ಕಾರ್ಗಿಲ್ ವಿಜಯೋತ್ಸವ ಕಲಿಸಿದ ಪಾಠಗಳು
– ಅಜಿತ್ ಶೆಟ್ಟಿ ಹೆರಂಜೆ
ಇಂದು ಕಾರ್ಗಿಲ್ ವಿಜಯ ದಿವಸದ ವರ್ಷಾಚರಣೆಯನ್ನು ನಾವು ದೇಶದಾದ್ಯಂತ ಮಾಡುತ್ತಿದ್ದೇವೆ. 1999ಮೇ ತಿಂಗಳಲ್ಲಿ ಪ್ರಾರಂಭವಾದ ಈ ಯುದ್ಧ ಸುಮಾರು 3 ತಿಂಗಳುಗಳ ಕಾಲ ನಡದು 27 ನೆ ಜುಲೈ 1999 ಕ್ಕೆ ಮುಕ್ತಾಯಗೊಂಡಿತು. ಈ ಭೀಷಣ ಯುದ್ಧದಲ್ಲಿ ಭಾರತ ಒಟ್ಟು ತನ್ನ 724 ವೀರ ಸೈನಿಕರನ್ನು ಕಳೆದುಕೊಂಡಿತು. ಈ ಯುದ್ಧಕ್ಕೆ ಪ್ರತಿ ದಿನ ಸರ್ಕಾರಕ್ಕೆ 10 ರಿಂದ 15 ಕೋಟಿಯಷ್ಟು ವೆಚ್ಚವಾಗಿತ್ತು. ಹಾಗಿದ್ದಾಗ ಈ ಯುದ್ಧಕ್ಕೆ ಸರ್ಕಾರ ಖರ್ಚು ಮಾಡಿದ ಒಟ್ಟು ವೆಚ್ಚ ನೀವೇ ಅಂದಾಜಿಸಿ. ಈ ಯುದ್ಧ ನಮಗೆ ಕಲಿಸಿದ ಪಾಠ ಅನೇಕ. ಅದರಲ್ಲೂ 21ನೆ ಶತಮಾನದ ಹೊಸ್ತಿಲಿನಲ್ಲಿ ನಡೆದ ಈ ಯುದ್ಧ, ಯಾವುದೇ ಯುದ್ಧವನ್ನು ಗೆಲ್ಲಲು ಕೇವಲ ಸೈನ್ಯ ಶಕ್ತಿ ಅಷ್ಟೇ ಅಲ್ಲ ಅತ್ಯಾಧುನಿಕ ತಂತ್ರಜ್ಞಾನವೂ ಅತ್ಯಂತ ಆವಶ್ಯಕ ಎನ್ನುವ ಪಾಠವನ್ನು ನಮ್ಮ ದೇಶ ರಾಜಕೀಯ ನಾಯಕರಿಗೆ ಕನ್ನಡಿ ತೋರಿಸಿ ಕೆನ್ನೆಗೆ ಬಾರಿಸಿ ಹೇಳಿತು.ಕಾರ್ಗಿಲ್ ಯುದ್ಧ ನಮಗೆ ಕಲಿಸಿದ ಮತ್ತು ನಾವು ಅದರಿಂದ ಕಲಿತ ಪಾಠವೇನು.? ಬನ್ನಿ ತಿಳಿಯೋಣ.
ಸಾಮಾನ್ಯವಾಗಿ ಯುದ್ಧವನ್ನು ಗೆಲ್ಲಬೇಕಾದರೆ ವೈರಿ ಪಡೆಯನ್ನು ಕಟ್ಟಿ ಹಾಕಿ ಅವರ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದಮೇಲೆ, ವೈರಿಗಳ ವಿರುದ್ಧ ಯಾವ ರೂಪದ ಕಾರ್ಯಾಚರಣೆ ಮಾಡಬೇಕು, ಅದಕ್ಕೆ ಬೇಕಾಗಿರುವ ಸೈನ್ಯದ ಸಂಖ್ಯೆ ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು ಇತ್ಯಾದಿಗಳನ್ನು ನಿರ್ಧರಿಸಿದಮೇಲಷ್ಟೇ ಯುದ್ಧ ತಂತ್ರ ರೂಪಿಸುವುದು. ದುರಾದೃಷ್ಟವಶಾತ್ ಕಾರ್ಗಿಲ್ ಯುದ್ಧ ಆರಂಭವಾಗಿ ಅದನ್ನು ಬಹುತೇಕ ಮುಗಿಸುವ ತನಕ ನಮಗೆ ನಿಖರವಾಗಿ ಶತ್ರುಗಳು ಯಾರು ಅವರು ನಿಜವಾಗಿಯೂ ಪಾಕಿಸ್ತಾನ ಹೇಳಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರಾವಾದಿಗಳೋ ಅಥವಾ ಪಾಕಿಸ್ತಾನದ ಸೈನಿಕರೋ ಅನ್ನುವುದು ಮತ್ತು ಈ ವೈರಿ ಪಡೆಯ ಸಂಖ್ಯೆ ಎಷ್ಟು ಇವರು ಅಡಗಿರುವ ಆಯಕಟ್ಟಿನ ಸ್ಥಳಗಳು ಯಾವುದು, ಅವರಲ್ಲಿ ಎಷ್ಟು ಮದ್ದು ಗುಂಡುಗಳ ದಾಸ್ತಾನುಗಳಿವೆ. ಅವರಲ್ಲಿ ಇರೋ ಶಸ್ತ್ರಾಸ್ತ್ರಗಳ ಬಗ್ಗೆ ಯಾವುದೆ ಸ್ಪಷ್ಟ ಮಾಹಿತಿಗಳಿಲ್ಲದೆ ಕೇವಲ ಒಂದು ಅಂದಾಜಿನ ಮೆಲೆ ಯುದ್ದ ಮಾಡಿದ್ದೆವು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಕುರುಡ ಆನೆಯನ್ನು ವರ್ಣಿಸಿದಂತೆ, ನಮಗೆ ಅಂದು ಕಾರ್ಗಿಲ್ ಒಳಗೆ ನುಸುಳಿ ಬಂದ ಪಾಕಿಸ್ತಾನದ ನುಸುಳುಕೋರರ ಬಗ್ಗೆ ಇದ್ದ ಮಾಹಿತಿ.
ಮೇ ೩, ೧೯೯೯ ರಂದು ತಾಂಶಿ ನಾಮ್ ಗ್ಯಾಲ್ ಎನ್ನುವ ಸ್ಥಳೀಯ ಕುರುಬ, ಬಂಜೂ ಟಾಪ್ ನಲ್ಲಿ ಕೆಲವು ಉಗ್ರರ ಚಟುವಟಿಕೆ ಬಗ್ಗೆ ಮಾಹಿತಿ ಕೊಟ್ಟ ನಂತರ ಯುದ್ಧ ಶುರುವಾಯಿತು. ಕಾರ್ಗಿಲ್ ಯುದ್ಧ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಮಯ ಭಾರತೀಯ ಸೈನ್ಯ ಸುಮಾರು ೬೦%ದಷ್ಟು ಯುದ್ಧವನ್ನು ಪೂರೈಸಿದ ಸಮಯ. ಅಂತಹ ಸಂದರ್ಭದಲ್ಲಿ ಭಾರತೀಯ ಸೈನ್ಯದ ಓರ್ವ ಅಧಿಕಾರಿ ಕಾರ್ಗಿಲ್ ಪರ್ವತ ಶ್ರೇಣಿಯ ಉಗ್ರರ ಗುಂಡಿಗೆ ಹುತಾತ್ಮನಾಗುವ ಮುಂಚೆ ತಮ್ಮ ಮೇಲಧಿಕಾರಿಗೆ ಕಾಗದ ಬರೆದು ಹೇಳುತ್ತಾ, “ನಾವು ಯಾರೊಡನೆ ಯುದ್ಧ ಮಾಡುತ್ತಿದ್ದೇವೆ ಎನ್ನುವುದೇ ನಮಗೆ ಗೊತ್ತಿಲ್ಲ. ಇದು ನಮ್ಮನ್ನ ಪ್ರಪಾತದತ್ತ ಕೊಂಡೊಯ್ಯುಯುತ್ತಿದೆ”.. ಎಂದು ಹೇಳಿದ್ದರು.ಇದು ಕಾರ್ಗಿಲ್ ಯುದ್ಧದಲ್ಲಿ ಸೈನ್ಯಕ್ಕೆ ಸರ್ಕಾರಕ್ಕೆ ಇದ್ದ ಕ್ಲಾರಿಟಿ.ಇದೇ ಕಾರಣಕ್ಕೆ ನಾವು ಕ್ಯಾಪ್ಟನ್ ಸೌರಬ್ ಕಾಲಿಯ, ಕ್ಯಾಪ್ಟನ್ ವಿಕ್ರಮ್ ಭಾತ್ರ ಕ್ಯಾಪ್ಟನ್ ಅಹುಜಾ ಮುಂತಾದವರು ಸೇರಿದಂತೆ ಸುಮಾರು 724 ಮಂದಿ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು. ಕ್ಯಾಪ್ಟನ್ ನಚಿಕೆತ್ ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ಪಡಬಾರದ ಕಷ್ಟ ಸಹಿಸಬೇಕಾಗಿ ಬಂತು. ಇದು ಅಂದಿನ ಸರ್ಕಾರ ಮತ್ತು ಸೈನ್ಯದ ಕಾರ್ಯವಿಮುಖತೆ ಯಿಂದ ಆದ ಘಟನೆಯಲ್ಲ. ಬದಲಾಗಿ ಹಿಂದಿನ ಸರ್ಕಾರಗಳ ಅವರು ಆಡಳಿತದ ಸಮಯದಲ್ಲಿ ಅಂದಿನ ಯದ್ದಗಳು ಕಲಿಸಿದ ಪಾಠವನ್ನು ಕಲಿಯದೆ,ಕರ್ತವ್ಯ ವಿಮುಖರಾಗಿದ್ದು ಕಾರಣ.ಅಂದು ನಮ್ಮಲ್ಲಿ ತಂತ್ರಜ್ಞಾನದ ಮುಖಾಂತರ ವೈರಿಪಡೆಯ ಗತಿವಿಧಿ,ಸಂಖ್ಯೆ ಮತ್ತು ಅವರು ಹೊಂದಿರುವ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ತಿಳಿಯುವ,ಗುಪ್ತಚಾರಿಕೆ ಮಾಡುವ ಯಾವುದೇ ವ್ಯವಸ್ಥೆ, ಸಾಧನ ಸಲಕರಣೆಗಳು ಇರಲಿಲ್ಲ.ಇಂತಹಾ ಉಪಯುಕ್ತ ಮಾಹಿತಿ ಕೊಡುವ ಬೇಹುಗಾರಿಕ ಉಪಗ್ರಹಗಳು ಇರಲಿಲ್ಲ..!! ಕಾರ್ಗಿಲ್ ಯುದ್ಧದಲ್ಲಿ ನಾವು ಬಹುತೇಕ ಸೈನಿಕರನ್ನು ಪಾಕಿಸ್ತಾನದ ಸೈನ್ಯದ ವಿರುದ್ದ ನೇರ ಯದ್ದದಲ್ಲಿ ಕಳೆದುಕೊಂಡದ್ದಲ್ಲ. ಬದಲಿಗೆ ವೈರಿಗಳ ಬಗ್ಗೆ ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಕಳೆದುಕೊಂಡದ್ದು.ಈ ರೀತಿ ಇಪ್ಪತ್ತೊಂದನೇ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನ ಎಷ್ಟು ಅವಶ್ಯಕ ಎನ್ನುವುದು ಕಾರ್ಗಿಲ್ ಯದ್ದ ಕಲಿಸಿದ ಮೊತ್ತಮೊದಲ ಪಾಠ..!!
ಕಾರ್ಗಿಲ್ ಕಥನವೆಂದರೆ ಅದ್ಯಾವುದೋ ಹಾಲಿವುಡ್, ಬಾಲಿವುಡ್ ಸಿನೆಮಾ ಕಥೆಯಲ್ಲ!
– ಶಿವಾನಂದ ಶಿವಲಿಂಗ ಸೈದಾಪೂರ.
ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವು ಕಾಮೇಂಟ್ಸ್ ಚಕಮಕಿಗಳನ್ನು ಪ್ರತಿಯೊಬ್ಬರು ನೋಡಿಯೇ ನೋಡುತ್ತೆವೆ. ಸಾಕಷ್ಟು ದುಡ್ಡು ತೆಗೆದುಕೊಂಡು ನಟಿಸುವ ಹೆಸರಿಗೆ ಮಾತ್ರ ಹೀರೊಗಳಾಗಿರುವ ನಟರಿಗೆ ಇಂದು ಪ್ಯಾನ್ಸ್ ಕ್ಲಬ್‍ಗಳು ಬೇಕಾಬಿಟ್ಟಿಯಾಗಿ ಬೆಳೆದಿವೆ. ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಮೇಲೆ ಎಗರಾಡುವುದು ಏರಾಡುವುದು ಮಿತಿ ಮಿರಿದೆ. ರೀಲ್ ಕಥೆಯ ನಾಯಕರಿಗೆ ರಿಯಲ್ ಬಿಲ್ಡಪ್ ಅಂತು ಅತಿಯಾಗಿದೆ. ಕಟೌಟ್ ಮೇಲೆ ಬೀಳುವ ಹಾಲಿನ ಕ್ಯಾನ್ ಗಳಿಗೇನು ಕೊರತೆಯಿಲ್ಲ. ಪ್ರತಿಯೊಂದು ಭಾಷೆಯಲ್ಲಿ ವಾರಕ್ಕೆ ಕನಿಷ್ಠ ಸುಮಾರು ಮೂರರಿಂದ ನಾಲ್ಕು ಸಿನೇಮಾ ಬಿಡುಗಡೆಯಾದರೂ ಕೂಡ ಸಾಮಾನ್ಯವಾಗಿ ಎಲ್ಲವನ್ನೂ ನೋಡುತ್ತೆವೆ. ಮತ್ತೆ ಮುಂದಿನ ವಾರದ ಹೋಸ ಸಿನೆಮಾ ಬರುವರೆಗೂ ಅದನ್ನು ಮೆಲುಕು ಹಾಕುತ್ತೆವೆ. ಬಿಡುಗಡೆಗೊಂಡ ಸಿನೇಮಾದ ನಾಯಕ, ನಾಯಕಿ, ಕಳನಾಯಕ, ನಿರ್ದೇಶಕ, ನಿರ್ಮಾಪಕನಿಂದ ಹಿಡಿದು ಪೋಷಕ ನಟನವರೆಗೂ ಎಲ್ಲರೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ…! ಮತ್ತಷ್ಟು ಓದು
ಕಾರ್ಗಿಲ್ ಕದನ; ಕಡಲಲ್ಲಿ ಐಎನ್ ಎಸ್ ತಾರಾಗಿರಿ ಕಲರವ
– ಸಂತೋಷ್ ತಮ್ಮಯ್ಯ
ವಿಜಯ ಎಂಬುದೇ ಹಾಗೆ. ಅದಕ್ಕೆ ನಾನಾ ಅರ್ಥಗಳು. ನಾನಾ ಮಜಲುಗಳು. ಅದು ಕಂಡಷ್ಟೇ ಅಲ್ಲ. ವಿಜಯ ಯಾರಿಗೂ ಪುಕ್ಕಟೆಯಾಗಿ ಒಲಿದಿಲ್ಲ. ಜಿದ್ದಿಗೆ ಬೀಳದೆ ಅದು ದಕ್ಕುವುದೂ ಇಲ್ಲ. ಅದರ ಹಿಂದೋಡಿದವರನ್ನು ವಿಜಯ ಪಾತಾಳಕ್ಕೆ ತಳ್ಳಿದ, ಹೇಳಹೆಸರಿಲ್ಲದಂತೆ ಮಾಡಿದ ಉದಾಹರಣೆಗಳಿವೆ. ತಾನೊಲಿಯಲು ನೆಲವನ್ನೂ ಹದಗೊಳಿಸಿ, ಮಾಯಾಮೃಗದಂತೆ ದಿಕ್ಕುತಪ್ಪಿಸಿ ಪರೀಕ್ಷೆಗೊಳಪಡಿಸಿ ಎಲ್ಲವನ್ನೂ ತೂಕಕಿಟ್ಟ ನಂತರ ವಿಜಯ ಒಲಿಯುತ್ತದೆ. ಹಾಗಾಗಿ ವಿಜಯಕ್ಕೆ ಮೆಟ್ಟಿಲುಗಳು ಹೆಚ್ಚು. ಎತ್ತರವೂ ಜಾಸ್ತಿ.
ವಿಜಯವೆಂಬುದು ಯಜ್ಞದಂತೆ. ಅದು ಹವಿಸ್ಸನ್ನು ಬೇಡುತ್ತದೆ. ತನ್ನ ಹಾದಿಯಲ್ಲಿ ನೋವನ್ನೂ ಕೊಡುತ್ತದೆ. ಇನ್ನೇನು ಸಿಕ್ಕೇ ಬಿಟ್ಟಿತು ಎಂಬಷ್ಟರಲ್ಲಿ ಸಕಾಲವಲ್ಲ ಎಂಬಂತೆ ಮುಂದೋಡುತ್ತದೆ. ವಿಜಯವೆಂಬುದು ಮಾಯೆಯೂ ಹೌದು. ಅದು ರುಚಿ ಹಿಡಿಸುತ್ತದೆ, ಮೋಹಗೊಳಿಸುತ್ತದೆ. ಆದರೆ ಮೋಹದಿಂದಲೇ ವಿಜಯ ಒಲಿಯದು. ಒಲಿದ ವಿಜಯ ಪಡೆದವನನ್ನ್ನೇ ಒರೆಗೆ ಹಚ್ಚುತ್ತದೆ. ಗೆಲುವಿನಿಂದ ಆರ್ಭಟಿಸಿದವನನ್ನು ಕಾಲ ಕೆಳಗೆ ಹೊಸಕಿಹಾಕುತ್ತದೆ. ಆದರೆ ಪ್ರಾಯಾಸದಿಂದ ವಿಜಯಿಯಾದವನನ್ನು, ವಿಜಯದ ತತ್ವವನ್ನು ಕಾಪಿಟ್ಟುಕೊಂಡವನನ್ನು ವಿಜಯವೇ ಆರಾಧಿಸುತ್ತದೆ. ಬಹುಕಾಲ ಆ ವಿಜಯವನ್ನು ಲೋಕ ನೆನಪಿಟ್ಟುಕೊಂಡಿರುತ್ತದೆ.
ಕಾರ್ಗಿಲ್ ವಿಜಯ ದಿನ
– ಮಯೂರಲಕ್ಷ್ಮಿ
ಅವರ ಕನಸುಗಳಲ್ಲಿ ನಾಳಿನ ನೆಮ್ಮದಿಯ ಬದುಕಿಲ್ಲ….
ಅವರ ಮನಸುಗಳಲ್ಲಿ ಬದುಕಿ ಬರುವ ಸುಳಿವಿಲ್ಲ….
ಮರಳಿ ಮನೆಗೆ ಹಿಂದಿರುಗಲೆಂದು ಹೆತ್ತವರ ಆಶಯ..
ಕೊರೆವ ಹಿಮದ ತಮದಲ್ಲಿ ಅಹರ್ನಿಶೆ ಕಾದಾಟದ ಭಯ…
ತ್ಯಾಗ-ಬಲಿದಾನವೇ ಸಾರ್ಥಕತೆಯ ವಿಜಯ!
ಹೌದು, ದೇಶವು ನಿದ್ರಿಸುತ್ತಿರಲು ಸುಂದರ ಭವಿಷ್ಯದ ಕನಸಿಲ್ಲದೆ, ವೈಯುಕ್ತಿಕ ಸುಖದ ಮರೀಚಿಕೆಯ ಸೋಗಿಲ್ಲದೆ, ರಕ್ತಸಿಕ್ತ ದೇಹಗಳಲ್ಲಾಗುವ ಗಾಯಗಳ ಕಿಂಚಿತ್ತೂ ನೋವಿಲ್ಲದಂತೆ ಕ್ಷಣಕ್ಷಣದಲ್ಲೂ ಆಪತ್ತಿನ ಕತ್ತಲೆಯ ಕಂದಕಗಳಲ್ಲಿ ಎಚ್ಚರದಿಂದಿದ್ದು ಗಡಿ ಕಾಯುವ ಅವರೇ ದೇಶದ ನಿಜ ನಾಯಕರು.ನಮ್ಮ ದೇಶದ ಅತ್ಯಧಿಕವೆನಿಸುವ ಆಪತ್ತುಗಳ ಪ್ರವಾಹ ಹರಿದಾಗ,ಭೂಕಂಪವಾದಾಗ, ಗಲಭೆಗಳಾದಾಗ, ನಿರಾಶ್ರಿತರಿಗೆ ನೆರವಾಗಲು ಅವರು ಸದಾ ಸಿದ್ಧ! ಗಡಿಗಡಿಗಳಲ್ಲಿ ಜೀವಭಯವಿಲ್ಲದೆ ಕಣಕಣಗಳಲ್ಲಿ ರಕ್ಷಣೆಯ ಹೊಣೆ ಹೊತ್ತು ನಮ್ಮನ್ನು ಕಾಪಾಡಲು ಧಾವಿಸುವ ಕೊನೆಯ ಆಸರೆಯೇ ಸೈನಿಕರು.