ವಿಷಯದ ವಿವರಗಳಿಗೆ ದಾಟಿರಿ

Posts tagged ‘ಆದಿ ಶಂಕರಾಚಾರ‍್ಯ’

6
ಜೂನ್

ಶಂಕರಾಚಾರ್ಯರ ಕುರಿತು ವಿವೇಕಾನಂದರ ಧೋರಣೆಗಳು.

-ಚೈತನ್ಯ ಮಜಲುಕೋಡಿ

shankaracharya_new

ಶಂಕರರ ಕುರಿತು ಹಲವು ಬುದ್ಧಿಜೀವಿಗಳು ಅನುಸರಿಸಿರುವ ಏಕಮುಖ ಮತ್ತು ಛಿದ್ರಾನ್ವೇಷಣ ಮನಸ್ಥಿತಿಯ ಧೋರಣೆಯಲ್ಲಿ ಶಂಕರರೆಂದರೆ ವಿವೇಕಾನಂದರಿಗೆ ಅಲರ್ಜಿ ಎಂಬಂತೆ ಬಿಂಬಿಸಿಬಿಟ್ಟಿದ್ದಾರೆ. ಅಂತಹವರಿಂದಾಗಿ ನಮ್ಮಲ್ಲಿ ಯಾರು ಏನು ಬರೆದಿದ್ದಾರೆಂದು ಪೂರ್ತಿಯಾಗಿ ಅವಲೋಕಿಸುವ ಜಿಜ್ಞಾಸೆಯ ಆಸಕ್ತಿ ಮತ್ತೂ ಕಡಿಮೆಯಾಗಿಬಿಟ್ಟಿದೆ. ಪ್ರಸ್ತುತ ನಮಗೆ ವಿವೇಕಾನಂದರು ತಮ್ಮ ವಿಚಾರಗಳಲ್ಲಿ ಶಂಕರರ ಬಗ್ಗೆ ಯಾವ ರೀತಿಯ ಮನೋಭಾವ ಹೊಂದಿದ್ದರೆಂದು ಸಮಗ್ರವಾಗಿ ಅರಿಯಬೇಕಾದ್ದು ಮುಖ್ಯವಾದ ಕೆಲಸ. ತಮ್ಮ ಪ್ರಖರ ವಿದ್ವತ್ತಿನ ಸ್ವರೂಪದಿಂದ ಇಂದಿಗೂ ಈ ಆಚಾರ್ಯದ್ವಯರು ದೇದೀಪ್ಯಮಾನರಾಗಿ ಬೆಳಗುತ್ತಿದ್ದಾರೆ. ಸಾವಿರವಿವೇಕಾನಂದರು ಸೇರಿದರೆ ಒಬ್ಬರು ಶಂಕರಾಚಾರ್ಯರಾಗಬಹುದು ಎಂದು ಅವರ ಪಟ್ಟಶಿಷ್ಯೆ ಸಿಸ್ಟರ್ ನಿವೇದಿತಾ ಅವರೇ ಒಂದೆಡೆ ಹೇಳಿದ್ದಾರೆ. ಹಾಗಾಗಿ ಸ್ವಾಮಿ ವಿವೇಕಾನಂದರು ಯಾವ ಸಂದರ್ಭಗಳಲ್ಲಿ ಏನೆಲ್ಲ ನುಡಿದಿದ್ದಾರೆ/ಬರೆದಿದ್ದಾರೆ ಎಂಬ ಹಿನ್ನೆಲೆ, ಶಂಕರರ ಬಗ್ಗೆ ಅವರಿಗೆ ದೊರಕಿರಬಹುದಾದ ಅಂಶಗಳು, ಅವರ ವೈಚಾರಿಕ ತುಲನೆ ಮತ್ತು ಧೋರಣೆ, ಶಂಕರಾಚಾರ್ಯರ ಬರವಣಿಗೆ ಮತ್ತು ಜೀವನ ಇವುಗಳ ಬಗ್ಗೆ ವಿವೇಕಾನಂದರ ವಿಚಾರಗಳೇನಿದ್ದವು ಎಂಬುದನ್ನ ನೋಡೋಣ. Read more »

17
ಜೂನ್

ಬೌದ್ದರನ್ನು ಓಡಿಸಲು ಶಂಕರರೇನು ಅರಸರಾಗಿದ್ದರೇ?

– ಸಂತೋಶ್ ತಮ್ಮಯ್ಯ

Shankaraacharya1ಕೆಲವರ ಮನಸ್ಸೇ ವಿಚಿತ್ರವಾದುದು. ಅವರದ್ದು ವಿನಾಕಾರಣ ನಿರಾಕರಣವಾದ. ಇದ್ದುದನ್ನು ಇಲ್ಲವೆನ್ನುವುದು, ಇಲ್ಲದ್ದನ್ನು  ಇದೆ ಎನ್ನುವುದು , ವಿನಾಕಾರಣ ಖಂಡಿಸುವುದು, ವಿಪರೀತವನ್ನು ಮಂಡಿಸುವುದು, ವಿಚಿತ್ರ ಸ್ವಭಾವಗಳು. ಉದಾಹರಣೆಗೆ ಎಲ್ಲರಿಗೂ ಇಷ್ಟವಾಗುವ ಸಿನೆಮಾವನ್ನು ಕೆಲವರು ವಿನಾಕಾರಣ ಬಯ್ಯುತ್ತಾರಲ್ಲಾ ಅಂಥವರು.  ಆ ಮನಸ್ಸನ್ನು  ಸಿನಿಕವೆನ್ನಿ, ಪೂರ್ವಗ್ರಹವೆನ್ನಿ, ಅಬದ್ಧವೆನ್ನಿ, ಅಸ್ವಸ್ಥವೆನ್ನಿ ಎಲ್ಲವೂ ಸರಿಯೇ. ನಮ್ಮ ಸಾಹಿತ್ಯಲೋಕದಲ್ಲಿ ಅಂಥವರನೇಕರು ಸಿಗುತ್ತಾರೆ. ಅವರೆಲ್ಲರೂ   ಸಂದರ್ಭ ಸಿಕ್ಕಾಗಲೆಲ್ಲಾ ಹೀಗೆ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ. ಭೈರಪ್ಪನವರು ಬರೆದಾಗ, ನ್ಯಾಯನೀತಿಯನ್ನು ಇನ್ಯಾರೋ ಎತ್ತಿ ಹಿಡಿದಾಗ, ಚಿದಾನಂದ ಮೂರ್ತಿಗಳು ಏನನ್ನೋ ಶೋಧಿಸಿದಾಗಲೆಲ್ಲಾ   ಅದಕ್ಕೆ ಸಂಪೂರ್ಣ ನೇತ್ಯಾತ್ಮಕವಾದುದನ್ನು ಹಿಡಿದು ಹೇಳಿಕೆಗಳನ್ನು ನೀಡಲಾರಂಭಿಸುತ್ತಾರೆ. ಅದಕ್ಕೆ ಕೆಲವು ಪತ್ರಕರ್ತರು ಕನ್ನಡದ ಮನಸ್ಸು ಎಂಬ ಹೆಸರು ಕೊಟ್ಟುಬಿಡುತ್ತಾರೆ. ಇಂಥ ಸತ್ಯದ ಆವರಣವನ್ನೇ ಕನ್ನಡದ ಮನಸ್ಸು ಎನ್ನುವುದಾದರೆ ಅದು ಕನ್ನಡಕ್ಕೆ ಮುಸುಕಿರುವ ಆವರಣ ಎನ್ನದೆ  ವಿಧಿ ಇಲ್ಲ. ಇಂಥವರ ಗುಂಪಿಗೆ ಈಗ ಮತ್ತೊಬ್ಬರು ಸೇರಿದ್ದಾರೆ.

ಯಾರೋ ಕೇಶವ ಮೂರ್ತಿಯಂತೆ. ಇದುವರೆಗೆ ಅವರ ಮುಖ ನೋಡಿದವರಿಲ್ಲ. ಸಾಹಿತ್ಯ ಓದಿದವರಿಲಿಲ್ಲ. ಈ ಮಧ್ಯೆ ಕಾಂಗ್ರೆಸ್ ಆಡಳಿತಕ್ಕೆ ಬಂತು. ಗುರುತಿಸಿಕೊಳ್ಳುವುದು ಲಾಭದ ದೃಷ್ಟಿಯಿಂದ ಉತ್ತಮ ಎನಿಸಿತ್ತೋ ಏನೋ ಹೇಳಿಕೆಯೊಂದನ್ನು ಕೊಟ್ಟರು.”ನರೇಂದ್ರ  ಮೋದಿಗಿಂತ ಶಂಕರಾಚಾರ್ಯರು ಹೆಚ್ಚು ಕ್ರೂರಿ” ಎಂದರು. ನರೇಂದ್ರಮೋದಿಯವರನ್ನು ನವನವೀನವಾಗಿ ಟೀಕಿಸುವ ಜನರಿಗೆ ಒಮ್ಮೆ ಈ ಮಾದರಿಯ ಟೀಕೆ ಸ್ವಜನಶೀಲವಾಗಿ ಕಂಡಿರಬೇಕು. ಏಕೆಂದರೆ ಅಲ್ಲಿ ಮೋದಿಯೂ ಇದ್ದರೂ, ಶಂಕರಾಚಾರ್ಯರೂ ಇದ್ದರು. ಇತಿಹಾಸವನ್ನೂ ಬಯ್ದಂತಾಯಿತು. ವರ್ತಮಾನವನ್ನೂ ತೆಗಳಿದಂತಾಯಿತು. ವೋಟ್ ಬ್ಯಾಂಕ್‌ ರಾಜಕಾರಣಕ್ಕಂತೂ ಇಂಥ ಹೇಳಿಕೆಗಳ ಆವಶ್ಯಕತೆ ತುಂಬಾ ಇತ್ತು. ಖಂಡಿಸುವ ಈ ಹೇಳಿಕೆಗಳಿಗಾಗಿ ಅವರು ಸಾಕಷ್ಟು  ಶ್ರಮವನ್ನೇ ಪಟ್ಟಿರಬೇಕು.
ಬಹುಶಃ ಕೇಶವಮೂರ್ತಿಯವರಿಗೆ ಈ ಸಂಗತಿಗಳು ತಿಳಿದಿರಲಿಕ್ಕಿಲ್ಲ.

೧೯೮೪ರ ಸಿಕ್ಖ್ ನರಮೇಧದಲ್ಲಿ ಸತ್ತವರು ೨೭೩೩ ಎಂಬುದು ಸರಕಾರದ ದಾಖಲೆ. ಆದರೆ ದಂಗೆಯಲ್ಲಿ  ೨೫,೦೦೦ಕ್ಕೂ ಹೆಚ್ಚು ಜನರು ಸತ್ತರು ಮತ್ತು ಗಾಯಗೊಂಡಿದ್ದರು. ನೂರಾರು ಸಿಕ್ಖ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಸುಮಾರು ೩ ಲಕ್ಷ ಸಿಕ್ಖರು ಮನೆಮಾರುಗಳನ್ನು ಬಿಟ್ಟು ಓಡಿ ಹೋದರು ಮತ್ತು ತಲೆ ಮರೆಸಿಕೊಂಡರು. ನೂರಾರು ಗುರುದ್ವಾರಗಳನ್ನು ಕೆಡವಲಾಯಿತು ಮತ್ತು ಧರ್ಮಗ್ರಂಥವನ್ನು ಸುಡಲಾಯಿತು.  ದೇಶ ಕಾಯುತ್ತಿದ್ದ ೩೦೦ ಜನ ಸಿಕ್ಖ್ ಯೋಧರನ್ನ್ನು  ಕೊಲ್ಲಲಾಯಿತು. ಬೊಕಾರೋ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ೧೨೦ ಜನ  ಸಿಕ್ಖರನ್ನು  ಸಾಮೂಹಿಕವಾಗಿ  ದಹಿಸಲಾಯಿತು. ಖಾನ್‌ಪುರದಲ್ಲಿ ೧೩ ವರ್ಷದ ಸಿಕ್ಖ್ ಬಾಲಕನನ್ನು  ಗ್ಯಾಸ್ ಸ್ಟವ್‌ನಲ್ಲೇ ಕೋಳಿ ಸುಡುವಂತೆ ಸುಡಲಾಯಿತು. ಅಗರ್ತಲಾದಲ್ಲಿ ವಾಸಿಸುತ್ತಿದ್ದ ೩೦ ಸಿಕ್ಖ್ ಕುಟುಂಬಗಳು ಜೀವರಕ್ಷಣೆಗಾಗಿ ಪೊಲೀಸ್ ಠಾಣೆಯ  ಮೆಟ್ಟಲೇರಿದರು. ಪೊಲೀಸರೇ ಅವರೆಲ್ಲರನ್ನು ಸಜೀವವಾಗಿ ಸುಟ್ಟರು. ಮಧ್ಯಪ್ರದೇಶದ ಜಬಲ್‌ಪುರದಲ್ಲಿ ೧೨ ಜನ ಸಿಕ್ಖರನ್ನು ರೈಲು ನಿಲ್ದಾಣದ  ಪ್ಲಾಟ್‌ಫಾರ್ಮ್‌ನಲ್ಲೇ ನೇಣು ಹಾಕಿ ಕೊಲ್ಲಲಾಯಿತು.

Read more »

7
ಜೂನ್

ಶಿವ ನಾನು, ಶಿವ ನಾನು!

Shankaraacharya1ಈ ಬರಹವು ’ಎಲ್ಲರ ಕನ್ನಡ ‘ ದಲ್ಲಿದೆ.ಎಲ್ಲರ ದನಿಗೂ ವೇದಿಕೆಯಾಗುವ ನಿಲುಮೆಯ ಎಂದಿನ ನಿಲುವಿನಂತೆ ಈ ಲೇಖನವನ್ನು “ನಿಲುಮೆ” ಪ್ರಕಟಿಸುತ್ತಿದೆ.ಆದರೆ ವಿಷಯಗಳು ಸಾಮಾನ್ಯ ಕನ್ನಡಿಗರಿಗೆ ತಲುಪಬೇಕೆಂದರೆ ವಿಷಯ ಸಾಮಾನ್ಯ ಕನ್ನಡದಲ್ಲಿದ್ದರೆ ಒಳಿತಾದ್ದರಿಂದ ಪ್ರಚಲಿತ ಬಳಕೆಯಲ್ಲಿರುವ ಕನ್ನಡದ ಲೇಖನಗಳನ್ನು ಅಪೇಕ್ಷಿಸುತ್ತದೆ.

– ಕಿರಣ್ ಬಾಟ್ನಿ

{ಇತ್ತೀಚೆಗೆ ಜಾತಿಗಳ ಬಗೆಗಿನ ಚರ‍್ಚೆ ಹಾದಿ ತಪ್ಪುತ್ತಿದೆ ಎಂದು ನನ್ನ ಅನಿಸಿಕೆ. ಒಂದು ಕಡೆ ’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು ಬಾರತದಲ್ಲಿ ಜಾತಿಯೇರ‍್ಪಾಡೆಂಬುದೇ ಇಲ್ಲ ಎಂದು ವಾದಿಸಿ ಆ ಮೂಲಕ ಕೂಡಣಮಾರ‍್ಪಿಗೆ ಅರ‍್ತವೇ ಇಲ್ಲವೆಂಬ ಅನಿಸಿಕೆಯನ್ನು ಬಿತ್ತುತ್ತಿದ್ದಾರೆ. ಇನ್ನೊಂದು ಕಡೆ ’ಎಡಗಡೆ’ಯವರಲ್ಲಿ ಜಾತಿಯೇರ‍್ಪಾಡಿನ ಕೆಡುಕುಗಳ ಬಗ್ಗೆ ಹಾಡಿ ಗೋಳಾಡುವುದೇ ಒಂದು ಕಸುಬಾಗಿ ಬಿಟ್ಟಿರುವುದರಿಂದ ಅವರಿಂದ ಕೂಡಣಮಾರ‍್ಪಿನ ನಿಟ್ಟನ್ನು ಬಯಸುವುದೇ ತಪ್ಪೆಂಬಂತಿದೆ. ಇನ್ನು ಇವೆರಡು ಗುಂಪುಗಳು ಅರಿವನ್ನು ಹಂಚಿಕೊಳ್ಳುವುದಂತೂ ದೂರದ ಮಾತು.

ಇವೆರಡರ ನಡುವಿನ ಹಾದಿಯೊಂದನ್ನು ನಾವು ಕಂಡುಕೊಳ್ಳದೆ ಹೋದರೆ ಒಟ್ಟಾರೆಯಾಗಿ ಕನ್ನಡಿಗರಿಗೆ ಏಳಿಗೆಯಿಲ್ಲ ಎಂಬ ನಂಬಿಕೆ ನನ್ನಲ್ಲಿ ಬಹಳ ಗಟ್ಟಿಯಾಗಿದೆ. ’ಎಲ್ಲರಕನ್ನಡ’ವನ್ನು ನಾನು ಒಪ್ಪಿ ಅದನ್ನೇ ಬಳಸುವ ಹಟ ಹಿಡಿದಿರುವುದಕ್ಕೆ ಈ ನಂಬಿಕೆ ಒಂದು ಮುಕ್ಯವಾದ ಕಾರಣ. ಹುಟ್ಟಿನಿಂದ ಮಾದ್ವ ಬ್ರಾಮಣ ಜಾತಿಗೆ ಸೇರಿದ ನಾನು ಈ ನಡುಹಾದಿಯಲ್ಲಿ ನಡೆಯುವಾಗ ಸಂಸ್ಕ್ರುತದಲ್ಲಿ ಈಗಾಗಲೇ ಇರುವ ಮತ್ತು ಕನ್ನಡದ ಕೂಡಣವನ್ನು ಒಡೆಯದೆ ಅದನ್ನು ಇಡಿಯಾಗಿ ಆದ್ಯಾತ್ಮಿಕ ಎತ್ತರಕ್ಕೊಯ್ಯುವಂತಹ ಅರಿವನ್ನು ನನ್ನ ಕಯ್ಲಾದಶ್ಟು ಎಲ್ಲರಕನ್ನಡಕ್ಕೆ ತರಬೇಕಾದುದು ನನ್ನ ಕರ‍್ತವ್ಯವೆಂದೇ ತಿಳಿದುಕೊಂಡಿದ್ದೇನೆ.

ಇಲ್ಲಿ ಬಹಳ ಚಿಕ್ಕದಾದ ಅಂತಹ ಒಂದು ಮೊಗಸನ್ನು ಮಾಡಿದ್ದೇನೆ. ಎಲ್ಲರಕನ್ನಡದಲ್ಲಿ ಹೀಗೆ ಗೇದರೆ ಬ್ರಾಮಣರು ಜಾತಿಯೇರ‍್ಪಾಡನ್ನು ಕೆಡವಲು ನೆರವಾಗಬಹುದು ಮತ್ತು ಬ್ರಾಮಣಿಕೆಯನ್ನು ಒಂದು ಜಾತಿಯಂತೆ ಕಾಣುವುದನ್ನು ನಿಲ್ಲಿಸಿ ಹಿಂದಿನ ಬ್ರಾಮಣರು ಮಾಡಿದ ಕೆಲಸದಲ್ಲಿ ನಿಜವಾಗಲೂ ಉಳಿಸಿಕೊಳ್ಳತಕ್ಕುದನ್ನು ಉಳಿಸಿಕೊಂಡು ಆ ಮೂಲಕ ಕೂಡಣಕ್ಕೆ ನೆರವಾಗಬಹುದು. ಇದನ್ನು ಎಶ್ಟು ಸಾರಿ ಕೂಗಿ ಹೇಳಿದರೂ ಸಾಲದು. – ಕಿ. ಬಾ.}

Read more »