ವಿಷಯದ ವಿವರಗಳಿಗೆ ದಾಟಿರಿ

Posts tagged ‘ಗೋಹತ್ಯೆ’

18
ಆಗಸ್ಟ್

ನೀನ್ಯಾರಿಗಾದೆಯೋ ಎಲೆ ಮಾನವ!

– ಪ್ರೊ.ರಾಜಾರಾಮ್ ಹೆಗಡೆ

gaumataಇತ್ತೀಚೆಗೆ ಗುಜರಾತ್ ಹಾಗೂ ಮಧ್ಯಪ್ರದೇಶಗಳಲ್ಲಿ ಗೋರಕ್ಷಕರಿಂದ ದಲಿತರು ಹಾಗೂ ಮುಸ್ಲಿಂ ಸ್ತ್ರೀಯರ ಮೇಲೆ ಹಲ್ಲೆಗಳು ನಡೆದ ಪ್ರಕರಣಗಳು ವರದಿಯಾಗಿ ಸುದ್ದಿಯಾದವು. ನಂತರ ಇದಕ್ಕೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿಯವರಿಂದ ಖಂಡನೆಯ ಮಾತುಗಳು ಕೂಡ ಬಂದವು. ನರೇಂದ್ರ ಮೋದಿಯವರ ಖಂಡನೆಗೆ ಹಿಂದುತ್ವದವರಿಂದ ಹಾಗೂ ಪ್ರಗತಿಪರರಿಂದ ಪ್ರತಿಕ್ರಿಯೆಗಳೂ ಬಂದಿವೆ. ನರೇಂದ್ರ ಮೋದಿಯವರ ಹೇಳಿಕೆ ಯಾವುದೇ ಕಾರಣಕ್ಕೆ ಬಂದಿರಲಿ, ಈ ಗೋರಕ್ಷಣೆಯ ರಾಜಕೀಯವು ಸೃಷ್ಟಿಸುತ್ತಿರುವ ಸಮಸ್ಯೆಗಳ ಕುರಿತು ಹಿಂದುತ್ವದ ಮುಂದಾಳುವೇ ಈ ರೀತಿ ಹೇಳಿಕೆ ನೀಡುವ ಅಗತ್ಯವಂತೂ ಖಂಡಿತಾ ಇತ್ತು. ಇಂದು ಹಿಂದುತ್ವ ರಾಜಕೀಯ ಧುರೀಣರನ್ನು ಹಾಗೂ ಹೋರಾಟಗಾರರನ್ನು ನೋಡಿದರೆ ಒಂದೋ ಹಿಂದೂಸಂಸ್ಕೃತಿ, ಗೋವು, ಪೂಜಾಸ್ಥಳಗಳು, ದೇವತೆಗಳು, ಧಾರ್ಮಿಕ ಆಚರಣೆ ಇವೆಲ್ಲ ಇವರಿಗೆ ಸಾಂಸ್ಕೃತಿಕ ಕಾಳಜಿಗಿಂತ ರಾಜಕೀಯದ ಸರಕುಗಳಾಗಿಬಿಟ್ಟಿವೆ, ಇಲ್ಲಾ, ಭಾರತೀಯ ಸಂಸ್ಕೃತಿಯ ಕುರಿತು ಇವರಿಗೆ ತಪ್ಪು ತಿಳಿವಳಿಕೆಗಳಿವೆ. ಹಾಗಾಗಿ ಈ ರಾಜಕೀಯವು ನಮ್ಮ ಜನರಿಗೆ ಹಾಗೂ ದೇಶಕ್ಕೆ ಏಕೆ ಬೇಕು ಎಂಬ ಪರಾಮರ್ಶೆ ಕೂಡ ಜೊತೆಜೊತೆಯಲ್ಲೇ ನಡೆಯಬೇಕಾದ ಅಗತ್ಯವಿದೆ. ಇಲ್ಲದಿದ್ದಲ್ಲಿ ಈ ರಾಜಕೀಯವು ಜನರಿಂದ ದೂರವಾಗಿ, ಜನಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. Read more »

11
ಏಪ್ರಿಲ್

ಋಗ್ವೇದ ೧೦.೮೫.೧೩ ಅಘಾಸು ಹನ್ಯಂತೇ ಗಾವಃ

– ವಿನಾಯಕ ಹಂಪಿಹೊಳಿ

rigvedaಸ್ವಘೋಷಿತ ಅಭಿನವ ಪ್ರವಾದಿ ಜಾಕೀರ ನಾಯ್ಕರ ಶಿಷ್ಯರೊಂದಿಗೆ ಸ್ವಲ್ಪ ದಿನಗಳ ಹಿಂದೆ ನನ್ನ ಕೆಲವು ಮಿತ್ರರು ಚರ್ಚೆಯೊಂದನ್ನು ನಡೆಸಿದ್ದರು. ಆ ಚರ್ಚೆಯಲ್ಲಿ ನಾನೂ ಭಾಗವಹಿಸಿದ್ದೆ. ಅಲ್ಲಿ ನಮ್ಮ ವಿರೋಧಿಗಳ ವಾದವೊಂದು ನನ್ನ ಗಮನ ಸೆಳೆಯಿತು. ಅಲ್ಲಿ ನಮ್ಮ ವಿರೋಧಿಗಳು “ಋಗ್ವೇದದಲ್ಲಿ ಗೋಮಾಂಸದ ಉಲ್ಲೇಖವಿದೆ. ಮದುವೆಯ ಸಂದರ್ಭದಲ್ಲಿ ಆಕಳುಗಳನ್ನು ಕಡಿಯಲಾಗುತ್ತಿತ್ತು ಎಂಬುದಕ್ಕೆ ಆಧಾರವಿದೆ. ಬೇಕಾದರೆ ಋಗ್ವೇದದ ೧೦ನೇ ಮಂಡಲದ ೮೫ನೇ ಸೂಕ್ತದ ೧೩ನೇ ಋಕ್ಕನ್ನು ನೋಡಿ” ಎಂದು ಹೇಳಿದ್ದರು. ಆ ಋಕ್ಕು ಹೀಗಿತ್ತು.

ಸೂರ್ಯಾಯಾ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ | ಅಘಾಸು ಹನ್ಯಂತೇ ಗಾವೋsರ್ಜನ್ಯೋಃ ಪರ್ಯುಹ್ಯತೇ || Read more »