ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅಂಕಣರಂಗ’

19
ಮೇ

ಅಂಕಣರಂಗ-೨ : ಡಿ. ವಿ. ಪ್ರಹ್ಲಾದ್ ಅವರ ‘ಹೊಳೆದದ್ದು ತಾರೆ … ಕೆಲವು ಸಂಪಾದಕೀಯಗಳು’ ಪುಸ್ತಕ ಪರಿಚಯ

– ಮು. ಅ ಶ್ರೀರಂಗ ಬೆಂಗಳೂರು

ಹೊಳೆದದ್ದು ತಾರೆ:

pexels-photo-302440ಬೆಂಗಳೂರಿನಿಂದ ಪ್ರಕಟವಾಗುವ ಸಂಚಯ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಡಿ ವಿ ಪ್ರಹ್ಲಾದ್ ಅವರು ಈ ಪುಸ್ತಕದಲ್ಲಿ ‘ನಿಮ್ಮೊಡನೆ’ ಎಂಬ ಶೀರ್ಷಿಕೆಯಲ್ಲಿ ಓದುಗರ ಜತೆ ತಾವು ನಡೆದು ಬಂದ ದಾರಿಯನ್ನು ಈ ರೀತಿ ಹಂಚಿಕೊಂಡಿದ್ದಾರೆ. ‘೧೯೮೭ರಿಂದ ಬರೆದಿರುವ ಸಂಪಾದಕೀಯಗಳಲ್ಲಿ ಆಯ್ದ ಕೆಲವು ಈ ಹೊತ್ತಿಗೆಯ ರೂಪದಲ್ಲಿದೆ. ಮೊದಲ ಸಂಚಿಕೆಯಿಂದಲೂ ಸಂಪಾದಕೀಯ ಆಯಾ ಸಂದರ್ಭಕ್ಕೆ ಪ್ರತಿಸ್ಪಂದನದ ರೂಪದಲ್ಲಿರುತ್ತಿತ್ತು. ಜೆರಾಕ್ಸ್ ಫೋಟೋ ಪ್ರತಿಯ ಪತ್ರಿಕೆಯಾಗಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಯ ಮೊದಲ ಬೆನ್ನುಪುಟದಲ್ಲಿ ಒಂದು ಪ್ಯಾರದಷ್ಟು ಬರೆಯಲು ಜಾಗವಿರುತ್ತಿತ್ತು. ಹಾಗೇ ಮೊದಮೊದಲ ಹದಿನಾರು ಪುಟಗಳ ಪ್ರಿಂಟು ಅವತರಣಿಕೆಯಲ್ಲೂ. ‘ಸಂಚಯ’ ಎನ್ನುವ ಗೆಳೆಯರ ಗುಂಪಿನ ಭಾಗವಾಗಿದ್ದ ಈ ಸಾಹಿತ್ಯ ಪತ್ರಿಕೆ ಮೊದಲು ಕೆಲವು ಕಾಲ ಡಿ ವಿ ಪ್ರಹ್ಲಾದ್ ಮತ್ತು ಮಂಡಳಿ ಅಂತ ಪ್ರಕಟಗೊಳ್ಳುತ್ತಿತ್ತು’. ಮಂಡಳಿಗಳು ಮುಗಿದು ಚದುರಿದ ಮೇಲೆ ಪ್ರಹ್ಲಾದರೂ ಸೇರಿದಂತೆ ಉಳಿದವರು ಮೂವರು ಮಾತ್ರ . ‘ಕೊನೆಗೆ ಉಳಿದದ್ದು ಪ್ರಹ್ಲಾದ್ ಅವರೊಬ್ಬರೇ’. Read more »

27
ಏಪ್ರಿಲ್

ಅಂಕಣರಂಗ ೧ – ಅನಿಯತಕಾಲಿಕ ಅಂಕಣದ ಅಂಕುರಾರ್ಪಣ!!

– ಮು ಅ ಶ್ರೀರಂಗ, ಬೆಂಗಳೂರು
pexels-photo-302440ನಿಲುಮೆಯಲ್ಲಿ ವಾರಕ್ಕೊಮ್ಮೆ ಒಂದು ಅಂಕಣ ಬರೆಯುವ ಆಸೆ ಸುಮಾರು ದಿನಗಳಿಂದ  ಇತ್ತು. ಸುಮಾರು ಎರಡು ವರ್ಷಗಳ ಹಿಂದೆ ನಾನು ಇದೇ ಜಾಲತಾಣದಲ್ಲಿ ‘ನಿನ್ನೆಗೆ ನನ್ನ ಮಾತು’ ಎಂಬ ತುಂಬಾ  ಧ್ವನಾರ್ಥಕವುಳ್ಳ ಹೆಸರನ್ನಿಟ್ಟುಕೊಂಡು ಒಂದು ಅಂಕಣ ಬರೆದಿದ್ದೆ. ಅದು ಐದು ಲೇಖನಗಳ ನಂತರ ಮುಂದುವರಿಯಲಿಲ್ಲ.  ಬರೀ ಆರಂಭ ಶೂರತ್ವವಾಗಿ ಹೋಯಿತು. ಈ ಸಲದ ಲೇಖನಗಳಿಗೆ   ಅಂಕಣರಂಗ ಎಂಬ ಹೆಸರನ್ನೇನೋ ಇಟ್ಟುಕೊಂಡಿರುವೆ. ಜತೆಗೇ ಯಾವುದಕ್ಕೂ ಇರಲಿ ಎಂಬ ಹುಷಾರಿನಿಂದ ಅನಿಯತಕಾಲಿಕ ಎಂಬ ರಕ್ಷಾಕವಚವನ್ನೂ ಧರಿಸಿಕೊಂಡಿರುವೆ!!. ಏಕೆಂದರೆ  ವಾರಕ್ಕೊಂದರಂತೆಯೋ  ಅಥವಾ ಹದಿನೈದು ದಿನಗಳಿಗೊಮ್ಮೆಯೋ ತಪ್ಪದೆ ಬರೆಯುವ ಬಗ್ಗೆ ನನಗೇ ಅನುಮಾನವಿದೆ. ಅದಕ್ಕೆ ಕಾರಣ  ಬರವಣಿಗೆ ನನ್ನ ಮನದಾಳದ  ಆಸೆಯಾದರೂ  ಅದು ನನಗೆ   ಓದಿನಷ್ಟು  ಪ್ರಿಯವಾದುದಲ್ಲ. ಸುಲಭವೂ ಅಲ್ಲ.  ನಾನು ಬರೆದರೆ ಒಂದು ಹತ್ತು ಪುಸ್ತಕಗಳ ಪರಿಚಯಾತ್ಮಕ ಲೇಖನವನ್ನು ಹೊಸ ಕನ್ನಡ ಸಾಹಿತ್ಯದ ಒಬ್ಬ  ಹವ್ಯಾಸಿ ಓದುಗನ ಮಟ್ಟದಲ್ಲಿ  ಮಾತ್ರ   ಬರೆಯಬಲ್ಲೆ.   ಅಂಕಣ ಬರೆಯಲು ಸಾಹಿತ್ಯವೊಂದೇ ಆಗಬೇಕೇ? ಬರೆಯುವ ಮನಸ್ಸಿದ್ದರೆ ಎಷ್ಟೊಂದು ವಿಷಯಗಳಿಲ್ಲ.

Read more »