ಗಾಳಿಪಟ ಮತ್ತು ಆಲದ ಮರ
– ಗುರುರಾಜ ಕೋಡ್ಕಣಿ. ಯಲ್ಲಾಪುರ
ಗಲಿರಾಮ್ ನಾಥನ್ ಎನ್ನುವ ಗಲ್ಲಿಯಲ್ಲಿದ್ದ ಹಳೆಯ ಪಾಳುಬಿದ್ದ ಮಸೀದಿಯ ಸಂದಿಯೊಂದರಿಂದ ಟಿಸಿಲೊಡೆದು ವಿಶಾಲವಾಗಿ ಬೆಳೆದುಕೊಂಡಿತ್ತು ಆ ಆಲದಮರ. ಅದೇ ಮರದ ಟೊಂಗೆಯೊಂದಕ್ಕೆ ಸಿಕ್ಕಿಕೊಂಡಿತ್ತು ಅಲಿಯ ಗಾಳಿಪಟ. ಹರುಕು ಅಂಗಿಯನ್ನು ಧರಿಸಿದ್ದ ಅಲಿ, ಮರದ ಮೇಲೆ ಸಿಕ್ಕಿಬಿದ್ದಿದ್ದ ಪಟವನ್ನು ಬಿಡಿಸಿಕೊಳ್ಳಲು ಹಲವು ಬಾರಿ ವಿಫಲಪ್ರಯತ್ನ ನಡೆಸಿ ಕೊನೆಗೊಮ್ಮೆ ಹತಾಶನಾಗಿ ಕೈಚೆಲ್ಲಿದ್ದ. ಅಲ್ಲಲ್ಲಿ ಉರುಟುಕಲ್ಲುಗಳೆದ್ದು ಕಾಣುತ್ತಿದ್ದ ಕಿರಿದಾದ ಓಣಿಯಲ್ಲಿ ಬರಿಗಾಲಿನಲ್ಲಿ ಓಡುತ್ತ ತನ್ನ ತಾತನತ್ತ ತೆರಳಿದ. ಮನೆಯ ಹಿತ್ತಲಿನಲ್ಲಿ ನೀರವ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಸಣ್ಣ ಮಂಪರಿನ ನಡುವೆ ಹಗಲುಗನಸು ಕಾಣುತ್ತ ಕುಳಿತಿದ್ದ ತಾತನನ್ನು ಕಾಣುತ್ತಲೇ, ‘ಅಜ್ಜಾ, ನನ್ನ ಗಾಳಿಪಟ ಕಳೆದುಹೋಯಿತು’ ಎಂದು ಜೋರಾಗಿ ಕಿರುಚಿದ. ಮೊಮ್ಮಗನ ಕೂಗಿನಿಂದ ಮಂಪರು ಹಾರಿಹೋದ ಮುದಿಯ ನಿಧಾನವಾಗಿ ತನ್ನ ತಲೆಯನ್ನೆತ್ತಿದ. ಮದರಂಗಿಯ ಬಣ್ಣದಿಂದಾಗಿ ಕೆಂಚಗಾಗಿದ್ದ ತನ್ನ ಮುಪ್ಪಿನ ಗಡ್ಡವನ್ನೊಮ್ಮೆ ಸಾವಕಾಶವಾಗಿ ನೀವುತ್ತ, ‘ಪಟದ ನೂಲು ಕಿತ್ತು ಹೋಗಿತ್ತಾ..’? ಎಂದು ಮೊಮ್ಮಗನನ್ನು ಪ್ರಶ್ನಿಸಿದ. ಕಳಪೆ ಗುಣಮಟ್ಟದ ದಾರದಿಂದ ಹಾರಿಸಲ್ಪಟ್ಟ ಪಟವಿದ್ದಿರಬಹುದು ಎಂಬ ಊಹೆ ಆತನದ್ದು. ‘ಇಲ್ಲಾ ಅಜ್ಜ, ನೂಲು ಹರಿದಿಲ್ಲ, ಅದು ಆಲದ ಮರದ ಕೊಂಬೆಗೆ ಸಿಕ್ಕಿಬಿದ್ದಿದೆ’ ಎಂದುತ್ತರಿಸಿದ ಮೊಮ್ಮಗ. ಮತ್ತಷ್ಟು ಓದು