ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕ್ರೀಡೆ’

22
ಆಕ್ಟೋ

ಮಯಾಂಕ್ ಅಗರ್ವಾಲ್ – ಚುಕ್ಕೆಗಳ ನಡುವೆಯ ಚಂದ್ರಮ

– ಪ್ರಶಾಂತ ಮಾಸ್ತಿಹೊಳಿ

ವಿಶಾಖಪಟ್ಟಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯದ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ , ಭಾರತ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿತು. ಎಲ್ಲ  ಕ್ರಿಕೆಟ್ ಪ್ರೇಮಿಗಳ ಗಮನ ಆ ಪಂದ್ಯದಲ್ಲಿ ರೋಹಿತ ಶರ್ಮ ಮೇಲೆ ನೆಟ್ಟಿತ್ತು . ಮೊದಲ ಬಾರಿಗೆ ರೋಹಿತ ಆರಂಭಿಕ್ ಆಟಗಾರರಾಗಿ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತಿದ್ದರು. ರೋಹಿತ  ಎರಡೂ ಇನ್ನಿಂಗ್ಸನಲ್ಲಿ ಶತಕ  ದಾಖಲಿಸುವ ಮೂಲಕ  ತಮ್ಮಲ್ಲಿಟ್ಟಿದ್ದ ನೀರಿಕ್ಷೆಯನ್ನು ಹುಸಿಗೊಳಿಸಲಿಲ್ಲ. ಇವೆಲ್ಲ ಘಟನೆಗಳ ನಡುವೆಯೇ ಮತ್ತೊಬ್ಬ ಆರಂಭಿಕ  ಆಟಗಾರರಾದ  ಮಯಾಂಕ್  ಅಗರ್ವಾಲ್ ಕೂಡ ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದ್ದರು। ಆದರೆ ರೋಹಿತ್ ಮೇಲಿನ ಎಲ್ಲರ ಗಮನದಿಂದಾಗಿ  , ಅಗರ್ವಾಲ್ ಅವರ ಮೇಲೆ ಒತ್ತಡ ಸ್ವಲ್ಪ ಕಡಿಮೆಯೇ ಆಗಿತ್ತು. ಮಾಯಾಂಕ್ ಶಾಂತವಾಗಿಯೇ ತಮ್ಮ ಜೀವನದ ಮೊದಲ ಶತಕ  ದಾಖಲಿಸಿದರು. ಶತಕವನ್ನು ದ್ವೀಶತಕವಾಗಿ  ಪರಿವರ್ತನೆ ಮಾಡಿ ದಾಖಲೆಯನ್ನೂ ಮಾಡಿದರು. ಈ ಮೂಲಕ  ಭಾರತ ಎದುರಿಸುತ್ತಿರುವ ಆರಂಭಿಕ ಆಟಗಾರರ ಸಮಸ್ಯೆಯನ್ನು ತಾತ್ಕಾಲಿಕ ಮಟ್ಟಿಗೆ ನಿವಾರಿಸಿದರು ಎಂದೇ ಹೇಳಬಹುದು.

ಮಯಾಂಕ್  ಅಗರ್ವಾಲ್ ಮತ್ತು ರೋಹಿತ್ ಶರ್ಮ ಅವರ ಕ್ರಿಕೆಟ್ ಜೀವನದ ಬಗ್ಗೆ ಹಲವು ಸಾಮ್ಯತೆಗಳಿವೆ. ಸಾಕಷ್ಟು ಪ್ರತಿಭೆ ಎದ್ದರೂ ಕೂಡ ಆರಂಭದ ದಿನಗಳಲ್ಲಿ ರೋಹಿತ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿರಲಿಲ್ಲ. ಇದರಿಂದ ತಂಡದಲ್ಲಿ ಅವರ ಸ್ಥಾನ ಭದ್ರವಾಗಿರಲಿಲ್ಲ. ಆಯ್ಕೆ ಸಮೀತಿ ರೋಹಿತಗೆ ಹಲವು ಅವಕಾಶಗಳನ್ನು ನೀಡಿದ ನಂತರ ತಮ್ಮ ಲಯ ಕಂಡುಕೊಂಡರು. ಮಯಾಂಕ್ರ ಮೊದಲ ದರ್ಜೆಯ ವೃತ್ತಿ ಜೀವನ ಕೂಡ ಹಲವು  ಏಳುಬೀಳುಗಳನ್ನು ಕಂಡಿದೆ. ಅವರಿಂದ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಬಂದಿದ್ದು ಕಡಿಮೆಯೇ. ಉತ್ತಮವಾಗಿಯೇ ಆಟ ಆರಂಭಿಸುತಿದ್ದ ಮಯಾಂಕ್ ಅಷ್ಟೇ ವೇಗವಾಗಿ ವಿಕೆಟ್ ಒಪ್ಪಿಸುತ್ತಿದ್ದರು. ಆದ್ದರಿಂದ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗದೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುತಿದ್ದರು.

ಮತ್ತಷ್ಟು ಓದು »

29
ಜನ

ಪ್ರಾಣಿಗಳ ಕ್ರೀಡೆ ಮತ್ತು ಐಡೆಂಟಿಟಿ

– ವಿನಾಯಕ ಹಂಪಿಹೊಳಿ

imagesಪೆಟಾ ಹಾಗೂ ಇನ್ನಿತರ ಪ್ರಾಣಿದಯಾ ಸಂಘದವರು ಪ್ರಾಣಿಗಳನ್ನು ಆಹಾರವಾಗಿ ಹೊರತುಪಡಿಸಿ ಉಳಿದೆಲ್ಲ ಕಾರ್ಯಸಾಧನೆಗಾಗಿ ಬಳಸಿಕೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸುತ್ತಾರೆ. ಅವುಗಳನ್ನು ಮೋಜಿಗಾಗಿ ಪಂದ್ಯಗಳಲ್ಲಿ ಬಳಸುವುದನ್ನು, ಮೆರವಣಿಗೆಯಲ್ಲಿ ಉಪಯೋಗಿಸುವುದನ್ನು, ಅವುಗಳ ಚರ್ಮದಿಂದ ಉಪಯೋಗಿ ವಸ್ತುಗಳನ್ನು ನಿರ್ಮಿಸುವುದನ್ನು, ಸರ್ಕಸ್ಸಿನಲ್ಲಿ ಪ್ರಾಣಿಗಳನ್ನು ಹೊಡೆದು ಪಳಗಿಸುವುದನ್ನು ವಿರೋಧಿಸುತ್ತಾರೆ. ಮೋಜಿಗಾಗಿ ಪ್ರಾಣಿಗಳನ್ನು ಹೊಡೆದೋಡಿಸುವ ಆಟಗಳನ್ನು, ಕೊಲ್ಲುವ ಆಚರಣೆಗಳನ್ನು, ನಿಷೇಧಿಸಬೇಕೆಂದು ಈ ಪ್ರಾಣಿದಯಾ ಸಂಘಗಳು ಪ್ರಯತ್ನಿಸುತ್ತವೆ. ಪ್ರಾಣಿದಯಾ ಸಂಘಗಳ ಈ ಕಾಳಜಿಯು ಜನಸಾಮಾನ್ಯ ಭಾರತೀಯರಿಗೆ ಮೇಲ್ನೋಟಕ್ಕೆ ಅರ್ಥವಾಗಿರುವಂತೆಯೇ ಭಾಸವಾಗುತ್ತದೆ. ಮತ್ತಷ್ಟು ಓದು »

2
ಆಕ್ಟೋ

ಚಿನ್ನ ತರಬಲ್ಲ ಚಿಗರೆಗಳು ನಮ್ಮಲ್ಲೇ ಇರುವಾಗ…

– ರೋಹಿತ್ ಚಕ್ರತೀರ್ಥ

juje-with-the-new-batch-of-siddi-kids-photo-credit-101indiaತನ್ನ ಏಳು ವರ್ಷದ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಆಕೆ ಪ್ರಾಣಿಪಕ್ಷಿಗಳನ್ನು ಪರಿಚಯಿಸುವ ಚಿತ್ರಪುಸ್ತಕವನ್ನು ಹರವಿದ್ದಳು. “ಇದು ಅಳಿಲು, ಅ-ಳಿ-ಲು. ಇದು ಆನೆ. ಇದು ಚಿರತೆ, ಮತ್ತೆ ಓ ಇದು ಜಿರಾಫೆ” ಎಂದೆಲ್ಲ ಹೇಳಿಕೊಡುತ್ತ “ಇದು ಚಿಂಪಾಂಜಿ” ಎಂದು ಮುಂದಿನ ಚಿತ್ರದತ್ತ ತೋರಿಸಿದಾಗ ಅದುವರೆಗೆ ಅಕ್ಷರಗಳನ್ನು ಉರು ಹೊಡೆಯುತ್ತಿದ್ದ ಹುಡುಗ ಥಟ್ಟನೆ “ಓ! ಇದು ಗೊತ್ತು!” ಎಂದುಬಿಟ್ಟ. “ಹೌದಾ? ನೀನ್ಯಾವತ್ತೋ ಈ ಪ್ರಾಣೀನ ನೋಡಿದ್ದು?” ಎಂದು ಆಕೆ ಕೇಳಿದಾಗ ಹುಡುಗ ಮುಗ್ಧವಾಗಿ “ನಮ್ಮ ಶಾಲೆ ಪಕ್ಕದ ಕಿರಾಣಿ ಅಂಗಡಿ ಮಾಮ ಹಾಗೇ ಕರೆಯೋದು ನನ್ನ” ಎಂದುಬಿಟ್ಟ. ಅದುವರೆಗೆ ಮಗುವನ್ನು ತೊಡೆಯಲ್ಲಿಟ್ಟುಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಆಕೆಗೆ ಎದೆ ಮೇಲೆ ಯಾರೋ ಬಿಸಿ ಎಣ್ಣೆ ಹುಯ್ದಂತಾಯಿತು. ಕಣ್ಣುಗಳು ಮನಸ್ಸಿನ ನಿಯಂತ್ರಣಕ್ಕೆ ಕ್ಯಾರೆನ್ನದೆ ಅಶ್ರುಧಾರೆ ತುಂಬಿಕೊಂಡುಬಿಟ್ಟವು. ಬೆಳಕು ಬೀರುತ್ತಿದ್ದ ಎದುರಿನ ಕಿಟಕಿ ಧಡಾರನೆ ಮುಚ್ಚಿಹೋಗಿ ಕೋಣೆಯೆಲ್ಲ ಕತ್ತಲುಗಟ್ಟಿದಂತೆ ಭಾಸವಾಯಿತು. ಮೈ ಸೆಟೆದುಕೊಂಡಿತು. ಮತ್ತಷ್ಟು ಓದು »

28
ಆಗಸ್ಟ್

ಅರ್ಧ ನಿಮಿಷದ ಅಂತರದಲ್ಲಿ ಕಂಚು ಕೈತಪ್ಪಿತು!

– ರೋಹಿತ್ ಚಕ್ರತೀರ್ಥ

Manish Singh Rawat 2ನಸುಕಿನ ನಾಲ್ಕು ಗಂಟೆ. ಬದರಿನಾಥದ ಗಡಗಡ ಚಳಿಯಲ್ಲೂ ಇಪ್ಪತ್ತನಾಲ್ಕರ ಯುವಕನೊಬ್ಬ ಅಲಾರಂ ಇಲ್ಲದೆ ದಡ್ಡನೆದ್ದು ಕೂತಿದ್ದಾನೆ. ಒಂದೇ ಒಂದು ನಿಮಿಷವನ್ನು ವ್ಯರ್ಥ ಮಾಡದೆ; ಉದಾಸೀನವೆಂದು ಮತ್ತೆ ರಗ್ಗುಹೊದ್ದು ಮಲಗದೆ; ಅಯ್ಯಯ್ಯಪ್ಪ ಥಂಡಿ ಎಂದು ನೆಪ ಹೇಳದೆ ಎದ್ದು ಮುಖಪ್ರಕ್ಷಾಲನ ಮಾಡಿ ತನ್ನ ಎಂದಿನ ತೆಳು ಸಡಿಲ ಅಂಗಿ ತೊಟ್ಟು, ಕಾಲುಗಳಿಗೆ ಶೂ ಧರಿಸಿ ಮನೆಯಿಂದ ಹೊರಬಿದ್ದಿದ್ದಾನೆ. ಮೊದಲು ಅಂಗಳ, ಬೀದಿ, ಕೇರಿ ಎನ್ನುತ್ತ ಕೊನೆಗೆ ಬದರಿಯ ಮುಖ್ಯರಸ್ತೆಗಳಲ್ಲಿ ಅವನ ಪಯಣ ಸಾಗಿದೆ. ಅತ್ತ ನಡಿಗೆಯೆನ್ನಲಾಗದ ಇತ್ತ ಓಟ ಎನ್ನಲೂ ಬಾರದ ವಿಚಿತ್ರವಾದೊಂದು ಗತಿಯಲ್ಲಿ ಅವನ ಚಲನೆಯಿದೆ. ಬಾತುಕೋಳಿಯೊಂದು ತನ್ನ ಇಕ್ಕೆಲಗಳನ್ನು ಬಾಗಿಸುತ್ತ ಬಳುಕಿಸುತ್ತ ಪುತುಪುತು ನಡೆದಂತೆ ತನ್ನ ಇಡೀ ಮೈಯನ್ನು ರಬ್ಬರಿನ ಕೋಲಿನಂತೆ ಅತ್ತಿತ್ತ ಬಾಗಿಸುತ್ತ ಅವನು ನಡೆಯುವುದನ್ನು ಬೆಳಗ್ಗೆ ಪೇಪರು, ಹಾಲು ತರಲು ಹೊರಟವರು ಕ್ಷಣಕಾಲ ನಿಂತು ವಿಸ್ಮಯದಿಂದ ನೋಡುತ್ತಾರೆ. ಬದರಿಗೆ ಪ್ರವಾಸಿಗಳಾಗಿ ಬಂದವರು ಇವನ ನೃತ್ಯದಂಥ ನಡಿಗೆಯೋಟ ಕಂಡು ಮುಸಿಮುಸಿ ನಗುತ್ತಾರೆ. ಇನ್ನು ಕೆಲವರು ಇಂಥದೊಂದು ದೃಶ್ಯ ಮತ್ತೆ ಜನ್ಮದಲ್ಲಿ ಸಿಕ್ಕದೇನೋ ಎಂಬಂತೆ ತಮ್ಮ ಕ್ಯಾಮೆರಾ, ಮೊಬೈಲುಗಳಲ್ಲಿ ಆತನನ್ನು ದಾಖಲಿಸಿಕೊಳ್ಳುತ್ತಾರೆ. ಇದ್ಯಾವುದರ ಪರಿವೆಯೂ ಇಲ್ಲದೆ; ದೊಗಳೆ ಬನಿಯನ್ನು ಬೆವರಿಂದ ತೊಯ್ದು ತೊಪ್ಪೆಯಾದ್ದನ್ನೂ ಲೆಕ್ಕಿಸದೆ ಆ ತರುಣ ಓಡಿಯೇ ಓಡಿದ್ದಾನೆ. ಸುತ್ತಲಿನ ಜಗತ್ತು ಅವನ ಪಾಲಿಗೆ ನಗಣ್ಯ. ನಡಿಗೆಯ ದಾರಿ ಬಿಟ್ಟರೆ ಮಿಕ್ಕಿದ್ದೇನೂ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇಲ್ಲವೆಂಬಂತೆ ಏಕಾಗ್ರಚಿತ್ತದಿಂದ ಹೋಗುತ್ತಿರುವ ಆ ಯುವಕನ ಕಣ್ಮುಂದೆ ಅತ್ತಿತ್ತ ಕದಲದೆ ನಿಶ್ಚಲವಾಗಿ ನಿಂತುಬಿಟ್ಟಿರುವುದೊಂದೇ – ರಿಯೋ ಒಲಿಂಪಿಕ್ಸ್‍ನ ಪದಕ! ಮತ್ತಷ್ಟು ಓದು »

3
ಜುಲೈ

’ಪಟ್ಟು’ ಬಿಡದೆ ಗೆದ್ದವನು

– ಶೈಲೇಶ್ ಕುಲ್ಕರ್ಣಿ

ಮಾರ್ವನ್ ಅಟಪಟ್ಟುದೇಶೀಯ ಕ್ರಿಕೆಟ್ನಲ್ಲಿ ಭರವಸೆಯ ಆಟಗಾರನಾಗಿ ಅದಾಗಲೇ ಆತ ಒಳ್ಳೆ ಹೆಸರು ಸಂಪಾದಿಸಿದ್ದ.ಅಂತರ್-ರಾಷ್ಟ್ರೀಯ ಸ್ತರದಲ್ಲಿ ತನ್ನ ಹೆಸರಿನ ಭೇರಿಭಾರಿಸುವ ಭರಪೂರ ಉತ್ಸಾಹದಿಂದ ರಾಷ್ಟ್ರೀಯತಂಡಕ್ಕೆ ಪದಾರ್ಪಣೆ ಮಾಡಿದ.

ತನ್ನ ಟೆಸ್ಟ್ ಜೀವನದ ಮೊಟ್ಟಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ಆಡಲಿಳಿದಾಗ ಅವಗಳಿಸಿದ್ದು ಬರೋಬ್ಬರಿ “0”.
ಹೊಸಹುರುಪಿಂದ ಎರಡನೇ ಇನ್ನಿಂಗಿನಲ್ಲಿ ಕಣಕ್ಕೆ ಬಂದಾಗ ಮತ್ತೆಬಾರಿಸಿದ್ದು “0”.
ಸ್ವಾಭಾವಿಕವಾಗಿ ಆತನನ್ನ ತಂಡದಿಂದ ಕೈಬಿಟ್ರು .

೨೨ ತಿಂಗಳ ಕಠಿಣ ಪರಿಶ್ರಮ ನಡೆಸಿದ  ನಂತರ ತಂಡಕ್ಕೆ ಮರು ಆಯ್ಕೆ ಆದ .
ತನ್ನ ದ್ವಿತೀಯ ಟೆಸ್ಟಿನ ಪ್ರಥಮ ಇನ್ನಿಂಗ್ಸ್ನಲ್ಲಿ ಆತನ ಶೂನ್ಯಪ್ರೇಮ ಮರುಕಳಿಸಿತ್ತು. ಸ್ಕೋರ್ಬೋರ್ಡ್ ನಲ್ಲಿ ಆತನ ಹೆಸರಿನೆದುರಿಗೆ ನೇತಿದ್ದು ಮತ್ತದೇ “0”.
ಎರಡನೇ ಇನ್ನಿಂಗ್ಸ್ ನಲ್ಲಿ ತನ್ನಪಾಲಿಗೆ ಬೇತಾಳನಂತೆ ಬೆನ್ನಟ್ಟಿದ್ದ ಶೂನ್ಯ ಸಂಪಾದನೆಯ ಈ ಭಾರವನ್ನ ಹೇಗೋ ಕಳೆದುಕೊಂಡು ಬಿಡಬೇಕು ಅಂದುಕೊಂಡಿದ್ದವ ಗಳಿಸಿದ್ದು “೧” ರನ್ ಮಾತ್ರ.
ಪರಿಣಾಮ …ಪುನಃ ತಂಡದಿಂದ ಅರ್ಧಚಂದ್ರ ಪ್ರಯೋಗ.

ಆತ ಮೈದಾನಕ್ಕೆ ಮರಳಿ ಮತ್ತೆ ಅಭ್ಯಾಸಕ್ಕಿಳಿದ ಮತ್ತು ಈ ಬಾರಿ ತಂಡದಿಂದ ಪುನರಾಯ್ಕೆಯ ಕರೆಬಂದಾಗ ಆತನ ಕ್ರೀಡಾಜೀವನದ ೧೭ ತಿಂಗಳು ಉರುಳಿಹೋಗಿತ್ತು .
ಆತನ ಟೆಸ್ಟ್ ಕರಿಯರ್ನ ತೃತೀಯ ಟೆಸ್ಟ್.. ಭರವಸೆಯ ಆಣೆಕಟ್ಟು ಹೊತ್ತು ಬಂದವನಿಂದ ಪಂದ್ಯದ ಎರಡೂ ಇನ್ನಿಂಗ್ಸ್ನಲ್ಲಿ ಅಮೋಘ “ಶೂನ್ಯ” ಸಂಪಾದನೆ .
ನಿಸ್ಸಂಕೋಚವಾಗಿ ಆತನನ್ನು ತಂಡದಿಂದ ಹೊರದಬ್ಬಿದ್ರು.
ಮತ್ತಷ್ಟು ಓದು »