ನಮ್ಮೂರ ಹಬ್ಬ : ಗಣೇಶ ಹಬ್ಬ
ಗೀತಾ ಜಿ.ಹೆಗಡೆ, ಕಲ್ಮನೆ.
ಓಂ ನಮೋ ನಮಃಸ್ತುಭ್ಯಂ
ಗಣರಾಜ ಮಹೇಶ್ವರಃ
ಸರ್ವ ವಿಘ್ನ ಹರೋದೇವಾ
ಪ್ರಥಮಂ ತವ ವಂದನಾ||
ಈ ಶ್ಲೋಕ ನನ್ನ ಆಯಿ(ಅಮ್ಮ) ದಿನವೂ ದೇವರಿಗೆ ನಮಸ್ಕಾರ ಮಾಡುವಾಗ ಮೂರೊತ್ತೂ ಹೇಳುತ್ತಿದ್ದರು. ದಿನವೂ ಕೇಳುವ ಕಿವಿಗಳು ನನ್ನ ಬಾಯಲ್ಲಿ ಉದುರಲು ಪ್ರಾರಂಭವಾಗಿರೋದು ತೊದಲು ನುಡಿಗಳ ವಯಸ್ಸಿನಲ್ಲಿ. ಅದೂ ಆಯಿಯೊಂದಿಗೆ ಕ್ರಮೇಣ ದಿನವೂ ಲೊಚ ಲೊಚ ಭಾಷೆಯಲ್ಲಿ ಹೇಳುವಾಗ ಆಯಿಯ ಮುಖದಲ್ಲಿ ಗಿಕಿ ಗಿಕಿ ನಗು, ತನ್ನ ಮಗಳು ಮಹಾ ಬುದ್ಧಿವಂತೆ ಎಂದು ಎಲ್ಲರೆದುರು ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು. Read more
ಇಂಡೋನೇಷ್ಯದ ನೋಟಿನಲ್ಲೂ ಈತನದೊಂದು ಫೋಟೋ ಇದೆ!
– ರೋಹಿತ್ ಚಕ್ರತೀರ್ಥ
ಗಿರೀಶ ಕಾರ್ನಾಡರ ಹಯವದನ ನಾಟಕ ಗೊತ್ತಲ್ಲ? ಪದ್ಮಿನಿ ಎಂಬ ಸುರಸುಂದರ ಹೆಣ್ಣನ್ನು ಮೋಹಿಸಿ ತಲೆ ಕಡಿದುಕೊಳ್ಳುವ ಮತ್ತು ಇದ್ದ (ಮತ್ತು ಬಿದ್ದ) ತಲೆಯ ಬದಲಾಗಿನ್ನೊಂದು ತಲೆ ಅಂಟಿಸಿಕೊಂಡು ಪೇಚಾಡುವ ಇಬ್ಬರು ಜೀವದ ಗೆಳೆಯರ ಕತೆ ಅದು. ಆ ನಾಟಕದ ಪ್ರಾರಂಭದಲ್ಲಿ ಭಾಗವತ ಹೇಳುತ್ತಾನೆ: “ಸರ್ವ ವಿಘ್ನಗಳನ್ನೂ ನಿರ್ಮೂಲನಗೊಳಿಸಿ ಸಕಲ ಈಪ್ಸಿತಗಳಲ್ಲಿ ಸಿದ್ಧಿಯನ್ನು ನೀಡುವ ಆ ವಿಘ್ನೇಶ್ವರನೇ ಇಂದಿನ ನಮ್ಮ ನಾಟಕಕ್ಕೆ ಯಶಸ್ಸನ್ನು ನೀಡಲಿ. ಆತನ ಮಹಾತ್ಮ್ಯವನ್ನಾದರೂ ವರ್ಣಿಸುವುದು ಹೇಗೆ? ಆನೆಯ ಮುಖ, ಮನುಷ್ಯನ ದೇಹ, ಮುಖದಲ್ಲಿ ಮುರುಕು ದಂತ, ದೇಹದಲ್ಲಿ ಬಿರುಕು ಬಿಟ್ಟ ಉದರ – ಹೇಗೆ ನೋಡಿದರೂ ಅಪೂರ್ಣತೆಗೇ ಸಾಕ್ಷಿಯಾಗಿರುವಂತೆ ಕಾಣುವ ಈ ವಕ್ರತುಂಡನೇ ವಿಘ್ನಹರ್ತನೂ ಆಗಿರಬೇಕು ಎಂಬುದರ ರಹಸ್ಯವನ್ನಾದರೂ ಹೇಗೆ ಬಿಡಿಸೋಣ? ಬಹುಶಃ ದೇವರ ಪೂರ್ಣತ್ವ ಮನುಷ್ಯ ಕಲ್ಪನೆಗೇ ಒಗ್ಗಲಾರದಂಥಾದ್ದು ಎಂಬುದನ್ನೇ ಈ ಮಂಗಳಮೂರ್ತಿಯ ರೂಪ ಸಂಕೇತಿಸುತ್ತಿರಬಹುದು” Read more