ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ (ಭಾಗ – ೨)
– ಪ್ರೇಮಶೇಖರ
ಸುಂದರ ಕನಸೊಂದು ಹಳವಂಡವಾದ ದುರಂತಕ್ಕೆ ಮರುಗುತ್ತಾ…
ಥಾಮಸ್ ಹಾಬ್ಸ್, ಜಾನ್ ಲಾಕ್, ಜೀನ್ ಯಾಕ್ಸ್ ರೂಸೂ ಮುಂತಾದ ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರತಿಪಾದಕರ ಪ್ರಕಾರ ‘ಬಲವೇ ಹಕ್ಕು’ ಎಂಬ ಮಾನವತಾವಿರೋಧಿ ಅರಣ್ಯ ಕಾನೂನಿನಿಂದ ಅಶಕ್ತರನ್ನು ರಕ್ಷಿಸಿ, ಸಮಾಜದ ಎಲ್ಲರ ನಡುವೆ ಸಮಾನ ನ್ಯಾಯಹಂಚಿಕೆಗಾಗಿ ರಾಜ್ಯ ಸ್ಥಾಪನೆಗೊಂಡಿತಂತೆ. ಆದರೆ ಮಾನವಜನಾಂಗ ಮುಂದೆ ಹಿಡಿದ ದಾರಿಯಲ್ಲಿ ರಾಜ್ಯವೇ ಶೋಷಕನಾಗಿ ಬದಲಾದದ್ದನ್ನು ಇತಿಹಾಸ ಹೇಳುತ್ತದೆ. ಸಾಮಾಜಿಕ ಒಪ್ಪಂದಗಳ ಮೂಲಕ ಸಮಾನನ್ಯಾಯ ಹಂಚಿಕಾವ್ಯವಸ್ಥೆ ಸಾಧ್ಯವಾಗದೇ ಹೋದಾಗ, ಬಲವಂತದ ಮೂಲಕ, ರಕ್ತಪಾತದ ಮೂಲಕ ಅದು ಅಸ್ತಿತ್ವಕ್ಕೆ ಬರುತ್ತದೆಂದು ಭವಿಷ್ಯ ನುಡಿದ ಕಾರ್ಲ್ ಮಾರ್ಕ್ಸ್ ಒಬ್ಬ ವಾಸ್ತವವಾದಿ. ಅಂತಹ ವ್ಯವಸ್ಥೆಯನ್ನು ಚಿತ್ರಿಸಿದ ಕಮ್ಯೂನಿಸಂ ಒಂದು ಉದಾತ್ತ ಮಾನವಪರ ಚಿಂತನೆ. ಆದರೆ ವಾಸ್ತವವಾದಿ ರೂಪಿಸಿದ ಉದಾತ್ತ ಮಾನವಪರ ಸಿದ್ಧಾಂತ ತನ್ನ ಅವಾಸ್ತವವಾದಿ ಹಾಗೂ ಮಾನವವಿರೋಧಿ ಹಿಂಬಾಲಕರಿಂದಲೇ ಕಳಂಕ ಹಚ್ಚಿಸಿಕೊಂಡದ್ದೊಂದು ದುರಂತ. ಈ ಪ್ರಕ್ರಿಯೆ ಭಾರತದಲ್ಲಿ ಅನಾವರಣಗೊಂಡ ಬಗೆಯನ್ನು ಸಂಕ್ಷಿಪ್ತವಾಗಿ ಈಗಿಲ್ಲಿ ಹೇಳುತ್ತೇನೆ. ಮತ್ತಷ್ಟು ಓದು
ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ ( ಭಾಗ-೧ )
– ಪ್ರೇಮಶೇಖರ
ನಮ್ಮ ವಿಚಾರವಂತರು, ಸಾಂಸ್ಕೃತಿಕ ನಾಯಕರು ಶಕ್ತಿಮೀರಿ ಪ್ರಶಂಸಿಸಿದ್ದು, ಪ್ರಚುರ ಪಡಿಸಲು ಹೆಣಗಿದ್ದು ಕಮ್ಯೂನಿಸಂ ಮತ್ತು ಸೆಕ್ಯೂಲರಿಸಂಗಳನ್ನು. ಆದರೆ ಅವರ ನಿರೀಕ್ಷೆಗೆ ವಿರುದ್ಧವಾಗಿ ಕಮ್ಯೂನಿಸಂ ನಮ್ಮ ಸಮಾಜೋ-ರಾಜಕೀಯವಲಯದಲ್ಲಿ ಮುಂಚೂಣಿಗೆ ಬರಲೇ ಇಲ್ಲ. ಜತೆಗೆ, ತಾವು ಬಯಸಿದಂಥ ಸೆಕ್ಯೂಲರಿಸಂ ಇಲ್ಲಿ ನೆಲೆಯೂರಿಲ್ಲವೆಂದು ಅಲವತ್ತುಕೊಳ್ಳುತ್ತಲೇ ಇದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಇಂಥಾ ಗೋಳಾಟವನ್ನು ರಂಜನೀಯವಾಗಿ ಪ್ರದರ್ಶಿಸಿದ್ದು ಪತ್ರಕರ್ತ ಲಂಕೇಶ್, ಅವರಿಗೆ ಆಗಾಗ ‘ಅವಶ್ಯಕತೆ’ ಗನುಗುಣವಾಗಿ ಸಾಥ್ ನೀಡಿದ್ದು ಜ್ಞಾನಪೀಠಿ ಯು. ಆರ್. ಅನಂತಮೂರ್ತಿ. ಇವರ ಇಷ್ಟೆಲ್ಲಾ ಪ್ರಯತ್ನಗಳು ‘ಯಶಸ್ವಿ’ಯಾಗದಿರಲು ಕಾರಣವೇನು? ಸಾಮಾನ್ಯ ಜನತೆ ಇವರ ವಿಚಾರಗಳಿಗೆ ಇವರು ಬಯಸಿದಷ್ಟು ಸಹಮತಿ ತೋರದಿರಲು ಇರುವ ಕಾರಣವಾದರೂ ಏನು? ಜನ ದಡ್ಡರೇ? ಅಥವಾ ಈ ಬುದ್ದಿಜೀವಿಗಳಿಗಿಂತಲೂ ಹೆಚ್ಚಿನ ಬುದ್ಧಿವಂತರೇ? ಅಥವಾ ಈ ಬುದ್ಧಿಜೀವಿಗಳ ಪ್ರಚಾರ/ಪ್ರಲಾಪದಲ್ಲೇ ದೋಷವಿದೆಯೇ? ಈ ಪ್ರಶ್ನೆಗಳನ್ನು ಎರಡು ಭಾಗಗಳ ಈ ಲೇಖನದಲ್ಲಿ ಚರ್ಚೆಗೆತ್ತಿಕೊಳ್ಳುತ್ತಿದ್ದೇನೆ. ಮತ್ತಷ್ಟು ಓದು
ಮಾರ್ಕ್ಸ್ ವಾದ ಮತ್ತು ನೆಹರೂವಾದ ಗಾಂಧಿವಾದವನ್ನು ಕೊಂದಿತೇ?
ಡಾ|| ಬಿ.ವಿ ವಸಂತ ಕುಮಾರ್
ಕನ್ನಡ ಪ್ರಾಧ್ಯಾಪಕರು
ಮಹಾರಾಣಿ ಮಹಿಳಾ ಕಾಲೇಜು
ಮೈಸೂರು
ಇಂದು ಕೇರಳ ಹಾಗೂ ಕರ್ನಾಟಕದಲ್ಲಿ ಕ್ರಮವಾಗಿ ಮಾರ್ಕ್ಸ್ ವಾದಿ ಹಾಗೂ ನೆಹರೂವಾದೀ ಪ್ರಭುತ್ವಗಳು ಆಳುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಸೈದ್ಧಾಂತಿಕವಾದ ಕಾರಣಗಳಿಗಾಗಿ ಹಿಂದೂ ಕಾರ್ಯಕರ್ತರ ಕೊಲೆಗಳು ಆಗುತ್ತಿವೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದರೊಟ್ಟಿಗೆ ಕೇರಳ ಹಾಗೂ ಕರ್ನಾಟಕದ ಪಿ.ಎಫ್.ಐ ಸಂಘಟನೆಯು ಮುಸ್ಲಿಂ ಮೂಲಭೂತವಾದಿ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಸಂಗವಿರುವ ಸಂಘಟನೆಗಳ ಜೊತೆಗೆ ಹೆಸರು ತುಳುಕು ಹಾಕಿಕೊಂಡಿದೆ. ಈ ನಡುವೆ ದಕ್ಷಿಣ ಭಾರತದ ಹೆಸರಾಂತ ನಟ ಕಮಲಹಾಸನ್ ಹಿಂದೂ ಭಯೋತ್ಫಾದನೆಯ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅದನ್ನು ಮತ್ತೊಬ್ಬ ಕನ್ನಡದ ನಟ ಪ್ರಕಾಶ ರೈ ಸಮರ್ಥಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳನ್ನು ಬಿಜೆಪಿಯ ರಾಜ್ಯ ನಾಯಕರು ಹಾಗೂ ರಾಷ್ಟ್ರ ನಾಯಕರು ಖಂಡಿಸಿ ಹೋರಾಟಕ್ಕಿಳಿದಿದ್ದಾರೆ. ಮತ್ತಷ್ಟು ಓದು
ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು
– ಅನಿಲ್ ಚಳಗೇರಿ
ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು – 1
ಕೈಯಲ್ಲಿ ಉದ್ದನೇಯ ಕೋಲು, ಹೆಗಲಿಗೊಂದು ಚೀಲ, ಕಾಲಲ್ಲಿ ಸ್ಪೋರ್ಟ್ಸ್ ಶೂಸ್ ಹಾಕಿಕೊಂಡ ಹಿರಿಯರೊಬ್ಬರು ಆಗಲೇ ನಮ್ಮ ಜೊತೆ 23 ಕಿಲೋ ಮೀಟರಿನಿಂದ ನಡೆದುಕೊಂಡು ಬಂದಿದ್ದರು (ಹತ್ತಾರು ಸಾವಿರ ಕಾರ್ಯಕರ್ತರ ಮಧ್ಯೆ ಅದೆಲ್ಲೋ ಹತ್ತಿಪತ್ತನೇ ಸಾಲಿನಲ್ಲಿ ಯಾರಿಗೂ ಕಾಣದೆ), ನಾವು ಅವರನ್ನು ಕುತೂಹಲದಿಂದ ನೋಡುತ್ತಿರುವದನ್ನು ಗಮನಿಸಿದ ಅವರು, ತಮ್ಮನ್ನು ತಾವು ಪರಿಚಯಿಸಿಕೊಂಡರು. ” I am captain Pillai, retired army officer, I am 71 years young and I have been walking from the day one and covered 150 kms today” ಅಂತ ಹೇಳಿದರು. ನಿಮಗೆ ಪ್ರೇರಣೆಯೇನು ? ನಿಮ್ಮ ಅಥವಾ ಮೇಲೆ ಏನಾದ್ರೂ ಅಟ್ಯಾಕ್ ಆಗಿತ್ತಾ?, ಅಂತ ಕೇಳಿದರೆ, “ನಾನು ದೇಶಕ್ಕೋಸ್ಕರ ದುಡಿದವನು, ನನಗೆ ಕಳ್ಳ ಕಮ್ಯುನಿಸ್ಟರ ನರಿ ಬುದ್ಧಿಯ ಬಗ್ಗೆ ತುಂಬಾ ಚೆನ್ನಾಗಿ ಗೊತ್ತು, ” ನನ್ನ ಕೊನೆಯ ಉಸಿರಿರುವವರೆಗೆ ಅವರನ್ನು ವಿರೋಧಿಸುವೆ” ಅಂದಾಗಲೇ ನೆನಪಾಗಿದ್ದು ಅಕ್ಷಯ್ ಕುಮಾರ್ ನಟಿಸಿದ ” ಹಾಲಿಡೇ” ಚಿತ್ರ. “a soldier never takes rest” ಶೀರ್ಷಿಕೆ…. ಮುಂದೆರಡು ದಿನ ಎಪ್ಪತ್ತರ ಹರೆಯದ ಆ ಮಾಜಿ ಸೈನಿಕನ ದಿಟ್ಟ ಹೆಜ್ಜೆಗಳೇ ನಮ್ಮೆಲ್ಲರ ನಡಿಗೆಗೆ ಪ್ರೇರಣೆಯಾಯಿತು … ಮತ್ತಷ್ಟು ಓದು
ಭಾರತದ ಮುಂದಿರುವ ಡೊಕ್ಲಮ್ ಸವಾಲು…
– ಶ್ರೇಯಾಂಕ ಎಸ್ ರಾನಡೆ
ಡೊಕ್ಲಮ್, ಭಾರತ-ಭೂತಾನ್-ಚೀನಾ ಮೂರು ದೇಶಗಳ ನಡುವಿನ ಬಹು ಆಯಕಟ್ಟಿನ 89 ಚದರ ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿರುವ ಸಂಕೀರ್ಣ ಪ್ರದೇಶ. ಇದು ಭೂತಾನ್‍ನ ಪಶ್ಚಿಮ ಗಡಿ ಭಾಗದಲ್ಲಿದೆ. ಅಂದರೆ ಟಿಬೆಟ್‍ನ ಆಗ್ನೇಯ ದಿಕ್ಕಿನಲ್ಲಿದೆ. ಮುಖ್ಯವಾಗಿ ಇದು ಭಾರತಕ್ಕೆ ಮುಖ್ಯವಾಗಿರುವ ಚುಂಬಿ ಕಣಿವೆಯ ಸಂಯೋಗ ಸ್ಥಾನದಲ್ಲಿದೆ. ಅದು ಅಧಿಕೃತವಾಗಿ ಭೂತಾನ್‍ನ ಭೂಭಾಗ. ಅನೇಕ ಕಾರಣಗಳಿಂದ ಮೂರು ದೇಶಗಳಿಗೂ ಬಹುಮುಖ್ಯ ಭೂಪ್ರದೇಶ. ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದೆಂದರೆ ಸಿಕ್ಕಿಂನ ಬಹು ಮೌಲ್ಯಯುತ ಚುಂಬಿ ಕಣಿವೆ, ಭೂತಾನ್ ಹಾಗೂ ಇನ್ನೂ ಮುಖ್ಯವಾಗಿ ಸಿಲಿಗುರಿ ಕಾರಿಡಾರ್ ಮುಖೇನ ಈಶಾನ್ಯ ಭಾರತದ ಎಲ್ಲಾ ಚಟುವಟಿಕೆಗಳ ಪ್ರತ್ಯಕ್ಷ ನಿಗಾ ಹಾಗೂ ಪರೋಕ್ಷವಾಗಿ ತಮ್ಮ ಹಿತಾಸಕ್ತಿಗಳಿಂದ ಪ್ರಾದೇಶಿಕ ಪ್ರಾಬಲ್ಯ ಪಡೆದಂತಾಗುತ್ತದೆ. ಹಾಗಾಗಿಯೇ ಇದು ಕೇವಲ ಮೇವು ಬೆಳೆಯುವ ಖಾಲಿ ಗುಡ್ಡದ ನಿಸ್ತೇಜ ಜಾಗವಲ್ಲ. ಮೂರು ದೇಶಗಳ ಮೇಲೆ ಪ್ರಾಬಲ್ಯ ಸಾಧಿಸಬಲ್ಲ ಶಕ್ತಿಯುಳ್ಳ ಆರ್ಥಿಕ, ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಕಾರಣಗಳಿಂದ ಶಕ್ತಿಸಂಪನ್ನವಾಗಿರುವ ಸುರಕ್ಷಿತ, ಅನುಕೂಲಕರ ತಾಣ. ಈ ಮೂಲಭೂತ ಉದ್ದೇಶದಿಂದ ಇದರ ಮೇಲೆ ಚೀನಾ ಹಾಗೂ ಭಾರತ ಅಪಾರ ಆಸಕ್ತಿ ವಹಿಸಿವೆ. ಮತ್ತಷ್ಟು ಓದು
ಡೊಕ್ಲಮ್ ಸದ್ದು, ಚೀನಾ ದರ್ದು: ಭಾರತ-ಚೀನ ಪ್ರಚಲಿತ ಕಥನ
– ಶ್ರೇಯಾಂಕ ಎಸ್ ರಾನಡೆ
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ
ನಾವು ನಮ್ಮ ಸ್ನೇಹಿತರನ್ನು ಆಯ್ಕೆಗೆ ತಕ್ಕಂತೆ ಬದಲಾಯಿಸಬಹುದು ಆದರೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ನೆರೆಹೊರೆಯ ದೇಶ-ಪ್ರದೇಶಗಳನ್ನಲ್ಲ. “ನಾ ಕೊಡೆ ಎನ್ನುವ ಭಾರತ, ತಾ ಬಿಡೆ ಎನ್ನುವ ಚೀನಾ ಹಠ. ಮಧ್ಯದಲ್ಲಿ ಬಿಕ್ಕಟ್ಟಿಗೆ ಸಿಲುಕಿರುವ ಡೊಕ್ಲಮ್ ಪ್ರದೇಶದ ವಾರಸುದಾರ ಭೂತಾನ್”. 1962ರ ಪರಿಸ್ಥಿತಿ ಈಗಿಲ್ಲ. ಎರಡೂ ಪರಮಾಣುಶಕ್ತಿಯ ಶಕ್ತಿಶಾಲಿ ದೇಶಗಳು. ಅದೇ ಹೊತ್ತಿಗೆ ಇಬ್ಬರೂ ನ್ಯೂಕ್ಲಿಯರ್ ಶಸ್ತ್ರಗಳ “ಮೊದಲ ಬಳಕೆ ಇಲ್ಲ”(ನೋ ಫಸ್ಟ್ ಯೂಸ್) ಎಂಬ ತತ್ವ ಪಾಲಿಸುವ ಜವಾಬ್ದಾರಿ ಹೊತ್ತಿವೆ. ಅಂದಿಗೆ “ಹುಲ್ಲುಕಡ್ಡಿಯೂ ಬೆಳೆಯದ ಬರಡು ಭೂಮಿ”(1962, ಅಂದಿನ ಪ್ರಧಾನ ಮಂತ್ರಿ, ನೆಹರೂ ಜವಾಹರ್ ಲಾಲ್ ಮಾತುಗಳು, ಚೀನಾದ ಅತಿಕ್ರಮಣ ಪ್ರವೇಶಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿನ ಹೇಳಿಕೆ) ಎಂದು ನಿರ್ಲಕ್ಷಿಸಲಾಗಿದ್ದ, ಆದರೆ ಇಂದಿಗೆ ಚೀನಾದ ಸಾರ್ವಭೌಮತೆಯ ಪ್ರತಿಷ್ಟೆ ಹಾಗೂ ಭಾರತದ ಆಂತರಿಕ ಭದ್ರತೆಯ ಅನಿವಾರ್ಯತೆಯ ದೃಷ್ಟಿಯಿಂದ ಅಸ್ಪಷ್ಟ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳು ಈವರೆಗಿನ ಭಾರತ-ಚೀನಾ ಗಡಿ ವಿವಾದದ ಜ್ವಲಂತತೆಗೆ ಮೂಲ. ಅದೀಗ “ಡೊಕ್ಲಮ್” ಕಾರಣದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಬೂದಿಮುಚ್ಚಿದ ಕೆಂಡದಂತಿರುವ ಈ ಸರ್ವಋತು ಸಮಸ್ಯೆ 52 ದಿನಗಳ ಬಿಗಿ ಸಂಘರ್ಷಾತ್ಮಕ ವಾತಾವರಣದಿಂದ ಬದಲಾವಣೆಯ ಮುಂದಿನ ದಾರಿಕಾಣದೆ ವಿಚಲಿತವಾಗಿದೆ. ಮತ್ತಷ್ಟು ಓದು