ಆ ಕ್ಷಣ..
– ಗೀತಾ ಜಿ.ಹೆಗಡೆ
ಜೀವನ ಅನ್ನೋದು ಎಷ್ಟು ವಿಚಿತ್ರ. ಕೆಲವೊಮ್ಮೆ ಎಷ್ಟೊಂದು ಅಸಹಾಯಕರಾಗಿಬಿಡುತ್ತೇವೆ. ಕಣ್ಣ ಮುಂದಿರುವ ಹತ್ತಾರು ಕೆಲಸಗಳು, ಹೇಗೆ ನಿಭಾಯಿಸಲಿ ಅನ್ನುವ ಚಿಂತೆ ಮನವನಾವರಿಸಿ ದಿಕ್ಕು ತೋಚದಂತಾಗಿ ತುಂಬಾ ತುಂಬಾ ಸಂಕಟವಾಗುತ್ತದೆ. ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟ ಅನುಭವ. ಏನು ಮಾಡ್ಲಿ? ಯಾರ ಹತ್ತಿರ ಹೇಳಿಕೊಳ್ಳಲಿ? ಯಾರಿದ್ದಾರೆ ನನಗೆ ಸಹಾಯ ಮಾಡುವವರು? ಮನಸ್ಸು ಬರೀ ಹುಡುಕಾಟದಲ್ಲಿ ಯಾರಿಲ್ಲಪ್ಪ ನನಗೆ. ತೀರಾ ತೀರಾ ಸೋತ ಅನುಭವ. ಹತಾಶೆ, ನೋವು, ಸಂಕಟ. ಯಾರೊಂದಿಗೆ ಮಾತು ಬೇಡಾ, ಎಲ್ಲಿ ಹೋಗೋದು ಬೇಡಾ, ಯಾವುದರಲ್ಲೂ ಆಸಕ್ತಿನೇ ಇಲ್ಲ. ಹೇಳಿಕೊಳ್ಳಲು ನೂರಾರು ಜನ ಇರ್ತಾರೆ. ಒಬ್ಬೊಬ್ಬರನ್ನೇ ನೆನಪಿಸಿಕೊಳ್ಳುವ ಮನಸ್ಸು ತನ್ನಷ್ಟಕ್ಕೇ ತಟಸ್ತವಾಗುತ್ತ ಬೇಡಾ ಬೇಡಾ ಇವರತ್ತಿರ ಏನೂ ಹೇಳೋದು ಬೇಡಾ. ನನ್ನಿಂದ ಅವರಿಗೆಲ್ಲ ಯಾಕೆ ತೊಂದರೆ. ಒಂದೊಮ್ಮೆ ಏನಾರೂ ಹೇಳಿದರೆ ತೋರುಗಾಣಿಕೆಯ ಕಾಟಾಚಾರಕ್ಕೆ ಬರ್ತಾರೊ ಏನೊ? ಇಷ್ಟಕ್ಕಾಗಿ ಯಾಕೆ ಹೇಳಿಕೊಳ್ಳಬೇಕು. ನಾಳೆ ಇದೂ ಒಂದು ಹಂಗಾಗುತ್ತೋ ಏನೋ? ಆದದ್ದು ಆಗಲಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ನಂಬಿದ ಆ ದೇವರೆ ದಾರಿ ತೋರಿಸುತ್ತಾನೆ. ಮತ್ತಷ್ಟು ಓದು