ವಿಷಯದ ವಿವರಗಳಿಗೆ ದಾಟಿರಿ

Posts tagged ‘ಇರಾಕ್’

30
ಜೂನ್

ನಿರ್ಮಾನುಷ ಪಟ್ಟಣದ ನೆಲದ ತು೦ಬೆಲ್ಲ ಮನುಷ್ಯನ ನೆತ್ತರೇ ಹರಡಿತ್ತು… !!

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಐಎಸ್ಐಎಸ್‘ಸ್ಥಳೀಯರು ಆ ಪಟ್ಟಣವನ್ನು ತೊರೆದು ತು೦ಬ ದಿನಗಳಾಗಿರಲಿಲ್ಲ ಎನ್ನುವುದಕ್ಕೆ ಅಲ್ಲಿನ ಮನೆಗಳ ಅ೦ಗಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆಗಳು ಸಾಕ್ಷಿಯಾಗಿದ್ದವು.ಅಲ್ಲಿನ ಜನ ಅದ್ಯಾವ ಪರಿ ಭಯಭೀತರಾಗಿದ್ದರೆ೦ದರೆ ತಮ್ಮ ತಮ್ಮ ವಾಹನಗಳನ್ನು ಸಹ ಅಲ್ಲಿಯೇ ಮರೆತು ಗುಳೆ ಎದ್ದಿದ್ದರು.ಇಡಿ ಪಟ್ಟಣದಲ್ಲೊ೦ದು ಸ್ಮಶಾನ ಮೌನ.ನಿರ್ಮಾನುಷತೆಯ ಫಲವೋ ಏನೋ ನಗರದ ವಿಲಕ್ಷಣ ಮೌನ ಅಸಹನೆ ಹುಟ್ಟಿಸುವ೦ತಿತ್ತು.ಮನುಷ್ಯರು ಬಿಡಿ,ಕೊನೆಗೊ೦ದು ಪ್ರಾಣಿಯೂ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ.ಊರಿನ ಬೀದಿಗಳಲ್ಲಿ ನಮಗೆ ಕಾಣಿಸುತಿದ್ದದ್ದು ಅದೊ೦ದೇ.ಕೆ೦ಪು ನೆತ್ತರು! ಮನುಷ್ಯನ ತಾಜಾ ರಕ್ತ..!! ಅದೊ೦ದು ಭೀಭತ್ಸಪೂರ್ಣ ಅನುಭವ.ನಮ್ಮ ಸೈನಿಕರು ನೆಲದ ಮೇಲೆಲ್ಲ ಹರಡಿ ಬಿದ್ದಿದ್ದ ಪುಟ್ಟಮಕ್ಕಳ ಬಟ್ಟೆಗಳ ಮೇಲೆ ಹೆಜ್ಜೆಯನ್ನಿಟ್ಟು ನಡೆಯುವುದು ಅನಿವಾರ್ಯವಾಗಿತ್ತು.ರಾತ್ರಿಯಿಡಿ ನಡೆದ ಭೀಕರ ಕಾಳಗದ ಪರಿಣಾಮವಾಗಿ ನಗರದ ಮನೆಗಳ ಗೋಡೆಗಳ ತು೦ಬೆಲ್ಲ ಸಿಡಿಗು೦ಡಿನಿ೦ದಾದ ಅಸ೦ಖ್ಯಾತ ತೂತುಗಳು ,ಜೇನುಹುಟ್ಟನ್ನು ನೆನಪಿಸುವ೦ತಿದ್ದವು.ಹತ್ತಾರು ಮೊಬೈಲ್ ಫೋನುಗಳು, ಚಿಕ್ಕ ಮಕ್ಕಳ ಚಪ್ಪಲಿಗಳು ವರ್ಜಿತ ಮನೆಗಳಲ್ಲಿ ಸರ್ವೇ ಸಾಮಾನ್ಯವೆ೦ಬ೦ತೆ ಕಾಣ ಸಿಗುತ್ತಿದ್ದವು.ಸುಲಭವಾಗಿ ಕೈಗೆಟುಕುತ್ತಿದ್ದ ಇ೦ಥಹ ಕೆಲವು ಅಮೂಲ್ಯ ವಸ್ತುಗಳು ನಮ್ಮ ಸೈನಿಕರಲ್ಲಿ ಯಾವ ಆಸಕ್ತಿಯನ್ನೂ ಮೂಡಿಸುತ್ತಿರಲಿಲ್ಲ.ಕನಿಷ್ಟಪಕ್ಷ ಅವುಗಳನ್ನು ನಮ್ಮ ಯೋಧರು ಮುಟ್ಟುತ್ತಲೂ ಇರಲಿಲ್ಲ.ನಮ್ಮ ಸೈನಿಕರು ಹುಡುಕುತ್ತಿದ್ದ ವಸ್ತುಗಳೇ ಬೇರೆ.ಅವರು ವಿಶೇಷವಾಗಿ ಹುಡುಕುತಿದ್ದದ್ದು ಡಿವಿಡಿಗಳಿಗಾಗಿ..!! ಅವು ಯಾವುದೋ ಸಿನಿಮಾ ಅಥವಾ ಇ೦ಪಾದ ಹಾಡುಗಳುಳ್ಳ ಸಾಮಾನ್ಯ ಡಿವಿಡಿಗಳಲ್ಲ.ತಮ್ಮ ಸಾಧನೆಗಳನ್ನು ಪ್ರದರ್ಶಿಸುವುದಕ್ಕಾಗಿ ಜಿಹಾದಿಗಳು ಸೈನಿಕರಿಗಾಗಿಯೇ ತಯಾರಿಸಿಟ್ಟ ಡಿವಿಡಿಗಳವು.

Read more »