ಕಲೆಕ್ಷನ್ ಹಣ ಹಂಚಿಕೆ ವಿಚಾರಕ್ಕೆ ಗಂಜಿ ಚಲೋ ನಾಯಕರ ಮಾರಾಮಾರಿ: ಐವರಿಗೆ ಗಾಯ (ಸುಳ್ಸುದ್ದಿ)
– ಪ್ರವೀಣ್ ಕುಮಾರ್, ಮಾವಿನಕಾಡು
ಕೆಲವು ದಿನಗಳ ಹಿಂದೆ “ಗಂಜಿಗಾಗಿ ಚಲೋ” ಎನ್ನುವ ಕಾರ್ಯಕ್ರಮ ಮಾಡಿದ್ದ ತಂಡವೊಂದು ಆ ಕಾರ್ಯಕ್ರಮಕ್ಕೆಂದು ಕಲೆಕ್ಷನ್ ಮಾಡಿದ್ದ ಹಣವನ್ನು ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಮಾಡಿಕೊಂಡು ಪರಸ್ಪರ ಬಡಿದಾಡಿ ಆಸ್ಪತ್ರೆ ಸೇರಿದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ: ಕೆಲವು ದಿನಗಳ ಹಿಂದೆ ನಕ್ಸಲ್ ಹೋರಾಟಗಾರರು, ಅನ್ಯ ಕೋಮಿನ ಕೆಲವರ ಬೆಂಬಲದೊಂದಿಗೆ ಕೆಲ ದಪಹೋಗಾರರ ಜೊತೆ ಸೇರಿ ಗಂಜಿಗಾಗಿ ಚಲೋ ಎನ್ನುವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರನ್ನು ಸೇರಿಸುವುದಾಗಿ ಹೇಳಿಕೊಂಡಿದ್ದ ಆ ಹೋರಾಟಗಾರರು ತಳಮಟ್ಟದ ಶೋಷಿತರಷ್ಟೇ ಅಲ್ಲದೇ ರಾಜಕಾರಣಿಗಳೂ ಸೇರಿದಂತೆ ಹಲವಾರು ಜನರಿಂದ ರೂ.500 ರಿಂದ ಐವತ್ತು ಸಾವಿರದವರೆಗೆ ಹಣವನ್ನು ಕಲೆಕ್ಷನ್ ಮಾಡಿದ್ದರು. ಕಲೆಕ್ಷನ್ ಆದ ಆ ಹಣದ ಒಟ್ಟು ಮೊತ್ತ ಸುಮಾರು ಎರಡು ಕೋಟಿಗೂ ಮೀರಿತ್ತು. ಆದರೆ ಒಂದು ಲಕ್ಷ ಜನರು ಸೇರುತ್ತಾರೆ ಎಂದು ಬಿಂಬಿತವಾಗಿದ್ದ ಆ ಕಾರ್ಯಕ್ರಮಕ್ಕೆ ಸೇರಿದ್ದು ಕೇವಲ 632 ಜನ ಮಾತ್ರ! ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಕೇವಲ ನಾಲ್ಕೂವರೆ ಲಕ್ಷಗಳು! ಇದರಿಂದಾಗಿ ಬರೋಬ್ಬರಿ ಎರಡು ಕೋಟಿ ರೂಪಾಯಿಗಳಷ್ಟು ಹಣ ಹೋರಾಟಗಾರರ ಬಳಿಯೇ ಉಳಿಯಿತು. ಇದನ್ನು ಮೊದಲೇ ಯೋಚಿಸಿದ್ದ ಕಾರ್ಯಕ್ರಮದ ಆಯೋಜಕರಾದ ಹೋರಾಟಗಾರರು ಮುಂದಿನ ವಾರ ಎಲ್ಲರೂ ತುಮಕೂರು ರಸ್ತೆಯ “ಫಿಶ್ ಲ್ಯಾಂಡ್ ಢಾಬಾ” ದಲ್ಲಿ ಕೂತು ಹಂಚಿಕೊಳ್ಳುವುದೆಂದು ತೀರ್ಮಾನಿಸಿ ಕಾರ್ಯಕ್ರಮಕ್ಕೆ ತಮ್ಮ ತನು-ಮನವನ್ನು ಅರ್ಪಿಸಿದ್ದ ರಾಜಕಾರಣಿಯೊಬ್ಬರ ಸಲಹೆಗಾರರ ಕೈಲಿ ಆ ಹಣವನ್ನು ಕೊಟ್ಟು ತಮ್ಮ ತಮ್ಮ ಮನೆಗಳನ್ನು ತಲುಪಿದ್ದರು. ಮತ್ತಷ್ಟು ಓದು
ಪ್ರಾರ್ಥನಾ ಮಂದಿರ ವಶಕ್ಕೆ ಸರ್ಕಾರದ ಚಿಂತನೆ: ಭುಗಿಲೆದ್ದ ಆಕ್ರೋಶ (ಸುಳ್ಸುದ್ದಿ)
– ಪ್ರವೀಣ್ ಕುಮಾರ್, ಮಾವಿನಕಾಡು
ಕಲಾಸಿಪಾಳ್ಯದಲ್ಲಿರುವ ಪ್ರಾರ್ಥನಾ ಮಂದಿರವೊಂದನ್ನು ಸರ್ಕಾರ ವಶಕ್ಕೆ ಪಡೆಯಲು ತೀರ್ಮಾನಿಸಿದೆ. ಈ ಬಗ್ಗೆ ಗುರುವಾರ ನೋಟೀಸ್ ನೀಡಲಾಗಿದ್ದು ನಾಲ್ಕು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಲಾಗಿದೆ. ಈ ಪ್ರಾರ್ಥನಾ ಮಂದಿರವನ್ನು ಹೇಗಾದರೂ ಮಾಡಿ ವಶಪಡಿಸಿಕೊಳ್ಳಲೇಬೇಕು ಎನ್ನುವ ಹಠವಿದ್ದು ಅದೇ ಕಾರಣಕ್ಕೆ ಕೇವಲ ನಾಲ್ಕೇ ದಿನ ಸಮಯ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೋಟೀಸ್ ನೀಡಿದ್ದಾರೆ ಎಂದು ಸೌಹಾರ್ದಗೇಡು ವೇದಿಕೆ ದೂರಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ನಿವೃತ್ತರಾಗಲಿದ್ದು ಈ ಹಂತದಲ್ಲಿ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆಯುವ ಕುರಿತು ನೋಟೀಸ್ ನೀಡಿರುವುದು ಕರ್ನಾಟಕದ ಹಲವು ಬುದ್ದಿಜೀವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ನಿವೃತ್ತಿಯ ಹಂತದಲ್ಲಿ ಇಂತಹಾ ಪ್ರಮುಖ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ಒಮ್ಮೆ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆದ ನಂತರ ನಿವೃತ್ತಿಯಾದರೆ ಅದರಿಂದ ಮುಂದೆ ಆಗಬಹುದಾದ ಅಪಾಯಗಳಿಂದ ತಪ್ಪಿಸಿಕೊಳ್ಳುವ ಹುನ್ನಾರ ಇದರಲ್ಲಿದೆ ಎಂದು ಜಾತ್ಯತೀತ ಸಂಘಟನೆಯ ಪ್ರಮುಖರು ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಓದು
ವೀಡಿಯೋ ಗೇಮ್ ಸಾಧಕ – ಬಾಧಕಗಳ ಒಂದು ವಿಶ್ಲೇಷಣೆ
– ಶೈಲೇಶ್ ಕುಲ್ಕರ್ಣಿ
ವೀಡಿಯೊಗೇಮ್ ಗಳು ನಿಜಕ್ಕೂ ವ್ಯಕ್ತಿಯ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲಷ್ಟು ಪ್ರಭಾವಶಾಲಿಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡೇ ಪರ-ವಿರೋಧದ ಚರ್ಚೆ ಕಳೆದ ೩೦ವರ್ಷಗಳಿಂದಲೂ ವಿಶ್ವದಾದ್ಯಂತ ನಡೆದಿದೆ. ಸಿನೆಮಾ, ಕುಣಿತಗಳಿಂದ ತೊಡಗಿ ದೂರದರ್ಶನ, ಅಂತರ್ಜಾಲ, ಕಾದಂಬರಿಗಳಾದಿಯಾಗಿ ಬಹುಶಃ ಮನುಷ್ಯನ ಗಮನವನ್ನೆಲ್ಲಾ ತನ್ನಲ್ಲಿ ಹಿಡಿದಿಡಬಲ್ಲ ಸಾಧ್ಯತೆಯುಳ್ಳ ಎಲ್ಲಾ ಚಟುವಟಿಕೆಗಳೂ ಒಂದಲ್ಲ ಒಂದು ಸಾರಿ ಈ ರೀತಿಯ ಟೀಕೆಯನ್ನ ಎದುರಿಸಿಯೇ ಬಂದಿವೆ. ಮತ್ತಷ್ಟು ಓದು
ಸಂಪುಟ ಪುನಾರಚನೆಯ ಸುದ್ದಿ ಕೇಳಿ ದಿಕ್ಕಾಪಾಲಾಗಿ ಓಡಿದ ಜನ
ಪ್ರವೀಣ್ ಕುಮಾರ್, ಮಾವಿನಕಾಡು
ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಪಕ್ಷದ ಹಲವಾರು ಹಿರಿಯ ಮುಖಂಡರು, ಹಲವು ಜಾತಿಯ ನಾಯಕರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದಾಗಿ ಇನ್ನೆರಡು ದಿನಗಳಲ್ಲಿ ಕೆಲವು ಸಚಿವರನ್ನು ಕೈ ಬಿಟ್ಟು ಅವರ ಬದಲಿಗೆ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತೊಮ್ಮೆ ಮಂತ್ರಿಮಂಡಲವನ್ನು ಪುನರ್ ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇಂದು ತಿಳಿಸಿದರು. ಮತ್ತಷ್ಟು ಓದು
ಭಿಕ್ಷೋದ್ಯಮ ಕ್ಷೇತ್ರದಲ್ಲೂ ಮೀಸಲಾತಿಗಾಗಿ ಬಡಿದಾಡಿ: ಕಾಣೇಶ್ ಜಲ್ಲಿಕಟ್ಟು ಸಲಹೆ (ಸುಳ್ಸುದ್ದಿ)
ಕಡಿಮೆ ಸಂಖ್ಯೆಯಲ್ಲಿರುವ ಸರಕಾರೀ ಹುದ್ದೆಗಳಿಗಾಗಿ ಹೊಡೆದಾಡುತ್ತಾ ಕುಳಿತರೆ ಉತ್ತಮ ಲಾಭವಿರುವ ಭಿಕ್ಷೋದ್ಯಮ ಬಲಾಢ್ಯರ ಪಾಲಾಗುತ್ತದೆ. ಆದ್ದರಿಂದ ಭಿಕ್ಷೋದ್ಯಮ ಕ್ಷೇತ್ರದತ್ತಲೂ ಗಮನ ಹರಿಸಿ, ಅಲ್ಲಿಯೂ ಮೀಸಲಾತಿ ಜಾರಿಗೆ ಹೋರಾಟ ನಡೆಸುವ ಮೂಲಕ ಶೋಷಿತರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು ಎಂದು ಹಿರಿಯ ಬುದ್ದಿಜೀವಿ ಪತ್ರಕರ್ತ ರಾಜಕಾರಣಿ ಶ್ರೀ ಕಾಣೇಶ್ ಜಲ್ಲಿಕಟ್ಟು ಸಲಹೆ ನೀಡಿದರು. ಅವರು ಶಿವಮೊಗ್ಗದಲ್ಲಿ ನಿನ್ನೆ ‘ಪ್ರಗತಿಪರ ಬರ್ನ್ ಆಲ್ ವೇದಿಕೆ’ ಹಮ್ಮಿಕೊಂಡಿದ್ದ “ಮೋದಿ ವಿರೋಧಿಗಳ ತವಕ ತಲ್ಲಣಗಳು” ಎನ್ನುವ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮತ್ತಷ್ಟು ಓದು
ಪಂಚ ಭೂತಗಳಲ್ಲಿ ಲೀನವಾದ ವಿಚಾರವಾದ! (ಸುಳ್ಸುದ್ದಿ)
-ಪ್ರವೀಣ್ ಕುಮಾರ್, ಮಾವಿನಕಾಡು
ಖ್ಯಾತ ವಿಚಾರವಾದಿ, ಸಾಹಿತಿ, ಬುದ್ಧಿಜೀವಿ, ಹಿಂದೇ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದ ಹಿಂದೂಪುರ ದೇವಮೂರ್ತಿಯವರು ವಯೋಸಹಜ ಖಾಯಿಲೆಗಳ ಪರಿಣಾಮ ನಿನ್ನೆ ತಮ್ಮ ಸ್ವಗೃಹ ‘ದೇವಿ ಕೃಪಾ’ ದಲ್ಲಿ ಮೃತರಾದರು. ಅವರಿಗೆ ಎಪ್ಪತ್ಮೂರು ವರ್ಷ ವಯಸ್ಸಾಗಿತ್ತು. ಅವರು ಮುಜರಾಯಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅರುಣ್ ಜೋಸೆಫ್ ಮತ್ತು ಮಗಳು ದೇವಿಶ್ರೀ, ಅಳಿಯ ಅಮೆರಿಕಾದಲ್ಲಿ ಖ್ಯಾತ ಪುರೋಹಿತರಾಗಿರುವ ಕ್ರಿಷ್ ಭಟ್ ಮತ್ತು ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮತ್ತಷ್ಟು ಓದು
ಕಾಗೆ ಮೇಲೆ ಎಸ್ಮಾಸ್ತ್ರ!
– ರಾಕೇಶ್ ಶೆಟ್ಟಿ
ಮೊನ್ನೆ ಮಟ ಮಟ ಮಧ್ಯಾಹ್ನ ಮುಖ್ಯಮಂತ್ರಿಗಳ ಕಾರಿನ ಮೇಲೆ ಕಾಗೆ ಕುಳಿತಿದ್ದು ಬ್ರೇಕಿಂಗ್ ನ್ಯೂಸ್ ಆಗಿ ಚಾನೆಲ್ಲುಗಳು ಕಾಕಾ ಪಂಡಿತರು,ತಜ್ಞರನ್ನೆಲ್ಲ ಕರೆಸಿ ಪಾನೆಲ್ ಡಿಸ್ಕಶನ್ನುಗಳನ್ನು ಮಾಡಿದರು.ಈ ಬಗ್ಗೆ ನಮ್ಮ ಸುಳ್ಸುದ್ದಿ ತಂಡ ಗಣ್ಯರ ಅಭಿಪ್ರಾಯ ಕೇಳಿದಾಗ ಸಿಕ್ಕಿದ್ದಿಷ್ಟು…
ಸುಳ್ಸುದ್ದಿ ತಂಡ ಮೊದಲಿಗೆ ಮುಖ್ಯಮಂತಿಗಳ ಬಳಿಯೇ ಅಭಿಪ್ರಾಯ ಕೇಳಿತು.
ಸುಳ್ಸುದ್ದಿ ಟೀಂ : ಸರ್, ನಿಮ್ಮ ಕಾರಿನ ಮೇಲೆ ಕಾಗೆ ಕುಳಿತಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮುಮಂ : ಆ ಕಾಗೆಗೆ ಮಾನ ಮರ್ಯಾದೆ ಇದೆಯೇನ್ರಿ? ಅದು ಪದ್ಮನಾಭನಗರದ ಹೆಡ್ಡಾಫೀಸಿನಿಂದ ಬಂದಿದ್ದೋ,ಮಲ್ಲೇಶ್ವರದ ಆಫೀಸಿನವರು ಹಾರಿಸಿದ್ದೋ ಎಂಬ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ.
ಸುಳ್ಸುದ್ದಿ ಟೀಂ : ತನಿಖೆ ನಡೆಸುವವರು ಯಾರು ಸರ್? ಅವರೇ ಪ್ರತಿಭಟನೆಗೆ ಇಳಿಯುವವರಿದ್ದರಲ್ಲಾ? ಇನ್ನು ಕಾಗೆ ಕೇಸ್ ಗತಿ ಏನು?
ಮುಮಂ : ಯಾರು ಪ್ರತಿಭಟನೆ ಮಾಡಲ್ಲ ಕಣ್ರಿ.ಅವರ ಮೇಲೆ ಎಸ್ಮಾಸ್ತ್ರ ಪ್ರಯೋಗಿಸಲು ಅಪ್ಪಣೆ ಕೊಡಿಸಿಲ್ವೇನ್ರಿ.ಈಗ ಅದನ್ನು ಕಾಗೆಯ ಮೇಲೂ ಬಳಸುವಂತೆ ಹೇಳುತ್ತೇನೆ.ಇಷ್ಟು ದಿನ ನೀವೆಲ್ಲ ವೈದಿಕರಿಂದ ಕಲಿತ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ” ಅಂತ ಬಳಸ್ತಾ ಇದ್ರಿ.ಇನ್ಮುಂದೆ “ಕಾಗೆ ಮೇಲೆ ಎಸ್ಮಾಸ್ತ್ರ” ಅಂತ ಬಳಸ್ಕೊಳ್ರಿ.
ಸುಳ್ಸುದ್ದಿ : ಸರ್,ಕಾಗೆ ಮೇಲೆ ಎಸ್ಮಾಸ್ತ್ರನಾ!?
ಮುಮಂ : ಜಾಸ್ತಿ ಹಾರಾಡಿದ್ರೆ,ನಿಮ್ ಮೇಲೆ ಲೋಕಾಯುಕ್ತದ ಮೇಲೆ ಪ್ರಯೋಗಿಸಿದ “ಭಸ್ಮಾಸ್ತ್ರ” ಪ್ರಯೋಗಿಸಲಾಗುವುದು.
ಸುಳ್ಸುದ್ದಿ : “ಭ್ರಷ್ಟಾಚಾರ ಮುಕ್ತ ಭಾರತ” ಮಾಡುತ್ತೇವೆ ಎನ್ನುವವರಿಗೆ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ
ಪ್ರವೀಣ್ ಕುಮಾರ್, ಮಾವಿನಕಾಡು
ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ “ಭ್ರಷ್ಟಾಚಾರ ಮುಕ್ತ ಭಾರತ” ಎನ್ನುವ ಘೋಷಣೆ ಟ್ರೆಂಡ್ ಆಗಿ ಬೆಳೆದಿದ್ದು ಮೊನ್ನೆ ನಡೆದ ಪಂಚ ರಾಜ್ಯಗಳ ಚುನಾವಣೆಗಳ ಬಳಿಕ ಈ ಘೋಷಣೆ ಇನ್ನಷ್ಟು ಜೋರಾಗಿ ಕೇಳಿಬರುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ನಮ್ಮ ‘ಸುಳ್ಸುದ್ದಿ’ ವಾಹಿನಿಯ ತಂಡ “ಭ್ರಷ್ಟಾಚಾರ ಮುಕ್ತ ಭಾರತ ಎನ್ನುವ ಘೋಷಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎನ್ನುವ ಪ್ರಶ್ನೆಯನ್ನು ಹಲವು ನಾಯಕರ ಬಳಿ ಕೇಳಿತು. ನಮ್ಮ ಪ್ರಶ್ನೆಗೆ ಉತ್ತರಿಸಿದ ಕೆಲವು ರಾಜಕೀಯ ನಾಯಕರ ಉತ್ತರಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ. ಮತ್ತಷ್ಟು ಓದು
ವಿಡಂಬನೆ: ಸಾಹಿತ್ಯ ಗದ್ದುಗೆ ಹಾಗೂ ಮಣ್ಣಂಗಟ್ಟಿ ಸಾಹಿತ್ಯ!
– ತುರುವೇಕೆರೆ ಪ್ರಸಾದ್
ತರ್ಲೆಕ್ಯಾತನಳ್ಳಿ ಖ್ಯಾತ ಸಾಹಿತಿ ಅನಂತ ಜೋಷಿ ಮತ್ತು ತಾಲ್ಲೂಕ ಸಾಹಿತ್ಯ ಸಭೆಯ ನೂತನ ಅಧ್ಯಕ್ಷ ಗುದ್ಲಿಂಗ ಜಮಖಂಡಿ ಅವರ ಮಧ್ಯೆ ನಡೆದ ಫೋನ್ ಸಂಭಾಷಣೆ ಹೀಗಿದೆ:
‘ನಮಸ್ಕಾರ್ರೀ ! ನಾನ್ ಜಮಖಂಡಿ ಮಾತಾಡಕ್ ಹತ್ತೀನಿ’
‘ಓಹೋ! ಜಮಖಂಡಿ ಅವರು!ಏನ್ರಪ್ಪಾ! ಆರಾಮದೀರೇನು?’
‘ಹಾಂ! ಆರಾಮದೀನಿ..ವಿಷ್ಯ ತಿಳೀತೇನ್ರೀ ಎಪ್ಪಾ?’
‘ಯಾವ ವಿಷ್ಯ ಹೇಳಕ್ ಹತ್ತೀರಿ ನೀವು? ಕೊಶ್ನೆ ಪೇಪರ್ ಲೀಕಾಯ್ತಲ್ಲ ಅದಾ ? ಇಲ್ಲ ಯಡಿಯೂರಪ್ಪಗೆ ಅಧ್ಯಕ್ಷ ಪಟ್ಟ ಸಿಕ್ತಲ್ಲ ಅದಾ?’
‘ಏ ! ಅವೆಲ್ಲಾ ಹಳೇದಾತ್ ಬಿಡ್ರಿ, ಈಗ ನಂಗ್ ಸಾಹಿತ್ಯ ಸಭೆ ಅಧ್ಯಕ್ಷಗಿರಿ ಸಿಕ್ಕೈತೆ, ಮೊನ್ನೆ ಯುಗಾದಿ ಮುಂದ ಪೇಪರ್ನಾಗ್ ಬಂದಿತ್ತು, ನೀವು ನೋಡ್ಲಿಲ್ಲೇನು?’
‘ಅರೆ! ಹೌದಾ? ನಿಮ್ಗೆ ಅಧ್ಯಕ್ಷಗಿರಿ ಕಟ್ಯಾರಾ? ಅಂದ್ರೆ ಹಾರ ತುರಾಯಿ ಹಾಕಿಸ್ಕೊಳೋಕ್ ಕೊಳ್ ಚಾಚ್ಕಂಡ್ ಕುಂತ್ ಬಿಟ್ರಿ ಅನ್ನಿ, ಇಂದ್ರಾಬಾಯವ್ರು ನಮಗಾ ಒಂದ್ ಮಾತೂ ಕೇಳ್ದ, ಸಭೆನೂ ಕರೀದೆ ನಿಮ್ಮನ್ನ ಹೆಂಗ್ ಅಧ್ಯಕ್ಷ ಮಾಡಾರೆ?’
‘ನಿಮ್ಗೆ ಇದ್ ಕೇಳಿದ್ ಕೂಡ್ಲೆ ಹೊಟ್ಟೆನಾಗೆ ಮೆಣಸಿನಕಾಯ್ ಕಿವುಚಿದಂಗಾಗ್ತದೆ ಅಂತ ನಂಗೊತ್ತಿತ್ತು ಬಿಡ್ರಲಾ! ಅದೆಂಥ ಹೊಟ್ಟೆ ಉರೀನ್ರೀ ನಿಮ್ದು..! ಇನ್ನೊಬ್ರಿಗೆ ಒಳ್ಳೇದಾತು ಅಂದ್ರೆ ಸಹಿಸೋ ಮಂದಿ ಅಲ್ಲ ನೀವು’ ಮತ್ತಷ್ಟು ಓದು
ಮೆಲ್ಲುಸಿರೆ ಸವಿಗಾನ….!
– ನಾಗೇಶ ಮೈಸೂರು
ಪೀಠಿಕೆ: ಬಲ್ಲವನೆ ಬಲ್ಲ, ಬೆಲ್ಲದ ರುಚಿಯ – ಎಂಬಂತೆ, ಹಳೆಯ ಹಾಡುಗಳು ಮಾಡುವ ಮೋಡಿ ಅದನ್ನು ಮೆಲ್ಲುವವರಷ್ಟೆ ಬಲ್ಲರು. ಹಾಗೆ ಬಂದು ಹೀಗೆ ಹೋಗದ ಜೀವಮಾನ ಪೂರ ಸಖರಾಗಿಬಿಡುವ ಈ ಗಾನ ರತ್ನಗಳ ನೆನಕೆಯ ಅನಾವರಣ, ಈ ಬರಹದ ಆಶಯ..
ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೇ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ ಸ್ವೈರ ವಿಹಾರದಲ್ಲಿದ್ದಾನೆ ಸುಧಾಕರ. ಅವನ ಸುತ್ತಲಿನ ಕಾಂತಿಗೆ ಚದುರಿ ಚೆಲ್ಲಾಡಿದ ಮೇಘ ಪುಂಜವೂ ಪ್ರಜ್ವಲ ದೀಪ ಹೊತ್ತಿಸಿದ ಉಜ್ವಲ ಹಣತೆಯಂತೆ ಫಳಫಳ ಹೊಳೆಯುತ್ತ ತೇಲಾಡಿವೆ. ಮಲಗಿದಲ್ಲಿಂದಲೇ, ಅದನ್ನೆ ನೆಟ್ಟ ನೋಟದಿಂದ ನೋಡುತ್ತಿದ್ದರೆ ತೇಲಿಹೋಗುತ್ತಿರುವುದು ನಾವ ಅಥವ ಆಗಸದ ಚೆನ್ನ, ಚೆಲುವೆಯರ ಅನ್ನುವುದೇ ಗೊತ್ತಾಗದ ಅಯೋಮಯ ಸ್ಥಿತಿ – ಒಂದರೆಕ್ಷಣ, ಸುತ್ತುತ್ತಿರುವ ಭುವಿ ಚಂದ್ರರ ಸಂಬಂಧವು ಮರೆತುಹೋದಂತಾಗಿ. ಮತ್ತಷ್ಟು ಓದು