ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅಣ್ಣ ಹಜಾರೆ’

8
ಜೂನ್

ಸಾಮಾಜಿಕ ಪ್ರಜ್ಞೆ ಮತ್ತು ನಾವು

-ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ

logo_world_conferenceಒಮ್ಮೆ ಹೀಗಾಯ್ತು, ಮನೆಗೆ ಬರುತ್ತಿರುವಾಗ ದಾರಿಯಲ್ಲಿ ನನ್ನ ಸ್ನೇಹಿತ ಜಗಳವಾಡಿದ. ಅವನ ಜಗಳಕ್ಕೂ ಕಾರಣವಿತ್ತು. ಮನೆಕಟ್ಟಿಸುತ್ತಿದ್ದ ಯಜಮಾನರೊಬ್ಬರು ರಸ್ತೆ ಬದಿಯ ಚರಂಡಿಗೆ ಮರಳು, ಜಲ್ಲಿಕಲ್ಲುಗಳನ್ನು ತುಂಬಿಬಿಟ್ಟಿದ್ದರು. ಕೊಳಚೆ ನೀರು ಹರಿದು ಹೋಗದೆ ಚರಂಡಿ ತುಂಬಿ ನಿಂತಿತ್ತು. ಅಂಥದ್ದೊಂದು ಘಟನೆ ಅವನ ಆಕ್ರೋಶಕ್ಕೆ ಕಾರಣವಾಗಿತ್ತು. ಚರಂಡಿಯಲ್ಲಿ ತುಂಬಿರುವ ಮರಳು ಮತ್ತು ಜಲ್ಲಿಕಲ್ಲುಗಳನ್ನು ಕೂಡಲೇ ತೆಗೆದುಹಾಕುವಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಹೇಳಿದ. ಅಲ್ಲೇ ಸಮೀಪದಲ್ಲಿ ನಿಂತಿದ್ದ ಯಜಮಾನರು ಮನೆ ಕೆಲಸ ಪೂರ್ಣಗೊಳ್ಳುವವರೆಗೆ ಅದು ಸಾಧ್ಯವಿಲ್ಲವೆಂದು ಬಿರುಸಾಗಿಯೇ ನುಡಿದರು. ಮಾತಿಗೆ ಮಾತು ಬೆಳೆಯಿತು. ಗಲಾಟೆ ಕೇಳಿ ಸುತ್ತಮುತ್ತಲಿನ ಮನೆಯವರು ಹೊರಗೆ ಬಂದರು. ಆಶ್ಚರ್ಯವೆಂದರೆ ಯಾರೊಬ್ಬರೂ ನನ್ನ ಗೆಳೆಯನ ಬೆಂಬಲಕ್ಕೆ ನಿಲ್ಲಲಿಲ್ಲ. ಅವನನ್ನೆ ವಿಚಿತ್ರ ಎನ್ನುವಂತೆ ನೋಡಿದರು. ಆದ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಅಲ್ಲಿದ್ದ ಯಾರೊಬ್ಬರಲ್ಲೂ ಇರಲಿಲ್ಲ. ಅಷ್ಟಕ್ಕೂ ಅದು ತಪ್ಪೆಂದು ಜಗಳಕ್ಕೆ ನಿಂತವನು ಅಸಲಿಗೆ ಆ ಕಾಲೋನಿಯವನೂ ಆಗಿರಲಿಲ್ಲ. ಆ ನಿಂತ ನೀರಿನ ಪಕ್ಕದ ಮನೆಯೂ ಅವನದಾಗಿರಲಿಲ್ಲ. ಆದರೂ ಆ ಸಂದರ್ಭ ಅವನಲ್ಲಿನ ಸಾಮಾಜಿಕ ಪ್ರಜ್ಞೆ ಜಾಗೃತಗೊಂಡಿತ್ತು. ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ. ಯಾರು ಸಮಸ್ಯೆಯ ಸಮೀಪದಲ್ಲಿದ್ದರೋ ಅವರಲ್ಲಿ ಮಾತ್ರ ಸಾಮಾಜಿಕ ಸಮಸ್ಯೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ಆದರೆ ಅದೇ ಜನ ಅಣ್ಣಾ ಹಜಾರೆ ಹೆಸರಿನ ಟೊಪ್ಪಿಗೆ ಧರಿಸಿ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದು ವ್ಯವಸ್ಥೆಯೊಂದರ ವ್ಯಂಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. Read more »

27
ಡಿಸೆ

ಭ್ರಷ್ಟಾಚಾರಿಗಳೇ ಭಾರತ ಬಿಟ್ಟು ತೊಲಗಿ..

9
ಸೆಪ್ಟೆಂ

ಯಾರು ಅಪಾಯಕಾರಿ!?

– ಸಚಿನ್

ನಮ್ಮ ನಿಮ್ಮ ಮಧ್ಯೆಯಿರುವ ಕೆಲ ಎಡಬಿಡಂಗಿ ಗಳು ನಿನ್ನೆ ದೆಹಲಿ ಹೈಕೋರ್ಟ್ ನಲ್ಲಿ ನಡೆದ ಬಾಂಬ್ ಸ್ಪೋಟದ ಕುರಿತು ಒಂದು ಹೇಳಿಕೆ ಕೊಟ್ಟರು. ” ಬಿಜೆಪಿಗೆ ಅವಮಾನ ಆಗುವ ಸಂಧರ್ಭ ಗಳಲ್ಲಿ ಬಾಂಬ್ ಸ್ಪೋಟ ನಡೆಯುತ್ತಿದೆ ಹಾಗಾಗಿ ರೆಡ್ಡಿಯ ಬಂಧನದ ಸಂಧರ್ಭ ದಲ್ಲಿ ಈ ಸ್ಪೋಟ ನಡೆದಿರುವುದು ಹಲವಾರು ಉಹಾಪೋಹಗಳಿಗೆ ಎಡೆ ಮಾಡಿಕೊಡುತ್ತಿದೆ. ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ ನಡೆಸಿದ ಬಾಂಬ್ ಸ್ಪೋಟಗಳೇ ಇದಕ್ಕೆ ಸಾಕ್ಷಿ. ಅಣ್ಣಾ ಹಜಾರೆ ಮತ್ತು ರೆಡ್ಡಿ ಬಂಧನದ ಅಬ್ಬರ ಗಳಿಗಿಂತ ಹೆಚ್ಚಿನರೀತಿಯಲ್ಲಿ ಬಿಜೆಪಿ ದೇಶ ಭಕ್ತರು ಕಿರುಚಾಟಗಳನ್ನು ಶುರುಮಾಡ್ತಾರೆ ನೋಡ್ತಾಯಿರಿ” ಎಂದು ಎರಡು ಲೈನ್ ಬರೆದು ತಮ್ಮ ಮನಸ್ಸಿನಲ್ಲಿರುವ ಅಸಹ್ಯವನ್ನು ಹೊರಹಾಕಿದರು.

ಸ್ನೇಹಿತರೇ ನಾವು ಗಮನಿಸ ಬೇಕಾದ ಮುಖ್ಯವಾದ ಅಂಶವೆಂದರೆ ಈಗ ನಡೆಯುತ್ತಿರುವುದು ಭಯೋತ್ಪಾದಕರು ಮತ್ತು ಭಾರತ ದೇಶದ ಮಧ್ಯೆ ಯುದ್ದ, ಈ ಯುದ್ದ ದಲ್ಲಿ  ಭಯೋತ್ಪಾದಕರು ವಿಜಯಿಯಾಗುತಿದ್ದಾರೆ. ಈ ಭಯೋತ್ಪಾದನೆ ಕೃತ್ಯಗಳನ್ನ ಯಾವುದೇ ದೇಶ ಸುಮ್ಮನೆ ಸಹಿಸಿ ಕೊಳ್ಳುವುದಿಲ್ಲ. ಹಾಗು ಕೃತ್ಯ ನಡೆಸಿದವರಿಗೆ ಸರಿಯಾದ ಶಿಕ್ಷೆ ಕೊಡುವ ವ್ಯವಸ್ಥೆ ಬೇರೆ ದೇಶಗಳಲ್ಲಿದೆ. ಒಂದು ಸಣ್ಣ ಪ್ರಮಾದ ದಿಂದ ಬೆಂಗಳೂರಿನ ವೈದ್ಯ ಹನೀಫ್ ಆಸ್ಟ್ರೇಲಿಯಾದಲ್ಲಿ ಹೇಗೆ ನರಳಿದ ಎಂದು ನಮಗೆ ಗೊತ್ತಿಲ್ಲವೆ.

ಪಕ್ಷಗಳನ್ನು ಸಮರ್ಥಿಸಿಕೊಂಡು ಜಗಳವಾಡುವ ಸಮಯ ಇದಲ್ಲ. ಸುಮ್ಮನೆ ವಿತಂಡವಾದ ಮಾಡಿ ಎಲ್ಲದಕ್ಕು ಒಂದೊಂದು ಸಂಭಂದ ಕಲ್ಪಿಸಿ ನಿಮ್ಮ ಹೊಲಸನ್ನು ಕಾರಬೇಡಿ. ನಿಮ್ಮ ಭಂಡತನದ ನಿಲುವುಗಳು ಏನೆಂದು ಅಣ್ಣಾ ಹಜಾರೆ ಹೋರಾಟದ ಸಂಧರ್ಭದಲ್ಲಿ ನಮ್ಮ ಭಾರತದ ಎಲ್ಲ ಸತ್ಪ್ರಜೆಗಳಿಗೆ ಗೊತ್ತಾಗಿವೆ.

 

Read more »

7
ಸೆಪ್ಟೆಂ

ಅಣ್ಣಾ ಹಜಾರೆ – ಶ್ರೀ ಸಾಮಾನ್ಯನ ಮನೆ – ಮನಗಳ ದೀಪ.

– ಹೊಳೆನರಸೀಪುರ ಮಂಜುನಾಥ್

ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ, ಕೇ೦ದ್ರಸರ್ಕಾರವನ್ನು ಮಣಿಸಿ, ಜನಲೋಕಪಾಲ್ ಮಸೂದೆ ಜಾರಿಗೆ ತರುವಲ್ಲಿ ಸ೦ಸತ್ತಿನಲ್ಲಿ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿ ಅನುಮೋದಿಸುವ೦ತೆ ಮಾಡಿದೆ. ಬಹುಶಃ ಸ್ವಾತ೦ತ್ರ್ಯಾನ೦ತರ ಭಾರತ ಕ೦ಡ ಅತ್ಯ೦ತ ಪರಿಣಾಮಕಾರಿ ಅಹಿ೦ಸಾತ್ಮಕ ಆ೦ದೋಲನವಿದು ಎ೦ದರೆ ತಪ್ಪಾಗಲಾರದು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕಿರುವ ಜಯ, ಯಾವುದೇ ಒ೦ದು ಪಕ್ಷಕ್ಕೆ, ಸ೦ಘಟನೆಗೆ ಅಥವಾ ವ್ಯಕ್ತಿಗೆ ಸಿಕ್ಕಿರುವ ಜಯವಲ್ಲ. ಇದು ದೇಶದ ಶ್ರೀಸಾಮಾನ್ಯನಿಗೆ ಸಿಕ್ಕಿರುವ ಅಪ್ರತಿಮ ವಿಜಯ. ತನ್ನ ದಿನನಿತ್ಯದ ಬದುಕಿನಲ್ಲಿ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಕ೦ಡು, ಅನುಭವಿಸಿ, ತನ್ನನ್ನು ಹೈರಾಣು ಮಾಡಿದ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಈ ದೇಶದ ಸಾಮಾನ್ಯ ನಾಗರಿಕನ ಸಾತ್ವಿಕ ಕೋಪಕ್ಕೆ ಸಿಕ್ಕ ವಿಜಯ ಇದಾಗಿದೆ.
Read more »

19
ಆಗಸ್ಟ್

ಜನಲೋಕಪಾಲ ಅನ್ನುವುದು ಮಾಯದಂಡವೇನಲ್ಲ…!

– ರಾಕೇಶ್ ಶೆಟ್ಟಿ

ಒಂದೆಡೆ ಅಣ್ಣಾರನ್ನ ಬೆಂಬಲಿಸಿ ಜನ ಬೀದಿಗಿಳಿದರೆ, ಇನ್ನೊಂದೆಡೆ ಅಣ್ಣಾ ಹೋರಾಟವನ್ನ ಪ್ರಶ್ನಿಸಿ ಹಲವಾರು ಪ್ರಶ್ನೆಗಳೆದ್ದಿವೆ.

’ಜನಲೋಕಪಾಲ್’ ಬಂದ ತಕ್ಷಣ ಎಲ್ಲ ಭ್ರಷ್ಟರು ಮಾಯವಾಗ್ತಾರೆ ಅಂತ ಖುದ್ದು ಅಣ್ಣಾ ಮತ್ತು ಸಿವಿಲ್ ಸೊಸೈಟಿಯವರ್ಯಾರು ಸಹ ಎಲ್ಲೂ ಹೇಳಿಲ್ಲ.ಹಾಗಾಗ್ಯೂ ಇಂತ ವಾದ ಹುಟ್ಟು ಹಾಕಿದ್ದು ಯಾರು? ಬಹುಷಃ ಕಪಿಲ್ ಸಿಬಲ್ ಇರಬೇಕು ಅದನ್ನೆ ಹಿಡಿದು ಕೆಲವರು ’ಜನಲೋಕಪಾಲ್’ ಬಂದ್ರೆ ಭ್ರಷ್ಟಚಾರ ಮಾಯವಾಗುತ್ತಾ!? ಅಂತ ಕೇಳ್ತಾ ಇದ್ದಾರೆ ಕೆಲವರು. ಅಂತವರಿಗೊಂದು ಪ್ರಶ್ನೆ ಪೋಲಿಸ್ ಇಲಾಖೆ ಅನ್ನುವುದು ಬಂದು ಎಷ್ಟು ವರ್ಷಗಳಾಯ್ತು? ಕಳ್ಳತನ-ಕೊಲೆ-ದರೋಡೆ ನಿಂತಿದೆಯಾ ಸ್ವಾಮಿ!? ಇಲ್ಲ ತಾನೆ..! ಆದರೆ ಜನ್ರಿಗೊಂದು ಹೆದರಿಕೆಯಂತೂ ಇರುತ್ತದೆ ತಪ್ಪು ಮಾಡೋಕೆ ಹಾಗೆ ತಪ್ಪು ಮಾಡಿದವರನ್ನ ಹಿಡಿದು ಜೈಲಿಗೆ ಅವರು ನೂಕುತಿದ್ದಾರಲ್ವಾ? ಹಾಗೆಯೇ ಜನಲೋಕಪಾಲ ಅನ್ನುವುದು ಸಹ.ಅದು ಬಂದ ತಕ್ಷಣ ಎಲ್ಲ ಸರಿ ಹೋಗದು.ಅದು ಸುಧಾರಣೆಯ ಒಂದು ಅಸ್ತ್ರವಷ್ಟೆ.

Read more »

19
ಆಗಸ್ಟ್

ಈ ಎಡವಟ್ಟುಗಳು ಯಾಕೆ ಹೀಗೆ ಅಂತ?

– ಸಚಿನ್ ಕೆ
ನಮಸ್ಕಾರ ಸಾ. ಎಂಗಿದೀರಾ.
ನೋಡಿ ಸಾ, ಪ್ರಪಂಚ ಹೆಂಗೈತೆ ಅಂದ್ರೆ ಹಿಂಗೂ ಜನ ಇರ್ತಾರ ಅಂತ ಗೊತ್ತಿರ್ಲಿಲ್ಲ.

ಗಾಂಧಿ ಮಆತ್ಮ್ ನ ತರ ನೀವು ಉಪ್ವಾಸ ಮಾಡಿದ್ರೆ ಜನ ಅದರಲ್ಲೂ ಹುಳುಕು ಕಂಡಿಡಿತಾರೆ ಅಂದ್ರೆ, ಈ ಜನ ಎಷ್ಟು ಗಬ್ಬೆದ್ದು ಹೋಗಿದ್ದಾರೆ ಅಂತ. ಆ ಬ್ರಹ್ಮ ಇವರ ತಲೆ ಒಳಗೆ ಮಿದುಳು ಇಟ್ಟಿಲ್ಲ ಅನ್ಸುತ್ತೆ, ಅದರೆ ಬದಲು ಸಗಣಿ ಮಡಗವ್ನೆ. ಈ ಬಡ್ಡೆತ್ತೇವು ಬರೀ ಉಲ್ಟಾ ಮಾತಾಡೋದೆ ಆಗ್ವಾಯ್ತು.

ಅವಯ್ಯ ದೇಸಾನ ಏನೋ ಬದಲಾವ್ಣೆ ಮಾಡ್ತೀನಿ ಅಂತ ಮಾತಾಡ್ತಿಲ್ಲ. ಲಂಚ ತಿನ್ನೋ ಎಲ್ಲ ಬೇವರ್ಸಿ ಮುಂಡೇವು ಗಳಿಗೆ ಸರ್ಯಾದ ಸಿಕ್ಸೆ ಆಗ್ಲಿ ಅಂತ ಗೋರ್ಮೆಂಟ್ ನೋರು ಸರಿಯಾದ ರೂಲ್ಸ್ ಮಾಡ್ಲಿ ಅಂತ. ಆದರೆ ಈ ಉಲ್ಟಾ ಮಾತಾಡ್ತ ಇರೋ ಈ ಹೈಕಳು ಕೇಳೋ ಪ್ರಸ್ನೆಗಳನ್ನು ನೋಡಿದ್ರೆ ನಗ ತಡ್ಯಾಕಾಗ್ತಿಲ್ಲ.

Read more »

18
ಆಗಸ್ಟ್

ಭ್ರಷ್ಟಾಚಾರ ಎಂದರೆ ಅನುಕೂಲ ಸಿಂಧು

– ಪವನ್ ಪರುಪತ್ತೆದಾರ   

ನನಗೊಬ್ಬ ಸ್ನೇಹಿತ ಇದ್ದಾನೆ ಪ್ರವೀಣ್ ಅಂತ, ನನ್ನ ಜೊತೆ ಓದಿಲ್ಲವಾದರೂ ನನ್ನ ಸಹಪಾಠಿ ಅವನು, ಒಂದೇ ತರಗತಿ ಆದರೆ ಬೇರೆ ಶಾಲೆ. ಅವನ ಕೆಲಸ ತಾಲ್ಲೂಕು ಕಚೇರಿಯಲ್ಲಿ. ಸರ್ಕಾರದಿಂದ ಕೊಟ್ಟ ಕೆಲಸ ಅಲ್ಲ, ಅವನೇ ಹುಡುಕಿ ಕೊಂಡಿರುವ ವೃತ್ತಿ. ನಿಜ ಹೇಳಬೇಕೆಂದರೆ ನಮ್ಮೂರಿನ ತಾಲ್ಲೂಕು ಕಚೇರಿಯೋಳಗಿರುವರಿಗಿಂತ ಇವನು ಹೆಚ್ಚು ಕೆಲಸ ಮಾಡುತ್ತಾನೆ. ಪಹಣಿ, registration, ಖಾತೆ ಬದಲಾವಣೆ, encumberance ಸರ್ಟಿಫಿಕೇಟ್, survey sketch ಕಾಪಿ, ನಿಮಗೇನು ಬೇಕು?? ತಾಲ್ಲೂಕು ಕಚೇರಿಯ ಗೇಟ್ ನ ಪ್ಯೂನ್ ಇಂದ ಹಿಡಿದು ತಹಶೀಲ್ದಾರ್ ತನಕ, ಏನು ಕೆಲಸ ಬೇಕಾದರುಮಾಡಿಕೊಡುತ್ತಾನೆ(ಮಾಡಿಸಿಕೊಡುತ್ತಾನೆ).

ಇತ್ತೀಚಿಗೆ ನನಗೆ ಬಹಳ ಜರೂರಾಗಿ ನಮ್ಮ ಜಮೀನಿನ ಪಹಣಿ ಬೇಕಾಗಿತ್ತು. ನಮ್ಮ ಊರಿನ ಪಹಣಿ ಕೇಂದ್ರ ಬಹಳ ದಿನಗಳಿಂದ ದುರಸ್ಥಿಯಲ್ಲಿತ್ತು. ಆಗಷ್ಟೇ ಕೊಡಲು ಶುರು ಮಾಡಿದ್ದರು. ಅದ್ದರಿಂದ ತಾಲ್ಲೂಕು ಕಚೇರಿ ಬಳಿ ಹೋಗಿ ಸಾಲು ನೋಡಿದೊಡನೆ ಭಯವಾಯ್ತು. ಅದರಲ್ಲೂ ನಮ್ಮ ಸರ್ಕಾರೀ ಕಛೇರಿಯೋಳಗಿನ ಗಣಕ ಯಂತ್ರಗಳು ಯಾವಾಗ ಕೆಡುತ್ತವೋ ಗೊತ್ತಿಲ್ಲ. ಇವತ್ತು ಕೆಟ್ಟರೆ ಇನ್ನು ರಿಪೇರಿ ಆಗುವುದು ಯಾವಾಗಲೋ??? ಅಲ್ಲಿವರೆಗೂ ನನಗೂ ಕಾಯುವ ಅವಕಾಶವಿರಲಿಲ್ಲ. Read more »

16
ಆಗಸ್ಟ್

ಹೋರಾಟದ ಸಾಗರಕೆ ಸಾವಿರಾರು ನದಿಗಳು.ನೀವು!?

15
ಆಗಸ್ಟ್

ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ…!

– ರಾಕೇಶ್ ಶೆಟ್ಟಿ

ಇವತ್ತು ೬೫ನೇ ಸ್ವಾತಂತ್ರ್ಯ ಸಂಭ್ರಮ,ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ ಭಾಷಣ ಮಾಡಲಿದ್ದಾರೆ ನಮ್ಮ ಪ್ರಾಮಾಣಿಕ ಪ್ರಧಾನಿ.ಮತ್ತೆ ನಾಳೆ ಇದೇ ಪ್ರಾಮಾಣಿಕ ಪ್ರಧಾನಿಯ ಸರ್ಕಾರದ ಅನೈತಿಕತೆಯ ವಿರುದ್ಧ ಅಣ್ಣಾ ಹಜ಼ಾರೆ ಮತ್ತೆ ಉಪವಾಸ ಕೂರುತಿದ್ದಾರೆ.ಅಣ್ಣಾ ಇದನ್ನ ಎರಡನೇ ಸ್ವಾತಂತ್ರ್ಯ ಹೋರಾಟ ಅನ್ನುತಿದ್ದಾರೆ.ಆದರೆ ಮೊದಲ ಸ್ವಾತಂತ್ರ್ಯ ಹೋರಾಟದ ಆಳ-ಅಗಲಗಳನ್ನ ಸರಿಯಾಗಿ ತಿಳಿಯಲಾಗದೇಯೆ ಶಾಲೆ-ಕಾಲೇಜು ಪಾಸಾಗಿ ಬಂದ ನಮ್ಮಲ್ಲಿ ಅದಿನ್ನೆಷ್ಟು ಜನಕ್ಕೆ ಈ ಎರಡನೇ ಹೋರಾಟ ಕಿಚ್ಚು ಹಚ್ಚಬಹುದು,ಅದನ್ನ ಕಾಲವೇ ಉತ್ತರಿಸಲಿದೆ.

ಅಣ್ಣಾ ಉಪವಾಸ ಹೋರಾಟಕ್ಕೆ ಜಯವಾಗಲಿ ಅಂತ ಹಾರೈಸುತ್ತ,ಅಣ್ಣಾ ಉಪವಾಸ ಸತ್ಯಾಗ್ರಹಕ್ಕೆ ಆರಂಭದಲ್ಲೆ ಕಲ್ಲು ಹಾಕಿ ತಲೆಕೆಟ್ಟವರಂತೆ ಮಾತನಾಡುತ್ತಿರುವ ಕಾಂಗ್ರೆಸ್ಸಿನ ಮಂದಿಗೂ ಮತ್ತು ಕೇಂದ್ರ ಗೃಹ ಸಚಿವರಿಗೂ ಮತ್ತು ಕನಿಷ್ಠ ದೆಹಲಿ ಪೋಲಿಸ್ ಪರ್ಮಿಷನ್ ಸಹ ಕೊಡಿಸಲಾಗದ ಅಸಾಹಯಕ ಆದರೆ At the same time ಪ್ರಾಮಾಣಿಕ ಪ್ರಧಾನಿಯ ಶೋಚನೀಯ ಸ್ಥಿತಿಗೆ ಕಂಬನಿ ಮಿಡಿಯುತ್ತ, ಉಪವಾಸ ಸತ್ಯಾಗ್ರಹದಂತ ಹೋರಾಟದ ಅಸ್ತ್ರ ಹಿಡಿದು ನಿಲ್ಲುವವರ ಮನಸ್ಥಿತಿಯ ಕುರಿತಾಗಿ ಮಹಮ್ಮದ್ ಅಲಿ ಜಿನ್ನಾ ಹೇಳಿರುವ ಮಾತುಗಳು ನೆನಪಿಸಿಕೊಳ್ಳುತಿದ್ದೇನೆ.

“ಯಾವ ಮನುಷ್ಯ ಉಪವಾಸ ಸತ್ಯಾಗ್ರಹಕ್ಕೆ ಇಳಿಯುತ್ತಾನೋ ಅಂತವನು ಅವನ ಮನಸಿನ ಮಾತಿನಂತೆ ನಡೆಯುತ್ತಾನೆ ಮತ್ತು ಅವನಿಗೆ ಅವನೇನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಅರಿವಿರುತ್ತದೆ.ಅವರನ್ನು ಹಾದಿ ತಪ್ಪಿದವರು ಅನ್ನುವ ಮೊದಲು ಅವರನ್ನು ಹಾದಿ ತಪ್ಪಿಸಿರುವುದು ಈ ವ್ಯವಸ್ತೆ ಅನ್ನುವುದನ್ನ ಮರೆಯಬಾರದು,ಮತ್ತು ಈ ವ್ಯವಸ್ತೆಯ ವಿರುದ್ಧ ಯುವಕರು ಸಿಡಿದಿದ್ದಾರೆ” . ಅವರು ಹಾಗೇ ಹೇಳಿದ್ದು ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಸಂಗಡಿಗರು ಬ್ರಿಟಿಶ್ ಕೈದಿಗಳಂತೆ ಭಾರತೀಯ ಕೈದಿಗಳಿಗೂ ಜೈಲಿನಲ್ಲಿ ಸಮಾನ ಹಕ್ಕು ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟವನ್ನ ಬಹಿರಂಗವಾಗಿ ಬೆಂಬಲಿಸಿ.ಆಗಲೂ ಸಹ ಕಾಂಗ್ರೆಸ್ಸ್ ಭಗತ್ ಸಿಂಗ್ ಅವರ ಉಪವಾಸದ ಹೋರಾಟದ ಬಗ್ಗೆ ಈಗ ಅಣ್ಣಾ ಅವರ ಹೋರಾಟದ ವಿರುದ್ಧ ಇರುವಂತೆಯೆ ಇತ್ತು. ಅದಿರಲಿ, ಈ ಹೋರಾಟ ನಡೆದಿದ್ದು ಬರೋಬ್ಬರಿ ೬೩ ದಿನಗಳ ಕಾಲ! ಕಡೆಗೂ ಭಗತ್ ಸಿಂಗ್ ಮತ್ತವರ ಗೆಳೆಯರ ಎದುರು ಬ್ರಿಟಿಷ್ ಸರ್ಕಾರ ಮಂಡಿಯೂರಲೇ ಬೇಕಾಯಿತು,ಆದರೆ ಅಷ್ಟರೊಳಗಾಗಲೇ ನಾವು ’ಜತೀನ್ ದಾ’ ಅವರನ್ನ ಕಳೆದುಕೊಂಡಾಗಿತ್ತು 😦

Read more »

5
ಜುಲೈ

ಅಷ್ಟಕ್ಕೂ,ಈ ಪ್ರಜಾಪ್ರಭುತ್ವ ಅಂದರೇನು!?

– ರಾಕೇಶ್ ಶೆಟ್ಟಿ

ಮನಮೋಹನರಿಗಿಂತ ಅಡಾಲ್ಫ್ ಹಿಟ್ಲರ್ ಮೇಲು…!

ದೇಶಕ್ಕಾದ ಅವಮಾನಕ್ಕೆ ಪ್ರತಿಯಾಗಿ ನಂಜು ಕಾರುತಿದ್ದ ಅಡಾಲ್ಫ್ ಹಿಟ್ಲರ್ ಅನ್ನುವ ರಕ್ತ ಪಿಪಾಸು ಸರ್ವಾಧಿಕಾರಿಯನ್ನ, ದೇಶ ಭ್ರಷ್ಟಚಾರದಲ್ಲಿ ಮುಳುಗೇಳುತಿದ್ದರೂ ಸಂಬಂಧವೇ ಇಲ್ಲದಂತಿರುವ,ಕಣ್ಣೆದುರೇ ಅನಾಚಾರ ನಡೆಯುತಿದ್ದರು ಕಣ್ಮುಚ್ಚಿ ಕುಳಿತಿರುವ ಪ್ರಾಮಾಣಿಕ ಪ್ರಧಾನಿ ಮನಮೋಹನರಿಗೆ ಹೋಲಿಸಿದ್ದು ಅತಿಯಾಯ್ತು ಅನ್ನಿಸುತ್ತೆ ಅಲ್ವಾ?

ಹಾಗಿದ್ರೆ, ಅಣ್ಣಾ ಸತ್ಯಾಗ್ರಹ ಮಾಡಿ ಮೊಂಡ ಸರ್ಕಾರವನ್ನ ಮಂಡಿಯೂರಿಸಿದಾಗ ’ಓ! ಸರ್ಕಾರ ಈ ತರ ಬಗ್ಗಿದರೆ, ಎಲ್ಲರೂ ಸತ್ಯಾಗ್ರಹ ಮಾಡಿ ಸರ್ಕಾರವನ್ನ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ!’ ಅಂತ ಆತಂಕ ಪಡುವವರನ್ನ ಕಂಡಾಗ; ’ಪ್ರಜಾಪ್ರಭುತ್ವವಲ್ಲದ ಭ್ರಷ್ಟಚಾರ ಮುಕ್ತ ಸರ್ಕಾರಕ್ಕಿಂತ, ಭ್ರಷ್ಟಚಾರವಿರುವ ಪ್ರಜಾಪ್ರಭುತ್ವ ಸರ್ಕಾರವೇ ಮೇಲು’ ಅನ್ನುವಂತ ಲೇಖನವನ್ನ ಓದಿದಾಗ; ಪ್ರಬಲ ಜನಲೋಕಪಾಲ ಮಸೂದೆಗಾಗಿ ನಡೆಯುತ್ತಿರುವ ಹೋರಾಟ ’ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ’ ಅಂತ ಕೆಲ ಮಂದಿ ಗುಲ್ಲೆಬ್ಬಿಸುತ್ತಿರುವುದನ್ನ ನೋಡಿದಾಗ ಇದೂ ಅತಿಯಾಯ್ತು ಅನ್ನಿಸುವುದಿಲ್ವಾ?

ಅಷ್ಟಕ್ಕೂ,ಜನರಿಂದ ಆರಿಸಿ ಬಂದ ಸರ್ಕಾರ ತನ್ನ ಪಾಲಿನ ಕೆಲಸವನ್ನ ತಾನು ಸರಿಯಾಗಿ ಮಾಡುತಿದ್ದರೆ ಅಣ್ಣಾ ಹಜ಼ಾರೆ ಯಾಕೆ ಬರಬೇಕಿತ್ತು? ಕಫ್ಫು ಹಣದ ಕಳ್ಳರ ಹೆಸರನ್ನ ಬಾಯ್ಬಿಡಿ ಅಂದಾಗ ’ಅವೆಲ್ಲ ಆಗಲಿಕ್ಕಿಲ್ಲ’ ಅಂತ ವಿತ್ತ ಸಚಿವ ಅಂದ ಮೇಲೆ ತಾನೇ ಜನರ ಪಿತ್ತ ನೆತ್ತಿಗೇರಿದ್ದು? ಸುಪ್ರೀಂ ಕೋರ್ಟ್ ತಪರಾಕಿ ಹಾಕಿದ ಮೇಲೆಯೆ ತೆರಿಗೆ ಕಳ್ಳ ಹಸನ್ ಅಲಿಯನ್ನ ಬಂಧಿಸಿದ್ದೇಕೆ? ಕಳೆದ ಚುನಾವಣೆಗಿಂತಲೂ ಮೊದಲೇ 2G ಹಗರಣ ಬಾಯ್ತೆರೆದು ನಂತರವೂ ಅದೇ ರಾಜನನ್ನ ಮತ್ತೆ ಕರೆದು ಮತ್ತದೇ ಖಾತೆಯನ್ನ ವಹಿಸಿದ ಸರ್ಕಾರಕ್ಕೆ ನೈತಿಕತೆಯಿದಯೇ? ಈಗ ಆತಂಕ ಪಡುತ್ತಿರುವ ಪ್ರಜಾಪ್ರಭುತ್ವದ ಕಾವಲು ಭಟರೆಲ್ಲ ಆಗ ಏನು ಮಾಡುತಿದ್ದರು?ಎಲ್ಲಿದ್ದರು?

Read more »