ವಿಷಯದ ವಿವರಗಳಿಗೆ ದಾಟಿರಿ

Posts tagged ‘ಗೌರಿ ಲಂಕೇಶ್’

19
ಸೆಪ್ಟೆಂ

ದ್ವೇಷ ಕಾರುವುದನ್ನೇ ವಿಚಾರವಾದ ಎನ್ನುವುದಾದರೆ…

– ಅಜಿತ್ ಶೆಟ್ಟಿ ಹೆರಾಂಜೆ

ಗೌರಿ ಲಂಕೇಶ್ ಕೊಲೆಯಾದಾಗ ನಾನು ಮುಖಪುಟದಲ್ಲಿ ಒಂದು ಸ್ಟೇಟಸ್ ಹಾಕಿದ್ದೆ.. ಅಕಾಲಿಕ ಮರಣ ಯಾರದ್ದೇ ಆಗಿರಲಿ ಅದು ಘೋರ. ಅದು ಗೌರಿ ಲಂಕೇಶರಂತಾ ಖ್ಯಾತ ನಾಮರದ್ದೆ ಆಗಿರಲಿ ಅಥವಾ ಶರತ್, ರುದ್ರೇಶ್, ಕಟ್ಟಪ್ಪ, ರವಿಯರಂತ ಶ್ರೀ ಸಾಮಾನ್ಯರದ್ದೇ ಆಗಿರಿಲಿ..!! ಮತ್ತಷ್ಟು ಓದು »

15
ಸೆಪ್ಟೆಂ

ನಾನು ಗೌರಿಯಾದರೆ ನೀನು ಯಾರು ಎಂದು ಅವರ ಕೇಳಬೇಕಿತ್ತು!

– ನರೇಂದ್ರ ಎಸ್ ಗಂಗೊಳ್ಳಿ

ಪತ್ರಕರ್ತೆಯಾಗಿ ಅದಕ್ಕಿಂತ ಹೆಚ್ಚಾಗಿ ತನ್ನ ಎಡಪಂಥೀಯ ಧೋರಣೆಗಳಿಂದ  ಗುರುತಿಸಿಕೊಂಡಿದ್ದ ಗೌರಿ ಲಂಕೇಶ್ ಹತ್ಯೆ ನಿಜಕ್ಕೂ ವಿಷಾದಕರ. ವಾದ ವಿವಾದಗಳಿಗೆ ಹತ್ಯೆಯೇ ಉತ್ತರವಾಗಬಾರದು. ಹಾಗಾಗಿ ಹಂತಕರು ಅದ್ಯಾರೇ ಆಗಿದ್ದರೂ ಅವರ ಬಂಧನವಾಗಲಿ ಶಿಕ್ಷೆಯಾಗಲಿ  ಎನ್ನುವುದನ್ನು ಮಾನವೀಯತೆಯ ನೆಲೆಯಲ್ಲಿ ಎಲ್ಲರೂ ಒಪ್ಪುವಂತಾದ್ದು. ಆದರೆ ಒಂದು ಹತ್ಯೆಯ ಬಳಿಕ ಈ ಬುದ್ಧಿಜೀವಿಗಳೆನ್ನಿಸಿಕೊಂಡವರು  ವರ್ತಿಸುತ್ತಿರುವ ರೀತಿ ಇದೆಯಲ್ಲಾ ಅದನ್ನು ಮಾತ್ರ ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾಗದ್ದು.

ಮೊತ್ತ ಮೊದಲಿಗೆ ನಮ್ಮ ಮಾಧ್ಯಮಗಳು ಗೌರಿಯವರ ಹತ್ಯೆ ಬಳಿಕ ಅವರಿಗೆ ವಿಶೇಷ ಬಿರುದು ಬಾವಲಿಗಳನ್ನೇ ನೀಡುತ್ತಾ ಸುದ್ದಿಗಳನ್ನು ಬಿತ್ತರಿಸಲಾರಂಬಿಸಿದವು. ಹೋರಾಟಗಾರ್ತಿ, ಅಪೂರ್ವ ಚಿಂತಕಿ ಎಂದೆಲ್ಲಾ ಇವರು ಹೇಳುತ್ತಾರಲ್ಲಾ ಅದ್ಯಾವ ನೆಲೆಯಲ್ಲಿ ಅವರನ್ನು ಉತ್ತಮ ಚಿಂತಕಿ ಎನ್ನಲಾಗುತ್ತದೆ ಎನ್ನುವುದನ್ನು ಬಲ್ಲಿದರು ಹೇಳಬೇಕಿದೆ. ಆರಂಭದ ಹಂತದಲ್ಲಿ ನಕ್ಸಲರನ್ನು ಶರಣಾಗಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಅವರಿಗೊಂದು ಬದುಕು ಕಟ್ಟಿಕೊಡುವ ಒಂದಷ್ಟು ಪ್ರಯತ್ನಗಳನ್ನು ಅವರು ಮಾಡಿದ್ದು ನಿಜವಾದರೂ ಈ ಹೊತ್ತಿಗೂ  ನಕ್ಸಲರಿಗೆ ಪರಿಹಾರ ಕೊಡಿಸುವ ಮತ್ತು ಅವರ ಮರುವಸತಿ ಯೋಜನೆಯಲ್ಲಿ ನಡೆದ ಅವ್ಯವಹಾರಗಳ ವಾಸನೆ ಆ ವಿಚಾರದ ಸುತ್ತಲೂ ಮೇಳೈಸಿಕೊಳ್ಳುತ್ತಿರುವುದನ್ನು ಅಲ್ಲಗಳೆಯಲಾದೀತಾ?

ಅವರ ಪತ್ರಿಕೆಯ ತಲೆಬರಹಗಳಾದಿಯಾಗಿ ಅವರ ಬರಹಗಳಲ್ಲಿನ ಬಾಷಾ ಪ್ರಯೋಗಗಳನ್ನು ಗಮನಿಸಿದಾಗ ಅವರೊಬ್ಬ ಅಪೂರ್ವ ಆದರ್ಶ ಚಿಂತನೆಗಳುಳ್ಳ ಉತ್ತಮ ಬರಹಗಾರರಾಗಿದ್ದರು ಎನ್ನುವುದನ್ನು ಸಜ್ಜನ ಮನಸ್ಸುಗಳಿಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.ಸತ್ತ ಮೇಲೆ ಪ್ರತಿಯೊಬ್ಬರನ್ನೂ ಗೌರವಿಸುವುದು ನಮ್ಮ ಸಂಸ್ಕೃತಿ ನಮಗೆ ಕಲಿಸಿದ ಉತ್ತಮ ವಿಚಾರಗಳಲ್ಲಿ ಒಂದು. ಹಾಗೆಂದು ಗೌರವ ಸಲ್ಲಿಸುವ ನೆಪದಲ್ಲಿ ತೀರಾ ಅತಿರಂಜಿತವಾಗಿ ಒಬ್ಬರನ್ನು ಹೊಗಳುವುದನ್ನು ಯಾವ ನೆಲೆಯಲ್ಲೂ ಒಪ್ಪಲಾಗದ್ದು.

ಮತ್ತಷ್ಟು ಓದು »

14
ಸೆಪ್ಟೆಂ

ಕಳೆದ ಒಂದು ವಾರದಿಂದ ನಾನು ಕೇಳಲ್ಪಟ್ಟ ಐದು ಸುಳ್ಳುಗಳು

– ರಾಜೇಶ್ ನರಿಂಗಾನ.

೧) ಗೌರಿ ಲಂಕೇಶ್ ವಿಚಾರವಾದಿ

ಗೌರಿ ಲಂಕೇಶ್ ಯಾವ ರೀತಿಯ ವಿಚಾರವಾದಿ ಎಂದೇ ತಿಳಿಯುತ್ತಿಲ್ಲ. ತನ್ನ ಸಂಪಾದಕತ್ವದ ‘ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಭಿನ್ನ ವಿಚಾರಧಾರೆಯ ನಿಲುವನ್ನು ಹೊಂದಿರುವ ಆಕೆಗಿಂತ ವಯಸ್ಸಿನಲ್ಲಿ ಅದೆಷ್ಟೇ ಹಿರಿಯರಿದ್ದರೂ ಏಕವಚನದಲ್ಲಿ ಹೀನಮಾನವಾಗಿ ನಿಂದಿಸುತ್ತಿದ್ದರು. ರಂಜನೆ, ಪ್ರಲೋಭನೆಯ ಹೆಸರಿನಲ್ಲಿ ಭಿನ್ನ ವಿಚಾರಧಾರೆಯವರ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣಗೈಯುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆಯನ್ನೂ ವಿಧಿಸಿತ್ತು. ಆದ್ದರಿಂದ ಭಿನ್ನ ವಿಚಾರಧಾರೆಯಿರುವ ವ್ಯಕ್ತಿಗಳ ತೇಜೋವಧೆ ಮಾಡುವುದನ್ನೇ ‘ವಿಚಾರವಾದ’ ಎನ್ನುವುದಾದರೆ ಅಂಥ ವಿಚಾರವಾದಕ್ಕೆ ನನ್ನ ಧಿಕ್ಕಾರವಿದೆ. ಮತ್ತಷ್ಟು ಓದು »