ಮೋದಿ ಸಾಲದ ಶೂಲ – ಗಂಜಿಗಿರಾಕಿಗಳ ಕೋಲಾಹಲ
– ರಾಘವೇಂದ್ರ ಸುಬ್ರಹ್ಮಣ್ಯ
ನಿನ್ನೆ-ಮೊನ್ನೆಯಿಂದಾ ನಮ್ಮ ಮಾಧ್ಯಮಗಳದ್ದು ಒಂದೇ ಗಲಾಟೆ, “ಮೋದಿ ಅಧಿಕಾರವಧಿಯಲ್ಲಿ ಭಾರತದ ಸಾಲದ ಹೊರೆ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಿದೆ” ಅಂತಾ ಕೂಗಾಡ್ತಿವೆ. ಇಂಡಿಯಾಟುಡೇ “ಮೋದಿ ಸರ್ಕಾರದ ಅಡಿಯಲ್ಲಿ ಕೇಂದ್ರ ಸಾಲವನ್ನು 50% ಏರಿಕೆಯಾಗಿದೆ” ಅಂತಾ ಶುರುಮಾಡಿದ ಈ ಅರಚಾಟದ ಕಸದಂತಾ ಸುದ್ಧಿಯನ್ನು, ಎಕನಾಮಿಕ್ ಟೈಮ್ಸ್ ಕೂಡಾ ತಾನು ಎರವಲು ಪಡೆದ ಹಾಗೇ ಹಂಚಿತು. ಇವರೆಲ್ಲರೂ ಈ ಸುದ್ಧಿಯನ್ನ ಪಡೆದದ್ದೆಲ್ಲೆಂದಾ? ಕಳೆದ ಶುಕ್ರವಾರ ಕೇಂದ್ರ ಹಣಕಾಸು ಸಚಿವಾಲಯದ “ಸರ್ಕಾರೀ ಸಾಲದ ಸ್ಥಿತಿಪತ್ರದ 8 ನೇ ಆವೃತ್ತಿ” ಬಿಡುಗಡೆಯಾಯಿತು. ಅದರಿಂದ ತಮಗೆ ಬೇಕಾದಷ್ಟೇ ಸುದ್ಧಿಯನ್ನ ಈ ಸುದ್ಧಿಮನೆಗಳು ಹೆಕ್ಕಿತೆಗೆದು, ತಮಗೆ ಬೇಕಾದಂತೆ ತಿರುಚಿ, “ಮೋದಿ ಹೇಗೆ ಭಾರತಕ್ಕೆ ಮಾರಕ” ಎನ್ನುವಂತಾ ತಮ್ಮ ಹಳೇ ಕಥೆಗಳ ದೀಪಕ್ಕೆ ಹೊಂದುವಂತಾ ನಿರೂಪಣೆಯ ಬತ್ತಿಯನ್ನ ಹೊಸೆದರು.
ಈ ಸುದ್ಧಿಗಳು ಬಂದದ್ದೇ ತಡ, ಮೋದಿ ವಿರೋಧಿ ಬಳಗಗಳು ತಮ್ಮ ಮನೆ-ಮನಗಳಲ್ಲಿ ಸದಾಕಾಲ ಉರಿಯುತ್ತಿರುವ ಮೋದಿ ದ್ವೇಷದ ಬೆಂಕಿಗೆ ಇನ್ನೂ ಎರಡು ಲೀಟರ್ ಪೆಟ್ರೋಲ್ ಹೆಚ್ಚೇ ಸುರಿದು, ಈ ಸುದ್ಧಿಯನ್ನು ಎಲ್ಲೆಡೆ ಹರಡಲು ಪ್ರಾರಂಭಿಸಿದರು. “ಮೋದಿನಾಮಿಕ್ಸ್ ನೆಲಕಚ್ಚಿದೆ, ದೇಶದಲ್ಲಿ ಕೆಲಸಗಳೇ ಇಲ್ಲ, ಕೈಗಾರಿಕಾ ಉತ್ಪಾದನೆ ಮೇಲೇಳದಂತೆ ಕುಸಿದಿದೆ, ಇಂತಾ ಸಮಯದಲ್ಲಿ ಮೋದಿ ದೇಶಕ್ಕೆ ಇನ್ನೂ 28ಲಕ್ಷ ಕೋಟಿ ಸಾಲ ಹೆಚ್ಚಿಸಿ ನಮ್ಮನ್ನೆಲ್ಲಾ ಕೊಂದೇಬಿಟ್ಟಿದ್ದಾನೆ. ಚುನಾವಣಾ ಜುಮ್ಲಾಗಳ ಕಾಲ ಮುಗಿಯಿತು, 2019ರಲ್ಲಿ ಜನ ಬಿಜೆಪಿಯನ್ನು ಕಿತ್ತೆಯಸಲಿದ್ದಾರೆ” ಅಂತಾ ಒಂದೇ ಸಮವೆ ಕಿರುಚಾಡುತ್ತಿದ್ದಾರೆ.
ಈ ವಿಚಾರವನ್ನು ಎರಡು ರೀತಿಯಲ್ಲಿ ನಿಭಾಯಿಸಬಹುದು. ಒಂದನೇ ದಾರಿ: “ಜನಕ್ಕೆ ಇದೆಲ್ಲಾ ಅರ್ಥವಾಗೇ ಆಗುತ್ತೆ. ಈ ಕಿರುಚಾಟಗಳೆಲ್ಲಾ ಅರ್ಥಹೀನ ಅಂತಾ ಇವತ್ತಲ್ಲಾ ನಾಳೆ ತಿಳಿದುಕೊಂಡು ಇವನ್ನೆಲ್ಲಾ ನಿವಾಳಿಸಿ ಬದಿಗಿಡ್ತಾರೆ” ಅಂತಾ ಸುಮ್ಮನಾಗುವುದು. ಆದರೆ ಇದನ್ನು ಹಿಂಗೇ ಬಿಟ್ಟರೆ, ಏನೂ ಗೊತ್ತಿಲ್ಲದವರೂ ಇದನ್ನೇ ನಿಜವೆಂದು ನಂಬಿ ಕೂತರೇನು ಕಥೆ? ಇಂಗ್ಲೀಷ್ ಪತ್ರಿಕೆಗಳೇನೋ ಗಾಂಧಿ ಪರಿವಾರದ ಸಂಬಳದಲ್ಲಿವೆ. ತೀರಾ ಉದಯವಾಣಿಯವರೂ ಇದನ್ನೇ ಸತ್ಯವೆಂದು ಬಿಂಬಿಸಿ ಸುದ್ಧಿಪ್ರಕಟಿಸುತ್ತಿದ್ದಾರಲ್ಲಾ! ಅದೂ ದೇಶ ಚುನಾವಣೆಯ ಹೊಸ್ತಿಲಲ್ಲಿರುವಾಗ!! ಆ ಅರ್ಥವಾಗುವ “ಇವತ್ತಲ್ಲಾ ನಾಳೆ” ಅನ್ನೋ ಕಾಲ, ಚುನಾವಣೆ ಮುಗಿದಮೇಲೆ ಬಂದರೇನು ಸುಖ!? ನಾವೇ ದೇಶವನ್ನು ಅವಸಾನದೆಡೆಗೆ ತಳ್ಳಿದಂತಾಯ್ತಲ್ಲಾ! ಹೀಗಿದ್ದಾಗ ಎರಡನೇ ದಾರಿಯೇ ಬೇಕು. ಎರಡನೆಯ ದಾರಿ: “ಇದನ್ನು ಸಾಮಾನ್ಯರಿಗೂ ಅರ್ಥವಾಗುವ ಪದಗಳಲ್ಲಿ ಬಿಡಿಸಿ ಬರೆದು, ಸರಿದಾರಿಗೆಳೆಯುವುದು”. ಈ ಲೇಖನ ಆ ಎರಡನೆಯ ದಾರಿ.
- ಹಾಗಾದರೆ ಹಣಕಾಸು ಸಚಿವಾಲಯದ ಸಾಲಪತ್ರದಲ್ಲಿ ಹೇಳಿರುವ ವಿಚಾರಗಳು ಸುಳ್ಳೇ?
- ಈ ಪತ್ರಿಕೆಗಳು ಹೇಳುತ್ತಿರುವ ವಿಚಾರಗಳು ಸುಳ್ಳೇ?
- ಮೋದಿಯನ್ನು ಸಮರ್ಥಿಸುವ ಭರದಲ್ಲಿ, ನಾನು ಈ ದೇಶದ ಮೇಲೆ ಸಾಲವೇ ಇಲ್ಲ ಅಂತಾ ಹೇಳುತ್ತಿದ್ದೇನೆಯೇ?
ಭವಿಷ್ಯನಿಧಿಯ ಮೇಲೆ ವರ್ತಮಾನದ ಕಣ್ಣೇಕೆ?
– ರಾಘವೇಂದ್ರ ಸುಬ್ರಹ್ಮಣ್ಯ
ನಿನ್ನೆ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ನೂತನ ಭವಿಷ್ಯ ನಿಧಿ ನೀತಿ ವಿರೋಧಿಸಿ ನಡೆದ ಪ್ರತಿಭಟನೆ ಮತ್ತದರ ಪರಿಣಾಮಗಳು ಇನ್ನೂ ನಮ್ಮಮುಂದೆಯೇ ಹೊಗೆಸೂಸುತ್ತ ನಿಂತಿವೆ. ಪ್ರತಿಭಟನೆಗೆ ಇಳಿದವರಲ್ಲಿ ಎಷ್ಟು ಜನಕ್ಕೆ ನೂತನ ಭವಿಷ್ಯ ನಿಧಿ(ಪಿಎಫ್) ನೀತಿ ಅಂದರೇನು, ಏನು ಬದಲಾವಣೆ ಆಗಿದೆ? ಅನ್ನೋದು ಹೋಗ್ಲಿ ಪಿಎಫ್ ಅಂದರೆ ಏನು ಅಂತಲೂ ಮಾಹಿತಿಯಿತ್ತೋ ಇಲ್ಲವೋ ಅನ್ನುವಷ್ಟು ಗೊಂದಲ ಶುರುವಾಗಿದೆ. ಪಿಎಫ್ ಯಾಕೆ ಬೇಕು? ಸರ್ಕಾರದ ನೀತಿಯೇನು ಮತ್ತದು ಹೇಗೆ ಬದಲಾಗ್ತಿದೆ ಅಂತಾ ನೋಡುವ ಪ್ರಯತ್ನವೇ ಈ ಲೇಖನ. ಇಲ್ಲಿರುವ ಎಲ್ಲಾ ಅಭಿಪ್ರಾಯ ನನ್ನದು ಮತ್ತು ನನ್ನದು ಮಾತ್ರ. ನಿಲುಮೆ ಇದನ್ನು ಬೆಂಬಲಿಸುತ್ತಿದೆಯೇ ಎಂಬುದು ಪ್ರಶ್ನೆಯೇ ಆಗಬಾರದು.
ಏನಿದು ಪಿಎಫ್? ಮತ್ತಷ್ಟು ಓದು
ಶೇರು ಮಾರುಕಟ್ಟೆ : ಭಾಗ -೩
– ವೆಂಕಟೇಶ್ ಗುರುರಾಜ್
೧೯೭೭ರಲ್ಲಿ ನೀವು ೧,೦೦೦ ರೂಪಾಯಿಗಳಲ್ಲಿ ಇಂದಿರಾ ವಿಕಾಸ್ ಪತ್ರವನ್ನು ತೆಗೆದುಕೊಂಡು ಇಲ್ಲಿಯವರೆಗೆ ಅಂದರೆ ೨೦೧೨ರವರೆಗೆ ಇಟ್ಟುಕೊಂಡಿದ್ದರೆ ನಿಮ್ಮ ಹಣ ೧೯೮೨ರಲ್ಲಿ ದ್ವಿಗುಣವಾಗಿ ೨,೦೦೦, ೧೯೮೭ರಲ್ಲಿ ೪,೦೦೦, ೧೯೯೨ರಲ್ಲಿ ೮,೦೦೦, ೧೯೯೭ರಲ್ಲಿ ೧೬,೦೦೦, ೨೦೦೨ರಲ್ಲಿ ೩೨,೦೦೦, ೨೦೦೭ರಲ್ಲಿ ೬೪,೦೦೦, ೨೦೧೨ರಲ್ಲಿ ೧,೨೮,೦೦೦ ಸಾವಿರವಾಗುತ್ತಿತ್ತು. (ಸುಮಾರು ೧೪.೨೫% ಬಡ್ಡಿಯಂತೆ.) ೫ ವರ್ಷಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು. ಮುಂದೆ ಅದನ್ನು ೫ ೧/೨ ವರ್ಷಕ್ಕೆ ಮಾರ್ಪಾಡು ಮಾಡಲಾಯಿತು. (ಇಂದಿರಾ ವಿಕಾಸ್ ಪತ್ರವನ್ನು ೧೯೯೬ನೆ ಇಸವಿಯಲ್ಲಿ ನಿಲ್ಲಿಸಿಬಿಟ್ಟತು ಕೇಂದ್ರ ಸರ್ಕಾರ.) ನೀವು ಅದೇ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರೆ ನಿಮ್ಮ ಹಣ ದ್ವಿಗುಣವಾಗಿ ೧೯೮೪ ಮತ್ತು ೨ ತಿಂಗಳಲ್ಲಿ ೨,೦೦೦, ೧೯೯೧ ಮತ್ತು ೪ ತಿಂಗಳಲ್ಲಿ ೪,೦೦೦, ೧೯೯೮ ಮತ್ತು ೬ ತಿಂಗಳಲ್ಲಿ ೮,೦೦೦, ೨೦೦೫ ಮತ್ತು ೮ ತಿಂಗಳಲ್ಲಿ ೧೬,೦೦೦, ೨೦೧೨ ಮತ್ತು ೧೦ ತಿಂಗಳಲ್ಲಿ ಕೇವಲ ೩೨,೦೦೦ ರೂಪಾಯಿಗಳಾಗುತ್ತಿತ್ತು (ಅದು ಸುಮಾರು ೧೦% ಬಡ್ಡಿಯನ್ನು ನಿಮಗೆ ತಂದುಕೊಡುವಂತಿದ್ದರೆ.) ೭ ವರ್ಷ ೨ ತಿಂಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು.
ಆದರೆ, ಅದೇ ೧,೦೦೦ ರೂಪಾಯಿಗಳನ್ನು ನೀವು ೧೯೭೭ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಹೂಡಿದ್ದರೆ ಈಗ ನಿಮ್ಮ ಬಳಿ ೭.೭೮ ಲಕ್ಷ ರೂಪಾಯಿ ಇರುತ್ತಿತ್ತು. ೧೯೭೭ರಲ್ಲಿ ರಿಲಯನ್ಸ್ ಕಂಪನಿಗಳ ೧೦೦ ಶೇರುಗಳ ಬೆಲೆ ೧,೦೦೦ ಇತ್ತು.
ಶೇರು ಮಾರುಕಟ್ಟೆ : ಭಾಗ -೧
– ವೆಂಕಟೇಶ್ ಗುರುರಾಜ್
ಹಣ ಯಾರಿಗೆ ಬೇಡ? ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಮತ್ತು ಅವನು ಸತ್ತಮೇಲೆ ಅವನ ಅಂತ್ಯಕ್ರಿಯಯನ್ನು ಮಾಡುವ ಅವನ ಮನೆಯವರಿಗೂ ಹಣ ಬೇಕೇಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾಮಕರಣದಿಂದ ತಿಥಿಯವರೆಗೆ. ನಾವು ನೀವೆಲ್ಲರೂ ನಮ್ಮ ಜೀವಿತ ಅವಧಿಯಲ್ಲಿ ಹಣವನ್ನು ನಮ್ಮ ಇತಿಮಿತಿಯಲ್ಲಿ ಸಂಪಾದಿಸುತ್ತೇವೆ. ಕೆಲವರು ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ಸ್ವಂತ ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ವ್ಯಾಪಾರ ವಹಿವಾಟು ಮಾಡಿ, ಮತ್ತೆ ಕೆಲವರು ಹಣದಿಂದ ಹಣವನ್ನು ಸಂಪಾದಿಸುತ್ತಾರೆ. ಮೊದಲ ಮೂರು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕೊನೆಯದಾದ ಹಣದಿಂದ ಹಣವನ್ನು ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪ ಗಮನ ಕೊಡೋಣ. ಇದನ್ನು ಬಂಡವಾಳ ಹೂಡಿಕೆ ಎಂದೂ ಸಹ ಕರೆಯುತ್ತಾರೆ. ಬಂಡವಾಳ ಎಂದರೆ ಏನು ಎಂಬುದರ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣವೇ?
ಬಂಡವಾಳ ಹೂಡುವುದೆಂದರೆ ಜನಸಾಮಾನ್ಯರಲ್ಲಿ ಅದು ಲಕ್ಷ/ಕೋಟಿಗಳ ರೂಪದಲ್ಲಿ ಇರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಸುಳ್ಳು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಜನ ಸಾಮಾನ್ಯರೂ ಸಹ ಸ್ವಲ್ಪ ಮಟ್ಟಿನ ಬಂಡವಾಳ ಹೂಡಿಕೆದಾರರೇ. ಕೆಲವರು ತಮ್ಮ ಹೆಚ್ಚುವರಿ ಸಂಪಾದನೆಯನ್ನು ಅಥವಾ ತಮ್ಮ ಉಳಿತಾಯದ ಹಣವನ್ನು ನಿಶ್ಚಿತ ಠೇವಣಿಯಾಗಿ ಬ್ಯಾಂಕ್/ಅಂಚೆ ಕಚೇರಿಯಲ್ಲಿ ಇಟ್ಟು ಅದರಲ್ಲಿ ಬರುವ ಬಡ್ದಿಯನ್ನು ಪಡೆಯುತ್ತಾರೆ. ಇದೂ ಸಹ ನಿಮ್ಮ ಹಣ ವೃದ್ದಿಸುತ್ತದೆ. ಭೂಮಿಯ ಮೇಲೆ ಹಾಕಿದ ಹಣ ನಿಮ್ಮ ಮೂಲ ಹಣವನ್ನು ಅನೇಕ ಬಾರಿ ವೃದ್ದಿಸುತ್ತದೆ. ಚಿನ್ನ, ಬೆಳ್ಳಿಯ ಮೇಲೆ ಹಾಕಿದ ಹಣ ನಿಮಗೆ ದುಪ್ಪಟ್ಟು, ತಿಪ್ಪಟ್ಟಾಗುತ್ತದೆ. ಶೇರು/ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿದ ಹಣ ನಿಮಗೆ ಲಾಭವನ್ನು ತಂದುಕೊಡುತ್ತದೆ.
ಬಜೆಟ್ಟಿನ ಸಮಯ
– ರಾಘವೇಂದ್ರ ಗುಡಿ
ಇನ್ನೇನು ದೂರ ಇಲ್ಲ. ತುಂಬಾ ಸನಿಹದಲ್ಲಿದೆ. ಇನ್ನು ಕೆಲವು ದಿನಗಳು ಕಳೆದರೂ ಸಾಕು ಅನೇಕರಿಗೆ ನಗಲು, ಉಣ್ಣಲು, ಮಲಗಲು, ನೆಂಟರಿಷ್ಟರ ಮನೆಗೆ ಹೋಗಲು ಕೂಡ ಸಮಯವಿರುವುದಿಲ್ಲ! ಅನೇಕರಿಗೆ ರಾತ್ರಿ ನಿದ್ರೆ ಇರುವುದಿಲ್ಲ; ಕೆಲವರಿಗೆ ಇದ್ದಕ್ಕಿದ್ದಂತೆ ದಾನ ಮಾಡುವ ಗುಣ ಹುಟ್ಟುವುದು! ಹಲವರಿಗೆ ತಮಗೂ ಮನೆಯಿದೆ, ಮಡದಿ ಇದ್ದಾಳೆ, ಮಕ್ಕಳು ಇವೆ, ಹಾ ತನ್ನ ಮೇಲೆ ಇವರೆಲ್ಲರೂ ಅವಲಂಬಿಸಿದ್ದಾರೆ, ತನಗೂ ಜವಾಬ್ದಾರಿ ಇದೆ, ಆರೋಗ್ಯವಿದೆ ಅನಾರೋಗ್ಯವೂ ಬರಬಹುದು ಎಂಬುವುದೆಲ್ಲ ನೆನಪಾಗುವ ಸಮಯ!! ನೆನಪಾಗದಿದ್ದರೂ ಅಷ್ಟೇ ಹೋಯಿತು, ತೆರಿಗೆಯನ್ನು ಉಳಿಸಲು ಏನು ಮಾಡಬೇಕು ಎಂಬುವುದೊಂದೆ ಚಿಂತೆ. ಹಾ ಈಗ ಅರ್ಥವಾಗುತ್ತಿದೆಯಾ? ಹಾ ಹೌದು ಮಾರಾಯ್ರೆ ನಿಮ್ಮ ಊಹೆ ನಿಜ, ಮಾರ್ಚ ಬರುತ್ತಿದೆ, ಆದಾಯ ತೆರಿಗೆ ಕಟ್ಟಲು, ಉಳಿಸಲು ಕೊನೆ ಅವಕಾಶ! ಬಹುಷಃ ಈಗ ಅನೇಕರಿಗೆ ಸೆಕ್ಷನ್ ೮೦ಅ, ೮೦ಆ, ೮೦ಉ ಎಂಬವವು ಇವೆ ಎಂಬುವುದು ನೆನಪಾಗುತ್ತಿರುತ್ತೆ. ಇನ್ನು ಕೆಲವು ದಂಡಪಿಂಡ, ಧೂರ್ತ, ಪುಂಡ, ೪೨೦ಗಳು ಅನೇಕ ಇನ್ಸುರೆನ್ಸ್ ಎಜೆಂಟ್‌ಗಳನ್ನು, ಎನ್‌ಜಿಓಗಳನ್ನು ಸಂಪರ್ಕಿಸಿ ನಿಮಗೂ ಸ್ವಲ್ಪ ಹಣವನ್ನು ಕೊಡುತ್ತೇನೆ ನನಗೆ ದಯಮಾಡಿ ಖೊಟ್ಟಿ ರಸೀದಿಗಳನ್ನು ಕೊಡಿ (ಆದಾಯ ತೆರಿಗೆ ಇಲಾಖೆಗೆ ನೀಡಿ, ತೆರಿಗೆ ವಿಮುಕ್ತಿಯನ್ನು ಪಡೆಯಲು) ಎಂದು ಹಲ್ಲು ಗಿಂಜುತ್ತಾ ’ಸೆಟ್ಟಿಂಗ್’ ಮಾಡಲು ಎಡತಾಕಲೂ ಶುರುಮಾಡಬಹುದು. ಇದು ಕೇವಲ ಜನರಿಗೆ ಅಥವ ಸಂಸ್ಥೆಗಳಿಗೆ ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ ಸಂಧಿಕಾಲ, ಲವಲವಿಕೆಯ ಕಾಲ!
ಕಳೆದ ಬಾರಿಯ ಬಜೆಟ್ ಪುಸ್ತಕವನ್ನು ಜೋಪಾನವಾಗಿ ಎತ್ತಿ, ಹಿಡಿದಿರುವ ಧೂಳು, ಗೆದ್ದಲುಗಳನ್ನು ಮೃದುವಾಗಿ ಕೊಡವಿ, ಕೆಮ್ಮುತ್ತಾ ಅದನ್ನು ಮೊದಲ ಬಾರಿಗೆ ತೆರೆದು ಅದರಲ್ಲಿರುವ ಕಳೆದ ವರ್ಷದ ಹೊಸ ಯೋಜನೆಗಳ ಆಶ್ವಾಸನೆಗಳನ್ನು ನೆನಪು ಮಾಡಿಕೊಂಡು ಮತ್ತೊಮ್ಮೆ ಭವ್ಯ ಭಾರತದ ದಿವ್ಯ ಪ್ರಜೆಗಳಿಗೆ ಹಳೆ ಬಟ್ಟೆಯಿಂದ ತಯಾರಿಸಿದ ಹೊಸ ಟೊಪ್ಪಿಗೆಯನ್ನು ಹಾಕುವ ಬಗೆಯನ್ನು ಹುಡುಕುವ ಪರ್ವಕಾಲವಿದು!! ಮತ್ತಷ್ಟು ಓದು