ಭಾನುಮತಿ ನೀ ಸುಮತಿ.
– ನಾಗೇಶ ಮೈಸೂರು
ಮಹಾಭಾರತದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಸ್ತ್ರೀ ಪಾತ್ರಗಳಲ್ಲೊಂದು ಪ್ರಮುಖ ಪಾತ್ರ ಕೌರವೇಶ ದುರ್ಯೋಧನನ ಪತ್ನಿ ಭಾನುಮತಿಯದು. ಭೂಮಂಡಲವನ್ನಾಳುವ ಒಡೆಯನಾದ ಕೌರವೇಶನ ಸತಿಯಾದರೂ ಯಾಕೊ ಅವಳ ಉಲ್ಲೇಖ ಅಲ್ಲಿಲ್ಲಿ ತುಸು ಮೆಲುವಾಗಿ ಹೆಸರಿಸಿದ್ದು ಬಿಟ್ಟರೆ ಗಾಢವಾದ ವಿವರಣೆ ಕಾಣಿಸುವುದಿಲ್ಲ. ಬಹುಶಃ ಸುಯೋಧನನಿಗೆ ಆರೋಪಿಸಿದ ಋಣಾತ್ಮಕ, ಖಳನಾಯಕ ಪಟ್ಟದಿಂದಲೋ ಅಥವಾ ಚತುಷ್ಟಯದ ಚಟುವಟಿಕೆಗಳಿಗೆ ಕೊಟ್ಟಷ್ಟೇ ಗಮನ ಅವನ ಖಾಸಗಿ ಜೀವನಕ್ಕೆ ಕೊಡಲಿಲ್ಲವೆಂದೊ – ಒಟ್ಟಾರೆ ಭಾನುಮತಿ ಹೆಚ್ಚಾಗಿ ತೆರೆಮರೆಯ ಅಪ್ರತ್ಯಕ್ಷ ಪ್ರಭಾವ ಬೀರುವ ಪಾತ್ರವಾಗಷ್ಟೆ ಆಗಿ ಗೌಣವಾಗಿಬಿಡುತ್ತಾಳೆ. ಈಗಲೂ ಅಂತರ್ಜಾಲ ಹುಡುಕಿದರೆ ಅವಳ ಕುರಿತಾದ ವಿವರ ಸಿಗುವುದು ತೀರಾ ಅಲ್ಪವೇ. ಮತ್ತಷ್ಟು ಓದು