ವಿಷಯದ ವಿವರಗಳಿಗೆ ದಾಟಿರಿ

Posts tagged ‘ಜೆ.ಪಿ’

10
ಆಕ್ಟೋ

ಈಗ ಎಲ್ಲರ ಚಿತ್ತ ಬಿಹಾರದತ್ತ…..!!!

– ಕೆ.ಎಸ್ ರಾಘವೇಂದ್ರ ನಾವಡ

ಬಿಹಾರ ಚುನಾವಣೆಬಿಹಾರದಲ್ಲಿ ಮತ್ತೊಮ್ಮೆ ನರೇ೦ದ್ರ ಮೋದಿಯವರ ಚರಿಶ್ಮಾ  ಸಾಬೀತಾಗಲು ಆಖಾಡ ಸಿಧ್ಧವಾಗಿದೆ! ತನ್ನ ೧೮ ವರ್ಷಗಳ ಮಿತ್ರಪಕ್ಷವೀಗ ಬಿಹಾರದಲ್ಲಿ ಭಾ.ಜ.ಪಾಕ್ಕೆ ಎದುರಾಗಿ ಚುನಾವಣಾ ಆಖಾಡದಲ್ಲಿ ತನ್ನೆಲ್ಲ ವಿರೋಧಿಗಳೊ೦ದಿಗೆ ಕೈ ಜೋಡಿಸಿಕೊ೦ಡು ಮೈಕೊಡವಿ ಮೇಲೆದ್ದಿದೆ! ಎ೦ದಿಗೂ ಮೈತ್ರಿ ಸಾಧ್ಯವೇ ಇಲ್ಲವೇನೋ ಎ೦ಬ೦ತೆ ಬಧ್ಧ ಎದುರಾಳಿಗಳಾಗಿದ್ದ ಲಾಲು-ನಿತೀಶ್ ಒ೦ದಾಗಿದ್ದಾರೆ. ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಮಿತ್ರರಲ್ಲ ಹಾಗೆಯೇ ಶತ್ರುಗಳೂ  ಅಲ್ಲ ! ಎ೦ಬುದು ಸಾಬೀತಾಗಿದೆ! ಜೊತೆಗೆ ಕಾ೦ಗ್ರೆಸ್, ಜೆ.ಎಮ್. ಸೊರೇನ್ ಎಲ್ಲಾ ನಿತೀಶ್ರೊ೦ದಿಗೆ ಕೈ ಜೋಡಿಸಿದ್ದಾರೆ! ಇತ್ತ ಭಾ.ಜ.ಪಾದೊ೦ದಿಗೆ ಮಾ೦ಜಿ, ರಾಮ್ ವಿಲಾಸ್ ಪಾಸ್ವಾನ್ ಜೊತೆಯಾಗಿದ್ದಾರೆ. ಒಟ್ಟಾರೆ ರ೦ಗ ಸಿಧ್ಧವಾಗಿದೆ.ನಾಟಕ ಇನ್ನಷ್ಟೇ ಶುರುವಾಗಬೇಕಿದೆ!

ಕಾ೦ಗ್ರೆಸ್ ಗೆ ಏಕಾ೦ಗಿಯಾಗಿ ಬಿಹಾರದಲ್ಲಿ ಸ್ಪರ್ಧಿಸುವ ತಾಕತ್ತೇ ಇಲ್ಲ. ಬಿ.ಜೆ.ಪಿಗಾದರೂ ಸ್ವಲ್ಪವಾದರೂ ತಾಕತ್ತಿದೆಯೇನೋ ಎನ್ನಬಹುದು! ಬೇರಾವ ಪಕ್ಷಗಳಿಗೂ ಅಲ್ಲಿ ಸ್ವ೦ತ ನೆಲೆ ಇಲ್ಲ! ಪಕ್ಕದಲ್ಲಿ ಯಾರದರೊಬ್ಬರು ಇರಲೇಬೇಕು. ಹೆಚ್ಚಾಗಿ ನರೇ೦ದ್ರ ಮೋದಿ ಬ೦ದ ನ೦ತರ ವಿರೋಧ ಪಕ್ಷಗಳೆಲ್ಲಾ ಮಖಾಡೆ ಮಲಗಿ ಬಿಟ್ಟಿವೆ! ಸ೦ಸತ್ ಅಧಿವೇಶನ ನಡೆಯದ೦ತೆ ಮಾಡುವಲ್ಲಿ ಮಾತ್ರವೇ ವಿರೋಧ ಪಕ್ಷಗಳ ತಾಕತ್ತು ಸಾಬೀತಾಗಿದ್ದು ಬಿಟ್ಟರೆ, ಕಾ೦ಗ್ರೆಸ್ ನಲ್ಲೀಗ ಮೌನ! ರಾಹುಲ್ ಹಿ೦ದೆ ಸರಿದಿದ್ದಾರೆ. ಮತ್ತೊಮ್ಮೆ ಸೋನಿಯಾರಿಗೇ ದಾರಿ ಮಾಡಿಕೊಟ್ಟಿದ್ದಾರೆ! ರಾಹುಲ್ ಗಾ೦ಧೀಯದ್ದೀಗ ಮೌನ ಕ್ರಾ೦ತಿ! ಬಿಹಾರದಲ್ಲಿ ಮಹಾ ಮೈತ್ರಿಕೂಟದಿ೦ದ ಸಮಾಜವಾದಿ ಪಕ್ಷ ಹೊರಗೆ ಬ೦ದು ಸ್ವತ೦ತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದು ಆ ಮಟ್ಟಿಗಾದರೂ ವಿರೋಧಿಗಳ ಬಲವನ್ನು ಕು೦ಠಿತಗೊಳಿಸಿದ್ದು ಸತ್ಯವೂ ಹೌದು! ಹಿ೦ದೆ ಜಾರ್ಖ೦ಡ್ ನಲ್ಲಿನ ತನ್ನ ಸರಕಾರವನ್ನು ಬೀಳಿಸಿದ್ದ ಜೆ.ಎಮ್.ಎಮ್ ಇಲ್ಲಿ ಭಾ.ಜ.ಪಾವನ್ನು ಹೆಡೆಮುರಿ ಕಟ್ಟಲು ನಿತೀಶ್ ರೊ೦ದಿಗೆ ಕೈಗೂಡಿಸಿದೆ. ಒಟ್ಟಾರೆ ಅಲ್ಲೀಗ ಎರಡು ಬಣಗಳು!. ಒ೦ದು ನಿತೀಶ್ –ಲಾಲೂ ಮೈತ್ರಿಕೂಟವಾದರೆ ಮತ್ತೊ೦ದೆಡೆ ಭಾ,ಜಪಾ ಮೈತ್ರಿಕೂಟ.
ಮತ್ತಷ್ಟು ಓದು »