ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕಾವೇರಿ’

18
ಸೆಪ್ಟೆಂ

ದಕ್ಷಿಣ ಭಾರತದ ಜೀವನದಿಯಲ್ಲಿ ಮಹಾಪುಷ್ಕರ.

-ಶ್ರೇಯಾಂಕ ಎಸ್ ರಾನಡೆ.

“177 ವರ್ಷಗಳ ನಂತರ ಮತ್ತೆ ಪುನರಾವರ್ತನೆಯಾಗುತ್ತಿರುವ ಐತಿಹಾಸಿಕ ಮಹಾಪುಷ್ಕರ ಮೇಳ. ಸೆಪ್ಟೆಂಬರ್ 12 ರಿಂದ 24ರ ವರೆಗೆ 12 ದಿನಗಳೂ ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾವೇರಿ ನದಿಪಾತ್ರದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳಲ್ಲಿ ಮಿಂದೇಳುವ ಸಂಭ್ರಮ. “ತಲಕಾವೇರಿಯಿಂದಮಾ ಬಂಗಾಳಕೊಲ್ಲಿಯ ವರಮಿರ್ಪ ನದಿಯೇ ಕಾವೇರಿ.” ಈ ಹೊತ್ತಿನಲ್ಲಿ ಮರೆಯಬಾರದ ಸಂಗತಿ, “ಪುಷ್ಕರಮೇಕೆಂಬೇಯೇನ್ ಉಳಿಸುವುದಕೆ ಮರ್ತು” ಮತ್ತು “ಗಂಗೇಚ ಯಮುನೆಚೈವ” ಎಂಬ ಜಾಗೃತ ಪ್ರಜ್ಞೆಯ ಅನಿವಾರ್ಯತೆ. ಮತ್ತಷ್ಟು ಓದು »

13
ಆಕ್ಟೋ

ಪಕ್ಷ ರಾಜಕಾರಣದ ಮರ್ಮಗಳು

ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ

mar2214udupichik01ರಾಜಕಾರಣವೆಂಬುದು ಇಂದಿಗೆ ಪಕ್ಷಕ್ಕೆ ಮಾತ್ರ ಸೀಮಿತವಾಗಿ, ಪ್ರದೇಶಗಳು ಎರಡನೇ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕರ್ನಾಟಕ ಸರ್ಕಾರವೆಂಬುದು ಕಾಂಗ್ರೆಸ್ ಸರ್ಕಾರ ಎಂಬ ಮಿತಿಯ ಒಳಗೆ ಕಾರ್ಯನಿರ್ವಹಿಸಲು ಇಚ್ಚಿಸುತ್ತದೆಯೇ ಹೊರತು ರಾಜ್ಯ ಸರ್ಕಾರವಾಗಿ ಅಲ್ಲ. ಇದು ಕಾಂಗ್ರೆಸ್‍ ಪಕ್ಷದ ಮಿತಿ ಎಂದು ಭಾವಿಸದೆ ಆಡಳಿತಕ್ಕೆ ಬರುವ ಬಹುತೇಕ ಪಕ್ಷಗಳ ಹಣೆಬರಹವಾಗಿದೆ. ಆದ್ದರಿಂದ ಸರ್ವತೋಮುಖ ಅಭಿವೃದ್ಧಿಯ ಬದಲು ಭಾಗಶಃ ಅಭಿವೃದ್ಧಿಯ ಕಾರ್ಯಚಟುವಟಿಕೆಗಳನ್ನು ಸರ್ಕಾರಗಳು ಕೈಗೆತ್ತಿಕೊಳ್ಳುತ್ತವೆ. ಹಾಗಾಗಿ ತುಷ್ಟೀಕರಣದ ರಾಜಕಾರಣ ಹೆಚ್ಚಾಗಿ ಇಂದು ಕಾಣಬಹುದಾಗಿದೆ. ಮತ್ತಷ್ಟು ಓದು »

10
ಆಕ್ಟೋ

ಕಾವೇರಿ = ಕನ್ನಡ/ಕನ್ನಡಿಗ?

– ಚೇತನಾ ಹೆಗಡೆ

ಕಾವೇರಿ = ಕನ್ನಡ/ಕನ್ನಡಿಗ?

river_cauvery_enಈ ಪ್ರಶ್ನೆ ನನ್ನನ್ನು ಚಿಕ್ಕಂದಿನಿಂದಲೂ ಕಾಡಿದೆ. ಕಾರಣ ನಮ್ಮ ಸಿನಿಮಾಗಳು ಮತ್ತು ಅವುಗಳ ಹಾಡುಗಳು. ಕನ್ನಡ ಭಾಷೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಹಾಡು ಇದ್ದರೂ ಅದರಲ್ಲಿ ಕಾವೇರಿಯ ಉಲ್ಲೇಖ ಪಕ್ಕಾ. ಯಾಕೆ ಕಾವೇರಿ ನದಿಗೆ ಇಷ್ಟೊಂದು ಪ್ರಾಮುಖ್ಯತೆ ಎಂಬುದು ದೇವರಾಣೆಗೂ ಅರ್ಥವಾಗಿರಲಿಲ್ಲ.

ಸತ್ಯ ಹೇಳುತ್ತೇನೆ, ಅಪ್ಪಟ ಮಲೆನಾಡಾದ ಶಿರಸಿಯಲ್ಲಿ ಹುಟ್ಟಿ ಬೆಳೆದ ನನಗೆ ನೀರಿನ ಕೊರತೆ ಎಂಬುದು ಅಷ್ಟಾಗಿ ಕಾಡಿರಲಿಲ್ಲ. ಪ್ರತೀ ಮನೆಯೂ ಒಂದೊಂದು ಸಿಹಿನೀರಿನ ಬಾವಿ ಹೊಂದಿರುವುದು ವಿಶೇಷವೇ ಅಲ್ಲ. ಹಳ್ಳಿಗಳಲ್ಲಿ ಮನೆಯ ಹಿಂದುಗಡೆಯೇ ಗುಡ್ಡದಿಂದ ಇಳಿದು ಬರುವ ನೀರಿನ ಝರಿಗಳು ಬಹು ಸಾಮಾನ್ಯವಾಗಿದ್ದ ಕಾಲ. ಹಾಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಹುಟ್ಟಿದ/ಹರಿಯುವ ನದಿಗಳಾದ ಅಘನಾಶಿನಿ, ಶರಾವತಿ, ಬೇಡ್ತಿ, ಕಾಳಿ, ವರದಾ ಮುಂತಾದ ಯಾವ ನದಿಯ ನೀರನ್ನೂ ಕುಡಿದು ಬೆಳೆದವಳಲ್ಲ ನಾನು… ಮತ್ತಷ್ಟು ಓದು »

4
ಆಕ್ಟೋ

ಮನೆಯೊಂದು ಮೂರು ಬಾಗಿಲು…..

– ಮು ಅ ಶ್ರೀರಂಗ

28_ramya_1600129f೧. ಕೃಷ್ಣರಾಜಸಾಗರ ಆಣೆಕಟ್ಟು ಕಟ್ಟುವಾಗಲಿಂದ ಹಿಡಿದು ಇಲ್ಲಿಯತನಕ  ನೂರು ವರ್ಷಗಳಿಗೂ ಮೀರಿ ಕಾವೇರಿ ನದಿ ನೀರಿನ ಹಂಚಿಕೆ ಮತ್ತಿತರ ವಿಷಯಗಳ ಗಲಾಟೆ ತಮಿಳುನಾಡು (ಅಂದಿನ ಮದ್ರಾಸ್ ರಾಜ್ಯ) ಮತ್ತು ನಮ್ಮ ನಡುವೆ ಇದೆ. ಶಾಸಕಾಂಗ, ನ್ಯಾಯಾಂಗ, ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ ಹೀಗೆ ಅನೇಕ ವಿಷಯಗಳು ಹೆಣೆದುಕೊಂಡಿರುವ ಒಂದು ಸಮಸ್ಯೆ ಸಿನಿಮಾನಟರ, ಬುದ್ಧಿಜೀವಿಗಳ, ಸಾಹಿತಿಗಳ ಮೆರವಣಿಗೆ, ಅಬ್ಬರದ, ಆಕ್ರೋಶದ ಒಂದು ಹೇಳಿಕೆಯಿಂದ ಬಗೆ ಹರಿಯುತ್ತವೆ ಎಂಬುದೇ ಹಾಸ್ಯಾಸ್ಪದ ಸಂಗತಿ. ಕೆಲವು ಪ್ರಚಾರಪ್ರಿಯ ಸಾಹಿತಿಗಳು ಗೋಕಾಕ್ ಚಳುವಳಿಯ ಉದಾಹರಣೆ ಕೊಟ್ಟು ಈಗಲೂ ಹಾಗೆ ಮಾಡಿದರೆ ರಾತ್ರಿ ಕಳೆದು ಬೆಳಗಾಗುವುದರವೊಳಗೆ ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂಬ ಹೇಳಿಕೆಕೊಡುತ್ತಿದ್ದಾರೆ. ಆದರೆ ಗೋಕಾಕ್ ವರದಿಯ ಅನುಷ್ಠಾನ ಕಟ್ಟುನಿಟ್ಟಾಗಿ ಜಾರಿಯಾಗಿದೆಯೇ? ಇತ್ತೀಚಿಗೆ ತಾನೇ ಸುಪ್ರೀಂ ಕೋರ್ಟಿನಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದು ತಪ್ಪು ಎಂದು ಹೇಳಿ ‘ಮಾತೃ ಭಾಷೆ’ಗೆ ನಮ್ಮ ಸಂವಿಧಾನದ ಪ್ರಕಾರ ಬೇರೆ ವ್ಯಾಖ್ಯಾನ ನೀಡಿದೆ. ಖಾಸಗಿ ಶಾಲೆಗಳ ಒಕ್ಕೂಟದ ವಾದಕ್ಕೆ ಜಯ ಸಿಕ್ಕಿದೆ. ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಖಾಲಿ ಹೊಡೆಯುತ್ತಿವೆ; ಮುಚ್ಚುತ್ತಿವೆ ಅಥವಾ ಮೂರ್ನಾಲಕ್ಕು ಶಾಲೆಗಳನ್ನು ಒಟ್ಟುಗೂಡಿಸಿ ಹಾಗೂ ಹೀಗೂ ಉಸಿರಾಡುವಂತೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಕೊಡಬೇಕು ಎಂಬ ಮಹಿಷಿ ವರದಿಯ ಜಾರಿಯೂ ಪೂರ್ಣಪ್ರಮಾಣದಲ್ಲಿ ಜಾರಿಯಾಗಲು ಸಂವಿಧಾನ, ನ್ಯಾಯಾಂಗದ ವಿಧಿಗಳ ಪ್ರಕಾರ ಆಗುತ್ತಿಲ್ಲ. ಇದೇನು ನಮ್ಮನ್ನಾಳುತ್ತಿರುವ, ಆಳಿದ  ಸರ್ಕಾರಗಳ ‘ರಾಜಕೀಯ ಇಚ್ಚಾಶಕ್ತಿ’ಯ ಕೊರತೆಯೋ ಅಥವಾ ಆ ವರದಿಗಳಲ್ಲಿನ ಕೊರತೆಯೋ ತಿಳಿಯದಾಗಿದೆ. ಮತ್ತಷ್ಟು ಓದು »

26
ಸೆಪ್ಟೆಂ

ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು, ಒಂದು ತಲೆಕೆಟ್ಟ ನಿರ್ಧಾರ ಸಾಕು||

– ರಾಘವೇಂದ್ರ ನಾವಡ
ki28lotus_jpg_g_ki_2599608fಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅಂತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು! ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತಃಕಲಹ, ಅಹಂಕಾರ ಮುಂತಾದವುಗಳಿಂದ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ ದೇವೇಗೌಡರು ತೆಗೆದುಕೊಂಡ ಒಂದು ಚಾಣಾಕ್ಷತನದ ನಿರ್ಧಾರದಿಂದ ಕುಂಭಕರ್ಣ ನಿದ್ರೆಯಿಂದ ದಢಾಲ್ಲನೆ ಎದ್ದರೆ, ಯಡಿಯೂರಪ್ಪನವರ ನಾಯಕತ್ವದಲ್ಲಿ ಸ್ವಲ್ಪ-ಸ್ವಲ್ಪವೇ ಮೇಲೇಳುತ್ತಿದ್ದ (ಇಲ್ಲಿಯೂ ಅಂತಃ ಕಲಹವಿದೆ. ಆದರೆ ನಾಯಕರು ಸ್ವಲ್ಪ ಚುರುಕಾಗಿದ್ದರು) ರಾಜ್ಯ ಭಾಜಪಾ, ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದರ ಮೂಲಕ ಮಕಾಡೆ ಮಲಗಿತು!! ಒಬ್ಬರು ಫೀನಿಕ್ಸ್ ನಂತೆ ಎದ್ದರೆ ಮತ್ತೊಬ್ಬರು ಶವದಂತೆ ಬಿದ್ದರು!! ಮತ್ತಷ್ಟು ಓದು »

9
ಸೆಪ್ಟೆಂ

ತಮಿಳುನಾಡು, ಕಾವೇರಿ, ಜಯಲಲಿತ, ದೇವೇಗೌಡರು ಮತ್ತು ನಾನು

– ಪ್ರೇಮಶೇಖರ

jayನೆರೆಯ ತಮಿಳುನಾಡಿನಲ್ಲಿ ಹಲವು ಅಚ್ಚರಿ ಹುಟ್ಟಿಸುವ ವಿರೋಧಾಭಾಸಗಳು ಕಾಣಸಿಗುತ್ತವೆ. ತಮಿಳರು ಮಹಾ ಭಾಷಾಭಿಮಾನಿಗಳು. ತಮ್ಮ ನಾಡು ನುಡಿಯ ಬಗ್ಗೆ ಅವರ ಪ್ರೀತಿ, ಅಭಿಮಾನ, ಕಾಳಜಿಗೆ ಸಮಕಾಲೀನ ಭಾರತೀಯ ಇತಿಹಾಸದಲ್ಲಿ ದಂತಕತೆಯ ಆಯಾಮವೊದಗಿಬಿಟ್ಟಿದೆ. ಆದರೆ, ಇಂತಹ ಸ್ವಾಭಿಮಾನಿ ತಮಿಳರು ಕಳೆದ ನಲವತ್ತು-ನಲವತ್ತೈದು ವರ್ಷಗಳಿಂದಲೂ ತಮಿಳೇತರರನ್ನು ತಮ್ಮ ರಾಜಕೀಯ ನಾಯಕರನ್ನಾಗಿ ಒಪ್ಪಿಕೊಂಡು ಅವರ ಕೈಯಲ್ಲಿ ತಮ್ಮ ರಾಜ್ಯವನ್ನಿಟ್ಟುಬಿಟ್ಟಿದ್ದಾರೆ. ಕರುಣಾನಿಧಿ ಕಳೆದ ನಾಲ್ಕು ದಶಕಗಳಿಂದಲೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅನಭಿಷಿಕ್ತ ಸಾಮ್ರಾಟರಾಗಿ ಮೆರೆಯುತ್ತಿದ್ದಾರೆ, ನಾಲ್ಕು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಈ ಕರುಣಾನಿಧಿ ತೆಲುಗು ಮೂಲದವರು. ಡಿಎಂಕೆ ಪಕ್ಷವನ್ನು ಒಡೆದು ಅದಕ್ಕೆ ಪರ್ಯಾಯವಾಗಿ “ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ” (ಎಐಎಡಿಎಂಕೆ) ಪಕ್ಷ ಕಟ್ಟಿ ಸತತ ಹತ್ತು ವರ್ಷಗಳವರೆಗೆ ತಮಿಳುನಾಡನ್ನು ಆಳಿದ ಎಂ. ಜಿ. ರಾಮಚಂದ್ರನ್ (ಎಂಜಿಆರ್) ಒಬ್ಬ ಮಲೆಯಾಳಿ. ಅವರ ಸಹವರ್ತಿ ಮತ್ತು ಉತ್ತರಾಧಿಕಾರಿ, ಕೋಟ್ಯಂತರ ತಮಿಳರ ಪ್ರೀತಿಯ “ಅಮ್ಮ” ಜಯಲಲಿತಾರ ಮೂಲ ಕರ್ನಾಟಕದಲ್ಲಿ. ಅದಕ್ಕೂ ಹಿಂದೆ ಹೋಗುವುದಾದರೆ ದ್ರಾವಿಡ ಚಳುವಳಿಯ ಅಧ್ವರ್ಯು, ತಮಿಳುನಾಡಿನ ಇತಿಹಾಸದ ದಿಕ್ಕನ್ನೇ ಬದಲಿಸಿದ “ಪೆರಿಯಾರ್” ಬಿರುದಾಂಕಿತ ಇ. ವಿ. ರಾಮಸ್ವಾಮಿ ನಾಯಕರ್ ಕನ್ನಡಿಗರಂತೆ. ಇವರೆಲ್ಲರೂ ತಮಿಳನ್ನು ತಮ್ಮದಾಗಿಸಿಕೊಂಡು, ತಮಿಳುನಾಡಿಗೆ ತಮ್ಮನ್ನರ್ಪಿಸಿಕೊಂಡು ತಮಿಳರ ಹೃದಯಗಳಲ್ಲಿ ಸ್ಥಾನ ಗಳಿಸಿಕೊಂಡುಬಿಟ್ಟರು. ಮತ್ತಷ್ಟು ಓದು »

9
ಸೆಪ್ಟೆಂ

ಕಾವೇರಿ ವಿವಾದ : ನಾಲಾಯಕ್ ನಾಯಕರ ನಡುವಿನ ಜನನಾಯಕರು

800x480_image57629329ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಸೆಪ್ಟಂಬರ್ ೯ರಂದು ಕರ್ನಾಟಕ ಬಂದ್ ಗೂ ಕರೆ ನೀಡಲಾಗಿದೆ. ನಮಗೆ ಕುಡಿಯಲಿಕ್ಕೇ ನೀರಿಲ್ಲದಿರುವಾಗ ಕೈಲಾಗದ ಸರ್ಕಾರ ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸುತ್ತಿದೆ. ನಮ್ಮಲ್ಲೇ ಹೆಚ್ಚಾಗಿರುವ ನಾಲಾಯಕ್ ನಾಯಕರ ನಡುವೆ, ಅಪರೂಪಕ್ಕೆ ದಿಟ್ಟತನ ಹಾಗೂ ಚಾಣಾಕ್ಷತನ ತೋರಿದ ಇಬ್ಬರು ಜನನಾಯಕರ ನೆನಪುಗಳು ನಿಮಗಾಗಿ – ನಿಲುಮೆ

ನೆನಪು ೧ :
ನಿಜವಾದ ಗಂಡಸು ಎಂದರೆ ಅದು ಬಂಗಾರಪ್ಪ
1991ರಲ್ಲಿ, ತಮಿಳುನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಕಾವೇರಿ ನ್ಯಾಯಾಧಿಕರಣವು ಮಧ್ಯಂತರ-ತೀರ್ಪನ್ನು ನೀಡಿತು. ಈ ತೀರ್ಪಿಗೆ ವಿರುದ್ಧವಾಗಿಯೇ ಮುಖ್ಯಮಂತ್ರಿ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿನ ನೀರನ್ನು ರಕ್ಷಿಸಿ, ನಮ್ಮ ರಾಜ್ಯದ ರೈತರಿಗೇ ಉಳಿಸಿಕೊಳ್ಳುವಂತೆ ಅಣೆಕಟ್ಟುಗಳ ಉಸ್ತುವಾರಿಯ ಅಧಿಕಾರಿಗಳಿಗೆ ಆದೇಶಿಸಿದರು. ಮತ್ತಷ್ಟು ಓದು »

6
ಆಕ್ಟೋ

ಕೈಲಾಗದ ರಾಜಕಾರಣಿಗಳ ಕೊಲವೆರಿ, ಕನ್ನಡಿಗರ ಜೀವನಾಡಿ ಕಾವೇರಿ

– ರಾಕೇಶ್ ಶೆಟ್ಟಿ

ಅವತ್ತು ಬೆಳ್ಳಂಬೆಳಗ್ಗೆ ತಮ್ಮ ಹಿಂಬಾಲಕರ ಹಿಂಡು,ಕ್ಯಾಮೆರಾ ದಂಡಿನೊಂದಿಗೆ ಮೀಡಿಯಾ ಡಾರ್ಲಿಂಗ್ ಕಾನೂನು ಸಚಿವ ಸುರೇಶ್ ಕುಮಾರ್, ಗೃಹ ಸಚಿವ ಅಶೋಕ್ ಬೆಂಗಳೂರಿನಿಂದ ಗುಳೆ ಹೊರಟಿದ್ದ ಅಸ್ಸಾಂ ಜನರನ್ನು ಸಂತೈಸಲು ರೈಲ್ವೇ ನಿಲ್ದಾಣಕ್ಕೆ ಹೋಗಿ ನಿಂತಿದ್ದರು.ಆದರೆ ಈಗ ನೋಡಿ ಕಳೆದ ಇಪ್ಪತ್ತು ದಿನದಿಂದ ಕಾವೇರಿಕೊಳ್ಳದ ರೈತರು ಕಣ್ಣೀರಿಡುತಿದ್ದಾರೆ.ಬಂದ್,ಹರತಾಳಗಳಿಂದ ರಾಜ್ಯದ ಕಾನೂನು ಹದಗೆಡುತ್ತಿದೆ ಆದರೆ ಮಾನ್ಯ ಕಾನೂನು ಸಚಿವರು ನಾಪತ್ತೆಯಾಗಿದ್ದಾರೆ…! ಈ ನಡುವೆ ಗೃಹ ಸಚಿವರು ಅಸ್ಸಾಂಗೆ ಹೋಗಿದ್ದಾರಾ? ತಮಿಳುನಾಡಿಗೆ ಹೋಗಿ ಜಯಲಲಿತಾಗೂ ವಸ್ತುಸ್ಥಿತಿ ತಿಳಿಸಬಹುದಿತ್ತಲ್ಲಾ,ಯಾಕೆ ಹೋಗಲಿಲ್ಲ?

ಸುದ್ದಿ ಮಾಡಲು ಇದೇನು “ಭಾರತ”ದ ವಿಷಯವೋ ಅಥವಾ ಅವರ ಸಂಘ ಪರಿವಾರದ “ದೇಶ ಭಕ್ತಿ”ಯ ವಿಷಯವೋ ಅಲ್ಲವಲ್ಲ.ಇದು ಬರಿ ಕಾವೇರಿಯ ವಿಷ್ಯ,ಇದು ಕರ್ನಾಟಕದ ಜನತೆಯ ಪ್ರಾದೇಶಿಕತೆಯ ಸಂಕುಚಿತತೆಯ ಹೋರಾಟ ಅನ್ನಿಸರಬೇಕು.ಒಂದೆಡೆ ಇಂತ ದೇಶಭಕ್ತ ಕಾನೂನು ಸಚಿವ.ಮತ್ತೊಂದೆಡೆ ಸುಪ್ರೀಂ ಕೋರ್ಟ್ ಮುಂದೆ ನಿಂತು ೧೦ ಟಿಎಂಸಿ ನೀರು ನಾವೇ ಕೊಡ್ತೀವಿ ಅಂತ ಮುಂಚಿತವಾಗಿ ಬರೆದು ಕೊಟ್ಟ ಜಲಸಂಪನ್ಮೂಲ ಸಚಿವ ಮತ್ತು ಇಂತ ಎಡವಟ್ಟು ಸಚಿವರಿಗೊಬ್ಬ ಕಳಸವಿಟ್ಟ ಮುಖ್ಯಮಂತ್ರಿ.

ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಪ್ರಧಾನಿ ತೀರ್ಪನ್ನು ವಿರೋಧಿಸಿ, ಕುರ್ಚಿ ಬೇಕಾದರೂ ಬಿಡುತ್ತೇನೆ, ಕಾವೇರಿ ಬಿಡಲಾರೆ ಅಂದ ಶೆಟ್ಟರ್ ಮುಖಾಂತರ ಒಬ್ಬ ಹೀರೊನನ್ನು ಹುಡುಕಲು ರಾಜ್ಯದ ರೈತರು ಕನಸು ಕಾಣುತಿದ್ದರು.ಆದರೆ ಅವರಿಗೆ ಕಾವೇರಿಗಿಂತ ಕುರ್ಚಿಯೇ ಹೆಚ್ಚಾಯಿತು ನೋಡಿ.ರಾತ್ರೋ ರಾತ್ರಿ ನೀರು ಹರಿಸಲು ಶುರು ಮಾಡಿದ್ದಾರೆ.ಹೀರೊ ಆಗೋದು ಬಿಡಿ ಕಡೆ ಪಕ್ಷ ಜೀರೊ ಆದರು ಅಂತೇಳಿದರೆ, ಅದು ನಾವು ಆ “ಜೀರೊ” ಅನ್ನೋ ಪದಕ್ಕೆ ಅವಮಾನ ಮಾಡಿದಂತೆ. ಇಡೀ ರಾಜ್ಯ ಬಂದ್ ಮಾಡಿ ಹೊತ್ತಿ ಉರಿಯುತಿದ್ದರೆ ಮಾನ್ಯ ಮುಖ್ಯಮಂತ್ರಿಗಳು ಪೋಲಿಸ್ ಸರ್ಪಗಾವಲಿನೊಂದಿಗೆ ಭದ್ರವಾಗಿ ಮನೆಯಲ್ಲಿ ಕುಳಿತಿದ್ದಾರೆ, ರೋಮ್ ಹತ್ತಿ ಉರಿಯುತಿದ್ದಾಗ ಪಿಟೀಲು ಕುಯ್ಯುತಿದ್ದ ನೀರೋನಂತೆ…!

ಮತ್ತಷ್ಟು ಓದು »