ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ (ಭಾಗ – ೨)
– ಪ್ರೇಮಶೇಖರ
ಸುಂದರ ಕನಸೊಂದು ಹಳವಂಡವಾದ ದುರಂತಕ್ಕೆ ಮರುಗುತ್ತಾ…
ಥಾಮಸ್ ಹಾಬ್ಸ್, ಜಾನ್ ಲಾಕ್, ಜೀನ್ ಯಾಕ್ಸ್ ರೂಸೂ ಮುಂತಾದ ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರತಿಪಾದಕರ ಪ್ರಕಾರ ‘ಬಲವೇ ಹಕ್ಕು’ ಎಂಬ ಮಾನವತಾವಿರೋಧಿ ಅರಣ್ಯ ಕಾನೂನಿನಿಂದ ಅಶಕ್ತರನ್ನು ರಕ್ಷಿಸಿ, ಸಮಾಜದ ಎಲ್ಲರ ನಡುವೆ ಸಮಾನ ನ್ಯಾಯಹಂಚಿಕೆಗಾಗಿ ರಾಜ್ಯ ಸ್ಥಾಪನೆಗೊಂಡಿತಂತೆ. ಆದರೆ ಮಾನವಜನಾಂಗ ಮುಂದೆ ಹಿಡಿದ ದಾರಿಯಲ್ಲಿ ರಾಜ್ಯವೇ ಶೋಷಕನಾಗಿ ಬದಲಾದದ್ದನ್ನು ಇತಿಹಾಸ ಹೇಳುತ್ತದೆ. ಸಾಮಾಜಿಕ ಒಪ್ಪಂದಗಳ ಮೂಲಕ ಸಮಾನನ್ಯಾಯ ಹಂಚಿಕಾವ್ಯವಸ್ಥೆ ಸಾಧ್ಯವಾಗದೇ ಹೋದಾಗ, ಬಲವಂತದ ಮೂಲಕ, ರಕ್ತಪಾತದ ಮೂಲಕ ಅದು ಅಸ್ತಿತ್ವಕ್ಕೆ ಬರುತ್ತದೆಂದು ಭವಿಷ್ಯ ನುಡಿದ ಕಾರ್ಲ್ ಮಾರ್ಕ್ಸ್ ಒಬ್ಬ ವಾಸ್ತವವಾದಿ. ಅಂತಹ ವ್ಯವಸ್ಥೆಯನ್ನು ಚಿತ್ರಿಸಿದ ಕಮ್ಯೂನಿಸಂ ಒಂದು ಉದಾತ್ತ ಮಾನವಪರ ಚಿಂತನೆ. ಆದರೆ ವಾಸ್ತವವಾದಿ ರೂಪಿಸಿದ ಉದಾತ್ತ ಮಾನವಪರ ಸಿದ್ಧಾಂತ ತನ್ನ ಅವಾಸ್ತವವಾದಿ ಹಾಗೂ ಮಾನವವಿರೋಧಿ ಹಿಂಬಾಲಕರಿಂದಲೇ ಕಳಂಕ ಹಚ್ಚಿಸಿಕೊಂಡದ್ದೊಂದು ದುರಂತ. ಈ ಪ್ರಕ್ರಿಯೆ ಭಾರತದಲ್ಲಿ ಅನಾವರಣಗೊಂಡ ಬಗೆಯನ್ನು ಸಂಕ್ಷಿಪ್ತವಾಗಿ ಈಗಿಲ್ಲಿ ಹೇಳುತ್ತೇನೆ. ಮತ್ತಷ್ಟು ಓದು
ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ ( ಭಾಗ-೧ )
– ಪ್ರೇಮಶೇಖರ
ನಮ್ಮ ವಿಚಾರವಂತರು, ಸಾಂಸ್ಕೃತಿಕ ನಾಯಕರು ಶಕ್ತಿಮೀರಿ ಪ್ರಶಂಸಿಸಿದ್ದು, ಪ್ರಚುರ ಪಡಿಸಲು ಹೆಣಗಿದ್ದು ಕಮ್ಯೂನಿಸಂ ಮತ್ತು ಸೆಕ್ಯೂಲರಿಸಂಗಳನ್ನು. ಆದರೆ ಅವರ ನಿರೀಕ್ಷೆಗೆ ವಿರುದ್ಧವಾಗಿ ಕಮ್ಯೂನಿಸಂ ನಮ್ಮ ಸಮಾಜೋ-ರಾಜಕೀಯವಲಯದಲ್ಲಿ ಮುಂಚೂಣಿಗೆ ಬರಲೇ ಇಲ್ಲ. ಜತೆಗೆ, ತಾವು ಬಯಸಿದಂಥ ಸೆಕ್ಯೂಲರಿಸಂ ಇಲ್ಲಿ ನೆಲೆಯೂರಿಲ್ಲವೆಂದು ಅಲವತ್ತುಕೊಳ್ಳುತ್ತಲೇ ಇದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಇಂಥಾ ಗೋಳಾಟವನ್ನು ರಂಜನೀಯವಾಗಿ ಪ್ರದರ್ಶಿಸಿದ್ದು ಪತ್ರಕರ್ತ ಲಂಕೇಶ್, ಅವರಿಗೆ ಆಗಾಗ ‘ಅವಶ್ಯಕತೆ’ ಗನುಗುಣವಾಗಿ ಸಾಥ್ ನೀಡಿದ್ದು ಜ್ಞಾನಪೀಠಿ ಯು. ಆರ್. ಅನಂತಮೂರ್ತಿ. ಇವರ ಇಷ್ಟೆಲ್ಲಾ ಪ್ರಯತ್ನಗಳು ‘ಯಶಸ್ವಿ’ಯಾಗದಿರಲು ಕಾರಣವೇನು? ಸಾಮಾನ್ಯ ಜನತೆ ಇವರ ವಿಚಾರಗಳಿಗೆ ಇವರು ಬಯಸಿದಷ್ಟು ಸಹಮತಿ ತೋರದಿರಲು ಇರುವ ಕಾರಣವಾದರೂ ಏನು? ಜನ ದಡ್ಡರೇ? ಅಥವಾ ಈ ಬುದ್ದಿಜೀವಿಗಳಿಗಿಂತಲೂ ಹೆಚ್ಚಿನ ಬುದ್ಧಿವಂತರೇ? ಅಥವಾ ಈ ಬುದ್ಧಿಜೀವಿಗಳ ಪ್ರಚಾರ/ಪ್ರಲಾಪದಲ್ಲೇ ದೋಷವಿದೆಯೇ? ಈ ಪ್ರಶ್ನೆಗಳನ್ನು ಎರಡು ಭಾಗಗಳ ಈ ಲೇಖನದಲ್ಲಿ ಚರ್ಚೆಗೆತ್ತಿಕೊಳ್ಳುತ್ತಿದ್ದೇನೆ. ಮತ್ತಷ್ಟು ಓದು
ಪ್ರಗತಿಪರ ಫ್ಯಾಸಿಸ್ಟುಗಳಿಂದ ಪ್ರಜಾಪ್ರಾಭುತ್ವವ್ವನ್ನು ರಕ್ಷಿಸಬೇಕಾಗಿದೆ
– ರಾಕೇಶ್ ಶೆಟ್ಟಿ
ದೇಶದಾದ್ಯಂತ ಇಂದು ನಡೆಯುತ್ತಿರುವ Intellectual Intolerance ಹುಟ್ಟಿಕೊಂಡಿದ್ದು 16 May 2014 ರಂದು. ಆ ದಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್.ಡಿ.ಎ ಪ್ರಚಂಡ ಬಹುಮತಗಳಿಸಿ ಅಧಿಕಾರ ಹಿಡಿಯದೇ ಹೋಗಿದ್ದರೆ ಇವತ್ತು ಭಾರತದ ಹಾದಿ ಬೀದಿಗಳಲ್ಲಿ ಗಂಜಿಗಿರಾಕಿಗಳು ಎದೆಬಡಿದುಕೊಂಡು ಅಳಬೇಕಿರಲಿಲ್ಲ. ಆದರೆ ಏನು ಮಾಡುವುದು ಹೇಳಿ? ಭಾರತದ ಪಾಲಿಗೆ ಅಚ್ಛೇ ದಿನಗಳು ನಿಕ್ಕಿಯಾಗಿದ್ದವಲ್ಲ ಹಾಗಾಗಿ ಮೋದಿಯವರೇ ಗೆದ್ದರು. ಅಷ್ಟಕ್ಕೂ ಮೋದಿಯವರು ಗೆದ್ದಿದ್ದಕ್ಕೆ, ಗೆದ್ದ ನಂತರ ಯಶಸ್ವಿ ಮತ್ತು ಮೂರು ವರ್ಷಗಳ ಜನಪ್ರಿಯ ಆಡಳಿತವನ್ನು ನೀಡಿ ನಾಲ್ಕನೇ ವರ್ಷದತ್ತ ಶರವೇಗದಲ್ಲಿ ಹೊರಟಿರುವಾಗ ಗಂಜಿಗಿರಾಕಿಗಳದೇಕೆ ಈ ಗೋಳು? ಅವರ ಗೋಳಿನ ಕಾರಣವನ್ನು ಸರಳೀಕರಿಸಿ ಮೂರು ಪ್ರಮುಖ ಕಾರಣಗಳನ್ನು ನೀಡಬಹುದು. ಮತ್ತಷ್ಟು ಓದು
ದ್ವೇಷ ಕಾರುವುದನ್ನೇ ವಿಚಾರವಾದ ಎನ್ನುವುದಾದರೆ…
– ಅಜಿತ್ ಶೆಟ್ಟಿ ಹೆರಾಂಜೆ
ಗೌರಿ ಲಂಕೇಶ್ ಕೊಲೆಯಾದಾಗ ನಾನು ಮುಖಪುಟದಲ್ಲಿ ಒಂದು ಸ್ಟೇಟಸ್ ಹಾಕಿದ್ದೆ.. ಅಕಾಲಿಕ ಮರಣ ಯಾರದ್ದೇ ಆಗಿರಲಿ ಅದು ಘೋರ. ಅದು ಗೌರಿ ಲಂಕೇಶರಂತಾ ಖ್ಯಾತ ನಾಮರದ್ದೆ ಆಗಿರಲಿ ಅಥವಾ ಶರತ್, ರುದ್ರೇಶ್, ಕಟ್ಟಪ್ಪ, ರವಿಯರಂತ ಶ್ರೀ ಸಾಮಾನ್ಯರದ್ದೇ ಆಗಿರಿಲಿ..!! ಮತ್ತಷ್ಟು ಓದು
ಕಳೆದ ಒಂದು ವಾರದಿಂದ ನಾನು ಕೇಳಲ್ಪಟ್ಟ ಐದು ಸುಳ್ಳುಗಳು
– ರಾಜೇಶ್ ನರಿಂಗಾನ.
೧) ಗೌರಿ ಲಂಕೇಶ್ ವಿಚಾರವಾದಿ
ಗೌರಿ ಲಂಕೇಶ್ ಯಾವ ರೀತಿಯ ವಿಚಾರವಾದಿ ಎಂದೇ ತಿಳಿಯುತ್ತಿಲ್ಲ. ತನ್ನ ಸಂಪಾದಕತ್ವದ ‘ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಭಿನ್ನ ವಿಚಾರಧಾರೆಯ ನಿಲುವನ್ನು ಹೊಂದಿರುವ ಆಕೆಗಿಂತ ವಯಸ್ಸಿನಲ್ಲಿ ಅದೆಷ್ಟೇ ಹಿರಿಯರಿದ್ದರೂ ಏಕವಚನದಲ್ಲಿ ಹೀನಮಾನವಾಗಿ ನಿಂದಿಸುತ್ತಿದ್ದರು. ರಂಜನೆ, ಪ್ರಲೋಭನೆಯ ಹೆಸರಿನಲ್ಲಿ ಭಿನ್ನ ವಿಚಾರಧಾರೆಯವರ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣಗೈಯುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆಯನ್ನೂ ವಿಧಿಸಿತ್ತು. ಆದ್ದರಿಂದ ಭಿನ್ನ ವಿಚಾರಧಾರೆಯಿರುವ ವ್ಯಕ್ತಿಗಳ ತೇಜೋವಧೆ ಮಾಡುವುದನ್ನೇ ‘ವಿಚಾರವಾದ’ ಎನ್ನುವುದಾದರೆ ಅಂಥ ವಿಚಾರವಾದಕ್ಕೆ ನನ್ನ ಧಿಕ್ಕಾರವಿದೆ. ಮತ್ತಷ್ಟು ಓದು
ಶವದ ಮೇಲಿನ ರಣಹದ್ದುಗಳು
ದೇಶದಲ್ಲಿ ಎಲ್ಲೇ ಬುದ್ಧಿಜೀವಿಗಳ ಹತ್ಯೆ ನಡೆದರೂ ಮೊದಲು ಆರೋಪ ಹೊರಿಸುವುದು ಬಲಪಂಥೀಯ ವಿಚಾರಧಾರೆ ಹೊಂದಿರುವವರ ಮೇಲೆ, ಸಂಘಪರಿವಾರದವರ ಮೇಲೆ. ಎಲ್ಲಾ ಹತ್ಯೆಯ ಹಿಂದಿನ ಮರ್ಮ ಒಂದೇ, ದೇಶದಲ್ಲಿ ಕಮ್ಮಿ ನಿಷ್ಟರ ಹಾಗೂ ತಮ್ಮ ಎಡಪಂಥೀಯ ಚಿಂತನೆ ಗಳಿಗೆ ಸ್ಪಂದಿಸುವ ಮನೋಭಾವನೆ ಹೊಂದಿರುವಂತವರದ್ದೆ ಕೈ ಇರಬೇಕೆನ್ನುವ ಹಿಡನ್ ಅಜೆಂಡ ಇದ್ದಂತಿದೆ.
ಅಸಹಿಷ್ಣುತೆ, ಅನೈತಿಕತೆ ಮತ್ತು ನಮ್ಮ ಬೌದ್ಧಿಕ ಜಗತ್ತು
– ಎಂ. ಎಸ್. ಚೈತ್ರ
ನಿರ್ದೇಶಕರು, ಆರೋಹಿ ಸಂಶೋಧನಾ ಸಂಸ್ಥೆ.
ಬೆಂಗಳೂರು.
ಧಾರವಾಡದ ಸಾಹಿತ್ಯ ಸಂಭ್ರಮದ ಗೋಷ್ಠಿಯೊಂದರಲ್ಲಿ ಕಲಬುರ್ಗಿಯವರ ಹತ್ಯೆಯನ್ನು ಕುರಿತು ಅಜ್ಜಂಪುರ ಮಂಜುನಾಥ್‍ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಗತಿಪರರ ದಾಂಧಲೆಯನ್ನು ಎದುರಿಸಬೇಕಾಯಿತು. ಈ ಕುರಿತು ಪ್ರಜಾವಾಣಿಯಲ್ಲಿ ಪದ್ಮರಾಜ್ ದಂಡಾವತಿಯವರು (ದಿನಾಂಕ 29 ಜನವರಿ 2017), ನಮ್ಮ ಕನ್ನಡದ ಪ್ರಗತಿಪರ ಬುದ್ಧಿಜೀವಿಗಳು, ಕಲ್ಬುರ್ಗಿಯವರ ಹತ್ಯೆ ಬಲಪಂಥೀಯರಿಂದಲೇ ನಡೆದದ್ದು ಎಂಬ ಬಿಂಬವೊಂದನ್ನು ಕಾಯ್ದಿಟ್ಟುಕೊಳ್ಳುವ ಭರದಲ್ಲಿ ಘಟನೆಯೊಂದರ ಸತ್ಯಾಸತ್ಯತೆ ಮತ್ತು ಅದಕ್ಕೆ ಇರಬಹುದಾದ ವಿವಿಧ ಆಯಾಮಗಳನ್ನು ಮಾತನಾಡಲೂ ಅವಕಾಶ ಕೊಡದೆ, ಅಸಹಿಷ್ಣುಗಳಾಗುತ್ತಿದ್ದಾರೆಂದು ಟೀಕಿಸಿದ್ದರು. ಈ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಸಾಮಾಜಿಕ ಜಾಲತಾಣವೊಂದರಲ್ಲಿ (ಮಾಧ್ಯಮನೆಟ್.ಕಾಂ) ರಾಜೇಂದ್ರ ಚೆನ್ನಿಯವರು ದಂಡಾತಿಯವರ ಮೇಲೆ ತೀವ್ರವಾಗಿ ಹರಿಹಾಯ್ದಿದ್ದಾರೆ. ಚೆನ್ನಿಯವರ ಪ್ರತಿಕ್ರಿಯೆಯು ಕನ್ನಡದ ಬೌದ್ಧಿಕ ಜಗತ್ತಿನ ಕುರಿತು ಏನನ್ನು ಹೇಳುತ್ತಿದೆ ಎಂಬುದನ್ನು ಈ ಲೇಖನ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತದೆ. ಮತ್ತಷ್ಟು ಓದು
ಮದ್ದರೆಯದಿದ್ದರೆ ಈ ಮಾವೋವ್ಯಾಧಿ ನಿದ್ದೆಗೆಡಿಸಲಿದೆ ಎಚ್ಚರ!
– ರೋಹಿತ್ ಚಕ್ರತೀರ್ಥ
ಎರಡು ಸುದ್ದಿಗಳಿವೆ. ಒಂದು – ಉರಿ ಸೇನಾನೆಲೆಯ ಮೇಲೆ ನಾಲ್ಕು ಮಂದಿ ಮುಸ್ಲಿಂ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 17 ಸೈನಿಕರು ಹತರಾಗಿದ್ದಾರೆ. ಎರಡು – ಭಾರತದ ನಕ್ಸಲ್ ಉಗ್ರರು ಜಗತ್ತಿನ ಭಯೋತ್ಪಾದನೆಯ ಪಟ್ಟಿಯಲ್ಲಿ ಕಂಚಿನ ಪದಕವನ್ನು ಜಸ್ಟ್ ಮಿಸ್ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇವೆರಡರಲ್ಲಿ, ನಕ್ಸಲರ ಸಮಸ್ಯೆಯೇ ದೊಡ್ಡದು ಅನಿಸಿದ್ದರಿಂದ ಅದನ್ನು ಈ ವಾರದ ಅಂಕಣಕ್ಕೆ ಆಯ್ದುಕೊಂಡಿದ್ದೇನೆ. ಯಾಕೆಂದರೆ ಹೊರಗಿನ ಶತ್ರುಗಳನ್ನು ಪ್ರತಿದಾಳಿ ಮಾಡಿಯೋ ಯುದ್ಧ ಘೊಷಿಸಿಯೋ ತಹಬದಿಗೆ ತರಬಹುದೆನ್ನೋಣ; ಆದರೆ, ತಾಯ್ನಾಡಿನ ಒಳಗೇ ಇದ್ದುಕೊಂಡು ಒರಲೆಯಂತೆ ದೇಶವನ್ನು ಕೊರೆದು ಪುಡಿಗುಟ್ಟುವ ಆಂತರಿಕ ಶತ್ರುಗಳನ್ನು ಬಗ್ಗುಬಡಿಯುವುದು ಹೇಗೆ? 2015ರಲ್ಲಿ ಭಾರತದಲ್ಲಿ ನಡೆದ 791 ಭಯೋತ್ಪಾದನಾ ಕೃತ್ಯಗಳಲ್ಲಿ 43% ಅನ್ನು ನಕ್ಸಲೈಟ್ ಸಂಘಟನೆಗಳೇ ಮಾಡಿವೆ ಎಂದು ಅಂತಾರಾಷ್ಟ್ರೀಯ ವರದಿಯೊಂದು ಹೇಳುತ್ತಿದೆ. ಒಂದೇ ವರ್ಷದಲ್ಲಿ ಇವರು ನಡೆಸಿರುವ ದಾಳಿಗಳು 343; ಇವರ ಅಟ್ಟಹಾಸಕ್ಕೆ ಬಲಿಯಾಗಿ ಶವವಾಗಿ ಮಲಗಿದ ಅಮಾಯಕರ ಸಂಖ್ಯೆ 176. 2010ರಿಂದ 2015ರವರೆಗಿನ ಅವಧಿಯಲ್ಲಿ ದೇಶದೊಳಗೆ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ 2162 ನಾಗರಿಕರು, 802 ಭದ್ರತಾ ಸಿಬ್ಬಂದಿ ಹತರಾಗಿದ್ದಾರೆಂದು ಕೇಂದ್ರದ ಗೃಹಸಚಿವಾಲಯದ ವರದಿ ಹೇಳುತ್ತಿದೆ. ಜಗತ್ತಿನಲ್ಲಿ ತಾಲಿಬಾನ್, ಐಸಿಸ್ ಮತ್ತು ಬೊಕೋ ಹರಾಮ್ ಎಂಬ ಉಗ್ರಗಾಮಿ ಸಂಘಟನೆಗಳ ನಂತರದ ಸ್ಥಾನವನ್ನು ಭಾರತದ ನಕ್ಸಲ್ ಚಳವಳಿ ತನ್ನ ಮುಡಿಗೇರಿಸಿಕೊಂಡಿದೆ. ಭಾರತ ಪ್ರಪಂಚದೆದುರು ತಲೆ ತಗ್ಗಿಸುವಂಥ ವಿಚಾರವಿದು. ಕರ್ನಾಟಕದ ಸಂದರ್ಭದಲ್ಲಿ ನಕ್ಸಲೈಟ್ ಚಳವಳಿಯ ನೆಲೆ-ಬೆಲೆಗಳೇನು ಎಂಬುದನ್ನು ವಿಮರ್ಶಿಸುವುದೇ ಪ್ರಸ್ತುತ ಲೇಖನದ ಉದ್ದೇಶ. ಮತ್ತಷ್ಟು ಓದು
ಇಂದಿನವರೆಗೂ ಬುದ್ದಿಜೀವಿಗಳ ಬುದ್ಧಿ ನೆಟ್ಟಗಾಗಿಲ್ಲ. ಮುಂದಾದರೂ ಆದೀತಾ?
-ಶ್ರೀಕಾಂತ್ ಆಚಾರ್ಯ
ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಈ ದೇಶದ ಅಷ್ಟೂ ಸವಲತ್ತನ್ನ ಚಪ್ಪರಿಸಿಕೊಂಡು ಅನುಭವಿಸಿದವರಿಂದ ಭಾರತದ ‘ಬರ್ಬಾದಿಗೆ’ ಜಂಗ್(?) ಶುರುವಾಯ್ತಲ್ಲ. ಆಶ್ಚರ್ಯ ಅನ್ನಿಸಿತಾ? ಬಹುಶಃ ಇರಲಿಕ್ಕಿಲ್ಲ. ಈ ದೊಂಬರಾಟಗಳನ್ನ ನಾವೆಲ್ಲಾ ಕಂಡವರೇ. ಬದುಕಿನಲ್ಲಿ ತನಗೊಂದು ‘ಐಡೆಂಟಿಟಿ’ಯೇ ಇಲ್ಲದೇ ಪರಿತಪಿಸುವ ಮಂದಿ ಬಹಳಷ್ಟು ಬಾರಿ ಹೀಗೆಲ್ಲ ಮಾಡಿಯೇ ಹೆಸರಿಗೆ ಬರೋದಿದೆ. ಹಾಗಂತ ಇವರನ್ನ ಅಸಡ್ಡೆ ಮಾಡಿ ಬದಿಗಿಡುವಂತಿಲ್ಲ. ಯಾಕೆಂದರೆ ಇವರೆಲ್ಲರ ಹೋರಾಟ ಇರೋದು ಕೆಟ್ಟದರ ಬಗ್ಗೆಯಲ್ಲ, ಈ ದೇಶಕ್ಯಾವುದೋ ಮಾರಕವಾಗಿದ್ದರೆ ಅದರ ಬಗ್ಗೆಯೂ ಅಲ್ಲ. ಇವರ ‘ಜಂಗ್’ ಇರೋದು ಈ ದೇಶದ ಸಮಗ್ರತೆಯ ಬಗ್ಗೆ. ಈ ದೇಶದ ಸನಾತನತೆಯ ಬಗ್ಗೆ. ಒಟ್ನಲ್ಲಿ ಈ ದೇಶದ ಬಗ್ಗೆಯೇ. ಇವೆಲ್ಲಾ ‘ಬುದ್ಧಿಮಾಂದ್ಯ’ ಜೀವಗಳಿಗೆ ಹೆಗಲಾಗಿ ನಿಂತು ಪೋಷಿಸುತ್ತಿರುವುದು ಇಲ್ಲಿನ ಬುದ್ಧಿ ಜೀವಿಗಳೆಂಬ ಅಡಕಸುಬಿಗಳು. ಅದಲ್ಲದೇ ಇನ್ನೇನು? ಮತಿ ತಪ್ಪಿದವ ಮಾಡಿದ ತಪ್ಪನ್ನ, ತಪ್ಪು ಅನ್ನೋದು ಬಿಟ್ಟು ಅವರೊಲ್ಲಬ್ಬರಾಗಿ ನಿಂತು ಗುರಾಣಿ ಹಿಡಿದು ಮತ್ತಷ್ಟು ಇನ್ನಷ್ಟು ಪ್ರಪಾತಕ್ಕೆ ಇಳಿಯೋಕೆ, ಎಳೆಯೋಕೆ ತಯಾರಾದರೆ? ಮತ್ತಷ್ಟು ಓದು