ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಾಹಿತ್ಯ’ Category

3
ಜುಲೈ

ರಾಮಾಯಣ,ಮಹಾಭಾರತ,ಪುರಾಣಗಳ 64 ಸಂಪುಟಗಳು ಕನ್ನಡದಲ್ಲಿ ಅತ್ಯಂತ ಕಡಿಮೆ ಬೆಲೆಗೆ

– ವಿಶ್ವನಾಥ ಸುಂಕಸಾಲ

ಮೂಲ ಶ್ಲೋಕಗಳೊಂದಿಗೆ ಕನ್ನಡದಲ್ಲಿ ರಾಮಾಯಣ, ಮಹಾಭಾರತದ ಗ್ರಂಥಗಳು ಸಿಗುತ್ತವೆಯೇ ಎಂಬ ಪ್ರಶ್ನೆ ಹಲವರದು. ಕನ್ನಡದಲ್ಲಿ ಸಮಗ್ರವಾಗಿ ಇಂಥ ಗ್ರಂಥಗಳು ದೊರೆಯುವುದು ವಿರಳವೇ. ಒಂದೆರಡು ಪ್ರಕಾಶನಗಳು ಮಾತ್ರ ಇಂದಿಗೂ ರಾಮಾಯಣ, ಮಹಾಭಾರತ, ಪುರಾಣಗಳನ್ನು ಜನರಿಗೆ ದೊರಕುವಂತೆ ಮಾಡುತ್ತಿವೆ. ಅವುಗಳಲ್ಲಿ ಭಾರತ ದರ್ಶನ ಪ್ರಕಾಶನವೂ ಒಂದು.

ಅತ್ಯಂತ ಕಡಿಮೆ ಬೆಲೆಗೆ ಕನ್ನಡದ ಜನತೆಗೆ ಭಾರತೀಯ ಸಂಸ್ಕೃತಿಯ ಮೂಲವಾದ ಈ ಗ್ರಂಥಗಳನ್ನು ತಲುಪಿಸಲೆಂದೇ ಹುಟ್ಟಿದ ಸಂಸ್ಥೆ ‘ಭಾರತ ದರ್ಶನ ಪ್ರಕಾಶನ’.

ಮುದ್ರಣದ ವ್ಯಯಕ್ಕಿಂತ ಕಡಿಮೆ ಬೆಲೆಗೆ ಪುಸ್ತಕವನ್ನು ಒದಗಿಸುತ್ತಿರುವ ಭಾರತ ದರ್ಶನ ಪ್ರಕಾಶನಕ್ಕೆ ಓದುಗರು, ದಾನಿಗಳೇ ಬೆನ್ನೆಲುಬು. ರಾಮಾಯಣ, ಮಹಾಭಾರತಗಳ ಕಥೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಅನೇಕ ಪುಸ್ತಕಗಳು ಸಿಗಬಹುದು. ಆದರೆ ಮೂಲ ವಾಲ್ಮೀಕಿ ಹಾಗೂ ವ್ಯಾಸರಿಂದ ಲಿಖಿತವಾದ ಪ್ರತಿ ಶ್ಲೋಕವನ್ನೂ ಸಂಪುಟದ ಒಂದು ಕಡೆ ಕೊಟ್ಟು, ಮತ್ತೊಂದು ಭಾಗದಲ್ಲಿ ಸಂಪೂರ್ಣ ಅರ್ಥವನ್ನು ವಿಸ್ತೃತವಾಗಿಯೂ, ನಿರ್ದುಷ್ಟವಾಗಿಯೂ, ಸರಳ ಕನ್ನಡದಲ್ಲಿ ವಿವರಿಸಿರುವ ಗ್ರಂಥಮಾಲೆ ತೀರಾ ವಿರಳ.

ಭಾರತ ದರ್ಶನ ಪ್ರಕಾಶನದ ಒಂದೊಂದು ಸಂಪುಟವೂ 620-650 ಪೇಜುಗಳಿಂದ ಕೂಡಿವೆ. ಪ್ರತಿ ಸಂಪುಟದ ಮುದ್ರಣಕ್ಕೂ ಸರಾಸರಿ 120-150 ರೂಪಾಯಿಗಿಂತ ಹೆಚ್ಚು ವ್ಯಯವಾಗುತ್ತದಂತೆ. ಆದರೆ, ರಾಮಾಯಣ, ಮಹಾಭಾರತಗಳ ಪ್ರಚಾರಕ್ಕಾಗಿಯೇ ಹುಟ್ಟಿಕೊಂಡ ಈ ಸಂಸ್ಥೆಯು ದಾನಿಗಳ ಸಹಕಾರದಿಂದ ಮುದ್ರಣ ವ್ಯಯಕ್ಕಿಂತಲೂ ಕಡಿಮೆ ದರಕ್ಕೆ ಅಂದರೆ ಸರಾಸರಿ ಬರೀ ನೂರು ರೂಪಾಯಿಗೆ ಕೊಡುತ್ತಿದೆ.

ಮತ್ತಷ್ಟು ಓದು »

7
ನವೆಂ

ಪರ್ವ-40; ಪತ್ರಿಕೆಗಳಿಗೆ ಮರೆತುಹೋಯಿತೆ?

– ಎಂ.ಎ. ಶ್ರೀರಂಗ

ಸೃಜನಶೀಲ ಪ್ರತಿಭೆಯ ಸಾಹಸ ಎನ್ನಬಹುದಾದ ಭೈರಪ್ಪನವರ ಪರ್ವ ಕಾದಂಬರಿ(ವ್ಯಾಸರು ಸಂಸ್ಕೃತದಲ್ಲಿ ಬರೆದಿದ್ದ ಮಹಾಭಾರತವನ್ನು ಆಧರಿಸಿ ಬರೆದದ್ದು)  ಪ್ರಕಟವಾಗಿ ನಲವತ್ತು ವರ್ಷಗಳಾಯಿತು. ನಮ್ಮ ಪತ್ರಿಕೆಗಳಿಗೆ ಇದರ ಜ್ಞಾಪಕ ಬರಲಿಲ್ಲವೆ? ಇನ್ನು ನನ್ನಂತಹ ಹವ್ಯಾಸಿಗಳು ಬರೆದ ಲೇಖನಗಳು ಪತ್ರಿಕೆಗಳ  ಸಂಪಾದಕರ ಕಸದ ಬುಟ್ಟಿ ಸೇರಿವೆ. ನನ್ನ ಇನ್ನೊಬ್ಬ ಸ್ನೇಹಿತರು ಬರೆಯುವ ಮುನ್ನ ಮಾಸ ಪತ್ರಿಕೆಯೊಂದರ ಸಂಪಾದಕರಿಗೆ ಸಂದರ್ಭ ವಿವರಿಸಿ ಒಂದು ಲೇಖನ ಬರೆದು ಕಳಿಸಲೆ ಎಂದು ಕೇಳಿದಾಗ  ಮುಖಕ್ಕೆ ಹೊಡೆಯುವ ರೀತಿಯಲ್ಲಿ ‘ಬೇಡ’ ಎಂದರಂತೆ. ನಮ್ಮಂಥ ಹೆಸರಿಲ್ಲದವರು ಬರೆದಿದ್ದು ಪ್ರಕಟಣೆಗೆ ಅರ್ಹವಾಗಿಲ್ಲದಿದ್ದರೆ ಬೇಡ. ಕೊನೆಯ ಪಕ್ಷ  ನಾವುಗಳು ಒಂದು ಸಂದರ್ಭವನ್ನು ಜ್ಞಾಪಿಸಿದೆವು; ಚೆನ್ನಾಗಿ ಬರೆಯುವವರಿಂದಲೇ ಬರೆಸಬಹುದಾಗಿತ್ತು.  ಅದೂ ಮಾಡಲಿಲ್ಲ. ಏಕೆ? ಭೈರಪ್ಪನವರು ಜನಪ್ರಿಯ ಕಾದಂಬರಿಕಾರರು ಎಂಬುದೇ ಶಾಪವಾಗಿಹೋಗಿದೆಯೇನೋ? ಅವರ ಕೃತಿಗಳ ಬಗ್ಗೆ ಏನು ಬರೆಸುವುದು ಎಂಬ ಉಢಾಫೆಯ ಧೋರಣೆಯನ್ನು ಇದು ತೋರಿಸುತ್ತದೆ ಅಲ್ಲವೇ? ನಮ್ಮ ಕನ್ನಡ ವಿಮರ್ಶಕರು, ಲೇಖಕರು ಕೇವಲ ಮೂರ್ನಾಲಕ್ಕು ಕಾದಂಬರಿಗಳನ್ನು ‘ಈ ಶತಮಾನದ ಅದ್ಭುತ ಕೃತಿಗಳು’ ಎಂದು ಈಗಾಗಲೇ ತೀರ್ಮಾನಿಸಿಬಿಟ್ಟಿದ್ದಾರೆ.

ಭೈರಪ್ಪನವರ ‘ಪರ್ವ’ದ ಬಗ್ಗೆ ಬರೆಯುವುದು ಅವರುಗಳ ಘನತೆಗೆ, ಸಮಾಜಮುಖಿ ಚಿಂತನೆಗಳಿಗೆ  ಕೊನೆಗೆ ಅವರ ಲೇಖನಿಗೆ ಕೂಡ ಅವಮಾನ ಎಂದು ಭಾವಿಸಿರಬಹುದು.  ‘ಪರ್ವ: ಒಂದು ಸಮೀಕ್ಷೆ’ (ಸಂ|| ವಿಜಯಾ :ಮೊದಲ ಮುದ್ರಣ 1983)   ಒಂದೇ ಈಗ ಕನ್ನಡದಲ್ಲಿ ಪರ್ವದ ಬಗ್ಗೆ ಬಂದಿರುವ ಪ್ರಾತಿನಿಧಿಕ ಎನ್ನಬಹುದಾದ ಲೇಖನಗಳ ಸಂಗ್ರಹ.   ಪರ್ವ ಪ್ರಕಟವಾದ ನಾಲ್ಕು ವರ್ಷಗಳ ನಂತರ ಪ್ರಕಟವಾಗಿದ್ದು. ಅದರ ಮುನ್ನುಡಿಯಲ್ಲಿ ವಿಜಯಾ ಅವರು ‘ ……’ಪರ್ವ’ ಕುರಿತ ಚರ್ಚೆ ಇನ್ನೂ ವ್ಯಾಪಕವಾಗಬೇಕಿತ್ತು. ಆಗಲಿಲ್ಲ. ಜನ ಮರೆತೂಬಿಟ್ಟರು ಅನ್ನಿಸುತ್ತದೆ. ಅಲ್ಲವೆ?’ ಎಂದು ಹೇಳಿದ್ದಾರೆ. ಕನ್ನಡ ಸಾಹಿತ್ಯಲೋಕದ ನಾಡಿ ಮಿಡಿತವನ್ನು ಅವರು ಆಗಲೇ  ಅರಿತಿದ್ದರು ಅನ್ನಿಸುತ್ತದೆ. ಆದರೆ ಒಂದೇ ಸಮಾಧಾನವೆಂದರೆ ಪರ್ವ ಕಾದಂಬರಿ ಇದುವರೆಗೆ 20 ಸಲ‌ ಮರುಮುದ್ರಣವಾಗಿದೆ. ಓದುಗರು ಕೊಂಡು ಓದಿದ್ದಾರೆ. ಅದೇ ಸಮಾಧಾನ.

ಮತ್ತಷ್ಟು ಓದು »

10
ಮಾರ್ಚ್

ದಾಸ ಸಾಹಿತ್ಯ ಮಾರುವೇಷದ ಕಾರ್ಯಾಚರಣೆ – ಕನಕದಾಸ ಬಲೆಯೊಳಗೆ ಬಿದ್ದ ಮಿಕ !!!

– ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕರು,ವಿವೇಕಾನಂದ ಕಾಲೇಜು, ಪುತ್ತೂರು

ನಮ್ಮ ಶಾಲಾ ಕಾಲೇಜು ಪಠ್ಯ ಪುಸ್ತಕಗಳು ಹೇಗಿರಬೇಕು ಎನ್ನುವ ಚರ್ಚೆ ಬಹುಕಾಲದಿಂದಲೂ ನಡೆದುಬಂದಿದೆ. ಶಿಕ್ಷಣ ತಜ್ಞರು ಶೈಕ್ಷಣಿಕ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ , ವಿದ್ಯಾರ್ಥಿಗಳ ಮನೋಭಾವ, ಬದಲಾದ ಕಾಲಮಾನ, ಔದ್ಯೋಗಿಕ ಅವಕಾಶ ಇವೇ ಮೊದಲಾದ ಸಂಗತಿಗಳನ್ನು ಕಣ್ಮುಂದೆ ಇರಿಸಿಕೊಂಡು ಪಠ್ಯಗಳನ್ನು ಸಿದ್ಧ ಮಾಡಬೇಕಾಗುತ್ತದೆ. ಪ್ರಾಥಮಿಕ ಶಾಲಾ ಪಠ್ಯದಿಂದ ತೊಡಗಿ ಸ್ನಾತಕೋತ್ತರರ ಪದವಿಯಂತಹ ಉನ್ನತ ಶಿಕ್ಷಣದ ವರೆಗಿನ ಪಠ್ಯಗಳಿಗೂ ಅದರದ್ದೇ ಆದ ಉದ್ದೇಶ ಮತ್ತು ಗುರಿ ಇರುತ್ತದೆ. ಪಠ್ಯವೊಂದು ಅಂತಿಮವಾಗಿ ಓದುವ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವಂತೆಯೂ,ಕುತೂಹಲವನ್ನು ಬೆಳೆಸುವಂತೆಯೂ ಇರಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಪಠ್ಯವೊಂದನ್ನು ಓದಿದ ವಿದ್ಯಾರ್ಥಿಯು ಮುಂದೆ ಆ ವಿಷಯದಲ್ಲಿ ಇನ್ನಷ್ಟು ಸಂಗತಿಗಳನ್ನು ಆಸಕ್ತಿಯಿಂದ ಓದುವಂತೆ ಪ್ರೆರೇಪಿಸಬೇಕೇ ವಿನಃ ಅದು ಓದಿನ ಕೊನೆಯಾಗುವಂತೆ ಮಾಡಬಾರದು ಎನ್ನುವುದೂ ಸತ್ಯ. ವಿದ್ಯಾರ್ಥಿಗಳ ಆಲೋಚನೆಯನ್ನು ವಿಸ್ತರಿಸುವಲ್ಲಿ, ಮನಸ್ಸನ್ನು ಇನ್ನಷ್ಟು ಮುಕ್ತವಾಗಿ ಇರಿಸುವಲ್ಲಿ ಪೂರಕವಾಗಿರಬೇಕೇ ಹೊರತು ಅವರ ಆಲೋಚನೆಗಳಿಗೆ ಪೂರ್ಣವಿರಾಮ ಹಾಕಿ ಯಾರೋ ಹೇರಿದ ಚಿಂತನೆಯ ದಾಸ್ಯಕ್ಕೆ ತಳ್ಳಬಾರದು.

ಉದಾಹರಣೆಗೆ,ಪದವಿ ಹಂತದಲ್ಲಿ ಕನ್ನಡ ಸಾಹಿತ್ಯ ವಿಷಯವನ್ನು ಮೇಜರ್ ವಿಷಯವಾಗಿ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ತಮ್ಮ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಾಗ ಕನ್ನಡ ಸಾಹಿತ್ಯದ ವಿಸ್ತಾರ, ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವಂತೆ ಪ್ರಾತಿನಿಧಿಕ ಪಠ್ಯಗಳನ್ನು ಅಭ್ಯಾಸಿಸಲಾಗುತ್ತದೆ. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ಈ ವಿಷಯವನ್ನು ಅಭ್ಯಾಸ ಮಾಡಿದರೂ ಓದಿದ ಪ್ರಾತಿನಿಧಿಕ ಪಠ್ಯಗಳು ಬೇರೆ ಬೇರೆ ಯಾದರೂ ಅವುಗಳ ನಡುವೆ ಒಂದು ಸಾಮಾನ್ಯ ಸ್ವರೂಪ ಸಮಾನವಾಗಿರುತ್ತದೆ. ಇದಕ್ಕಾಗಿ ಈಗಾಗಲೇ ಒಪ್ಪಿತವಾದ ಮಾದರಿಯೂ ಇದೆ.

ಸಾಹಿತ್ಯ ಪಠ್ಯದ ಭಾಗವೇ ಆಗಿ ಸಾಹಿತ್ಯ ಚರಿತ್ರೆಯನ್ನೂ ಓದುವಾಗ ಈಗಾಗಲೇ ಪ್ರಾಜ್ಞರಿಂದ ರಚನೆಯಾದ ಸಾಹಿತ್ಯ ಚರಿತ್ರೆಯ ಸಂಗ್ರಹರೂಪವನ್ನು ಪಠ್ಯವಾಗಿ ನೀಡಲಾಗುತ್ತದೆ. ಪಠ್ಯ ಪುಸ್ತಕಗಳ ಸಂಪಾದಕರು ಬೇರೆ ಬೇರೆ ಸೆಮಿಸ್ಟರ್‍ಗಳಿಗೆ ಹಂಚಿಹೋಗುವಂತೆ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ವಿವಿಧ ಪ್ರಕಾರ, ಸಾಹಿತ್ಯ ರೂಪಗಳ ಉಗಮ ವಿಕಾಸದ ಕುರಿತು ಚರಿತ್ರೆಯನ್ನು ಸಂಗ್ರಹಿಸಿ ನೀಡುತ್ತಾರೆ. ಆ ಮೂಲಕ ಭವಿಷ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳೂ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಲು ರಾಜ್ಯಾದ್ಯಂತ ಒಂದೇ ಮಾದರಿಯ ಚರಿತ್ರೆಯ ಪಠ್ಯಗಳು ಅನುಕೂಲಕರವಾಗಿ ಒದಗಿ ಬರುತ್ತಿತ್ತು. ಸಾಹಿತ್ಯ ಚರಿತ್ರೆ ಎನ್ನುವುದು ವಸ್ತುನಿಷ್ಟವಾಗಿ ಅಧಿಕೃತ ದಾಖಲೆಗಳ ನೆರವಿನಿಂದ ರೂಪುಗೊಳ್ಳುವ ಒಂದು ಶಾಸ್ತ್ರ. ಹಲವು ಮಾದರಿಯ ಸಾಹಿತ್ಯ ಚರಿತ್ರೆ ಕೃತಿಗಳು ನಮ್ಮೆದುರಿಗಿದ್ದರೂ ವಿದ್ಯಾರ್ಥಿಗಳು ತರಗತಿ ಪಠ್ಯವಾಗಿ ಓದಬೇಕಾದ ಚರಿತ್ರೆಯಂತೂ ಅತಿಯಾದ ವಿಶ್ಲೇಷಣೆಯ ಭಾರದಿಂದ ಕುಸಿದು, ಲೇಖಕರ ಸೈದ್ಧಾಂತಿಕ ದೃಷ್ಟಿ ಧೋರಣೆಯಿಂದ ದಾರಿ ತಪ್ಪಿಸುವಂತಿರಬಾರದು. ವಿವಿಧ ಕಾಲಘಟ್ಟದ ಸಾಹಿತ್ಯ ಪ್ರಕಾರಗಳನ್ನು ಅವುಗಳ ಸಾಮಾನ್ಯ ಸ್ವರೂಪ, ಗುಣ ಲಕ್ಷಣ,ಸಾಹಿತ್ಯಿಕ ವೈಶಿಷ್ಟ್ಯ ಮತ್ತು ಆ ಕಾಲಘಟ್ಟದ ಒಂದಷ್ಟು ಮುಖ್ಯರಾದ ಕೃತಿಕಾರರ ಪರಿಚಯವನ್ನು ಇಲ್ಲಿ ನೀಡಬೇಕಾಗುತ್ತದೆ. ಇದು ಹೊಸದಾಗಿ ಓದಿಗೆ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿ ಯಾವುದೇ ಪೂರ್ವಾಗ್ರಹಗಳಿಲ್ಲದೆ, ತನ್ನದೇ ಅನುಭವ-ನಿಲುವುಗಳಿಂದ ಕೃತಿಗಳನ್ನು ಅಧ್ಯಯನ ಮಾಡಲು ಸಾದ್ಯವಾಗುತ್ತದೆ.ಈ ರೀತಿಯ ಅಭ್ಯಾಸ ನಡೆದಾಗ ಸಾಹಿತ್ಯದ ನಿಷ್ಪಕ್ಷಪಾತ ಗ್ರಹಿಕೆ ಮೌಲ್ಯಮಾಪನಕ್ಕೆ ಸಾದ್ಯವಾಗುತ್ತದೆ. ರಂ.ಶ್ರಿ.ಮುಗಳಿ, ಎಂ.ಎಂ.ಕಲ್ಬುರ್ಗಿ, ಕೀರ್ತಿನಾಥ ಕುರ್ತಕೋಟಿ,ಎಲ್.ಎಸ್.ಶೇಷಗಿರಿರಾವ್ ಮೊದಲಾದವರು ವೈಯಕ್ತಿಕವಾಗಿ, ಬೆಂಗಳೂರು, ಮೈಸೂರು ವಿ.ವಿ.ಗಳು ಸಾಹಿತ್ಯ ಚರಿತ್ರೆಯ ಹಲವು ಸಂಪುಟಗಳನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳ ಪಠ್ಯಕ್ಕೆ ಇವುಗಳನ್ನು ಆಕರವಾಗಿ ಬಳಸಿಕೊಳ್ಳಲಾಗುತ್ತಿತ್ತು.

ಮತ್ತಷ್ಟು ಓದು »

25
ಫೆಬ್ರ

ಅಕಟಕಟ ಸಂಸಾರವನು ನೆಚ್ಚಿಕೆಡಬ್ಯಾಡ

ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪಕನ್ನಡಅಧ್ಯಯನಕೇಂದ್ರ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Sri Sripadaruಶ್ರೀಪಾದರಾಜರು (1404-1502) ಹರಿದಾಸ ಸಾಹಿತ್ಯದ ಪ್ರಮುಖ ಕೀರ್ತನಕಾರರಲ್ಲಿ ಒಬ್ಬರು. ಚನ್ನಪಟ್ಟಣ ಬಳಿಯ ಅಬ್ಬೂರಿನವರಾದ ಇವರನ್ನುಪುರಾಣೋಕ್ತ ಹರಿಭಕ್ತಧ್ರುವನ ಅವತಾರ ಎಂದು ಹೇಳಲಾಗುತ್ತದೆ. ವಿಜಯನಗರ ಅರಸರ ರಾಜಗುರುಗಳಾಗಿದ್ದ ಇವರು ಪುರಂದರ, ಕನಕರ ಗುರುಗಳಾಗಿದ್ದ ವ್ಯಾಸತೀರ್ಥರ ಗುರುಗಳೂ ಹೌದು. ಭ್ರಮರಗೀತ, ವೇಣುಗೀತ, ಗೋಪಿಗೀತ, ಮಧ್ವನಾಮ ಇವರ ಪ್ರಮುಖರಚನೆಗಳು. ರಂಗವಿಠಲ ಎಂಬ ಅಂಕಿತದಲ್ಲಿ ಇವರು ಕೀರ್ತನೆಗಳನ್ನೂ ರಚಿಸಿದ್ದಾರೆ. ‘ನೀ ಇಟ್ಟ ಹಂಗೆ ಇರುವೆನೋ ಹರಿಯೇ’;‘ಕಣ್‍ಗಳಿದ್ಯಾತಕೋ ಕಾವೇರಿರಂಗನ ನೋಡದಾ’;‘ಭೂಷಣಕೆ ಭೂಷಣ…’ ಮೊದಲಾದವು ಅವರ ಅತ್ಯಂತ ಜನಪ್ರಿಯ ಕೀರ್ತನೆಗಳಾಗಿ ಜನಮನದಲ್ಲಿ ನೆಲೆನಿಂತಿವೆ. ‘ಅಕಟಕಟ ಸಂಸಾರವನು ನೆಚ್ಚಿಕೆಡಬ್ಯಾಡ’ ಎಂಬುದು ಅವರ ಅನೇಕಾನೇಕ ಕೀರ್ತನೆಗಳಲ್ಲೊಂದು. ಮತ್ತಷ್ಟು ಓದು »

16
ಜನ

ಭಗವದ್ಗೀತೆ ಬರ್ನ್, ವಿಚಾರಕ್ರಾಂತಿಯ ಯೂ ಟರ್ನ್?

– ತುರುವೇಕೆರೆ ಪ್ರಸಾದ್
ತುರುವೇಕೆರೆ-572227

kuvempuಇಂದು ನಾವು ಕುವೆಂಪುರವರ 114ನೇ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಕುವೆಂಪುರವರು ಶ್ರೇಷ್ಠ ಕವಿ, ನಾಟಕಕಾರ, ಕಾದಂಬರಿಕಾರ ಎಲ್ಲವೂ ಆಗಿದ್ದರು. ಭಾವ, ಶ್ರದ್ಧೆ,ಆಧ್ಯಾತ್ಮ ಹಾಗೂ ನವರಸಗಳ ವಿಕಾರ, ವಿಕೃತಿ, ಅಬ್ಬರ, ಆಕ್ರೋಶವಿಲ್ಲದ ಸಮನ್ವಯದ ಅಭಿವ್ಯಕ್ತಿಯ ಸಂತರೆಂದೇ ಅವರನ್ನು ರಸಋಷಿ ಎಂದು ಕರೆಯುವುದು. ಇವೆಲ್ಲಕ್ಕಿಂತ ಹೆಚ್ಚಾಗಿ ಕುವೆಂಪು ತೀವ್ರ ವಿಚಾರವಾದಿಯಾಗಿದ್ದರು. ವಿಚಾರವಾದಿಯಾಗಿದ್ದುಕೊಂಡೇ ಅವರು ಆಧ್ಯಾತ್ಮ ಜೀವಿಯೂ, ಆಧ್ಮಾತ್ಮವಾದಿಯೂ ಆಗಿದ್ದರೆಂಬುದು ಅತ್ಯಂತ ಶ್ರೇಷ್ಠ ಹಾಗೂ ಹೆಗ್ಗಳಿಕೆಯ ಸಂಗತಿ. ವಿಚಾರವಾದಿಯಾಗಿ ಅವರು ಜಾತಿಧರ್ಮ, ವರ್ಣಾಶ್ರಮ ಪದ್ಧತಿಯನ್ನು ಉಗ್ರವಾಗಿ ಖಂಡಿಸುತ್ತಿದ್ದರು. ಅರ್ಥಹೀನ ಆಚರಣೆ, ಮೌಢ್ಯ, ಕಂದಾಚಾರಗಳನ್ನು ಧಿಕ್ಕರಿಸುತ್ತಿದ್ದರು. ಮತ್ತಷ್ಟು ಓದು »

9
ನವೆಂ

ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)

ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.

ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)

ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರ ಮನುಷ್ಯನಿಗೆ ಪಂಥಾಹ್ವಾನವನ್ನು ನೀಡುವಂತದ್ದು. ಪರಿಸರಕ್ಕೆ ಶರಣಾಗಿಯೇ ಪರಿಸರದ ಹಲವು ಘಟಕಗಳನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯ. ಪ್ರಜ್ಞಾಪೂರ್ವಕವಾಗಿ, ಮುಕ್ತ ಮನಸ್ಸಿನಿಂದ ಇದು ಸಾಧ್ಯವಾದರೆ ಬದುಕಿನ ಹಲವು ವಿಸಂಗತಿ-ವಿಕೃತಿಗಳನ್ನು ಸಂಯಮದಿಂದ ಸಹಿಸುವ ಶಕ್ತಿಯನ್ನು, ನಿರ್ವಿಕಾರಚಿತ್ತದಿಂದ ಬದುಕುವ ಸ್ಥೈರ್ಯವನ್ನು ಪಡೆಯುವುದನ್ನು ಕಾಣುತ್ತೇವೆ. ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರವನ್ನು ಗ್ರಹಿಸುವುದಕ್ಕಿಂತ ವ್ಯತಿರಿಕ್ತವಾಗಿ ಕಾಣುವುದು ಶನೀಶ್ವರನ ನೆರಳಿನಲ್ಲಿ ಕಾದಂಬರಿಯಲ್ಲಿ. ಇಲ್ಲಿನ ಕೆಲವು ಪಾತ್ರಗಳು, ಮುಖ್ಯವಾಗಿ ಕೃಷ್ಣ ಜೋಯಿಸರು, ಪ್ರಕೃತಿ ತಮ್ಮ ಬಯಕೆಯ ನೇರಕ್ಕೆ ಇರಬೇಕೆಂದು ಬಯಸುವವರು. ಭೂಸವೆತ, ಕಳೆ ಮುಂತಾದವುಗಳ ಬಗ್ಗೆ ಅವರ ಜತೆ ಮಾತನಾಡಿದ ನಿರೂಪಕ “ನಮ್ಮ ಯೋಚನೆಯಂತೆ ಲೋಕ ನಡೆಯಬೇಕಾದರೆ ಲೋಕವೆಲ್ಲ ನಮ್ಮ ಅಂಕೆಯಲ್ಲಿ ಇರಬೇಕು ಎಂದ ಹಾಗಾಯ್ತಲ್ಲವೇ?” ಎಂದು ಕೇಳುತ್ತಾನೆ. ಮತ್ತಷ್ಟು ಓದು »

27
ಏಪ್ರಿಲ್

ಅಂಕಣರಂಗ ೧ – ಅನಿಯತಕಾಲಿಕ ಅಂಕಣದ ಅಂಕುರಾರ್ಪಣ!!

– ಮು ಅ ಶ್ರೀರಂಗ, ಬೆಂಗಳೂರು
pexels-photo-302440ನಿಲುಮೆಯಲ್ಲಿ ವಾರಕ್ಕೊಮ್ಮೆ ಒಂದು ಅಂಕಣ ಬರೆಯುವ ಆಸೆ ಸುಮಾರು ದಿನಗಳಿಂದ  ಇತ್ತು. ಸುಮಾರು ಎರಡು ವರ್ಷಗಳ ಹಿಂದೆ ನಾನು ಇದೇ ಜಾಲತಾಣದಲ್ಲಿ ‘ನಿನ್ನೆಗೆ ನನ್ನ ಮಾತು’ ಎಂಬ ತುಂಬಾ  ಧ್ವನಾರ್ಥಕವುಳ್ಳ ಹೆಸರನ್ನಿಟ್ಟುಕೊಂಡು ಒಂದು ಅಂಕಣ ಬರೆದಿದ್ದೆ. ಅದು ಐದು ಲೇಖನಗಳ ನಂತರ ಮುಂದುವರಿಯಲಿಲ್ಲ.  ಬರೀ ಆರಂಭ ಶೂರತ್ವವಾಗಿ ಹೋಯಿತು. ಈ ಸಲದ ಲೇಖನಗಳಿಗೆ   ಅಂಕಣರಂಗ ಎಂಬ ಹೆಸರನ್ನೇನೋ ಇಟ್ಟುಕೊಂಡಿರುವೆ. ಜತೆಗೇ ಯಾವುದಕ್ಕೂ ಇರಲಿ ಎಂಬ ಹುಷಾರಿನಿಂದ ಅನಿಯತಕಾಲಿಕ ಎಂಬ ರಕ್ಷಾಕವಚವನ್ನೂ ಧರಿಸಿಕೊಂಡಿರುವೆ!!. ಏಕೆಂದರೆ  ವಾರಕ್ಕೊಂದರಂತೆಯೋ  ಅಥವಾ ಹದಿನೈದು ದಿನಗಳಿಗೊಮ್ಮೆಯೋ ತಪ್ಪದೆ ಬರೆಯುವ ಬಗ್ಗೆ ನನಗೇ ಅನುಮಾನವಿದೆ. ಅದಕ್ಕೆ ಕಾರಣ  ಬರವಣಿಗೆ ನನ್ನ ಮನದಾಳದ  ಆಸೆಯಾದರೂ  ಅದು ನನಗೆ   ಓದಿನಷ್ಟು  ಪ್ರಿಯವಾದುದಲ್ಲ. ಸುಲಭವೂ ಅಲ್ಲ.  ನಾನು ಬರೆದರೆ ಒಂದು ಹತ್ತು ಪುಸ್ತಕಗಳ ಪರಿಚಯಾತ್ಮಕ ಲೇಖನವನ್ನು ಹೊಸ ಕನ್ನಡ ಸಾಹಿತ್ಯದ ಒಬ್ಬ  ಹವ್ಯಾಸಿ ಓದುಗನ ಮಟ್ಟದಲ್ಲಿ  ಮಾತ್ರ   ಬರೆಯಬಲ್ಲೆ.   ಅಂಕಣ ಬರೆಯಲು ಸಾಹಿತ್ಯವೊಂದೇ ಆಗಬೇಕೇ? ಬರೆಯುವ ಮನಸ್ಸಿದ್ದರೆ ಎಷ್ಟೊಂದು ವಿಷಯಗಳಿಲ್ಲ.

ಮತ್ತಷ್ಟು ಓದು »

22
ಮಾರ್ಚ್

ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೪

– ಮು. ಅ. ಶ್ರೀರಂಗ, ಬೆಂಗಳೂರು

ಪೀರಾಯರು ಎದ್ದಾಗ ಎಂಟು ಗಂಟೆಯಾಗಿತ್ತು. ರಾತ್ರಿ ಕೃಷ್ಣಾಚಾರ್ಯ ಮಲಗಿದ್ದ ಹಾಸಿಗೆ ನೀಟಾಗಿ ಸುತ್ತಿ ಇಟ್ಟಿತ್ತು. ರಾಯರು ಮುಖ ತೊಳೆದು ಬಂದು ಅಂದಿನ ಪೇಪರ್ ಹಿಡಿದು ಕೂತರು. ಕಾಫಿ ತಂದ ರಾಯರ ಹೆಂಡತಿ
‘ಕೃಷ್ಣಾಚಾರ್ಯರು ಏಳು ಗಂಟೆಗೆ ಎದ್ದು ಮನೆಗೆ ಹೋದ್ರು.. ತಿಂಡಿ ತಿಂದು ಹೋಗಿ ಎಂದು ನಾನು ಬಲವಂತ ಮಾಡಿದರೂ ಇನ್ನೊಂದು ಸಲ ಬರ್ತೀನಿ’ ಅಂದ್ರು..
‘ನನ್ನನ್ನು ನೀನು ಎಬ್ಬಿಸಬಾರದಿತ್ತೇ?’
‘ಅವರೇ ಬೇಡ, ನಿದ್ದೆ ಮಾಡಲಿ. ನಿನ್ನೆ ರಾತ್ರಿ ನಾವು ಹಳೆ ಸಂಗತಿಗಳನ್ನೆಲ್ಲಾ ಎರಡು ಗಂಟೆ ತನಕ ಮಾತಾಡುತ್ತಾ ಇದ್ವು ಎಂದ್ರು.. ಏನು ಅಂತ ರಾಜ ರಹಸ್ಯನಪ್ಪ ಅದು?’
‘ಏನೂ ಇಲ್ಲ ಕಣೆ. ಹೀಗೆ ಸುಮ್ಮನೆ’.
‘ಆಯ್ತು ನಂಗೆ ಅಡಿಗೆ ಮನೇಲಿ ಕೆಲಸ ಇದೆ ಹೋಗ್ತೀನಿ’ ಮತ್ತಷ್ಟು ಓದು »

16
ಫೆಬ್ರ

ಎತ್ತ ಸಾಗುತ್ತಿದೆ ಕನ್ನಡದ ಬೌದ್ಧಿಕ ಜಗತ್ತು..?

– ಡಾ. ಪ್ರವೀಣ ಟಿ. ಎಲ್
ಉಪನ್ಯಾಸಕರು
ಕುವೆಂಪು ವಿಶ್ವವಿದ್ಯಾನಿಲಯ

downloadಬೌದ್ಧಿಕವಲಯದಲ್ಲಿ ಮುಕ್ತ ಸಂವಾದಗಳು ಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮುಖ್ಯ. ಅವುಗಳು ಹೆಚ್ಚೆಚ್ಚು ನಡೆಯಲೆಂದೇ ಯುಜಿಸಿಯಂತಹ ಸಂಸ್ಥೆಗಳು, ಸರ್ಕಾರಗಳು ಕೋಟಿಗಟ್ಟಲೇ ಹಣವನ್ನು ನೀಡುತ್ತವೆ. ವಿದ್ಯಾರ್ಥಿಗಳ ನಡುವೆ, ಚಿಂತಕರ ನಡುವೆ ಸಂವಾದಗಳು, ಚರ್ಚೆಗಳು ನಡೆದರೆ ಮಾತ್ರವೇ ತಮ್ಮ ತಿಳುವಳಿಕೆಯ ಮಿತಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಹೊಸ ಹೊಸ ಚಿಂತನೆಯ ಉಗಮಕ್ಕೆ ದಾರಿಯಾಗಲಿವೆ. ಆಗ ಅಲ್ಲಿನ ಬೌದ್ಧಿಕ ವಲಯವು ಹೆಚ್ಚು ಕ್ರಿಯಾಶೀಲವಾಗಿದೆ ಎಂದು ತೀರ್ಮಾನಿಸಬಹುದು. ಕರ್ನಾಟಕದ ಸಂದರ್ಭದಲ್ಲಿ ಬುದ್ಧಿಜೀವಿಗಳೆಂದರೆ ಸಾಹಿತಿಗಳು ಎಂಬಂತಾಗಿದೆ. ಕನ್ನಡ ಬೌದ್ಧಿಕ ವಲಯದಲ್ಲಿ ಇಂತಹ ಸಂವಾದಗಳು ನಡೆಯುತ್ತಿವೆಯೇ? ಎಂಬ ಮುಖ್ಯ ಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕಾದ ಸುಸಂದರ್ಭದಲ್ಲಿದ್ದೇವೆ. ಮತ್ತಷ್ಟು ಓದು »

12
ಫೆಬ್ರ

ಕಲೆ ಮತ್ತು ಸಾಹಿತ್ಯಗಳು ಐಡಿಯಾಲಜಿಯ ಬಂಧನದಿಂದ ಎಂದು ಹೊರಬಂದಿತು?

– ಬಾಲಚಂದ್ರ ಭಟ್

hammer_and_sickle-svg“ಸಾಹಿತ್ಯವನ್ನು ಕೆಡಿಸಿದ್ದೇ ಈ ಮಾರ್ಕ್ಸಿಸ್ಟುಗಳು. ರಸಾನುಭೂತಿ ಅನ್ನೋದನ್ನು ಮರೆತು ಸಮಾಜಕ್ಕೆ ನಿಮ್ಮ ಕೊಡುಗೆ ಏನು ಅಂತ ಕವಿಗಳಿಗೆ, ಕತೆಗಾರರಿಗೆ ಕೇಳೋಕೆ ಶುರು ಮಾಡಿದ್ದೇ ಅವರು. ಶಾಸ್ತ್ರೀಯ ಸಂಗೀತ ಒಂದು ಅವರಿಗೆ ಅರ್ಥ ಆಗ್ತಿರಲಿಲ್ಲ ನೋಡ್ರೀ. ಒಂದು ವೇಳೆ ಅರ್ಥ ಆಗಿದ್ದರೆ ಬೆಳಗ್ಗೆ ಹಾಡೋ ತೋಡೀ ರಾಗದಿಂದ ಸಮಾಜಕ್ಕೆ ಏನು ಕೊಡುಗೆ ಸಿಕ್ಕಿದೆ ಅಂತಾನೂ ಕೇಳಿರೋರು. ಪುಣ್ಯಕ್ಕೆ ಬಹುತೇಕ ಮಾರ್ಕ್ಸಿಸ್ಟರಿಗೆ ಸಂಗೀತದ ಗಂಧವೇ ಇಲ್ಲ”

ಹೀಗಂತ ಎಸ್ ಎಲ್ ಭೈರಪ್ಪನವರು ಜೈಪುರ ಲಿಟರರಿ ಫೆಸ್ಟಿವಲ್ ನಲ್ಲಿ ಹೇಳಿದ್ದರೆಂದು ಜೋಗಿಯವರು ಇತ್ತೀಚೆಗೆ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದರು. ಭೈರಪ್ಪನವರ ಈ ಹೇಳಿಕೆಗೆ ವಿರುದ್ಧ ಪ್ರತಿಕ್ರಿಯಿಸಿದವರೆಲ್ಲರೂ ಅವರು ನೋಡಿದ ಸಾಹಿತ್ಯಾಸಕ್ತ ಹಾಗೂ ಸಂಗೀತಾಸಕ್ತ ಮಾರ್ಕ್ಸಿಸ್ಟರನ್ನು ಉದಾಹರಿಸುವದರ ಮೂಲಕ ಭೈರಪ್ಪನವರ ಹೇಳಿಕೆಯನ್ನು ಅಲ್ಲಗೆಳೆದಿದ್ದರು. ಭೈರಪ್ಪನವರು ಏನೆ ಹೇಳಿದರೂ ಅದಕ್ಕೆ ಉಗ್ರ ಪ್ರತಿರೋಧ ಬರುವದು ಸಾಮಾನ್ಯ. ಅದರಲ್ಲೂ ಮಾರ್ಕ್ಸಿಸ್ಟರ ಬಗ್ಗೆ ಇಂತಹ ಹೇಳಿಕೆ ಕೊಟ್ಟರೆ ಮಾರ್ಕ್ಸಿಸಂ ನ್ನು ಗುತ್ತಿಗೆ ತೆಗೆದುಕೊಂಡವರು ಮುಗಿಬೀಳುವದನ್ನು ಊಹಿಸಬಹುದಾದದ್ದೆ. ಆದರೆ ಈ ಕುರಿತ ಪರ ವಿರೋಧ ಅಭಿಪ್ರಾಯಗಳ ಹೊರತಾಗಿಯೂ ಭೈರಪ್ಪನವರ ಹೇಳಿಕೆ ಮಾರ್ಕ್ಸಿಸಂ ನ ವಿಷ್ಲೇಷಣೆಗೆ ಪ್ರಸ್ತುತವಂತೂ ಹೌದು. ಮತ್ತಷ್ಟು ಓದು »