ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕ್ರಿಕೆಟ್’

22
ಆಕ್ಟೋ

ಮಯಾಂಕ್ ಅಗರ್ವಾಲ್ – ಚುಕ್ಕೆಗಳ ನಡುವೆಯ ಚಂದ್ರಮ

– ಪ್ರಶಾಂತ ಮಾಸ್ತಿಹೊಳಿ

ವಿಶಾಖಪಟ್ಟಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯದ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ , ಭಾರತ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿತು. ಎಲ್ಲ  ಕ್ರಿಕೆಟ್ ಪ್ರೇಮಿಗಳ ಗಮನ ಆ ಪಂದ್ಯದಲ್ಲಿ ರೋಹಿತ ಶರ್ಮ ಮೇಲೆ ನೆಟ್ಟಿತ್ತು . ಮೊದಲ ಬಾರಿಗೆ ರೋಹಿತ ಆರಂಭಿಕ್ ಆಟಗಾರರಾಗಿ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತಿದ್ದರು. ರೋಹಿತ  ಎರಡೂ ಇನ್ನಿಂಗ್ಸನಲ್ಲಿ ಶತಕ  ದಾಖಲಿಸುವ ಮೂಲಕ  ತಮ್ಮಲ್ಲಿಟ್ಟಿದ್ದ ನೀರಿಕ್ಷೆಯನ್ನು ಹುಸಿಗೊಳಿಸಲಿಲ್ಲ. ಇವೆಲ್ಲ ಘಟನೆಗಳ ನಡುವೆಯೇ ಮತ್ತೊಬ್ಬ ಆರಂಭಿಕ  ಆಟಗಾರರಾದ  ಮಯಾಂಕ್  ಅಗರ್ವಾಲ್ ಕೂಡ ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದ್ದರು। ಆದರೆ ರೋಹಿತ್ ಮೇಲಿನ ಎಲ್ಲರ ಗಮನದಿಂದಾಗಿ  , ಅಗರ್ವಾಲ್ ಅವರ ಮೇಲೆ ಒತ್ತಡ ಸ್ವಲ್ಪ ಕಡಿಮೆಯೇ ಆಗಿತ್ತು. ಮಾಯಾಂಕ್ ಶಾಂತವಾಗಿಯೇ ತಮ್ಮ ಜೀವನದ ಮೊದಲ ಶತಕ  ದಾಖಲಿಸಿದರು. ಶತಕವನ್ನು ದ್ವೀಶತಕವಾಗಿ  ಪರಿವರ್ತನೆ ಮಾಡಿ ದಾಖಲೆಯನ್ನೂ ಮಾಡಿದರು. ಈ ಮೂಲಕ  ಭಾರತ ಎದುರಿಸುತ್ತಿರುವ ಆರಂಭಿಕ ಆಟಗಾರರ ಸಮಸ್ಯೆಯನ್ನು ತಾತ್ಕಾಲಿಕ ಮಟ್ಟಿಗೆ ನಿವಾರಿಸಿದರು ಎಂದೇ ಹೇಳಬಹುದು.

ಮಯಾಂಕ್  ಅಗರ್ವಾಲ್ ಮತ್ತು ರೋಹಿತ್ ಶರ್ಮ ಅವರ ಕ್ರಿಕೆಟ್ ಜೀವನದ ಬಗ್ಗೆ ಹಲವು ಸಾಮ್ಯತೆಗಳಿವೆ. ಸಾಕಷ್ಟು ಪ್ರತಿಭೆ ಎದ್ದರೂ ಕೂಡ ಆರಂಭದ ದಿನಗಳಲ್ಲಿ ರೋಹಿತ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿರಲಿಲ್ಲ. ಇದರಿಂದ ತಂಡದಲ್ಲಿ ಅವರ ಸ್ಥಾನ ಭದ್ರವಾಗಿರಲಿಲ್ಲ. ಆಯ್ಕೆ ಸಮೀತಿ ರೋಹಿತಗೆ ಹಲವು ಅವಕಾಶಗಳನ್ನು ನೀಡಿದ ನಂತರ ತಮ್ಮ ಲಯ ಕಂಡುಕೊಂಡರು. ಮಯಾಂಕ್ರ ಮೊದಲ ದರ್ಜೆಯ ವೃತ್ತಿ ಜೀವನ ಕೂಡ ಹಲವು  ಏಳುಬೀಳುಗಳನ್ನು ಕಂಡಿದೆ. ಅವರಿಂದ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಬಂದಿದ್ದು ಕಡಿಮೆಯೇ. ಉತ್ತಮವಾಗಿಯೇ ಆಟ ಆರಂಭಿಸುತಿದ್ದ ಮಯಾಂಕ್ ಅಷ್ಟೇ ವೇಗವಾಗಿ ವಿಕೆಟ್ ಒಪ್ಪಿಸುತ್ತಿದ್ದರು. ಆದ್ದರಿಂದ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗದೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುತಿದ್ದರು.

ಮತ್ತಷ್ಟು ಓದು »

11
ಡಿಸೆ

ಬಾರ್ಡರ್-ಗವಾಸ್ಕರ್ ಸರಣಿ : ಅಂದು – ಇಂದು!

– ಸುಜಿತ್ ಕುಮಾರ್

ಸ್ಥಳ : ಕೊಲ್ಕತ್ತಾ. ಮಾರ್ಚ್ 15, 2001.

ಮೊದಲ ಇನ್ನಿಂಗ್ಸ್ :
ಆಸ್ಟ್ರೇಲಿಯ : 445/10
ಭಾರತ : 212/10

ಎರಡನೇ ಇನ್ನಿಂಗ್ಸ್ 😦 ಫಾಲೋ ಆನ್ )
ಭಾರತ : 657/7 (D)
ಆಸ್ಟ್ರೇಲಿಯ : 171/10

556780-vvs-laxman-rahul-dravid-2000-01-1495913138-800ಆ ದಿನದ ಸೂರ್ಯ ಪಶ್ಚಿಮದಲ್ಲಿ ಮರೆಯಾಗುತ್ತಾ ಕ್ರಿಕೆಟ್ ಲೋಕದ ಮಹಾ ಅಚ್ಚರಿಯೊಂದಕ್ಕೆ ಸಾಕ್ಷಿಯಾದನು. ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಆ ಟೆಸ್ಟ್ ಭಾರತದ ಪಾಲಿಗಂತೂ ವಿಶ್ವಕಪ್ನನ್ನೇ ಗೆದ್ದು ಬೀಗಿದ ಅನುಭವವನ್ನು ನೀಡಿತು. ಅಂದು ಕೋಲ್ಕತ್ತದ ಆಗಸ ರಂಗು ರಂಗಿನ ಪಟಾಕಿಗಳಿಂದ ಶೃಂಗಾರಗೊಳ್ಳುತ್ತಿದ್ದರೆ ಇತ್ತ ಕಡೆ ಇಡೀ ದೇಶವೇ ಹಬ್ಬದ ವಾತಾವರಣವೇನೋ ಎಂಬ ಸಂಭ್ರಮದಲ್ಲಿ ನಲಿಯಿತು. V V S ಲಕ್ಷ್ಮಣ್, ಹರ್ಭಜನ್ ಸಿಂಗ್ ಹಾಗು ರಾಹುಲ್ ದ್ರಾವಿಡ್ ಅಂದು ಖಾನ್, ರೋಷನ್ ಹಾಗು ಬಚ್ಚನ್ ರೆಲ್ಲರನ್ನೂ ಹಿಂದಿಕ್ಕಿ ದೇಶದ ಜನಮಾನಸದಲ್ಲಿ ಹೀರೋಗಳಾಗಿಬಿಟ್ಟರು. ಒಟ್ಟು 557 ರನ್ಗಳು ಹಾಗು 13 ವಿಕೆಟ್ಗಳ ಈ ಮೂವರ ಆಟ ಅಂದು ವಿಶ್ವ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬ ಸ್ಲೋ ಪಾಯಿಸನ್ನಿಂದ ನೇಪಥ್ಯಕ್ಕೆ ಸೇರುತ್ತಿದ್ದ ಭಾರತೀಯ ಕ್ರಿಕೆಟ್ನ ಪುನರ್ಜನ್ಮಕ್ಕೆ ಕಾರಣವಾಯಿತು. ಹೈಡೆನ್, ಲ್ಯಾಂಗರ್, ಪಾಂಟಿಂಗ್, ವಾ ಬ್ರದರ್ಸ್, ಗಿಲ್ಕ್ರಿಸ್ಟ್, ವಾರ್ನ್, ಗಿಲ್ಲೆಸ್ಪಿ, ಮೆಗ್ರಾತ್ ಎಂಬ ಕ್ರಿಕೆಟ್ ದಂತಕತೆಗಳೇ ತುಂಬಿದ್ದ ತಂಡವೊಂದನ್ನು ಫಾಲೋ ಆನ್ ನ ಹೊರತಾಗಿಯೂ ಸಿನಿಮೀಯ ರೀತಿಯಲ್ಲಿ ಸೋಲಿಸುವುದು ಅಂದಿನ ಕಾಲಕಷ್ಟೆ ಅಲ್ಲದೆ ಇಂದಿಗೂ ಸಹ ಸಾಮಾನ್ಯದ ಮಾತಲ್ಲ. ಮೊದಲ ಟೆಸ್ಟ್ ನಲ್ಲಿ ಸೋತು ಎರಡನೇ ಟೆಸ್ಟನ್ನು ಇಲ್ಲಿ ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಗೆದ್ದ ಭಾರತ ಅದೇ ಆತ್ಮವಿಶ್ವಾಸದಲ್ಲಿ ಮೂರನೆಯ ಹಾಗು ಅಂತಿಮ ಟೆಸ್ಟನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತು. ಆ ಮೂಲಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕಾಂಗರೂಗಳ ಮೂರು ದಶಕದ ಕನಸಿಗೆ ತಣ್ಣಿರೆರಚಿತು! ಮತ್ತಷ್ಟು ಓದು »

2
ಮಾರ್ಚ್

ಅವರು ಅಂಧರು ಅಂತ ಒಂದು ಕ್ಷಣಕ್ಕೂ ಅನ್ನಿಸಲಿಲ್ಲ..!

– ನರೇಂದ್ರ ಎಸ್ ಗಂಗೊಳ್ಳಿ.

Indian blind cricket team wins world cupಹೌದು ಅವತ್ತು ಫೆಬ್ರವರಿ 12. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುಮಾರು 15000ಕ್ಕೂ ಅಧಿಕ ಸಂಖ್ಯೆ ಪ್ರೇಕ್ಷಕರು ನೆರೆದಿದ್ದರು. ಅದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತ್ತು. ಅವರೆಲ್ಲರ ತುಂಬು ಹೃದಯದ ಪ್ರೋತ್ಸಾಹದ ನಡುವೆ ನಮ್ಮ ಭಾರತದ ಅಂಧರ ಕ್ರಿಕೆಟ್ ತಂಡ ಸಾಂಪ್ರದಾಯಿಕ ಪ್ರತಿಸ್ಫರ್ಧಿ ಪಾಕಿಸ್ತಾನವನ್ನು ಬಗ್ಗುಬಡಿದು ಸತತ ಎರಡನೇ ಬಾರಿಗೆ ಟಿ-20 ವಿಶ್ವಕಪ್ ನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಇಡೀ ಪಂದ್ಯದ ರೋಚಕತೆ ಎನ್ನುವುದು ಯಾವ ವಿಶ್ವ ಕಪ್ ಪಂದ್ಯಕ್ಕೂ ಕಡಿಮೆ ಇರಲಿಲ್ಲ. ಮತ್ತಷ್ಟು ಓದು »

3
ಜುಲೈ

’ಪಟ್ಟು’ ಬಿಡದೆ ಗೆದ್ದವನು

– ಶೈಲೇಶ್ ಕುಲ್ಕರ್ಣಿ

ಮಾರ್ವನ್ ಅಟಪಟ್ಟುದೇಶೀಯ ಕ್ರಿಕೆಟ್ನಲ್ಲಿ ಭರವಸೆಯ ಆಟಗಾರನಾಗಿ ಅದಾಗಲೇ ಆತ ಒಳ್ಳೆ ಹೆಸರು ಸಂಪಾದಿಸಿದ್ದ.ಅಂತರ್-ರಾಷ್ಟ್ರೀಯ ಸ್ತರದಲ್ಲಿ ತನ್ನ ಹೆಸರಿನ ಭೇರಿಭಾರಿಸುವ ಭರಪೂರ ಉತ್ಸಾಹದಿಂದ ರಾಷ್ಟ್ರೀಯತಂಡಕ್ಕೆ ಪದಾರ್ಪಣೆ ಮಾಡಿದ.

ತನ್ನ ಟೆಸ್ಟ್ ಜೀವನದ ಮೊಟ್ಟಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ಆಡಲಿಳಿದಾಗ ಅವಗಳಿಸಿದ್ದು ಬರೋಬ್ಬರಿ “0”.
ಹೊಸಹುರುಪಿಂದ ಎರಡನೇ ಇನ್ನಿಂಗಿನಲ್ಲಿ ಕಣಕ್ಕೆ ಬಂದಾಗ ಮತ್ತೆಬಾರಿಸಿದ್ದು “0”.
ಸ್ವಾಭಾವಿಕವಾಗಿ ಆತನನ್ನ ತಂಡದಿಂದ ಕೈಬಿಟ್ರು .

೨೨ ತಿಂಗಳ ಕಠಿಣ ಪರಿಶ್ರಮ ನಡೆಸಿದ  ನಂತರ ತಂಡಕ್ಕೆ ಮರು ಆಯ್ಕೆ ಆದ .
ತನ್ನ ದ್ವಿತೀಯ ಟೆಸ್ಟಿನ ಪ್ರಥಮ ಇನ್ನಿಂಗ್ಸ್ನಲ್ಲಿ ಆತನ ಶೂನ್ಯಪ್ರೇಮ ಮರುಕಳಿಸಿತ್ತು. ಸ್ಕೋರ್ಬೋರ್ಡ್ ನಲ್ಲಿ ಆತನ ಹೆಸರಿನೆದುರಿಗೆ ನೇತಿದ್ದು ಮತ್ತದೇ “0”.
ಎರಡನೇ ಇನ್ನಿಂಗ್ಸ್ ನಲ್ಲಿ ತನ್ನಪಾಲಿಗೆ ಬೇತಾಳನಂತೆ ಬೆನ್ನಟ್ಟಿದ್ದ ಶೂನ್ಯ ಸಂಪಾದನೆಯ ಈ ಭಾರವನ್ನ ಹೇಗೋ ಕಳೆದುಕೊಂಡು ಬಿಡಬೇಕು ಅಂದುಕೊಂಡಿದ್ದವ ಗಳಿಸಿದ್ದು “೧” ರನ್ ಮಾತ್ರ.
ಪರಿಣಾಮ …ಪುನಃ ತಂಡದಿಂದ ಅರ್ಧಚಂದ್ರ ಪ್ರಯೋಗ.

ಆತ ಮೈದಾನಕ್ಕೆ ಮರಳಿ ಮತ್ತೆ ಅಭ್ಯಾಸಕ್ಕಿಳಿದ ಮತ್ತು ಈ ಬಾರಿ ತಂಡದಿಂದ ಪುನರಾಯ್ಕೆಯ ಕರೆಬಂದಾಗ ಆತನ ಕ್ರೀಡಾಜೀವನದ ೧೭ ತಿಂಗಳು ಉರುಳಿಹೋಗಿತ್ತು .
ಆತನ ಟೆಸ್ಟ್ ಕರಿಯರ್ನ ತೃತೀಯ ಟೆಸ್ಟ್.. ಭರವಸೆಯ ಆಣೆಕಟ್ಟು ಹೊತ್ತು ಬಂದವನಿಂದ ಪಂದ್ಯದ ಎರಡೂ ಇನ್ನಿಂಗ್ಸ್ನಲ್ಲಿ ಅಮೋಘ “ಶೂನ್ಯ” ಸಂಪಾದನೆ .
ನಿಸ್ಸಂಕೋಚವಾಗಿ ಆತನನ್ನು ತಂಡದಿಂದ ಹೊರದಬ್ಬಿದ್ರು.
ಮತ್ತಷ್ಟು ಓದು »

7
ಏಪ್ರಿಲ್

ಅಫ್ರಿದಿಯ ಬೊಗಳುವಿಕೆ ಹಾಗೂ ನಮ್ಮ ತಿಕ್ಕಲುತನಗಳು..

– ಉಮೇಶ್ ದೇಸಾಯಿ

“ಸಮಾ” ಎನ್ನುವ ನ್ಯೂಸ್ ಚಾನೆಲ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಅಫ್ರಿದಿ ಅಂದ


“”In my opinion, if I have to tell the truth, they (Indians) will never have hearts like Muslims and Pakistanis. I don’t think they have the large and clean hearts that Allah has given us,”

ಅವನ ಮಾತುಗಳಲ್ಲಿ ಸತ್ಯಇದೆಯೋ ಇಲ್ಲವೋ ಇಲ್ಲಿರುವ ಮುಸ್ಲಿಮ್ ರು ಹೇಳಬೇಕು. ಇದು ಸೋತವನ ಹತಾಶ ನುಡಿಯೋ ಅಥವಾ   ಮನದಲ್ಲಿ ಮಥಿಸಿ ಮಥಿಸಿ ಕಾರಿದ ವಿಷವೋ ಗೊತ್ತಿಲ್ಲ. ಒಂದೇ ಮಾತಿನಲ್ಲಿ ಭಾರತವನ್ನು ಇಬ್ಭಾಗ ಮಾಡಿದ್ದಾನೆ. ಅಲ್ಲಾಹು ಕೊಟ್ಟ ದೇಣಿಗೆ ಹೃದಯ ಅದು ಭಾರತೀಯರಲ್ಲಿಲ್ಲ ಇದು ಅವನ ಅಂಬೋಣ.

ಈ ಮಾತಿಗೆ ಆಗಲೇ ಅಲ್ಲಿಯ ಬೋರ್ಡು ಪ್ರತಿಕ್ರಿಯಿಸಿದೆ.ಅದು ಅವನ ವ್ಯಕ್ತಿಗತ ಪ್ರತಿಕ್ರಿಯೆ ಎಂದು ತಿಪ್ಪೆ ಸಾರಿಸಿದೆ.ಇಲ್ಲಿಯ ಮುಸ್ಲಿಂ ಬೋರ್ಡು ಅದನ್ನು ಖಂಡಿಸಿದೆ. ಅದು ತಿಕ್ಕಲುತನ ಎಂದಿದೆ.

ಮತ್ತಷ್ಟು ಓದು »

5
ಏಪ್ರಿಲ್

ಯಾವುದು ನಿಜವಾದ ದೇಶಪ್ರೇಮ ?

– ವಸಂತ್ ಶೆಟ್ಟಿ  

ವಿಶ್ವ ಕಪ್ ಗೆದ್ದ ಭಾರತಕ್ಕೆ ಅಭಿನಂದನೆಗಳು. ಹಾಗೆಯೇ ಕೊನೆಯವರೆಗೂ ಅತ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ ಶ್ರೀಲಂಕೆಗೂ ಶುಭಾಶಯಗಳು. ಮೊನ್ನೆ ಮೊನ್ನೆಯ ಪಾಕಿಸ್ತಾನದ ಎದುರಿನ ಸೆಮಿ ಫೈನಲ್ ಬಗ್ಗೆ ಮಾಧ್ಯಮಗಳಲ್ಲಿ ಇದ್ದ ಕ್ರೇಜ್, ಇದೊಂದು ಯುದ್ಧ ಅನ್ನುವ ಮನಸ್ಥಿತಿ ಫೈನಲ್ ಪಂದ್ಯದಲ್ಲಿ ಅಷ್ಟಾಗಿ ಕಾಣಲಿಲ್ಲ. ಸೆಮಿ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ ಸಾಕು, ಫೈನಲ್ ಗೆಲ್ಲದಿದ್ದರೂ ಆದೀತು ಅನ್ನುವ ಅನಿಸಿಕೆಗಳನ್ನು ಅಲ್ಲಲ್ಲಿ ಕಂಡೆ. ಹಾಗೆಯೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಈ ಕಪ್ಪು ಬೇಕೇ ಬೇಕು ಅನ್ನುವ ತರಹದ ಚರ್ಚೆಗಳನ್ನು ಅಲ್ಲಲ್ಲಿ ಕಂಡೆ. ಕೊನೆಯಲ್ಲಿ, ಕಪ್ ಗೆದ್ದ ತಂಡಕ್ಕೆ ಹೆಚ್ಚಿನ ಸರ್ಕಾರಗಳು (ನಮ್ಮ ರಾಜ್ಯ ಸರ್ಕಾರವು ಸೇರಿದಂತೆ ) ಬಹುಮಾನದ ಸುರಿಮಳೆ ಗೈದು ತಮ್ಮ ಅಸಂಖ್ಯ ಪಾಪುಲಿಸ್ಟ್ ಕ್ರಮಗಳಿಗೆ ಇನ್ನೊಂದು ಸೇರ್ಪಡೆ ಮಾಡಿದ್ದನ್ನು ಕಂಡೆ. ಒಂದು ಆಟಕ್ಕೆ ಈ ಮಟ್ಟದ ಗಮನ, ಆದ್ಯತೆ ಕೊಡುವಷ್ಟರಲ್ಲಿ ಅದರ ಅರ್ಧದಷ್ಟು ಗಮನ ಈ ದೇಶದ, ಅದರ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲೂ ಕೊಟ್ಟಿದ್ದಲ್ಲಿ ನಮ್ಮೆದುರು ಇರುವ ಸಮಸ್ಯೆಗಳಲ್ಲಿ ಕೆಲವಕ್ಕಾದರು ಪರಿಹಾರ ಸಿಕ್ಕಿರುತಿತ್ತೇನೋ ಅನ್ನಿಸಿತು.

ಮತ್ತಷ್ಟು ಓದು »

1
ಏಪ್ರಿಲ್

ಸುದ್ದಿ ‘ಮೋಹ’ದ ಪತ್ರಿಕೆಗಳ ಬಗ್ಗೆ…..

ಅರೆಹೊಳೆ ಸದಾಶಿವರಾಯರು

ಕಟೀಲು ದೇವಳಕ್ಕೆ ಶಿಲ್ಪಾ ಶೆಟ್ಟಿ ಬಂದರು!. ಇದು ನಮ್ಮ ಪತ್ರಿಕೆಗಳ ಮಟ್ಟಿಗೆ ಬಹು ಮುಖ್ಯ ಸುದ್ದಿಯಾಯಿತು! ಆಶ್ಚರ್ಯವೆಂದರೆ, ನಮ್ಮ ಪತ್ರಿಕೆಗಳು ಇದನ್ನು ಮುಖ ಪುಟದಲ್ಲಿ ಪ್ರಕಟಿಸಿ ಕೃತಾರ್ಥವಾದುವು. ಆಕೆ ತನ್ನದೇ ಹುಟ್ಟೂರಿಗೆ ಬಂದದ್ದು, ತನ್ನ ಅಜ್ಜಿಮನೆಯಲ್ಲಿ ಓಡಾಡಿದ್ದು, ಕೋಳಿ ಸುಕ್ಕಾ ತಿಂದದ್ದು…..ಎಲ್ಲವು ಸುದ್ದಿಯಾಯಿತು. ಮತ್ತೂ ಒಂದು ವಿಶೇಷ ಸುದ್ದಿ ಎಂದರೆ ಕಟೀಲು ಕ್ಷೇತ್ರವೇ ಈಕೆಯ ಭೇಟಿಯಿಂದ ಪವಿತ್ರವಾಯಿತೇನೋ ಎಂಬಷ್ಟೂ ಸುದ್ದಿಯನ್ನು ಆಕೆ ವಿಮಾನದಲ್ಲಿ ಬಂದಿಳಿದಿದ್ದರಿಂದ, ಮರಳಿ ವಿಮಾನವೇರುವ ತನಕ ಬರೆಯಲಾಯಿತು. ಎಲ್ಲಾ ಪತ್ರಿಕೆಗಳ ಒಬ್ಬೊಬ್ಬ ಪತ್ರಕರ್ತನೂ ಅಷ್ಟು ಹೊತ್ತಿನ ಮಟ್ಟಿಗೆ ಆಕೆಯ ಸಂಸಾರದ ಹಿಂದಿದ್ದ.!

ಈ ಕ್ಷಣದಲ್ಲಿ ನನಗೊಂದು ವಿಷಯ ನೆನಪಿಗೆ ಬರುತ್ತದೆ. ಇತ್ತೀಚೆಗೆ ನಾವು ಒಂದು ಸಮ್ಮೇಳನವನ್ನು ಆಯೋಜಿಸಿದ್ದೆವು. ಅದರ ಉದ್ಘಾಟನಾ ಸಮಾರಂಭದ ವರದಿ ಸವಿಸ್ತಾರವಾಗಿ ಪ್ರಕಟವಾಯಿತು. ಉದ್ಘಾಟನೆ ಮುಗಿಯುತ್ತಲೇ, ಒಂದು ಮಗು ವಾಮಾಚಾರಕ್ಕೆ ಬಲಿಯಾದ ಘಟನೆ ಬಹಿರಂಗ ಗೊಂಡಿತು. ಅದೇ ಸಂಜೆ ನಮ್ಮ ಸಮ್ಮೇಳನದ ಸಮಾರೋಪವೂ ನಡೆಯುತ್ತಿತ್ತು. ಆದರೆ ಸಂಜೆ ಒಬ್ಬನೇ ಒಬ್ಬ ಪತ್ರಕರ್ತನೂ ಅಲ್ಲಿರಲಿಲ್ಲ. ಅಲ್ಲಿನ ಯಾವ ವರದಿಯೂ ದಾಖಲಾಗಲಿಲ್ಲ.  ಸಮ್ಮೇಳನದಲ್ಲಿಯೇ ತಲ್ಲೀನರಾಗಿದ್ದ ನಮಗೆ ಇದೇಕೆ ಎಂದು ಆಶ್ಚರ್ಯವಾಯಿತು. ನಂತರ,   ನಮಗೆ ಆ ವಾಮಾಚಾರದ ಘಟನೆಯಿಂದ ಸಂಭ್ರಮದ ಘಟನೆಯನ್ನೂ ಮರೆಯುವಷ್ಟು ಘಾಸಿಯಾಯಿತು-ಖೇದವಾಯಿತು. ಮತ್ತಷ್ಟು ಓದು »

30
ಮಾರ್ಚ್

ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!

– ಆಸು ಹೆಗ್ಡೆ

ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ
ಸುರಿಯುತ್ತಾ ಇತ್ತಂತೆ ತುಂತುರು ಮಳೆ
ಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ
ದಾಂಡಿಗರ ಓಟಗಳ ಭರ್ಜರಿ ಸುರಿಮಳೆ

ಮತ್ತಷ್ಟು ಓದು »

29
ಮಾರ್ಚ್

ಭಾರತ-ಪಾಕ್ ಮಧ್ಯೆ ನಡೆಯುವುದು ಕೇವಲ ಪಂದ್ಯವಲ್ಲ!

– ರಾಕೇಶ್ ಶೆಟ್ಟಿ

ಅದನ್ನ ಕೇವಲ ಕ್ರಿಕೆಟ್ ಪಂದ್ಯ ಅಂತ ಹೇಳಲು ಸಾಧ್ಯವಾ? ನಾಳೆ ಬುಧವಾರ ಮಧ್ಯಾನ್ಹ ೨.೩೦ರ ನಂತರ ಬಹುತೇಕ ರಸ್ತೆಗಳು ಬಿಕೋ ಎನ್ನಲು ಶುರುವಾಗುತ್ತವೆ! ಎಂ.ಎನ್.ಸಿಗಳು ಸಹ ಉದ್ಯೊಗಿಗಳಿಗೆ ನಾಳೆ ವಿನಾಯಿತಿ ಕೊಡಲಿವೆ.(ಕೊಡದಿದ್ರೆ ಮಾಡೋ ಕೆಲ್ಸದಲ್ಲಿ ಯಡವಟ್ಟು ಮಾಡಿಬಿಡ್ತಾರೇನೋ ಅನ್ನೋ ಭಯಕ್ಕಾಗಿ 😉 ).ಜನ ಟೀವಿ ಮುಂದೆ ಕೂತ್ರೆ ಮುಗಿತು ಭಾರತ-ಪಾಕ್ ಕ್ರಿಕೆಟ್ ಸಮರದ ಫ಼ಲಿತಾಂಶ ಬರುವವರೆಗೂ ಅಲ್ಲಾಡಲಿಕ್ಕಿಲ್ಲ.

ಭಾರತ-ಪಾಕ್ ನಡುವೆ ನಡೆಯುವ ವಿಶ್ವಕಪ್ ಪಂದ್ಯ ಅಂದರೆ ಅದು ಸಮರವೇ ಸರಿ! ವಿಶ್ವಕಪ್ನಲ್ಲಿ ಭಾರತ-ಪಾಕ್ ಇದುವರೆಗು ೯೨,೯೬,೯೯ ಮತ್ತು ೨೦೦೩ ರಲ್ಲಿ ೪ ಬಾರಿ ಮುಖಾಮುಖಿಯಾಗಿವೆ.ಮತ್ತು ೪ ಬಾರಿಯು ಭಾರತ ಪಾಕಿಗಳಿಗೆ ಬಡಿದಿದೆ.ಅದರಲ್ಲೂ ವಿಶೇಷವಾಗಿ ಸಚಿನ್ನದ್ದು ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಆರ್ಭಟ ತುಸು ಹೆಚ್ಚು! ಅದರಲ್ಲೂ ೨೦೦೩ರಲ್ಲಿ ಸೌತ್ ಆಫ಼್ರೀಕಾದ ಲ್ಲಿ ನಡೆದ ಪಂದ್ಯದಲ್ಲಂತೂ, ’ಸಚಿನ್ನನ್ನ ಮೊದಲನೆ ಚೆಂಡಿನಲ್ಲೆ ಔಟ್ ಮಾಡಿ ಕಳಿಸುತ್ತೇನೆ’ ಅಂತ ಪಂದ್ಯದ ಮೊದಲೆ ಕಿರುಚಿದ್ದ ಶೋಯೆಬ್ ಅಖ್ತರ್ನನ್ನ ಅಟ್ಟಾಡಿಸಿ ಬಡಿದಿದ್ದ! ಬಹುಷಃ ಆ ಅನುಭವದಿಂದಾಗಿಯೋ ಏನೋ,ಈ ಭಾರಿ ಅಖ್ತರ್ ಬಾಯಿ ಬಿಟ್ಟಿಲ್ಲ. ಆದರೆ ಅಫ಼್ರಿದಿ ಮಾತ್ರ ಸಚಿನ್ ನೂರನೇ ಶತಕ ಬಾರಿಸಲು ಇನ್ನಷ್ಟು ಸಮಯ ಕಾಯಬೇಕು ಅಂದಿದ್ದಾನೆ.ಯಥಾ ಪ್ರಕಾರ ಬ್ಯಾಟಿನಲ್ಲೆ ಉತ್ತರ ಕೊಡೊ ಅಭ್ಯಾಸವಿರೋ ನಮ್ಮ ಲಿಟಲ್ ಮಾಸ್ಟರ್ ಪ್ರತಿಕ್ರಿಯಿಸಿಲ್ಲ!

ಮತ್ತಷ್ಟು ಓದು »