ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅಜಾದಿ’

9
ಸೆಪ್ಟೆಂ

ಕಾಶ್ಮೀರ ಸಮಸ್ಯೆಯ ವರ್ತಮಾನ

– ಪ್ರೊ. ರಾಜಾರಾಮ ಹೆಗಡೆ

12-kashmir-protest-2ಕಾಶ್ಮೀರವು ಇಂದು ಕೇವಲ ಭಾರತ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ನಡುವಿನ ಹಗೆಯ ಕಾರಣವಷ್ಟೇ ಅಲ್ಲ, ಭಾರತದಲ್ಲೇ ಆಂತರಿಕ ಹಗೆಯ ಹೊಗೆಯೆಬ್ಬಿಸುತ್ತಿರುವ ಒಂದು ವರ್ತಮಾನದ ಸಮಸ್ಯೆಯಾಗಿದೆ. ಹಾಗಾಗಿ ಕಾಶ್ಮೀರ ವಿವಾದವು ಹೇಗೆ ಪ್ರಾರಂಭವಾಯಿತು, ನಮ್ಮ ಮುತ್ಸದ್ದಿಗಳು ಎಲ್ಲಿ ಎಡವಿದರು ಎಂಬ ಹಿಸ್ಟರಿಗಿಂತ ಅದರ ತೆಕ್ಕೆಯೊಳಗೆ ಬರಲು ಸೋಲುವ ಅಥವಾ ನಿರಾಕರಿಸುವ ವರ್ತಮಾನದ ಆಯಾಮಗಳು ನನಗೆ ಸೋಜಿಗ ಹುಟ್ಟಿಸುತ್ತಿವೆ. ಇಂದು ಕಾಶ್ಮೀರವು ಭಾರತ ಪಾಕಿಸ್ತಾನಗಳ ಗಡಿ ಸಮಸ್ಯೆಯಾಗಿ ಉಳಿದಿಲ್ಲ, ಬದಲಾಗಿ ಅದು ದೇಶದ ಸಮಸ್ತ ಪ್ರಗತಿಪರ ಹೋರಾಟಗಾರರಿಗೂ, ಆಜಾದಿಯ ಕರೆಯಾಗಿ ಕಾಣಿಸುತ್ತಿದೆ ಎಂಬುದನ್ನು ಗಮನಿಸುವುದು ಅಗತ್ಯ. ಕೇವಲ ಮುಸ್ಲಿಂ ಸಂಘಟನೆಗಳೊಂದೇ ಅಲ್ಲ ಭಾರತದ ಪ್ರಗತಿಪರ ಸಂಘಟನೆಗಳೂ, ಕಾಶ್ಮೀರಿ ಮುಸ್ಲಿಂ ಹೋರಾಟಗಾರರ ಜೊತೆಗೆ ಆಜಾದಿಯ ಘೋಷಣೆ ಕೂಗುತ್ತಿವೆ. ದೇಶದ ಬರ್ಬಾದಿಯ ಕುರಿತು ಮಾತನಾಡುವುದು ಈ ಸಂಘಟನೆಗಳಿಗೆ ರಾಷ್ಟ್ರೀಯತೆಯ ಸಮಸ್ಯೆಯಾಗಿ ಕಾಣಿಸುತ್ತಿಲ್ಲ. ಬದಲಾಗಿ ಬಿಡುಗಡೆಯ ಕರೆಯಾಗಿ ಕಾಣಿಸುತ್ತಿದೆ. ಇಂಥ ಚಳವಳಿಗಳನ್ನು ಬೆಂಬಲಿಸುವ ಬುದ್ಧಿಜೀವಿಗಳಿಗೆ ಇಂಥ ಘೋಷಣೆಗಳು ನ್ಯಾಯಯುತವೆನಿಸತೊಡಗಿವೆ. ಈ ಪರಿಸ್ಥಿತಿಯು ನಮಗೆ ಎರಡು ಸವಾಲುಗಳನ್ನು ಸೃಷ್ಟಿಸಿದೆ: ಮತ್ತಷ್ಟು ಓದು »

31
ಆಗಸ್ಟ್

ಕಾಶ್ಮೀರದ ಐತಿಹಾಸಿಕ ಸತ್ಯಗಳು : ನಿಲುಮೆ ವಿಚಾರ ಸಂಕಿರಣ

– ಹರೀಶ್ ಆತ್ರೇಯ

14088692_10154596775090649_5386569408904041755_nಕಾಶ್ಮೀರ ವಿವಾದಿತ ಪ್ರದೇಶವೇಕಾಗುತ್ತಿದೆ ಮತ್ತು ಅಲ್ಲಿನ ನಿಜ ಸ್ವರೂಪವೇನು ಎಂಬುದನ್ನು ತಿಳಿಯಲು ನಿಲುಮೆ ತಂಡ ಆಯೋಜಿಸಿದ ಕಾಶ್ಮೀರದ ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು ಎಂಬ ಸಂವಾದ ಕಾರ್ಯಕ್ರಮದಲ್ಲಿನ ಪ್ರೊ. ಪ್ರೇಮಶೇಖರ್ ರವರ ಕೆಲವು ವಿಚಾರಗಳನ್ನು ಹಂಚಿಕೊಳ್ಳುತಿದ್ದೇನೆ..

ಭಾರತದ ವಿಭಜನೆಯಾದಾಗ ಬ್ರಿಟಿಷರು ತಮ್ಮ ನೇರ ಆಡಳಿತಕ್ಕೆ ಒಳಪಟ್ಟ ರಾಜ್ಯಗಳನ್ನು ಭಾರತವೆಂದು ಮತ್ತು ಉಳಿದ ದೇಶೀಯ ಸ್ವತಂತ್ರ್ಯ ಪ್ರಾಂತ್ಯಗಳನ್ನು ಅವುಗಳ ಇಚ್ಚೆಯಂತೆ ಭಾರತದಲ್ಲಾಗಲೀ ಅಥವಾ ಪಾಕೀಸ್ತಾನದಲ್ಲಿಯಾಗಲೀ ಸೇರುವಂತೆ ಹೇಳಲಾಯ್ತು. ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ ಪ್ರಕಾರ “British paramount should relapse on the midnight of 14 Aug 1947. ಎಂದರೆ ಸುಮಾರು ಆರುನೂರು ಸ್ಥಳೀಯ ಸಂಸ್ಥಾನಗಳು ಬ್ರಿಟಿಷ್ ಕಾಲನಿಗಳಾಗುವದಕ್ಕೂ ಮುಂಚೆ ಇದ್ದ ರೀತಿಯಲ್ಲಿ ಸ್ವತಂತ್ರ್ಯವಾಗಿರಬಹುದು. ಅಲ್ಲಿನ ಸ್ಥಳೀಯ ನಾಯಕನ (ಆತ ನವಾಬನಾಗಿರಬಹುದು ಅಥವ ಅರಸನಾಗಿರಬಹುದು) ಆತನ ಆಜ್ಞೆ ಅಥವಾ ನಡೆಯಂತೆ ಆ ಸಂಸ್ಥಾನಗಳು ಪಾಕೀಸ್ತಾನದೊಳಗೆ ಅಥವಾ ಭಾರತದೊಳಗೆ ವಿಲೀನವಾಗಬಹುದು. ಅದರ ಜೊತೆಗೆ ಮತ್ತೂ ಒಂದು ಸಲಹೆಯನ್ನು ಬ್ರಿಟಿಷರು ಕೊಡುತ್ತಾರೆ ಅದೇನೆ೦ದರೆ ವಿಲೀನಗೊಳಿಸಿಕೊಳ್ಳುವಾಗ ಆ ಪ್ರಾಂತ್ಯದ ಭೌಗೋಳಿಕ ನೆಲೆ ಮತ್ತು ಪ್ರಜೆಗಳ ಧರ್ಮವನ್ನು ಪರಿಗಣಿಸಿ ಎಂಬುದಾಗಿತ್ತು. ಇದನ್ನು ಕೇಳಿದ ಕಾಶ್ಮೀರ ಮತ್ತು ತಿರುವನಂತಪುರಂ ಸಂಸ್ಥಾನಗಳು ಸ್ವತಂತ್ರ್ಯವಾಗುವ ಯೋಚನೆಯನ್ನು ಮಾಡಿದವು. ಅಂದರೆ ಯಾರ ಆಡಳಿತಕ್ಕೂ ಒಳಪಡದೆ (ಅತ್ತ ಪಾಕೀಸ್ತಾನವೂ ಅಲ್ಲ ಇತ್ತ ಭಾರತವೂ ಅಲ್ಲ) ಸ್ವತಂತ್ರ್ಯವಾಗಿ ರಾಜ್ಯಭಾರ ಮಾಡುವುದು. ಇದು ಪಾಕೀಸ್ತಾನಕ್ಕೆ ಸಮ್ಮತವಾಗಲಿಲ್ಲ. ಏಕೆಂದರೆ PAKISTAN ನಲ್ಲಿನ K ಕಾಶ್ಮೀರವನ್ನ ಸೂಚಿಸುತ್ತೆ. PAKISTAN ಎನ್ನುವುದು ಒಂದು ಪೂರ್ಣ ಹೆಸರಲ್ಲ, ಹಲವು ಸ್ಥಳಗಳ ಅಕ್ಷರಗಳನ್ನು ಸೇರಿಸಿದ ಸಂಕ್ಷಿಪ್ತ ರೂಪ. ಇದನ್ನು ಕೊಡಮಾಡಿದವನು ಲಂಡನ್ನಿನ ವಿದ್ಯಾರ್ಥಿಯಾಗಿದ್ದ  ಚೌದರಿ ರೆಹಮತ್ ಆಲಿ ಮತ್ತು ಪ್ರಕಟಿಸಿದ್ದು ೨೮ ಜನವರಿ ೧೯೩೩ರಂದು ನೌ ಆರ್ ನೆವರ್ ಎಂಬ ಪತ್ರಿಕೆಯಲ್ಲಿ, ಆತನ ಪ್ರಕಾರ ವಾಯುವ್ಯ ಭಾರತವು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಭಿನ್ನವಾಗಿದೆ ಮತ್ತು ಧಾರ್ಮಿಕವಾಗಿ ಮಧ್ಯ ಏಷಿಯಾಕ್ಕೆ ಮತ್ತು ಪಶ್ಚಿಮ ಏಷಿಯ ಹತ್ತಿರವಾಗಿದೆ, ಆದ ಕಾರಣ ಈ ಭಾಗವನ್ನು ಭಾರತದಿಂದ ಪ್ರತ್ಯೇಕಿಸಿ ಮಧ್ಯ ಏಷಿಯಾದೊಂದಿಗೆ ಸೇರಿಸಿ ಹೊಸತೊಂದು ರಾಷ್ಟ್ರವನ್ನು ಮಾಡಬೇಕು ಎಂಬುದು. ಆತ ಸೇರಿಸಿದ ಪ್ರಾಂತ್ಯಗಳು ಈ ಕೆಳಗಿನಂತಿವೆ. ಮತ್ತಷ್ಟು ಓದು »