ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅಂತರಾಷ್ಟ್ರೀಯ’

16
ಆಗಸ್ಟ್

ಡೊಕ್ಲಮ್ ಸದ್ದು, ಚೀನಾ ದರ್ದು: ಭಾರತ-ಚೀನ ಪ್ರಚಲಿತ ಕಥನ

– ಶ್ರೇಯಾಂಕ ಎಸ್ ರಾನಡೆ

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ

ನಾವು ನಮ್ಮ ಸ್ನೇಹಿತರನ್ನು ಆಯ್ಕೆಗೆ ತಕ್ಕಂತೆ ಬದಲಾಯಿಸಬಹುದು ಆದರೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ನೆರೆಹೊರೆಯ ದೇಶ-ಪ್ರದೇಶಗಳನ್ನಲ್ಲ. “ನಾ ಕೊಡೆ ಎನ್ನುವ ಭಾರತ, ತಾ ಬಿಡೆ ಎನ್ನುವ ಚೀನಾ ಹಠ. ಮಧ್ಯದಲ್ಲಿ ಬಿಕ್ಕಟ್ಟಿಗೆ ಸಿಲುಕಿರುವ ಡೊಕ್ಲಮ್ ಪ್ರದೇಶದ ವಾರಸುದಾರ ಭೂತಾನ್”. 1962ರ ಪರಿಸ್ಥಿತಿ ಈಗಿಲ್ಲ. ಎರಡೂ ಪರಮಾಣುಶಕ್ತಿಯ ಶಕ್ತಿಶಾಲಿ ದೇಶಗಳು. ಅದೇ ಹೊತ್ತಿಗೆ ಇಬ್ಬರೂ ನ್ಯೂಕ್ಲಿಯರ್ ಶಸ್ತ್ರಗಳ “ಮೊದಲ ಬಳಕೆ ಇಲ್ಲ”(ನೋ ಫಸ್ಟ್ ಯೂಸ್) ಎಂಬ ತತ್ವ ಪಾಲಿಸುವ ಜವಾಬ್ದಾರಿ ಹೊತ್ತಿವೆ. ಅಂದಿಗೆ “ಹುಲ್ಲುಕಡ್ಡಿಯೂ ಬೆಳೆಯದ ಬರಡು ಭೂಮಿ”(1962, ಅಂದಿನ ಪ್ರಧಾನ ಮಂತ್ರಿ, ನೆಹರೂ ಜವಾಹರ್ ಲಾಲ್ ಮಾತುಗಳು, ಚೀನಾದ ಅತಿಕ್ರಮಣ ಪ್ರವೇಶಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿನ ಹೇಳಿಕೆ) ಎಂದು ನಿರ್ಲಕ್ಷಿಸಲಾಗಿದ್ದ, ಆದರೆ ಇಂದಿಗೆ ಚೀನಾದ ಸಾರ್ವಭೌಮತೆಯ ಪ್ರತಿಷ್ಟೆ ಹಾಗೂ ಭಾರತದ ಆಂತರಿಕ ಭದ್ರತೆಯ ಅನಿವಾರ್ಯತೆಯ ದೃಷ್ಟಿಯಿಂದ ಅಸ್ಪಷ್ಟ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳು ಈವರೆಗಿನ ಭಾರತ-ಚೀನಾ ಗಡಿ ವಿವಾದದ ಜ್ವಲಂತತೆಗೆ ಮೂಲ. ಅದೀಗ “ಡೊಕ್ಲಮ್” ಕಾರಣದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಬೂದಿಮುಚ್ಚಿದ ಕೆಂಡದಂತಿರುವ ಈ ಸರ್ವಋತು ಸಮಸ್ಯೆ 52 ದಿನಗಳ ಬಿಗಿ ಸಂಘರ್ಷಾತ್ಮಕ ವಾತಾವರಣದಿಂದ ಬದಲಾವಣೆಯ ಮುಂದಿನ ದಾರಿಕಾಣದೆ ವಿಚಲಿತವಾಗಿದೆ. Read more »

29
ಮಾರ್ಚ್

ಉಪಖಂಡದಲ್ಲಿ ಏಕಾಂಗಿ ಭಾರತ?

– ಡಾ ಅಶೋಕ್ ಕೆ ಆರ್

ISPCತೀರ ಹಿಂದಿನ ಮಾತಲ್ಲ. ಕೆಲವೇ ದಿನಗಳ ಹಿಂದೆ ಅಫ್ಜಲ್ ಗುರುವನ್ನು ನೇಣಿಗೇರಿಸಿ ಅವನ ದೇಹವನ್ನು ಆತನ ಮನೆಯವರಿಗೆ ನೀಡದೆ ಜೈಲಿನಲ್ಲೇ ಮಣ್ಣು ಮಾಡಲಾಗಿತ್ತು. ಕಾಶ್ಮೀರದಲ್ಲಿ ಪ್ರತಿಭಟನೆಗಳಾದವು, ಅಫ್ಜಲ್ ಗುರು ಅಲ್ಲಿಯವನಾಗಿದ್ದರಿಂದ. ಇದೇ ಸಮಯದಲ್ಲಿ ಪಾಕಿಸ್ತಾನದ ರಾಜಕೀಯ ಪಕ್ಷಗಳು ಅಫ್ಜಲ್ ಗುರುವಿನ ದೇಹವನ್ನು ಆತನ ಮನೆಯವರಿಗೆ ಹಿಂದಿರುಗಿಸಬೇಕು ಎಂಬ ನಿರ್ಣಯ ತೆಗೆದುಕೊಂಡವು, ನಿರ್ಣಯ ಮಾಡಿದ್ದು ಹಾದಿಬೀದಿಯಲ್ಲಾಗಿರದೆ ಸಂಸತ್ತಿನಲ್ಲಾಗಿತ್ತು.ಈ ಕಾರಣದಿಂದ ನಿರ್ಣಯಕ್ಕೆ ಅಧಿಕೃತತೆಯ ಮುದ್ರೆ ಲಭಿಸಿತ್ತು. ಪಾಕಿಸ್ತಾನದ ಈ ನಡೆಗೆ ಭಾರತದಲ್ಲಿ ಅಗಾಧ ವಿರೋಧ  ವ್ಯಕ್ತವಾಗಿದ್ದು ಸಹಜ ಪ್ರತಿಕ್ರಿಯೆಯಾಗಿತ್ತು. ನಮ್ಮ ಮನೆಯ ವಿಷಯದಲ್ಲಿ ಅನ್ಯರು ಮೂಗು ತೂರಿಸುವುದು ಕೋಪ ತರಿಸುವ  ವಿಷಯವೇ ಸರಿ.

ಶ್ರೀಲಂಕಾದ ಎಲ್ ಟಿ ಟಿ ಇ ಸಂಘಟನೆಯ ಹುಟ್ಟಿಗೆ ಅನೇಕ ಐತಿಹಾಸಿಕ ಕಾರಣಗಳಿವೆ.ಶ್ರೀಲಂಕಾದ ಈ ಆಂತರಿಕ ಸಮಸ್ಯೆಯ ಉದ್ಭವವಾಗಿದ್ದು ಬ್ರೀಟೀಷರ ಆಡಳಿತದ ಕಾರಣದಿಂದ ಎಂದರೆ ತಪ್ಪಾಗಲಾರದು.ಶ್ರೀಲಂಕಾದ ಎಸ್ಟೇಟುಗಳಲ್ಲಿ ಕೆಲಸ ಮಾಡಲೆಂದು ಶ್ರಮಜೀವಿಗಳಾದ ತಮಿಳರನ್ನು ಕರೆದುಕೊಂಡು ಹೋಗಿತ್ತು ಅಂದಿನ ಬ್ರಿಟೀಷ್ ಆಡಳಿತ. ಬ್ರಿಟೀಷರು ಶ್ರೀಲಂಕ ತೊರೆದ ನಂತರ ಅಲ್ಲಿನ ಬಹುಸಂಖ್ಯಾತರಾದ ಸಿಂಹಳೀಯರು ಲಂಕ ತಮಿಳರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡಕಲಾರಂಭಿಸಿದ್ದರು.

Read more »