ಮತದಾರರ ಮೋದಿ Vs ಬೆಂಗಳೂರು ಮಾಫಿಯಾ
– ರಾಕೇಶ್ ಶೆಟ್ಟಿ
‘ನಾವು ಗೆದ್ದಿರುವ ಕ್ಷೇತ್ರಗಳನ್ನು ಕಳೆದುಕೊಳ್ಳಬಾರದು ಅಣ್ಣ. ಈ ಹಿಂದೆ ಯುಟಿ ಖಾದರ್ ಅಪ್ಪನ ಕಾಲದಲ್ಲೇ ಉಳ್ಳಾಲದಲ್ಲಿ ಬಿಜೆಪಿಯಿಂದ ಜಯರಾಮ ಶೆಟ್ಟರು ಗೆದ್ದಿದ್ದರು. ನಂತರದ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕೋಪಿಸಿಕೊಂಡು ದಳಕ್ಕೆ ಹೋಗಿ ಸ್ಪರ್ಧಿಸಿ ವೋಟ್ ಡಿವೈಡ್ ಮಾಡಿದರು.ಹಾಗೆ ಕಾಂಗ್ರೆಸ್ಸಿನ ಯು.ಟಿ ಫರೀದ್ ಗೆದ್ದರು. ಉಳ್ಳಾಲ ನಮ್ಮ ಕೈ ಬಿಟ್ಟು ಹೋಯಿತು. ಅಲ್ಲಿಂದ ಇಲ್ಲಿನವರೆಗೆ ನಮಗೆ ಆ ಕ್ಷೇತ್ರವನ್ನು ಮತ್ತೆ ಗೆಲ್ಲಲಿಕ್ಕಾಗಿಲ್ಲ ನೋಡಿ’ ನನ್ನ ತಮ್ಮನಂತಹ ಮಿತ್ರ ರಾಜೇಶ್ ನರಿಂಗಾನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಳಿದ ಮಾತು ನನಗೀಗ ನೆನಪಾಯ್ತು. ನೆನಪು ಮಾಡಿಸಲು ಕಾರಣವಾಗಿದ್ದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಒಳಬೇಗುದಿ.
ಬೆಂಗಳೂರು ದಕ್ಷಿಣದ ಬಗ್ಗೆ ಮಾತನಾಡುವ ಮೊದಲು, ರಾಜರಾಜೇಶ್ವರಿ ನಗರ,ಜಯನಗರದ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಬೇಕು.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದ ಅತಿ ಪ್ರಮುಖ ನಾಯಕರು ಹಠಾತ್ ನಿಧನರಾಗುವ ಮೂಲಕ ಪಕ್ಷಕ್ಕೆ ನಷ್ಟವಾಗಿದೆ. ಆದರೆ ಈ ರೀತಿಯ ಹಠಾತ್ ಆಘಾತಗಳು ಈ ಪಕ್ಷದ ಆರಂಭದಿಂದಲೇ ಶುರುವಾಗಿದೆ. ಪಕ್ಷದ ಆಧಾರ ಸ್ತಂಭದಂತಿದ್ದ ಶ್ಯಾಂ ಪ್ರಸಾದ್ ಮುಖರ್ಜಿ,ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಕೊಲೆಗಳು ಮೊದಲನೇ ಆಘಾತಗಳು. ಅದರಿಂದ ಚೇತರಿಸಿಕೊಂಡೇ ಪಕ್ಷ ಇಲ್ಲಿವರೆಗೂ ಬಂದು ನಿಂತಿದೆ. ಪ್ರಮೋದ್ ಮಹಾಜನ್,ಗೋಪಿನಾಥ್ ಮುಂಡೆ,ಪರಿಕ್ಕರ್, ಅನಂತಕುಮಾರ್,ವಿಜಯಕುಮಾರ್ ಇವೆಲ್ಲ ಇತ್ತೀಚಿನ ಆಘಾತಗಳು.
ಅನಂತಕುಮಾರ್ ಹೇಳಿದ್ದರಲ್ಲೇನು ತಪ್ಪಿದೆ?
– ಜೆಬಿಆರ್ ರಂಗಸ್ವಾಮಿ
ಅನಂತ ಕುಮಾರ್ ಹೆಗಡೆಯವರ ಮಾತುಗಳನ್ನು ಕೇಳಿದೆ. ಯಾವ context ನಲ್ಲಿ ಯಾಕಾಗಿ ಆ ಮಾತುಗಳನ್ನಾಡಿದ್ದಾರೆ ? ಅದನ್ನೂ ಆಲಿಸಿದೆ. ಅವರು ಉದ್ದೇಶಿಸಿ ಹೇಳಿದ ಮಾತುಗಳಲ್ಲಿ ಅಪರಾಧವೇನಿದೆ ? ಅನ್ನಿಸಿತು. ಮತ್ತೊಮ್ಮೆ ಎಲ್ಲ ಛಾನಲ್ಗಳಲ್ಲಿ ಅವರು ಆಡಿದ ಮಾತುಗಳನ್ನು ಗ್ರಹಿಸಲು ಯತ್ನಿಸಿದೆ. ಕಾವ್ಯಾನಂದರ ( ಕುವೆಂಪು ಅಲ್ಲ ) ಮೊದಲು ನೀನು ಮಾನವನಾಗು ಎಂಬುದನ್ನು ಉಲ್ಲೇಖಿಸಿ ಪ್ರಾಸಂಗಿಕವಾಗಿ ಮಾತನಾಡಿದ್ದಾರೆಯೇ ಹೊರತು, ಆ ಮಾತುಗಳನ್ನು ಅವಹೇಳನ ಮಾಡಿದ್ದಾರೆ ಅನ್ನಿಸಲಿಲ್ಲ. ಕಾವ್ಯಾನಂದರನ್ನು ಟೀಕಿಸಲಿಲ್ಲ. ಬುದ್ದಿಜೀವಿಗಳು ಎಂದೊಡನೆ ‘ಪುಸ್ತಕ ಬರೆವ ಎಲ್ಲರೂ’ ಅಂದುಕೊಳ್ಳಬೇಕಿಲ್ಲ. ಆ ಹೆಸರಿನಲ್ಲಿ ವ್ಯಾಪಾರ ಮಾಡುವ ಗೋಸುಂಬೆಗಳು, ದುರ್ಲಾಭ ಪಡೆದುಕೊಳ್ಳುವ ವಂಚಕರು; ಫೋನು, ಫ್ಯಾನು, ಗೂಟದ ಕಾರಿನ ಸವಲತ್ತಿಗಾಗಿ ಹಾತೊರೆವ ಅಪ್ರಾಮಾಣಿಕರ ಗುಂಪನ್ನು ಉದ್ದೇಶಿಸಿ ಹೇಳಿದ ಮಾತುಗಳು ಎಂದು ಯಾರಿಗಾದರೂ ಗೊತ್ತಾಗುತ್ತದೆ. ಬುದ್ದಿಜೀವಿಗಳ ಸೋಗಿನಲ್ಲಿ ಪರಾನ್ನಪುಷ್ಟರಾಗಿರುವ ಗಂಜಿಗಿರಾಕಿಗಳನ್ನು ಎಲ್ಲ ಕಡೆಯೂ ನಾವು ದಿನವೂ ನೋಡುತ್ತಿಲ್ಲವೇ ? ಮತ್ತಷ್ಟು ಓದು
ಇದು ವಿಮರ್ಶೆಯಲ್ಲ ನನ್ನನಿಸಿಕೆ…
-ಕೆ.ಗುರುಪ್ರಸಾದ್
ಇತ್ತೀಚೆಗೆ ಒಂದು ವಿಷಯದ ಬಗ್ಗೆ ನಾ ಮೆಚ್ಚುವ ಇಬ್ಬರು ಲೇಖಕರ ಆರ್ಟಿಕಲ್ ಓದಿದೆ. ಒಂದು ಪ್ರತಾಪ್ ಸಿಂಹ ಅವರ ” ಮೇನಕೆ ಬಂದು ಕುಣಿಯುವವರೆಗೆ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ, ಬಿಜೆಪಿ ಕಥೆಯೂ ಹಾಗೇಯೇ ಆಯಿತು ” ಇನ್ನೊಂದು ಚಕ್ರವರ್ತಿ ಸೂಲಿಬೆಲೆಯವರ ” ಎರಡು ರಾಷ್ಟ್ರೀಯ ಪಕ್ಷ ಎಷ್ಟೊಂದು ಅಂತರ “. ಮೊದಲೇ ಹೇಳಿದಂತೆ ಎರಡೂ ಕರ್ನಾಟಕದಲ್ಲಿನ ಬಿಜೆಪಿಯ ಸೋಲಿನ ಕುರಿತಾಗೇ ಇರೋದು. ಪ್ರತಾಪ್ ಸಿಂಹ ಅವರು ಯಾವ ರೀತಿ ಸೋಲನುಭವಿಸಿತು ಅನ್ನೋದನ್ನ ವಿಶ್ಲೇಷಣೆ ಮಾಡಿದ್ದರೆ, ಸೂಲಿಬೆಲೆಯವರು ಎರಡು ಪಕ್ಷಗಳ ನಡುವಿನ ವ್ಯತ್ಯಾಸವನ್ನ ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಈ ಎರಡು ಲೇಖನಗಳನ್ನ ಓದಿದ ನಂತರ ನನಗೆ ನನ್ನ ಅನಿಸಿಕೆಯನ್ನು ಹೇಳೋ ಮನಸಾಯಿತು ಹಾಗಾಗಿ ಈ ಸಣ್ಣ ಲೇಖನ…ಮೊದಲೇ ಶೀರ್ಷಿಕೆಯ ರೂಪದಲ್ಲಿ ಹೇಳಿದ್ದೇನೆ, ಇದು ವಿಮರ್ಶೆಯಲ್ಲ ಯಾಕೆಂದರೆ ಇಬ್ಬರೂ ತಮ್ಮ ಬರಹಗಳಿಂದ ಜನರ ಮಂತ್ರಮುಗ್ಧರನ್ನಾಗಿಸಿದವರು. ಅವರ ಕುರಿತಾಗಿ ವಿಮರ್ಶೆ ಮಾಡುವ ಯೋಗ್ಯತೆ ಎಳ್ಳಷ್ಟೂ ನನ್ನಲ್ಲಿಲ್ಲ ಅನ್ನೋದು ನನ್ನ ಧೃಡವಾದ ನಂಬಿಕೆ. ಹಾಗಾಗಿ ಇಲ್ಲಿರೋದು ಅದೇ ವಿಷಯದ ಕುರಿತಾದ ನನ್ನ ಅನಿಸಿಕೆ ಅಷ್ಟೇ..
ಮೊದಲಿಗೆ ಪ್ರತಾಪ್ ಸಿಂಹರ ಲೇಖನವನ್ನ ನೋಡೋದಾದ್ರೆ… ಬಿಜೆಪಿಯ ಸೋಲಿನ ಕುರಿತಾದ ಪ್ರತಾಪ್ ಅವರ ಅನಾಲಿಸಿಸ್ ಸೂಪರ್… ಎರಡು ಮಾತಿಲ್ಲದೆ ಒಪ್ಪಿಕೊಳ್ಳಬಹುದಾದ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅಧಿಕಾರದ ಮೆಟ್ಟಲೇರುವ ಹೊತ್ತಲ್ಲಿ ಆದ ಸಣ್ಣ ಸಣ್ಣ ತಪ್ಪುಗಳು ಮುಂದೆ ಯಾವ ರೀತಿ ಯುಡಿಯೂರಪ್ಪ ಅವರನ್ನ ಕಾಡತೊಡಗಿತು, ಯಾವ ರೀತಿ ಹೈಕಮಾಂಡ್ ನ ನಡೆಗಳು ಯಡಿಯೂರಪ್ಪ ಅವರನ್ನ ತಪ್ಪು ದಾರಿ ಹಿಡಿಯುವಂತೆ ಪ್ರೇರೇಪಿಸಿತು ಅನ್ನೋದರ ಸ್ಪಷ್ಟ ಚಿತ್ರಣ ಕೊಡುತ್ತಾ ಹೋಗುತ್ತಾರೆ. ಆಪರೇಶನ್ ಕಮಲ, ರೆಡ್ಡಿಗಳ ದರ್ಪ, ಸುಷ್ಮಾರವರ ಮಾತುಗಳು, ಅನಂತ್ ಕುಮಾರರ ಒಳಸಂಚು ಹೀಗೆ…ಏಕಾಂಗಿತನವನ್ನ ಅನುಭವಿಸಿದ ಯಡಿಯೂರಪ್ಪನವರು ಎಡವಿದರು ಅಂದರು. ಇದೆಲ್ಲವನ್ನೂ ಒಪ್ಪೋಣ ಆದರೆ ಸ್ವಲ್ಪ ಹಿಂದಿನದನ್ನು ಮೆಲುಕು ಹಾಕಿದರೆ ಇದೇ ಪ್ರತಾಪ್ ಸಿಂಹ ಅವರು ಯಡಿಯೂರಪ್ಪ ಅವರನ್ನ ತಮ್ಮ ಎರಡು ಮೂರು ಲೇಖನದಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು…( ೨೦೦೮ ರ ಲೇಖನಗಳು.. ಅವರ ಬ್ಲಾಗ್ ನಲ್ಲಿ ಈಗಲೂ ಲಭ್ಯವಿದೆ) ವರ್ಗಾವಣೆಯ ಕುರಿತಾಗಿ, ನಿವೃತ್ತಿ ವಯಸ್ಸನ್ನು ಏರಿಸಿದ್ದುದರ ಕುರಿತಾಗಿ ಹೀಗೆ ಹಲವು ವಿಷಯಗಳಲ್ಲಿ ನೇರವಾಗಿ ದೋಷಾರೋಪಣೆ ಮಾಡಿದ್ದ ಪ್ರತಾಪರಿಗೆ ಈಗ ಯುಡಿಯೂರಪ್ಪನವರ ತಪ್ಪುಗಳು ಕೂಡ ಬಿಜೆಪಿಯ ಸೋಲಿಗೆ ಒಂದು ಕಾರಣ ಅಂತನ್ನಿಸದೇ ಇರೋದು ನನಗೇಕೋ ಸರಿ ಅನ್ನಿಸಲಿಲ್ಲ. ಯಡಿಯೂರಪ್ಪನವರ ಪುತ್ರ ಪ್ರೇಮದ ಬಗ್ಗೆ ಟೀಕಿಸಿದ್ದ ಪ್ರತಾಪರು ಯಾಕೋ ಇಲ್ಲಿ ಅದನ್ನ ಉಲ್ಲೇಖಿಸಲಿಲ್ಲ. ಬಿಜೆಪಿಯಿಂದ ಹೊರ ಬಂದ ಮೇಲೆ ಯಡಿಯೂರಪ್ಪನವರ ನಡೆಯ ಬಗೆಗೆ ಯಾವುದೇ ರೀತಿಯ ಮಾತುಗಳನ್ನಾಡದೇ “ಬಿಜೆಪಿ” ಯಡಿಯೂರಪ್ಪನವರ ಬಳಿ ಹೋಗಿ ಅವರನ್ನ ಕರೆತರುವ ಪ್ರಯತ್ನ ಮಾಡಬೇಕು ಅಂದರು.