ಸಾಹಿತ್ಯ ಪರಿಷತ್ ಯಾರೊಬ್ಬರ ಖಾಸಗಿ ಆಸ್ತಿಯಲ್ಲ..!
ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ.
ಆಂಧ್ರ ಪ್ರದೇಶ.
ಮೊದಲಿಗೆ ಭೈರಪ್ಪನವರನ್ನು ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಿಂದ ದೂರವಿಡುವಲ್ಲಿ ಯಶಸ್ವಿಯಾದ ರಾಜೇಂದ್ರ ಚೆನ್ನಿ ಹಾಗೂ ಅವರ ಪರಮ ಸಹಿಷ್ಣತೆಯ ಎಲ್ಲಾ ಸಂಗಡಿಗರಿಗೂ ಅಭಿನಂದನೆಗಳು! ಕೆಲ ದಿನಗಳ ಹಿಂದಷ್ಟೆ, ಸಾಹಿತ್ಯ ಸಂಭ್ರಮದ ಅಂಗಳದಲ್ಲಿ ಚಪ್ಪಲಿಯ ಮೂಲಕ ತಮ್ಮ ಶಕ್ತಿ ಪಾರಮ್ಯದೊಂದಿಗೆ ಗೆಲುವಿನ ನಗೆ ಬೀರಿದ್ದ ಎಡ ಪಡೆ, ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ಸುತ್ತಿನ ಯಶಸ್ಸನ್ನು ಸಾಧಿಸಿ, ಗೆಲುವಿನ ಕೇಕೆ ಹಾಕಿದೆ. ಧಾರವಾಡದ ಮ್ಯಾನ್ ಆಫ್ ದಿ ಸೀರಿಸ್ ಚಪ್ಪಲಿ ಚಂದ್ರಶೇಖರ ಹಾಗೂ ಕುಂ.ವೀರಭದ್ರಪ್ಪನವರಾದರೆ, ಶಿವಮೊಗ್ಗೆಯಲ್ಲಿ ರಾಜೇಂದ್ರ ಚೆನ್ನಿ! ಈ ರೀತಿಯ ಗೆಲುವುಗಳು ಅವರಿಗೇನು ಹೊಸದಲ್ಲ ಬಿಡಿ. ದೊಡ್ಡ ದಾಖಲೆಯ ಇತಿಹಾಸವೇ ಅವರ ಬೆನ್ನ ಹಿಂದಿದೆ! ಮತ್ತಷ್ಟು ಓದು
“ಜಗತ್ತಿನಲ್ಲಿ ಯಾವ ಬಲಪಂಥವೂ ಇಲ್ಲ. ನೀವದಕ್ಕೆ ಸೇರಬೇಕೆಂಬ ಬಲವಂತವೂ ಇಲ್ಲ”
– ರಾಘವೇಂದ್ರ ಸುಬ್ರಹ್ಮಣ್ಯ
ಇಡೀ ಜಗತ್ತಿನಲ್ಲಿ ಎಲ್ಲರೂ ‘ಎಡಪಂಥೀಯರು’, ‘ಬಲಪಂಥೀಯರು’ ಎಂಬ ಪದಗಳನ್ನು ಪುಂಖಾನುಪುಂಖವಾಗಿ ಹರಿಬಿಡುತ್ತಾರೆ. ಆದರೆ ಯಾರಿಗೂ ಅವುಗಳ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ಯಾಕೆ ಯಾರನ್ನು ಎಡಪಂಥೀಯರು ಅಂತಾ ಕರೀತಾ ಇದ್ದೀವಿ ಅಂತಲೂ ಗೊತ್ತಿಲ್ಲದೇ ಆ ಪದವನ್ನ ಉಪಯೋಗಿಸ್ತಾ ಇದ್ದಾರೆ. ಎಡಪಂಥೀಯರು ಎಂಬ ಪದ, ಎಡಪಂಥೀಯ ರಾಜಕಾರಣ ಎಂಬ ಪದದಿಂದ ಎರವಲು ಪಡೆದದ್ದು. ಈ ಎಡಪಂಥೀಯ ರಾಜಕಾರಣವೆಂದರೇನು? ಮತ್ತಷ್ಟು ಓದು
ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಾಹಿತ್ಯಿಕ ಭಯೋತ್ಪಾದನೆ..?
– ಸಂತೋಷಕುಮಾರ ಮೆಹೆಂದಳೆ.
( ಇವತ್ತು ಅರ್ಜೆಂಟಿಗೆ ಬಿದ್ದು ಸ್ಟೇಟಸ್ ಅಪ್‍ಡೇಟ್ ಮಾಡುವವರು ಅದನ್ನು ಪೂರೈಸಿ ಎದ್ದು ಹೋಗಿಬಿಡುತ್ತಿದ್ದಾರೆ. ಕೆಲವರಿಗದು ತಮ್ಮ ಟಿ.ಆರ್.ಪಿ. ಯ ಮಾನದಂಡವೂ ಆಗಿರುವುದರಿಂದ ಲಿಂಗ, ಧರ್ಮ ಸೇರಿದಂತೆ ವರ್ಗಬೇಧದ ವ್ಯತ್ಯಾಸವಿಲ್ಲದೆ, ಕಾಮ, ಕರ್ಮಗಳ ಅಭ್ಯಂತರವಿಲ್ಲದೆ ನಾಲ್ಕು ಸಾಲು ಬರೆಯುತ್ತಾರೆ ಇಲ್ಲಾ ಜಗತ್ತಿನ ಯಾವ ಮೂಲೆಯದ್ದೋ ಶೇರು ಮಾಡಿ ಚು.. ಚು.. ಎಂದು ಹಲ್ಲಿ ಲೊಚಗುಟ್ಟಿದಂತೆ ತಾವೊಂದೆರಡು ಸಾಲು ಸೇರಿಸಿಬಿಡುತ್ತಾರೆ. ಆದರೆ ಅದರ ಕೆಳಗೆ ಮುಖ ಮೂತಿ, ಪರಿಚಯವೇ ಇಲ್ಲದವರೂ, ಜಾತಿ ಪಂಥದ ಹೊರತಾಗಿ ಪರಮ ದ್ವೇಷಿಗಳಾಗಿ ಬದಲಾಗಿ, ನಿರಂತರ ಸಂಘರ್ಷಗಳಿಗಿಳಿದು ಉಳಿದುಬಿಡುತ್ತಾರಲ್ಲ ಅದರ ಹೊಣೆಗಾರಿಕೆ ಯಾರದ್ದು…? ) ಮತ್ತಷ್ಟು ಓದು