ವಿಷಯದ ವಿವರಗಳಿಗೆ ದಾಟಿರಿ

Posts tagged ‘ಆಹಾರ’

14
ಡಿಸೆ

ಭಗವದ್ಗೀತೆ ಹೇಳುವ ಆಹಾರ ಆದರ್ಶ

ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

krsna_eatingಆಹಾರ ಎಂದರೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವ ಯಾವುದೇ ಪದಾರ್ಥ “ಪೋಷಕಾಂಶ (ಪ್ರೊಟೀನು), ಶರ್ಕರಪಿಷ್ಟ (ಕಾರ್ಬೊಹೈಡ್ರೇಟು) ಮತ್ತು ಕೊಬ್ಬು (ಫ್ಯಾಟ್)ಗಳನ್ನು ಅಗತ್ಯವಾಗಿ ಒಳಗೊಂಡ, ದೇಹದ ಪೋಷಣೆ, ಬೆಳವಣಿಗೆ, ಸುಭದ್ರತೆಗೆ ಕಾರಣವಾಗುವ ವಸ್ತು” ಎಂದು ವಿಶ್ವಕೋಶ ಹೇಳುತ್ತದೆ. ಆಹಾರ ವಸ್ತು ಮೂಲತಃ ಸಸ್ಯ ಅಥವಾ ಪ್ರಾಣಿ ಮೂಲದ್ದಿರಬಹುದು. ಅದರಲ್ಲಿ ಜೀವಿಗಳ ಬೆಳವಣಿಗೆಗೆ ಅಗತ್ಯವಾದ ಮೇಲ್ಕಂಡ ಧಾತುಗಳ ಜೊತೆಗೆ ವಿಟಮಿನ್ ಮತ್ತು ಖನಿಜಾಂಶಗಳು ಇದ್ದಾಗ ಮಾತ್ರ ಅಂಥ ವಸ್ತುವನ್ನು ಆಹಾರ ಎನ್ನಲಾಗುತ್ತದೆ. ಆಹಾರ ಸೇವಿಸಿದ ದೇಹದ ವ್ಯವಸ್ಥೆ ಆಹಾರದಲ್ಲಿನ ಮೂಲವಸ್ತುಗಳನ್ನು ಬೇರ್ಪಡಿಸಿ, ತನ್ನ ಕೋಶಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ಧಾತುಗಳನ್ನು ಪ್ರವಹಿಸಿ ದೇಹದಲ್ಲಿ ಶಕ್ತಿ ಸಂಚಯನವಾಗುವಂತೆ ಮಾಡುತ್ತದೆ, ದೇಹದ ಬೆಳವಣಿಗೆಗೂ ಕಾರಣವಾಗುತ್ತದೆ. ಇದು ಆಹಾರದ ಬಗ್ಗೆ ಆಧುನಿಕ ವಿಜ್ಞಾನ ಹೇಳುವ ಮಾತು. ಮತ್ತಷ್ಟು ಓದು »

8
ಆಕ್ಟೋ

ತುತ್ತನ್ನು ನಿರ್ಲಕ್ಷಿಸುವ ಮುನ್ನ

– ನವೀನ್ ನಾಯಕ್

Dont Waste Food      ಭಾರತ ಬದಲಾಗುತಿದೆ, ಇದನ್ನು ನಮ್ಮ ಮುಖ್ಯಮಂತ್ರಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ ಎಲ್ಲರೂ ದಿನಕೊಮ್ಮೆ ಮಂತ್ರದಂತೆ ಪಟಿಸುತಿದ್ದಾರೆ. ಇದರಿಂದ ನಮ್ಮ ಕಂಗಳು ಬದಲಾವಣೆಯ ಸಮಯ ಹತ್ತಿರ ಬರುತಿದೆ ಎಂದು ಹೊಸ ಕನಸು ಕಾಣತೊಡಗಿದೆ. ಇಂಥ ಸಮಯದಲ್ಲಿ ವಾಸ್ತವವನ್ನು ವಿಶ್ವಸಂಸ್ಥೆ ಬಯಲಿಗೆಳೆದು ನಮ್ಮ ಸರಕಾರ ನಡೆಸುತ್ತಿರುವವರ ಮುಖವಾಡವನ್ನು ಕಳಚಿದೆ. ವಿಶ್ವಸಂಸ್ಥೆ ನಡೆಸಿರುವ ಸಮೀಕ್ಷೆಯನ್ನು ಗಮನಿಸಿದರೆ ಭಾರತದ ಬದಲಾವಣೆಯು ಮುಂದುವರೆಯುವದು ಬಿಟ್ಟು ಹಿಮ್ಮುಖವಾಗಿ ನಡೆಯತೊಡಗಿದೆ.ಈ ಅನಿಸಿಕೆ ಏಕೆಂದರೆ ಅದರ ಸಮೀಕ್ಷೆಯ ವರದಿಯನ್ನು ನೋಡಿ.

ವಿಶ್ವಸಂಸ್ಥೆ;- ವಿಶ್ವದಲ್ಲಿ 120 ಕೋಟಿ ಜನ ಇನ್ನೂ ಕಿತ್ತು ತಿನ್ನುವ ಬಡತನದ ಬೇಗೆಯಲ್ಲಿ ದಿನವನ್ನು ಕಳೆಯುತಿದ್ದಾರೆ. ಅದರಲ್ಲಿ ಮೂರನೆಯ ಒಂದರಷ್ಟು ಅಂದರೆ 33% (39 ಕೋಟಿ 60 ಲಕ್ಷ ಜನ) ಭಾರತೀಯರಾಗಿದ್ದಾರೆ. ಇವರು ದಿನವೊಂದಕ್ಕೆ ಸುಮಾರು 65 ರುಪಾಯಿಗಳಿಗಿಂತಲೂ ಕಡಿಮೆ ಹಣದಲ್ಲಿ ಜೀವನ ದೂಡುತಿದ್ದಾರೆ. ಅವರದೇ ವರದಿ ಪ್ರಕಾರ 1981 ರಿಂದ 2010ರ ನಡುವೆ ವಿಶ್ವದ ಬಡತನದ ಪ್ರಮಾಣ ಸುಮಾರು ಅರ್ಧದಷ್ಟು ಇಳಿಕೆಯಾಗಿದೆ ಮತ್ತು ಇದಕ್ಕೆ ವಿರುದ್ಧವಾಗಿ ಅಭಿವೃದ್ಧಿಶೀಲ ಹಾಗು ಬಡರಾಷ್ಟ್ರಗಳಲ್ಲಿ

ಮತ್ತಷ್ಟು ಓದು »

23
ಏಪ್ರಿಲ್

ನನ್ನ ಊಟದ ಮೆನು ನಿರ್ಧರಿಸಲು ನೀವ್ಯಾರು?

– ರಾಕೇಶ್ ಶೆಟ್ಟಿ

ಕುಡಿಯುವ ನೀರು ಕೇಳಿದಾಗ “ನೀರು ಕೊಟ್ಟರೆ ನನ್ನ ಜಾತಿ ಕೆಡುತ್ತದೆ” ಅಂದ ಮಂಗಲ್ ಪಾಂಡೆಗೆ, “ಸ್ವಲ್ಪ ಇರು,ದನದ ಕೊಬ್ಬು ಹಚ್ಚಿರುವ ಕಾಡತೂಸು ಕಚ್ಚಲು ಹೇಳುತ್ತಾರೆ,ಆಮೇಲೆ ನಿನ್ನ ಜಾತಿ ಅದೇನಾಗುತ್ತೋ ನಾನು ನೋಡುತ್ತೇನೆ” ಅಂದಿದ್ದ ಆ ಕೆಳ ಜಾತಿಯ ಹುಡುಗ.ಮೊದಲೆ ಈ ಕಾಡತೂಸಿನ ಗುಸು-ಗುಸಿಗೆ ಗಾಯಗೊಂಡಿದ್ದವನಿಗೆ ಉಪ್ಪು ಸವರಿದಂತಾಗಿತ್ತು ಹುಡುಗನ ಮಾತು,ಕಡೆಗದು ’ಬ್ಯಾರಕ್ ಪುರ’ದಲ್ಲಿ ಕ್ರಾಂತಿಯ ಕಿಡಿಯಾಗಿ ಭಾರತವನ್ನ ವ್ಯಾಪಿಸಿಕೊಂಡಿತ್ತು.ಇತಿಹಾಸ ಅದಕ್ಕೆ ಕೊಟ್ಟ ಹೆಸರು “೧೮೫೭ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ’.

೧೭೫೭ರಲ್ಲಿ ಪ್ಲಾಸಿ ಕದನದ ನಂತರ ಭಾರತವನ್ನ ಇಡಿಯಾಗಿ ಆಪೋಶನ ತೆಗೆದುಕೊಂಡ ಬ್ರಿಟಿಶರಿಂದ ತೆಪ್ಪಗೆ ಆಳಿಸಿಕೊಳ್ಳುತಿದ್ದ ಭಾರತದ ಸತ್-ಪ್ರಜೆಗಳ ಎದೆಯೊಳಗಿನ ನೋವಿನ ಜ್ವಾಲಾಮುಖಿ ಸ್ಫೋಟವಾಗಲು ಕಾರಣವೊಂದು ಬೇಕಿತ್ತು,ಕಾರಣವಾಗಿ ಬಂದದ್ದು ದನದ ಮತ್ತು ಹಂದಿಯ ಕೊಬ್ಬು ಸವರಿದ ಎನ್-ಫಿಲ್ಡ್ ಬಂದೂಕು..!

ಹೌದು.ಭಾರತದ ಸತ್-ಪ್ರಜೆಗಳೇ ಹಾಗೆ ಹೊಟ್ಟೆಗೆ ಅನ್ನ,ತಲೆಗೊಂದು ಸೂರು ಕೊಡದ ಸರ್ಕಾರವಾದರೂ ಸರಿ,ಕೋಟಿಗಟ್ಟಲೆ ಹಣ ಲೂಟಿ ಮಾಡಿದರೂ ಸರಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.ಆದರೆ ಧರ್ಮದ ವಿಚಾರಕ್ಕಿಳಿದಿರೋ ಅಲ್ಲಿಗೆ ಮುಗಿಯಿತು..! ಇದು ಕೇವಲ ಇತಿಹಾಸದ ಕತೆಯಲ್ಲ,ತೀರಾ ಕಳೆದ ವರ್ಷ ತಸ್ಲೀಮಾ ನಸ್ರೀನ್ ಅವರು ಬರೆದ ಲೇಖನ (ಎಂದು ಹೇಳಲಾದ )ಪ್ರಕಟವಾದಾಗ ಶಿವಮೊಗ್ಗ-ಹಾಸನದಲ್ಲಿ ಏನಾಗಿತ್ತು ಅನ್ನುವುದು ನೆನಪಿದೆಯಲ್ವಾ?

ಕಳೆದ ಒಂದು ವರ್ಷಗಳಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದು ’ಗೋ-ಹತ್ಯೆ ನಿಷೇಧ’ ಮಸೂದೆ.ಸಾಕಷ್ಟು ಚರ್ಚೆಗಳು,ವಾದಗಳು ನಡೆದಿವೆ.ಬಹುಷಃ ಅದು ಎಂದಿಗೂ ಮುಗಿಯಲಾರದು.

ಮತ್ತಷ್ಟು ಓದು »

2
ಏಪ್ರಿಲ್

ಬೆಳೆ ಬೆಳೆಸಿದರಷ್ಟೆ ನೆಲದ ಒಡೆತನ

–  ಟಿ.ಎಂ.ಕೃಷ್ಣ

ಆಹಾರ ಧಾನ್ಯಗಳ ಬೆಲೆ ಒಂದೇ ಸಮನೆ ಗಗನಕ್ಕೇರುತ್ತಲೇ ಇದೆ. ಜನಸಾಮಾನ್ಯರೇನು- ಅಷ್ಟೋ ಇಷ್ಟೋ ಸ್ಥಿತಿವಂತರೇ ಜೀವನ ನಿರ್ವಹಿಸಲು ಸಾಧ್ಯವಾಗದಂತಾಗಿದೆ. ಕೆಳ, ಮದ್ಯಮ ವರ್ಗದವರು ತರಗೆಲೆಗಳಂತೆ ತತ್ತರಿಸತೊಡಗಿದ್ದಾರೆ. ಮುಂದುವರಿದ(?) ಮನುಷ್ಯನ ಅಗತ್ಯಗಳು ಅಗಣಿತವಾಗಿರಬಹುದಾದರೂ, ಮೂಲಭೂತ ಅಗತ್ಯವಾದ ಅನ್ನಾಹಾರಗಳ ಲಭ್ಯತೆ ಕಠಿಣವಾದರೆ ಏನಿದ್ದರೂ, ಯಾವುದೇ ತಂತ್ರಜ್ಞಾನವಿದ್ದರೂ ಅವೆಲ್ಲಾ ಅಪ್ರಸ್ತುತವಾಗಿಬಿಡುತ್ತವೆ. (ಚಿನ್ನದ ಕತ್ತಿ ಇದೆಯೆಂದು ಕುತ್ತಿಗೆ ಕೊಯ್ದುಕೊಳ್ಳಲಾದೀತೆ?)

ಅಗತ್ಯವಸ್ತುಗಳು ಕೈಗೆಟುಕದಂತಾಗಿರುವ ಈ ಸಂದರ್ಭದಲ್ಲಿ ಸರ್ಕಾರದ ಕಡೆ ಕೈ ತೋರಿಸುವುದು ಅನಿವಾರ್ಯವಾದರೂ, ಆಯಕಟ್ಟಿನ ಜಾಗಕ್ಕೆ ಕೈತೋರಿಸದಿರುವುದು ನಮ್ಮಲ್ಲಿನ ಪ್ರಜ್ಞಾವಂತರ ಪ್ರಜ್ಞೆಯ ಅವನತಿಯನ್ನು ಸೂಚಿಸುತ್ತದೆ. ಕುರಿಗಳು ಹಳ್ಳಕ್ಕೆ ಬಿದ್ದಂತೆ ಪ್ರತಿಯೊಬ್ಬರೂ ಪ್ರಸ್ತಾಪಿಸುತ್ತಿರುವುದು ಮಳೆ ಅಭಾವ, ಬೆಳೆನಷ್ಟ, ವ್ಯಾಪಾರಿಗಳು ಸೃಷ್ಟಿಸುತ್ತಿರುವ ಕೃತಕ ಅಭಾವ, ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಜನಸಂಖ್ಯೆಯ ಹೆಚ್ಚಳ ಇತ್ಯಾದಿ…ಈ ಎಲ್ಲ ಕಾರಣಗಳಿಗೆ ನಿದರ್ಶನಗಳಿದ್ದರೂ, ಅವೆಲ್ಲಾ ತಾತ್ಕಾಲಿಕ ಅವ್ಯವಸ್ಥೆಗಳೇ ಹೊರತು ಮೂಲಭೂತ ಸತ್ಯಗಳಲ್ಲವೇ ಅಲ್ಲ.

ಮತ್ತಷ್ಟು ಓದು »