದಾಖಲೆಯನ್ನೂ ಮಾಡಿದರು. ಈ ಮೂಲಕ  ಭಾರತ ಎದುರಿಸುತ್ತಿರುವ ಆರಂಭಿಕ ಆಟಗಾರರ ಸಮಸ್ಯೆಯನ್ನು ತಾತ್ಕಾಲಿಕ ಮಟ್ಟಿಗೆ ನಿವಾರಿಸಿದರು ಎಂದೇ ಹೇಳಬಹುದು.

ಮಯಾಂಕ್  ಅಗರ್ವಾಲ್ ಮತ್ತು ರೋಹಿತ್ ಶರ್ಮ ಅವರ ಕ್ರಿಕೆಟ್ ಜೀವನದ ಬಗ್ಗೆ ಹಲವು ಸಾಮ್ಯತೆಗಳಿವೆ. ಸಾಕಷ್ಟು ಪ್ರತಿಭೆ ಎದ್ದರೂ ಕೂಡ ಆರಂಭದ ದಿನಗಳಲ್ಲಿ ರೋಹಿತ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿರಲಿಲ್ಲ. ಇದರಿಂದ ತಂಡದಲ್ಲಿ ಅವರ ಸ್ಥಾನ ಭದ್ರವಾಗಿರಲಿಲ್ಲ. ಆಯ್ಕೆ ಸಮೀತಿ ರೋಹಿತಗೆ ಹಲವು ಅವಕಾಶಗಳನ್ನು ನೀಡಿದ ನಂತರ ತಮ್ಮ ಲಯ ಕಂಡುಕೊಂಡರು. ಮಯಾಂಕ್ರ ಮೊದಲ ದರ್ಜೆಯ ವೃತ್ತಿ ಜೀವನ ಕೂಡ ಹಲವು  ಏಳುಬೀಳುಗಳನ್ನು ಕಂಡಿದೆ. ಅವರಿಂದ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಬಂದಿದ್ದು ಕಡಿಮೆಯೇ. ಉತ್ತಮವಾಗಿಯೇ ಆಟ ಆರಂಭಿಸುತಿದ್ದ ಮಯಾಂಕ್ ಅಷ್ಟೇ ವೇಗವಾಗಿ ವಿಕೆಟ್ ಒಪ್ಪಿಸುತ್ತಿದ್ದರು. ಆದ್ದರಿಂದ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗದೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುತಿದ್ದರು.

ಮತ್ತಷ್ಟು ಓದು »

11
ಡಿಸೆ

ಬಾರ್ಡರ್-ಗವಾಸ್ಕರ್ ಸರಣಿ : ಅಂದು – ಇಂದು!

– ಸುಜಿತ್ ಕುಮಾರ್

ಸ್ಥಳ : ಕೊಲ್ಕತ್ತಾ. ಮಾರ್ಚ್ 15, 2001.

ಮೊದಲ ಇನ್ನಿಂಗ್ಸ್ :
ಆಸ್ಟ್ರೇಲಿಯ : 445/10
ಭಾರತ : 212/10

ಎರಡನೇ ಇನ್ನಿಂಗ್ಸ್ 😦 ಫಾಲೋ ಆನ್ )
ಭಾರತ : 657/7 (D)
ಆಸ್ಟ್ರೇಲಿಯ : 171/10

556780-vvs-laxman-rahul-dravid-2000-01-1495913138-800ಆ ದಿನದ ಸೂರ್ಯ ಪಶ್ಚಿಮದಲ್ಲಿ ಮರೆಯಾಗುತ್ತಾ ಕ್ರಿಕೆಟ್ ಲೋಕದ ಮಹಾ ಅಚ್ಚರಿಯೊಂದಕ್ಕೆ ಸಾಕ್ಷಿಯಾದನು. ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಆ ಟೆಸ್ಟ್ ಭಾರತದ ಪಾಲಿಗಂತೂ ವಿಶ್ವಕಪ್ನನ್ನೇ ಗೆದ್ದು ಬೀಗಿದ ಅನುಭವವನ್ನು ನೀಡಿತು. ಅಂದು ಕೋಲ್ಕತ್ತದ ಆಗಸ ರಂಗು ರಂಗಿನ ಪಟಾಕಿಗಳಿಂದ ಶೃಂಗಾರಗೊಳ್ಳುತ್ತಿದ್ದರೆ ಇತ್ತ ಕಡೆ ಇಡೀ ದೇಶವೇ ಹಬ್ಬದ ವಾತಾವರಣವೇನೋ ಎಂಬ ಸಂಭ್ರಮದಲ್ಲಿ ನಲಿಯಿತು. V V S ಲಕ್ಷ್ಮಣ್, ಹರ್ಭಜನ್ ಸಿಂಗ್ ಹಾಗು ರಾಹುಲ್ ದ್ರಾವಿಡ್ ಅಂದು ಖಾನ್, ರೋಷನ್ ಹಾಗು ಬಚ್ಚನ್ ರೆಲ್ಲರನ್ನೂ ಹಿಂದಿಕ್ಕಿ ದೇಶದ ಜನಮಾನಸದಲ್ಲಿ ಹೀರೋಗಳಾಗಿಬಿಟ್ಟರು. ಒಟ್ಟು 557 ರನ್ಗಳು ಹಾಗು 13 ವಿಕೆಟ್ಗಳ ಈ ಮೂವರ ಆಟ ಅಂದು ವಿಶ್ವ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬ ಸ್ಲೋ ಪಾಯಿಸನ್ನಿಂದ ನೇಪಥ್ಯಕ್ಕೆ ಸೇರುತ್ತಿದ್ದ ಭಾರತೀಯ ಕ್ರಿಕೆಟ್ನ ಪುನರ್ಜನ್ಮಕ್ಕೆ ಕಾರಣವಾಯಿತು. ಹೈಡೆನ್, ಲ್ಯಾಂಗರ್, ಪಾಂಟಿಂಗ್, ವಾ ಬ್ರದರ್ಸ್, ಗಿಲ್ಕ್ರಿಸ್ಟ್, ವಾರ್ನ್, ಗಿಲ್ಲೆಸ್ಪಿ, ಮೆಗ್ರಾತ್ ಎಂಬ ಕ್ರಿಕೆಟ್ ದಂತಕತೆಗಳೇ ತುಂಬಿದ್ದ ತಂಡವೊಂದನ್ನು ಫಾಲೋ ಆನ್ ನ ಹೊರತಾಗಿಯೂ ಸಿನಿಮೀಯ ರೀತಿಯಲ್ಲಿ ಸೋಲಿಸುವುದು ಅಂದಿನ ಕಾಲಕಷ್ಟೆ ಅಲ್ಲದೆ ಇಂದಿಗೂ ಸಹ ಸಾಮಾನ್ಯದ ಮಾತಲ್ಲ. ಮೊದಲ ಟೆಸ್ಟ್ ನಲ್ಲಿ ಸೋತು ಎರಡನೇ ಟೆಸ್ಟನ್ನು ಇಲ್ಲಿ ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಗೆದ್ದ ಭಾರತ ಅದೇ ಆತ್ಮವಿಶ್ವಾಸದಲ್ಲಿ ಮೂರನೆಯ ಹಾಗು ಅಂತಿಮ ಟೆಸ್ಟನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತು. ಆ ಮೂಲಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕಾಂಗರೂಗಳ ಮೂರು ದಶಕದ ಕನಸಿಗೆ ತಣ್ಣಿರೆರಚಿತು! ಮತ್ತಷ್ಟು ಓದು »

2
ಮಾರ್ಚ್

ಅವರು ಅಂಧರು ಅಂತ ಒಂದು ಕ್ಷಣಕ್ಕೂ ಅನ್ನಿಸಲಿಲ್ಲ..!

– ನರೇಂದ್ರ ಎಸ್ ಗಂಗೊಳ್ಳಿ.

Indian blind cricket team wins world cupಹೌದು ಅವತ್ತು ಫೆಬ್ರವರಿ 12. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುಮಾರು 15000ಕ್ಕೂ ಅಧಿಕ ಸಂಖ್ಯೆ ಪ್ರೇಕ್ಷಕರು ನೆರೆದಿದ್ದರು. ಅದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತ್ತು. ಅವರೆಲ್ಲರ ತುಂಬು ಹೃದಯದ ಪ್ರೋತ್ಸಾಹದ ನಡುವೆ ನಮ್ಮ ಭಾರತದ ಅಂಧರ ಕ್ರಿಕೆಟ್ ತಂಡ ಸಾಂಪ್ರದಾಯಿಕ ಪ್ರತಿಸ್ಫರ್ಧಿ ಪಾಕಿಸ್ತಾನವನ್ನು ಬಗ್ಗುಬಡಿದು ಸತತ ಎರಡನೇ ಬಾರಿಗೆ ಟಿ-20 ವಿಶ್ವಕಪ್ ನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಇಡೀ ಪಂದ್ಯದ ರೋಚಕತೆ ಎನ್ನುವುದು ಯಾವ ವಿಶ್ವ ಕಪ್ ಪಂದ್ಯಕ್ಕೂ ಕಡಿಮೆ ಇರಲಿಲ್ಲ. ಮತ್ತಷ್ಟು ಓದು »

2
ಫೆಬ್ರ

ಸಾಗುವ ಹಾದಿ ದುರ್ಗಮವಾಗಿದ್ದರೇನು.. ಸಾಧಿಸುವ ಛಲವಿದ್ದಾಗ..!

– ಸುರೇಶ್ ಕುಮಾರ್ ಎಂ.ಆರ್

i3f4urಜಗತ್ತು ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ, ಟೆನಿಸ್ ಅಂಗಳಕ್ಕಿಳಿದರೆ ಸೋಲಿನ ಮುಖವನ್ನು ನೋಡಲೇಬಾರದು ಎಂಬಂತಹ ಆತ್ಮವಿಶ್ವಾಸ. ಎದುರಾಳಿ ಆಟಗಾರ್ತಿಯ ಬಿರುಸಿನ ಹೊಡೆತಗಳನ್ನು ಲೀಲಾಜಾಲವಾಗಿ ರಿಟರ್ನ್ ಮಾಡುವ ಈಕೆಯದು ಅಂತಿಂತಹ ಶೈಲಿಯಲ್ಲ. ಇವಳಿಗೆ ಇವಳೇ ಸಾಟಿ, ಇವಳ ಹೊಡೆತಗಳನ್ನು ಮಹಿಳಾ ಆಟಗಾರ್ತಿಯರ ಪೈಕಿ ಅತೀ ಬಲಿಷ್ಠ ಹೊಡೆತಗಳು ಎಂದು ಕರೆಯುವುದುಂಟು. ರಷ್ಯಾದ ಮಾರಿಯಾ ಶಾರಪೋವಳ ಹೊಡೆತಗಳಿಗೂ ಬಿರುಸಿನ ಹೊಡೆತಗಳಿವಳವು. ಇವಳ ಅಕ್ಕ ವೀನಸ್ ವಿಲಿಯಮ್ಸ್ ಕೂಡ ಅವಳ ಆಟಕ್ಕೆ ಸಾಟಿಯಲ್ಲ (ಸಾಂದರ್ಭಿಕ). ಅವಳೇ ಸೆರೆನಾ ಜಮೆಕಾ ವಿಲಿಯಮ್ಸ್. ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡ ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರಾಂಡ್ ಸ್ಲ್ಯಾಮ್ ಟೂರ್ನಿಯ ಮಹಿಳಾ ವಿಭಾಗದ ಜಯಶಾಲಿ ಈಕೆ, ಅದೂ ತನ್ನ ಅಕ್ಕನನ್ನೇ ಅಂತಿಮ ಹಂತದ ಪೈಪೋಟಿಯಲ್ಲಿ ಅತೀ ಸಲೀಸಾಗಿ ಸೋಲಿಸಿ 23ನೇ ಗ್ರಾಂಡ್‌ ಸ್ಲ್ಯಾಮ್ (ಮಹಿಳಾ ಸಿಂಗಲ್ಸ್ ವಿಭಾಗ) ಎತ್ತಿಹಿಡಿದ ಛಲಗಾರ್ತಿ. ಮತ್ತಷ್ಟು ಓದು »

29
ಜನ

ಪ್ರಾಣಿಗಳ ಕ್ರೀಡೆ ಮತ್ತು ಐಡೆಂಟಿಟಿ

– ವಿನಾಯಕ ಹಂಪಿಹೊಳಿ

imagesಪೆಟಾ ಹಾಗೂ ಇನ್ನಿತರ ಪ್ರಾಣಿದಯಾ ಸಂಘದವರು ಪ್ರಾಣಿಗಳನ್ನು ಆಹಾರವಾಗಿ ಹೊರತುಪಡಿಸಿ ಉಳಿದೆಲ್ಲ ಕಾರ್ಯಸಾಧನೆಗಾಗಿ ಬಳಸಿಕೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸುತ್ತಾರೆ. ಅವುಗಳನ್ನು ಮೋಜಿಗಾಗಿ ಪಂದ್ಯಗಳಲ್ಲಿ ಬಳಸುವುದನ್ನು, ಮೆರವಣಿಗೆಯಲ್ಲಿ ಉಪಯೋಗಿಸುವುದನ್ನು, ಅವುಗಳ ಚರ್ಮದಿಂದ ಉಪಯೋಗಿ ವಸ್ತುಗಳನ್ನು ನಿರ್ಮಿಸುವುದನ್ನು, ಸರ್ಕಸ್ಸಿನಲ್ಲಿ ಪ್ರಾಣಿಗಳನ್ನು ಹೊಡೆದು ಪಳಗಿಸುವುದನ್ನು ವಿರೋಧಿಸುತ್ತಾರೆ. ಮೋಜಿಗಾಗಿ ಪ್ರಾಣಿಗಳನ್ನು ಹೊಡೆದೋಡಿಸುವ ಆಟಗಳನ್ನು, ಕೊಲ್ಲುವ ಆಚರಣೆಗಳನ್ನು, ನಿಷೇಧಿಸಬೇಕೆಂದು ಈ ಪ್ರಾಣಿದಯಾ ಸಂಘಗಳು ಪ್ರಯತ್ನಿಸುತ್ತವೆ. ಪ್ರಾಣಿದಯಾ ಸಂಘಗಳ ಈ ಕಾಳಜಿಯು ಜನಸಾಮಾನ್ಯ ಭಾರತೀಯರಿಗೆ ಮೇಲ್ನೋಟಕ್ಕೆ ಅರ್ಥವಾಗಿರುವಂತೆಯೇ ಭಾಸವಾಗುತ್ತದೆ. ಮತ್ತಷ್ಟು ಓದು »

22
ನವೆಂ

ಸ್ಫೂರ್ತಿ ದಾರಿಯ ದೀಪಗಳು

– ಶಮಂತ್ ಬಿ ಎಸ್

socialfeed-what-i-learned-was-that-these-athletes-were-not-disabled-they-were‘ಜೀವನವೇ ದುಃಖ’ ಎಂಬ ಬುದ್ಧನ ಮಾತನ್ನು, ನಮ್ಮ ದೇಶವನ್ನು ಪ್ರತಿನಿಧಿಸಿದ ‘ಪ್ಯಾರಾಲಂಪಿಕ್ಗಳು’ ಗಂಭೀರವಾಗಿ ಪರಿಗಣಿಸಲಿಲ್ಲ. ಇವರ ಪ್ರತಿನಿತ್ಯದ ಜೀವನವೇ ಜ್ವಾಲೆಯ ಕೂಪವಾಗಿದ್ದರೂ, ಆತ್ಮಸ್ಥೈರ್ಯವನ್ನು ಮಾತ್ರ ಕಳೆದುಕೊಳ್ಳದಿರುವುದು ನಮ್ಮೆಲ್ಲರಿಗೂ ಸ್ಫೂರ್ತಿಯ ಸರಮಾಲೆಯೇ ಸರಿ. ಇತ್ತೀಚಿಗೆ ಮುಕ್ತಾಯಗೊಂಡ ಪ್ಯಾರಾಲಂಪಿಕ್ಸ್ ಸ್ಪರ್ಧೆಯಲ್ಲಿ ಭಾರತ ೪ ಪದಕಗಳನ್ನು ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ೪೩ನೇ ಸ್ಥಾನವನ್ನು ಪಡೆಯಿತು. ನಮ್ಮ ರಾಷ್ಟ್ರದಲ್ಲಿ ಕ್ರೀಡೆಗೆ ನೀಡುತ್ತಿರುವ ಅಲ್ಪ ಪ್ರೋತ್ಸಾಹಕ್ಕೆ ಹೋಲಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸ್ಥಾನವನ್ನು ನಾವು ಹೆಮ್ಮೆಯಿಂದಲೇ ಪರಿಗಣಿಸಬೇಕು. ಮತ್ತಷ್ಟು ಓದು »

5
ನವೆಂ

ಗಾಳಿಪಟ ಮತ್ತು ಆಲದ ಮರ

– ಗುರುರಾಜ ಕೋಡ್ಕಣಿ. ಯಲ್ಲಾಪುರ

ಗಲಿರಾಮ್ ನಾಥನ್ ಎನ್ನುವ ಗಲ್ಲಿಯಲ್ಲಿದ್ದ ಹಳೆಯ ಪಾಳುಬಿದ್ದ ಮಸೀದಿಯ ಸಂದಿಯೊಂದರಿಂದ ಟಿಸಿಲೊಡೆದು ವಿಶಾಲವಾಗಿ ಬೆಳೆದುಕೊಂಡಿತ್ತು ಆ ಆಲದಮರ. ಅದೇ ಮರದ ಟೊಂಗೆಯೊಂದಕ್ಕೆ ಸಿಕ್ಕಿಕೊಂಡಿತ್ತು ಅಲಿಯ ಗಾಳಿಪಟ. ಹರುಕು ಅಂಗಿಯನ್ನು ಧರಿಸಿದ್ದ ಅಲಿ, ಮರದ ಮೇಲೆ ಸಿಕ್ಕಿಬಿದ್ದಿದ್ದ ಪಟವನ್ನು ಬಿಡಿಸಿಕೊಳ್ಳಲು ಹಲವು ಬಾರಿ ವಿಫಲಪ್ರಯತ್ನ ನಡೆಸಿ ಕೊನೆಗೊಮ್ಮೆ ಹತಾಶನಾಗಿ ಕೈಚೆಲ್ಲಿದ್ದ. ಅಲ್ಲಲ್ಲಿ ಉರುಟುಕಲ್ಲುಗಳೆದ್ದು ಕಾಣುತ್ತಿದ್ದ ಕಿರಿದಾದ ಓಣಿಯಲ್ಲಿ ಬರಿಗಾಲಿನಲ್ಲಿ ಓಡುತ್ತ ತನ್ನ ತಾತನತ್ತ ತೆರಳಿದ. ಮನೆಯ ಹಿತ್ತಲಿನಲ್ಲಿ ನೀರವ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಸಣ್ಣ ಮಂಪರಿನ ನಡುವೆ ಹಗಲುಗನಸು ಕಾಣುತ್ತ ಕುಳಿತಿದ್ದ ತಾತನನ್ನು ಕಾಣುತ್ತಲೇ, ‘ಅಜ್ಜಾ, ನನ್ನ ಗಾಳಿಪಟ ಕಳೆದುಹೋಯಿತು’ ಎಂದು ಜೋರಾಗಿ ಕಿರುಚಿದ. ಮೊಮ್ಮಗನ ಕೂಗಿನಿಂದ ಮಂಪರು ಹಾರಿಹೋದ ಮುದಿಯ ನಿಧಾನವಾಗಿ ತನ್ನ ತಲೆಯನ್ನೆತ್ತಿದ. ಮದರಂಗಿಯ ಬಣ್ಣದಿಂದಾಗಿ ಕೆಂಚಗಾಗಿದ್ದ ತನ್ನ ಮುಪ್ಪಿನ ಗಡ್ಡವನ್ನೊಮ್ಮೆ ಸಾವಕಾಶವಾಗಿ ನೀವುತ್ತ, ‘ಪಟದ ನೂಲು ಕಿತ್ತು ಹೋಗಿತ್ತಾ..’? ಎಂದು ಮೊಮ್ಮಗನನ್ನು ಪ್ರಶ್ನಿಸಿದ. ಕಳಪೆ ಗುಣಮಟ್ಟದ ದಾರದಿಂದ ಹಾರಿಸಲ್ಪಟ್ಟ ಪಟವಿದ್ದಿರಬಹುದು ಎಂಬ ಊಹೆ ಆತನದ್ದು. ‘ಇಲ್ಲಾ ಅಜ್ಜ, ನೂಲು ಹರಿದಿಲ್ಲ, ಅದು ಆಲದ ಮರದ ಕೊಂಬೆಗೆ ಸಿಕ್ಕಿಬಿದ್ದಿದೆ’ ಎಂದುತ್ತರಿಸಿದ ಮೊಮ್ಮಗ. ಮತ್ತಷ್ಟು ಓದು »

11
ಜೂನ್

ಚುಟುಕು ಕ್ರಿಕೆಟ್ ನೈತಿಕತೆಯ ಕೊನೆಗುಟುಕು

-ರಾಕೇಶ್ ಎನ್ ಎಸ್
 
ಭಾರತ ೨೦೦೭ರಲ್ಲಿ ವಿಶ್ವ ಟೆಂಟಿ ಟ್ವೆಂಟಿ ಚಾಂಪಿಯನ್ ಆದ ಕುರುಹಾಗಿ ಮತ್ತು ಜೀ ಸಮೂಹದ ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಸಡ್ಡು ಹೊಡೆಯಲಿಕ್ಕಾಗಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಅಕಾಲದಲ್ಲಿ ಜನ್ಮ ತಾಳಿ ಐದು ವರ್ಷ ಸಂದಿದೆ. ’ಶುದ್ಧ ಕ್ರಿಕೆಟ್’ ಎಂಬುದು ಐಪಿಎಲ್‌ನ ಜಾತಕದಲ್ಲೇ ಬರೆದಿಲ್ಲ ಎಂಬುದು ಈ ಪಂಚ ವರ್ಷದಲ್ಲೆ ಸಾಬೀತಾಗಿದೆ.
ಭಾರತ ಟ್ವೆಂಟಿ-ಟ್ವೆಂಟಿ ವಿಶ್ವ ಚಾಂಪಿಯನ್ ಆದದ್ದು ಒಂದೇ ಐಪಿಎಲ್‌ನ ಉಗಮಕ್ಕೆ ಕಾರಣವಾಗಿರಲಿಲ್ಲ. ಭಾರತದಲ್ಲಿ ಕ್ರಿಕೆಟ್‌ನ ಏಕಸ್ವಾಮ್ಯ ಹೊಂದಿರುವ ಬಿಸಿಸಿಐಯ ಅಧಿಪತ್ಯಕ್ಕೆ ಜೀ ಸಮೂಹದ ಸುಭಾಶ್ ಚಂದ್ರ ಐಸಿಎಲ್‌ನ ಮೂಲಕ ಕೊಡಲಿಯೇಟು ನೀಡಿದಾಗ ತನ್ನ ಕ್ರಿಕೆಟ್ ಕೊಪ್ಪರಿಗೆ ಇನ್ನೊಬ್ಬರ ಪಾಲಾಗುವುದನ್ನು ಯಾವುದೇ ಬೆಲೆ ತೆತ್ತು ತಪ್ಪಿಸಬೇಕು ಎಂಬ ಬಿಸಿಸಿಐ ಯೋಚನೆಯೇ ಐಪಿಎಲ್‌ನ ತಳಪಾಯ. ಉಳಿದಂತೆ ಕ್ರಿಕೆಟಿಗರ ಉದ್ಧಾರ, ಮನರಂಜನೆ ಮುಂತಾದ ಬಿಸಿಸಿಐ
ಹೇಳಿಕೆಗಳು ಸುಮ್ಮನೆ ತೋರಿಕೆಯದ್ದು ಅಷ್ಟೆ.
 
ಟ್ವೆಂಟಿ-ಟ್ವೆಂಟಿ ನಿಂತಿರುವುದೇ ಹೊಡಿ ಬಡಿ ಸಿದ್ಧಾಂತದ ಮೇಲೆ. ಕ್ರಿಕೆಟ್‌ನ ಮೂಲ ಧರ್ಮಕ್ಕೆ ಇದು ವಿರುದ್ಧವಾದರೂ ಕಾಲ ಧರ್ಮಕ್ಕನುಗುಣವಾಗಿ ಈ ಸಂಸ್ಕ್ರತಿಯನ್ನು ಒಪ್ಪಿಕೊಂಡರೆ ಅದರಲ್ಲಿ ತಪ್ಪೇನಿಸಲಾಗದು. ಆದರೆ ಕ್ರಿಕೆಟ್ ಎಂಬ ಆಟ ಉದ್ದಿಮೆಗಳ ತೆಕ್ಕೆಗೆ ಸೇರಿಕೊಂಡಾಗ ಉಂಟಾಗುವ ಉತ್ಪಾತಗಳು ಮಾತ್ರ ಸಹ್ಯವಾಗಿಲ್ಲ. ಮನರಂಜನೆ ಮತ್ತು ವ್ಯಾಯಾಮ ಕ್ರೀಡೆಯ ಎರಡು ಕಣ್ಣುಗಳಿದ್ದಂತೆ. ಮನರಂಜನೆ ಆಡುವವನಿಗೆ ಮತ್ತು ನೋಡುವವನಿಗೆ ಹಾಗೆ ವ್ಯಾಯಾಮ ಆಡುವವನಿಗೆ ಸಿಗುತ್ತದೆ. ಆದರೆ ವೃತ್ತಿಪರ ಆಟಗಾರರಿಗೆ ಪ್ರತ್ಯೇಕವಾದ ವ್ಯಾಯಾಮವೇ ಇರುತ್ತದೆ. ನಮ್ಮಂತವರಿಗೆ ಮಾತ್ರ ಆಡುವುದೇ ವ್ಯಾಯಾಮ! ಅದ್ದರಿಂದ ಯಾವುದೇ ವೃತ್ತಿಪರ ಆಟಗಾರನಿಗೆ ಆತ ನಮ್ಮ ಮುಂದೆ ನೀಡುವ ಪ್ರದರ್ಶನ ಆತನಿಗೆ ವ್ಯಾಯಾಮ ಮತ್ತು ಮನರಂಜನೆಯಾಗಿ ಮುಖ್ಯವಾಗುವುದಕ್ಕಿಂತ ನೋಡುಗನಿಗೆ ಅದು ನೀಡುವ ಮನರಂಜನೆಯಷ್ಟೆ ಪ್ರಮುಖವಾಗುತ್ತದೆ. ಐಪಿಎಲ್ ನಂತಹ ಕ್ರೀಡಾಕೂಟದಲ್ಲಿ ಒಬ್ಬ ಆಟಗಾರ ಎಷ್ಟು ಮನರಂಜನೆ ನೀಡಬಲ್ಲ ಎಂಬುದರ ಮೇಲೆ ಅತನ ಹಣದ ಜೋಳಿಗೆ ತುಂಬುತ್ತದೆ. ಅದ್ದರಿಂದ ಇಲ್ಲಿ ಒಬ್ಬ ಆಟಗಾರ ಪ್ರದರ್ಶಕನಾಗಿ ಮುಖ್ಯನಾಗುತ್ತಾನೆಯೇ ಹೊರತು ಆತನ ಕೌಶಲ್ಯಗಳಿಂದಾಗಿ ಅಲ್ಲ. ಮತ್ತಷ್ಟು ಓದು »
25
ಮೇ

ಐಪಿಎಲ್ 5 – ಈ ದುರಂತಕ್ಕೆ ಏನ್ ಅಂತೀರಿ?

– ಗಣೇಶ್ ಕೆ. ದಾವಣಗೆರೆ

ಆತ ಎಂಜಿನಿಯರಿಂಗ್ ಕಾಲೇಜು ಹುಡುಗ. ಕಾಲೇಜು ಫೀಸ್ ಕಟ್ಟು ಅಂತಾ 50,000 ಕೊಟ್ಟರು. ಆದರೆ, ಆತ ಐಪಿಎಲ್ ಬೆಟ್ಟಿಂಗ್ ಆಡಿ ಐವತ್ತನ್ನ ಲಕ್ಷ ಮಾಡಿಕೊಂಡರೆ ಹೇಗೆ ಅಂತಾ ಯೋಚಿಸಿ, ಬೆಟ್ಟಿಂಗೆ ಕಟ್ಟಿದ. ಪರಿಣಾಮ? ಅವರಪ್ಪ ಕಷ್ಟಪಟ್ಟು ವರ್ಷವೆಲ್ಲ ದುಡಿದ 50,000 ಯಾವನದೋ ಪಾಲಾಯಿತು. ಅವರ ಅಪ್ಪ ಅಮ್ಮ ಈಗ ಗೋಳಾಡ್ತಾ ಇದಾರೆ. ಇದು ನಾನು ಕಣ್ಣಾರೆ ಕಂಡ ಸತ್ಯ ಘಟನೆ.

ಒಂದೇ ಒಂದು ಬಾರಿ ಹುಡುಗರ ಪಿಜಿಗಳು, ಕಾಲೇಜು ಬಾಯ್ಸ್ ಹಾಸ್ಟೆಲ್ ಗಳು, ನಾಲ್ಕು ಜನ ಸೇರುವ ವೃತ್ತಗಳು ಎಲ್ಲವನ್ನ ಒಮ್ಮೆ ಅಡ್ಡಾಡಿ ಬನ್ನಿ. ನಿಮಿಷ ನಿಮಿಷಕ್ಕೂ ಬೆಟ್ಟಿಂಗ್. ಐನೂರಕ್ಕೆ D ಅನ್ನೋ ಕೋಡ್ ವರ್ಡ್. ಸಾವಿರಕ್ಕೆ S ಅನ್ನೋ ಕೋಡ್ ವರ್ಡ್. 1 D ಅಂದ್ರೆ 500. 2 D ಅಂದ್ರೆ 1000, 1 S ಅಂದ್ರೆ 1000. 2 S ಅಂದ್ರೆ 2000 ಹಿಂಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರಲ್ಲೂ ಫ್ಯಾನ್ಸಿ ಅನ್ನೋ ಆಟ ಬೇರೆ ಇದೆ. ಪ್ರತಿ ಬಾಲ್ ಮೇಲೆ ಬೆಟ್ಟಿಂಗ್. ಈ ಬಾಲ್ ಫೋರ್ ಹೋಗುತ್ತೆ. ಬೆಟ್ ಕಟ್ತೀಯಾ? ಹಳ್ಳಿಯಲ್ಲಿ ಕೂತಿರುವ ಬುಕ್ಕಿಯ ದನಿ. ಈತ ಇಲ್ಲಿಂದ 2 S ಅಂದ್ರೆ ಎರಡು ಸಾವಿರ ಬೆಟ್ಟಿಂಗ್. ಬಂತು ಅಂದ್ರೆ 4000. ಹೋಯ್ತು ಅಂದ್ರೆ 2000 ಖತಂ. ಸುಮ್ನೆ ಒಂದು ಆಟ ಆಡಿ ರೊಕ್ಕ ಮಾಡಿಕೊಂಡು ಹೋಗುವಂತಿಲ್ಲ. ಸೀಸನ್ ಮುಗಿಯುವವರೆಗೂ ಆಡಬೇಕು. ಹೊಸಬರಾದರೆ  50,000 ಠೇವಣಿ ಕೂಡಾ ಇಡಬೇಕು. ಅಮೇಲೆ ಆಟ.

ಇಷ್ಟೆಲ್ಲಾ ಮಾತುಕತೆಗಳು ನಾಲ್ಕೈದು ಸೆಕೆಂಡುಗಳಲ್ಲಿ ಆಗುವಂಥದ್ದು. ಬುಕ್ಕಿಗಳು ಜಾಸ್ತಿ ಹೊತ್ತು ಮಾತಾಡಲ್ಲ. ನಿರ್ಧರಿಸಲು ನಿಮಿಷಗಟ್ಲೇ ಟೈಮ್ ಕೂಡಾ ಕೊಡಲ್ಲ. ಬರೀ Guess work ಮೇಲೆ ಹೌದು ಇಲ್ಲಾ ಅನ್ಬೇಕು.

ಮತ್ತಷ್ಟು ಓದು »

5
ಜುಲೈ

ಚಿನ್ನದ ಹುಡುಗಿಯ ಜೊತೆ ನಿಲ್ಲೋಣ…