ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕನಸು’

6
ಸೆಪ್ಟೆಂ

ಕನಸು ನನಸಾದಾಗ….!

-ನಾಗರಾಜ ಅಡಿಗ, ಕೈಗಾ.

download (2)ಸುಮಾರು ೩೫ ವರ್ಷಗಳ  ಹಿಂದಿನ ಮಾತು. ರೋಹಿತ್ ನ ಬಾಲ್ಯದ ದಿನಗಳವು. ಆ ದಿನಗಳಲ್ಲಿಯೇ ರೋಹಿತ್ ಗೆ ಬಾಹ್ಯಾಕಾಶ , ಆಕಾಶಕಾಯಗಳು, ಉಪಗ್ರಹಗಳು ಇವುಗಳ ಬಗ್ಗೆ ಅತ್ಯಂತ ಆಸಕ್ತಿ.  ಕರೆಂಟಿಲ್ಲದ ಆ ಕತ್ತಲ ರಾತ್ರಿಯಲ್ಲಿ ಆಕಾಶವನ್ನು ವೀಕ್ಷಿಸುವುದು ಒಂದು ಹವ್ಯಾಸವಾಗಿತ್ತು. ಸಪ್ತಋಷಿ ಮಂಡಲ, ದ್ರುವ ನಕ್ಷತ್ರ,  ನಕ್ಷತ್ರ ಪುಂಜಗಳು, ಶುಕ್ರ, ಮಂಗಳ, ಗುರು ಗ್ರಹಗಳನ್ನು ಬಾಲ್ಯದಲ್ಲಿಯೇ ಗುರುತಿಸಿಕೊಂಡು ಅವುಗಳ ಚಲನವಲನಗಳನ್ನು ವೀಕ್ಷಿಸುತ್ತಿದ್ದ.  ಪುತ್ತೂರಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಒಬ್ಬ ಖಗೋಳ ವೀಕ್ಷಕನಿಂದ ರಾತ್ರಿ “ಆಕಾಶ ವೀಕ್ಷಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೇಲಂತೂ ಆಸಕ್ತಿ ಇನ್ನೂ  ಹೆಚ್ಚಾಯಿತು. ಹೈಸ್ಕೂಲಿನಲ್ಲಿರುವಾಗ ಕಾಣಿಸಿದ ಧೂಮಕೇತು ಅವನ ಕುತೂಹಲವನ್ನು ಇನ್ನೂ  ಕೆರಳಿಸಿತ್ತು. ರೋಹಿತ್ ನು ಬಾಲ್ಯವನ್ನು ಕಳೆದ ಊರು ಕುಗ್ರಾಮ ಅಲ್ಲದಿದ್ದರೂ ಪ್ರಾಥಮಿಕ ಅಗತ್ಯತೆಗಳನ್ನೂ ಹೊಂದಿರದ ಚಿಕ್ಕ ಗ್ರಾಮ. ಒಂದೆರಡು ವರ್ಷಗಳ ಹಿಂದಷ್ಟೇ ಅಲ್ಲಿ ಸರಕಾರಿ ಹೈಸ್ಕೂಲ್ ಹುಟ್ಟಿಕೊಂಡಿದೆ. ಸಾಮಾನ್ಯ ಸರಕಾರಿ ಶಾಲೆಗಳಲ್ಲಾಗುವಂತೆ ಶಾಲೆಯ ಬಹುತ್ತಮ ಅಧ್ಯಾಪಕರು ನಿರಾಸಕ್ತಿಯಿಂದ ಪಾಠ ಹೇಳಿಕೊಡುತ್ತಿದ್ದರೆ, ವಿಜ್ಞಾನ ಅಧ್ಯಾಪಕರು ಅದಕ್ಕೆ ತದ್ವಿರುಧ್ಧ. ಹೈಸ್ಕೂಲಿನ ನೆಚ್ಚಿನ ವಿಜ್ಞಾನ ಅಧ್ಯಾಪಕರು ರೋಹಿತ್ ನ ಆಸಕ್ತಿಗಳಿಗೆ ಹೆಚ್ಚಿನ ಬೆಂಬಲ ಕೊಟ್ಟು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. “Children’s knowledge bank” ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತಂದುಕೊಟ್ಟು ರೋಹಿತ್ ಗೆ ಅರ್ಥವಾಗದ ವಿಷಯಗಳನ್ನು ವಿವರವಾಗಿ ತಿಳಿಸುತ್ತಿದ್ದರು. ಆಸಕ್ತಿ ತೋರುತ್ತಿದ್ದ ವಿದ್ಯಾರ್ಥಿಗಳೆಂದರೆ ಮುತುವರ್ಜಿವಹಿಸಿ ಹೇಳಿಕೊಡುವುದು ಅವರ ಇಷ್ಟದ ವಿಷಯವಾಗಿತ್ತು. ಅಕ್ಕ-ಪಕ್ಕದ ಶಾಲೆಗಳಲ್ಲಾಗುವ ವಿಜ್ಞಾನ ವಸ್ತುಪ್ರದರ್ಶನಗಳಲ್ಲಿ ಅಧ್ಯಾಪಕದ ಸಹಾಯ-ಪ್ರೋತ್ಸಾಹದಿಂದ ಭಾಗವಹಿಸಿ, ಸೌರವ್ಯೂಹ, ಚಂದ್ರಗ್ರಹಣ-ಸೂರ್ಯಗ್ರಹಣಗಳ ಮಾದರಿಗಳನ್ನು ಮಾಡಿ ಪ್ರದರ್ಶಿಸಿ ಹಲವವಾರು ಬಹುಮಾನಗಳನ್ನೂ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದ. ಶಾಲೆಯಲ್ಲಿರುವ ದೂರದರ್ಶಕದಿಂದ ಕ್ಲಾಸಿನ ಎಲ್ಲ ಮಕ್ಕಳಿಗೆ ಚಂದ್ರನನ್ನು ಮಾತ್ರ ತೋರಿಸುತ್ತಿದ್ದ ಅಧ್ಯಾಪಕರು,  ರೋಹಿತ್ ಅನ್ನು ರಾತ್ರಿಯಲ್ಲೂ ಕರೆದು ಗ್ರಹಗಳ ವೀಕ್ಷಣೆ ಮಾಡಿಸುತ್ತಿದ್ದರು. ಹೈಸ್ಕೂಲಿನ್ನಲಿರುವಾಗಲೇ ಗುರು, ಮಂಗಳ ಶುಕ್ರ ಗ್ರಹಗಳ ಚಲನಯನ್ನು ಅಂದಾಜಿಸುತ್ತಿದ್ದ. ಹಾಗೆಯೇ ಭಾರತೀಯ ಪಂಚಾಂಗ ಮತ್ತು ಖಗೋಳ ವಿಜ್ಞಾನಗಳ ಸಂಬಂಧವನ್ನು ಹಲವರನ್ನು ಕೇಳಿ ತನ್ನ ಸ್ವಯಂ ಜ್ಞಾನಾರ್ಜನೆ ಮಾಡುತ್ತಿದ್ದ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ತನ್ನ ಕನಸನ್ನೂ  ತಂದೆ-ತಾಯಿ, ಅಧ್ಯಾಪಕರ ಅಲ್ಲದೆ ಊರಿನವರ ನಿರೀಕ್ಷೆಯನ್ನೂ  ಆಕಾಶದೆತ್ತರಕ್ಕೆ ಏರಿಸಿಟ್ಟಿದ್ದ.! ಮತ್ತಷ್ಟು ಓದು »