ಮ್ಯೂಟ್ ಮೋಡ್ ನಲ್ಲಿ ಭಾರತ, ಫೈಟ್ ಮೋಡ್ ನಲ್ಲಿ ಚೀನಾ!!
– ವಿಕಾಸ್ ಪುತ್ತೂರು
‘ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು’ ಎಂದು ಸಾರುತ್ತಲೇ “ಶಾಂತಿಧೂತ”ನೆಂದು ಖ್ಯಾತಿಗಳಿಸಿದ ಆ ಗಾಂಧಿಯೂ ಕೂಡ, ಇಂದಿದ್ದಿದ್ದರೆ, ಪ್ರಸ್ತುತ ಚೀನಾದ ತಕರಾರುಗಳಿಗೆ ಬೇಸತ್ತು ಕೆನ್ನೆ ತೋರಿಸುವುದನ್ನು ನಿಲ್ಲಿಸಿ, ಒಂದು ಬಾರಿಸಿ ಬಿಡುತ್ತಿದ್ದರೇನೋ! ಅದೇನೆ ಇರಲಿ, ನಮ್ಮ ಪ್ರಧಾನಿಗಳು ಮಾತ್ರ, ಚೀನಾ ವಿಷಯದಲ್ಲಿ ಆ ಗಾಂಧಿಯ ಮೂರು ಮಂಗಗಳ ಗುಣಗಳನ್ನು ಯತಾವತ್ತಾಗಿ ಅನುಸರಿಸಿರುವಂತೆ ಕಾಣುತ್ತಿದೆ, ಚೀನಾದ ಅತಿಕ್ರಮಣಗಳನ್ನು ಕಂಡೂ ಕಾಣದಂತೆ ಕುರುಡರಾಗಿಬಿಟ್ಟಿದ್ದಾರೆ, ಅವರ ಆಕ್ರಮಣಗಳ ಬಗ್ಗೆ ತುಟಿಬಿಚ್ಚದೆ ಚಕಾರವೆತ್ತದೆ ಮೂಕರಾಗಿಬಿಟ್ಟಿದ್ದಾರೆ, ಚಿಂಗಿಯರ ಕುತಂತ್ರಗಳನ್ನಂತೂ ಬೇಕೆಂದೇ ಕೇಳಿಸಿಕೊಳ್ಳದೆ ಕಿವುಡನೂ ಆಗಿಬಿಟ್ಟಿದ್ದಾರೆ! ಅವರೇ ಹೇಳುವಂತೆ, ಗಾಂಧಿಯ ಹಾದಿಯಲ್ಲಿ ಸಾಗುವುದೆಂದರೆ ಇದೇ ಇರಬೇಕೇನೋ! ಕಳೆದ ಹತ್ತು ವರ್ಷಗಳಲ್ಲಿ ಮನಮೋಹನರು ಸದನ ಪ್ರವೇಶಿಸಿರುವುದಕ್ಕಿಂತ ಹೆಚ್ಚು ಬಾರಿ ಚೀನಿಯರು ಭಾರತವನ್ನು ಅತಿಕ್ರಮವಾಗಿ ಪ್ರವೇಶಿಸಿದ್ದಾರೆ. ಆರ್ಥಿಕವಾಗಿ ಹಾಗು ಸಾಂಸ್ಕೃತಿಕವಾಗಿ ಭಾರತವನ್ನು ಮುಗಿಸಲು ತುದಿಗಾಲಲ್ಲಿ ನಿಂತು ಅತ್ಯಂತ ವ್ಯವಸ್ತಿತವಾಗಿ ಷಡ್ಯಂತ್ರ ರಚಿಸಿರುವ, ರಚಿಸುತ್ತಿರುವ ಚೀನಾಗೆ ಸಮರ್ಥವಾಗಿ ಉತ್ತರ ಕೊಡಲು ಸಾಧ್ಯವಾಗದೆ, ಪ್ರಶ್ನೆಯ ಹುಡುಕಾಟದಲ್ಲಿಯೇ ಕಪಟ ನಾಟಕವಾಡುತ್ತಿದೆ ನಮ್ಮ ಕೇಂದ್ರ ಸರಕಾರ.
ಭಾರತದ ಅತಿದೊಡ್ಡ ಶತ್ರು ಪಾಕಿಸ್ತಾನ, ಬೇರೆಲ್ಲಾ ರಾಷ್ಟ್ರಗಳು ಬಹುತೇಕ ಭಾರತದ ಮಿತ್ರರಾಷ್ಟ್ರಗಳೇ ಎಂದು ವಿಶ್ವಾವ್ಯಾಪಿ ಬಿಂಬಿತವಾಗಿರುವುದು ಭಾರತದ ಅತಿದೊಡ್ಡ ದುರಂತ. ರಾಷ್ಟ್ರೀಯ ಭದ್ರತೆಯ ವಾಸ್ತವಕ್ಕಿಳಿದು ನೋಡಿದಾಗ ಭಾರತಕ್ಕೆ, ಪಾಕಿಸ್ತಾನಕ್ಕಿಂತಲೂ ಚೀನಾದಿಂದ ನೂರು ಪಟ್ಟು ಹೆಚ್ಚು ಆತಂಕ ಸೃಷ್ಟಿಯಾಗಿದೆ. ಭಾರತದ ಭೂ ಹಾಗು ಸಾಗರಕ್ಕೆ, ಇತರೆ ಒಟ್ಟು 9ರಾಷ್ಟ್ರಗಳು ಅಂಟಿಕೊಂಡಿವೆ, ದಕ್ಷಿಣಕ್ಕೆ ಶ್ರೀಲಂಕಾ ಹಾಗು ಮಾಲ್ಡೀವ್ಸ್. ಪಶ್ಚಿಮಕ್ಕೆ ಪಾಕಿಸ್ತಾನ ಹಾಗು ಅಫಗಾನಿಸ್ತಾನ, ಪೂರ್ವಕ್ಕೆ ನೇಪಾಳ, ಭೂತಾನ್, ಬಾಂಗ್ಲಾದೇಶ ಹಾಗು ಬರ್ಮಾ ಮತ್ತು ಉತ್ತರದಿಂದ ಪೂರ್ವದವರೆಗೂ ಮಹಾಕಂಟಕ ಚೀನಾ. ಈ 9ನೆರೆರಾಷ್ಟ್ರಗಳ ಪೈಕಿ ಭೂತಾನ್ ಎಂಬ ಪುಟ್ಟ ದೇಶವೊಂದನ್ನು ಬಿಟ್ಟರೆ, ಉಳಿದ 8 ದೇಶಗಳೊಡನೆಯೂ ಭಾರತದ ಸಂಬಂಧ ಹಳಸಿದೆ! ಅತ್ಯಂತ ಆತಂಕಕಾರಿ ಸಂಗತಿ ಎಂದರೆ, ಭಾರತವನ್ನು ಮಣಿಸಲು ಹಾತೊರೆಯುತ್ತಿರುವ ಚೀನಾ, ಉಳಿದ 7 ರಾಷ್ಟ್ರಗಳನ್ನೂ ಒಟ್ಟುಗೂಡಿಸಿ ಬಿಲಿಯನ್ ಡಾಲರ್ಗಟ್ಟಲೆ ಬಂಡವಾಳ ಹೂಡುತ್ತಾ, ತನ್ನ ಸಂಗಡ ಶಿಶ್ಯವೃಂದದಂತೆ ಇರಿಸಿಕೊಂಡಿದೆ.
“ಕೈ”ಲಾಗದ ಸರ್ಕಾರ ಮತ್ತು ನಮ್ಮ ಕಾಶ್ಮೀರ
– ರಾಕೇಶ್ ಶೆಟ್ಟಿ
ಬಡ ಬೆಸ್ತನೊಬ್ಬನ ಕತ್ತನ್ನು ಸೀಳಿ ಅವನದೇ ಬೋಟನ್ನೇರಿ ೧೦ ಜನರ ಪಾಕಿಸ್ತಾನದ ಸೈತಾನರ ತಂಡ ಗೇಟ್ ವೇ ಆಫ್ ಇಂಡಿಯಾ ಮೂಲಕ ಮುಂಬೈಗೆ ವಕ್ಕರಿಸಿಕೊಳ್ಳುತ್ತದೆ.೧೦ ಜನರಿಂದ ಬೇರ್ಪಟ್ಟ ಇಬ್ಬರು ಮೊದಲಿಗೆ ದಾಳಿಯಿಡುವುದು ’ಲಿಯೋಫೋಲ್ಡ್ ಕೆಫೆ”ಗೆ ಅಲ್ಲಿ ಕಂಡ ಕಂಡಂತೆ ಗುಂಡಿನ ಮಳೆ ಸುರಿಸಿದ ಆ ಇಬ್ಬರು ಪಾಕಿ ಉಗ್ರರು ಅಲ್ಲಿಂದ ರಾಜಾರೋಷವಾಗಿ ಹೊರಡುತ್ತಾರೆ.ಉಗ್ರರ ಕಣ್ಣಿಗೆ ಬೀಳದೆ ಅವಿತು ಕುಳಿತಿದ್ದವನೊಬ್ಬ ಮೆಲ್ಲಗೆ ಬಾಗಿಲ ಸಂದಿಯಿಂದ ರಾಕ್ಷಸರು ಇದ್ದಾರೋ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ಇಣುಕಿದಾಗ ಬಾಗಿಲಿಗೆ ಕಲ್ಲೊಂದು ಬಡಿಯುತ್ತದೆ.ಮತ್ತೆ ನೋಡುತ್ತಾನೆ ಊಹೂಂ “ಗುಂಡಲ್ಲ… ಕಲ್ಲು…!”
ಉಗ್ರರು ಅಮಾಯಕರ ರಕ್ತ ಹರಿಸಿ ಅಲ್ಲಿಂದ ರಾಜಾರೋಷವಾಗಿ ಹೊರಟ ಮೇಲೆ ಬೀಟ್ ನಲ್ಲಿದ್ದ ಪೋಲಿಸ್ ಕಾನ್ಸ್ಟೇಬಲ್ ಗಳು ಒಂದು ಕೈಯಲ್ಲಿ ಲಾಠಿ ಹಿಡಿದು ಇನ್ನೊಂದು ಕೈಯಲ್ಲಿ ಕಲ್ಲು ಎಸೆದು ಒಳಗಿನಿಂದ “ಗುಂಡು” ಬರುತ್ತಿಲ್ಲ ಅನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ಒಳಬರುತ್ತಾರೆ. ಹೇಗಿದೆ ನೋಡಿ ಉಗ್ರನ ಕೈಯಲ್ಲಿ “ಎ.ಕೆ ೪೭” ಅವನೆದುರಿಸಲು ಬಂದ ಪೋಲಿಸಣ್ಣನ ಕೈಯಲ್ಲಿ “ಕಲ್ಲು”…! ಇದು ನಮ್ಮ ಭಾರತದ ಆಂತರಿಕ ರಕ್ಷಣಾ ವ್ಯವಸ್ಥೆಯ ಸ್ಥಿತಿ.ಭಾರತದ ಬಂಡವಾಳವನ್ನು ಸರಿಯಾಗಿಯೇ ಅರಿತಿದ್ದ ಪಾಪಿ ಪಾಕಿಗಳು ಆ ೧೦ ಜನರ ತಂಡವನ್ನು ನುಗ್ಗಿಸಿ ಒಂದಿಡಿ ಭಾರತವನ್ನು ದಿನಗಳ ಮಟ್ಟಿಗೆ ಗಾಬರಿ ಬೀಳಿಸಿದ್ದರು. ಮುಂಬೈ ಮಾರಣ ಹೋಮದ ನಂತರ ಆಗಿದ್ದಾದರೂ ಏನು? ಭಾರತ-ಪಾಕಿಸ್ತಾನಗಳು ಸಮರದಂಚಿಗೆ ಬಂದು ನಿಂತವು.ನಮ್ಮ ಸರ್ಕಾರ “ಹೊಡಿಬೇಡಿ.ಹೊಡೆದ್ರೆ ನೋವಾಗುತ್ತೆ” ಅನ್ನುವಂತೆಯೇ ವರ್ತಿಸಿದ್ದಲ್ಲವೇ? ಅದಕ್ಕಿಂತ ಹೆಚ್ಚೆಂದರೆ “ಹೋಗಿ.ನಾವು ನಿಮ್ಮೊಂದಿಗೆ ನಾವು ಕ್ರಿಕೆಟ್ ಆಡುವುದಿಲ್ಲ” ಅಂದರು ಅಷ್ಟೇ…!
ಇನ್ನು10 ತಿಂಗಳಲ್ಲಿ ಭಾರತ ಚೀನಾ ನಡುವೆ ಸಂಭವನೀಯ ಯುದ್ಧ?
– ಗಣೇಶ್ ಕೆ ದಾವಣಗೆರೆ
ಚೀನಾದ ತಗಾದೆ ಶುರುವಾದಮೇಲೆ ಭಾರತ ೬೪ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸೇನೆಗೆ ಹೊಸ ಆಯಾಮ ನೀಡುವ ಯೋಜನೆಗೆ ಅಸ್ತು ಎಂದಿದೆ. ಸಾವಿರಾರು ಸೇನೆಯ ತುಕಡಿಗಳನ್ನ ಹೊಂದಿದ ಸ್ಟ್ರೈಕಿಂಗ್ ಕಾರ್ಪ್ ನಿಯೋಜಿಸಲು ಉದ್ದೇಶಿಸಿದೆ. ಹಿಂದಿನ ವಾರದ ದಿ ವೀಕ್ ಪ್ರಕಟಿಸಿರುವ ಸೇನಾ ವಲಯದ ಅಭಿಮತದ ಪ್ರಕಾರ ಚೀನಾ ನಮ್ಮ ಮೇಲೆ ಎರಗಿ ಬರುವುದು ಅಷ್ಟೇನೂ ಸುಲಭದ ಕೆಲಸವೇನಲ್ಲ. ಚೀನೀಯರು ಆಕ್ರಮಣ ಮಾಡಿದರೆ, ಭಾರತವು ಚೀನಾದ ದುರ್ಬಲ ವಲಯಗಳ ಮೇಲೆ ಆಕ್ರಮಣ ಮಾಡಲಿದೆ. ಟಿಬೆಟ್ ಮೂಲಕ ಸಾವಿರಾರು ಕಿಲೋಮೀಟರ್ ಉದ್ದದ ರೈಲು ಮಾರ್ಗ ನಿರ್ಮಿಸಿ ಸೇನೆಯನ್ನ, ಜನರನ್ನ ವಾಯುಪುತ್ರನ ವೇಗದಲ್ಲಿ ಸಾಗಿಸುತ್ತೇವೆ ಎಂದು ಬೀಗುತ್ತಿರುವ ಚೀನಾ ಅದೇ ಕಾರಣಕ್ಕಾಗಿ ಕಳವಳಗೊಂಡಿದೆ. ಟಿಬೆಟ್‌ನಲ್ಲಿರುವ ರೈಲು ಮಾರ್ಗ ಹಲವಾರು ಸೇತುವೆಗಳನ್ನ ಒಳಗೊಂಡಿದೆ. ಜೊತೆಗೆ ಅಲ್ಲಿ ಬೆಂಗಾಡು. ಎಷ್ಟೇ ಎತ್ತರದಿಂದ ನೋಡಿದರೂ ನೆಲ ಕಾಣುತ್ತದೆ. ನಾಲ್ಕು ಸೇತುವೆಗಳನ್ನ ಒಡೆದು ಹಾಕಿದರೆ ಚೀನೀಯರು ಸೇನೆಯನ್ನ ಜಮಾವಣೆ ಮಾಡಲಿಕ್ಕೆ ರೈಲನ್ನ ಬಳಸಲಿಕ್ಕೆ ಸಾಧ್ಯವೇ ಇಲ್ಲ. ಅವನ್ನ ಮರು ನಿರ್ಮಿಸಿ ರೈಲು ಚಲಿಸುವ ಹೊತ್ತಿಗೆ ವಾರಗಳೇ ಬೇಕಾಗುತ್ತವೆ. ಜೊತೆಗೆ, ಟಿಬೆಟಿನಲ್ಲಿ ಹರಿಯುವ ನದಿಗಳಿಗೆ ರಾತ್ರೋ ರಾತ್ರಿ ಸೇತುವೆಗಳನ್ನ ಕಟ್ಟಿಕೊಡುವ ಕಠಿಣ ಪರಿಶ್ರಮದ, ಚಾಣಾಕ್ಷ, ಸಮರ್ಥ ಎಂಜಿನಿಯರುಗಳ ಬಳಗವಿದೆ ಭಾರತಕ್ಕೆ. ನಮ್ಮ ಸೇನೆಯ ಎಂಜಿನಿಯರುಗಳ ಈ ಎಲ್ಲ ವಿಶೇಷಣಗಳೂ ಮೊನ್ನೆ ಮೊನ್ನೆ ಸಂಭವಿಸಿದ ಉತ್ತರಾಖಂಡದ ಪ್ರಾಕೃತಿಕ ಅವಗಢದ ಸಮಯದಲ್ಲಿ ಸಾಬೀತಾಗಿದೆ.
ಚೀನಿಗಳೊಂದಿಗಿನ ಯುದ್ಧ ಸೈನಿಕ ಕಾರ್ಯಾಚರಣೆಯೇ ಆಗಬೇಕಿಲ್ಲ
– ರಾಕೇಶ್ ಶೆಟ್ಟಿ
ಮೂರುವರೆ ವರ್ಷಗಳ ಹಿಂದಿನ ಮಾತು.ಬಹುಷಃ ೨೦೦೯ರ ನವೆಂಬರ್ ತಿಂಗಳಿರಬಹುದು.ಪ್ರಧಾನಿ ಮ(ಮೌ?)ನಮೋಹನ್ ಸಿಂಗ್ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು.ಅದನ್ನು ಚೀನಾ ಖಡಕ್ ಆಗಿ ವಿರೋಧಿಸಿ, ’ನೀವು ಭಾರತೀಯರು ೧೯೬೨ ರ ಅನುಭವವನ್ನ ಮರೆತಿದ್ದಿರ!’ ಅಂತ ಬಹಿರಂಗವಾಗೇ ಹೇಳುವ ದಾರ್ಷ್ಟ್ಯ ತೋರಿತ್ತು.ಅಂದು ಅದು ಕ್ಯಾತೆ ತೆಗೆದಿದ್ದು ’ತವಾಂಗ್’ ನ ಕುರಿತಾಗಿ.
ಚೀನಿಗಳ ಬೆದರಿಕೆ ಬಗ್ಗೆ ಮಾತಡುವುದಕ್ಕಿಂತ ಮೊದಲು, ಏನಿದು ‘ತವಾಂಗ್’ ಅದಕ್ಕಾಗಿ ಯಾಕಿಷ್ಟು ಕಿತ್ತಾಟ? ಇದು ಯಾರಿಗೆ ಸೇರಿದ್ದು? ಭಾರತೀಯರಿಗೋ? ಚೀನಿಗಳಿಗೋ? ಈ ಮೊದಲು ಇದು ಯಾರಿಗೆ ಸೇರಿತ್ತು? ಅಂತ ನೋಡ ಹೊರಟರೆ, ಐತಿಹಾಸಿಕಾವಾಗಿ ಅಂದರೆ ೧೯೧೪ರಲ್ಲಿ ಬ್ರಿಟಿಷರು ಮೆಕ್-ಮಹೂನ್ ರೇಖೆಯನ್ನ ಗುರುತಿಸುವವರೆಗೂ ಅದು ಆಗಿನ ‘ಟಿಬೆಟ್’ ಗೆ ಸೇರಿತ್ತು. ೧೯೧೪ರಲ್ಲಿ ತವಾಂಗ್ ಅನ್ನು ೧೩ನೆ ಲಾಮ ಭಾರತಕ್ಕೆ ಬಿಟ್ಟು ಕೊಟ್ಟರು.ಆ ನಂತರ ಬಂದ ೧೪ನೆ ಅಂದರೆ ಈಗಿನ ‘ದಲೈ ಲಾಮ’ ಕೂಡ ತವಾಂಗ್ ಅನ್ನು ಭಾರತದ ಅಂಗವೆಂದೇ ಮಾನ್ಯ ಮಾಡಿದರು.
ಆದರೆ ೧೯೫೦ ರ ದಶಕದಲ್ಲಿ ಚೀನಿಗಳು ‘ಟಿಬೆಟ್’ ಅನ್ನು ಆಕ್ರಮಿಸಿಕೊಂಡರಲ್ಲ. ಈಗ ಅವರು ಹೇಳುವುದು , ‘ಒಂದು ಕಾಲದಲ್ಲಿ ತವಾಂಗ್ ಟಿಬೆಟ್ಗೆ ಸೇರಿತ್ತು, ಈಗ ಟಿಬೆಟ್ ನಮಗೆ ಸೇರಿದೆ, ಹಾಗಾಗಿ ಈ ತವಾಂಗ್ ನಮಗೆ ಸೇರಬೇಕು’ ಅಂತ (ಅದರ ಜೊತೆಗೆ ಇರಲಿ ಅಂತ ಇಡಿ ಅರುಣಾಚಲ ಪ್ರದೇಶವನ್ನು ಕೊಡಿ ಅನ್ನುತಿದ್ದಾರೆ).
ಉಪಖಂಡದಲ್ಲಿ ಏಕಾಂಗಿ ಭಾರತ?
– ಡಾ ಅಶೋಕ್ ಕೆ ಆರ್
ತೀರ ಹಿಂದಿನ ಮಾತಲ್ಲ. ಕೆಲವೇ ದಿನಗಳ ಹಿಂದೆ ಅಫ್ಜಲ್ ಗುರುವನ್ನು ನೇಣಿಗೇರಿಸಿ ಅವನ ದೇಹವನ್ನು ಆತನ ಮನೆಯವರಿಗೆ ನೀಡದೆ ಜೈಲಿನಲ್ಲೇ ಮಣ್ಣು ಮಾಡಲಾಗಿತ್ತು. ಕಾಶ್ಮೀರದಲ್ಲಿ ಪ್ರತಿಭಟನೆಗಳಾದವು, ಅಫ್ಜಲ್ ಗುರು ಅಲ್ಲಿಯವನಾಗಿದ್ದರಿಂದ. ಇದೇ ಸಮಯದಲ್ಲಿ ಪಾಕಿಸ್ತಾನದ ರಾಜಕೀಯ ಪಕ್ಷಗಳು ಅಫ್ಜಲ್ ಗುರುವಿನ ದೇಹವನ್ನು ಆತನ ಮನೆಯವರಿಗೆ ಹಿಂದಿರುಗಿಸಬೇಕು ಎಂಬ ನಿರ್ಣಯ ತೆಗೆದುಕೊಂಡವು, ನಿರ್ಣಯ ಮಾಡಿದ್ದು ಹಾದಿಬೀದಿಯಲ್ಲಾಗಿರದೆ ಸಂಸತ್ತಿನಲ್ಲಾಗಿತ್ತು.ಈ ಕಾರಣದಿಂದ ನಿರ್ಣಯಕ್ಕೆ ಅಧಿಕೃತತೆಯ ಮುದ್ರೆ ಲಭಿಸಿತ್ತು. ಪಾಕಿಸ್ತಾನದ ಈ ನಡೆಗೆ ಭಾರತದಲ್ಲಿ ಅಗಾಧ ವಿರೋಧ ವ್ಯಕ್ತವಾಗಿದ್ದು ಸಹಜ ಪ್ರತಿಕ್ರಿಯೆಯಾಗಿತ್ತು. ನಮ್ಮ ಮನೆಯ ವಿಷಯದಲ್ಲಿ ಅನ್ಯರು ಮೂಗು ತೂರಿಸುವುದು ಕೋಪ ತರಿಸುವ ವಿಷಯವೇ ಸರಿ.
ಶ್ರೀಲಂಕಾದ ಎಲ್ ಟಿ ಟಿ ಇ ಸಂಘಟನೆಯ ಹುಟ್ಟಿಗೆ ಅನೇಕ ಐತಿಹಾಸಿಕ ಕಾರಣಗಳಿವೆ.ಶ್ರೀಲಂಕಾದ ಈ ಆಂತರಿಕ ಸಮಸ್ಯೆಯ ಉದ್ಭವವಾಗಿದ್ದು ಬ್ರೀಟೀಷರ ಆಡಳಿತದ ಕಾರಣದಿಂದ ಎಂದರೆ ತಪ್ಪಾಗಲಾರದು.ಶ್ರೀಲಂಕಾದ ಎಸ್ಟೇಟುಗಳಲ್ಲಿ ಕೆಲಸ ಮಾಡಲೆಂದು ಶ್ರಮಜೀವಿಗಳಾದ ತಮಿಳರನ್ನು ಕರೆದುಕೊಂಡು ಹೋಗಿತ್ತು ಅಂದಿನ ಬ್ರಿಟೀಷ್ ಆಡಳಿತ. ಬ್ರಿಟೀಷರು ಶ್ರೀಲಂಕ ತೊರೆದ ನಂತರ ಅಲ್ಲಿನ ಬಹುಸಂಖ್ಯಾತರಾದ ಸಿಂಹಳೀಯರು ಲಂಕ ತಮಿಳರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡಕಲಾರಂಭಿಸಿದ್ದರು.
ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ
– ಚಕ್ರವರ್ತಿ ಸೂಲಿಬೆಲೆ
ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?
ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!
ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.