ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕಪ್ಪು ಹಣ’

25
ನವೆಂ

ನೋಟುಗಳ ಅಮಾನ್ಯೀಕರಣ – ಭಾರತೀಯರ ಪ್ರತಿಸ್ಪಂದನೆ

– ವಿನಾಯಕ ಹಂಪಿಹೊಳಿ

e-commerceಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ “ಸಿಸ್ಟಂ”ಗಳ ಜೊತೆ ನಾವು ಭಾರತೀಯರು ಮುಂಚಿನಿಂದಲೂ ಅಗತ್ಯವಿದ್ದರೆ ಮಾತ್ರ ಹೊಂದಿಸಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಇದು ವಾಸ್ತವವಾಗಿ ನಮ್ಮ ತಪ್ಪಲ್ಲ. ಸಿಸ್ಟಂನ ತಪ್ಪೂ ಅಲ್ಲ. ಭಾರತೀಯ ಸಮಾಜಗಳ ಸಂರಚನೆಗೆ ಪಾಶ್ಚಿಮಾತ್ಯರ “ಸಿಸ್ಟಂ” ಸಂಪೂರ್ಣ ಸಾಂಗತ್ಯವನ್ನು ಹೊಂದಿಲ್ಲ. ಯಾವುದೇ ಸಿಸ್ಟಂನ ಜೊತೆಗೆ ನಾವು ವರ್ತಿಸುವ ರೀತಿಯನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ.

ವಿದ್ಯಾರ್ಥಿ ಜೀವನವನ್ನೇ ತೆಗೆದುಕೊಳ್ಳಿ. ಎಜುಕೇಶನ್ ಸಿಸ್ಟಂ ನಡೆಸುವ ಪರೀಕ್ಷೆಗಳ ಜೊತೆಗೆ ನಾವು ಹೇಗೆ ವರ್ತಿಸಿದ್ದೇವೆ? ನೂರು ಜನ ವಿದ್ಯಾರ್ಥಿಗಳಲ್ಲಿ, ಅಂದಂದಿನ ಪಾಠವನ್ನು ಅಂದಂದಿಗೇ ಓದಿಕೊಂಡು, ಪರೀಕ್ಷೆಯ ಸಮಯದಲ್ಲಿ ಕೇವಲ ಕಣ್ಣಾಡಿಸಿಕೊಂಡಿರುವ ವಿದ್ಯಾರ್ಥಿಗಳು, ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದು ಬಿಟ್ಟರೆ ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ, ಅಭ್ಯಾಸದ ವೇಗವನ್ನು ಹೆಚ್ಚಿಸಿಕೊಳ್ಳುವವರೇ. ಶಿಕ್ಷಕರೂ ಹಾಗೆಯೇ. ಮೊದಲಿನ ಪಾಠಗಳನ್ನು ಎಳೆದೂ ಎಳೆದೂ ಕಲಿಸಿ, ಸೆಮಿಸ್ಟರ್ ಮುಗಿಯಲು ಬಂದಂತೆ, ಸ್ಪೆಷಲ್ ಕ್ಲಾಸುಗಳನ್ನು ಇರಿಸಿ, ಕೊನೆಯ ಪಾಠಗಳನ್ನೆಲ್ಲ ಮುಗಿಸುತ್ತಾರೆ. ಮತ್ತಷ್ಟು ಓದು »

19
ನವೆಂ

ಪ್ರಧಾನಿಗಳ ನಡೆಯ ಹಿಂದೆ ಎಷ್ಟೆಲ್ಲ ಚಿಂತನೆ ಇದೆಯೆಂದರೆ…

– ರೋಹಿತ್ ಚಕ್ರತೀರ್ಥ

maxresdefaultಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಸಂಜೆ ಮಾಡಿದ ಭಾಷಣದಲ್ಲಿ ಐನೂರು ಮತ್ತು ಸಾವಿರ ರುಪಾಯಿ ಮುಖಬೆಲೆಯ ನೋಟುಗಳನ್ನು ಸರಕಾರ ವಾಪಸು ಪಡೆಯಲಿದೆ ಎಂಬ ಘೋಷಣೆ ಮಾಡಿದರು. ಈ ಕಾರ್ಯಾಚರಣೆ 4 ವಿಷಯಗಳನ್ನು ಗುರಿಯಾಗಿಟ್ಟುಕೊಂಡಿದೆ: ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ ಮತ್ತು ಖೋಟಾನೋಟು. ಈ ನಾಲ್ಕೂ ವಿಷಯಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದರಿಂದ ಅವನ್ನು ಒಟ್ಟಾಗಿ ಪರಿಹರಿಸುವ ಇಲ್ಲವೇ ನಿಶ್ಶಕ್ತಗೊಳಿಸುವ ಅತ್ಯಂತ ಪ್ರಬಲ, ಪರಿಣಾಮಕಾರಿ ಪರಿಹಾರದ ಅಗತ್ಯ ಹಲವು ವರ್ಷಗಳಿಂದ ಇತ್ತು. ಹತ್ತು ವರ್ಷ ದೇಶವನ್ನು ಆಳಿದ ನಾಮಕಾವಾಸ್ತೆ ಆರ್ಥಿಕತಜ್ಞರಿಗಾಗದ ಗಟ್ಟಿ-ದಿಟ್ಟ ನಡೆಯನ್ನು ಮೋದಿ ತೋರಿಸಿ ನಾಯಕತ್ವದಲ್ಲಿ ಜ್ಞಾನದ ಜೊತೆ ಧೈರ್ಯವೂ ಬೇಕೆಂಬ ಸಂದೇಶ ರವಾನಿಸಿದ್ದಾರೆ. ಮತ್ತಷ್ಟು ಓದು »

12
ಏಪ್ರಿಲ್

ಇನ್ನೊಂದು ಸಮರಕ್ಕೆ ಸಿದ್ಧರಾಗಿ…

-ಸಂಪತ್ ಕುಮಾರ್

ಅಣ್ಣ ಹಜಾರೆಯವರ  ಉಪವಾಸವೇನೋ ಮುಗಿಯಿತು. ರಂಗೋಲೆಯ ಕೆಳಗೆ ನುಸುಳುವ ಬುದ್ಧಿ ಉಳ್ಳ ರಾಜಕಾರಣಿಗಳು ಎಂತಹ ಕಾನೂನು ತಯಾರಿಸುತ್ತರೋ ಕಾದುನೋಡಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಲೋಕಾಯುಕ್ತದಂತಹ ಸಂಸ್ಥೆಯಿಂದ ಆಗುತ್ತಿರುವ ಭ್ರಷ್ಟಾಚಾರಿಗಳ ಬೇಟೆ ಅವರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿರುವುದು ಸರ್ವವೇದ್ಯ. ಅಲ್ಲದೆ ಇಂತಹ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವುದೂ ಅನುಮಾನ.ಇಂತಹ ಪರಿಸ್ತಿತಿಯಲ್ಲಿ ಇನ್ನೊದು ಹೋರಾಟದ ಅಗತ್ಯ ಇದೆ.

ಭಾರತದ ರಾಜಕಾರಣಿಗಳ ಕೋಟಿ ಕೋಟಿ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಹಣವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿದರೆ ಭಾರತ ತನ್ನೆಲ್ಲ ಸಾಲದಿಂದ ಮುಕ್ತವಾಗಿ, ಹಣ ದುಬ್ಬರ, ಬಡತನ, ಮುಂತಾದ ತನ್ನೆಲ್ಲ ಕಷ್ಟ ಕೋಟಲೆಗಳಿಂದ ಹೊರಬರಲು ಸಾಧ್ಯ. ಇದಕ್ಕಾಗಿ ಅಣ್ಣ ಹಜಾರೆ ಅವರನ್ನು ಈ ಉದ್ದೇಶಕ್ಕಾಗಿ ಪುನಃ ಉಪವಾಸ ಕೂರಲು ಹೇಳುವುದು ಸ್ವಾರ್ಥ ಎನಿಸಬಹುದು. ಈ ವಿಚಾರವನ್ನೇ ತನ್ನ ಚುನಾವಣ ಪ್ರಾಣಾಳಿಕೆ ಮಾಡಿಕೊಂಡಿರುವ ಭಾ.ಜ.ಪ. ದಿಂದ ಇದನ್ನು ರಾಜಕೀಯಗೊಳಿಸಬಾರದು.
ಮತ್ತಷ್ಟು ಓದು »