‘ಕೈ’ ಪಕ್ಷಕ್ಕೆ ಈ ಸಲ ಜನತೆ ‘ಕೈ’ ಕೊಡಬೇಕಿದೆ !
– ಅಭಿಷೇಕ್ ಬಿ ಎಸ್
‘ಕರ್ನಾಟಕ ನಂಬರ್ 1 ರಾಜ್ಯ’ – ಮೇಲಿಂದಲೋ ಕೆಳಗಿಂದಲೋ ?
ಕರ್ನಾಟಕ ಮತ್ತೊಮ್ಮೆ ಚುನಾವಣೆಯ ಕಡೆ ಮುಖ ಮಾಡಿ ನಿಂತಿದೆ. ಒಂದು ಸರ್ಕಾರದ ಅಧಿಕಾರಾವಧಿ ಮುಗಿತಾ ಬರ್ತಾ ಇದೆ. ಹೊಸ ಸರ್ಕಾರವನ್ನ ನಿರ್ಧಾರ ಮಾಡುವ ಅಧಿಕಾರ ನೇರವಾಗಿ ಜನರ ಬಳಿಗೆ shift ಆಗತ್ತೆ. ಕಳೆದ ಮೂರು ಚುನಾವಣೆಗಳಲ್ಲಿ ಕರ್ನಾಟಕ ಮೂರೂ ಪಕ್ಷಗಳ ಅಧಿಕಾರವನ್ನ ನೋಡಾಗಿದೆ. ಹಾಗಿದ್ರೆ, ಈ ಸಲವೂ ಅದೇ ಮೂರು ಪಕ್ಷಗಳು, ಮತ್ತು ಅದೇ ಮೂರು ಪಕ್ಷಗಳ ನಾಯಕರು ಇದ್ದಾರಲ್ಲ, ಯಾರಿಗೆ ವೋಟ್ ಮಾಡಬೇಕು ಅನ್ನೋದನ್ನ ಕರ್ನಾಟಕದ ಸಾಮಾನ್ಯ ಮತದಾರ ಲೆಕ್ಕ ಹಾಕ್ತಾ ಇರ್ತಾನೆ.
ಯಶಸ್ವಿ ಐದು ವರ್ಷಗಳನ್ನ ಮುಗಿಸಿದ ಶ್ರೀಯುತ ಸಿದ್ದರಾಮಯ್ಯನವರ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕನಾಗಿ ಕೆಲಸ ಮಾಡಿದ್ಯಾ ? ನಾಡಿನ ಜನತೆ ಬಯಸಿದ್ದ ಆಡಳಿತದ ಗುರಿಯನ್ನ ತಲುಪಲಿಕ್ಕೆ ಸಾಧ್ಯ ಆಗಿದ್ಯಾ ? ಇದು ವಿಮರ್ಶೆಯ ಸಮಯ. ಮತ್ತಷ್ಟು ಓದು
ಉಪರಾಷ್ಟ್ರಪತಿ ಹುದ್ದೆಯ ಆಯ್ಕೆ ಮತ್ತವರ ಕರ್ತವ್ಯಗಳು…
– ಶ್ರೇಯಾಂಕ ಎಸ್ ರಾನಡೆ
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ 13ನೇ ಉಪರಾಷ್ಟ್ರಪತಿ ಚುನಾವಣೆ ನಡೆದಿದೆ. ನಿರೀಕ್ಷೆಯಂತೆ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಮಾನ್ಯ ವೆಂಕಯ್ಯನಾಯ್ಡು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಗೋಪಾಲಕೃಷ್ಣ ಗಾಂಧಿಯವರನ್ನು ಬಹು ಅಂತರದಿಂದ ಸೋಲಿಸಿದ್ದಾರೆ. ಅದಕ್ಕಾಗಿ ಅವರಿಗೂ, ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೂ ಶುಭಾಶಯಗಳು. ಈ ಹೊತ್ತಿನಲ್ಲಿ ರಾಷ್ಟ್ರಪತಿಗಳ ಕೆಲಸ, ಕರ್ತವ್ಯ ಹಾಗೂ ಇನ್ನಿತರ ಸಂಗತಿಗಳ ಕುರಿತು ಬೆಳಕು ಚೆಲ್ಲುವ ಬರಹ. ಮತ್ತಷ್ಟು ಓದು
ಕರ್ನಾಟಕ ಬಿಜೆಪಿಯ ಪ್ರತೀ ನಾಯಕನು ತಾವು ನಡೆದು ಬಂದ ಹಾದಿಯನ್ನು ಒಮ್ಮೆ ಹಿಂದೆ ತಿರುಗಿ ನೋಡುವ ಸಮಯ ಬಂದಿದೆ.!
– ಸಾಮಾನ್ಯ ಕಾರ್ಯಕರ್ತ.
ಉಪಚುನಾವಣೆಯ ಪಲಿತಾಂಶವನ್ನು ನೆಪವಾಗಿ ಇಟ್ಟುಕೊಂಡು ಕರ್ನಾಟಕ ಬಿಜೆಪಿಗೆ ಕೆಲವು ಮಾತುಗಳನ್ನು ಹೇಳಲೇ ಬೇಕಿದೆ. ಜನಸಾಮಾನ್ಯನ ನಡುವೆ ಬದುಕುವ ಕಾರ್ಯಕರ್ತನ ಮಾತು ಜನರ ಮಾತೇ ಆಗಿರುತ್ತದೆ. ಅವರ ಮಾತನ್ನು ಕೇಳಿದರೆ ಉತ್ತಮ ಕೇಳದಿದ್ದರೆ ನಮ್ಮ ಕರ್ಮ ಅಷ್ಟೆ. ಯಡಿಯೂರಪ್ಪನವರ ಬಗ್ಗೆ ಪ್ರತಿ ಪದ ಬರೆಯುವಾಗ ನನ್ನ ಮನಸ್ಸಿನಲ್ಲಿ ಜಾಗ್ರತೆಯ ಭಾವ ಕಣ್ಣರಳಿಸಿ ಕೂರುತ್ತದೆ, ಯಡಿಯೂರಪ್ಪನವರೇ ಹೀಗೆ ಮಾಡಿ, ಹಾಗೆ ಮಾಡಿ ಎನ್ನಲು ನನಗಿರುವ ಯೋಗ್ಯತೆಯಾದರು ಏನು ಎಂದು ನನ್ನ ಮನಸ್ಸು ಯಾವಾಗಲು ಪ್ರಶ್ನಿಸುತ್ತದೆ. ಯಡಿಯೂರಪ್ಪನವರು ನನ್ನ ಪಕ್ಷದ ಬೆಳವಣಿಗೆಗೆ ಸವೆಸಿರುವ ಕಾಲ ಚರ್ಮದ ಮೂಲೆಯಲ್ಲಿರುವ ದೂಳಿಗೆ ಸಮನಲ್ಲ ಎನ್ನುವ ಶ್ರದ್ದೆ ಇಂದಿಗೂ ಎಂದಿಗೂ ನನ್ನ ಮನಸ್ಸಿನಲ್ಲಿ ಉಳಿಸಿಕೊಳ್ಳುತ್ತೇನೆ. ಆದರೆ ಒಂದಿಡೀ ಯುವ ಸಮೂಹ ತಾಯಿಭಾರತಿಯನ್ನು ವಿಶ್ವಗುರು ಸ್ಥಾನದಲ್ಲಿ ಕುಳ್ಳಿರಿಸಲು ಎಲ್ಲವನ್ನು ತೊರೆದು ದುಡಿಯುತ್ತಿರುವಾಗ, ಆ ಕಾರ್ಯ ಸಾಧನೆಗೆ ಪೂರಕವಾಗಿ ನೀವೊಂದಿಷ್ಟು ಜರೂರ್ ಕೆಲಸಗಳನ್ನು ಮಾಡಲೇಬೇಕಾಗಿರುವುದರಿಂದ ಹಾಗು ನೀವು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವುದರಿಂದ ನಿಮ್ಮ ಬಳಿ ದೇಶದ ಯುವ ಸಮೂಹದ ಪರವಾಗಿ ಈ ಕೆಲಸಗಳನ್ನು ದಯಮಾಡಿ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಹಾಗು ಬಿಜೆಪಿಯ ನಾಯಕ ಪಟ್ಟ ಅಲಂಕರಿಸಿ ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿರುವ ಹಲವು ಮಹಾಶಯರಿಗೂ ಬದಲಾಗುತ್ತಿರುವ ಭಾರತದ ರಾಜಕಾರಣವನ್ನೊಮ್ಮೆ ಕಣ್ಣು ಬಿಟ್ಟು ನೋಡಿ ಎಂದು ಹೇಳಲು ಬಯಸುತ್ತೇನೆ. ಮತ್ತಷ್ಟು ಓದು
ಪ್ರತಿ ಮತವೂ ಬಿಜೆಪಿಗೆ ಬೀಳುತ್ತದೆ ಎನ್ನುವ ಮುನ್ನ…
– ರಮಕಾಂತ್ ಶೆಟ್ಟಿ
ಚುನಾವಣೆ ಈ ದೇಶದಲ್ಲೊ೦ದು ಸಮೂಹ ಸನ್ನಿ ಎ೦ದರೆ ತಪ್ಪಿಲ್ಲ. ರಾಜಕೀಯ ಪಕ್ಷಗಳಿಗೆ ಚುನಾವಣೆಯೆ೦ದರೆ ಕದನ ಕುತೂಹಲ, ಪರೀಕ್ಷಾ ಸಮಯ. ಪಕ್ಷಗಳ ಅಭಿಮಾನಿಗಳಿಗೆ ನೆಚ್ಚಿನ ನಾಯಕನ ಗೆಲುವಿನ ಹ೦ಬಲಿಕೆ. ತಮ್ಮ ನಾಯಕನೇ ಗೆದ್ದರೆ ಸಿಗುವ ಅಹ೦ ತೃಪ್ತಿಯ ಹ೦ಬಲಿಕೆ. ಹಲವರಿಗೆ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಬೆರಳಿಗೊ೦ದಷ್ಟು ಮಸಿ ಬಳಿದುಕೊ೦ಡು ಸಾಮಾಜಿಕ ಜಾಲತಾಣದಲ್ಲೊ೦ದು ಭಾವಚಿತ್ರ ತಗುಲಿಸುವ ಉತ್ಸಾಹ. ಕೆಲವರಿಗೆ ಯಾರು ಗೆದ್ದರೂ ದೇಶವೇನೂ ಬದಲಾಗದು ಬಿಡು ಎನ್ನುವ ತಾತ್ಸಾರ. ಹೀಗೆ ಹತ್ತು ಹಲವು ಭಾವಗಳ ಹೊಮ್ಮುವಿಕೆ ಚುನಾವಣೆ. ಆದರೆ ಚುನಾವಣೆ ಎ೦ದಾಕ್ಷಣ ಕೊ೦ಚ ಬೆಚ್ಚಿಬೀಳುವ, ಚೂರು ಬೇಸರ ವ್ಯಕ್ತಪಡಿಸುವ ವರ್ಗವೂ ಒ೦ದಿದೆ. ಅದು ರಾಜ್ಯ, ಕೇ೦ದ್ರ ಸರ್ಕಾರಿ ನೌಕರರ ವರ್ಗ. ಕೇ೦ದ್ರ ಸರ್ಕಾರಿ ಸ್ವಾಮ್ಯದ ಕ೦ಪನಿಗಳ ಉದ್ಯೋಗಿಗಳೂ ಇದೇ ಸಾಲಿಗೆ ಸೇರುತ್ತಾರೆ. ಚುನಾವಣೆಯೆ೦ದರೆ ಅವರ ಪಾಲಿಗೆ ಬರಿ ಮತದಾನ ಮಾತ್ರವಲ್ಲ. ನೇರವಾಗಿ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬ್ಬ೦ದಿಗಳು ಸರ್ಕಾರಿ ನೌಕರರು. ರಾಜ್ಯ ಸರ್ಕಾರಿ ಶಿಕ್ಷಕರ ಪಾಲಿಗ೦ತೂ ಚುನಾವಣೆ ಕರ್ತವ್ಯವೆನ್ನುವುದು ಮತ್ತೊ೦ದು ಅರೆಕಾಲಿಕ ಉದ್ಯೋಗವೆ೦ದರೆ ತಪ್ಪಾಗಲಾರದು. ಸಣ್ಣದ್ದೊ೦ದು ಸಹಕಾರಿ ಸ೦ಸ್ಥೆಯ ಚುನಾವಣೆಯಿ೦ದ ಹಿಡಿದು ಲೋಕಸಭೆಯ ಚುನಾವಣೆಯವರೆಗಿನ ಎಲ್ಲ ಚುನಾವಣಾ ಕರ್ತವ್ಯಗಳೂ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ. ಕೇವಲ ಶಿಕ್ಷಕರು ಮಾತ್ರವಲ್ಲದೇ ಕೇ೦ದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಬ್ಬ ಉದ್ಯೋಗಿಯೂ ತನ್ನ ವೃತ್ತಿಜೀವನದಲ್ಲಿ ಒಮ್ಮಿಲ್ಲೊಮ್ಮೆ ಚುನಾವಣಾ ಕರ್ತವ್ಯವನ್ನೂ ನಿಭಾಯಿಸಿಯೇ ಇರುತ್ತಾನೆ. ಈ ಚುನಾವಣೆಯ ಪ್ರಕ್ರಿಯೆ ಹೇಗಿರುತ್ತದೆ ಎ೦ಬುದರ ಒ೦ದು ಸಣ್ಣ ಪರಿಚಯ ಇ೦ದು ಮಾಡಿಕೊಡಬೇಕೆನ್ನಿಸಿದೆ. ಮತ್ತಷ್ಟು ಓದು
ಪೋಲಿಸ್ ಸಿಬ್ಬಂದಿ ಮತ್ತು ಚುನಾವಣೆಗಳ ನಡುವೆ
– ಬೆಳ್ಳಿ
ಈಗ ಎಲ್ಲೆಲ್ಲೂ ಚುನಾವಣೆಯ ಅಬ್ಬರ.ಹಳ್ಳಿ ಹಳ್ಳಿ ಗಲ್ಲಿ ಗಲ್ಲಿಗಳಲ್ಲಿ ಚುನಾವಣೆಯ ಕಾವು ರಂಗೇರುತ್ತಿದೆ.ಎಲ್ಲರೂ ತಮ್ಮ ಪಾಡಿಗೆ ತಾವು ಹಾಯಾಗಿ ಜೀವನ ಸಾಗಿಸುತ್ತಿದ್ದರೆ,ಕಾನೂನು ಮತ್ತು ಸುವ್ಯವಸ್ಧೆಯ ಅಡಿಯಲ್ಲಿ ಬರುವ ಪೋಲಿಸ್ ವ್ಯವಸ್ಧೆ ಯಾವ ರೀತಿಯಾಗಿ ಅವರಿಗೆ ಒತ್ತಡಗಳಿದ್ರೂ ಕೆಲಸ ಮಾಡುತ್ತದೆಂದು ಯಾರಿಗೂ ಗೊತ್ತಿಲ್ಲ.ಅವರು ನಾಮಪತ್ರ ಸಲ್ಲಿಸುವುದರಿಂದ ಹಿಡಿದು ಚುನಾವಣೆಯ ಫಲಿತಾಂಶ ಬರುವವರೆಗೂ ಸತತವಾಗಿ ಎರಡು ತಿಂಗಳುಗಳ ಕಾಲ ಹಗಲಿರುಳೆನ್ನದೆ ದುಡಿಯುತ್ತಾರೆ.ಚುನಾವಣೆ ಸಮೀಪ ಬಂತೆಂದರೆ ಸಾಕು ಯಾರು ಒಂದು ತಿಂಗಳು ಕಾಲ ರಜೆ ಕೇಳಬಾರದೆಂಬ ಆದೇಶ ಹೊರಡಿಸಿಬಿಟ್ಟಿರುತ್ತಾರೆ.ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಮಾತ್ರ ರಜೆ ಕೇಳಬೇಕು.ಅದೂ ಸಹ ಎಸ್.ಪಿ.ಸರ್ ಅಪ್ಪಣೆ ನೀಡಬೇಕು.
ಇದು ಹಿಂಗಾದರೆ,ಚುನಾವಣೆಯ ಕಾಲಕ್ಕೆ ಯಾವುದೋ ಹಳ್ಳಿಗೆ ಕರ್ತವ್ಯ ಬಂದಿರುತ್ತೆ.ನಮಗೆ ಮೈಯಲ್ಲಿ ಆರಾಮ ಇಲ್ಲದಿದ್ರೂ,ಅಥವಾ ಮನೆಯಲ್ಲಿ ಗಂಡ,ಅತ್ತೆ,ಮಾವ,ಮಕ್ಕಳಗೆ,ಹೆಂಡತಿಗೆ ಮೈಯಲ್ಲಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿ ಸೇರಿದ್ರೂ ಎಲ್ಲ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು.ಮನೆಯ ಕಡೆ ವಿಷಯ ತಿಳಿದುಕೊಳ್ಳೋಣವೆಂದರೆ ಅಲ್ಲಿ ಮೊಬೈಲ್ ನೆಟ್ ವರ್ಕ್ ಬರೋಲ್ಲ.ಅದೇ ಒತ್ತಡಗಳ ಜೊತೆಗೆ ಹಳ್ಳಿಗೆ ಹೋಗಿ ಕೊಟ್ಟಿರುವ ಬೂತ್ ಎನ್ನುವ ಭೂತ ಬಂಗಲೆಗೆ ಕಾಲಿಟ್ಟಾಗ ಮೊದಲು ಅದು ಆ ಗ್ರಾಮದ ಸಾರ್ವಜನಿಕರೆಲ್ಲರ ಶೌಚಾಲಯದ ತಾಣ.ಚುನಾವಣೆಯ ವೇಳೆಯಲ್ಲಿ ಗಿಡ ಕಂಟಿ ಕಡಿದು ಅಲ್ಲಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ,ಒಂದೇ ಒಂದು ಕೋಣೆ ರೆಡಿ ಮಾಡಿ,ಅದರಲ್ಲಿ 60 ವೋಲ್ಟೆಜಿನ ಬಲ್ಬ್ ಹಾಕುತ್ತಾರೆ.ನಲವತ್ಮೂರರಿಂದ ನಲವತ್ತೈದು ಡಿಗ್ರಿ ಬಿಸಿಲ ಧಗೆಯಲ್ಲಿ ಹ್ಯಾಗೆ ಕರ್ತವ್ಯ ಮಾಡಬೇಕು.
ಹೊಸ ಚಿಂತನೆ ಮೂಡಿ ಬರಲಿ
– ಡ್ಯಾನಿ ಪಿರೇರಾ,ಹಳ್ಳಿಮೈಸೂರು
ನಿಜ ಹೇಳಬೇಕೆಂದರೆ 2014ರ ಲೋಕಸಭಾ ಚುನಾವಣೆ ನಮ್ಮಲ್ಲಿನ ನೈಜ ರಾಷ್ಟ್ರೀಯತೆಗೆ ಅದರ ಪರಂಪರಾಗತವಾದ ಜಾತ್ಯಾತೀತತೆಯ ನಿಜ ಅರ್ಥವಂತಿಕೆಗೆ ಮತದಾರ ಕೊಡಬೇಕಾದ ಪ್ರಬುದ್ಧ ತೀರ್ಪು ಎನ್ನಬಹುದುದೇನೋ! ಅದರಲ್ಲೂ ಈ ಚುನಾವಣೆ ಈ ದೇಶದ ಅಲ್ಪಸಂಖ್ಯಾತ-ಬಹುಸಂಖ್ಯಾತರೆಂಬ ಸಂಕುಚಿತ ಅವಕಾಶವಾದಿ ಮನೋಭೂಮಿಕೆಯನ್ನೊದ್ದು, ಈ ದೇಶ ಒಂದು ರಾಷ್ಟ್ರವಾಗಿ, ಜಾತಿ-ಮತಗಳ ಸಣ್ಣತನವನ್ನು ಬದಿಗಿಟ್ಟು, ಈ ದೇಶದ ಭವ್ಯ ಭವಿಷ್ಯವನ್ನು ಕಣ್ತುಂಬಿಕೊಳ್ಳಲು ಈ ದೇಶದ ಶ್ರೀಸಾಮಾನ್ಯನಿಗೆ ಸ್ವತಃ ಆ ಭಗವಂತನೇ ನೀಡಿದ ಅವಕಾಶವೆಂದರೆ ಖಂಡಿತ ಉತ್ಪ್ರೇಕ್ಷೆ ಎಂದು ಭಾವಿಸಬೇಕಿಲ್ಲ. ಅದಲ್ಲೂ ಇಲ್ಲಿನ ಅಲ್ಪಸಂಖ್ಯಾತರೆಂದೇ ಬಿಂಬಿಸಲ್ಪಡುವ ಕ್ರೈಸ್ತ-ಮುಸುಲ್ಮಾನ ಬಂಧುಗಳಿಗೂ ಈ ಚುನಾವಣೆ ಈ ದೇಶದ ತಮ್ಮ ವಾರಸಿಕೆ ಶೃತಪಡಿಸಲು ಇದೊಂದು ಸದವಕಾಶ ಎನ್ನಲು ಅವರು ಸಂಕೋಚಪಡಬೇಕಿಲ್ಲ. ಈ ದೇಶದ ಬಹುತೇಕ ರಾಜಕೀಯ ನಾಯಕರು ಬುದ್ಧಿಜೀವಿವರ್ಗ ಅಕ್ಷರಶಃ ಈ ದೇಶದ ನೈಜ ರಾಷ್ಟ್ರೀಯತೆ ಮತ್ತದರ ಪಾರಂಪರಿಕ ಜಾತ್ಯಾತೀತತೆಯ ವೈಶಾಲ್ಯತೆಯನ್ನು ಪ್ರತಿಪಾದಿಸಲು ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ದೇಶದ ಜಾತಿ-ಪಂಥಗಳಿಗೆ ಮೀರಿದ ಈ ರಾಷ್ಟ್ರ ನನ್ನದು, ಈ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗೆ ಸವಾಲಾಗಿರುವ ಭಾರತದ ಇಂದಿನ ಜಾತ್ಯಾತೀತತೆಯ ವ್ಯಾಖ್ಯಾನದ ನೈಜ ಅರ್ಥವನ್ನು ಪುನರ್‍ರೂಪಿಸುವ ಅವಕಾಶ ಒದಗಿಬಂದಿರುವುದು ಈ ದೇಶದ ಅಲ್ಪಸಂಖ್ಯಾತರೆಂದು ಕರೆಯಲ್ಪಡುತ್ತಿರುವವರು ಮಾಡಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎಂದರೆ ತಪ್ಪಲ್ಲ. ಈ ದೇಶವನ್ನು ಬ್ರಿಟಿಷರು ಆಳುತ್ತಿದ್ದಾಗ ಹಿಂದುಗಳ ಗುಮ್ಮವನ್ನು ಮುಸಲ್ಮಾನರ ಮುಂದೆ, ಮುಸಲ್ಮಾನರ ಗುಮ್ಮವನ್ನು ಹಿಂದುಗಳ ಮುಂದೆ ತೋರಿಸಿ ಅಖಂಡ ಭಾರತವನ್ನು ತುಂಡಾಗಿಸಿ ಅವರ ಸುತ್ತ ಗಿರಕಿ ಹೊಡೆಯುತ್ತಿದ್ದ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಒಂದೊಂದು ತುಂಡನ್ನು ಆಳಲು ಕೊಟ್ಟು, ಬ್ರಿಟಿಷರು ಹೋದ ಮೇಲೆ ಇಲ್ಲಿ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ಸ್ ಮಾಡಿದ್ದೇನು?
ಸೆಮಿಫೈನಲ್ ಮತ್ತು ಫೈನಲ್
-ನವೀನ್ ನಾಯಕ್
ಭಾರತದ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ಚುನಾವಣೆ ಹಲವು ಹೊಸ ವಿಚಾರಗಳನ್ನು ತೆರೆದಿಟ್ಟಿದೆ.
1) ನೋಟ ( none of the above ) ಬಳಸಲು ಮೊದಲು ಶುರು ಮಾಡಿದ್ದು.
2) ಜನಲೋಕಪಾಲ್ ಹೋರಾಟದಿಂದ ಬಂದ ರಾಜಕೀಯ ಪಕ್ಷ ಆಪ್
3) ಇನ್ನಾರು ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಿಗೆ ಪೂರ್ವ ತಯಾರಿಗೆ ಜನರ ನಾಡಿ ಮಿಡಿತ ತಿಳಿಯಲು ಸಿಕ್ಕ ಒಂದು ಅವಕಾಶ.
4) ಮೋದಿ ಮತ್ತು ಕಾಂಗ್ರೆಸ್ ಹಣಾಹಣಿ.
ಇಡೀ ದೇಶದ ಪ್ರಜೆಗಳನ್ನು ಡಿಸೆಂಬರ್ 8 ಕ್ಕೆ ಗಮನೀಯವಾಗುವಂತೆ ಮಾಡಿದ್ದು ಈ ನಾಲ್ಕು ಕಾರಣಗಳಿಗಾಗಿ. ಪ್ರಸಕ್ತ ರಾಜಕಾರಣದ ವೈಫಲ್ಯದಿಂದಾಗಿ ಹೈರಾಣಾಗಿರುವ ಜನರು ರಾಜಕೀಯಕ್ಕೆ ಯಾವ ಪಾಠ ಕಲಿಸಬಹುದೆಂದು ಎಲ್ಲರೂ ತಿಳಿಯಲು ಬಯಸುತಿದ್ದರು. ಮತದಾರ ಪ್ರಭು ಇಲ್ಲಿ ಯಾವ ಅಂಶ ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಬಹುದು, ಆತನ ಸಧ್ಯದ ಮನಸ್ಥಿತಿ ಏನು. ಇದು ಆಯಾ ರಾಜ್ಯಕ್ಕೆ ಸಂಬಂದಪಟ್ಟರೂ ದೇಶಕ್ಕೆ ಖಂಡಿತಾ ಮೇಲಿನ ನಾಲ್ಕು ಕಾರಣಗಳಿಗಾಗಿ ಮಾರ್ಗದರ್ಶಿಯಾಗಿದೆ.
1) ನೋಟ- ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಸುಪ್ರೀಂ ತೀರ್ಪಿನ ಅನ್ವಯ ವೋಟಿಂಗ್ ಮೆಷೀನಲ್ಲಿ ಬಳಸಲಾಯಿತು. ಇದೊಂದು ಕ್ರಾಂತಿಕಾರಕ ಬದಲಾವಣೆಯಾದರೂ ಅಭ್ಯರ್ಥಿಗಳ ಮೇಲೆ ಇದರ ಪ್ರಭಾವ ಬೀರದಂತಿದೆ. ಚುನಾವಣ ಆಯೋಗ ಇದನ್ನು ಬೆಲೆ ಇಲ್ಲದ ಮತಗಳು ಎಂದು ಪರಿಗಣಿಸಿವೆ. ಏಕೆಂದರೆ ನೋಟದ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನಗಳನ್ನು ಆಯೋಗ ಕಂಡುಕೊಂಡಿಲ್ಲ. ಅದೇನೆ ಇರಲಿ, ಇದರಿಂದ ನಿಂತಿರುವವರೆಲ್ಲ ಕಳ್ಳರೇ ನಂಗೆ ಯಾರೂ ಇಷ್ಟವಿಲ್ಲದ ಕಾರಣ ಮತದಾನ ಮಾಡುತ್ತಿಲ್ಲ ಎಂದು ನೆಪವೊಡ್ಡಿ ನಿರ್ಲಕ್ಷ್ಯವಹಿಸುತಿದ್ದ ಸುಶಿಕ್ಷಿತರ ಪ್ರತಿಕ್ರಿಯೆ ತಿಳಿಯಬಹುದಿತ್ತು. ನಾಲ್ಕು ರಾಜ್ಯದಲ್ಲಿ 11.53 ಕೋಟಿ ಮತ ಚಲಾವಣೆಯಾಗಿದೆ ಅದರಲ್ಲಿ 1.31 ಶೇಕಡಾ ಮತದಾರರು ಈ ವ್ಯವಸ್ತೆಯನ್ನು ಬಳಸಿದ್ದಾರೆ.