ನಮ್ಮದು ಜ್ಞಾನ ಮಾರ್ಗ.ನಿಮ್ಮ ಮಾರ್ಗ ಯಾವುದು ಬುದ್ಧಿಜೀವಿಗಳೇ?
– ರಾಕೇಶ್ ಶೆಟ್ಟಿ
ಬುದ್ಧಿಜೀವಿ/ಸೆಕ್ಯುಲರ್/ಪ್ರಗತಿಪರರಿಗೆ ನಮಸ್ಕಾರ,
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದಿರುವ,ನಡೆಯುತ್ತಿರುವ ಬೌದ್ಧಿಕ ಫ್ಯಾಸಿಸಂನ ವಿರುದ್ಧ ನೀವೆಲ್ಲರೂ ಜನವರಿ ೩೦ನೇ ತಾರೀಖು ಬೆಂಗಳೂರಿನಲ್ಲಿ ಮೆರವಣಿಗೆ ಮತ್ತು ಬಹಿರಂಗ ಸಭೆಯೊಂದನ್ನು ಮಾಡಿದ್ದೀರಿ.ಆ ಸಭೆಯ ಕರಪತ್ರದ ಕೆಲವು ಸಾಲುಗಳ ಮೂಲಕ ನನ್ನ ಈ ಬಹಿರಂಗ ಪತ್ರವನ್ನು ಪ್ರಾರಂಭಿಸುತಿದ್ದೇನೆ.
“ತಾತ್ವಿಕವಾದ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪರಸ್ಪರ ಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಕರ್ನಾಟಕದಲ್ಲಿತ್ತು. ಚಾರ್ವಾಕರಿಗೆ ಕೂಡ ನಮ್ಮ ಚರ್ಚೆಯ ಚಾವಡಿಯಲ್ಲಿ ಒಂದಿಷ್ಟು ಜಾಗವಿತ್ತು.ಆದರೆ ಈಗ ಇದ್ದಕ್ಕಿದ್ದ ಹಾಗೆ ಸಾಹಿತಿಗಳು, ಚಿಂತಕರು,ಬುದ್ಧಿಜೀವಿಗಳು,ಪತ್ರಕರ್ತರು ಹೋರಾಟಗಾರರಲ್ಲಿ ಒಬ್ಬೊಬ್ಬರನ್ನೇ ಆಯ್ದು ಹಂಗಿಸಿ,ನಿಂದಿಸಿ,ಅಪಹಾಸ್ಯ ಮಾಡಿ, ಸುಳ್ಳು ಆರೋಪಗಳ ಮೂಲಕ ಅವರ ಚಾರಿತ್ರ್ಯ ಹನನ ಮಾಡಲಾಗುತ್ತಿದೆ.ಇದು ಸತ್ಯ,ನ್ಯಾಯ ಮತ್ತು ನಿಜವಾದ ಧರ್ಮದ ಪರ ಮಾತನಾಡುವವರ ನೈತಿಕ ಸ್ಥೈರ್ಯ ಕುಸಿದುಹೋಗುವಂತೆ ಮಾಡುವ ಹುನ್ನಾರ.ಈ ಕುಟಿಲ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ಜನವಿರೋಧಿ ನಿಲುವು ಹೊಂದಿರುವ ಹಿಡಿಯಷ್ಟಿರುವ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನೇ ಸಾರ್ವಜನಿಕ ಅಭಿಪ್ರಾಯವೆಂದು ಬಿಂಬಿಸಲು ಹೊರಟಿದ್ದಾರೆ.ಇದನ್ನೇ ಬಳಸಿಕೊಂಡು ಮಾಧ್ಯಮಗಳು ತಮ್ಮ ತೀರ್ಮಾನಗಳನ್ನು “ಜನಭಿಪ್ರಾಯ”ದ ಹೆಸರಲ್ಲಿ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ…”
ಹೌದೇ? ನಿಜವಾಗಿಯೂ ಕರ್ನಾಟಕದಲ್ಲಿ ನಮ್ಮ ಸೆಕ್ಯುಲರ್ ‘ಆಪ್ತ ಮಿತ್ರ’ರು ಹೇಳುತ್ತಿರುವಂತೆ ಬೌದ್ಧಿಕವಾಗಿ ಉಸಿರು ಕಟ್ಟಿಸುವ ವಾತವರಣ ನಿರ್ಮಾಣವಾಗಿದೆಯೇ? ಅವರ ಆತಂಕ ಸಕಾರಣವೇ? ಹೌದು ಎನ್ನುವುದು ನನ್ನ ಅಭಿಪ್ರಾಯ.ರಾಜ್ಯದಲ್ಲಿ ನಡೆದ “ಬೌದ್ಧಿಕ ಫ್ಯಾಸಿಸಂ”ನ ಘಟನೆಗಳ ಉದಾಹರಣೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಮೊದಲನೆಯ ಉದಾಹರಣೆ :ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದಲ್ಲಿ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ ಭಾರತೀಯ ಸಮಾಜ ಮತ್ತು ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ “ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC)”ವನ್ನು ಮುಚ್ಚಿಸಲಾಯಿತು.ಕಾರಣ ಆ ಸಂಸ್ಥೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿಯದೇ ತನ್ನ ಸಂಶೋಧನೆಯ ವಿಷಯಗಳನ್ನು ಮಂಡಿಸಿದ್ದು. ಮತ್ತಷ್ಟು ಓದು
ಭಾರತೀಯ ಸಂಸ್ಕೃತಿಯನ್ನು ವಿರೂಪಗೊಳಿಸುವ ಪಾಶ್ಚಾತ್ಯ ಚಿಂತನಾ ಮಾರ್ಗಗಳು
– ಶಿವಕುಮಾರ ಮತ್ತು ಡಂಕಿನ್ ಝಳಕಿ
ದಿನೇಶ್ ಅಮೀನ್ ಮಟ್ಟು ಅವರು ಪ್ರತಿಷ್ಠಿತ ಪತ್ರಿಕೆಯೊಂದಕ್ಕೆ ೨೦೧೨ರಲ್ಲಿ ಬರೆದ ವಿವೇಕಾನಂದರ ಕುರಿತ ಲೇಖನ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಈ ಲೇಖನದ ವಿರುದ್ಧ ಎದ್ದ ದನಿಗಳ ಕುರಿತು ತಮ್ಮ ಸಮರ್ಥನೆಯನ್ನು ಹೊಸೆಯುತ್ತಾ, ತಮ್ಮ ಫೇಸ್ಬುಕ್ ಪುಟದಲ್ಲಿ, ತಮ್ಮ ಲೇಖನ ಐತಿಹಾಸಿಕವಾಗಿ ಸರಿಯಾಗಿದೆ ಮತ್ತು ತಾವು ವಿವೇಕಾನಂದರ ಬಗ್ಗೆ ಪ್ರಕಟವಾಗಿರುವ ಸುಮಾರು 200 ಪುಸ್ತಕಗಳನ್ನು ಓದಿದ್ದಾಗಿ ಹೇಳಿಕೊಳ್ಳುತ್ತಾರೆ. ಅವರ ಪರವಾಗಿ ವಾದಿಸುತ್ತ ಮತ್ತೊಬ್ಬರು, ‘ರೋಗಿಷ್ಟ’ ಎನ್ನುವುದು ಬೈಗುಳವೇ ಅಲ್ಲ, ‘ಕಡಿಮೆ ಅಂಕ ಗಳಿಸುವವ’ ಎಂಬುದು ‘ಅವಮಾನದ’ ವಿಷಯವಲ್ಲ ಎಂದು ಹೇಳ ತೊಡಗಿದ್ದಾರೆ. ಈ ಹೊತ್ತಿನಲ್ಲಿ ಕೆಲವು ವಿಚಾರಗಳನ್ನು ಮತ್ತೊಮ್ಮೆ ಚರ್ಚೆಗೆತ್ತಿಕೊಳ್ಳುವುದು ಈ ಪುಟ್ಟ ಲೇಖನದ ಉದ್ದೇಶ.
ಮಟ್ಟುರವರ ವಿವೇಕಾನಂದರ ಕುರಿತ ಲೇಖನದ ಈ ಸಾಲುಗಳನ್ನು ನೋಡಿ: “ಸ್ವಾಮಿ ವಿವೇಕಾನಂದರು ದಡ್ಡ ವಿದ್ಯಾರ್ಥಿಯಾಗಿದ್ದರು. … ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು. ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. … ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. … ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ … ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. … ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. … (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ…. ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ.” ಇವು ಲೇಖನದ ವಾದದ ಕೆಲವೊಂದು ಝಲಕ್ ಅಷ್ಟೇ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
‘ಆವರಣ’ ಎಂಬ ವಿ-ಕೃತಿ — ಸಂಗ್ರಹ : ಗೌರಿ ಲಂಕೇಶ್ (ಭಾಗ–೩)
————————————————————————
‘ಆವರಣ’ ಎಂಬ ವಿಕೃತಿ ವಿಮರ್ಶಾಸಂಕಲನದಲ್ಲಿ ಒಟ್ಟು ಇಪ್ಪತ್ತೊಂದು ಲೇಖನಗಳಿವೆ. ಇವುಗಳಲ್ಲಿ ಎಂಟು ಲೇಖನಗಳ ಬಗ್ಗೆ ಈಗಾಗಲೇ ಎರಡು ಭಾಗಗಳಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದಾಗಿದೆ. ಇನ್ನು ಉಳಿದಿರುವ ಹದಿಮೂರು ಲೇಖನಗಳು ಎರಡು ರೀತಿಯವು. (೧) ‘ಆವರಣ’ ಕಾದಂಬರಿಗೆ ನೇರವಾಗಿ ಸಂಬಂಧಿಸಿರುವಂತಹವು. (೨) ‘ಆವರಣ’ ಕಾದಂಬರಿಯನ್ನು ನೆಪ ಮಾತ್ರಕ್ಕೆ ಇಟ್ಟುಕೊಂಡು ಭೈರಪ್ಪನವರ ನಡೆ-ನುಡಿಗಳನ್ನು ಹೇಳುವಂತಹವುಗಳು.
‘ಆವರಣ’ ಕಾದಂಬರಿಗೆ ಸಂಬಂಧಿಸಿರುವಂತಹ ಲೇಖನಗಳಲ್ಲಿ ಸಹ ಈ ಹಿಂದಿನ ಎರಡು ಭಾಗಗಳಲ್ಲಿ ಚರ್ಚಿತವಾದ ವಿಷಯಗಳನ್ನು ಬಿಟ್ಟು ವಿಶೇಷವಾದ,ಹೊಸದಾದ ಅಂಶಗಳು ಇಲ್ಲ. ಆದ್ದರಿಂದ ಅವುಗಳ ಬಗ್ಗೆ ವಿವರವಾದ ಚರ್ಚೆ ಪುನರುಕ್ತಿಯಾಗುತ್ತದೆ. ಪುನರುಕ್ತಿಯಾಗದಂತಹ ಕೆಲವು ಅಂಶಗಳ ಬಗ್ಗೆ ಮಾತ್ರ ಈ ಭಾಗದಲ್ಲಿ ಒತ್ತು ನೀಡಲಾಗಿದೆ.
ಹಿಂದಿನದನ್ನೆಲ್ಲ ‘ಆವರಣ’ದಲ್ಲಿ ಪೇರಿಸುವ ಪ್ರಯತ್ನ ಲೇಖನ ಬರೆದಿರುವ ಬಿ. ಎಸ್. ವೆಂಕಟಲಕ್ಷ್ಮಿಯವರಿಗೆ ‘…… ಕಾದಂಬರಿಯೊಂದನ್ನು ಉಲ್ಲಾಸಕ್ಕಾಗಿಯೋ ಅಥವಾ ತಮ್ಮ ವೈಚಾರಿಕತೆಯನ್ನು ಹಿಗ್ಗಿಸಿಕೊಳ್ಳುವ ಸಲುವಾಗಿಯೋ ಕೈಗೆತ್ತಿಕೊಳ್ಳುವ ಸಾಮಾನ್ಯ ಓದುಗರಿಗೆ ಕಾದಂಬರಿಯೊಂದು ಸಹಜವಾಗಿ ಓದಿಸಿಕೊಂಡಾಗ ಮಾತ್ರ ಒಂದು ಬಗೆಯ ತೃಪ್ತಿ …….. ಸಾರ್ಥಕ ಭಾವನೆ ಮೂಡುತ್ತದೆ……… ‘ಆವರಣ’ದಲ್ಲಿ ಯಾವೊಂದು ಕಥೆಯನ್ನೂ ಸುಸೂತ್ರವಾಗಿ ಹೇಳದೆ ಅಹಿತಕರ ಘಟನೆಗಳಿಗೆ ಮಾತ್ರ ಒತ್ತುಕೊಟ್ಟಿದೆ ‘ ಎಂಬ ಅಸಮಾಧಾನ. ಉಲ್ಲಾಸ, ಸುಸೂತ್ರವಾದ ಕಥೆ ಇವುಗಳ ಜತೆ ವೈಚಾರಿಕತೆಯನ್ನೂ ಬಯಸುವುದು ತೀರಾ ದುಬಾರಿಯಾಗುತ್ತದೆ. ಕಾದಂಬರಿಯೊಂದರಲ್ಲಿ ‘ವೈಚಾರಿಕತೆ’ ಎಂಬುದು ವಿಶಾಲ ವ್ಯಾಪ್ತಿಯ ಚರ್ಚೆಯನ್ನು ಬೇಡುವಂತಹುದು. ಈಗಾಗಲೇ ಭೈರಪ್ಪನವರ ಮೇಲೆ ಅವರು ತಮ್ಮ’ ವೈಚಾರಿಕತೆ ‘ಯನ್ನು ಓದುಗರಿಗೆ ಹೇಳುವುದುಕ್ಕೊಸ್ಕರ ಕಾದಂಬರಿಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪ ನಮ್ಮ ಸಾಹಿತ್ಯವಲಯದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಓದುಗ ಬಯಸುವ ‘ವೈಚಾರಿಕತೆ’ ಯಾವ ರೀತಿಯದು ಎಂಬುದು ಸ್ಪಷ್ಟವಾಗಿಲ್ಲ. ‘ಆವರಣ’ದಮಟ್ಟಿಗೆ ಹೇಳುವುದಾದರೆ ವೆಂಕಟಲಕ್ಷ್ಮಿ ಅವರ ದೃಷ್ಟಿಯಲ್ಲಿ ಅಹಿತಕರ ಘಟನೆಗಳನ್ನು ಹೇಳುವುದು ವೈಚಾರಿಕತೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಕಾದಂಬರಿಯೊಂದರ ಓದು ಕಾಲ ಕಳೆಯಲು ಅಲ್ಲ ಎಂದು ಭಾವಿಸಿರುವವರಿಗೆ ವೆಂಕಟಲಕ್ಷ್ಮಿ ಅವರ ವಿಚಾರಗಳು ತೀರಾ ತೆಳುವಾದವುಗಳು ಎಂದು ಅನಿಸುತ್ತದೆ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭
— ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬
ಆವರಣ’ ಎಂಬ ವಿ-ಕೃತಿ ಸಂಗ್ರಹ: ಗೌರಿ ಲಂಕೇಶ್
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫
‘ಆವರಣ ‘ ಎಂಬ ವಿ-ಕೃತಿ – ಸಂಗ್ರಹ : ಗೌರಿ ಲಂಕೇಶ್
ಗೌರಿ ಲಂಕೇಶ್ ಅವರು ಸಂಗ್ರಹಿಸಿರುವ ‘ಆವರಣ’ ಎಂಬ ವಿಕೃತಿ’ (ಲಂಕೇಶ್ ಪ್ರಕಾಶನ ಬೆಂಗಳೂರು–೪, ೨೦೦೭) ವಿಮರ್ಶಾ ಸಂಕಲನದಲ್ಲಿ ಯು ಅರ್ ಅನಂತಮೂರ್ತಿ, ಕೆ ಮರುಳಸಿದ್ದಪ್ಪ, ರಹಮತ್ ತರೀಕೆರೆ, ಜಿ ರಾಜಶೇಖರ್, ಜಿ ಕೆ ಗೋವಿಂದರಾವ್, ಕೆ. ಫಣಿರಾಜ್ ಮುಂತಾದ ಪ್ರಸಿದ್ಧ ಲೇಖಕರು,ವಿಮರ್ಶಕರು ಹಾಗು ಚಿಂತಕರ ಲೇಖನಗಳಿವೆ. ‘ಆವರಣ’ದಲ್ಲಿ ಚಿತ್ರಿತಗೊಂಡಿರುವ ಚರಿತ್ರೆಯ ಅಂಶಗಳು ಎಷ್ಟರಮಟ್ಟಿಗೆ ನಂಬಲರ್ಹ/ಅದಷ್ಟೇ ನಿಜವೇ ಬೇರೆ ಮುಖಗಳು ಇಲ್ಲವೇ ಎಂಬುದರ ಜತೆಗೆ ಕಾದಂಬರಿಯ ತಾತ್ವಿಕತೆ, ರೂಪ,ವಿನ್ಯಾಸಗಳ ಬಗ್ಗೆ ಇಲ್ಲಿನ ಲೇಖನಗಳಲ್ಲಿ ಒತ್ತು ಜಾಸ್ತಿ. ಹಿಂದೆ ಏನೇನೋ ನಡೆದುಹೋಗಿದೆ;ಅದನ್ನೆಲ್ಲಾ ಮತ್ತೆ ಕೆದಕುವುದ್ಯಾಕೆ ಎಂಬ ಮಾತೂ ಆಗೀಗ ಬರುತ್ತದೆ. ಹೀಗಾಗಿ ಈ ವಿಮರ್ಶಾ ಸಂಕಲನದ ಲೇಖನಗಳನ್ನು ಸ್ವಲ್ಪ ವಿವರವಾಗಿ ಚರ್ಚಿಸಬೇಕಾಗಿದೆ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಆವರಣ —- ಅನಾವರಣ
ಹೊಸ ಕನ್ನಡ ಸಾಹಿತ್ಯದ ಇತ್ತೀಚಿನ ಮೂವತ್ತು ನಲವತ್ತು ವರ್ಷಗಳಲ್ಲಿ ಎಸ್ ಎಲ್ ಭೈರಪ್ಪನವರ “ಆವರಣ” ಕಾದಂಬರಿಯಷ್ಟು ವಿವಾದಿತ ಕೃತಿ ಬಹುಶಃ ಬೇರೊಂದು ಇರಲಾರದೆನಿಸುತ್ತದೆ. “ಧರ್ಮ ಕಾರಣ” ಮತ್ತು”ಅನುದೇವ ಹೊರಗಣವನು” ಎಂಬ ಎರಡು ಕೃತಿಗಳ ಬಗ್ಗೆ ವಿವಾದವಾಗಿತ್ತು. ಆದರೆ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ನಂತರದಲ್ಲಿ “ಧರ್ಮಕಾರಣ”ವನ್ನು ಬ್ಯಾನ್ ಮಾಡಲಾಯಿತು. “ಆವರಣದ ವಾದ-ವಿವಾದಗಳಲ್ಲಿ”ಸಾಹಿತ್ಯ ಮತ್ತು ಸಾಹಿತ್ಯೇತರ ಕಾರಣಗಳು ಸೇರಕೊಂಡಿದ್ದವು. ಕನ್ನಡದ ನಾಲ್ಕೈದು ಪ್ರಮುಖ ದಿನ ಪತ್ರಿಕೆಗಳಲ್ಲಿ ಈ ಚರ್ಚೆ ಸುಮಾರು ಆರು ತಿಂಗಳುಗಳ ಕಾಲ ನಡೆಯಿತು. Front line ಮತ್ತು The pioneer ಎಂಬ ಇಂಗ್ಲಿಷ್ ಪತ್ರಿಕೆಗಳಲ್ಲಿ ಆವರಣ ಕುರಿತಂತೆ ವಿಮರ್ಶೆ ಪ್ರಕಟವಾಯ್ತು . ಜತೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ನಾಲ್ಕೈದು ಪ್ರಮುಖ ನಗರಗಳಲ್ಲಿ ಆವರಣದ ಬಗ್ಗೆ ಸಭೆಗಳು,ವಿಚಾರಗೋಷ್ಠಿಗಳು ನಡೆದವು.
ಸಂಸ್ಕಾರ ಮತ್ತು ದಾಟು ಕಾದಂಬರಿಗಳಲ್ಲಿ ಜಾತಿ ಸಮಸ್ಯೆಗಳು
– ಮು ಅ ಶ್ರೀರಂಗ ಬೆಂಗಳೂರು
ಈ ಲೇಖನವನ್ನು ನಾನು ಭೈರಪ್ಪನವರ ಕಾದಂಬರಿಗಳನ್ನು ಕುರಿತ ವಿಮರ್ಶೆಗಳ ಲೇಖನಮಾಲೆ ಮುಗಿದ ನಂತರ ಬರೆಯೋಣವೆಂದುಕೊಂಡಿದ್ದೆ. ಆದರೆ ಆ ಲೇಖನಗಳ ಸರಣಿಯಲ್ಲಿ ಇನ್ನು ಚರ್ಚಿಸಬೇಕಾದ ಕಾದಂಬರಿಗಳು “ಆವರಣ” ಮತ್ತು “ಕವಲು” ಮಾತ್ರ. ಇವುಗಳಲ್ಲಿ ಜಾತಿಯ ಸಮಸ್ಯೆಗಳ ಪ್ರಸ್ತಾಪವಿಲ್ಲದಿರುವುದರಿಂದ ಈಗಲೇ ಬರೆಯುವುದು ಸೂಕ್ತವೆನಿಸಿದೆ.
ಸಂಸ್ಕಾರ ಮತ್ತು ದಾಟು ಕಾದಂಬರಿಗಳನ್ನು ಕುರಿತಂತೆ ನಡೆದ ಚರ್ಚೆಗಳು ಪ್ರಾರಂಭದಲ್ಲಿ ವಿಚಾರಗಳ ವಿನಿಮಯದಂತೆ ಕಂಡರೂ ನಂತರದಲ್ಲಿ ಕವಲು ದಾರಿ ಹಿಡಿದವು. ಇದಕ್ಕೆ ನನಗನಿಸುವಂತೆ ಬಹುಶಃ ಜಾತಿ ಸಮಸ್ಯೆಯನ್ನು ಸಾಹಿತ್ಯವು ಅರಿಯಲು ನಡೆಸುವ ಪ್ರಯತ್ನಕ್ಕೂ ಅದೇ ಸಮಸ್ಯೆಯನ್ನು ಆಧಾರ,ಸಿದ್ಧಾಂತ,ಊಹೆ,ತರ್ಕ ಇತ್ಯಾದಿಗಳ ಮೂಲಕ ಬಿಡಿಸಲು ಪ್ರಯತ್ನಿಸುವ ಮಾನವಿಕ ಶಾಸ್ತ್ರಗಳಿಗೂ ಇರುವ ಮೂಲಭೂತ ವ್ಯತ್ಯಾಸವನ್ನು ಮನಗಾಣಿಸುವುದರಲ್ಲಿ ಆ ಚರ್ಚೆಗಳು ನಡೆಯದೇ ಹೋದದ್ದು. ಇದುವರೆಗೆ ಮಾನವಿಕ ಶಾಸ್ತ್ರಗಳು ತಮ್ಮ ಅಧ್ಯಯನದ ಮೂಲಕ ಕಂಡುಕೊಂಡಿರುವ ನಮ್ಮ ಸಮಾಜದ ಬಗೆಗಿನ ತಿಳುವಳಿಕೆಗಳನ್ನು ಆಧರಿಸಿ ಆ ಚೌಕಟ್ಟಿಗೆ ಈ ಸಾಹಿತ್ಯ ಕೃತಿಗಳು ಹೊಂದುವುದಿಲ್ಲ ಎಂದು ಒಂದೇ ಏಟಿಗೆ ಪಕ್ಕಕ್ಕೆ ಸರಿಸುವುದನ್ನು ಸಾಹಿತ್ಯದ ಒಬ್ಬ ಓದುಗನಾಗಿ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ದಾಟು ಮತ್ತು ಭಾರತೀಪುರ
—————————–
ಯು ಆರ್ ಅನಂತಮೂರ್ತಿ ಅವರ “ಭಾರತೀಪುರ” ಕಾದಂಬರಿಯ ನಾಯಕ ಜಗನ್ನಾಥನ ‘fickle minded personality’ ನಮ್ಮ ನವ್ಯ ಸಾಹಿತ್ಯದ ಆಧುನಿಕ ಪ್ರಜ್ಞೆಗೆ ತುಂಬ ಹತ್ತಿರವಾಗಿದೆ. ಇದು ಮೊದಲು ಪ್ರಕಟವಾಗಿದ್ದು ೧೯೭೩ರಲ್ಲಿ. ಸುಮ್ಮನೆ “ಇದೂ ಒಂದು ಮಾಮೂಲಿ ಕಾದಂಬರಿ” ಎಂದು ಓದಿಕೊಂಡು ಹೋಗುವ ಹಾಗಿದ್ದರೆ ಯಾವ ಜಿಜ್ಞಾಸೆಯೂ ಬೇಕಾಗುವುದಿಲ್ಲ. ಆದರೆ ಜಗನ್ನಾಥ ತನ್ನ ಊರಾದ ಭಾರತೀಪುರದಲ್ಲಿ ತಾನು ತರಬೇಕೆಂದುಕೊಳ್ಳುವ ಬದಲಾವಣೆಗೆ ತಕ್ಕ ತಯಾರಿ ನಡೆಸಿದ್ದನೆ? ನಡೆಸಿದ್ದರೆ ಅದು ಯಾವ ಮಾದರಿಯದ್ದು ಎಂದು ಯೋಚಿಸಲು ಹೊರಟಾಗ ನಿರಾಸೆಯಾಗುತ್ತದೆ. ಜತೆಗೆ ಈ ಕಾದಂಬರಿಯಲ್ಲಿ ಈತನಿಗಿಂತ ಶಕ್ತಿಶಾಲಿಯಾದ, ಗಟ್ಟಿ ಮನಸ್ಸಿನ ಸಾಕಷ್ಟು ವ್ಯಕ್ತಿಗಳಿದ್ದಾರೆ.
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೩
ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೨
ಭಾಗ ೧ ಮತ್ತು ೨ ರಲ್ಲಿ ‘370ನೇ ವಿಧಿಯ ಸಾಂವಿಧಾನಿಕ ಸಿಂಧುತ್ವ’ ಮತ್ತು ‘370ನೇ ವಿಧಿಯ ನಿಂದನೆ ಮತ್ತು ದುರ್ಬಳಕೆ’ಯ ಬಗ್ಗೆ ಮಾತನಾಡಿದೆವು. ಭಾಗ ೩ ರಲ್ಲಿ ಮುಂದಿನ ಹಾದಿಯ ಬಗ್ಗೆ ಚಿಂತಿಸೋಣ
ಮುಂದಿನ ಹಾದಿ
ಮೇಲೆ ನೀಡಿದ ಎಲ್ಲ ಉದಾಹರಣೆಗಳು ಸಾಬೀತುಪಡಿಸುವುದಿಷ್ಟೇ, ಸಂವಿಧಾನದ 370ನೇ ವಿಧಿ ಪ್ರಜಾಪ್ರಭುತ್ವದ ಆದರ್ಶಗಳು ಮತ್ತು ನಾಗರಿಕತೆ, ಮಾನವ ಹಕ್ಕುಗಳ ಕುರಿತ ಅಂತರಾಷ್ಟ್ರೀಯ ಕಾನೂನುಗಳ ಕಲ್ಪನೆಗಳ ಮೇಲೆ ನಡೆಯತ್ತಿರುವ ಅತಿಯಾದ ಅಣಕ. ಇದು ಭಾರತದ ಜನಸಂಖ್ಯೆ ಗಣನೀಯ ಪ್ರಮಾಣದ ಭಾಗವೊಂದನ್ನು ದ್ವತೀಯ ದರ್ಜೆಯ ಮತ್ತು ನಾಗರಿಕರೇ ಅಲ್ಲದ ಸ್ಥಿತಿಗೆ ಇಳಿಸುತ್ತದೆ. ವಿಪುಲ್ ಕೌಲನ ಪ್ರಕರಣವನ್ನು ಮತ್ತೆ ನೋಡುವುದಾದರೆ, ಅಂದಿನ ಮುಖ್ಯಮಂತ್ರಿ ಗುಲಾಮ್ ನಬೀ ಆಜಾದ್ರ ಕಾರ್ಯದರ್ಶಿ ನೀಡಿದ “ರಾಜ್ಯಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯ ಅಡಿಯಲ್ಲಿ ಭಾರತ ಸರ್ಕಾರದ ಗೃಹ ಇಲಾಖೆ ನೀಡುವ ಯಾವುದೇ ಸೂಚನೆಯನ್ನು ಪಾಲಿಸಲು ಜಮ್ಮು ಕಾಶ್ಮೀರ ರಾಜ್ಯ ಸರ್ಕಾರ ಬಾಧ್ಯವಲ್ಲ. ಆದ್ದರಿಂದ ನಿಮ್ಮ ಮಗುವಿನ ವೈದ್ಯಕೀಯ ವೆಚ್ಚವನ್ನು ಪಾವತಿಸಲು ಸಾಧ್ಯವಿಲ್ಲ” ಎನ್ನುವ ನಿರ್ದಯ ಉತ್ತರ ಕೌಲ್ ಕುಟುಂಬದಲ್ಲಿ ಅಣುಮಾತ್ರವಷ್ಟಾದರೂ ಜೀವಂತವಾಗಿದ್ದ ಭರವಸೆಯನ್ನು ತುಂಡರಿಸಿ ಅಡಗಿಸಿತು. ಜಮ್ಮು ಕಾಶ್ಮೀರ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ ಹದಿಮೂರು ವರ್ಷದ ಅದೃಷ್ಟಹೀನ ಬಾಲಕನ ಬವಿಷ್ಯವನ್ನು ಅಂಧಕಾರಕ್ಕೆ ನೂಕಿತು.