ವಿಷಯದ ವಿವರಗಳಿಗೆ ದಾಟಿರಿ

Posts tagged ‘ಇಸ್ರೇಲ್’

9
ಜುಲೈ

ಮರಳುಗಾಡಿನಲ್ಲಿ ಹಸಿರನ್ನೊತ್ತಿಸಿದ ದೇಶವೊಂದು ನಡೆದ ಹಾದಿಯಲ್ಲಿ…

– ಸುಜಿತ್ ಕುಮಾರ್

1947….

ಅರಬ್ಬರ ಹಾಗು ಜ್ಯೂವರ (ಯಹೂದಿ) ಕಿತ್ತಾಟವನ್ನು ನೋಡಲಾರದೆ ವಿಶ್ವಸಂಸ್ಥೆ ಅಂದು ಯಹೂದಿಗಳಿಗೊಂದಷ್ಟು ಹಾಗು ಅರಬ್ಬರಿಗೊಂದಿಷ್ಟು ನೆಲವನ್ನು ಪಾಲುಮಾಡಿ ಕೊಟ್ಟಿತ್ತು. ಇಬ್ಬರ ಕಿತ್ತಾಟದ ನಡುವೆ ಮೂರನೆಯವರ ಉಸಾಬರಿಯನ್ನು ಒಪ್ಪದ ಅರಬ್ ಪಡೆ (ಈಜಿಪ್ಟ್, ಸಿರಿಯಾ, ಜೋರ್ಡನ್, ಲೆಬನಾನ್) ತಮ್ಮ ಪಾಲು ಸಣ್ಣದೆಂದು ಕೊರಗಿ ವಿಶ್ವಸಂಸ್ಥೆ ಗೊತ್ತುಮಾಡಿದ್ದ ಯಹೂದಿಯರ ಅಷ್ಟೂ ನೆಲವನ್ನು ನುಂಗಿ ಹಾಕಲು ರಣತಂತ್ರವೊಂದನ್ನು ರೂಪಿಸಿದವು. ಜಾಗತಿಕ ಮಟ್ಟದಲ್ಲಿ ತನ್ನ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಿರುವಷ್ಟರಲ್ಲೇ ವೈರಿ ಸೇನೆ ಯಹೂದಿಯರ ಪ್ರದೇಶವನ್ನು ಮೂರು ದಿಕ್ಕಿನಿಂದಲೂ ಆವರಿಸಿತು. ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ತನ್ನೆಲ್ಲಾ ಶಕ್ತಿಯನ್ನು ಬಸಿದು ಹೋರಾಡಿದ ಪಡೆ, ವೈರಿಸೇನೆ ಕನಸ್ಸಿನಲ್ಲಿಯೂ ಊಹಿಸಲಾಗದ ಮಟ್ಟಿಗೆ ಸದೆಬಡಿಯಿತು. ಯುದ್ಧದಲ್ಲಿ ಸೋತು ಓಡತೊಡಗಿದ್ದ ವೈರಿಪಡೆಯ ಒಂದೊಂದೇ ಪ್ರದೇಶಗಳನ್ನು ‘ಗೆದ್ದ’ ಯಹೂದಿಯರು 1948 ರಲ್ಲಿ ಹೊಸ ದೇಶವೊಂದನ್ನು ಹುಟ್ಟುಹಾಕಿ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟರು. ಇಂದು ಯುದ್ಧ ಸಾಮಗ್ರಿಗಳ ತಯಾರಿ ಹಾಗು ಅವುಗಳ ರಪ್ತಿನಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ, ಹಾಗು ಅಭಿವೃದ್ದಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಝಳಪಿಸುವ ಆ ದೇಶದ ಹೆಸರೇ ಇಸ್ರೇಲ್. ಮತ್ತಷ್ಟು ಓದು »

14
ಡಿಸೆ

ಆಪರೇಷನ್ ವ್ರಾತ್ ಆಫ್ ಗಾಡ್ ಮತ್ತು ಉಕ್ಕಿನ ಮಹಿಳೆ ಗೋಲ್ಡಾ ಮೈಯರ್

– ತಾರಾನಾಥ್ ಎಸ್.ಎನ್

ಗೋಲ್ಡಾ ಮೈಯರ್” ನಾನು ಸಮಯವನ್ನು ಆಳುತ್ತೇನೆ ಹೊರತು ಸಮಯ ನನ್ನನಲ್ಲ.”

ಇಸ್ರೇಲ್ ಎಂದರೆ ತಕ್ಷಣ ನೆನಪಾಗುವುದು ಯುದ್ದ-ಹೋರಾಟ ಅಥವಾ ಅದರ ರಾಷ್ಟ್ರಭಕ್ತಿ.2000 ವರ್ಷಗಳಿಂದ ತಾಯಿನೆಲೆ ಬಿಟ್ಟು ಅಲೆಮಾರಿಯಾದ ಯಹೂದಿ ಜನಾಂಗ ಇಂದು ನೆಲೆಸಿರುವ ನಾಡು. 20 ಶತಮಾನಗಳು ಅವರಿವರಿಂದ ತುಳಿತಕ್ಕೆ ಒಳಗಾಗಿ ವಿಶ್ವದಾದ್ಯಂತ ಹಂಚಿ ಹೋದ ಜನಾಂಗ ಮತ್ತೆ ಒಂದುಗೂಡಿದ ದೇಶ. ಜರ್ಮನಿ ಸರ್ವಾಧಿಕಾರಿ ಹಿಟ್ಲರನ ವಿಷಾನೀಲಕ್ಕೆ ತಮ್ಮವರನ್ನು ಕಳೆದುಕೊಂಡ ನೋವಲ್ಲಿ ಮತ್ತೆ ದೇಶಕಟ್ಟಿದ ಛಲಗಾರರ ದೇಶ. ಸಿಕ್ಕ ಸ್ವಾತಂತ್ಯವನ್ನು ಉಳಿಸಿಕೊಳ್ಳಲು,ಸುತ್ತ ನೆರೆದಿರುವ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸದಾ ಎಚ್ಚರಿಕೆಯಿಂದ ಇರುವ ದೇಶ. ಮರುಭೂಮಿಯಲ್ಲಿ ಹಸಿರು ಬೆಳೆದ ಮಾಯಗಾರರ ನಾಡು.ಇಂಥಹ ನಾಡಿನ ಧೀರ ಮಹಿಳೆಯೇ ಗೋಲ್ಡಾ ಮೈಯರ್.

ಗೋಲ್ಡಾ ಮೈಯರ್ ಇಂದಿನ ಉಕ್ರೇನ್ ದೇಶದಲ್ಲಿರುವ ಕೀವ್ ಪಟ್ಟಣದಲ್ಲಿ ಮೇ 3 1898ರಲ್ಲಿ ಜನಿಸಿದರು. ತಂದೆ ಮೋಶೆ ಮಬೋವಿಚ್ಚ್ ಒಬ್ಬ ಬಡಗಿ. ಅವರು ನಂತರ ಉದ್ಯೋಗ ಹುಡುಕಿ ಅಮೆರಿಕಕ್ಕೆ ಹೊರಟರು.ಅಮೇರಿಕಾದಲ್ಲಿ ಓದು ಮುಗಿಸಿದ ಗೋಲ್ಡಾ ಕೆಲಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. 1917ರಲ್ಲಿ ಮಾರಿಸ್ ಮೆಯೇರ್ಸೋನ್ ಎನ್ನುವರನ್ನು ಮದುವೆಯಾದರು. 1921ರಲ್ಲಿ ಪ್ಯಾಲೆಸ್ಟೈನ್ನಲ್ಲಿ ನೆಲೆಯಾದರು. ಅಲ್ಲಿ ಕೃಷಿ ಮಾಡಿ ನೆಲೆಸುವುದು ಅವರ ಇಚ್ಛೆಯಾಗಿತ್ತು ಅವರಿಗೆ 2 ಜನ ಮಕ್ಕಳು ಜನಿಸಿದವು. ಇಲ್ಲಿಗೆ ಗೋಲ್ಡಾಳ ಬದುಕಿನ ಒಂದು ಘಟ್ಟ ಮುಗಿದಿತ್ತು. ಮತ್ತೆ ಅಮೇರಿಕಕ್ಕೆ ಹೋದ ಗೋಲ್ಡಾ ತಮ್ಮ ಬದುಕನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು. ಮೊದಲಿಗೆ ಪ್ಯಾಲೆಸ್ಟೈನ್ ನಲ್ಲಿ ಯಹೂದಿಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು.

ಬದಲಾದ ಸನ್ನಿವೇಶದಲ್ಲಿ ಹಿಟ್ಲರನ ಕಿರುಕುಳಕ್ಕೆ ನಲುಗಿದ ಯಹೂದಿಗಳಿಗೆ ಅಮೇರಿಕಾ ದೇಶ ಕಟ್ಟುವ ಭರವಸೆ ನೀಡಿತು. 1946ರಲ್ಲಿ ಗೋಲ್ಡಾ ಯಹೂದಿ ಹೋರಾಟ ವೇದಿಕೆಯ ರಾಜಕೀಯ ವಿಭಾಗದ ಮುಖ್ಯಸ್ಥರಾದರು. ದೇಶ ರಚಿಸುವ ಮಾತುಕತೆಗೆ ಹೋರಾಟಗಾರರು ಹಾಗು ಬ್ರಿಟನ್ ನಡುವಿನ ಕೊಂಡಿಯಾದರು. ಜೂನ್ 1948ರ ಹೊತ್ತಿಗೆ ಹೊಸ ದೇಶ ಇಸ್ರೇಲ್ ರಚನೆಗೆ ನೀಲನಕ್ಷೆ ಸಿದ್ದವಾದವು. ಸುತ್ತಮುತ್ತ ಶತ್ರುಗಳನ್ನು ಹೊಂದಿರುವ ಕಾರಣ ರಕ್ಷಣಾ ಉಪಕರಣಗಳ ಖರೀದಿಗೆ ಅಗತ್ಯವಾಗಿ 8 ಮಿಲಿಯನ್ ಡಾಲರ್ ಬೇಕಾಗಿತ್ತು. ಇದಕ್ಕಾಗಿ ಇಸ್ರೇಲ್ ನಾಯಕ ಬೆನ್ ಗುರಿಯನ್ ಅಮೇರಿಕಾಕ್ಕೆ ಹೋಗಲು ಯೋಚಿಸಿದರು. ಯುದ್ದ ನಡೆಯುವ ಸಂದರ್ಭ ಇರುವುದರಿಂದ ಅವರು ದೇಶ ಬಿಟ್ಟು ಹೋಗುವುದು ತರವಲ್ಲ ಎಂದು ಯೋಚಿಸಿದ ಗೋಲ್ಡಾ ತಾವು ಹೋದರು. ಅಮೇರಿಕಾದಲ್ಲಿ ನೆಲೆಸಿರುವ ಯಹೂದಿಗಳಿಂದ ಧನ ಸಂಗ್ರಹಿಸಲು ನಿರ್ಧರಿಸಿದರು.ತಾಯಿನೆಲಕ್ಕೆ ಒದಗಿದ ದುಸ್ಥಿತಿಯನ್ನು ಮನ ಮಿಡಿಯುವಂತೆ ವಿವರಿಸಿ 50 ಮಿಲಿಯನ್ ಡಾಲರ್ ಸಂಗ್ರಹಿಸಿ ನಾಡಿಗೆ ಮರಳಿದಾಗ ಅವರಿಗೆ ಭವ್ಯ ಸ್ವಾಗತ ಸಿಕ್ಕಿತ್ತು. ಸ್ವತಹ ಬೆನ್ ಗುರಿಯನ್ ಅವರೇ “ಇಸ್ರೇಲ್ ಎನ್ನುವ ದೇಶವನ್ನು ಸಾಧ್ಯವಾಗಿಸಿದ ಮಹಿಳೆ” ಎಂದು ಘೋಷಿಸಿದರು. ಮೇ 14, 1948 ರಲ್ಲಿ ಇಸ್ರೇಲ್ ಸ್ವಾತಂತ್ರ ಘೋಷಣೆಗೆ ಸಹಿ ಹಾಕಿದ 24 ಮಂದಿಯಲ್ಲಿ ಗೋಲ್ಡಾ ಒಬ್ಬರಾಗಿದ್ದರು. ಮರುದಿನವೇ ಅರಬ್ ದೇಶಗಳು ಇಸ್ರೇಲ್ ನತ್ತ ದಾಳಿಯಿಕ್ಕಿದವು. ಇಸ್ರೇಲಿಗರು ಸಾಹಸದಿಂದ ಅರಬ್ಬರನ್ನು ಸೋಲಿಸಿ 2000 ವರ್ಷಗಳಿಂದ ಕಳೆದುಹೋಗಿದ್ದ ತಾಯಿನೆಲವನ್ನು ಮತ್ತೆ ಪಡೆದರು.
ಮತ್ತಷ್ಟು ಓದು »

6
ಆಗಸ್ಟ್

ಇಸ್ರೇಲ್ ಯುದ್ಧ ಹಮಾಸ್ ವಿರುದ್ಧವೇ ಹೊರತು ಗಾಜಾ ಮತ್ತು ಪ್ಯಾಲೆಸ್ತೈನಿಗಳ ಮೇಲಲ್ಲ

– ಅಶ್ವಿನ್ ಅಮಿನ್

ಇಸ್ರೇಲ್“Save Gaza… Save Palestine”
“ಗಾಜಾ ಉಳಿಸಿ, ಇಸ್ರೇಲ್ ಅಳಿಸಿ”
“Israel will Fail.. Palestine will  raise..”

ಭಾರತದಲ್ಲಿ ಕೆಲ ಸಂಘಟನೆಗಳು ರಸ್ತೆಬದಿಗಳ ಗೋಡೆಗಳಲ್ಲಿ, ಸಾಮಾಜಿಕ ತಾಣಗಳ ಗೋಡೆಗಳಲ್ಲಿ ಮೇಲ್ಕಂಡ ಘೋಷಣೆಗಳನ್ನೊಳಗೊಂಡ ಪೋಸ್ಟರ್ ಅಭಿಯಾನ ಪ್ರಾರಂಭಿಸಿರುವುದನ್ನು ಗಮನಿಸಿರುತ್ತೀರಿ.

ಆದರೆ ಅವರ ಈ ನೈತಿಕತೆ ಮುಂಬೈ ಸರಣಿ ಸ್ಪೋಟ, ತಾಜ್ ಹೋಟೆಲ್ ಧಾಳಿ, ಸಂಸತ್ ಮೇಲಿನ ಧಾಳಿ, ದೇಶದ ವಿವಿದೆಡೆ ನಡೆದ ಬಾಂಬ್ ಧಾಳಿಗಳಲ್ಲಿ ಅದೆಷ್ಟೋ ಮುಗ್ಧ ಭಾರತೀಯರು ಬಲಿಯಾಗುವಾಗ ಎಲ್ಲಿ ಅಡಗಿ ಹೋಗಿತ್ತು ಎಂಬುದು ಮಾತ್ರ  ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.

ಬಹುಶಃ ಸತ್ತು ಹೋಗಿರುವವರು ಭಾರತೀಯರು ಮತ್ತು ಧಾಳಿ ಸಂಘಟಿಸಿದವರು ನಮ್ಮ ಸಮಾಜದವರು ಎಂಬ ಅಭಿಮಾನ ಇದ್ದಿತ್ತೇನೋ.. !

ಅಷ್ಟಕ್ಕೂ ಈ “Save Gaza.. Save Palestine” ಅನ್ನುವ  ಕೂಗು ಯಾಕೆ ಬೇಕು..?
ನಿಜಕ್ಕೂ ಪ್ಯಾಲೆಸ್ತೀನ್ ಅಮಾಯಕವೇ..? ಇಸ್ರೇಲ್ ಸರ್ವಾಧಿಕಾರಿಯೇ..?

ಖಂಡಿತ ಅಲ್ಲ..

ಈ ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಮಸ್ಯೆ ಇಸ್ರೇಲ್ ಅಸ್ತಿತ್ವಕ್ಕೆ ಬಂದಾಗಿನಿಂದ ಇದೆ. ವಿಶ್ವದ ಏಕೈಕ ಯಹೂದಿ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದ ಇಸ್ರೇಲ್ ಅನ್ನು ಯಹೂದಿಗಳು ಧಾರ್ಮಿಕವಾಗಿ ತಮ್ಮ ಪವಿತ್ರ ಭೂಮಿ ಎಂದು ನಂಬುತ್ತಾರೆ. ಆ ನಂಬುಗೆಯೇ ವಿಶ್ವದಾದ್ಯಂತ ಹರಡಿದ್ದ ಯಹೂದಿಗಳನ್ನು ಇಸ್ರೇಲ್ ನಲ್ಲಿ ಸೇರಿಸಿತು. ಈ ಹಿಂದೆ ಇಸ್ಲಾಂ ಮತಾಂತರ ಹಾಗು ದೌರ್ಜನ್ಯಕ್ಕೆ ಹೆದರಿ ಊರು ತೊರೆದಿದ್ದ ಯಹೂದಿಗಳೆಲ್ಲ ಕ್ರಮೇಣ ಇಸ್ರೇಲ್ ಗೆ ವಾಪಸಾದರು. ಕಾಲಾಂತರದಲ್ಲಿ ಅದೇ ಇಸ್ರೇಲ್ ರಾಷ್ಟ್ರವಾಯಿತು. ಮುಂದೆ ವಿಶ್ವ ಸಂಸ್ಥೆಯು 1948 ರಲ್ಲಿ ಇಸ್ರೇಲ್ ಅನ್ನು ಅಧಿಕೃತ ದೇಶ ಎಂದು ಘೋಷಿಸುವುದರೊಂದಿಗೆ ಇಸ್ರೇಲ್ ನ ಅಸ್ತಿತ್ವಕ್ಕೆ ಅಧಿಕೃತ ಮುದ್ರೆ ಬಿತ್ತು.

ಮತ್ತಷ್ಟು ಓದು »

19
ಸೆಪ್ಟೆಂ

ಸಿರಿಯಾದಲ್ಲಿ ಶಬ್ದವಿಲ್ಲದ ಯುದ್ಧವಂತೂ ನಡೆಯಲಿದೆ

– ಎಸ್.ಸುನಿಲ್ ಕುಮಾರ್

ರಾಷ್ಟೀಯ ಪ್ರಧಾನ ಕಾರ್ಯದರ್ಶಿ, YOUTH FOR NATION

ಸೈಬರ್ ಯುದ್ಧಈ ಬಾರಿ ಸಿರಿಯಾ ಮೇಲೆ ಕ್ಷಿಪಣಿ ಯುದ್ಧವೇರ್ಪಟ್ಟರೂ, ಕ್ಷಿಪಣಿ ಬಳಸದೇ ಇದ್ದರೂ ಸೈಬರ್ ಯುದ್ಧವಂತೂ ನಿಶ್ಚಿತವಾಗಿ ನಡೆಯಲಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಯಾರ ಸಮ್ಮತಿಗೂ ಕಾಯಬೇಕಿಲ್ಲ. ಏಕೆಂದರೆ ಇದೊಂದು ಮಾಯಾಯುದ್ಧ. ಇಲ್ಲಿ ಶತ್ರು ಎಲ್ಲಿರುವನು ಎಂದು ತಿಳಿಯುವುದೇ ಇಲ್ಲ. ದಾಳಿ ನಡೆಯುವುದೆ ಗೊತ್ತಾಗುವುದಿಲ್ಲ, ದಾಳಿ ಎಂದು ಶುರುವಾತು, ಎಲ್ಲಿ ಮುಗಿತು ಒಂದೂ ತಿಳಿಯುವುದಿಲ್ಲ. ತಿಳಿಯುವುದೊಂದೆ ಅದರಿಂದಾಗುವ ಹಾನಿ ಮಾತ್ರ, ಸೈಬರ್ ಯುದ್ಧದ ಪರಿಣಾಮ ಅತ್ಯಂತ ಅಪಾಯಕಾರಿ.

ಜೂನ್ ೨೦೧೦ ರಲ್ಲಿ ಇರಾನಿನ ಅಣುಸ್ಥಾವರಗಳು ಸ್ಟಕ್ಸ್‌ನೆಟ್ ಎಂಬ ಕಂಪ್ಯೂಟರ್ ವೈರಸ್ ದಾಳಿಂದ ನಿಷ್ಕ್ರಿಯಗೊಳ್ಳುತ್ತದೆ. ನಿರ್ದಿಷ್ಟವಾಗಿ ಅಣುಸ್ಥಾವರದ ಸೆಂಟ್ರಿಫ್ಯೂಜ್‌ಗಳನ್ನೆ ಗುರಿಯಾಗಿರಿಸಿ ಇರಾನಿನ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದ ಸ್ಟಕ್ಸ್‌ನೆಟ್  ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನಿನ ವಿರುದ್ಧ ಬಳಸಲು ತಯಾರಿಸಿದ ಸೈಬರ್ ಅಸ್ತ್ರ ಎಂದು ಜೂನ್ ೧. ೨೦೧೨ ರಂದು “ನ್ಯೂಯಾರ್ಕ್ ಟೈಮ್ಸ್” ವರದಿ ಮಾಡುತ್ತದೆ. ಹಾಗೆಯೆ ಈ ಕಾರ್ಯಾಚರಣೆಯ ಹೆಸರು “ಆಪರೇಷನ್ ಒಲಂಪಿಕ್ ಗೇಮ್ಸ್” ಎಂಬುದನ್ನು ಉಲ್ಲೇಖಿಸುತ್ತದೆ.
ದೇಶವೊಂದು ಯಾವುದೇ ಸೈನಿಕರನ್ನು ಕಳುಹಿಸದೆ, ವಾಯುಪಡೆ ನೌಕಾಪಡೆಗಳನ್ನು ನಿಯೋಜಿಸದೆ ಗುಂಡಿನ ಆರ್ಭಟವೂ ಇಲ್ಲದೆ ಹೇಗೆ ಯುದ್ಧ ಮಾಡಬಹುದು ಹಾಗೂ ಇದರಿಂದ ಹೇಗೆ ಶತ್ರು ರಾಷ್ಟ್ರವನ್ನು ಹಣೆಯಬಹುದೆಂಬ ಪಾಠವನ್ನು ಅಮೆರಿಕಾ ಮತ್ತು ಇಸ್ರೇಲ್ ಜಗತ್ತಿಗೆ ಹೇಳಿಕೊಟ್ಟವು.

ಮತ್ತಷ್ಟು ಓದು »