ವಿಷಯದ ವಿವರಗಳಿಗೆ ದಾಟಿರಿ

Posts from the ‘ಸುಳ್ಸುದ್ದಿ’ Category

19
ಜೂನ್

ನಕಲಿ ಜಾತಿ ಪ್ರಮಾಣ ಪತ್ರ ತೋರಿಸಿ 5 ಮೊಟ್ಟೆ ತಿಂದ ವಿದ್ಯಾರ್ಥಿ (ಸುಳ್ಸುದ್ದಿ)

ಪ್ರವೀಣ್ ಕುಮಾರ್ ಮಾವಿನಕಾಡು

  1. ನಕಲಿ ಜಾತಿ ಪ್ರಮಾಣ ಪತ್ರ ತೋರಿಸಿ ವಿದ್ಯಾರ್ಥಿಯೊಬ್ಬ ತನ್ನ ಜಾತಿಗೆ ಸೇರದ ಹೆಚ್ಚುವರಿ ಮೂರು ಮೊಟ್ಟೆಗಳನ್ನು ತಿಂದ ಘಟನೆ ಮೊಟ್ಟೇಚಿಪ್ಪನಹಳ್ಳಿ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಅಪರಾಧಿ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು ಅಪ್ರಾಪ್ತನಾಗಿರುವ ಕಾರಣ ಆತನನ್ನು ರಿಮ್ಯಾಂಡ್ ಹೋಮ್ ನಲ್ಲಿರಿಸಲಾಗಿದೆ.
 
ಘಟನೆಯ ವಿವರ: ಅಂದು ಬುಧವಾರ ಮೊಟ್ಟೇಚಿಪ್ಪನಹಳ್ಳಿ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಎಂದಿನಂತೆಯೇ ಮಕ್ಕಳಿಗೆ ಮೊಟ್ಟೆಯನ್ನು ನೀಡುತ್ತಿದ್ದರು.ಎರಡು ಮೊಟ್ಟೆ ವಿದ್ಯಾರ್ಥಿಗಳ ಕೋಟಾ ಹಿಂದಿನ ದಿನವೇ ಮುಗಿದಿದ್ದರಿಂದಾಗಿ ಆ ಮಕ್ಕಳನ್ನು ಹೊರಗೆ ಕೂರಿಸಿ ಐದು ಮೊಟ್ಟೆಯ ಮಕ್ಕಳನ್ನು ಮಾತ್ರ ಶಾಲಾ ಕೊಠಡಿಯೊಳಗೆ ಕೂರಿಸಿ ಮೊಟ್ಟೆಯನ್ನು ಹಂಚುತ್ತಿದ್ದರು.ಅದೇ ಸಂದರ್ಭದಲ್ಲಿ ಬಂದ ಆರೋಪಿ ವಿದ್ಯಾರ್ಥಿಯು ಮೊಟ್ಟೆ ನೀಡುವಂತೆ ಶಿಕ್ಷಕರೆಡೆಗೆ ಕೈ ಚಾಚಿದ್ದಾನೆ.ಅನುಮಾನಗೊಂಡ ಶಿಕ್ಷಕರು ಆತನನ್ನು ಪ್ರಶ್ನೆ ಮಾಡಿದಾಗ ನಕಲಿ ಜಾತಿ ಪ್ರಮಾಣಪತ್ರವೊಂದನ್ನು ತೋರಿಸಿದ್ದಾನೆ.ಇದನ್ನು ನಂಬಿದ ಮುಖ್ಯೋಪಾಧ್ಯಾಯರು ಆ ಬಾಲಕನಿಗೆ ಐದು ಮೊಟ್ಟೆಗಳನ್ನು ನೀಡಿದ್ದಾರೆ.
 
ಆದರೆ ವಾರಾಂತ್ಯದಲ್ಲಿ ಮೊಟ್ಟೆಗಳ ಅಂತಿಮ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಮೂರು ಮೊಟ್ಟೆ ಕಡಿಮೆಯಾಗಿರುವುದು ಕಂಡುಬಂದಿದೆ.ನಂತರ ಎಲ್ಲಾ ಮಕ್ಕಳಿಗೂ ಮತ್ತೊಮ್ಮೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.ಹಾಗೆ ಎಲ್ಲಾ ಮಕ್ಕಳೂ ಮತ್ತೊಮ್ಮೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಾಗ ಆರೋಪಿ ಬಾಲಕ ನಕಲಿ ಜಾತಿ ಪ್ರಮಾಣಪತ್ರ ತೋರಿಸಿ ಮೂರು ಮೊಟ್ಟೆ ಹೆಚ್ಚುವರಿಯಾಗಿ ತಿಂದಿದ್ದು ಸಾಬೀತಾಗಿದೆ.ಮುಖ್ಯ ಶಿಕ್ಷಕರು ಕೂಡಲೇ ಆ ವಿದ್ಯಾರ್ಥಿಯ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಆ ಮೋಸಗಾರ ವಿದ್ಯಾರ್ಥಿಯನ್ನು ಬಂಧಿಸಿ ರಿಮ್ಯಾಂಡ್ ಹೋಮ್ ಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕಿದ್ದು ಎಲ್ಲಾ ವಿವರಗಳನ್ನೂ ಇಲಾಖೆಯ ಆಯುಕ್ತರಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.ಅಲ್ಲದೇ ಕೇವಲ ಚಿಕ್ಕ ಹುಡುಗನೊಬ್ಬ ತೋರಿಸಿದ ನಕಲಿ ಜಾತಿಪತ್ರವನ್ನು ಗುರುತಿಸಲಾಗದೇ ಶಿಕ್ಷಣ ಇಲಾಖೆಗೆ ಮೂರು ಮೊಟ್ಟೆಗಳ ನಷ್ಟ ಉಂಟುಮಾಡಿದ ಕಾರಣ ನೀಡಿ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಮಾನ್ಯ ಶಿಕ್ಷಣ ಸಚಿವರನ್ನು ಪ್ರಶ್ನಿಸಿದಾಗ ‘ವಿಷಯವನ್ನು ಈಗಾಗಲೇ ನಾನು ವಾಟ್ಸಾಪ್ ಮೂಲಕ ತಿಳಿದುಕೊಂಡಿದ್ದೇನೆ.ಇಂತಹಾ ದುರ್ಬಳಕೆಯನ್ನು ತಡೆಯಲು ಮುಂದಿನ ದಿನಗಳಲ್ಲಿ ಪ್ರತೀ ಜಿಲ್ಲೆಯಲ್ಲೂ ಒಂದೊಂದು ವಿಶೇಷ ತನಿಖಾ ದಳವನ್ನು ಸ್ಥಾಪಿಸಲಾಗುವುದು.ಒಂದು ಜಾತಿಗೆ ಮೀಸಲಿಟ್ಟ ಮೊಟ್ಟೆಯನ್ನು ಇನ್ನೊಂದು ಜಾತಿಯ ಮಕ್ಕಳು ತಿನ್ನುವುದನ್ನು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಸಹಿಸುವುದಿಲ್ಲ’ಎಂದು ಹೇಳಿದರು.
ವಿಷಯ ಕಾಡ್ಗಿಚ್ಚಿನಂತೆ ಎಲ್ಲಾ ಕಡೆ ವೇಗವಾಗಿ ಹರಡುತ್ತಿದ್ದು ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಪ್ರಗತಿಪರ ಸಂಘಟನೆಗಳ ಜೊತೆ ಸೇರಿ ಟೈರಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.ಆ ಬಾಲಕನನ್ನು ನಮ್ಮ ಕೈಗೊಪ್ಪಿಸಿ ಎಂದು ಪಟ್ಟು ಹಿಡಿದಿದ್ದಾರೆ.ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
 
ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಬಾಲಕನ ತಂದೆ ‘ತನ್ನ ಓರಗೆಯವರೆಲ್ಲಾ ಐದು ಮೊಟ್ಟೆ ತಿಂದು ಎಂಜಾಯ್ ಮಾಡುತ್ತಿರುವಾಗ ವಯೋ ಸಹಜ ಆಸೆ ಆಕಾಂಕ್ಷೆಗಳನ್ನು ತಡೆದುಕೊಳ್ಳಲಾಗದೇ ಆತ ಹಾಗೆ ಮಾಡಿರಬಹುದು.ಆದರೆ ಅದಕ್ಕಾಗಿ ಆತ ಬಳಸಿದ ಮಾರ್ಗ ಮಾತ್ರ ನಾಗರೀಕ ಸಮಾಜ ಒಪ್ಪಲು ಸಾಧ್ಯವಿಲ್ಲ.ಇದೊಂದು ಸಾರಿ ನನ್ನ ಮಗನನ್ನು ಕ್ಷಮಿಸಿಬಿಡಿ.ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆ.ಜೊತೆಗೆ ಸಂವಿಧಾನಬದ್ಧ ಜಾತಿ ವ್ಯವಸ್ಥೆಯ ಬಗ್ಗೆಯೂ ಅವನಿಗೆ ತಿಳಿಹೇಳುತ್ತೇವೆ’ ಎಂದು ಹೇಳಿದರು.
 
ಈ ನಡುವೆ ಪ್ರಕರಣಕ್ಕೆ ಇನ್ನೊಂದು ರೋಚಕ ಟ್ವಿಸ್ಟ್ ಸಿಕ್ಕಿದ್ದು ಬಲಗೈ ಗೆ ಐದು ಮೊಟ್ಟೆ ಕೊಡುವುದಾದರೆ ಎಡಗೈಗೆ ಏಳು ಮೊಟ್ಟೆ ಕೊಡಿ ಎಂದು ‘ಮೊಟ್ಟೆಗಾಗಿ ನಾವು’ ಸಂಘಟನೆ ಒತ್ತಾಯಿಸಿದೆ.ಒಂದು ವೇಳೆ ಎಡಗೈ ಗೆ ಏಳು ಮೊಟ್ಟೆ ಕೊಡುವ ಬಗ್ಗೆ ಇನ್ನೊಂದು ತಿಂಗಳ ಒಳಗಾಗಿ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಅದು ಎಚ್ಚರಿಸಿದೆ.
 
ವಿ.ಸೂ: ಇದೊಂದು ಕಾಲ್ಪನಿಕ ಬರಹವಾಗಿದ್ದು ಮಕ್ಕಳಿಗೆ ಜಾತಿಯಾಧಾರಿತ ಮೊಟ್ಟೆ ವಿತರಣೆ ಯೋಜನೆಯ ಬಗ್ಗೆ ವಿಧಾನಸಭೆಯಲ್ಲೇ ಚರ್ಚೆಯಾಗಿದ್ದು ಹಾಗೊಂದು ವೇಳೆ ಮುಂದೆ ಅಂತಹಾ ಯೋಜನೆಗಳು ಅನುಷ್ಠಾನಗೊಂಡರೆ ಏನೆಲ್ಲಾ ಅನಾಹುತಗಳು ಸಂಭವಿಸಬಹುದು ಎನ್ನುವುದನ್ನು ಕಲ್ಪಿಸಿಕೊಂಡು ಬರೆದಿದ್ದಾಗಿರುತ್ತದೆ.
23
ಫೆಬ್ರ

ಬಿಗ್ ಬಾಸ್ ನಲ್ಲೂ ಮೀಸಲಾತಿಗೆ ಒತ್ತಾಯ (ಸುಳ್ಸುದ್ದಿ)

– ಪ್ರವೀಣ್ ಕುಮಾರ್, ಮಾವಿನಕಾಡು

sulsuddiಬಿಗ್ ಬಾಸ್ ನಲ್ಲೂ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರಗತಿಪರ ಹೋರಾಟಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು: ಖಾಸಗಿ ಚ್ಯಾನಲ್ ಗಳು ನಡೆಸುವ ಬಿಗ್ ಬಾಸ್ ಸ್ಪರ್ಧೆಗಳಲ್ಲೂ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರಗತಿಪರ ಹೋರಾಟಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದರು. ಚಿನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಪ್ರ.ಹೋ.ಸಂ. ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀಸಲಾತಿ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಘೋಷಣೆಗಳನ್ನು ಕೂಗಿದರು. ಮತ್ತಷ್ಟು ಓದು »

4
ಫೆಬ್ರ

ರಾಹುಲ್ ಗಾಂಧಿಗೆ ಬಿ.ಪಿ.ಎಲ್ ಕಾರ್ಡ್ ನೀಡಲು ನಿರ್ಧಾರ: ಸಿಎಂ (ಸುಳ್ಸುದ್ದಿ)

– ಪ್ರವೀಣ್ ಕುಮಾರ್, ಮಾವಿನಕಾಡು

sulsuddiರಾಹುಲ್ ಗಾಂಧಿ ಅವರಿಗೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮೂಲಕ ಬಿ.ಪಿ.ಎಲ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅವರು ಇಂದು ಮೂರನೇ ಮಹಡಿಯಲ್ಲಿ ನಡೆದ ತುರ್ತು ಸಚಿವ ಸಂಪುಟದ ಸಭೆಯ ನಂತರ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ಈ ಬಗ್ಗೆ ಸಚಿವ ಸಂಪುಟ ಒಮ್ಮತದ ನಿರ್ಧಾರ ಕೈಗೊಂಡಿದ್ದು ಮುಂದಿನ ಶುಕ್ರವಾರ ನವದೆಹಲಿಯಲ್ಲಿ ಅವರನ್ನು ಭೇಟಿಯಾಗಿ ಅವರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದರು. ಅದಕ್ಕಾಗಿ ಅಂದು ಅರ್ಧ ಗಂಟೆ ಭೇಟಿಯಾಗಲು ಅವರ ಬಳಿ ಸಮಯ ಕೇಳಿ ಪತ್ರ ಬರೆದಿದ್ದು ಪಕ್ಷಾಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು. ಮತ್ತಷ್ಟು ಓದು »

2
ಡಿಸೆ

ಮೋದಿ ಭಾರತದಲ್ಲಿ ತೀವ್ರಗೊಂಡ ನಿರುದ್ಯೋಗ ಸಮಸ್ಯೆ : ಚಿಂತಾಜನಕ ಮಾಹಿತಿ (ಸುಳ್ಸುದ್ದಿ)

ಪ್ರವೀಣ್ ಕುಮಾರ್, ಮಾವಿನಕಾಡು

sulsuddi-2ನವದೆಹಲಿ, ಡಿಸೆಂಬರ್ 2 : ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತಲೂ ತೀವ್ರವಾಗಿದೆ. ಕಳೆದ ಹನ್ನೆರಡು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ನಿರುದ್ಯೋಗ ದೇಶದಲ್ಲಿ ತಾಂಡವವಾಡುತ್ತಿರುವುದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.

ಕಳೆದ ನವೆಂಬರ್.8 ನೇ ತಾರೀಕಿನಿಂದ ದೇಶದಲ್ಲಿ ಇಲ್ಲಿಯವರೆಗೆ 15 ರಿಂದ 65 ರ ವಯಸ್ಸಿನ ಸುಮಾರು 8% ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸೆಂಟ್ರಲ್‌ ಗಂಜಿ ಬ್ಯೂರೋ ನಡೆಸಿದ ಉದ್ಯೋಗ-ನಿರುದ್ಯೋಗ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಮತ್ತಷ್ಟು ಓದು »

11
ನವೆಂ

ಸರ್ಕಾರದಿಂದ ವೀರಪ್ಪನ್ ಜಯಂತಿಗೆ ಸಕಲ ಸಿದ್ಧತೆ: ಬರುವ ಯುಗಾದಿಗೆ ದಿನ ನಿಗದಿ (ಸುಳ್ಸುದ್ದಿ)

– ಪ್ರವೀಣ್ ಕುಮಾರ್, ಮಾವಿನಕಾಡು

730232277ಬೆಂಗಳೂರು: ರಾಜ್ಯದಲ್ಲಿ ವೀರಪ್ಪನ್ ಜಯಂತಿಯನ್ನು ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ವೀರಪ್ಪನ್ ಜಯಂತಿ ಅಂಗವಾಗಿ ಮೊನ್ನೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಈ  ಸಾಲಿನಿಂದ ಸರ್ಕಾರದ ಹಣದಲ್ಲಿ ವೀರಪ್ಪನ್ ಜಯಂತಿಯನ್ನು ಆಚರಿಸಲಾಗುವುದು ಮತ್ತು ಮೊದಲ ವರ್ಷದ ವೀರಪ್ಪನ್ ಜಯಂತಿಯನ್ನು ಬರುವ ಯುಗಾದಿಯಂದು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಂದು ರಾಜ್ಯದಾದ್ಯಂತ ವೀರಪ್ಪನ್ ಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಮಾಡಲಾಗುತ್ತಿದ್ದು, ಎಲ್ಲೆಡೆ ವೀರಪ್ಪನ್ ಅವರ ಭಾವಚಿತ್ರದ ಮೆರವಣಿಗೆಯನ್ನು ಮಾಡಲಾಗುವುದು ಎಂದರು.    ಮತ್ತಷ್ಟು ಓದು »

4
ನವೆಂ

ಕಲೆಕ್ಷನ್ ಹಣ ಹಂಚಿಕೆ ವಿಚಾರಕ್ಕೆ ಗಂಜಿ ಚಲೋ ನಾಯಕರ ಮಾರಾಮಾರಿ: ಐವರಿಗೆ ಗಾಯ (ಸುಳ್ಸುದ್ದಿ)

– ಪ್ರವೀಣ್ ಕುಮಾರ್, ಮಾವಿನಕಾಡು

%e0%b2%ae%e0%b2%be%e0%b2%b0%e0%b2%be%e0%b2%ae%e0%b2%be%e0%b2%b0%e0%b2%bfಕೆಲವು ದಿನಗಳ ಹಿಂದೆ “ಗಂಜಿಗಾಗಿ ಚಲೋ” ಎನ್ನುವ ಕಾರ್ಯಕ್ರಮ ಮಾಡಿದ್ದ ತಂಡವೊಂದು ಆ ಕಾರ್ಯಕ್ರಮಕ್ಕೆಂದು ಕಲೆಕ್ಷನ್ ಮಾಡಿದ್ದ ಹಣವನ್ನು ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಮಾಡಿಕೊಂಡು ಪರಸ್ಪರ ಬಡಿದಾಡಿ ಆಸ್ಪತ್ರೆ ಸೇರಿದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ: ಕೆಲವು ದಿನಗಳ ಹಿಂದೆ ನಕ್ಸಲ್ ಹೋರಾಟಗಾರರು, ಅನ್ಯ ಕೋಮಿನ ಕೆಲವರ ಬೆಂಬಲದೊಂದಿಗೆ ಕೆಲ ದಪಹೋಗಾರರ ಜೊತೆ ಸೇರಿ ಗಂಜಿಗಾಗಿ ಚಲೋ ಎನ್ನುವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರನ್ನು ಸೇರಿಸುವುದಾಗಿ ಹೇಳಿಕೊಂಡಿದ್ದ ಆ ಹೋರಾಟಗಾರರು ತಳಮಟ್ಟದ ಶೋಷಿತರಷ್ಟೇ ಅಲ್ಲದೇ ರಾಜಕಾರಣಿಗಳೂ ಸೇರಿದಂತೆ ಹಲವಾರು ಜನರಿಂದ ರೂ.500 ರಿಂದ ಐವತ್ತು ಸಾವಿರದವರೆಗೆ ಹಣವನ್ನು ಕಲೆಕ್ಷನ್ ಮಾಡಿದ್ದರು. ಕಲೆಕ್ಷನ್ ಆದ ಆ ಹಣದ ಒಟ್ಟು ಮೊತ್ತ ಸುಮಾರು ಎರಡು ಕೋಟಿಗೂ ಮೀರಿತ್ತು. ಆದರೆ ಒಂದು ಲಕ್ಷ ಜನರು ಸೇರುತ್ತಾರೆ ಎಂದು ಬಿಂಬಿತವಾಗಿದ್ದ ಆ ಕಾರ್ಯಕ್ರಮಕ್ಕೆ ಸೇರಿದ್ದು ಕೇವಲ 632 ಜನ ಮಾತ್ರ! ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಕೇವಲ ನಾಲ್ಕೂವರೆ ಲಕ್ಷಗಳು! ಇದರಿಂದಾಗಿ ಬರೋಬ್ಬರಿ ಎರಡು ಕೋಟಿ ರೂಪಾಯಿಗಳಷ್ಟು ಹಣ ಹೋರಾಟಗಾರರ ಬಳಿಯೇ ಉಳಿಯಿತು. ಇದನ್ನು ಮೊದಲೇ ಯೋಚಿಸಿದ್ದ ಕಾರ್ಯಕ್ರಮದ ಆಯೋಜಕರಾದ ಹೋರಾಟಗಾರರು ಮುಂದಿನ ವಾರ ಎಲ್ಲರೂ ತುಮಕೂರು ರಸ್ತೆಯ “ಫಿಶ್ ಲ್ಯಾಂಡ್ ಢಾಬಾ” ದಲ್ಲಿ ಕೂತು ಹಂಚಿಕೊಳ್ಳುವುದೆಂದು ತೀರ್ಮಾನಿಸಿ ಕಾರ್ಯಕ್ರಮಕ್ಕೆ ತಮ್ಮ ತನು-ಮನವನ್ನು ಅರ್ಪಿಸಿದ್ದ ರಾಜಕಾರಣಿಯೊಬ್ಬರ ಸಲಹೆಗಾರರ ಕೈಲಿ ಆ ಹಣವನ್ನು ಕೊಟ್ಟು ತಮ್ಮ ತಮ್ಮ ಮನೆಗಳನ್ನು ತಲುಪಿದ್ದರು. ಮತ್ತಷ್ಟು ಓದು »

12
ಆಕ್ಟೋ

ಪ್ರಾರ್ಥನಾ ಮಂದಿರ ವಶಕ್ಕೆ ಸರ್ಕಾರದ ಚಿಂತನೆ: ಭುಗಿಲೆದ್ದ ಆಕ್ರೋಶ (ಸುಳ್ಸುದ್ದಿ)

– ಪ್ರವೀಣ್ ಕುಮಾರ್, ಮಾವಿನಕಾಡು

sulsuddiಕಲಾಸಿಪಾಳ್ಯದಲ್ಲಿರುವ ಪ್ರಾರ್ಥನಾ ಮಂದಿರವೊಂದನ್ನು ಸರ್ಕಾರ ವಶಕ್ಕೆ ಪಡೆಯಲು ತೀರ್ಮಾನಿಸಿದೆ. ಈ ಬಗ್ಗೆ ಗುರುವಾರ ನೋಟೀಸ್ ನೀಡಲಾಗಿದ್ದು ನಾಲ್ಕು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಲಾಗಿದೆ. ಈ ಪ್ರಾರ್ಥನಾ ಮಂದಿರವನ್ನು ಹೇಗಾದರೂ ಮಾಡಿ ವಶಪಡಿಸಿಕೊಳ್ಳಲೇಬೇಕು ಎನ್ನುವ ಹಠವಿದ್ದು ಅದೇ ಕಾರಣಕ್ಕೆ ಕೇವಲ ನಾಲ್ಕೇ ದಿನ ಸಮಯ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೋಟೀಸ್ ನೀಡಿದ್ದಾರೆ ಎಂದು ಸೌಹಾರ್ದಗೇಡು ವೇದಿಕೆ ದೂರಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ನಿವೃತ್ತರಾಗಲಿದ್ದು ಈ ಹಂತದಲ್ಲಿ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆಯುವ ಕುರಿತು ನೋಟೀಸ್ ನೀಡಿರುವುದು ಕರ್ನಾಟಕದ ಹಲವು ಬುದ್ದಿಜೀವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ನಿವೃತ್ತಿಯ ಹಂತದಲ್ಲಿ ಇಂತಹಾ ಪ್ರಮುಖ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ಒಮ್ಮೆ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆದ ನಂತರ ನಿವೃತ್ತಿಯಾದರೆ ಅದರಿಂದ ಮುಂದೆ ಆಗಬಹುದಾದ ಅಪಾಯಗಳಿಂದ ತಪ್ಪಿಸಿಕೊಳ್ಳುವ ಹುನ್ನಾರ ಇದರಲ್ಲಿದೆ ಎಂದು ಜಾತ್ಯತೀತ ಸಂಘಟನೆಯ ಪ್ರಮುಖರು ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಓದು »

25
ಜೂನ್

ಸಂಪುಟ ಪುನಾರಚನೆಯ ಸುದ್ದಿ ಕೇಳಿ ದಿಕ್ಕಾಪಾಲಾಗಿ ಓಡಿದ ಜನ

ಪ್ರವೀಣ್ ಕುಮಾರ್, ಮಾವಿನಕಾಡು 

sulsuddi (4)ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಪಕ್ಷದ ಹಲವಾರು ಹಿರಿಯ ಮುಖಂಡರು, ಹಲವು ಜಾತಿಯ ನಾಯಕರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದಾಗಿ ಇನ್ನೆರಡು ದಿನಗಳಲ್ಲಿ ಕೆಲವು ಸಚಿವರನ್ನು ಕೈ ಬಿಟ್ಟು ಅವರ ಬದಲಿಗೆ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತೊಮ್ಮೆ ಮಂತ್ರಿಮಂಡಲವನ್ನು ಪುನರ್ ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇಂದು ತಿಳಿಸಿದರು. ಮತ್ತಷ್ಟು ಓದು »

17
ಜೂನ್

ಭಿಕ್ಷೋದ್ಯಮ ಕ್ಷೇತ್ರದಲ್ಲೂ ಮೀಸಲಾತಿಗಾಗಿ ಬಡಿದಾಡಿ: ಕಾಣೇಶ್ ಜಲ್ಲಿಕಟ್ಟು ಸಲಹೆ (ಸುಳ್ಸುದ್ದಿ)

praveenkumar mavina kadu

ಕಡಿಮೆ ಸಂಖ್ಯೆಯಲ್ಲಿರುವ ಸರಕಾರೀ ಹುದ್ದೆಗಳಿಗಾಗಿ ಹೊಡೆದಾಡುತ್ತಾ ಕುಳಿತರೆ ಉತ್ತಮ ಲಾಭವಿರುವ ಭಿಕ್ಷೋದ್ಯಮ ಬಲಾಢ್ಯರ ಪಾಲಾಗುತ್ತದೆ. ಆದ್ದರಿಂದ ಭಿಕ್ಷೋದ್ಯಮ ಕ್ಷೇತ್ರದತ್ತಲೂ ಗಮನ ಹರಿಸಿ, ಅಲ್ಲಿಯೂ ಮೀಸಲಾತಿ ಜಾರಿಗೆ ಹೋರಾಟ ನಡೆಸುವ ಮೂಲಕ ಶೋಷಿತರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು ಎಂದು ಹಿರಿಯ ಬುದ್ದಿಜೀವಿ ಪತ್ರಕರ್ತ ರಾಜಕಾರಣಿ ಶ್ರೀ ಕಾಣೇಶ್ ಜಲ್ಲಿಕಟ್ಟು ಸಲಹೆ ನೀಡಿದರು. ಅವರು ಶಿವಮೊಗ್ಗದಲ್ಲಿ ನಿನ್ನೆ ‘ಪ್ರಗತಿಪರ ಬರ್ನ್ ಆಲ್ ವೇದಿಕೆ’ ಹಮ್ಮಿಕೊಂಡಿದ್ದ “ಮೋದಿ ವಿರೋಧಿಗಳ ತವಕ ತಲ್ಲಣಗಳು” ಎನ್ನುವ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮತ್ತಷ್ಟು ಓದು »

10
ಜೂನ್

ಪಂಚ ಭೂತಗಳಲ್ಲಿ ಲೀನವಾದ ವಿಚಾರವಾದ! (ಸುಳ್ಸುದ್ದಿ)

-ಪ್ರವೀಣ್ ಕುಮಾರ್, ಮಾವಿನಕಾಡು

sulsuddi (2)ಖ್ಯಾತ ವಿಚಾರವಾದಿ, ಸಾಹಿತಿ, ಬುದ್ಧಿಜೀವಿ, ಹಿಂದೇ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದ ಹಿಂದೂಪುರ ದೇವಮೂರ್ತಿಯವರು ವಯೋಸಹಜ ಖಾಯಿಲೆಗಳ ಪರಿಣಾಮ ನಿನ್ನೆ ತಮ್ಮ ಸ್ವಗೃಹ ‘ದೇವಿ ಕೃಪಾ’ ದಲ್ಲಿ ಮೃತರಾದರು. ಅವರಿಗೆ ಎಪ್ಪತ್ಮೂರು ವರ್ಷ ವಯಸ್ಸಾಗಿತ್ತು. ಅವರು ಮುಜರಾಯಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅರುಣ್ ಜೋಸೆಫ್ ಮತ್ತು ಮಗಳು ದೇವಿಶ್ರೀ, ಅಳಿಯ ಅಮೆರಿಕಾದಲ್ಲಿ ಖ್ಯಾತ ಪುರೋಹಿತರಾಗಿರುವ ಕ್ರಿಷ್ ಭಟ್ ಮತ್ತು ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮತ್ತಷ್ಟು ಓದು »