ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅಂತರರಾಷ್ಟ್ರೀಯ ಮಹಿಳಾ ದಿನ’

14
ಮಾರ್ಚ್

ರಾಜಕಾರಣಿಗಳೇ, ಮಹಿಳೆಯರಿಗೆ ರಕ್ಷಣೆಕೊಡಿ ಇಲ್ಲವೇ ಜಾಗ ಖಾಲಿ ಮಾಡಿ

– ಚೈತ್ರ ಗೌಡ ಹಾಸನ
ಸ್ನಾತಕೋತ್ತರ ಪತ್ರಿಕೋದ್ಯಮ,
ಮಾನಸಗಂಗೋತ್ರಿ, ಮೈಸೂರು.

ಆದಿಯಿಂದಲೂ ಸೃಷ್ಟಿಯ ಮೂಲ ಹೆಣ್ಣು, ಕರುಣೆ, ವಾತ್ಸಲ್ಯ, ಮಮತೆ, ಅಕ್ಕರೆ ತಾಳ್ಮೆ ಹೀಗೆ ವಿಶಿಷ್ಟ ಶಕ್ತಿಗಳ ಸಂಗಮದ ಜೊತೆಗೆ ನವಿರಾದ ಭಾವನಾತ್ಮಕ ತಂತುಗಳು ಬೆಸೆದುಕೊಂಡಿವೆ. ಹೆಣ್ಣು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಈ ಪ್ರಕೃತಿಯಿಂದಲೇ ವಿಭಿನ್ನ ಶಕ್ತಿಯನ್ನು ಪಡೆದಿರುವ ಪೋಷಕಿ, ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಶಿಶುವನ್ನು ಹೊತ್ತು ಪೋಷಿಸಿ, ತನ್ನ ಎಲ್ಲ ಕಷ್ಟಗಳನ್ನು ನಗುನಗುತ್ತ ಸಹಿಸಿ ಮರುಹುಟ್ಟು ಎನ್ನುವಂತಹ ನೋವನ್ನು ಸಹಿಸಿಕೊಂಡು ಜನ್ಮ ಕೊಡುತ್ತಾಳೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ ಮಹತ್ವವಾದದ್ದು. ಜನ್ಮಕೊಟ್ಟು ಸಲಹುವ ತಾಯಿಯಾಗಿ, ಅಕ್ಕರೆಯ ಸೋದರಿಯಾಗಿ, ಸಾಂತ್ವನ ನೀಡುವ ಸ್ನೇಹಿತೆಯಾಗಿ, ಭಾವನೆಗಳ ಬೆಸುಗೆಯ ಮಡದಿಯಾಗಿ, ಪ್ರೀತಿ ಚಿಲುಮೆಯ ಮಗಳಾಗಿ. ಇಂದು ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತ ಜಗತ್ತಿನ ದೃಷ್ಟಿಯನ್ನು ತನ್ನೆಡೆಗೆ ಸೆಳೆದಿದ್ದಾಳೆ. ಪ್ರತಿಭೆ, ಕಲೆ, ಸಾಹಿತ್ಯ, ಸಾಹಸ ಪ್ರವೃತ್ತಿ ಅಂತಹ ಸಾಧನೆ ಮಾಡಿ ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ. ಉತ್ತಮ ಗುಣ ನಡತೆಗಳಿಂದ ಪೂಜನೀಯ ಸ್ಥಾನದಲ್ಲಿದ್ದಾಳೆ. Read more »

8
ಮಾರ್ಚ್

ರಾಷ್ಟ್ರಕ್ಕೆ ರಕ್ಷಣೆ ಹೆಣ್ಣು ನೀಡಬಲ್ಲಳಾದರೆ ತನ್ನನ್ನು ತಾನೂ ರಕ್ಷಿಸಿಕೊಳ್ಳಬಲ್ಲಳು..

– ತನ್ಮಯೀ ಪ್ರೇಮ್ ಕುಮಾರ್

ಪ್ರತಿ ವರ್ಷದ ಹಾಗೆ ಈ ವರ್ಷವೂ ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ.ಮಹಿಳೆಯ ಹರಹಿನ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ.ಆದರೆ ಎತ್ತ?? ಆಕೆಗೆ ಸುರಕ್ಷಿತವಾಗಿ ನಿರ್ಭಿಡೆಯಿಂದ ಕೆಲಸ ಮಾಡಲು,ಓಡಾಡಲು, ಸ್ವತಂತ್ರವಾಗಿರಲು ಅನುವು ಮಾಡಿಕೊಟ್ಟಿದ್ದೇವಾ?? ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಆಕೆಗೆ ರಕ್ಷಣೆ ಒದಗಿಸಿದ್ದೇವಾ?? ನಮ್ಮೊಳನಗಿನ ನಮ್ಮ ನಾಡಿನ ಆಂತರ್ಯವನ್ನು ಪ್ರಶ್ನಿಸಿಕೊಂಡಾಗಲಂತೂ ಅತ್ಯಂತ ಹೇಸಿಗೆಯಿಂದ ತಲೆ ಬಗ್ಗಿಸಬೇಕಾದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದೇವೆ. ಮಹಿಳಾವಾದ ,ಸಮಾನತೆ,ಹಕ್ಕುಗಳು ಹೀಗೆ ರೋಮ್ಯಾಂಟಿಕ್ ಶಬ್ದಗಳ ಆಚೆಗೆ ಹೆಣ್ಣಿಗೆ ಸಿಗಬೇಕಿದ್ದ ಕನಿಷ್ಟ ಸುರಕ್ಷತೆಯ ಭರವಸೆ ತಂದಿದ್ದೇವಾ? Read more »