ವಿಷಯದ ವಿವರಗಳಿಗೆ ದಾಟಿರಿ

Posts tagged ‘ಉಗ್ರಗಾಮಿ’

22
ಫೆಬ್ರ

ಪುಲ್ವಾಮ ದಾಳಿ: ಭಾರತ ಕಲಿತ ಪಾಠ

– ವರುಣ್ ಕುಮಾರ್

Pulwama-attack-5ಫೆಬ್ರವರಿ ೧೪ನೇ ತಾರೀಖು ಭಾರತದ ಸೈನಿಕರ ಪಾಲಿಗೆ ಅತ್ಯಂತ ಕರಾಳ ದಿನ. ಕಳೆದ ದಶಕದಲ್ಲಿಯೇ ನಡೆದ ಅತ್ಯಂತ ಘೋರ ಉಗ್ರರ ದಾಳಿ ಅಮಾಯಕ ಸೈನಿಕರ ಸಾವಿಗೆ ಕಾರಣವಾಗಿ ಇಡೀ ದೇಶವೇ ಮಮ್ಮಲ ಮರುಗಿತು. ಪ್ರಪಂಚದೆಲ್ಲೆಡೆಯಿಂದ ಈ ಘಟನೆಯ ಬಗ್ಗೆ ಖಂಡನೆ ವ್ಯಕ್ತವಾಗಿ ಭಾರತದ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ಬೆಂಬಲವನ್ನು ವ್ಯಕ್ತಪಡಿಸಿದರು. ಈ ದಾಳಿಯ ಬಳಿಕ ಭಾರತದಲ್ಲಿ ನಡೆದ ಬೆಳವಣಿಗೆಗಳ ಹಾಗೂ ಈ ದಾಳಿಯಿಂದ ಭಾರತ ಕಲಿಯಬೇಕಾದ ಪಾಠಗಳೇನು ಎಂಬುದಾಗಿ ವಿಶ್ಲೇಷಿಸೋಣ.

ಭಾರತದೊಳಗಿನ ಉಗ್ರರು:

ಹೌದಲ್ಲವೇ, ನಮಗೆ ಈ ಉಗ್ರರದಾಳಿಯ ಬಳಿಕ ಹಲವಾರು ಉಗ್ರರು ನಮ್ಮ‌ ದೇಶದೊಳಗೆ ಅಣಬೆಗಳಂತೆ ಹುಟ್ಟಿಕೊಳ್ಳತೊಡಗಿದರು. ಪಾಕಿಸ್ತಾನ್ ಜಿಂದಾಬಾದ್, ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಇತ್ಯಾದಿ ಬರಹಗಳನ್ನು ಒಳಗೊಂಡ ಅನೇಕ ದೇಶದ್ರೋಹಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ‌ ಹಾಕಲಾರಂಭಿಸಿದರು. ಪಂಜಾಬ್ ಎಂದಿಗೂ ದೇಶಪ್ರೇಮಿಗಳನ್ನು ಕೊಟ್ಟಂತಹ ರಾಜ್ಯ ಆದರೆ ಅದೇ ರಾಜ್ಯದ ಸಚಿವನಾದ ಸಿಧುರವರು ಪಾಕಿಸ್ತಾನದ ಜೊತೆ ಮಾತುಕತೆ ಭಾರತ ಮುಂದಾಗಬೇಕು ಎಂದು ಸಲಹೆ ನೀಡಿದರು. ಇದರ ಬೆನ್ನಿಗೆ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಪ್ರಕಾಶ್ ರೈ ಒಂದು ಹಂತದಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದು ಬೆಂಬಲ‌ ನೀಡಿದರು. ಆದರೆ ಮರುದಿನ ಬಿಜೆಪಿಯ ಬಗ್ಗೆ ಮೋದಿಯವರ ಬಗ್ಗೆ ಟೀಕಿಸಿ ಘಟನೆಯನ್ನು ರಾಜಕೀಯಗೊಳಿಸಿದರು. ಕಮಲ್ ಹಾಸನ್ ಅಂತಹ ಸ್ವಯಂಘೋಷಿತ ನಾಯಕರು ಸೈನಿಕರು ಸಾಯಲೆಂದೇ‌ ಸೇನೆಗೆ ಸೇರುತ್ತಾರೆ ಎಂದು ಹೇಳಿಕೆಗಳನ್ನು ಕೊಟ್ಟಾಗ ಇದು ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಯಾವ ರೀತಿ ನೋವಾಗಬಹುದು ಎಂಬ ಕಾಳಜಿಯಿಲ್ಲದೆ ಮಾತನಾಡಿದರು. ಮತ್ತಷ್ಟು ಓದು »

21
ಆಕ್ಟೋ

ಹೊರಾಟಗಾರ್ತಿ ಮಲಾಲಾ ಮತ್ತು ಮಿಥ್ಯಾ ಪ್ರಗತಿಪರರ ಭ೦ಡತನ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

Malalaaಪ್ರತಿವರ್ಷದ೦ತೇ ಈ ಬಾರಿಯ ನೊಬೆಲ್ ಪ್ರಶಸ್ತಿಯ ಘೊಷಣೆಯಾಗಿದೆ.ಅದರಲ್ಲೂ ಈ ಬಾರಿ ಶಾ೦ತಿಗಾಗಿ ಕೊಡುವ ನೊಬೆಲ್ ಪ್ರಶಸ್ತಿ ಚರ್ಚಿತ ವಿಷಯವಾಗಿತ್ತು. .ಪಾಕಿಸ್ತಾನದ ಪುಟ್ಟ,ದಿಟ್ಟ ಹೋರಾಟಗಾರ್ತಿ ಮಲಾಲಾ ಯುಸುಫಜಾಯ್ ನೊಬೆಲ್ ಶಾ೦ತಿ ಪ್ರಶಸ್ತಿಯ ಕಣದಲ್ಲಿದ್ದು ಆಸಕ್ತಿಗೆ ಕಾರಣವಾಗಿತ್ತು.ಆ ಪುಟ್ಟ ಹುಡುಗಿ ತೋರಿದ ದಿಟ್ಟತನಕ್ಕೆ ಆಕೆಗೆ ನೊಬೆಲ್ ಸಿಗಲಿ ಎ೦ಬುದು ಬಹುತೇಕರ ಆಶಯ ಮತ್ತು ಅಭಿಪ್ರಾಯವಾಗಿತ್ತು.ಆದರೆ ಕೊನೆಯ ಕ್ಷಣಗಳಲ್ಲಿ ಆಕೆಗೆ ನೊಬೆಲ್ ಪ್ರಶಸ್ತಿ ತಪ್ಪಿದ್ದು ಅನೇಕರಲ್ಲಿ ನಿರಾಸೆಯು೦ಟು ಮಾಡಿತು.ಪರಮ ಕ೦ಟಕ ರಾಷ್ಟ್ರ ಪಾಕಿಸ್ತಾನದ ಪ್ರಜೆಯಾಗಿದ್ದರೂ ಈ ಚಿಕ್ಕ ವಯಸ್ಸಿನಲ್ಲಿ ಆಕೆ ತೋರಿದ ಧೈರ್ಯಕ್ಕೆ ಅಕೆಗೆ ನೊಬೆಲ್ ಸಿಗಲೆ೦ದು ಅನೇಕ ಭಾರತೀಯರೂ ಬಯಸಿದ್ದರೆ೦ಬುದು ಸುಳ್ಳಲ್ಲ

ಈಗಾಗಲೇ ಮಲಾಲಾ ವಿಶ್ವದಾದ್ಯ೦ತ ಮನೆಮಾತಾಗಿದ್ದರೂ ಆಕೆಯ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದಿದ್ದವರಿಗೆ ಕೊ೦ಚ ಮಾಹಿತಿ ನೀಡುತ್ತಿದ್ದೇನೆ.ಹದಿನಾರು ವರ್ಷದ ಮಲಾಲಾ ಯುಸುಫಜಾಯ್ ಮೂಲತ: ಪಾಕಿಸ್ತಾನದ ತಾಲಿಬಾನ್ ಪೀಡಿತ ಸ್ವಾಟ್ ಕಣಿವೆಯವಳು.ತಾಲಿಬಾನಿ ಆಡಳಿತದಲ್ಲಿನ ಈ ಪ್ರದೇಶದಲ್ಲಿ ತಾಲಿಬಾನ್ ಕರ್ಮಠ ಇಸ್ಲಾ೦ ಸ೦ಪ್ರದಾಯಗಳನ್ನು ,ಕಾನೂನುಗಳನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದೆ.ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ ಎ೦ಬ ಕಾನೂನನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದ್ದರು.ಅಲ್ಲಿ ತಾಲಿಬಾನಿಗಳ ನಿರ್ಣಯವನ್ನು ಯಾರೂ ಪ್ರಶ್ನಿಸುವ೦ತಿರಲಿಲ್ಲ.ಆದರೆ ಈ ಪುಟ್ಟ ಬಾಲಕಿ ಮಲಾಲಾ ಈ ಅನ್ಯಾಯವನ್ನು ವಿರೋಧಿಸುವ ನಿರ್ಧಾರಕ್ಕೆ ಬ೦ದಳು.ತನ್ನ ಹನ್ನೊ೦ದನೆಯ ವಯಸ್ಸಿನಲ್ಲಿ ಬಿಬಿಸಿಯ ಅ೦ತರ್ಜಾಲ ತಾಣಗಳಿಗೆ ಮಲಾಲಾ ಗುಪ್ತ ನಾಮದಲ್ಲಿ ಬ್ಲಾಗ್ ಬರೆಯಲಾರ೦ಭಿಸಿದಳು.ಬಿಬಿಸಿಯ೦ತಹ ವಿಶ್ವಮಾನ್ಯ ಸ೦ಸ್ಥೆಗೆ ,ಸ್ವಾಟ್ ನಲ್ಲಿ ತಾಲಿಬಾನಿಗಳ ಅರಾಜಕತೆ,ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿವರಿಸುವ ಪ್ರಯತ್ನ ಮಾಡಿದಳು. ಮಹಿಳಾ ಶಿಕ್ಷಣದ ಬಗ್ಗೆ ತನ್ನ ಅಭಿಪ್ರಾಯವನ್ನು ವಿಶ್ವಕ್ಕೆ ಅರುಹಿದಳು.ಚಿಕ್ಕ ವಯಸ್ಸಿನಲ್ಲಿಯೇ ಆಕೆಯ ವೈಚಾರಿಕತೆಗೆ ತಲೆದೂಗಿದ ನ್ಯೂಯಾರ್ಕ್ ಟೈಮ್ಸ್ ಆಕೆಯ ಬಗ್ಗೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿತು.ಅಲ್ಲಿ೦ದ ವಿಶ್ವ ಪ್ರಸಿದ್ದಳಾದ ಆಕೆ ಮುಕ್ತವಾಗಿ ಮಾಧ್ಯಮಗಳಲ್ಲಿ,ಪತ್ರಿಕೆಗಳಲ್ಲಿ ಸ೦ದರ್ಶನಗಳನ್ನು ನೀಡತೊಡಗಿದಳು.ಆಗ ಎಚ್ಚೆತ್ತುಕೊ೦ಡ ಪಾಕಿಸ್ತಾನದ ಸೈನ್ಯ ಸ್ವಾಟ್ ಕಣಿವೆಯ ಮೇಲೆ ಕದನ ಘೋಷಿಸಿತು. ’ಎರಡನೇ ಸ್ವಾಟ್ ಯುದ್ದ’ ಎ೦ದೇ ಪ್ರಸಿದ್ಧವಾದ ಈ ಯುದ್ದದಲ್ಲಿ ಪಾಕಿಸ್ತಾನಿ ಸೈನ್ಯ ಸ್ವಾಟ್ ಕಣಿವೆಯನ್ನು ಮರಳಿ ತನ್ನ ವಶಕ್ಕೆ ಪಡೆಯಿತು.ಅನೇಕ ತಾಲಿಬಾನಿ ಕಮಾ೦ಡರಗಳ ಬ೦ಧನವಾಯ್ತು.

ಮತ್ತಷ್ಟು ಓದು »

19
ಆಕ್ಟೋ

ಮಲಾಲಾ ~ ನಿಜವಾದ ಕಥೆ(ಪುರಾವೆಗಳ ಸಹಿತ)

ಮೂಲ : ನದೀಂ ಎಫ್ ಪರಾಚ

ಅನುವಾದ : ನಿವೇದಿತ ಥಾಡಣಿ

Malalaಸೆಪ್ಟೆಂಬರ್ 2012 ರಲ್ಲಿ, ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಒಬ್ಬ ತಾಲಿಬಾನ್ ಕಾರ್ಯಕರ್ತ  15 ವರ್ಷದ ಶಾಲಾ ಹುಡುಗಿಯ ಮುಖ ಮತ್ತು ತಲೆಗೆ  ಗುಂಡು ಹಾರಿಸಿದ್ದಾನೆ  ಎಂದು ವರದಿಯಾಯಿತು.ಈ ದಾಳಿ ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಈ ಸುದ್ದಿಗೆ  ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ತುಂಬಾ ಮಹತ್ವ ನೀಡಲಾಯಿತು.

ಅವಳೇ ಮಲಾಲಾ.

ಪಾಕಿಸ್ತಾನದಲ್ಲಿ ನಂತರ ಇಂಗ್ಲೆಂಡ್ ನಲ್ಲಿ  ವೈದ್ಯರು ಮಲಾಲಾಳ  ಮುಖ ಮತ್ತು ತಲೆಯ ಮೇಲೆ ಅನೇಕ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದರೂ ಅವಳು ಉಳಿಯುವ ಸಾಧ್ಯತೆ ಇಲ್ಲ ಎಂದು ವರದಿಯಾಗಿತ್ತು.

ಇಂದು ಮಲಾಲಾ ಯುಕೆಯಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಮಹಿಳೆಯರ ಶಿಕ್ಷಣದ ಸಲುವಾಗಿ ಅದರಲ್ಲೂ ವಿಶೇಷವಾಗಿ ತೀವ್ರವಾದಿಗಳು ಮತ್ತು ಉಗ್ರಗಾಮಿಗಳು ಬಾಲಕಿಯರ ಶಾಲೆಗಳನ್ನು ಹಾರಿಸಿದ ಪ್ರದೇಶಗಳಲ್ಲಿ ಕೆಲಸ ಮುಂದುವರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಇದು ಪೂರ್ತಿ ಕಥೆಯ ಕೇವಲ ಒಂದು ಭಾಗ ಮಾತ್ರ. ಆದರೆ ನಿಜವಾಗಿಯೂ ಗುಂಡಿಕ್ಕಿದ  ದಿನ ಏನಾಯಿತು ಎಂದು  ಮಲಾಲಾ ಹೇಳಿದ್ದ ಪೂರ್ತಿ ವರದಿಯಲ್ಲಿ ಅರ್ಧದಷ್ಟು ವರದಿಯನ್ನು ಪಾಶ್ಚಾತ್ಯ ಮಾಧ್ಯಮಗಳು ಮುಚ್ಚಿ ಹಾಕಿವೆ.

ಮತ್ತಷ್ಟು ಓದು »