ಮಾಧ್ಯಮಗಳೇ ಸಾಕು ನಿಲ್ಲಿಸಿ ನಿಮ್ಮ ಬೂಟಾಟಿಕೆಯ..
– ವರುಣ್ ಕುಮಾರ್
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇವು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯ ಆಧಾರ ಸ್ತಂಭಗಳು. ಇವುಗಳಲ್ಲಿ ಯಾವುದಾದರೊಂದು ಅಂಗ ನಿಷ್ಕ್ರೀಯಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೀಡಾಗುವ ಸಾಧ್ಯತೆಗಳಿರುತ್ತದೆ. ಇಂತಹ ನಿಷ್ಕ್ರೀಯ ವ್ಯವಸ್ಥೆಗಳಿಗೆ ಚುರುಕು ಮುಟ್ಟಿಸಲು, ನಿದ್ದೆಯಲ್ಲಿರುವ ಅಧಿಕಾರಿಗಳನ್ನು ಎಬ್ಬಿಸಲು ಜನತೆ ಹಾಗೂ ಆಡಳಿತ ವ್ಯವಸ್ಥೆಯ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಲು ಸುದ್ದಿ ಮಾದ್ಯಮಗಳ ಪಾತ್ರ ಬಹುಮುಖ್ಯವಾದುದು. ಅದಕ್ಕಾಗಿ ಮಾದ್ಯಮಕ್ಕೆ ೪ ನೇ ಆಧಾರಸ್ತಂಭವೆಂಬ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ.
ಈ ಸ್ಥಾನವನ್ನು ಮಾದ್ಯಮ ರಂಗದವರು ಕಾಪಾಡಿಕೊಂಡಿದ್ದಾರೆಯೇ?, ಇವರ ಕಾರ್ಯಶೈಲಿ, ನಿರ್ವಹಣೆ ಹಾಗೂ ಅವರ ನಡವಳಿಕೆಗಳು ಇದರ ಬಗ್ಗೆ ಸಣ್ಣ ವಿಶ್ಲೇಷಣೆಯನ್ನು ನಡೆಸೋಣ.
ಕೆಲ ದಶಕಗಳ ಹಿಂದೆ ಹೋದರೆ ಸುದ್ದಿ ವಾಹಿನಿಗಳ ಆರ್ಭಟ ಇಷ್ಟೊಂದಿರಲಿಲ್ಲ. ಆಯಾ ದಿನಗಳಲ್ಲಿ ನಡೆದಂತಹ ಸುದ್ದಿಗಳನ್ನು ಕೇವಲ ೨೦ ಅಥವಾ ೩೦ ನಿಮಿಷಗಳಲ್ಲಿ ಎಲ್ಲ ಪ್ರಮುಖ ವಾರ್ತೆಗಳನ್ನು ಪ್ರಸಾರ ಮಾಡುತ್ತಿದ್ದವು. ಆದರೆ ಯಾವಾಗ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಭಾರತ ಸಾಧಿಸಿದಾಗ ಎಲ್ಲ ವಿಭಾಗಗಳಲ್ಲಿ ಮಹತ್ತರ ಬದಲಾವಣೆಗಳು ಕಾಣಲಾರಂಭಿಸಿದರು. ಒಂದೆರಡು ವಾಹಿನಿಗಳಿದ್ದಲ್ಲಿ ನೂರಾರು ವಾಹಿನಿಗಳು ಟಿ.ವಿ.ಪರದೆಯಲ್ಲಿ ಕಾಣತೊಡಗಿಸಿದವು. ಅದರಲ್ಲೂ ಮುಖ್ಯವಾಗಿ ೨೪*೭ ಘಂಟೆ ಸುದ್ದಿಗಳನ್ನು ಬಿತ್ತರಿಸುವ ವಾಹಿನಿಗಳೆಂದರೆ ಅದೊಂದು ಪ್ರತಿಷ್ಠೆಯ ವಿಷಯವೇ ಆಗಿತ್ತು. ಇಲ್ಲಿಂದ ಸುದ್ದಿಗಳನ್ನು ಕೊಡುವ ವ್ಯಾಖ್ಯೆಯೇ ಬದಲಾಗತೊಡಗಿತು, ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯೂಸ್ ಈ ರೀತಿಯಾಗಿ ಪ್ರತಿ ಕ್ಷಣದಲ್ಲೂ ಸುದ್ದಿಯನ್ನು ಬಿತ್ತರಿಸುವ ರೀತಿಯಲ್ಲಿ ವಾಹಿನಿಗಳು ಬಂದುಬಿಟ್ಟವು. ಆದರೆ ಯಾವಾಗ ತಮ್ಮ ಲಾಭಕ್ಕೋಸ್ಕರ, ವಾಣಿಜ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹಿನಿಗಳು ಕೆಲಸ ಮಾಡತೊಡಗಿದಾಗ ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಅಲುಗಾಡುವ ಪರಿಸ್ಥಿತಿಗೆ ಬರತೊಡಗಿತು. Read more
ಪುಲ್ವಾಮ ದಾಳಿ: ಭಾರತ ಕಲಿತ ಪಾಠ
– ವರುಣ್ ಕುಮಾರ್
ಫೆಬ್ರವರಿ ೧೪ನೇ ತಾರೀಖು ಭಾರತದ ಸೈನಿಕರ ಪಾಲಿಗೆ ಅತ್ಯಂತ ಕರಾಳ ದಿನ. ಕಳೆದ ದಶಕದಲ್ಲಿಯೇ ನಡೆದ ಅತ್ಯಂತ ಘೋರ ಉಗ್ರರ ದಾಳಿ ಅಮಾಯಕ ಸೈನಿಕರ ಸಾವಿಗೆ ಕಾರಣವಾಗಿ ಇಡೀ ದೇಶವೇ ಮಮ್ಮಲ ಮರುಗಿತು. ಪ್ರಪಂಚದೆಲ್ಲೆಡೆಯಿಂದ ಈ ಘಟನೆಯ ಬಗ್ಗೆ ಖಂಡನೆ ವ್ಯಕ್ತವಾಗಿ ಭಾರತದ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ಬೆಂಬಲವನ್ನು ವ್ಯಕ್ತಪಡಿಸಿದರು. ಈ ದಾಳಿಯ ಬಳಿಕ ಭಾರತದಲ್ಲಿ ನಡೆದ ಬೆಳವಣಿಗೆಗಳ ಹಾಗೂ ಈ ದಾಳಿಯಿಂದ ಭಾರತ ಕಲಿಯಬೇಕಾದ ಪಾಠಗಳೇನು ಎಂಬುದಾಗಿ ವಿಶ್ಲೇಷಿಸೋಣ.
ಭಾರತದೊಳಗಿನ ಉಗ್ರರು:
ಹೌದಲ್ಲವೇ, ನಮಗೆ ಈ ಉಗ್ರರದಾಳಿಯ ಬಳಿಕ ಹಲವಾರು ಉಗ್ರರು ನಮ್ಮ ದೇಶದೊಳಗೆ ಅಣಬೆಗಳಂತೆ ಹುಟ್ಟಿಕೊಳ್ಳತೊಡಗಿದರು. ಪಾಕಿಸ್ತಾನ್ ಜಿಂದಾಬಾದ್, ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಇತ್ಯಾದಿ ಬರಹಗಳನ್ನು ಒಳಗೊಂಡ ಅನೇಕ ದೇಶದ್ರೋಹಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾರಂಭಿಸಿದರು. ಪಂಜಾಬ್ ಎಂದಿಗೂ ದೇಶಪ್ರೇಮಿಗಳನ್ನು ಕೊಟ್ಟಂತಹ ರಾಜ್ಯ ಆದರೆ ಅದೇ ರಾಜ್ಯದ ಸಚಿವನಾದ ಸಿಧುರವರು ಪಾಕಿಸ್ತಾನದ ಜೊತೆ ಮಾತುಕತೆ ಭಾರತ ಮುಂದಾಗಬೇಕು ಎಂದು ಸಲಹೆ ನೀಡಿದರು. ಇದರ ಬೆನ್ನಿಗೆ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಪ್ರಕಾಶ್ ರೈ ಒಂದು ಹಂತದಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದು ಬೆಂಬಲ ನೀಡಿದರು. ಆದರೆ ಮರುದಿನ ಬಿಜೆಪಿಯ ಬಗ್ಗೆ ಮೋದಿಯವರ ಬಗ್ಗೆ ಟೀಕಿಸಿ ಘಟನೆಯನ್ನು ರಾಜಕೀಯಗೊಳಿಸಿದರು. ಕಮಲ್ ಹಾಸನ್ ಅಂತಹ ಸ್ವಯಂಘೋಷಿತ ನಾಯಕರು ಸೈನಿಕರು ಸಾಯಲೆಂದೇ ಸೇನೆಗೆ ಸೇರುತ್ತಾರೆ ಎಂದು ಹೇಳಿಕೆಗಳನ್ನು ಕೊಟ್ಟಾಗ ಇದು ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಯಾವ ರೀತಿ ನೋವಾಗಬಹುದು ಎಂಬ ಕಾಳಜಿಯಿಲ್ಲದೆ ಮಾತನಾಡಿದರು. Read more
ನಮೋ ಶಿವಕುಮಾರ ಸ್ವಾಮಿ: ಶರಣಂ ಗಚ್ಛಾಮಿ!
~ ತುರುವೇಕೆರೆ ಪ್ರಸಾದ್
ಗಾಂಧಿನಗರ
ತುರುವೇಕೆರೆ-572227
ಸಿದ್ಧಗಂಗೆಯ ಐಸಿರಿ, ತಾನಾಗಬಲ್ಲನಿಲ್ಲಿ ನರನು ನಾರಾಯಣನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ನರಹರಿ, ಸಿದ್ಧಗಂಗೆಯ ಸಾಧನೆಯ ಉತ್ತುಂಗದ ಗಿರಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಭೌತಿಕವಾಗಿ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಸುಮಾರು 9 ದಶಕಗಳ ಕಾಲ ಅವರು ಮನುಕುಲಕ್ಕೆ ಸಲ್ಲಿಸಿದ ಸೇವೆ ಅನುಪಮವಾದದು, ಅನನ್ಯವಾದದು, ಮಾನವೀಯತೆಯ ಇತಿಹಾಸದಲ್ಲಿ ಎಂದೆಂದಿಗೂ ಅಜರಾಮರವಾಗಿ ‘ನಭೂತೋ ನಭವಿಷ್ಯತ್’ ಎನ್ನುವಂತೆ ದಾಖಲಾಗುವಂತಾದ್ದು. ಶಾಂತಿ ನೆಮ್ಮದಿ ಬಯಸಿದವನಿಗೆ ದಿವ್ಯ ದರ್ಶನ, ನರಳುತ್ತಾ ಬಂದವನಿಗೆ ಮಾನವೀಯ ಸೇವೆಯ ದಿಗ್ದರ್ಶನ, ಹಸಿದವನಿಗೆ ಅನ್ನ, ಅನಾಥನಿಗೆ ಪ್ರೀತಿಯ ಸಿಂಚನ, ಅರಿವಿನ ಜೋಳಿಗೆ ಹಿಡಿದು ಬಂದವನಿಗೆ ಜ್ಞಾನ- ಸಿದ್ಧಗಂಗಾ ಸ್ವಾಮೀಜಿಯ ಬಹುಮುಖಿ ದಾಸೋಹದ ವೈಖರಿಯೇ ಅನನ್ಯ! Read more
ಅಬ್ಬಾ..ಈ ದೇಶದಲ್ಲಿ ಅದೆಂತಹ ಅಸಹಿಷ್ಣುತೆ..!
– ವರುಣ್ ಕುಮಾರ್
ಪುತ್ತೂರು
- ಈ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ – ಶಾರುಖ್ ಖಾನ್
- ನನ್ನ ಪತ್ನಿಗೆ ಮತ್ತು ನನಗೆ ಈ ದೇಶದಲ್ಲಿ ಇರಲು ಭಯವಾಗುತ್ತಿದೆ, ಯಾಕೆಂದರೆ ಇಲ್ಲಿ ಅಸಹಿಷ್ಣುತೆ ಇದೆ – ಅಮೀರ್ ಖಾನ್
- ನನ್ನ ಮೊಮ್ಮಕ್ಕಳಿಗೆ ಈ ದೇಶದಲ್ಲಿರಲು ಭಯವಾಗುತ್ತಿದೆ – ನಾಸೀರುದ್ದಿನ್ ಷಾ
ಹೌದಲ್ಲವೇ, ಇವರು ಹೇಳಿದಂತೆ ಕಳೆದ ನಾಲ್ಕೂವರೆ ವರ್ಷಗಳಿಂದ ಎಷ್ಟೊಂದು ಅಸಹಿಷ್ಣುತೆ ಇದೆಯಲ್ಲವೆ, ಎಲ್ಲ ಕಡೆಗಳಲ್ಲಿ ಗೋವಿನ ಹೆಸರಲ್ಲಿ ಕೊಲೆ,ಸುಲಿಗೆ ಧರ್ಮದ ಹೆಸರಲ್ಲಿ ಗಲಭೆ, ಅಲ್ಪಸಂಖ್ಯಾತರಿಗಂತೂ ಉಸಿರುಗಟ್ಟಿದ ಸ್ಥಿತಿ. ಒಂದೇ ಎರಡೇ, ಇದಕ್ಕೆಲ್ಲ ಯಾರು ಮುಖ್ಯ ಕಾರಣ ಕೇಂದ್ರ ಸರ್ಕಾರ. ಅದರಲ್ಲೂ ಮುಖ್ಯವಾಗಿ ಮೋದಿ. ಈ ಮನುಷ್ಯ ಬಂದ ಮೇಲಂತೂ ಈ ದೇಶದ ಬಗ್ಗೆ ತಾತ್ಸರ ಮೂಡುವಂತೆ ಮಾಡಿದ್ದಾನೆ. ಅಲ್ಲವೇ.. ಅಷ್ಟಕ್ಕೂ ಮೋದಿಯ ಬಗ್ಗೆ ಈ ನಮ್ಮ ದೇಶಭಕ್ತ(?)ರಿಗೆ ಯಾಕೆ ಇಷ್ಟೊಂದು ಕೋಪ ಸ್ವಲ್ಪ ಮೆಲುಕು ಹಾಕೋಣ. Read more
ಸಿದ್ಧಗಂಗಾ ಶ್ರೀಗಳಿಗೇಕಿಲ್ಲ ಭಾರತರತ್ನ?
– ರಾಕೇಶ್ ಶೆಟ್ಟಿ
“ಮೂರು ಬಿಟ್ಟೋರು ಊರಿಗೇ ದೊಡ್ಡೋರು” ಅನ್ನೋ. ಗಾದೆ ಮಾತು ಯಾರಿಗಾದರೂ ಸೂಕ್ತವಾಗಿ ಅನ್ವಯವಾಗುವುದಿದ್ದರೆ ಅದು ಕಾಂಗ್ರೆಸ್ ಪಕ್ಷ ಹಾಗೂ ಅದನ್ನು ಬೆಂಬಲಿಸುವ ಗಂಜಿಗಿರಾಕಿಗಳಿಗೆ. ಕಾರಣವೇನು ಗೊತ್ತೇ, ತನ್ನ ಪಕ್ಷದ ಇತಿಹಾಸದಲ್ಲಿ ಮಾಡಲಾಗಿರುವ ಅನ್ಯಾಯಗಳ ಪಟ್ಟಿ ಅಕ್ಷಯಪಾತ್ರೆಯಂತದ್ದು ಎನ್ನುವುದು ಗೊತ್ತಿದ್ದರೂ ಬೇರೆ ಪಕ್ಷಗಳನ್ನು ಟೀಕಿಸಲು ಹೊರಟಾಗ ಕಾಂಗೈ ನಾಯಕರು ನಾಚಿಕೆ ಬಿಟ್ಟು ನಿಲ್ಲುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ, ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡದಿರುವ ವಿವಾದ.
ಇವತ್ತಿಗೆ ಸಿದ್ದರಾಮಯ್ಯನವರಿಂದ ಹಿಡಿದು ಕಾಂಗಿ ಮರಿಪುಢಾರಿಗಳೆಲ್ಲ ಬಿಜೆಪಿಯನ್ನು ಈ ಬಗ್ಗೆ ಪ್ರಶ್ನಿಸುತ್ತಿವೆ.ಆದರೆ,ಹಾಗೆ ಪ್ರಶ್ನಿಸುವ ಭರದಲ್ಲಿ ದೇಶದ ಉನ್ನತ-ಅತ್ಯುನ್ನತ ಪ್ರಶಸ್ತಿಗಳ ಮಾನವನ್ನು ಮೂರು ಬಿಟ್ಟವರ ಪಕ್ಷ ಹೇಗೆ ಕಳೆದಿದೆ ಎನ್ನುವುದನ್ನು ಇವರು ಮರೆತಿರುವಂತಿದೆ.
ಭಗವದ್ಗೀತೆ ಬರ್ನ್, ವಿಚಾರಕ್ರಾಂತಿಯ ಯೂ ಟರ್ನ್?
– ತುರುವೇಕೆರೆ ಪ್ರಸಾದ್
ತುರುವೇಕೆರೆ-572227
ಇಂದು ನಾವು ಕುವೆಂಪುರವರ 114ನೇ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಕುವೆಂಪುರವರು ಶ್ರೇಷ್ಠ ಕವಿ, ನಾಟಕಕಾರ, ಕಾದಂಬರಿಕಾರ ಎಲ್ಲವೂ ಆಗಿದ್ದರು. ಭಾವ, ಶ್ರದ್ಧೆ,ಆಧ್ಯಾತ್ಮ ಹಾಗೂ ನವರಸಗಳ ವಿಕಾರ, ವಿಕೃತಿ, ಅಬ್ಬರ, ಆಕ್ರೋಶವಿಲ್ಲದ ಸಮನ್ವಯದ ಅಭಿವ್ಯಕ್ತಿಯ ಸಂತರೆಂದೇ ಅವರನ್ನು ರಸಋಷಿ ಎಂದು ಕರೆಯುವುದು. ಇವೆಲ್ಲಕ್ಕಿಂತ ಹೆಚ್ಚಾಗಿ ಕುವೆಂಪು ತೀವ್ರ ವಿಚಾರವಾದಿಯಾಗಿದ್ದರು. ವಿಚಾರವಾದಿಯಾಗಿದ್ದುಕೊಂಡೇ ಅವರು ಆಧ್ಯಾತ್ಮ ಜೀವಿಯೂ, ಆಧ್ಮಾತ್ಮವಾದಿಯೂ ಆಗಿದ್ದರೆಂಬುದು ಅತ್ಯಂತ ಶ್ರೇಷ್ಠ ಹಾಗೂ ಹೆಗ್ಗಳಿಕೆಯ ಸಂಗತಿ. ವಿಚಾರವಾದಿಯಾಗಿ ಅವರು ಜಾತಿಧರ್ಮ, ವರ್ಣಾಶ್ರಮ ಪದ್ಧತಿಯನ್ನು ಉಗ್ರವಾಗಿ ಖಂಡಿಸುತ್ತಿದ್ದರು. ಅರ್ಥಹೀನ ಆಚರಣೆ, ಮೌಢ್ಯ, ಕಂದಾಚಾರಗಳನ್ನು ಧಿಕ್ಕರಿಸುತ್ತಿದ್ದರು. Read more
ಶಬರಿಮಲೆ: ಇದು ಹಿಂದೂಗಳ ಸೋಲೇ ?
– ವರುಣ್ ಕುಮಾರ್
ಪುತ್ತೂರು
ಕಳೆದ ಕೆಲ ತಿಂಗಳುಗಳಿಂದ ಚರ್ಚೆಗೆ ಗ್ರಾಸವಾಗಿರುವ ಸುದ್ದಿ ಎಂದರೆ ಅದು ಶಬರಿಮಲೆಗೆ ಮಹಿಳಾ ಪ್ರವೇಶದ ಕುರಿತಾಗಿ ಬಂದಂತಹ ತೀರ್ಪು. ಈ ಕುರಿತಾಗಿ ಚರ್ಚೆಗಳು, ವಾದ- ವಿವಾದಗಳು,ಸಂಭಾಷಣೆಗಳು ಈಗ ಅತಿ ಸಾಮಾನ್ಯ. ಆದರೆ ಶಬರಿಮಲೆಯು ಇಂತಹ ಚರ್ಚೆಗಳಿಗೆ ಗುರಿಯಾಗುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಇದರ ಕುರಿತಾದ ಒಂದು ಸಣ್ಣ ಅವಲೋಕನೆಯು ಈ ಕೆಳಗಿನಂತಿದೆ. Read more
ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ ಮುಖ್ಯಮಂತ್ರಿಗಳೇ?
– ರಾಕೇಶ್ ಶೆಟ್ಟಿ
ಇಂಗ್ಲೀಷ್ ಸುದ್ದಿ ವಾಹಿನಿಗಳಲ್ಲಿ ತಮ್ಮ ಪ್ಯಾನೆಲ್ ಚರ್ಚೆಗಳ ಮೂಲಕ,ಹಾಗೂ ಪ್ಯಾನೆಲಿಸ್ಟ್-ರಾಜಕಾರಣಿಗಳಿಗೆ ನಿರ್ಭಿತಿಯಿಂದ ಪ್ರಶ್ನೆ ಕೇಳುವ ಮೂಲಕ ದೇಶದ ಗಮನ ಸೆಳೆದ ಪತ್ರಕರ್ತ ಅರ್ನಬ್ ಗೋಸಾಮಿಯವರಂತೆಯೇ ಕರ್ನಾಟಕ ರಾಜ್ಯದ ಪತ್ರಿಕಾ ರಂಗದಲ್ಲಿ ತಮ್ಮ ನೇರಾ ನೇರ ಪ್ರಶ್ನೆಗಳು ಹಾಗೂ ಸತ್ಯ-ನ್ಯಾಯದ ಪರ ದನಿಯಾದವರು ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅಜಿತ್ ಹನಮಕ್ಕನವರ್.ಇವರು ನಡೆಸಿಕೊಡುವ ಲೆಫ್ಟ್-ರೈಟ್-ಸೆಂಟರ್ ಎಂಬ ಚರ್ಚಾ ಕಾರ್ಯಕ್ರಮದಲ್ಲಿ ದಾಖಲೆಗಳನ್ನು ಮುಂದಿಟ್ಟುಕೊಂಡು, ಸುತ್ತಿ ಬಳಸಿ ಹೊಗಳಿಕೆಯ ಮಾತನಾಡದೇ ಸತ್ಯವನ್ನು ಸ್ಪಷ್ಟವಾಗಿ ಹೇಳುವುದು ಅಜಿತ್ ಶೈಲಿ.ಐತಿಹಾಸಿಕ ಸತ್ಯವನ್ನು ನೇರವಾಗಿ ಹೇಳಿದ್ದರಿಂದಾಗಿ ಈಗ ಅಜಿತ್ ಹನಮಕ್ಕನವರ್ ಸಂಕಟದಲ್ಲಿದ್ದಾರೆ.
ಕಳೆದ ಗುರುವಾರ, ಪ್ರೊ.ಭಗವಾನರನ ಕುರಿತ ಚರ್ಚೆಯ ಸಮಯದಲ್ಲಿ,ಭಗವಾನರನ ಪರ ವಹಿಸಿದ್ದ ಮಹೇಶ್ ಚಂದ್ರಗುರು ಅವರ “ಯಾರೂ ಪ್ರಶ್ನಾತೀತರಲ್ಲ” ಎನ್ನುವ ಮಾತಿಗೆ ಪ್ರತಿಯಾಗಿ ಅಜಿತ್, ಹೌದು ಸರ್ ನಿಮ್ಮ ಮಾತು ಒಪ್ಪುತ್ತೇನೆ ಯಾರೂ ಕೂಡ ಪ್ರಶ್ನಾತೀತರಲ್ಲ. ಆದರೆ ಯಾರನ್ನು ಪ್ರಶ್ನಿಸಲು ನೀವುಗಳು (ಬುದ್ಧಿಜೀವಿಗಳು) ಆರಿಸಿಕೊಳ್ಳುತ್ತೀರಿ ಎಂದರೆ,ಯಾರನ್ನು ಪ್ರಶ್ನಿಸಿದರೆ ಅತ್ಯಂತ ಕಡಿಮೆ ಅಪಾಯ ಆಗಬಹುದೋ ಅಂತವರನ್ನು ಮಾತ್ರ ಆರಿಸಿಕೊಳ್ಳುತ್ತೀರಿ. ರಾಮನನ್ನು ಪ್ರಶ್ನಿಸಬಹುದು.೫೩ ವಯಸ್ಸಿನಲ್ಲಿ ೬ ವರ್ಷದ ಹೆಣ್ಣುಮಗುವನ್ನು ಮದುವೆಯಾದವರನ್ನು ಪ್ರಶ್ನಿಸುವ ಧೈರ್ಯ ನಿಮಗೆ ಬರುವುದಿಲ್ಲ ಎನ್ನುವ ಅರ್ಥದಲ್ಲಿ ಮಾತನ್ನಾಡಿದ್ದರು.ಅಷ್ಟೇ ನೋಡಿ ಶುರುವಾಯಿತು!
ಮೋದಿರಾಗಾ ಸರಿಸಿ ಮತ ಹಾಕಲು ಮತ್ತೊಂದು ಹೆಸರು ಹೇಳುವಿರಾ?
– ಗೋಪಾಲಕೃಷ್ಣ
ಚಿಕ್ಕಮಗಳೂರು
ಹಾಗೆ ಒಮ್ಮೆ ಕಲ್ಪಿಸಿಕೊಳ್ಳಿ; 2014ರಲ್ಲಿ ನರೇಂದ್ರ ಮೋದಿಯವರಿಗೆ ಬಹುಮತ ಸಿಗದೇ ಇದ್ದಿದ್ದರೆ, 18 ಸ್ಥಾನಗಳನ್ನು ಗೆದ್ದಿದ್ದ ಶಿವಸೇನೆ, 16 ಸದಸ್ಯರನ್ನು ಹೊಂದಿದ್ದ ಚಂದ್ರಬಾಬು ನಾಯ್ಡು, 37 ಸ್ಥಾನ ಹೊಂದಿದ್ದ ಎಐಎಡಿಎಂಕೆ ಹೇಗೆಗೆಲ್ಲಾ ‘ಪೊಲಿಟಿಕಲ್ ಬ್ಲಾಕ್ಮೇಲ್’ ಮಾಡಬಹುದಿತ್ತು! ಅಂದು ಎನ್ಡಿಎ ಮೈತ್ರಿಕೂಟದ 336 ಸದಸ್ಯರಲ್ಲಿ 282 ಸ್ಥಾನಗಳೊಂದಿಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಬಿಜೆಪಿ ಎನ್ನುವುದಕ್ಕಿಂತಲೂ ನರೇಂದ್ರ ಮೋದಿಯವರಿಗಾಗಿ ದೇಶ ನೀಡಿದ್ದ ಸ್ಪಷ್ಟ ಜನಾದೇಶವದು. ಹೀಗಿದ್ದರೂ ಶಿವಸೇನೆ ಪ್ರತಿಬಾರಿಯೂ ಕಿತಾಪತಿ ಮಾಡುತ್ತಲೇ ಬರುತ್ತಿದೆ. ಚಂದ್ರಬಾಬು ನಾಯ್ಡು ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಜಿಗಿಯುತ್ತಲೇ ಇದ್ದಾರೆ. ಇನ್ನು ಜಯಲಲಿತಾ ಬದುಕಿದ್ದಿದ್ದರೆ ಅದು ಇನ್ನೊಂದು ರೀತಿಯ ರಾಜಕಾರಣವಾಗುತ್ತಿತ್ತು ಬಿಡಿ. Read more
ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರುವುದನ್ನು ನೋಡಲು ಇನ್ನೆಷ್ಟು ದಶಕಗಳು ಕಾಯಬೇಕೋ?!
– ಸುಜಿತ್ ಕುಮಾರ್
‘ಈತ ನಮ್ಮ ನೂರು ಬಿಲಿಯನ್ ಕಂಪನಿಯ ಚೇರ್ಮ್ಯಾನ್. ಅಪ್ಪನ ಕಂಪನಿಯನ್ನು ಮುನ್ನಡಿಸಿಕೊಂಡು ಬಂದು ಎದ್ವಾ ತದ್ವಾ ಸಾಲವನ್ನು ಮಾಡಿ ತೀರಿಸಲಾಗದೆ ಇಂದು ವಿದೇಶದಲ್ಲಿ ಅಡಗಿ ಕೂತಿದ್ದಾನೆ. ಆತ ಮಾಡಿರುವ ಸಾಲದ ಮೊತ್ತ ಹೆಚ್ಚು ಕಡಿಮೆ ನಮ್ಮ ಇಡೀ ಕಂಪನಿಯ ರೆವೆನ್ಯೂ ಮೊತ್ತಕ್ಕೆ ಸಮ. ನಮ್ಮ ಕಂಪನಿಯನ್ನಷ್ಟೇ ಅಲ್ಲದೆ ನಮ್ಮನ್ನು ನಂಬಿಕೊಂಡು ಕೂತಿರುವ ಇನ್ನೂ ಹತ್ತಾರು ಕಂಪನಿಗಳ ಭವಿಷ್ಯದೊಟ್ಟಿಗೆ ಚೆಲ್ಲಾಡಿ ಮರೆಯಾದವನಿವ’ ಎಂಬ ಮಾತುಗಳಿಗೆ ಪೂರಕವಾಗಿರುವ ಹಾಗು ಅದೇ ಪೇಜಿನಲ್ಲಿ ಕಂಪನಿಯ ಇತರ ಉದ್ಯೋಗಿಗಳನ್ನು Mr. ಅಥವ Mrs. ಎಂಬ ಗೌರವ ಸೂಚಕಗಳನ್ನು ಬಳಸಿ ಸಂಭೋದಿಸಿವುದು ಒಂದೆಡೆಯಾದರೆ ಇನ್ನೊಂದೆಡೆ ಅಲ್ಲೇ ಕಂಪನಿಯ ಚೇರ್ಮ್ಯಾನ್ ನನ್ನು ಕೇವಲ ಹೆಸರಿನಿಂದಷ್ಟೇ ಕರೆಯುವ ಕಂಪನಿಯ ವೆಬ್ಸೈಟ್ ಅನ್ನು ಎಲ್ಲಿಯಾದರೂ ಕಂಡಿರುವಿರಾ? ಇಲ್ಲವಾದರೆ ಒಂದು ಕಾಲಕ್ಕೆ ಇಡೀ ವಿಶ್ವದಲ್ಲೇ ಟಾಪ್ ಸ್ಪಿರಿಟ್ ಕಂಪನಿಗಳಲ್ಲಿ ಒಂದಾಗಿ ಇಂದು ಅಕ್ಷರ ಸಹ ತನ್ನ ಉಳಿವಿಗಾಗಿ ಪರದಾಡುತ್ತಿರುವ ಯುಬಿ.ಗ್ರೂಪ್ಸ್ ನ ವೆಬ್ಸೈಟ್ ಗೆ ಒಮ್ಮೆ ಭೇಟಿ ಕೊಡಿ. ತನಗೆ ಅನ್ನ ಕೊಟ್ಟ ಒಡೆಯನಾದರೂ, ತಪ್ಪು ಮಾಡಿದಾಗ ಆತನನ್ನು ಕಳ್ಳನೆಂದೇ ಕರೆಯುತ್ತೀವಿ ಎಂಬಂತಿದೆ ಅಲ್ಲಿಯ ಬೋರ್ಡ್ ಆಫ್ ಡೈರೆಕ್ಟರ್ ಗಳ ಮಾತುಗಳು. Read more