ವಿಷಯದ ವಿವರಗಳಿಗೆ ದಾಟಿರಿ

Posts from the ‘ತಂತ್ರಾಂಶ / ಸಾಫ್ಟ್ ವೇರ್’ Category

13
ಏಪ್ರಿಲ್

ಸ್ಮಾರ್ಟ್ ಫೋನ್ ಬಗ್ಗೆ ನಮಗೆಷ್ಟು ಗೊತ್ತು?

– ಮುರಳಿಧರ್ ದೇವ್

ಇತ್ತೀಚಿಗೆ ಎಲ್ಲೆಡೆಯೂ ಸ್ಮಾರ್ಟ್ ಫೋನ್ ಗಳದ್ದೇ ಸುದ್ದಿ, ಬಹುತೇಕ ಎಲ್ಲ ದೊಡ್ಡ ದೊಡ್ಡ ಕಂಪನಿಗಳು ತಾವು ಸ್ಮಾರ್ಟ್ ಫೋನ್ ನಲ್ಲಿ ಇರಬೇಕೆಂದು ಬಯಸ್ತ ಇವೆ. ಅಲ್ಲದೆ ಗೂಗಲ್ ಎಂಬ ದೈತ್ಯ ಕಂಪನಿ android ಎನ್ನುವ ಆಪರಟಿಂಗ್ ಸಿಸ್ಟಮ್ ತಂದಮೆಲಂತೂ ಸ್ಮಾರ್ಟ್ ಫೋನ್ ಮಾರುಕಟ್ಟೆ ತುಂಬಾನೇ ವಿಸ್ತಾರವಾಗಿದೆ. ಗೂಗಲ್ ನ  android ಆಧಾರಿತ  ಹೊಸ ಸ್ಮಾರ್ಟ್ ಫೋನ್ ಗಳು  ಕೇವಲ ೪ ಸಾವಿರದಿಂದ  ಶುರುವಾಗಿ ೪೦ ಸಾವಿರದವರೆಗೂ ದೊರೆಯುತ್ತವೆ. ಹಣಕ್ಕೆ ತಕ್ಕಂತೆ ಮೊಬೈಲ್ ಪರದೆ, ವಿಶೇಷತೆಗಳು, ಕ್ಯಾಮರ ಸೌಲಭ್ಯ ಇರುತ್ತವೆ. ಈ ಸ್ಮಾರ್ಟ್ ಫೋನ್ ಗಳಲ್ಲಿನ ಮತ್ತೊಂದು ವಿಶೇಷ ಅಂದರೆ, ಬಳಕೆದಾರ ತನಗೆ ಬೇಕಾದ ಅಪ್ಲಿಕೇಶನ್ ಗಳನ್ನು ” android  ಮಾರ್ಕೆಟ್” ನಿಂದ  ತನ್ನ ಮೊಬೈಲ್ ನಲ್ಲಿ ಬಳಸಬಹುದು. ವಿವಿಧ ಆಟಗಳನ್ನು, ಸಾಮಾಜಿಕ ತಾಣಗಳ  ಅಪ್ಲಿಕೇಶನ್ ಗಳನ್ನು, ಬ್ಯಾಂಕಿಂಗ್  ಅಪ್ಲಿಕೇಶನ್ ಗಳನ್ನು ಮೊಬೈಲ್ ನಲ್ಲಿ ಬಳಸಬಹುದು. ಇದೆ ವಿಚಾರದಿಂದ  ಭಾರತದಲ್ಲೂ ಪ್ರತಿಯೊಬ್ಬರಿಗೂ ತಾವು ಒಂದು ಸ್ಮಾರ್ಟ್ ಫೋನ್ ತಗೊಂಡು ಸ್ಮಾರ್ಟ್ ಆಗಬೇಕೆಂಬ ಹಂಬಲ. ಅಲ್ಲದೆ  android  ಮಾರ್ಕೆಟ್ ನಲ್ಲಿ ಬಹಳಷ್ಟು ಉಚಿತವಾಗಿ ಬಳಸಬಹುದಾದ  ಅಪ್ಲಿಕೇಶನ್ ಗಳಿವೆ. ಫೋನ್ ಬೆಲೆಯೂ ಕೈಗೆಟಗುವ ದರದಲ್ಲೇ ಇದೆ, ಹೀಗಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರ ಕೈನಲ್ಲಿ ಇಂತಹ ಸ್ಮಾರ್ಟ್ ಫೋನ್ ಗಳನ್ನ ಕಾಣಬಹುದು.

ಬಹುತೇಕರಿಗೆ ಸ್ಮಾರ್ಟ್ ಫೋನ್ ನ ಉಪಯೋಗ ಏನು ಅಂತ ಗೊತ್ತಿಲ್ದೆ ಇದ್ರೂ ಸ್ಮಾರ್ಟ್ ಆಗಿರಬೇಕು ಅಂತ ಸ್ಮಾರ್ಟ್ ಫೋನ್ ತೊಗೋತ ಇದಾರೆ. ತಿಳಿದವರಿಗೂ ಸ್ಮಾರ್ಟ್ ಫೋನ್ ಗಳ ಬಗ್ಗೆ ಹಾಗು ಅದರಲ್ಲಿ ಉಪಯೋಗಿಸಬಹುದಾದ ಅಪ್ಪ್ಲಿಕೆಶನ್ ಗಳ ಗ್ಗೆ ಹೆಚ್ಚಾಗಿ ತಿಳುವಳಿಕೆ ಇರುವುದಿಲ್ಲ. ಇದರಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳು ಈ ಅಪ್ಪ್ಲಿಕೆಶನ್ ಲೋಕಕ್ಕೆ ನಿಧಾನವಾಗಿ ಕಾಲಿಡ್ತಾ ಇದಾರೆ. ಬಳಕೆದಾರನಿಗೆ ಯಾಮಾರಿಸಿ ಅವನ ಅರಿವಿಗೆ ಬರದಂತೆ ಆತನ ಮಾಹಿತಿಗಳನ್ನು ಕದಿಯುವ ಜಾಲಗಳು ನ್ಧಾನವಾಗಿ ಹುಟ್ತ್ಕೊಳ್ತಾ ಇವೆ. ಹಾಗು ಇದಕ್ಕೆಲ್ಲ ಬಳಕೆದಾರನಿಗೆ ಸ್ಮಾರ್ಟ್ ಫೋನ್ ಗಳು & ಅದರಲ್ಲಿ ಬಳಸಬಹುದಾದ ಅಪ್ಪಿಕೆಶನ್ ಗಳ ಬಗ್ಗೆ ಇರುವ ಕಡಿಮೆ ಜ್ಞಾನದಿಂದ ಹ್ಯಾಕರ್ ಗಳು ಸುಲಭವಾಗಿ ಸ್ಮಾರ್ಟ್ ಫೋನ್ ನಲ್ಲಿರುವ ಸ್ಮಾರ್ಟ್ ಜನರ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ.
ಮತ್ತಷ್ಟು ಓದು »

21
ಮಾರ್ಚ್

ನಿಮ್ಮ ಬ್ಲಾಗ್ ಪೂರ್ತಿ ಕನ್ನಡದಲ್ಲಿ

ಆತ್ಮೀಯ ಕನ್ನಡಿಗರೆ,
ಈಗ ನೀವು ನಿಮ್ಮ ಬ್ಲಾಗ್ ಅನ್ನು ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆ ಪೂರ್ತಿ ಕನ್ನಡದಲ್ಲೇ ನೋಡಬಹುದು. ಈಗ ನಿಮಗೆ ಗೂಗಲ್ ಈ ರೀತಿಯ ಅವಕಾಶವನ್ನು ಕಲ್ಪಿಸಿದೆ.gs->Language and Formatting

ಅಲ್ಲಿ Language ಕಾಲಂನಲ್ಲಿ ಕನ್ನಡ ಭಾಷೆಯನ್ನು ಆರಿಸಿಕೊಳ್ಳಿ.

ನಂತರ Save ಮಾಡಿ

ಗ್ಯಾಡ್ಜೆಟ್ ಗಳು ಬ್ಲಾಗಿಗೆ ಹೊರಗಿನವುಗಳಾಗಿರುವುದರಿಂದ ಅಲ್ಲಿ ನಿಮಗೆ ಕನ್ನಡ ಸಿಗುವುದಿಲ್ಲ.

ಈಗ ನಿಮ್ಮ ಬ್ಲಾಗ್ ಕನ್ನಡದಲ್ಲಿ ತಯಾರಾಗಿರುತ್ತದೆ.

ಕನ್ನಡ ಭಾಷೆಯನ್ನು ಸೇರಿಸಿರುವುದಕ್ಕೆ ನನ್ನ ಕಡೆಯಿಂದ ಗೂಗಲ್ ಗೆ ಒಂದು ಅಭಿನಂದನೆ

ಈ ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ 🙂

***************************************************************************

ಚಿತ್ರ ಕೃಪೆ: hackuadi.blogspot.in

15
ಮಾರ್ಚ್

ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ ಅನಾನಿಮಸ್ ಹ್ಯಾಕರ್ ಗಳು ಭಾರತದಲ್ಲಿ ವಿಫಲರಾಗಿದ್ದೇಕೆ?

– ಆದೇಶ್ ಕುಮಾರ್

ಹೌದು ನನಗೆ ಇನ್ನೂ ನೆನೆಪಿದೆ. ಅದು ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತಿದ್ದ ಕಾಲ. ಆಗ ತಾನೆ ಕೆಲವೊಂದು ದೇಶಗಳಲ್ಲಿ ಹ್ಯಾಕರ್ ಗಳು ಅನಾನಿಮಸ್ (ಅಜ್ಞಾತ) ಎಂಬ ಗುಂಪೊಂದನ್ನು ಕಟ್ಟಿಕೊಂಡು ಹಲವು ದೇಶಗಳ ಸರ್ಕಾರಿ ವೆಬ್ಸೈಟ್ ಗಳಿಗೆ ಲಗ್ಗೆ ಹಾಕಿ ಭ್ರಷ್ಟಾಚಾರವನ್ನು ಕೊನೆಗಾಣಿಸಿ ಎಂಬ ಪೋಸ್ಟ್ ಗಳನ್ನು ಹಾಕುತ್ತಿದ್ದರು.
ಇತ್ತ ನಮ್ಮ ದೇಶದಲ್ಲೂ ಕೂಡ ಭ್ರಷ್ಟಾಚಾರದ ಹೋರಾಟ ತಾರಕಕ್ಕೇರುತ್ತಿದುದ್ದನ್ನು ಕಂಡು ಅದಕ್ಕೆ ಜೊತೆ ನೀಡಲು ಆ ಗುಂಪು ಭಾರತದಲ್ಲೂ ಉದಯಿಸಿತು. ಮೊದಲಿಗೆ ಅದು ತನ್ನ ಕಾರ್ಯಚರಣೆಯನ್ನು ನಮ್ಮ ದೇಶದ ಒಂದು ಸರ್ಕಾರಿ ವೆಬ್ಸೈಟ್ ಅನ್ನು ಹ್ಯಾಕ್ ಮಾಡುವುದರೊಂದಿಗೆ ಪ್ರಾರಂಬಿಸಿತು. ಅದು ಸಾಮಾನ್ಯ ಸರ್ಕಾರಿ ವೆಬ್ಸೈಟ್ ಗಳನ್ನು ಮಾತ್ರ ಹ್ಯಾಕ್ ಮಾಡಿದ್ದರೆ ಅದು ಇನ್ನೂ ಇಲ್ಲೇ ಇರುತಿತ್ತೇನೊ. ಆದರೆ ಅದು ಭಾರತದ ಯಾವೊಬ್ಬ ಪ್ರಜೆಯು ಇಷ್ಟಪಡದ ಕೆಲಸಕ್ಕೆ ಕೈಹಾಕಿತು. ಅಂದರೆ ನಮ್ಮೆಲ್ಲರ ಹೆಮ್ಮೆಯ ಭಾರತ ಸೇನೆಯ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿತು.(ಅದು ಹ್ಯಾಕ್ ಮಾಡಿತೊ ಅಥವಾ ವೆಬ್ಸೈಟ್ ಅನ್ನು ಡೌನ್ ಮಾಡಿತೊ ಇದುವರೆಗೂ ತಿಳಿದಿಲ್ಲ).

ಇದನ್ನು ಯಾವೊಬ್ಬ ಭಾರತೀಯನು ಸಹಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅನಾನಿಮಸ್ ಗುಂಪು ನಡೆಸುತಿದ್ದ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ಅದರ ವಿರುದ್ಡ ಟೀಕೆಗಳ ಸುರಿಮಳೆಯಾಯಿತು. ಕೆಲವೊಂದು ಕಾಮೆಂಟುಗಳು ಮತ್ತು ಟ್ವೇಟುಗಳು ಹೀಗಿದ್ದವು:
ಮತ್ತಷ್ಟು ಓದು »

11
ಮಾರ್ಚ್

ಗೂಗಲ್ ಸರ್ಚ್ ಫಲಿತಾಂಶಗಳು ನಿಮ್ಮ ಮೊಬೈಲಿನಲ್ಲಿ

-ಆದೇಶ್ ಕುಮಾರ್

ಈಗ ನೀವು ಗೂಗಲ್ ಸರ್ಚ್ ಫಲಿತಾಂಶಗಳನ್ನು ನಿಮ್ಮ ಮೊಬೈಲಿನಲ್ಲೇ ಯಾವುದೇ ಅಂತರ್ಜಾಲ ಸಂಪರ್ಕವಿಲ್ಲದೇ ಪಡೆಯಬಹುದು.

ನೀವು ಮಾಡಬೆಕಾಗಿರುವುದು ಇಷ್ಟೆ. ಕೇವಲ ನೀವು ಹುಡುಕಬೇಕೆಂದಿರುವ ಪದವನ್ನು ಅಥವಾ ವಿಷಯವನ್ನು +919773300000 ಗೆ ಸಂದೇಶ ಕಳುಹಿಸಿ. ನಿಮಗೆ ನೀವು ಹುಡುಕುತ್ತಿರುವ ಪದಗಳ ಫಲಿತಾಂಶ ಗೂಗಲ್ ನಿಂದ ಸಂದೇಶದ ಮೂಲಕ ಬರುತ್ತದೆ. ಇದು ಗೂಗಲ್ ನ ಹೊಸದಾದ ಉಚಿತವಾದ ಸೇವೆ.

ಚಿತ್ರಕೃಪೆ : evolvor.com

8
ಮಾರ್ಚ್

ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ

-ಓಂಶಿವಪ್ರಕಾಶ್

ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್‌ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್‌ಸಂಗ್‌ನ ಏಸ್ ಮತ್ತಿತರ ಆಡ್ರಾಂಯ್ಡ್ ಫೋನುಗಳು ಇತರ ಭಾರತೀಯ ಭಾಷೆಗಳ ಜೊತೆಗೆ ಕನ್ನಡವೂ ಮೊಬೈಲ್ ಪರದೆಯ ಮೇಲೆ ಮೂಡುವಂತೆ ಮಾಡಿರುವುದರಿಂದ ಕನ್ನಡದ ವೆಬ್‌ಸೈಟ್ ಇತ್ಯಾದಿಗಳು ಈಗ  ಅಂಗೈ ಅಗಲದ ಮೊಬೈಲ್ ಪರದೆಯಲ್ಲಿ ರಾರಾಜಿಸುತ್ತಿವೆ.

ಇದಾದ ನಂತರವೂ ವಿಕಿಪೀಡಿಯ ಕನ್ನಡ (http://kn.wikipedia.org) ಪುಟವನ್ನು ತೆರೆದಾಗ ವಿಕಿಪೀಡಿಯ ಮೊಬೈಲ್ ಪುಟವನ್ನು ಮರೆ ಮಾಡಿ, ಎಂದಿನ ಆವೃತ್ತಿಯಲ್ಲಿ ಈ ಪುಟ ನೋಡಿ ಎಂಬ ಮಾಹಿತಿ ಮಾತ್ರ ನಮಗೆ ದೊರಕುತ್ತಿತ್ತು. ಈಗ ಅದಕ್ಕೆ ಕೊನೆ. ಕನ್ನಡ ವಿಕಿಪೀಡಿಯದ ಮೊಬೈಲ್ ಪುಟ ಈಗ ಲಭ್ಯವಿದೆ. ಖುದ್ದಾಗಿ ಇದನ್ನು ಸರಿ ಪಡಿಸಬೇಕು ಎಂದು ಕೊಂಡಿದ್ದು ವಿಕಿಪೀಡಿಯದ ಇನ್ನೊಬ್ಬ ಗೆಳೆಯ ಹರೀಶ್ ಎಂ.ಜಿ ಗೆ ಹೇಗೆ ಕೇಳಿಸಿತೋ ತಿಳಿಯದು.

ಮತ್ತಷ್ಟು ಓದು »

10
ಫೆಬ್ರ

ನಿಮ್ಮ ಗಣಕವನ್ನು ಆನ್ಲೈನ್ ಪರೀಕ್ಷಕಗಳ ಮೂಲಕ ಪರೀಕ್ಷಿಸಿ

-ಆದೇಶ್ ಕುಮಾರ್

ನಿಮ್ಮ ಗಣಕಯಂತ್ರದಲ್ಲಿ ವೈರಸ್ ಸೇರಿಕೊಂಡಿದೆಯೆಂದೊ ಅಥವಾ ಯಾವುದಾದರೂ ಕಡತ ವೈರಸ್ ಸೋಂಕಿತ ಎಂಬ ಅನುಮಾನ ನಿಮ್ಮಲಿದ್ದು, ಮತ್ತು ನಿಮ್ಮಲ್ಲಿರುವ ಯಾವುದೇ ವೈರಸ್ ನಿರೋಧಕ ತಂತ್ರಾಂಶ ಕೆಲಸ ಮಾಡುತ್ತಿಲ್ಲವೆಂದರೆ, ಕೆಳಗೆ ನೀಡಿರುವ ವೆಬ್ಸೈಟ್ ಗಳಿಗೆ ಹೋಗಿ ಒಮ್ಮೆ ಪರೀಕ್ಷಿಸಿ.

ಈ ಆನ್ಲೈನ್ ವೈರಸ್ ಸ್ಕ್ಯಾನರ್ ಗಳಲ್ಲಿ ನೀವು ಯಾವುದೇ ಶುಲ್ಕವಿಲ್ಲದೇ ಕಡತಗಳನ್ನು ಪರೀಕ್ಞಿಸಬಹುದು.

ಕೇವಲ ನಿಮ್ಮ ಕಡತವನ್ನು ಆ ವೈರಸ್ ಸ್ಕ್ಯಾನರ್ ಗಳಲ್ಲಿ ಸೇರಿಸಿ ಮತ್ತು ನಿಮ್ಮ ಕಡತದಲ್ಲಿ ವೈರಸ್ ಸೇರಿಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

ಮತ್ತಷ್ಟು ಓದು »

2
ಫೆಬ್ರ

ನಿಮ್ಮ XP SERVICE PACK 2 ಅನ್ನು SERVICE PACK 3 ಗೆ ಬದಲಾಯಿಸಿ.

-ಆದೇಶ್ ಕುಮಾರ್

ನಿಮ್ಮ XP SERVICE PACK 2 ಅನ್ನು SERVICE PACK 3 ಗೆ ಬದಲಾಯಿಸಿ.
ಕೆಲವೊಮ್ಮೆ ನೀವು ನಿಮ್ಮ ಗಣಕಕ್ಕೆ ಕೆಲವೊಂದು ತಂತ್ರಾಂಶಗಳನ್ನು ಇನ್ಸ್ಟಾಲ್ ಮಾಡಬೇಕಾಗಿರುತ್ತದೆ. ಈ ತಂತ್ರಾಂಶಗಳು ಕೆವಲ SP3 ಅಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಆದರೆ ನಿಮ್ಮ ಗಣಕದಲ್ಲಿ XP SP 2 ಇನ್ಸ್ಟಾಲ್ ಮಾಡಿರುತ್ತೀರಿ.
ಈಗ ಹೊಸದಾಗಿ SP3 ಇನ್ಸ್ಟಾಲ್ ಮಾಡುವ ಬದಲು, SP2 ಅನ್ನೇ SP3 ಅನ್ನಾಗಿ ಬದಲಾಯಿಸಬಹುದು.

೧)ಮೊದಲು Registery Editor(Start–>Run ಅಲ್ಲಿ regedit ಎಂದು ಟೈಪಿಸಿ Enter ಒತ್ತಿ) ತೆರೆಯಿರಿ.
೨)ಈಗ Registery Editor ನ ಎಡ ಭಾಗದಲ್ಲಿರುವ ತೆರೆಯ ಮೂಲಕ ಕೆಳಗಿನಂತೆ ಹೋಗಿ.
HKEY_LOCAL_MACHINE >>> SYSTEM >>> CurrentControlSet >>>Control >>> Windows
ಗೆ ಹೋಗಿ
ಈಗ ನಿಮ್ಮ ಬಲ ಭಾಗದಲ್ಲಿರುವ “CSDVersion” ಮೇಲೆ ಎರಡು ಬಾರಿ ಕ್ಲಿಕ್ಕಿಸಿ, ತದನಂತರ ತೆರೆದುಕೊಳ್ಳುವ ತೆರೆಯಲ್ಲಿ Value data: ಅನ್ನು 200 ರ ಬದಲು 300 ಎಂದು ಬದಲಾಯಿಸಿ OK ಒತ್ತಿ ನಂತರ ನಿಮ್ಮ ಗಣಕವನ್ನು ರಿಸ್ಟಾರ್ಟ್ ಮಾಡಿ.
ಈ ಒಂದು ತಂತ್ರ SP3 ಅಲ್ಲಿ ಮಾತ್ರ ಕೆಲಸ ಮಾಡುವ ತಂತ್ರಾಂಶಗಳನ್ನು SP2 ವಿನಲ್ಲೂ ಕೆಲಸ ಮಾಡುವಂತೆ ಮಾಡುತ್ತದೆ.
ಪ್ರತಿಕ್ರಿಯಿಸಲು ಮರೆಯಬೇಡಿ.

* * * * * * *

ಚಿತ್ರಕೃಪೆ : madrasgeek.com