ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅಹಂ’

26
ಸೆಪ್ಟೆಂ

ನಾನು – ನನ್ನದು

-ಗೀತಾ ಹೆಗ್ಡೆ

ego-as-baggageಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ. ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆಗೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೋ ಅಲ್ಲಿಯವರೆಗೆ ಅದರ ಹುಳುಕು ನಮಗೆ ಗೊತ್ತಾಗೋದೆ ಇಲ್ಲ. ಒಂದಾ ಶಾಂತವಾಗಿ ಕುಳಿತು ಯಾವ ತಾರತಮ್ಯವಿಲ್ಲದೆ ವಿಮರ್ಷಿಸುವ ಬುದ್ಧಿ ಹೊಂದಿರಬೇಕು. ಇಲ್ಲಾ ಬೇರೆಯವರು ಬೊಟ್ಟು ಮಾಡಿ ತೋರಿಸಿದಾಗ ಇದು ಸರಿಯಿಲ್ಲ ಅಥವಾ ನಿನ್ನಲ್ಲಿ ದೋಷವಿದೆ ಎಂದೆನ್ನುವ ಮಾತು ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳುವ ಒಳ್ಳೆಯ ಮನಸ್ಸಿರಬೇಕು. ನಮ್ಮನ್ನು ಉತ್ತುಂಗದತ್ತ ಏರಲು ಹಾಕಿ ಕೊಟ್ಟ ಮೆಟ್ಟಿಲು ಎಂದು ಭಾವಿಸಬೇಕು. ಇನ್ನೂ ಹೆಚ್ಚಿನ ಉತ್ಸಾಹದಲ್ಲಿ ಗುರಿ ಮುಟ್ಟುವತ್ತ ನಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಇವ್ಯಾವುದೂ ಇಲ್ಲದ ಜನರು ” ನಾನು, ಇದು ನನ್ನದು, ಯಾವೋನಾದರೂ ಬೊಟ್ಟು ಮಾಡಿ ತೋರಿಸಲಿ ನೋಡ್ತೀನಿ” ಅನ್ನುವ ಮೂರ್ಖತನದ ಮಾತು ಹೇಳುತ್ತಿರುತ್ತಾರೆ. ಆದರೆ ಈ ನಡೆ ಒಳ್ಳೆಯ ನಡೆಯಲ್ಲ; ಇದು ಖಂಡಿತಾ ನಮ್ಮನ್ನು ಅದಃಪತನಕ್ಕೆ ಕರೆದೊಯ್ಯುತ್ತದೆ. ಕೊನೆಯಲ್ಲಿ ಪಶ್ಚಾತ್ತಾಪವೇ ಕಟ್ಟಿಟ್ಟ ಬುತ್ತಿ. Read more »

Advertisements