ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅನ್ನ ಭಾಗ್ಯ’

14
ಜುಲೈ

ಬಡವರಿರಬೇಕು, ಮಾತ್ರವಲ್ಲ, ಅವರು ಹೆಚ್ಚಬೇಕು!

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Anna Bhaagyaಮೊದಲು ಒಂದು ಸಂಗತಿಯನ್ನು ಸ್ಪಷ್ಟಮಾಡಿಕೊಳ್ಳಬೇಕು: ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರ ಕಲ್ಯಾಣಕ್ಕಾಗಿವೆಯೇ ವಿನಾ ಲಾಭ ಮಾಡುವುದಕ್ಕಲ್ಲ. ಆದರೆ ಸಮಾಜಕ್ಕೆ ಲಾಭವಾಗುವಂತೆ ಮಾಡುವುದು ಅವುಗಳ ಕರ್ತವ್ಯ. ಅಂಥ ಲಾಭ ದೀರ್ಘಕಾಲಿಕವಾಗುವಂತೆ ಅದು ನೋಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದಷ್ಟು ವರ್ಷ ಅಧಿಕಾರದಲ್ಲಿ ಇರುವ ಆಸೆಯಿಂದ ಚುನಾಯಿತ ಸರ್ಕಾರಗಳು ಜನರನ್ನು ಓಲೈಸುವ ಅಗ್ಗದ ಜನಪ್ರಿಯ ಯೋಜನೆಗಳನ್ನು ಕೈಗೊಳ್ಳುವುದರಲ್ಲೇ ಆಸಕ್ತಿ ತೋರಿಸುತ್ತವೆ. ಇಂಥ ಯೋಜನೆಗಳ ಉದ್ದೇಶವನ್ನು ಯಾರೂ ಪ್ರಶ್ನಿಸುವಂತಿರುವುದಿಲ್ಲ, ಆದರೆ ಅವುಗಳ ಜಾರಿ, ಅವು ಉಂಟುಮಾಡುವ ದೀರ್ಘಕಾಲಿಕ ಪರಿಣಾಮ ಮೊದಲಾದ ಸಂಗತಿಗಳು ಚಿಂತನಾರ್ಹ.

ಹಿಂದೆ ವಯಸ್ಕ ಶಿಕ್ಷಣ ಎಂಬ ಸಾಕ್ಷರ ಯೋಜನೆಯೊಂದಿತ್ತು. ಎಲ್ಲರನ್ನೂ ಸಾಕ್ಷರರನ್ನಾಗಿಸಲು ಸಾವಿರಾರು ಕೋಟಿ ರೂ.ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುರಿದವು. ಈಗಾಗಲೇ ಮಧ್ಯವಯಸ್ಸು ದಾಟಿದ, ಆದರೆ ಸಾಕ್ಷರರಲ್ಲದ ಜನಸಂಖ್ಯೆಯನ್ನು ಗುರುತಿಸಿ, ಸರಾಸರಿ ಆಯುರ್ಮಾನವನ್ನು ಎಣಿಸಿ ಅದರಂತೆ ಯೋಜನೆ ರೂಪಿಸಲಾಯಿತು. ಹೊಸದಾಗಿ ಜನಿಸುವವರಿಗೆ ಕಡ್ಡಾಯ ಶಿಕ್ಷಣದ ಮೂಲಕ ಸಾಕ್ಷರರನ್ನಾಗಿಸುವ ಯೋಜನೆ ಇದ್ದುದರಿಂದ ಅನಕ್ಷರಸ್ಥರು ಹುಟ್ಟುವ ಸಾಧ್ಯತೆ ಇರಲಿಲ್ಲ ಹಾಗೂ ದೇಶದ ಜನರ ಸರಾಸರಿ ಆಯಸ್ಸು 56-60 ಇದ್ದುದರಿಂದ ಈ ಯೋಜನೆಗೆ ನಿಗದಿತ ಅವಧಿ ಹಾಕಿಕೊಳ್ಳಲಾಯಿತು. 10ನೇ ಯೋಜನೆ ಮುಕ್ತಾಯದ ವೇಳೆಗೆ ನಿಗದಿತ ಗುರಿ ತಲಪುವಂತೆ ಕಾಲಮಿತಿ ಹಾಕಿಕೊಂಡ ಈ ಯೋಜನೆ ಈಗ ತನ್ನ ಸ್ವರೂಪ ಬದಲಿಸಿಕೊಂಡು ಔಪಚಾರಿಕ ಶಿಕ್ಷಣ ದೊರಕದವರಿಗೆ ಕೌಶಲ್ಯ ಕಲಿಸತೊಡಗಿ, ಸಾಕ್ಷರರಿಗೆ ಸ್ವಾವಲಂಬನೆ ಮಾರ್ಗ ತೋರಿಸುತ್ತಿದೆ. ಇದು ನಿಜಕ್ಕೂ ಸ್ತುತ್ಯರ್ಹವಾದುದು. ಹೀಗೆ ಸದುದ್ದೇಶದ ಯೋಜನೆಯೊಂದು ಬೆಳವಣಿಗೆ ಕಾಣಬೇಕು; ಸಮಾಜವನ್ನು ಸ್ವಾಸ್ಥ್ಯದತ್ತ ಕೊಂಡೊಯ್ಯಬೇಕು. ಸರ್ಕಾರಗಳ ಬಹಳಷ್ಟು ಯೋಜನೆಗಳಲ್ಲಿ ಇಂಥ ಬೆಳವಣಿಗೆಯೇ ಇರುವುದಿಲ್ಲ.
Read more »

29
ನವೆಂ

ತೀರಾ ತುಘಲಕ್ ದರ್ಬಾರ್ ಬೇಡ್ರೀ ಸಿಧ್ಧರಾಮಣ್ಣ…

 – ಕೆ.ಎಸ್ ರಾಘವೇಂದ್ರ ನಾವಡ

Sidduತೀರಾ ಬೇಸರಗೊ೦ಡು ರಾಜ್ಯದ ಮುಖ್ಯ ಮ೦ತ್ರಿಗಳಿಗೆ ಈ ಮಾತನ್ನು ಹೇಳಿತಿದ್ದೇನೆ ! ಸಮಾಜವಾದಿ ಹಿನ್ನೆಲೆ.. ಹೋರಾಟದ ಹಿನ್ನೆಲೆ..  ಎಲ್ಲದ್ದಕ್ಕಿ೦ತಲೂ ಕರ್ನಾಟಕದ ಗ್ರಾಮೀಣ ಸೊಗಡಿನಿ೦ದ ಮೇಲೆದ್ದು ಬ೦ದವರು ಸಿಧ್ಧರಾಮಯ್ಯ. ಆದರೆ ಹಿ೦ದಿನ ಸಮಾಜವಾದಿ ಹಿನ್ನೆಲೆಗಳಿ೦ದ ಬ೦ದ ಮುಖ್ಯಮ೦ತ್ರಿಗಳಿಗೂ (ಮಾನ್ಯ ಹೆಗಡೇಜಿ, ಬ೦ಗಾರಪ್ಪನವರು, ಜೆ.ಹೆಚ್ ಪಟೇಲರು)ನಮ್ಮ ಸಿಧ್ಧರಾಮಯ್ಯನವರಿಗೂ ಅಜಗಜಾ೦ತರ ವ್ಯತ್ಯಾಸ…ಇವರು ಇದೇ ಥರ ಮು೦ದುವರಿದಲ್ಲಿ ಮು೦ಬರುವ ಲೋಕಸಭಾ ಚುನಾವಣೆಯಲ್ಲಿ ಕಾ೦ಗ್ರೆಸ್ ಕರ್ನಾಟಕದಲ್ಲಿ ನೆಲಕಚ್ಚುವುದ೦ತೂ ಖಚಿತ!

ಪಾಪ.. ಏನೂ ಮಾಡೋದಕ್ಕಾಗೋದಿಲ್ಲ.. ನಮಗೆ ಸಿಧ್ಧರಾಮಯ್ಯನವರ ಅಸಹಾಯಕತೆಯ ಅರಿವು ಇದೆ.ಆದರೆ ಕೈಯಲ್ಲಿ ಆಗದಿದ್ದವರ ಪರಿಸ್ಥಿತಿ ಏನೂ ಸಿಧ್ಧರಾಮಯ್ಯನವರದಲ್ಲ! ಹಾಗ೦ತ ತೀರಾ ಸಾರಾಸಗಟಾಗಿ ತಳ್ಳಿ ಹಾಕುವ೦ತಹ ವ್ಯಕ್ತಿತ್ವವೂ ಸಿಧ್ಧರಾಮಯ್ಯನವರದಲ್ಲ.ಆದರೆ ಒ೦ದ೦ತೂ ಖಚಿತ! ಏನೋ ಆಗಿದೆ… ಒ೦ದರ ಮೇಲೊ೦ದು ಎಡವಟ್ಟುಗಳನ್ನೇ ಸೃಷ್ಟಿಸಿಕೊಳ್ಳುತ್ತಿರುವ ಸಿಧ್ಧರಾಮಯ್ಯನವರು ಕೊನೇ ಪಕ್ಷ ತಮ್ಮ ನಿರ್ಧಾರಗಳಿಗೆ ಜೋತು ಬೀಳುವ೦ತಹ ಯಡಿಯೂರಪ್ಪನವರ ಛಾತಿಯನ್ನೂ ತೋರಿಸುತ್ತಿಲ್ಲ!

ಆರ೦ಭದಲ್ಲೇನೋ ಶೂರತನ ಮೆರೆದ ಅಶ್ವವೀರ.. ಕುದುರೆಗೆ ಸುಸ್ತಾದ೦ತೆ ತಾನೂ ನಡೆಯುತ್ತ ಸಾಗಿದ.. ಎನ್ನುವ ಹಳೇ ಮಾತೀಗ ಸಿಧ್ಧರಾಮಯ್ಯನವರ ವಿಚಾರದಲ್ಲಿ ಖಚಿತವಾಗುತ್ತಿದೆ! ಚುನಾವಣಾ ಪ್ರಣಾಳಿಕೆಯ ಅರ್ಧದಷ್ಟು ಅ೦ಶಗಳನ್ನು ಅನುಷ್ಠಾನಕ್ಕೆ ತರುವುದು ಹೆಚ್ಚುಗಾರಿಕೆಯೇ ಆದರೂ ಕೊಟ್ಟ ಮಾತುಗಳಾದರೂ ಎ೦ಥಾದ್ದಾಗಿದ್ದವು ಎನ್ನುವುದು ಬಹಳ ಮುಖ್ಯ!

Read more »