ಎಎಪಿ ಗೆಲುವಿನ ಗುಂಗಿನಲ್ಲಿ ‘ಪೊರಕೆ’ ಹಿಡಿಯಲು ಹೊರಟವರು
– ರಾಕೇಶ್ ಶೆಟ್ಟಿ
ಮಿನಿ ಲೋಕಸಭಾ ಚುನಾವಣೆ ಎಂದೇ ಪರಿಗಣಿತವಾಗಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಸಮೀಕ್ಷೆಯಂತೆಯೇ ೪ ರಾಜ್ಯಗಳಲ್ಲಿ ಬಿಜೆಪಿ ಮತ್ತು ೧ ರಾಜ್ಯದಲ್ಲಿ ಕಾಂಗ್ರೆಸ್ಸ್ ತನ್ನ ಮುದ್ರೆಯೊತ್ತಿದೆ.ಆದರೆ,ಆಮ್ ಆದ್ಮಿ ಪಕ್ಷಕ್ಕೆ ೨೮ ಸ್ಥಾನಗಳನ್ನು ನೀಡುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದ್ದು ದೆಹಲಿಯ ಮತದಾರರು.
ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಎಎಪಿ ಪಕ್ಷ ೧೦-೧೫ ಸೀಟು ಪಡೆಯಬಹುದು ಮತ್ತು ಆ ಮೂಲಕ ಸರ್ಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸಬಹುದು ಅನ್ನುವ ಅಭಿಪ್ರಾಯಗಳೇ ಬಂದಿತ್ತು.ಆದರೆ ಮತದಾರಪ್ರಭು ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷದೆಡೆಗೆ ಹೆಚ್ಚು ಉದಾರಿಯಾಗಿದ್ದಾನೆ.’ರಾಜಕಾರಣಿಗಳೆಲ್ಲ ಭ್ರಷ್ಟರು’ ಅನ್ನುತಿದ್ದ ಕೇಜ್ರಿವಾಲ್ ತಾವೇ ಒಂದು ರಾಜಕೀಯ ಪಕ್ಷ ಸ್ಥಾಪಿಸುತ್ತೇವೆ ಅಂತ ಹೊರಟು ನಿಂತು ಪ್ರಸಕ್ತ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿ ಅದನ್ನು ಕಟ್ಟಿಕೊಳ್ಳುತ್ತ ಹೊರಟಾಗ ಯಾವ ರಾಜಕಾರಣಿಗಳು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸ್ ನಡುವೆ ನೇರಾನೇರ ಹಣಾಹಣಿ ನಡೆಯಲಿದೆ ಅನ್ನುವಷ್ಟು ನಿರ್ಲಕ್ಷ್ಯದಲ್ಲಿದ್ದ ಶೀಲಾ ದಿಕ್ಷೀತ್ ಕೂಡ,ಕೇಜ್ರಿವಾಲ್ ಮುಂದೆ ಸೋತು ಸುಣ್ಣವಾಗಿದ್ದಾರೆ.
ಲೋಕಾಯುಕ್ತ ಆಸ್ತಿ ವಿವರ ನೀಡುವುದೇ ಯುಕ್ತ!
– ತುರುವೇಕೆರೆ ಪ್ರಸಾದ್
ಈಚೆಗೆ ಪತ್ರಿಕೆಗಳಲ್ಲಿ ಹಲವು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ ಎಂಬ ಸಂಗತಿ ವರದಿಯಾಗಿತ್ತು. ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಜನಪ್ರತಿನಿಧಿಗಳು ಕಡ್ಡಾಯವಾಗಿ ಪ್ರತಿವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕಿದೆ. ಆದರೆ ಹಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಷ್ಟೇ ಅಲ್ಲ, ಜನಪ್ರತಿನಿಧಿಗಳು ಸಲ್ಲಿಸಿರುವ ಆಸ್ತಿ ವಿವರವೂ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಸಾರ್ವಜನಿಕರು ತಿಳಿಯಲಾಗುತ್ತಿಲ್ಲ. ಏಕೆಂದರೆ ಲೋಕಾಯುಕ್ತ ಜನಪ್ರತಿನಿಧಿಗಳ ಆಸ್ತಿ ವಿವರಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ನೀಡಲು ನಿರಾಕರಿಸುತ್ತದೆ.
ಕಳೆದ ಮಾರ್ಚ್ 18ರಂದು ನಾನು ವಿಧಾನಸಭಾ ಚುನಾವಣೆಗಳ ಹಿನ್ನಲೆಯಲ್ಲಿ ಕೆಲವು ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರವನ್ನು ಮಾಹಿತಿ ಹಕ್ಕು ಕಾಯಿದೆಯಡಿ ನೀಡುವಂತೆ ಕೋರಿದ್ದೆ. ಆದರೆ ಲೋಕಾಯುಕ್ತ ಆ ಮಾಹಿತಿ ನೀಡಲು ನಿರಾಕರಿಸಿತು. ಅದಕ್ಕೆ ಲೋಕಾಯುಕ್ತ ಕೊಟ್ಟ ಕಾರಣ ಮಾಹಿತಿ ಹಕ್ಕು ಕಾಯಿದೆಯಡಿ ನಾಗರಿಕರಿಗೆ ಸಾರ್ವಜನಿಕ ಪ್ರಾಧಿಕಾರದ ಸಾರ್ವಜನಿಕ ಸಂಗತಿಗಳ ಬಗ್ಗೆ ಮಾತ್ರ ಮಾಹಿತಿ ನೀಡಲಾಗುತ್ತದೆ. ನೀವು ಕೆಲವು ವ್ಯಕ್ತಿಗಳ ಖಾಸಗಿ ವಿವರಗಳ ಬಗ್ಗೆ ಮಾಹಿತಿ ಕೇಳಿದ್ದೀರಿ. ಇದು ಸಾರ್ವಜನಿಕ ಪ್ರಾಧಿಕಾರ ಅಥವಾ ಆಢಳಿತಕ್ಕೆ ಸಂಬಂಧಿಸಿದ ಸಾರ್ವಜನಿಕ ವಿಷಯವಲ್ಲ ಎಂಬುದು.(The intention of the legislation is to provide right to information of a citizen pertaining to public affairs of the public authority, but you have sought the information of an individual which is purely personal one and is not with respect to public affairs)
ಅವರು ಉಳಿಸಿದ್ದು ಒಂದೆರಡು ಕೋಟಿ ಮಾತ್ರವಲ್ಲ…
– ಗೋಪಾಲ್ ಕೃಷ್ಣ
ಓಡುವುದರಲ್ಲಿ ಹುಸೇನ್ ಬೋಲ್ಟ್ ತನ್ನ ದಾಖಲೆಯನ್ನು ತಾನೆ ಸರಿಗಟ್ಟುತ್ತಾನೆ. ಭ್ರಷ್ಟಾಚಾರದಲ್ಲಿ ನಮ್ಮ ನೇತಾರರು, ಅಧಿಕಾರಿಗಳು ಬೋಲ್ಟ್ ಗೆ ಅನುರೂಪ. ಆದರೆ ಭ್ರಷ್ಟಾಚಾರ ಪತ್ತೆ ಹಚ್ಚುವುದರಲ್ಲಿ! ಹೌದು, ಇಂತಹದ್ದೊಂದು ದಾಖಲೆಯೂ ಸೃಷ್ಟಿಯಾದಂತಿದೆ. ಅದು ನಮ್ಮ ಮಹಾಲೇಖಪಾಲರಿಂದ. ಎರಡನೆ ತಲೆಮಾರಿನ ತರಂಗಗುಚ್ಛ ಹಂಚಿಕೆಯಲ್ಲಾದದ್ದು 1.76 ಲಕ್ಷ ಕೋಟಿ ಅವ್ಯವಹಾರ. ಇದೇ ಐತಿಹಾಸಿಕ ದಾಖಲೆ ಎನ್ನುತ್ತಿದ್ದರು. ಅದನ್ನೂ ಮೀರಿಸಿದ್ದು 1.86 ಲಕ್ಷ ಕೋಟಿಯ ‘ಕೋಲ್’ಗೇಟ್ ಹಗರಣ. ಎರಡನ್ನೂ ಹೊರಚೆಲ್ಲಿದವರು ಮಹಾಲೇಖಪಾಲರೇ. ಅಂದ ಮೇಲೆ ಅವರದೇ ಹೊಸ ದಾಖಲೆ ಸೃಷ್ಟಿಯಾಗಿದೆ.
ದೆಹಲಿಯಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿನ ಹಗರಣ, ಎರಡನೆ ತಲೆಮಾರಿನ ತರಂಗಗುಚ್ಛ ಹಗರಣ ಮತ್ತು ಇದೀಗ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿನ ಲೋಪಗಳು ಕೇಂದ್ರ ಸರ್ಕಾರವನ್ನು ಬೆತ್ತಲುಗೊಳಿಸಿವೆ. ಭ್ರಷ್ಟಾಚಾರ ವಿರೋಧಿ ಹೋರಾಟವೆನ್ನುವುದು ಒಂದು ಫ್ಯಾಷನ್ ಆಗಿ ಹೋಗಿದೆ. ಈ ಒಂದು ಎಳೆಯನ್ನು ಹಿಡಿದುಕೊಂಡು ಖ್ಯಾತಿ, ಪ್ರಖ್ಯಾತಿ, ಕುಖ್ಯಾತಿ ಗಳಿಸುವವರಿಗೇನೂ ಲೆಕ್ಕವಿಲ್ಲ. ಅಂತಹವರುಗಳ ಮಧ್ಯೆಯೇ ಬೆರಳಣಿಕೆಯಷ್ಟು ಜನರು ಮಾತ್ರ ಪ್ರಾಮಾಣಿಕತೆ, ದಿಟ್ಟತನವನ್ನು ತಮ್ಮ ಕಾರ್ಯದಲ್ಲಿ ತೋರಿಸುತ್ತಾರೆ. ಈ ಸಾಲಿನಲ್ಲಿ ಅಗ್ರಗಣ್ಯರೆನ್ನುವಂತೆ ಕಾಣುವವರು ವಿನೋದ್‍ರಾಯ್.
ಒಂದು ಸೋಲಿನ ವೃತ್ತಾಂತ; ಪಾಠ ಕಲಿಯದ ದುರಂತ
-ರಾಕೇಶ್ ಏನ್ ಎಸ್
ಸೋಲು… ಸೋಲು… ಸೋಲು
ಸೋಲು ಅಕ್ಷ್ಯಮ್ಯ, ಅದರಲ್ಲಿಯೂ ಯುದ್ಧಭೂಮಿಯಲ್ಲಿನ ಅಪಜಯಕ್ಕೆ ಕ್ಷಮೆಯೇ ಇಲ್ಲ ಎಂದು ಕೊಂಡಿರುವ ಪರಂಪರೆ ನಮ್ಮದು. ಸೋತವ ಎಂಬ ಹಣೆಪಟ್ಟಿ ಯಾರಿಗೂ ಬೇಡ, ಸೋಲು ಎಂದಿಗೂ ತಬ್ಬಲಿ.
ಸರಿಯಾಗಿ ೫೦ ವರ್ಷಗಳ ಹಿಂದೆ, ಇದೇ ಸಮಯದಲ್ಲಿ ಹಿಮಾಲಯದ ಧವಳಗಿರಿಗಳ ಮಧ್ಯೆ ಭಾರತೀಯರನ್ನು ಅಪ್ಪಿಕೊಳ್ಳಲು ಇಂತಹದ್ದೆ ಒಂದು ಸೋಲು ಹೊಂಚು ಹಾಕಿ ಕುಳಿತಿತ್ತು. ಚೀನಾದ ಕೆಂಪು ಪಡೆ ಹೆದ್ದೆರೆಯೋಪಾದಿಯಲ್ಲಿ ನಡೆಸಿದ ದಾಳಿಗೆ ಗಣತಂತ್ರ ಸ್ವತಂತ್ರ ಭಾರತ ಬೆರಗಾಗಿತ್ತು, ಬೆನ್ನು ಬಾಗಿಸಿ ವಂದಿಸಿ ಸೋತು ಹೋಗಿತ್ತು.
ಭಾರತ ಮತ್ತು ಚೀನಾ ಪ್ರಾಚೀನ ನಾಗರಿಕತೆಗಳ ತವರೂರು. ಹಾಗೆಯೆ ಜಾಗತಿಕರಣಗೊಂಡ ಜಗತ್ತನ್ನು ಹೊತ್ತು ಸಾಗಿಸುವ ಗಾಲಿಗಳು. ಈ ಎರಡು ದೇಶಗಳಿಗೆ ಭೂತ ಮತ್ತು ಭವಿಷ್ಯದಲ್ಲಿರುವ ಪ್ರಾಮುಖ್ಯತೆ ಆಪಾರ. ಆದರೆ ಭಾರತ ಮತ್ತು ಚೀನಾದ ಮಧ್ಯೆ ಹುಟ್ಟಿಕೊಂಡ ಸಂಘರ್ಷದ ಕಾಲಘಟ್ಟ ಬಹಳ ವಿಚಿತ್ರವಾದದ್ದು.
೧೯೫೦ರ ದಶಕದಲ್ಲಿ ಚೀನಾವು ಮಾವೋ ತ್ಸೆತುಂಗ್‌ನ ತೆಕ್ಕೆಯಲ್ಲಿ ಅಪರಿಮಿತ ವೇಗದ ಅಭಿವೃದ್ಧಿಯ ಕನಸನ್ನು ಹೊಸೆಯುತ್ತಿದ್ದರೆ, ಭಾರತ ಬ್ರಿಟಿಷರಿಂದ ಮುಕ್ತವಾಗಿ ಪ್ರಜಾರಾಜ್ಯದ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದ ಸಮಯ, ಸಂದರ್ಭವದು. ಆಗ ಈ ಎರಡು ದೇಶಗಳಿಗೆ ಯುದ್ಧವೆಂಬ ಹೊರೆ ಬೇಕಾಗಿರಲಿಲ್ಲ.
ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ’ಹಿಂದಿ ಚೀನಿ ಭಾಯಿ ಭಾಯಿ’ ಎಂಬ ಉದ್ಘೋಷವನ್ನು ೧೯೫೦ರ ದಶಕದಲ್ಲಿ ಮುನ್ನೆಲೆಗೆ ತಂದಿದ್ದರು. ತೈವಾನ್ ವಿವಾದದಿಂದಾಗಿ ವಿಶ್ವ ಗುಂಪಿನಲ್ಲಿ ಚೀನಾ ಮೂಲೆಗುಂಪಾದ ಸಂದರ್ಭದಲ್ಲಿ ಅದನ್ನು ಒಂದು ದೇಶವೆಂದು ಪರಿಭಾವಿಸಿ ಅದರೊಂದಿಗೆ ಸ್ನೇಹ ಸಂಬಂಧ ಬೆಳೆಸಿದ ದೇಶಗಳಲ್ಲಿ ಭಾರತವು ಒಂದು. ಇಂತಹ ಮಧುರ ಸಂಬಂಧ ಉತ್ತುಂಗಕ್ಕೇರುತ್ತಲೇ ಪರಸ್ಪರ ಅನುಮಾನದ ಪಾತಳಕ್ಕೆ ಕುಸಿದದ್ದು ಚರಿತ್ರೆಯ ವೈಚಿತ್ರ. ಮತ್ತಷ್ಟು ಓದು