ಭಿತ್ತಿ : ಭಾವಪ್ರಧಾನ ವ್ಯಕ್ತಿತ್ವದ ಕಥನ
– ರಾಜಕುಮಾರ.ವ್ಹಿ.ಕುಲಕರ್ಣಿ,ಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ
‘ಚಿಕ್ಕ ಹುಡುಗನಾದ್ದರಿಂದ ಚಟ್ಟದ ಅಗತ್ಯವಿರಲಿಲ್ಲ. ನಾನೇ ಎತ್ತಿ ಎಡ ಹೆಗಲ ಮೇಲೆ ಹೊತ್ತುಕೊಂಡು ಬಲಗೈಲಿ ಬೆಂಕಿಯ ಮಡಕೆ ಹಿಡಿದು ಹೋಗುವುದೆಂದು ತೀರ್ಮಾನವಾಯಿತು. ಹೆಣ ಎತ್ತುವ ಮೊದಲು ಒಂದೊಂದು ಹಿಡಿಯಂತೆ ಒಟ್ಟು ಮೂರು ಹಿಡಿ ಅಕ್ಕಿ ಕಾಳು ನಾನು, ಅಜ್ಜಿ, ಲಲಿತ ಹೆಣದ ಬಾಯಿ ಮೇಲೆ ಸುರಿದ ನಂತರ ನಾನು ಮುಕ್ಕಿರಿದು ಎತ್ತಿ ಹೆಣವನ್ನು ಎಡ ಹೆಗಲ ಮೇಲೆ ಹಾಕಿಕೊಂಡು ಕೆಂಪು ಸೀರೆಯ ತುಂಡನ್ನು ಹೊದಿಸಿ ಮಡಕೆಯ ಬೆಂಕಿಯನ್ನು ಬಲಗೈಲಿ ಹಿಡಿದು ಬೀದಿಯಲ್ಲಿ ಹೊರಟೆ. ಏಳು ವರ್ಷದ ಹುಡುಗನ ಹೆಣದ ಭಾರಕ್ಕೆ ಎಡ ಹೆಗಲು ಸೇದಿ ನುಲಿಯತೊಡಗಿತು.ಅತ್ತಿತ್ತ ಹೊರಳಿಸಿ ಭಾರದ ಸ್ಥಾನವನ್ನು ಬದಲಿಸಿಕೊಳ್ಳಲು ಬಲಗೈ ಮುಕ್ತವಾಗಿರಲಿಲ್ಲ. ಅದಕ್ಕೆ ಕೂಡ ಬೆಂಕಿಯ ರಾವು ಹೊಡೆಯುತ್ತಿತ್ತು. ಸುಸ್ತಾಯಿತೆಂದು ಪದೇ ಪದೇ ಕೆಳಗಿಳಿಸಿ ಸುಧಾರಿಸಿಕೊಂಡು ಪಯಣವನ್ನು ಮುಂದುವರೆಸುವಂತೆಯೂ ಇಲ್ಲ. ಸ್ಮಶಾನಕ್ಕೆ ಹೋಗುವಷ್ಟರಲ್ಲಿ ನನ್ನ ಭುಜ ಮತ್ತು ಎದೆಗೂಡುಗಳು ಸತ್ತು ಹೋಗಿದ್ದವು. ನನ್ನ ಕಣ್ಣುದುರಿಗೇ ಕೃಷ್ಣಮೂರ್ತಿಯ ಹೆಣ ಕಪ್ಪು ತಿರುಗಿ ಚರ್ಮ ಸುಲಿದು ಬಿಳಿಯ ನೆಣ ಬಾಯ್ದೆರೆದು ತೊಟ್ಟಿಕ್ಕಿ ಅದೇ ಇಂಧನವಾಗಿ ಹೆಣವೇ ಹೊತ್ತಿಕೊಂಡಿತು’. ಓದಿದ ಆ ಕ್ಷಣ ಬುದ್ದಿಯನ್ನೇ ಮಂಕಾಗಿಸಿ ಮನಸ್ಸನ್ನು ಆರ್ದ್ರಗೊಳಿಸುವ ಈ ಸಾಲುಗಳು ನಾನು ಇತ್ತೀಚಿಗೆ ಓದಿದ ‘ಭಿತ್ತಿ’ ಪುಸ್ತಕದಿಂದ ಹೆಕ್ಕಿ ತೆಗೆದವುಗಳು.
‘ಭಿತ್ತಿ’ ಇದು ಕನ್ನಡ ಸಾಹಿತ್ಯಕ್ಕೆ ಕ್ಲಾಸಿಕ್ ಕಾದಂಬರಿಗಳನ್ನು ನೀಡಿರುವ ಶ್ರೇಷ್ಠ ಬರಹಗಾರ ಸಂತೇಶಿವರ ಲಿಂಗಣ್ಣ ಭೈರಪ್ಪನವರ ಆತ್ಮಕಥೆ. ಇಪ್ಪತ್ನಾಲ್ಕು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್.ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಟ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ 14 ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೮
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೯
ಕವಲು
ಆವರಣ ಕಾದಂಬರಿಗೆ ಬಂದಷ್ಟು ಪ್ರತಿರೋಧ, ಪ್ರತಿಭಟನೆಗಳು ಮತ್ತು ವಿಮರ್ಶಾ ಸಂಕಲನಗಳು ಕವಲು ಕಾದಂಬರಿಗೆ ಬರದೇ ಇದ್ದರೂ ಸಹ ಪತ್ರಿಕೆಗಳಲ್ಲಿ ಸಾಕಷ್ಟು ಚರ್ಚೆಯಾಯಿತು. ಆವರಣಕ್ಕೆ ಕೋಮುವಾದಿ ಕೃತಿ ಎಂದು ಹೆಸರಿಟ್ಟಹಾಗೆ ಕವಲು ಕಾದಂಬರಿಗೆ ಸ್ತ್ರೀವಾದದ ವಿರೋಧಿ ಎಂಬ ಲೇಬಲ್ ಹಚ್ಚಲಾಯಿತು. ಖ್ಯಾತ ಕತೆಗಾರ, ಪ್ರಭಂಧಕಾರ ಮತ್ತು ಪ್ರಕಾಶಕರಾದ (ಛಂದ ಪುಸ್ತಕ ಪ್ರಕಾಶನ ಬೆಂಗಳೂರು) ವಸುಧೇಂದ್ರ ಅವರು ಕನ್ನಡ ಪ್ರಭ ಪತ್ರಿಕೆಯ ಭಾನುವಾರದ ಸಾಪ್ತಾಹಿಕ ಪ್ರಭದಲ್ಲಿ ಮಾಡಿದ ಕವಲು ಕಾದಂಬರಿಯ ವಿಮರ್ಶೆಗೆ ಪ್ರತಿಕ್ರಿಯೆಯಾಗಿ ನಾನು ಬರೆದದ್ದು ಈ ಪತ್ರ. .
ಶ್ರೀ ವಸುಧೇಂದ್ರ ಅವರಿಗೆ ನಮಸ್ಕಾರಗಳು, ದಿನಾಂಕ: ೧೩ ಜೂನ್ ೨೦೧೨
ಭೈರಪ್ಪನವರ ಕವಲು ಕಾದಂಬರಿಯ ಬಗ್ಗೆ ಸುಮಾರು ಎರಡು ವರ್ಷಗಳ ಹಿಂದೆ (೨೯–೮–೨೦೧೦) ಕನ್ನಡಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾದ ತಮ್ಮ ವಿಮರ್ಶೆಯ ಬಗ್ಗೆ ನನ್ನ ಅನಿಸಿಕೆಗಳನ್ನು ಈಗ ತಿಳಿಸುತ್ತಿದ್ದೇನೆ. ಇದನ್ನು ಬರೆದಿಟ್ಟುಕೊಂಡು ಎರಡು ವರ್ಷಗಳಾಗಿದ್ದರೂ ಈಗ ಕಳಿಸುತ್ತಿರುವುದಕ್ಕೆ ಕಾರಣ ನಿಮ್ಮ ಅಂಚೆ ವಿಳಾಸ/ ಇ ಮೇಲ್ ಐಡಿ ಸಿಗದೇ ಇದ್ದದ್ದು. ಇತ್ತೀಚಿಗೆ ‘ಸಂಚಯ’ ಸಾಹಿತ್ಯಿಕ ಪತ್ರಿಕೆಯ ಪ್ರತಿಗಳನ್ನು ಒಂದೆಡೆ ನೀಟಾಗಿ ಜೋಡಿಸಿಡುತ್ತಾ ಹಾಗೆ ಅದರ ಪುಟಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ಒಂದು ಸಂಚಿಕೆಯಲ್ಲಿ ನಿಮ್ಮ ವಿಳಾಸ ಸಿಕ್ಕಿತು. ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿದ್ದ ನಿಮ್ಮ ಆ ವಿಮರ್ಶೆಯ ಜೆರಾಕ್ಸ್ ಪ್ರತಿಯನ್ನೂ ಇದರ ಜತೆ ಇಟ್ಟಿದ್ದೇನೆ.
ತಮಗೆ ತಿಳಿದಿರುವಂತೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ನಮ್ಮ ವಿಮರ್ಶಾವಲಯದಲ್ಲಿ ಪರಸ್ಪರ ವಿರುದ್ಧವಾದ ಅಭಿಪ್ರಾಯಗಳು ಅವರ ಧರ್ಮಶ್ರೀ ಕಾಲದಿಂದ ಇಂದಿನ ಕವಲು ಕಾದಂಬರಿಯ ತನಕ ಇದ್ದೇ ಇದೆ. ಇದನ್ನು ನಾನು ಪುನಃ ವಿವರಿಸುವುದು ಅನವಶ್ಯ ಎಂದು ಭಾವಿಸಿದ್ದೇನೆ. ಈಗ ನೇರವಾಗಿ ಕವಲು ಕಾದಂಬರಿಯನ್ನು ಕುರಿತ ತಮ್ಮ ವಿಮರ್ಶೆಯ ಬಗ್ಗೆ ಹೋಗೋಣ. ನಾಲ್ಕು ಕಾಲಂಗಳ ಆ ವಿಮರ್ಶೆಯಲ್ಲಿ ಎರಡು ಕಾಲಂಗಳು ಆ ಕಾದಂಬರಿಯ ಕಥಾಸಾರಾಂಶವನ್ನು ಹೇಳುವುದಕ್ಕೆ ವಿನಿಯೋಗವಾಗಿದೆ. ಉಳಿದ ಎರಡು ಕಾಲಂಗಳ ಬಗ್ಗೆ ಹೇಳುವುದಾದರೆ—
(೧) ಭೈರಪ್ಪನವರು ಎಲ್ಲಾ ಸ್ತ್ರೀವಾದಿಗಳೂ ಕೆಟ್ಟ ಹೆಂಗಸರೆಂದು ಆ ಕಾದಂಬರಿಯಲ್ಲಿ ಎಲ್ಲಿ ಹೇಳಿದ್ದಾರೆ? ಕವಲು ಕಾದಂಬರಿಯಲ್ಲಿ ಚಿತ್ರಿತವಾಗಿರುವ ಇಬ್ಬರು ಹೆಂಗಸರ ಬಗ್ಗೆ, ಅವರ ನಡತೆಯ ಬಗ್ಗೆ ಬರೆದಿದ್ದಾರೆ. ಅವರಿಬ್ಬರು ಎಲ್ಲಾ ಸ್ತ್ರೀ ವಾದಿಗಳನ್ನು ಪ್ರತಿನಿಧಿಸುತ್ತಾರೆ ಎಂದು ಭಾವಿಸುವುದು ಸರಿಯೇ? ಓದು ಬರಹ ಬಲ್ಲ ಹೆಂಗಸರಿಂದ, ಸ್ತ್ರೀವಾದಿಗಳಿಂದ ಮಾತ್ರ ವರದಕ್ಷಿಣೆ ವಿರೋಧಿ ಕಾನೂನು, ವಿವಾಹ ವಿಚ್ಛೇದನದ ಕಾನೂನು ದುರುಪಯೋಗವಾಗುತ್ತಿಲ್ಲ: ಅದನ್ನು ಇತರರೂ ಮಾಡುತ್ತಿದ್ದಾರೆ ಎಂಬುದಕ್ಕೆ ಕವಲು ಕಾದಂಬರಿಯಲ್ಲೇ ಒಂದು ನಿದರ್ಶನವಿದೆ. ಜಯಕುಮಾರನ ಅಣ್ಣ ಕೇಶವಮೂರ್ತಿಯ ಹೆಂಡತಿ ಇಂದಿರಾ ತನ್ನ ಅತ್ತೆಯನ್ನು ವರದಕ್ಷಿಣೆ ಕಾನೂನಿನ ಅಡಿಯಲ್ಲಿ ಜೈಲಿಗೆ ಹಾಕಿಸಲಿಲ್ಲವೇ? (ಪುಟ ೨೬೧ ಕವಲು) ತಾವೇ ಹೇಳಿರುವಂತೆ ಕಾನೂನಿನ ಲೂಪ್ ಹೋಲ್ ಗಳನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡವರ ಕಥೆ ಕವಲುವಿನದು. ಅಂತಹ ಒಂದು ಕಥೆಯನ್ನು ಹೇಳುವುದಕ್ಕೆ ಒಂದಷ್ಟು ಪಾತ್ರಗಳು ಬೇಕೇ ಬೇಕಲ್ಲವೇ? ಅಂತಹ ಪಾತ್ರಗಳು ಇಡೀ ಸಮಾಜದ ಪ್ರತಿಬಿಂಬವಾಗಲು ಹೇಗೆ ತಾನೇ ಸಾಧ್ಯ? ಜತೆಗೆ ಮರೆಯಬಾರದ ಸಂಗತಿ ಎಂದರೆ ಪ್ರಗತಿಪರ ,ಬಂಡಾಯ, ದಲಿತ ಸ್ತ್ರೀ ವಾದಿ ಇತ್ಯಾದಿ ಪ್ರಣಾಳಿಕೆಗಳು, ಇವುಗಳ ಬಗ್ಗೆ ಒಲವುಳ್ಳ ಅಷ್ಟನ್ನೇ high light ಮಾಡುವಂತಹ ಸಾಹಿತ್ಯ,ವಿಮರ್ಶೆಗಳು ಏಕಮುಖೀ ಧೋರಣೆ ಉದ್ದೇಶವಿಟ್ಟುಕೊಂಡು ರಚಿತವಾಗಿ ಜೀವನದ ಇತರೆ ಮಗ್ಗುಲುಗಳ ಬಗ್ಗೆ ಗಮನಹರಿಸದೇ ಇರುವುದು ತಿಳಿದ ವಿಷಯವೇ. ಒಬ್ಬ ಲೇಖಕ/ಸಾಹಿತಿ ಆಯಾ ಕಾಲದಲ್ಲಿ ಚಾಲ್ತಿಯಲ್ಲಿರುವಂತಹ ಸಾಮಾಜಿಕ/ರಾಜಕೀಯ ಸಿದ್ಧಾಂತ,ವಾದ ಇತ್ಯಾದಿಗಳ ಪರವಾಗಿ ಮತ್ತು ಅದರ ಚೌಕ್ಕಟ್ಟಿನೊಳಗೇ ಬರೆಯಬೇಕು ಎಂದು ನಿರೀಕ್ಷಿಸುವುದು/ಒತ್ತಾಯಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನೂ ಸಹ ನಾವು ಗಣನೆಗೆ ತೆಗೆದುಕೊಳ್ಳಬೇಕಲ್ಲವೇ? ಸಾಹಿತಿಗೆ ಆ ವಾದಗಳ ಸಾಧಕ ಬಾಧಕಗಳನ್ನು ತನ್ನ ಕೃತಿಯಲ್ಲಿ ಚರ್ಚಿಸುವ ಸೃಜನಶೀಲತೆಗೆ ಅವಕಾಶವಿರಬಾರದೆ?
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೮
‘ಆವರಣ‘ ಎಂಬ ವಿಕೃತಿ (ವಿಮರ್ಶಾ ಸಂಕಲನ) ಸಂಗ್ರಹ: ಗೌರಿ ಲಂಕೇಶ್ – ಭಾಗ ೪ : ಆವರಣ ಮಾಧ್ಯಮ-ಮಂಥನ ಮತ್ತು ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ
‘ಆವರಣ‘ ಎಂಬ ವಿಕೃತಿ:-ಮುಖಾಮುಖಿ -೮ (೩೦-೬-೧೪) ರಲ್ಲಿ ಹೇಳಿದಂತೆ ಈ ಭಾಗದಲ್ಲಿ ‘ಆವರಣ’ ಕಾದಂಬರಿಯನ್ನು ನೆಪಮಾತ್ರಕ್ಕೆ ಇಟ್ಟುಕೊಂಡು ಬರೆದಿರುವಂತಹ ಲೇಖನಗಳ ಬಗ್ಗೆ ನಮ್ಮ ಚರ್ಚೆಯನ್ನು ಮುಂದುವರಿಸೋಣ. ಇದು ‘ಆವರಣ’ ಎಂಬ ವಿಕೃತಿ ವಿಮರ್ಶಾಸಂಕಲನವನ್ನು ಕುರಿತ ಮುಖಾಮುಖಿಯ ಕೊನೆಯ ಭಾಗ.
ಬೊಳುವಾರು ಮಹಮದ್ ಕುಂಞ ಅವರ ‘ಅವರವರ ದೇವರುಗಳು’ … ಲೇಖನದಲ್ಲಿ ‘ಆವರಣ’ ಕಾದಂಬರಿಯ ಕಥಾವಸ್ತುವನ್ನು ಅವರ ಮಾವನವರನ್ನು(ಬೊಳುವಾರು ಅವರ ಹೆಂಡತಿಯ ತಂದೆ) ಕಾಡುತ್ತಿದ್ದ ಕ್ಯಾನ್ಸರ್ ಗೆ ಹೋಲಿಸಿದ್ದಾರೆ. ಆಪರೇಷನ್ ಆದ ನಂತರ ಅವರ ಮಾವನವರು ಗುಣಮುಖರಾಗಿ ಗೆಲುವಿನ ನಗೆ ಬೀರುತ್ತಿದ್ದಾರೆ. ಅದೇ ರೀತಿ ‘ಆವರಣ’ ಕಾದಂಬರಿ ಬರೆದ ನಂತರ ಭೈರಪ್ಪನವರೂ ಸಹ ಹತ್ತಾರು ವರ್ಷಗಳಿಂದ ತಮ್ಮನ್ನು ಹಿಂಸಿಸುತ್ತಿದ್ದ,ಕಾಡುತ್ತಿದ್ದ ಚಿಂತನೆಗಳಿಂದ ಮುಕ್ತರಾಗಿದ್ದಾರೆ. ಅವರವರು ನಂಬುವ ಅವರವರ ದೇವರುಗಳು ಅವರವರನ್ನು ಕಾಪಾದುತ್ತಿರಲಿ. ಆಮೆನ್ ……… ಎಂಬ ಹಿತೋಕ್ತಿಯಿಂದ ತಮ್ಮ ಲೇಖನವನ್ನು ಮುಗಿಸಿದ್ದಾರೆ.
‘ಇಬ್ರಾಹಿಂ ಸಾಹೇಬರ ಬಗ್ಗೆ ಭೈರಪ್ಪನ ಸುಳ್ಳು … ‘ ಪೀರ್ ಬಾಷಾ ಅವರು ಸುಳ್ಳು ಹೇಳುತ್ತಿದ್ದಾರೋ ಅಥವಾ ತಮ್ಮ ಜನಾಂಗದವರ ಅಸಮಾಧಾನಕ್ಕೆ ಏಕೆ ಕಾರಣಕರ್ತನಾಗಬೇಕೆಂದು ಇಬ್ರಾಹಿಂ ಸಾಹೇಬರೇ ಸುಳ್ಳು ಹೇಳುತ್ತಿದ್ದಾರೋ ತಿಳಿಯದಾಗಿದೆ. (ತಮ್ಮ ಜನಾಂಗದ ಅಸಮಾಧಾನಕ್ಕೆ ಕಾರಣವಾಗುವ ಮಾತುಗಳನ್ನು ಆಡಲು, ಬರೆಯಲು ಹಿಂದೇಟು ಹಾಕುವ ಪ್ರವೃತ್ತಿಗೆ ಇತ್ತೀಚಿನ ಉದಾಹರಣೆಯಾಗಿ ಕನ್ನಡದ ‘ವರ್ತಮಾನ’ , ‘ಗುಜರಿ ಅಂಗಡಿ’ ಮತ್ತು ‘ಭೂತಗನ್ನಡಿ’ ಎಂಬ ಬ್ಲಾಗುಗಳಲ್ಲಿ ಪ್ರಕಟವಾದ ‘ಬುರ್ಖಾ’ ಕುರಿತ ಲೇಖನ ಮತ್ತು ಅದರ ಬಗ್ಗೆ ನಡೆದ ಚರ್ಚೆಯನ್ನು ಆಸಕ್ತರು ಗಮನಿಸಬಹುದು). ‘ಆವರಣ’ ಕಾದಂಬರಿಯ ಪ್ರವೇಶ ಎಂಬ ಭಾಗದಲ್ಲಿ ಭೈರಪ್ಪನವರು ಆ ಕಾದಂಬರಿ ಬರೆಯುವಾಗ ತಮಗೆ ಸಹಾಯ ಮಾಡಿದವರನ್ನು ಸ್ಮರಿಸಿಕೊಳ್ಳುವಾಗ ‘ಶಿವಮೊಗ್ಗದ ಎಚ್ ಇಬ್ರಾಹಿಂ ಸಾಹೇಬರು ಎಷ್ಟೋ ಸೂಕ್ಷ್ಮಾಂಶಗಳನ್ನು ಹೇಳಿ ನನ್ನ ಮನಸ್ಸಿನ ಚಿತ್ರಗಳು ಸ್ಫುಟವಾಗಲು ಸಹಾಯಮಾಡಿದರು’ ಎಂದು ಹೇಳಿರುವ ಒಂದು ವಾಕ್ಯ ಪೀರ್ ಬಾಷಾ ಅವರ ಕೆಂಗಣ್ಣಿಗೆ,ಆಕ್ರೋಶಕ್ಕೆ ತುತ್ತಾಗಿದೆ. ಇದರ ಫಲವಾಗಿ ಆವೇಶದ,ನಾಲ್ಕನೇ ದರ್ಜೆಯ ಕೀಳು ಮಾತುಗಳು ಅವರ ಲೇಖನದಲ್ಲಿದೆ. ಜತೆಗೆ ತಮ್ಮ ಮಾತಿಗೆ ಸತ್ಯದ ಲೇಪ ಹಚ್ಚಲು ‘ಪಿ ಲಂಕೇಶರ ಮಿತ್ರರೂ,ಆಗಿದ್ದ ‘ಲಂಕೇಶ್’ ವಾರಪತ್ರಿಕೆಯ ಹಿತೈಷಿಯೂ ಆಗಿರುವ ಇಬ್ರಾಹಿಂ ಸಾಹೆಬರನ್ನೇ ಇದರ ಬಗ್ಗೆ ಕೇಳಿದೆ ‘ ಎಂದು ಬರೆದಿರುವುದು ಬಾಷಾ ಅವರ ಬಗ್ಗೆ ಮರುಕ ಹುಟ್ಟಿಸುತ್ತದೆ. ಏಕೆಂದರೆ ಇಲ್ಲಿ ಸಮಸ್ಯೆಯಿರುವುದು ಭೈರಪ್ಪನವರು ಮತ್ತು ಇಬ್ರಾಹಿಂ ಸಾಹೇಬರ ನಡುವೆ ಅಷ್ಟೇ. ಅದಕ್ಕೆ ಮೂರನೇ ವ್ಯಕ್ತಿ ಮತ್ತು ಅವರ ವಾರಪತ್ರಿಕೆಯ ಆಸರೆ ಏಕೆ ಬೇಕಾಗಿತ್ತು? . ಇಬ್ರಾಹಿಂ ಸಾಹೇಬರಿಗೆ ಇನ್ನೂ ಕಾಲ ಮಿಂಚಿಲ್ಲ. ಈಗ ಬೇಕಾದರೂ ಸತ್ಯ ಹೇಳಬಹುದು. ತಾವು ಮುಸ್ಲಿಂ ಜನಾಂಗದ ರೀತಿ-ರಿವಾಜು,ನಂಬಿಕೆ, ಆಚರಣೆಗಳ ಬಗ್ಗೆ ಭೈರಪ್ಪನವರ ಜತೆ ಮಾತಾಡಿಲ್ಲ ಎಂದು ಪತ್ರಿಕೆಗಳಿಗೆ ಹೇಳಿಕೆ ಕೊಡಬಹುದು. ನಮ್ಮ ಕನ್ನಡದ 24X7 ಸುದ್ದಿವಾಹಿನಿಗಳಿಗೆ ತಿಳಿಸಿದರೆ ಸಾಕು. ಅವರು ಒಂದಿಡೀ ದಿನ ಅದರ ಬಗ್ಗೆ ಕಾರ್ಯಕ್ರಮ ನಡೆಸುತ್ತಾರೆ. ಪೀರ್ ಬಾಷಾ ಅವರೂ ಈ ನಿಟ್ಟಿನಲ್ಲಿ ಸಹಾಯ ಮಾಡಬಹುದು.
ಪಿ. ಲಂಕೇಶರ ‘ಬರಡು ಮನಸ್ಸಿನ ತಡೆರಹಿತ ಅಶ್ಲೀಲತೆ ‘ ಲೇಖನ ಭೈರಪ್ಪನವರ ‘ಸಾರ್ಥ’ ಕಾದಂಬರಿಗೆ ಸಂಬಂಧಿಸಿದ್ದು. ತಮ್ಮ ತಂದೆಯವರ ಹೆಸರಿನ ಪ್ರಕಾಶನ ಸಂಸ್ಥೆಯಿಂದ ‘……….. ವಿಕೃತಿ’ ವಿಮರ್ಶಾ ಸಂಕಲನ ಪ್ರಕಟಿಸಿರುವುದರಿಂದ ಭೈರಪ್ಪನವರ ಬಗ್ಗೆ, ಅವರ ಯಾವುದೇ ಕಾದಂಬರಿಯ ಬಗ್ಗೆ ಲಂಕೇಶ್ ಅವರು ಬರೆದ ಯಾವುದೇ ಲೇಖನ ಸೇರಿಸಲು, ಪ್ರಕಟಿಸಲು ಗೌರಿ ಲಂಕೇಶರು ಸ್ವತಂತ್ರರು. ಅದು ಅವರ ವಿವೇಚನೆಗೆ ಬಿಟ್ಟ ವಿಷಯ. ಮತ್ತಷ್ಟು ಓದು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
‘ಆವರಣ’ ಎಂಬ ವಿ-ಕೃತಿ — ಸಂಗ್ರಹ : ಗೌರಿ ಲಂಕೇಶ್ (ಭಾಗ–೩)
————————————————————————
‘ಆವರಣ’ ಎಂಬ ವಿಕೃತಿ ವಿಮರ್ಶಾಸಂಕಲನದಲ್ಲಿ ಒಟ್ಟು ಇಪ್ಪತ್ತೊಂದು ಲೇಖನಗಳಿವೆ. ಇವುಗಳಲ್ಲಿ ಎಂಟು ಲೇಖನಗಳ ಬಗ್ಗೆ ಈಗಾಗಲೇ ಎರಡು ಭಾಗಗಳಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದಾಗಿದೆ. ಇನ್ನು ಉಳಿದಿರುವ ಹದಿಮೂರು ಲೇಖನಗಳು ಎರಡು ರೀತಿಯವು. (೧) ‘ಆವರಣ’ ಕಾದಂಬರಿಗೆ ನೇರವಾಗಿ ಸಂಬಂಧಿಸಿರುವಂತಹವು. (೨) ‘ಆವರಣ’ ಕಾದಂಬರಿಯನ್ನು ನೆಪ ಮಾತ್ರಕ್ಕೆ ಇಟ್ಟುಕೊಂಡು ಭೈರಪ್ಪನವರ ನಡೆ-ನುಡಿಗಳನ್ನು ಹೇಳುವಂತಹವುಗಳು.
‘ಆವರಣ’ ಕಾದಂಬರಿಗೆ ಸಂಬಂಧಿಸಿರುವಂತಹ ಲೇಖನಗಳಲ್ಲಿ ಸಹ ಈ ಹಿಂದಿನ ಎರಡು ಭಾಗಗಳಲ್ಲಿ ಚರ್ಚಿತವಾದ ವಿಷಯಗಳನ್ನು ಬಿಟ್ಟು ವಿಶೇಷವಾದ,ಹೊಸದಾದ ಅಂಶಗಳು ಇಲ್ಲ. ಆದ್ದರಿಂದ ಅವುಗಳ ಬಗ್ಗೆ ವಿವರವಾದ ಚರ್ಚೆ ಪುನರುಕ್ತಿಯಾಗುತ್ತದೆ. ಪುನರುಕ್ತಿಯಾಗದಂತಹ ಕೆಲವು ಅಂಶಗಳ ಬಗ್ಗೆ ಮಾತ್ರ ಈ ಭಾಗದಲ್ಲಿ ಒತ್ತು ನೀಡಲಾಗಿದೆ.
ಹಿಂದಿನದನ್ನೆಲ್ಲ ‘ಆವರಣ’ದಲ್ಲಿ ಪೇರಿಸುವ ಪ್ರಯತ್ನ ಲೇಖನ ಬರೆದಿರುವ ಬಿ. ಎಸ್. ವೆಂಕಟಲಕ್ಷ್ಮಿಯವರಿಗೆ ‘…… ಕಾದಂಬರಿಯೊಂದನ್ನು ಉಲ್ಲಾಸಕ್ಕಾಗಿಯೋ ಅಥವಾ ತಮ್ಮ ವೈಚಾರಿಕತೆಯನ್ನು ಹಿಗ್ಗಿಸಿಕೊಳ್ಳುವ ಸಲುವಾಗಿಯೋ ಕೈಗೆತ್ತಿಕೊಳ್ಳುವ ಸಾಮಾನ್ಯ ಓದುಗರಿಗೆ ಕಾದಂಬರಿಯೊಂದು ಸಹಜವಾಗಿ ಓದಿಸಿಕೊಂಡಾಗ ಮಾತ್ರ ಒಂದು ಬಗೆಯ ತೃಪ್ತಿ …….. ಸಾರ್ಥಕ ಭಾವನೆ ಮೂಡುತ್ತದೆ……… ‘ಆವರಣ’ದಲ್ಲಿ ಯಾವೊಂದು ಕಥೆಯನ್ನೂ ಸುಸೂತ್ರವಾಗಿ ಹೇಳದೆ ಅಹಿತಕರ ಘಟನೆಗಳಿಗೆ ಮಾತ್ರ ಒತ್ತುಕೊಟ್ಟಿದೆ ‘ ಎಂಬ ಅಸಮಾಧಾನ. ಉಲ್ಲಾಸ, ಸುಸೂತ್ರವಾದ ಕಥೆ ಇವುಗಳ ಜತೆ ವೈಚಾರಿಕತೆಯನ್ನೂ ಬಯಸುವುದು ತೀರಾ ದುಬಾರಿಯಾಗುತ್ತದೆ. ಕಾದಂಬರಿಯೊಂದರಲ್ಲಿ ‘ವೈಚಾರಿಕತೆ’ ಎಂಬುದು ವಿಶಾಲ ವ್ಯಾಪ್ತಿಯ ಚರ್ಚೆಯನ್ನು ಬೇಡುವಂತಹುದು. ಈಗಾಗಲೇ ಭೈರಪ್ಪನವರ ಮೇಲೆ ಅವರು ತಮ್ಮ’ ವೈಚಾರಿಕತೆ ‘ಯನ್ನು ಓದುಗರಿಗೆ ಹೇಳುವುದುಕ್ಕೊಸ್ಕರ ಕಾದಂಬರಿಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪ ನಮ್ಮ ಸಾಹಿತ್ಯವಲಯದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಓದುಗ ಬಯಸುವ ‘ವೈಚಾರಿಕತೆ’ ಯಾವ ರೀತಿಯದು ಎಂಬುದು ಸ್ಪಷ್ಟವಾಗಿಲ್ಲ. ‘ಆವರಣ’ದಮಟ್ಟಿಗೆ ಹೇಳುವುದಾದರೆ ವೆಂಕಟಲಕ್ಷ್ಮಿ ಅವರ ದೃಷ್ಟಿಯಲ್ಲಿ ಅಹಿತಕರ ಘಟನೆಗಳನ್ನು ಹೇಳುವುದು ವೈಚಾರಿಕತೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಕಾದಂಬರಿಯೊಂದರ ಓದು ಕಾಲ ಕಳೆಯಲು ಅಲ್ಲ ಎಂದು ಭಾವಿಸಿರುವವರಿಗೆ ವೆಂಕಟಲಕ್ಷ್ಮಿ ಅವರ ವಿಚಾರಗಳು ತೀರಾ ತೆಳುವಾದವುಗಳು ಎಂದು ಅನಿಸುತ್ತದೆ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭
— ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬
ಆವರಣ’ ಎಂಬ ವಿ-ಕೃತಿ ಸಂಗ್ರಹ: ಗೌರಿ ಲಂಕೇಶ್
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫
‘ಆವರಣ ‘ ಎಂಬ ವಿ-ಕೃತಿ – ಸಂಗ್ರಹ : ಗೌರಿ ಲಂಕೇಶ್
ಗೌರಿ ಲಂಕೇಶ್ ಅವರು ಸಂಗ್ರಹಿಸಿರುವ ‘ಆವರಣ’ ಎಂಬ ವಿಕೃತಿ’ (ಲಂಕೇಶ್ ಪ್ರಕಾಶನ ಬೆಂಗಳೂರು–೪, ೨೦೦೭) ವಿಮರ್ಶಾ ಸಂಕಲನದಲ್ಲಿ ಯು ಅರ್ ಅನಂತಮೂರ್ತಿ, ಕೆ ಮರುಳಸಿದ್ದಪ್ಪ, ರಹಮತ್ ತರೀಕೆರೆ, ಜಿ ರಾಜಶೇಖರ್, ಜಿ ಕೆ ಗೋವಿಂದರಾವ್, ಕೆ. ಫಣಿರಾಜ್ ಮುಂತಾದ ಪ್ರಸಿದ್ಧ ಲೇಖಕರು,ವಿಮರ್ಶಕರು ಹಾಗು ಚಿಂತಕರ ಲೇಖನಗಳಿವೆ. ‘ಆವರಣ’ದಲ್ಲಿ ಚಿತ್ರಿತಗೊಂಡಿರುವ ಚರಿತ್ರೆಯ ಅಂಶಗಳು ಎಷ್ಟರಮಟ್ಟಿಗೆ ನಂಬಲರ್ಹ/ಅದಷ್ಟೇ ನಿಜವೇ ಬೇರೆ ಮುಖಗಳು ಇಲ್ಲವೇ ಎಂಬುದರ ಜತೆಗೆ ಕಾದಂಬರಿಯ ತಾತ್ವಿಕತೆ, ರೂಪ,ವಿನ್ಯಾಸಗಳ ಬಗ್ಗೆ ಇಲ್ಲಿನ ಲೇಖನಗಳಲ್ಲಿ ಒತ್ತು ಜಾಸ್ತಿ. ಹಿಂದೆ ಏನೇನೋ ನಡೆದುಹೋಗಿದೆ;ಅದನ್ನೆಲ್ಲಾ ಮತ್ತೆ ಕೆದಕುವುದ್ಯಾಕೆ ಎಂಬ ಮಾತೂ ಆಗೀಗ ಬರುತ್ತದೆ. ಹೀಗಾಗಿ ಈ ವಿಮರ್ಶಾ ಸಂಕಲನದ ಲೇಖನಗಳನ್ನು ಸ್ವಲ್ಪ ವಿವರವಾಗಿ ಚರ್ಚಿಸಬೇಕಾಗಿದೆ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಆವರಣ —- ಅನಾವರಣ
ಹೊಸ ಕನ್ನಡ ಸಾಹಿತ್ಯದ ಇತ್ತೀಚಿನ ಮೂವತ್ತು ನಲವತ್ತು ವರ್ಷಗಳಲ್ಲಿ ಎಸ್ ಎಲ್ ಭೈರಪ್ಪನವರ “ಆವರಣ” ಕಾದಂಬರಿಯಷ್ಟು ವಿವಾದಿತ ಕೃತಿ ಬಹುಶಃ ಬೇರೊಂದು ಇರಲಾರದೆನಿಸುತ್ತದೆ. “ಧರ್ಮ ಕಾರಣ” ಮತ್ತು”ಅನುದೇವ ಹೊರಗಣವನು” ಎಂಬ ಎರಡು ಕೃತಿಗಳ ಬಗ್ಗೆ ವಿವಾದವಾಗಿತ್ತು. ಆದರೆ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ನಂತರದಲ್ಲಿ “ಧರ್ಮಕಾರಣ”ವನ್ನು ಬ್ಯಾನ್ ಮಾಡಲಾಯಿತು. “ಆವರಣದ ವಾದ-ವಿವಾದಗಳಲ್ಲಿ”ಸಾಹಿತ್ಯ ಮತ್ತು ಸಾಹಿತ್ಯೇತರ ಕಾರಣಗಳು ಸೇರಕೊಂಡಿದ್ದವು. ಕನ್ನಡದ ನಾಲ್ಕೈದು ಪ್ರಮುಖ ದಿನ ಪತ್ರಿಕೆಗಳಲ್ಲಿ ಈ ಚರ್ಚೆ ಸುಮಾರು ಆರು ತಿಂಗಳುಗಳ ಕಾಲ ನಡೆಯಿತು. Front line ಮತ್ತು The pioneer ಎಂಬ ಇಂಗ್ಲಿಷ್ ಪತ್ರಿಕೆಗಳಲ್ಲಿ ಆವರಣ ಕುರಿತಂತೆ ವಿಮರ್ಶೆ ಪ್ರಕಟವಾಯ್ತು . ಜತೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ನಾಲ್ಕೈದು ಪ್ರಮುಖ ನಗರಗಳಲ್ಲಿ ಆವರಣದ ಬಗ್ಗೆ ಸಭೆಗಳು,ವಿಚಾರಗೋಷ್ಠಿಗಳು ನಡೆದವು.
ಸಂಸ್ಕಾರ ಮತ್ತು ದಾಟು ಕಾದಂಬರಿಗಳಲ್ಲಿ ಜಾತಿ ಸಮಸ್ಯೆಗಳು
– ಮು ಅ ಶ್ರೀರಂಗ ಬೆಂಗಳೂರು
ಈ ಲೇಖನವನ್ನು ನಾನು ಭೈರಪ್ಪನವರ ಕಾದಂಬರಿಗಳನ್ನು ಕುರಿತ ವಿಮರ್ಶೆಗಳ ಲೇಖನಮಾಲೆ ಮುಗಿದ ನಂತರ ಬರೆಯೋಣವೆಂದುಕೊಂಡಿದ್ದೆ. ಆದರೆ ಆ ಲೇಖನಗಳ ಸರಣಿಯಲ್ಲಿ ಇನ್ನು ಚರ್ಚಿಸಬೇಕಾದ ಕಾದಂಬರಿಗಳು “ಆವರಣ” ಮತ್ತು “ಕವಲು” ಮಾತ್ರ. ಇವುಗಳಲ್ಲಿ ಜಾತಿಯ ಸಮಸ್ಯೆಗಳ ಪ್ರಸ್ತಾಪವಿಲ್ಲದಿರುವುದರಿಂದ ಈಗಲೇ ಬರೆಯುವುದು ಸೂಕ್ತವೆನಿಸಿದೆ.
ಸಂಸ್ಕಾರ ಮತ್ತು ದಾಟು ಕಾದಂಬರಿಗಳನ್ನು ಕುರಿತಂತೆ ನಡೆದ ಚರ್ಚೆಗಳು ಪ್ರಾರಂಭದಲ್ಲಿ ವಿಚಾರಗಳ ವಿನಿಮಯದಂತೆ ಕಂಡರೂ ನಂತರದಲ್ಲಿ ಕವಲು ದಾರಿ ಹಿಡಿದವು. ಇದಕ್ಕೆ ನನಗನಿಸುವಂತೆ ಬಹುಶಃ ಜಾತಿ ಸಮಸ್ಯೆಯನ್ನು ಸಾಹಿತ್ಯವು ಅರಿಯಲು ನಡೆಸುವ ಪ್ರಯತ್ನಕ್ಕೂ ಅದೇ ಸಮಸ್ಯೆಯನ್ನು ಆಧಾರ,ಸಿದ್ಧಾಂತ,ಊಹೆ,ತರ್ಕ ಇತ್ಯಾದಿಗಳ ಮೂಲಕ ಬಿಡಿಸಲು ಪ್ರಯತ್ನಿಸುವ ಮಾನವಿಕ ಶಾಸ್ತ್ರಗಳಿಗೂ ಇರುವ ಮೂಲಭೂತ ವ್ಯತ್ಯಾಸವನ್ನು ಮನಗಾಣಿಸುವುದರಲ್ಲಿ ಆ ಚರ್ಚೆಗಳು ನಡೆಯದೇ ಹೋದದ್ದು. ಇದುವರೆಗೆ ಮಾನವಿಕ ಶಾಸ್ತ್ರಗಳು ತಮ್ಮ ಅಧ್ಯಯನದ ಮೂಲಕ ಕಂಡುಕೊಂಡಿರುವ ನಮ್ಮ ಸಮಾಜದ ಬಗೆಗಿನ ತಿಳುವಳಿಕೆಗಳನ್ನು ಆಧರಿಸಿ ಆ ಚೌಕಟ್ಟಿಗೆ ಈ ಸಾಹಿತ್ಯ ಕೃತಿಗಳು ಹೊಂದುವುದಿಲ್ಲ ಎಂದು ಒಂದೇ ಏಟಿಗೆ ಪಕ್ಕಕ್ಕೆ ಸರಿಸುವುದನ್ನು ಸಾಹಿತ್ಯದ ಒಬ್ಬ ಓದುಗನಾಗಿ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ದಾಟು ಮತ್ತು ಭಾರತೀಪುರ
—————————–
ಯು ಆರ್ ಅನಂತಮೂರ್ತಿ ಅವರ “ಭಾರತೀಪುರ” ಕಾದಂಬರಿಯ ನಾಯಕ ಜಗನ್ನಾಥನ ‘fickle minded personality’ ನಮ್ಮ ನವ್ಯ ಸಾಹಿತ್ಯದ ಆಧುನಿಕ ಪ್ರಜ್ಞೆಗೆ ತುಂಬ ಹತ್ತಿರವಾಗಿದೆ. ಇದು ಮೊದಲು ಪ್ರಕಟವಾಗಿದ್ದು ೧೯೭೩ರಲ್ಲಿ. ಸುಮ್ಮನೆ “ಇದೂ ಒಂದು ಮಾಮೂಲಿ ಕಾದಂಬರಿ” ಎಂದು ಓದಿಕೊಂಡು ಹೋಗುವ ಹಾಗಿದ್ದರೆ ಯಾವ ಜಿಜ್ಞಾಸೆಯೂ ಬೇಕಾಗುವುದಿಲ್ಲ. ಆದರೆ ಜಗನ್ನಾಥ ತನ್ನ ಊರಾದ ಭಾರತೀಪುರದಲ್ಲಿ ತಾನು ತರಬೇಕೆಂದುಕೊಳ್ಳುವ ಬದಲಾವಣೆಗೆ ತಕ್ಕ ತಯಾರಿ ನಡೆಸಿದ್ದನೆ? ನಡೆಸಿದ್ದರೆ ಅದು ಯಾವ ಮಾದರಿಯದ್ದು ಎಂದು ಯೋಚಿಸಲು ಹೊರಟಾಗ ನಿರಾಸೆಯಾಗುತ್ತದೆ. ಜತೆಗೆ ಈ ಕಾದಂಬರಿಯಲ್ಲಿ ಈತನಿಗಿಂತ ಶಕ್ತಿಶಾಲಿಯಾದ, ಗಟ್ಟಿ ಮನಸ್ಸಿನ ಸಾಕಷ್ಟು ವ್ಯಕ್ತಿಗಳಿದ್ದಾರೆ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
– ಮು.ಅ ಶ್ರೀರಂಗ, ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ದಾಟು ಕಾದಂಬರಿಯ ಬಗ್ಗೆ :
ಮುಖಾಮುಖಿ-೨ರಲ್ಲಿ ವಂಶವೃಕ್ಷ ಮತ್ತು ಸಂಸ್ಕಾರ ಕಾದಂಬರಿಗಳ ಬಗ್ಗೆ ನಾನು ಬರೆದ ಲೇಖನಕ್ಕೆ (ನಿಲುಮೆ–೧೫-೧೧-೧೩) ಓದುಗರು ಪ್ರತಿಕ್ರಿಯಿಸುವಾಗ”ದಾಟು” ಕಾದಂಬರಿಯ ಕೆಲವು ಅಂಶಗಳನ್ನು ತಿಳಿಸಿದ್ದರು. ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿ ಮುಂದುವರಿಯುವುದು ಉತ್ತಮ ಎಂದು ಭಾವಿಸಿದ್ದೇನೆ. ಭೈರಪ್ಪ ಮತ್ತು ಅನಂತಮೂರ್ತಿಯವರ ವಂಶವೃಕ್ಷ -ಸಂಸ್ಕಾರ ಹಾಗು ದಾಟು-ಭಾರತೀಪುರ ಕಾದಂಬರಿಗಳ ವಸ್ತುವಿನಲ್ಲಿ ಕೆಲವು ಸಾಮ್ಯತೆಗಳಿವೆ. ಇವುಗಳ ತೌಲನಿಕ ಓದಿನಿಂದ ಕನ್ನಡದ ಈ ಇಬ್ಬರು ಮಹತ್ವದ ಸಾಹಿತಿಗಳಲ್ಲಿ ಸಾಮಾನ್ಯವಾದ (common ಎಂಬ ಅರ್ಥದಲ್ಲಿ ) ಒಳನೋಟಗಳು ಏನಾದರೂ ಇವೆಯೇ ಎಂಬುದನ್ನು ತಿಳಿಯಬಹುದು . ಇದನ್ನು ನಿಲುಮೆಯ ಓದುಗರು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜತೆಗೆ ಧರ್ಮ,ರಿಲಿಜನ್,ಒರಿಯಂಟಲಿಸಂನ ಪುನರುತ್ಪಾದನೆ,ಬ್ರಾಹ್ಮಣ ಪುರೋಹಿತಶಾಹಿ,ಸೆಕ್ಯುಲರಿಸಂ ……. ಈ ಮಾತುಗಳೂ ಬಂದಿವೆ. ಕಾದಂಬರಿಯೊಂದನ್ನು ಈ ರೀತಿಯ ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ವಿಮರ್ಶಿಸುವುದು ಅನಿವಾರ್ಯವೇ?ಅವಶ್ಯವೇ?ಎಂಬುದು ಮುಖ್ಯವಾದ ಪ್ರಶ್ನೆ. ಕಾದಂಬರಿಯೊಂದನ್ನು ಸಾಹಿತ್ಯ ವಿಮರ್ಶೆಯ ಪರಿಧಿಯೊಳಗೆ ಚರ್ಚಿಸುವುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಜತೆಗೆ ಉತ್ತಮ ಸಾಹಿತ್ಯ ಕೃತಿಯ ವಿಮರ್ಶೆಯ ಪರಿಕರಗಳು ಆ ಕೃತಿಯ ಒಳಗೇ ಅಡಕವಾಗಿರುತ್ತದೆ ಎಂಬ ಒಂದು ಮಾತಿದೆ. ಹೀಗಾಗಿ ಸಾಹಿತ್ಯೇತರ ಪರಿಕರಗಳಿಂದ ಒಂದು ಕಾದಂಬರಿಯ ಗುಣ-ದೋಷಗಳನ್ನು ಪಟ್ಟಿಮಾಡುವ ಮುನ್ನ ಇನ್ನೊಮ್ಮೆ ಯೋಚಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ವಿವರವಾಗಿ ಬರೆಯಲು ಸದ್ಯದ ಮುಖಾಮುಖಿಗೆ ನಾನು ಹಾಕಿಕೊಂಡಿರುವ ಮಿತಿ ಅಡ್ಡ ಬಂದಿದೆ. ಸಾಧ್ಯವಾದರೆ ಮುಖಾಮುಖಿ ಲೇಖನಮಾಲೆಯ ಕೊನೆಯಲ್ಲಿ ಬರೆಯಲು ಪ್ರಯತ್ನಿಸುತ್ತೇನೆ.
ಮತ್ತಷ್ಟು ಓದು